ಕ್ರಾಫ್ಟ್ ಕಾರ್ನರ್: ಪ್ಲಾಸ್ಟಿಕ್ ಬಾಟಲ್ ಕ್ರಾಫ್ಟ್

* ಶ್ರೀಲಕ್ಷ್ಮಿ ಹೊಸ್ಕೊಪ್ಪ

ಸಾಮಾನ್ಯವಾಗಿ ಪೆಪ್ಸಿ, ಸ್ಪೈಟ್, ಕೋಕೋ-ಕೋಲಾದಂತ ಸಾಫ್ಟ್ ಡ್ರಿಂಕ್ಸ್‍ಗಳನ್ನು ಎಲ್ಲರೂ ಕುಡಿಯುತ್ತಾರೆ. ಕುಡಿದಾದ ಮೇಲೆ ಆ ಬಾಟಲ್‍ಗಳನ್ನು ಹಾಗೆ ಬಿಸಾಡುತ್ತಾರೆ. ಅದರ ಬದಲು ಸ್ವಲ್ಪ ಕ್ರಿಯೆಟಿವ್ ಆಗಿ ಯೋಚಿಸಿದರೆ ಅದರಿಂದ ಯೂಪಿನ್, ಗುಂಡುಪಿನ್, ಸ್ಟಿಕ್ಕರ್, ರಬ್ಬರ್, ಗಮ್‍ಗಳನ್ನು ಇಡುವಂತಹ ಪುಟ್ಟ ಪುಟ್ಟ ಸ್ಟ್ಯಾಂಡ್ ತಯಾರಿಸಬಹುದು. ಅದನ್ನು ಸ್ಟಡಿ ಟೇಬಲ್ ಮೇಲೆ ಜೋಡಿಸಿಕೊಂಡರೆ ಬೇಕಾದಾಗ ಹುಡುಕುವ ತಾಪತ್ರಯ ತಪ್ಪುತ್ತದೆ, ನೀಟಾಗಿ ಕಾಣುತ್ತದೆ.

ಬೇಕಾಗುವ ಸಾಮಗ್ರಿ: ನಾಲ್ಕು ವೇಸ್ಟ್ ಪ್ಲಾಸ್ಟಿಕ್ ಬಾಟಲ್‍ಗಳು, ವೆಲ್ವೆಟ್ ಬಟ್ಟೆ, ಗಮ್

ಮಾಡುವ ವಿಧಾನ

  • *ಮೊದಲಿಗೆ ಪ್ಲಾಸ್ಟಿಕ್ ಬಾಟಲಿಯನ್ನು ಕ್ಲೀನ್ ಮಾಡಿಕೊಳ್ಳಿ.
  • *ನಂತರ ಅದನ್ನು ಚಿತ್ರದಲ್ಲಿ ತೋರಿಸಿರುವಂತೆ ತಳದಲ್ಲಿ ಕತ್ತರಿಸಿಕೊಳ್ಳಿ.
  • *ಕತ್ತರಿಸಿದ ಭಾಗ ಚೂಪಾಗಿರುವ ಕಾರಣ, ಅದಕ್ಕೆ ವೆಲ್ವೆಟ್ ಬಟ್ಟೆಯನ್ನು ಪಟ್ಟಿಯಾಗಿ ಕತ್ತರಿಸಿ ಸುತ್ತಲೂ ಅಂಟಿಸಿ. ಅದನ್ನು ಒಣಗಲು ಬಿಡಿ.
  • *ನಂತರ ಒಂದು ಸ್ಟ್ಯಾಂಡ್‍ನಲ್ಲಿ ಯೂಪಿನ್, ಇನ್ನೊಂದರಲ್ಲಿ ಗುಂಡುಪಿನ್, ರಬ್ಬರ್ ಹೀಗೆ ಜೋಡಿಸಿ ನಿಮ್ಮ ಟೇಬಲ್ ಮೇಲಿಟ್ಟುಕೊಳ್ಳಿ.

ಇನ್ನೂ ಆಕರ್ಷಕವಾಗಿ ಕಾಣಬೇಕೆಂದರೆ ಅದಕ್ಕೆ ಬಣ್ಣ ಹಚ್ಚಿ ಇಲ್ಲವೇ ಕುಂದನ್‍ಗಳನ್ನು ಅಂಟಿಸಿ. ಈ ಸ್ಟ್ಯಾಂಡ್‍ಗಳನ್ನು ನಿಮ್ಮ ಕಿವಿಯೋಲೆ, ಸ್ಟಿಕ್ಕರ್, ಪಿನ್, ಉಂಗುರ, ಸರಗಳನ್ನು ಜೋಡಿಸಲು ಸಹ ಬಳಸಬಹುದು.

ಇದನ್ನೂ ಓದಿ  ಕ್ರಾಫ್ಟ್ ಕಾರ್ನರ್: ವೇಸ್ಟ್ ಬಾಟಲ್ ಜಿಪ್ ಬಾಕ್ಸ್