Daily Archives: 21/06/2018

ಕಮಲಿ: ಧಾರವಾಹಿಯ ಹಳ್ಳಿಹುಡುಗಿ, ನಿಜ ಜೀವನದಲ್ಲಿ ಹೇಗಿದ್ದಾರೆ?

By | 21/06/2018

ಝೀವಾಹಿನಿಯಲ್ಲಿ ಇತ್ತೀಚೆಗೆ ಆರಂಭಗೊಂಡ ಕಮಲಿ ಸೀರಿಯಲ್ ಆರಂಭದಿಂದಲೂ ಇಂಟ್ರೆಸ್ಟಿಂಗ್. ಅದೇ ತಲೆಚಿಟ್ಟುಹಿಡಿಸುವ ಫ್ಯಾಮಿಲಿ ಸೀರಿಯಲ್ ನೋಡಿ ತಲೆಕೆಟ್ಟು ಹೋಗಿರುವವರಿಗೆ ಕಾಲೇಜು ಸ್ಟೋರಿ ಇರುವ ಕಮಲಿ ಇಷ್ಟವಾಗಿರುವುದು ಸುಳ್ಳಲ್ಲ. ಕೊರಿಯನ್ ಡ್ರಾಮಾ ನೆನಪಿಸುವಂತೆ ಇಲ್ಲೂ ಕಾಲೇಜಿನಲ್ಲಿ ನಡೆಯುವ ಘಟನೆಗಳು ಇಂಟ್ರೆಸ್ಟಿಂಗ್. ನಗರದಲ್ಲಿರುವ ಕಾಲೇಜಿಗೆ ಮುಗ್ಧಮುಖದ, ಮುದ್ದಾಗಿ ಮಾತನಾಡುವ ಕಮಲಿಯೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆಕೆಯ ಹಳ್ಳಿ ಶೈಲಿಯ ಮಾತುಗಾರಿಕೆ, ಸಾಧಿಸಬೇಕೆಂಬ ಹಂಬಲ, ಒಳ‍್ಳೆಯತನ, ಮುಗ್ಧತೆ, ಸೌಂದರ್ಯದಲ್ಲಿ ಸ್ನಿಗ್ಧತೆ ಇವೆಲ್ಲದರಿಂದ ಕಮಲಿಯೀಗ ನಿಧಾನವಾಗಿ ಕನ್ನಡಿಗರ ಹೃದಯ ಹೊಕ್ಕಿದ್ದಾರೆ. ಕಮಲಿ ಎಂದರೆ ಹಳ್ಳಿಹುಡುಗಿ. ಎಷ್ಟು ಮುದ್ದುಮುದ್ದಾಗಿ ಹಳ‍್ಳಿ… Read More »

ವ್ಯಕ್ತಿತ್ವ ವಿಕಸನ: ಕೆಲಸದ ಕೊನೆಯ ಹತ್ತು ನಿಮಿಷ ಏನು ಮಾಡುವಿರಿ?

By | 21/06/2018

ಕರಿಯರ್‍ ನಲ್ಲಿ ಯಶಸ್ವಿಯಾದವರ ಪ್ರತಿ ನಡೆನುಡಿಯಲ್ಲಿಯೂ ಕಲಿಯಲು ಸಾಕಷ್ಟಿರುತ್ತದೆ. ಇಂತಹ ಉದ್ಯೋಗಿಗಳು ಕೆಲಸ ಹೇಗೆ ಆರಂಭಿಸುತ್ತಾರೆ? ಹೇಗೆ ಮುಗಿಸುತ್ತಾರೆ? ಟೀ ಬ್ರೇಕ್/ಊಟದ ಸಮಯದಲ್ಲಿ ಹೇಗಿರುತ್ತಾರೆ? ಹೀಗೆ ಅವರಿಂದ ನಾವು ಸಾಕಷ್ಟು ಸಂಗತಿಗಳನ್ನು ಕಲಿಯಬಹುದು. ಕಚೇರಿಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಲು ಹತ್ತು ನಿಮಿಷ ಇದೆ ಎಂದುಕೊಳ್ಳೋಣ. ಆ ಸಮಯವನ್ನು ಇವರು ಹೇಗೆ ಸದುಪಯೋಗ ಮಾಡಿಕೊಳ್ಳುತ್ತಾರೆ ಗೊತ್ತೆ? ಇವುಗಳಲ್ಲಿ ಕೆಲವು ಅಂಶಗಳನ್ನಾದರೂ ನಾವು ಪಾಲಿಸಬಹುದು. ಈ ದಿನ ಮಾಡಿರುವ ಕಾರ್ಯಗಳನ್ನೆಲ್ಲ ಪರಿಶೀಲಿಸುತ್ತಾರೆ. ನಾಳೆ ಬಂದು ಏನು ಮಾಡಬೇಕು ಎಂದು ಕೆಲವು ಸೆಕೆಂಡ್ ಯೋಚಿಸುತ್ತಾರೆ.… Read More »