ಕನ್ನಡ ಪುಸ್ತಕ ಖರೀದಿಸಲು ಇರುವ 10+ ಆನ್ ಲೈನ್ ಪುಸ್ತಕದಂಗಡಿಗಳು

By | December 24, 2018
Kannada books buy online

ಪುಸ್ತಕದಂಗಡಿಗೆ ಹೋಗಲು ಸಮಯದ ಲಭ್ಯತೆ ಇಲ್ಲದವರಿಗೆ ಆನ್ ಲೈನ್ ಪುಸ್ತಕದಂಗಡಿಗಳು ಆಸರೆಯಾಗಬಲ್ಲವು. ಇಂಗ್ಲಿಷ್ ಭಾಷೆಯ ಪುಸ್ತಕದಂಗಡಿಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಇ-ಪುಸ್ತಕ ತಾಣಗಳು ಕಡಿಮೆ ಇಲ್ಲವೆಂದು ಹೇಳುವಂತೆ ಇಲ್ಲ. ಯಾಕೆಂದರೆ, ಕನ್ನಡ ಪುಸ್ತಕ ಖರೀದಿಗೆ ಸಾಕಷ್ಟು ವೆಬ್ ಸೈಟ್ ಗಳು ಇವೆ. ಸಂತೋಷದ ಸಂಗತಿಯೆಂದರೆ ಇಂತಹ ವೆಬ್ ಸೈಟ್ ಗಳಲ್ಲಿ ಬಹುತೇಕ ಆನ್ ಲೈನ್ ಪುಸ್ತಕದಂಗಡಿಗಳನ್ನು ಪುಸ್ತಕ ಪ್ರಕಾಶಕರು, ಪುಸ್ತಕ ಮಳಿಗೆಯ ಮಾಲೀಕರೇ ಮಾಡಿದ್ದಾರೆ.

ಪುಸ್ತಕ ಓದಬೇಕಿತ್ತು. ಪುಸ್ತಕದ ಅಂಗಡಿಗೆ ಹೋಗಲು ಸಮಯದ ಕೊರತೆ ಇದೆ ಎನ್ನುವವರ ಮಾಹಿತಿಗಾಗಿ ಇಲ್ಲೊಂದಿಷ್ಟು ಇ-ಪುಸ್ತಕದಂಗಡಿಗಳ ಪಟ್ಟಿ ನೀಡಲಾಗಿದೆ. ಇವುಗಳಲ್ಲಿ ಕನ್ನಡ ಪುಸ್ತಕಗಳನ್ನು ಖರೀದಿಸಿ. ಓದಿರಿ. ನಾನು ಹೆಚ್ಚಾಗಿ ಭೇಟಿ ನೀಡುವ ಕಾರಣದಿಂದ ಆರಂಭದಲ್ಲಿ ಸ್ನೇಹಾ ಬುಕ್ ಹೌಸ್, ಸಪ್ನಾ ಬುಕ್ ಹೌಸ್  ಆನ್ ಲೈನ್ ಪುಸ್ತಕದಂಗಡಿಗಳ ಮಾಹಿತಿಯನ್ನು ಆರಂಭದಲ್ಲಿ ನೀಡಿದ್ದೇನೆ.

ವಿವಿಧ ಪುಸ್ತಕಗಳನ್ನು ಖರೀದಿಸಲು ಕರ್ನಾಟಕ ಬೆಸ್ಟ್ ಪುಸ್ತಕದಂಗಡಿಗೆ ಭೇಟಿ ನೀಡಿ

  1. ಮೈ ಬುಕ್ ಅಡ್ಡಾ

ಸ್ನೇಹಾ ಬುಕ್ ಹೌಸ್ ನ ಆನ್ ಲೈನ್ ಪುಸ್ತಕದಂಗಡಿ ಮೈ ಬುಕ್ ಅಡ್ಡ.ನೆಟ್. ವೈಯಕ್ತಿಕವಾಗಿ ನನ್ನ ಮನೆಗೆ ಸಮೀಪ ಇರುವುದರಿಂದ ನಾನು ಇಲ್ಲೇ ಪುಸ್ತಕ ಖರೀದಿಸುವುದು. ಇಲ್ಲಿ ಇತ್ತೀಚಿಗೆ ಬಿಡುಗಡೆಗೊಂಡ ಪುಸ್ತಕಗಳು ಸೇರಿದಂತೆ ಸಾಕಷ್ಟು ಪುಸ್ತಕಗಳು ಇವೆ. ಆನ್ ಲೈನ್ ನಲ್ಲಿ ಖರೀದಿಸಲು ಬಯಸದೆ ಇರುವವರು ಬೆಂಗಳೂರಿನ ಶ್ರೀನಗರದಲ್ಲಿರುವ ಪುಸ್ತಕದಂಗಡಿಗೆ ಬಂದು ಪುಸ್ತಕ ಖರೀದಿಸಬಹುದು. ಮೈಬುಕ್ ಅಡ್ಡಾ ವೆಬ್ ಸೈಟ್ ಲಿಂಕ್ ಇಲ್ಲಿದೆ.

  1. ಸಪ್ನಾ ಬುಕ್ಸ್ ಆನ್ ಲೈನ್

ಕನ್ನಡ ಪುಸ್ತಕ ಮಳಿಗೆಯಲ್ಲಿ ಸಪ್ನಾ ಬುಕ್ ಹೌಸ್ ಅತ್ಯಂತ ಫೇಮಸ್. ಇವರ ಮಳಿಗೆಗೆ ಹೋಗಿ ಶಾಪಿಂಗ್ ಮಾಲ್ ನಲ್ಲಿ ಶಾಪಿಂಗ್ ಮಾಡಿದಂತೆ ಪುಸ್ತಕಗಳನ್ನು ಆಯ್ಕೆ ಮಾಡುವುದೇ ಖುಷಿ. ಬೆಂಗಳೂರಿನ ಗಾಂಧಿನಗರ ಮತ್ತು ಜಯನಗರದಲ್ಲಿರುವ ಇಂತಹ ಮಳಿಗೆಗೆ ಭೇಟಿ ನೀಡಿದ್ದೇನೆ. ಸಪ್ನಾ ಬುಕ್ಸ್ ಆನ್ ಲೈನ್ ನಲ್ಲಿಯೂ ಇದೆ. ಲಿಂಕ್ ಇಲ್ಲಿದೆ.

  1. ಟೋಟಲ್ ಕನ್ನಡ

ಬೆಂಗಳೂರಿನ ಜಯನಗರದಲ್ಲಿರುವ ಟೊಟಲ್ ಕನ್ನಡವೂ ಆನ್ ಲೈನ್ ಪುಸ್ತಕದಂಗಡಿಯಿಂದ ಜನಪ್ರಿಯವಾಗಿದೆ. ಇವರ ವೆಬ್ ಸೈಟಿನಲ್ಲಿಯೂ ಸಾಕಷ್ಟು ಪುಸ್ತಕಗಳ ಲಭ್ಯತೆ ಇದೆ. ಪುಸ್ತಕ ಖರೀದಿಸಲು ಭೇಟಿ ನೀಡಬೇಕಾದ ಆನ್ ಲೈನ್ ಲಿಂಕ್ ಇಲ್ಲಿದೆ.

  1. ನವಕರ್ನಾಟಕ ಆನ್ ಲೈನ್

ರಾಜ್ಯದ ಪ್ರಕಾಶನ ಸಂಸ್ಥೆಗಳಲ್ಲಿ ನವಕರ್ನಾಟಕ ಪ್ರಕಾಶನವೂ ಹೆಸರುವಾಸಿಯಾಗಿದೆ. ಈ ಸಂಸ್ಥೆಯೂ ಆನ್ ಲೈನ್ ಪುಸ್ತಕದಂಗಡಿ ಹೊಂದಿದೆ. ಲಿಂಕ್ ಇಲ್ಲಿದೆ.

5. ಸಾಹಿತ್ಯ ಬುಕ್ಸ್

6. ಕೂರ್ಗ್ ಶಾಪಿ’

7. ಮಾಸ್ಟರ್ ಮೈಂಡ್ ಬುಕ್ಸ್

8. ಅಮೇಜಾನ್

ಜಗತ್ತಿನ ಪ್ರಮುಖ ಇ-ಕಾಮರ್ಸ್ ತಾಣ ಅಮೇಜಾನ್ ನಲ್ಲಿ ಪುಸ್ತಕದಂಗಡಿ ಇದೆ. ಅಲ್ಲಿ ಕನ್ನಡ ಪುಸ್ತಕಗಳೂ ದೊರಕುತ್ತವೆ. ಕನ್ನಡ ಪುಸ್ತಕ ಖರೀದಿಸಲು ಈ ಲಿಂಕ್ ಕ್ಲಿಕ್ಕಿಸಿ.

  1. ವಿವಿಧ್ ಲಿಪಿ

  2. ಬುಕ್ಸ್ ಫಾರ್ ಯು

ಕನ್ನಡ ಪುಸ್ತಕ ಓದುವ ಅಭ್ಯಾಸವನ್ನು ಮುಂದುವರೆಸಿ. ಇಲ್ಲಿ ತಿಳಿಸದೆ ಇರುವ ಇನ್ಯಾವುದಾದರೂ ಪುಸ್ತಕ ತಾಣಗಳು ಇದ್ದರೆ ಇಲ್ಲೇ ಕಾಮೆಂಟ್ ಬಾಕ್ಸ್ ನಲ್ಲಿ ನಮೋದಿಸಿ. ಧನ್ಯವಾದ.

2 thoughts on “ಕನ್ನಡ ಪುಸ್ತಕ ಖರೀದಿಸಲು ಇರುವ 10+ ಆನ್ ಲೈನ್ ಪುಸ್ತಕದಂಗಡಿಗಳು

  1. Pingback: ಪುಸ್ತಕ ಪರಿಚಯ: ಸೇತುರಾಮ್ “ನಾವಲ್ಲ” ಕಥಾ ಸಂಕಲನ | KarnatakaBest.Com

  2. Pingback: ಪುಸ್ತಕ ಪರಿಚಯ: ಸಾಫ್ಟ್ ಮನ ಮತ್ತು ಮಹತ್ವಾಕಾಂಕ್ಷೆ | KarnatakaBest.Com

Leave a Reply

This site uses Akismet to reduce spam. Learn how your comment data is processed.