ಪಟಾಫಟ್ ಮಾಡಿ, ಬಾಯಲ್ಲಿ ನೀರೂರಿಸುವ ಹುಣಸೆ ತೊಕ್ಕು

Bisibele bath recipe kannada

ಹುಣಸೆ ಹಣ್ಣಿನಿಂದ ಏನೇ ಅಡುಗೆ ಮಾಡಿದರೂ ಹುಳಿಹುಳಿಯಾಗಿಸವಿಸವಿಯಾಗಿ ಇರುತ್ತದೆ. ಕರ್ನಾಟಕದಲ್ಲಿ ಬಹುತೇಕರು ಹುಣಸೆ ಹಣ್ಣಿನ ತೊಕ್ಕು ಮಾಡುತ್ತಾರೆ. ಇದು ಅತ್ಯಂತ ಸರಳವಾಗಿ ಮಾಡಬಹುದಾದ ಅಡುಗೆ.

ಹುಣಸೆ ತೊಕ್ಕು ಮಾಡಲು ಏನೇನು ಬೇಕು? ಮೊದಲಿಗೆ ಯಾವೆಲ್ಲ ಪದಾರ್ಥಗಳು ಬೇಕು ಎಂದು ನೋಡೋಣ. ಇದಕ್ಕೆ ಬೇಕಾಗುವ ಸಾಮಾಗ್ರಿಗಳು ಅತ್ಯಲ್ಪ. ಮೊದಲಿಗೆ ಕೊಂಚ ಹುಣಸೆಕಾಯಿ ತೆಗೆದುಕೊಳ್ಳಿ. ಹಸಿಮೆನಸಿನ ಕಾಯಿ ನಾಲ್ಕೈದು ಇರಲಿ. ಕೊಂಚ ಅರಸಿಣಪುಡಿ, ಚಿಟಿಕೆ ಇಂಗು ಸಿದ್ಧವಾಗಿಟ್ಟುಕೊಳ್ಳಿ. ಉಪ್ಪು ರುಚಿಗೆ ತಕ್ಕಷ್ಟು. ಮೊದಲು ಸ್ವಲ್ಪ ಉಪ್ಪು ಹಾಕಿ. ರುಚಿ ನೋಡಿಕೊಂಡು ಮತ್ತೆ ಉಪ್ಪು ಹಾಕಬಹುದು. ಹುಣಸೆ ತೊಕ್ಕು ಮಾಡುವುದು ಹೇಗೆ? ಮೊದಲಿಗೆ ಒಂದು ಪಾತ್ರೆಯಲ್ಲಿ ಹುಣಸೆಕಾಯಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಅದಕ್ಕೆ ಅರಸಿಣ, ಇಂಗು, ಹಸಿಮೆಣಸಿನ ಕಾಯಿ ಮತ್ತು ಉಪ್ಪು ಹಾಕಿ ಚೆನ್ನಾಗಿ ರುಬ್ಬಿ. ಇದಕ್ಕೆ ಕರಿಬೇವು ಸೊಪ್ಪು, ಸಾಸಿವೆಯ ಒಗ್ಗರಣೆಯನ್ನೂ ಕೊಡಬಹುದು.

ವಿಧಾನ-2: ಬೇಯಿಸದೆ ಮಾಡುವ ಹುಣಸೆ ಕಾಯಿತೊಕ್ಕು

ಮೊದಲಿಗೆ ಹುಣಸೆ ಕಾಯಿ ಸಿದ್ಧಪಡಿಸಿಕೊಳ್ಳಿ. ಅಂದರೆ, ಅದರ ಬೀಜ, ನಾರು ಇತ್ಯಾದಿಗಳನ್ನು ತೆಗೆಯಿರಿ. ಅದಕ್ಕೆ ಹಸಿಮೆಣಸು 4, ಜೀರಿಗೆ ಒಂದು ಚಮಚ, ಇಂಗು ಸ್ವಲ್ಪ, ಮೆಂತ್ಯ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಿ. ರುಬ್ಬುವಾಗ ನೀರು ಹಾಕಬೇಡಿ. ಕೊಂಚ ನೀರು ಸೇರಿಸಿದರೂ ತಪ್ಪೇನಿಲ್ಲ. ರುಬ್ಬಿದರೆ ಮುಗೀತು. ಮತ್ತೇನೂ ಮಾಡಬೇಕಿಲ್ಲ.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. ನಮ್ಮ ಇಮೇಲ್ ವಿಳಾಸ: bpchand@gmail.com