ಹೆಸರುಬೇಳೆ ಪಾಯಸ ಮಾಡುವುದು ಹೇಗೆ?

Bisibele bath recipe kannada

ಪಾಯಸ ಪ್ರಿಯರಿಗೆ ಕರ್ನಾಟಕದಲ್ಲಿ ಹಲವು ಬೆಸ್ಟ್‍ ಪಾಯಸ ರೆಸಿಪಿಗಳಿವೆ. ಶಾವಿಗೆ ಪಾಯಸ, ಅಕ್ಕಿ ಪಾಯಸ, ಕ್ಯಾರೆಟ್ ಪಾಯಸ, ಕಡಲೆಬೇಳೆ ಪಾಯಸ, ಹೆಸರುಬೇಳೆ ಪಾಯಸ ಹೀಗೆ ಹಲವು ಬಗೆಯ ಪಾಯಸ ಮಾಡಬಹುದು. ಇಂದು ಕರ್ನಾಟಕ ಬೆಸ್ಟ್ ಪರಿಚಯಿಸುತ್ತಿರುವುದು ಸವಿಯಾದ, ಸಿಹಿಯಾದ ಮತ್ತು ವಾಹ್ ಎನಿಸುವ ಹೆಸರುಬೇಳೆ ಪಾಯಸ.

ಹೆಸರುಬೇಳೆ ಪಾಯಸ ಮಾಡಲು ಏನೇನು ಬೇಕು?

ಹೆಸರೇ ಹೇಳುವಂತೆ ಹೆಸರಬೇಳೆ ಪಾಯಸ ಮಾಡಲು ಹೆಸರಬೇಳೆಯಂತೂ ಬೇಕೇ ಬೇಕು. ಇಲ್ಲಿ ಹೆಚ್ಚು ಜನರಿಗೆ ಸಾಕಾಗುವಷ್ಟು ಪಾಯಸ ಮಾಡಲು ಐಡಿಯಾ ನೀಡಲಾಗಿದೆ. ನಿಮಗೆ ಕಡಿಮೆ ಪಾಯಸ ಸಾಕೆಂದರೆ ಇಲ್ಲಿ ನೀಡಲಾದ ಸಾಮಾಗ್ರಿಗಳ ಪ್ರಮಾಣವನ್ನು ಕಡಿಮೆ ಮಾಡಿದರೆ ಸಾಕು.

 • ಹೆಸರುಬೇಳೆ- 2 ಕಪ್
 • ತುಪ್ಪ- 6 ಚಮಚ
 • ಬೆಲ್ಲ- 2 ಕಪ್
 • ಹಾಲು- 1 ಲೀಟರ್ (ಪ್ರಮಾಣ ಕೊಂಚ ಕಡಿಮೆ ಮಾಡಿದರೂ ಅಡ್ಡಿಯಿಲ್ಲ J )
 • ಇನ್ನುಳಿದಂತೆ ಏಲಕ್ಕಿ ಪುಡಿ 1 ಚಮಚ, ದ್ರಾಕ್ಷಿ ಮತ್ತು ಗೋಡಂಬಿ ಒಂದು ಕಪ್ (ಅವರವರ ಬಜೆಟ್ ಗೆ ಬಿಟ್ಟ ವಿಚಾರ).

ಹೆಸರುಬೇಳೆ ಪಾಯಸ ಮಾಡುವುದು ಹೇಗೆ?

 • ಮೊದಲಿಗೆ ಹೆಸರುಬೇಳೆಯನ್ನು ಸ್ವಲ್ಪ ಹೊತ್ತು ಬಿಸಿ ಮಾಡಿ. ಬಳಿಕ ಅದನ್ನು ನೀರಿನಲ್ಲಿ ಬೇಯಿಸಿ.
 • ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿ, ಹಾಲು ಕುದಿದ ಬಳಿಕ ಅದಕ್ಕೆ ಬೇಯಿಸಿದ ಹೆಸರುಬೇಳೆ ಹಾಕಿರಿ.
 • ಸ್ವಲ್ಪ ಹೊತ್ತು ಬೇಯಲಿ(ಸುಮಾರು 10 ನಿಮಿಷ).
 • ಸ್ವಲ್ಪ ಸಮಯದ ಬಳಿಕ ಬೆಲ್ಲ ಹಾಕಿರಿ. ಚೆನ್ನಾಗಿ ಮಿಶ್ರ ಮಾಡಿ. ಸ್ವಲ್ಪ ಹೊತ್ತು ಕಡಿಮೆ ಬೆಂಕಿ ಉರಿಯಲ್ಲಿ ಬೇಯುತ್ತಿರಲಿ.
 • ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿಯಿರಿ.
 • ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿಯನ್ನು ಹಾಕಿ. ಏಲಕ್ಕಿ ಪುಡಿ ಹಾಕಿ.

ಸುಮಧುರ ಪರಿಮಳ ಕೊಠಡಿ ತುಂಬಾ ವ್ಯಾಪಿಸಿದೆಯಲ್ಲವೇ? ಸ್ಟವ್ ಆಫ್ ಮಾಡಿ. ಬಿಸಿಬಿಸಿ ಪಾಯಸ ರೆಡಿ.

ಇದನ್ನೂ ಓದಿ: 

ಶಾವಿಗೆ ಪಾಯಸ ಮಾಡುವ ವಿಧಾನ

ಕರ್ನಾಟಕ ಬೆಸ್ಟ್ ಅಡುಗೆಮನೆ: ವೆಜ್ ಮತ್ತು ನಾನ್ ವೆಜ್ ಅಡುಗೆ ತಯಾರಿಸಲು ರೆಸಿಪಿ ಇಲ್ಲಿದೆ.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. 
ನಮ್ಮ ಇಮೇಲ್ ವಿಳಾಸ: bpchand@gmail.com