ಹೋಟೆಲ್ ಸ್ಟೈಲ್ ಮಸಾಲೆದೋಸೆ ಮನೆಯಲ್ಲಿಯೇ ರೆಡಿಮಾಡಿ

Bisibele bath recipe kannada

ಬೆಳಿಗ್ಗಿನ ತಿಂಡಿ ಏನು ಮಾಡಬೇಕು ಎಂಬುದೇ ಕೆಲವರಿಗೆ ದೊಡ್ಡ ಸಮಸ್ಯೆಯಾಗಿರುತ್ತದೆ. ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನ ತಿಂದು ಬೋರು ಅನಿಸಿದ್ರೆ, ಒಮ್ಮೆ ಈ ಮಸಾಲ ದೋಸೆ ಪ್ರಯತ್ನಿಸಿ ನೋಡಿ.  ಮಸಾಲಾ ದೋಸೆ ಮನೆಯಲ್ಲಿ ಚೆನ್ನಾಗಿ ಬರುತ್ತಾ…?, ಕೆಟ್ಟು ಹೋದರೆ, ರುಚಿ ಬಾರದೇ ಇದ್ದರೆ, ಮನೆಯಲ್ಲಿ ಯಾರು ತಿನ್ನದೇ ಹೋದರೆ ಏನು ಗತಿ ಎಂದೆಲ್ಲಾ  ತಲೆಬಿಸಿ ತೆಗೆದುಕೊಳ್ಳಬೇಡಿ. ಇಲ್ಲಿ ಹೇಳಿರುವ ಪ್ರಕಾರ ಒಮ್ಮೆ ಟ್ರೈ ಮಾಡಿ ನೋಡಿ. ರುಚಿಕರವಾದ ಮಸಾಲಾ ದೋಸೆಯನ್ನು ಮನೆಯಲ್ಲಿಯೇ ಮಾಡಿಕೊಂಡು ಸವಿಯಿರಿ.

ಅಂದಹಾಗೇ ಮಾಡುವುದಕ್ಕೆ ಬೇಕಾದ ಸಾಮಾಗ್ರಿಗಳು ಇಲ್ಲಿವೆ ನೋಡಿ. 2 ಕಪ್ –ಅಕ್ಕಿ, ಮೆಂತೆಕಾಳು 2 ಚಮಚ, 5 ದೊಡ್ಡ ಚಮಚದಷ್ಟು ಕಡಲೆಬೇಳೆ, 3 ದೊಡ್ಡ ಚಮಚದಷ್ಟು ಉದ್ದಿನಬೇಳೆ, 3 ದೊಡ್ಡ ಚಮಚದಷ್ಟು ಹೆಸರುಬೇಳೆ, 1 ಚಿಕ್ಕ ಚಮಚದಷ್ಟು ಕಾಳು ಮೆಣಸಿನ ಪುಡಿ, ಅರ್ಧ ಕಪ್ ಮೈದಾ ಹಿಟ್ಟು, ಅರ್ಧ ಕಪ್, ಅಕ್ಕಿ ಹಿಟ್ಟು, ಉಪ್ಪು ರುಚಿಗೆ ತಕ್ಕಷ್ಟು. ಸ್ವಲ್ಪ ಎಣ್ಣೆ ಇವಿಷ್ಟು ಇದ್ದರೆ ಸಾಕು.

ಕಡಲೆಬೇಳೆ, ಉದ್ದಿನಬೇಳೆ, ಹೆಸರುಬೇಳೆ, ಮೆಂತೆಕಾಳು, ಅಕ್ಕಿ ಇವನ್ನೆಲ್ಲಾ ಚೆನ್ನಾಗಿ  ತೊಳೆದು ಎರಡು ಗಂಟೆ ನೀರಿನಲ್ಲಿ ನೆನೆದು ಹಾಕಿರಿ. ನಂತರ ಇದನ್ನು ಒಂದು ಒಂದು ಮಿಕ್ಸಿ ಜಾರು ಅಥವಾ ಗ್ರೈಂಡರ್ ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಹಿಟ್ಟನ್ನು ಒಂದು ಪಾತ್ರಗೆ ತೆಗೆದಿಟ್ಟುಕೊಳ್ಳಿ. ನಂತರ ಇದಕ್ಕೆ ಕಾಳು ಮೆಣಸಿನ ಪುಡಿ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ ಒಂದು ಪ್ಲೇಟ್ ಮುಚ್ಚಿಡಿ. ಹಾಗೇ ಇನ್ನೊಂದು ಪಾತ್ರೆಗ ಅರ್ಧ ಕಪ್ ಮೈದಾ, ಅರ್ಧ ಕಪ್ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ನೀರು ಸೇರಿಸಿ ಗಂಟಿಲ್ಲದಂತೆ ಅದನ್ನು ಕಲಸಿ.

ಬೆಳಿಗ್ಗೆ ಮೈದಾ ಮತ್ತು ಅಕ್ಕಿ ಹಿಟ್ಟಿನ ಮಿಶ್ರಣದ ಮೇಲಿನ ನೀರನ್ನು ಹೊರಕ್ಕೆ ಚೆಲ್ಲಿ ಆ ಮಿಶ್ರಣವನ್ನು ದೋಸೆ ಹಿಟ್ಟು ರುಬ್ಬಿಟ್ಟುಕೊಂಡ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಒಲೆಯ ಮೇಲೆ ಕಾವಲಿ ಇಡಿ.ಕಾವಲಿ ಬಿಸಿಯಾದ ಮೇಲೆ ನೀರು ಸಿಂಪಡಿಸಿ ಬಟ್ಟೆಯಿಂದ ೊರಸಿರಿ. ನಂತರ ೊಂದು ಸೌಟು ಹಿಟ್ಟು ತೆಗೆದುಕೊಂಡು ದೋಸೆ ಹ್ಯುಯಿರಿ. ನಂತರ ದೋಸೆಯ ಸುತ್ತ ಎಣ್ಣೆ ಹಾಕಿ. ದೋಸೆ ಬೆಂದ ನಂತರ ಅದರ ಮೇಲೆ ಮೆಣಸಿನಕಾಯಿ ಚಟ್ನಿಯನ್ನು ಹದವಾಗಿ ಹರಡಿ. ನಂತರ ದೋಸೆಯ ಅರ್ಧ ಭಾಗದಲ್ಲಿ ಬಟಾಟೆ ಭಾಜಿ ಹಾಕಿ. ಉಳಿದ ಭಾಗವನ್ನು ಮಡಚಿ. ಬಿಸಿಯಾದ, ಗರಿಗರಿಯಾದ ಮಸಾಲೆ ದೋಸೆ ರೆಡಿ.