ಪುಟಾಣಿಗಳಿಗೆ ಇಷ್ಟವಾಗುವ ಬಟಾಣಿ ಪಲಾವ್ ರೆಸಿಪಿ

Bisibele bath recipe kannada

ಬೆಳಗ್ಗೆ ತಿಂಡಿ ಏನು ಮಾಡುವುದು ಎಂದು ಯೋಚನೆ ಮಾಡುತ್ತಿದ್ದೀರಾ…? ಸುಲಭದ ಅಡುಗೆಯೆಂದರೆ ಬಟಾಣಿ ಬಲಾವ್.  ಅರೆ ಪಲಾವ್ ಮಾಡುವುದಕ್ಕೆ ಬೇಕಾದ ತರಕಾರಿ ಇಲ್ಲ ಎಂದು ಕೊಳ್ಳುತ್ತೀರಾ. ಆದರೆ ಈ ಬಟಾಣಿ ಪಲಾವ್ ಗೆ ತರಕಾರಿನೂ ಬೇಕಾಗಿಲ್ಲ. ಬಟಾಣಿ ಇದ್ದರೆ ಆಯ್ತು. ಹಸಿ ಬಟಾಣಿ ಇದ್ದರೂ ಆಯ್ತು. ಇಲ್ಲದಿದ್ದರೆ ನೆನಸಿಟ್ಟ ಬಟಾಣಿಯಾದರೂ ಆಯ್ತು. ಇವಿಷ್ಟಿದ್ದರೆ ರುಚಿ ರುಚಿಯಾದ ಪಲಾವ್ ಅನ್ನು ಸವಿಯಬಹುದು.

ಬಟಾಣಿ ಪಲಾವ್ ಮಾಡಲು ಬೇಕಾಗುವ ಸಾಮಾಗ್ರಿಗಳು

1ಕಪ್ ಬಾಸುಮತಿ ಅಕ್ಕಿ ತೆಗೆದುಕೊಳ್ಳಿ. ಅರ್ಧ ಕಪ್ ನೆನಸಿಟ್ಟುಕೊಂಡ ಬಟಾಣಿಯಾದರೂ ಪರ್ವಾಗಿಲ್ಲ. ಹಸಿ ಬಟಾಣಿಯಾದರೂ ಪರ್ವಾಗಿಲ್ಲ. 2 ಹಸಿಮೆಣಸಿಕಾಯಿ (ಖಾರ ಜಾಸ್ತಿ ಬೇಕೆನಿಸಿದವರು ಹೆಚ್ಚು ಹಾಕಿಕೊಳ್ಳಬಹುದು). ಈರುಳ್ಳಿ ಚಿಕ್ಕದಾದರೆ ಎರಡು ತೆಗೆದುಕೊಳ್ಳಿ. 2 ಚಮಚ ತುಪ್ಪ, 1 ಕಪ್ ತೆಂಗಿನಕಾಯಿ ತುರಿ ತೆಗೆದುಕೊಳ್ಳಿ.  ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಲವಂಗ ಮೂರು, ಒಂದು ಚಿಕ್ಕ ತುಂಡು ಚಕ್ಕೆ, 2ಏಲಕ್ಕಿ, ಸ್ವಲ್ಪ ಗೇರುಬೀಜ ಚಿಕ್ಕದ್ದಾಗಿ ಕತ್ತರಿಸಿದ್ದು, ದ್ರಾಕ್ಷಿ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ.

ಬಟಾಣಿ ಪಲಾವ್ ಮಾಡುವ ವಿಧಾನ

ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆ ನೀರಿನಲ್ಲಿ ನೆನೆಸಿಹಾಕಿ. ಈರುಳ್ಳಿಯನ್ನು ಸಪೂರವಾಗಿ ಉದ್ದುದ್ದಕ್ಕೆ ಹಚ್ಚಿಕೊಳ್ಳಿ. ಹಸಿಮೆಣಸಿನಕಾಯಿಯನ್ನು ಸೀಳಿ ಇಟ್ಟುಕೊಳ್ಳಿ. ಹಾಗೇ ತೆಂಗಿನಕಾಯಿ ತುರಿಯನ್ನು ರುಬ್ಬಿ 2 ಕಪ್ ಹಾಲು ತೆಗೆದುಕೊಳ್ಳಿ.  ನಂತರ ಕುಕ್ಕರ್ ಅನ್ನು ಒಲೆಯ ಮೇಲಿಟ್ಟು ಅದು ತುಸು ಬಿಸಿಯಾದ ಮೇಲೆ ತುಪ್ಪ ಹಾಕಿ. ಅದು ಕಾದ ಮೇಲೆ ಲವಂಗ, ಏಲಕ್ಕಿ ಚಕ್ಕೆ ಹಾಕಿ ತುಸುವೇ ಬಾಡಿಸಿಕೊಳ್ಳಿ. ನಂತರ ಅದಕ್ಕೆ ಬೆಳ್ಳುಳ್ಳಿ-ಶುಂಠಿ ಹಾಕಿ ಬಾಡಿಸಿಕೊಳ್ಳಿ.

ಗ್ಯಾಸ್ ಉರಿಯನ್ನು ಕಡಿಮೆ ಇರಲಿ. ನಂತರ ಇದಕ್ಕೆ ಈರುಳ್ಳಿ ಹಾಗೂ ಹಸಿಮೆಣಸಿನಕಾಯಿ ಹಾಕಿಕೊಳ್ಳಿ. ಈರುಳ್ಳಿ ಗುಲಾಬಿ ಬಣ್ಣಕ್ಕೆ ಬಂದಾಗ ಅದಕ್ಕೆ ಗೇರುಬೀಜ, ದ್ರಾಕ್ಷಿ ಹಾಕಿ ಕೊತ್ತಂಬರಿ ಸೊಪ್ಪ ಅನ್ನು ಸೇರಿಸಿ. ಬಟಾಣಿ ಅಕ್ಕಿಯನ್ನು ಹಾಕಿ ಚೆನ್ನಾಗಿ ಕದಡಿ. ನಂತರ ತೆಂಗಿನಕಾಯಿ ಹಾಲು ಇದಕ್ಕೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಿ ಎರಡು ವಿಷಲ್ ಬರಿಸಿ. ಬಟಾಣಿ ಪಲಾವ್ ತಿನ್ನಲು ರೆಡಿ ಕುಕ್ಕರ್ ಆರಿದ ಮೇಲೆ ಮುಚ್ಚಳ ತೆಗೆದು ಒಂದು ಸಲ ಚೆನ್ನಾಗಿ ತಿರುವಿ ಬಿಸಿ ಬಿಸಿ ಇರುವಾಗಲೇ ಬಡಿಸಿ.

ಇದನ್ನೂ ಓದಿ: ಪುದೀನಾ ರೈಸ್ ಬಾತ್ ರೆಸಿಪಿ

[amazon_link asins=’B072K263QT,B06XRPL26G,B06W2HRZYB,B01A0KHFP2,B06XRQJW6P,8179913244,B07D7SMP35,8178692643′ template=’ProductGrid’ store=’jobsnewsindia-21′ marketplace=’IN’ link_id=’fd765f0d-ae06-11e8-89a4-5fb9e677ddb8′]

[qcopd-directory mode=”one” list_id=”3926″ style=”simple” item_orderby=”menu_order” column=”1″ enable_embedding=”false” title_font_size=”” subtitle_font_size=”” title_line_height=”” subtitle_line_height=””]