ಎಲ್ಲರಿಗೂ ಪ್ರಿಯವಾದ ಈರುಳ್ಳಿ ದೋಸೆ ಹೀಗೆ ಮಾಡಿ

Bisibele bath recipe kannada

ಹೋಟೆಲ್ ಗೆ ಹೋದಾಗ ಮಸಾಲೆದೋಸೆ, ಪ್ಲೈನ್ ದೋಸೆ ಸವಿದಿರುತ್ತೀರಿ. ಹಾಗೇ ಈರುಳ್ಳಿ ದೋಸೆನೂ. ಆದರೆ ಮನೆಯಲ್ಲಿ ಇದನ್ನು ಟ್ರೈ ಮಾಡುವುದು ಹೇಗೇ ಎಂದು ಯೋಚನೆ ಮಾಡುತ್ತೀದ್ದೀರಾ…? ಮನೆಯಲ್ಲಿಯೇ ಈರುಳ್ಳಿ ದೋಸೆ ಮಾಡುವುದು ಹೇಗೆ ಎಂಬುದರ ಕುರಿತು ಇಲ್ಲಿದೆ ನೋಡಿ ಮಾಹಿತಿ. ರುಚಿಯಾದ ಈರುಳ್ಳಿಯನ್ನು ದೋಸೆಯನ್ನು ಬೆಳಿಗ್ಗಿನ ಉಪಹಾರಕ್ಕಾಗಿ ನಿಮ್ಮ ಮನೆಯಲ್ಲಿ ತಯಾರಿಸಿ.

ಈರುಳ್ಳಿ ದೋಸೆ ಮಾಡಲು ಬೇಕಾಗುವ ಸಾಮಾಗ್ರಿಗಳು

ಉದ್ದಿನಬೇಳೆ- 1/2 ಕಪ್  ತೆಗೆದುಕೊಳ್ಳಿ. ಹಾಗೇ ಅಕ್ಕಿ – 2 ಕಪ್‌ಗಳು, ಮೆಂತ್ಯ – 1ಚಮಚ . ಈರುಳ್ಳಿ – ಕತ್ತರಿಸಿದ ಈರುಳ್ಳಿ 2 ಕಪ್ . ಮೆಣಸಿನ ಹುಡಿ – ಕಾಲು ಚಮಚ ಸಾಸಿವೆ – ½ ಚಮಚ . ಅರಶಿನ – 1/2 ಚಮಚ ತೆಗೆದುಕೊಳ್ಳಿ . ಕರಿಬೇವು – 8 ಎಸಳುಗಳು .ಸ್ವಲ್ಪ ಎಣ್ಣೆ . ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

ಮೊದಲಿಗೆ ಒಂದು ಪಾತ್ರೆಯಲ್ಲಿ, ಅಕ್ಕಿ ಉದ್ದಿನಬೇಳೆ, ಮೆಂತ್ಯವನ್ನು 3 ಗಂಟೆಗಳವರೆಗೆ ನೆನೆಸಿಡಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಈ ಹಿಟ್ಟಿಗೆ ರುಚಿಗೆ ತಕ್ಕಷ್ಟು  ಉಪ್ಪು ಹಾಕಿ ಚೆನ್ನಾಗಿ ಕದಡಿಸಿ.. ಈ ಹಿಟ್ಟು ಹುದುಗಲು ಬಿಡಿ.

ಬೆಳಿಗ್ಗೆ ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಈರುಳ್ಳಿ ಹಾಕಿ ಅದು ಕಂದು ಬಣ್ಣ ಬರುವವರೆಗೂ ಹುರಿಯಿರಿ. ನಂತರ ಅದೇ ಪ್ಯಾನ್ ಗೆ ಮೆಣಸಿನ ಪುಡಿ, ಅರಶಿನ, ಉಪ್ಪು ಹಾಕಿ  ಕಲಸಿ. ನಂತರ ಅದನ್ನು ಕೆಳಕ್ಕೆ ಇಳಿಸಿ.ಆಮೇಲೆ ಒಂದು ದೋಸೆ ಕಾವಲಿ ತೆಗೆದುಕೊಂಡು ಅದು ಬಿಸಿಯಾದ ಮೇಲೆ ಎಣ್ಣೆ ಹಾಕಿ ದೋಸೆ ಹಿಟ್ಟು ಹಾಕಿ ವೃತ್ತಾಕಾರವಾಗಿ ದೋಸೆ ಹ್ಯುಯಿರಿ. ದೋಸೆ ಕಾದ ಮೇಲೆ ಅದರ ಮೇಲೆ ಮಾಡಿಟ್ಟುಕೊಂಡ ಮಿಶ್ರಣ ಹಾಕಿ. ಅದು ಬೆಂದ ಮೇಲೆ ದೋಸೆ ಮಡಚಿ ಕೆಳಕ್ಕೆ ತೆಗೆಯಿರಿ. ದೋಸೆ ಬಿಸಿ ಇರುವಾಗಲೇ ಸವಿಯಿರಿ. ಕಾಯ್ನಿ ಚಟ್ನಿಯೊಂದಿಗೆ ತಿಂದರೆ ಇದರ ಸ್ವಾದ ಇನ್ನಷ್ಟು ಹೆಚ್ಚುತ್ತದೆ.

ಮಸಾಲೆ ದೋಸೆ ಮಾಡುವುದು ಹೇಗೆ ಗೊತ್ತೆ?

[amazon_link asins=’8172342438,B01F0YCIUK,B013GDDL58,1607747340,0451499107,B01079S44W,8186469486,B005063IW6,B00N4Z58JG’ template=’ProductCarousel’ store=’jobsnewsindia-21′ marketplace=’IN’ link_id=’12f81db9-ae05-11e8-a2c2-f382536bc602′]

ಇದನ್ನೂ ಓದಿ  ಪುಟಾಣಿಗಳಿಗೆ ಇಷ್ಟವಾಗುವ ಬಟಾಣಿ ಪಲಾವ್ ರೆಸಿಪಿ