ಸರಳವಾಗಿ ಮಾಂಜಿ (ಪಾಂಪ್ರಟ್) ಫಿಶ್ ಫ್ರೈ ಮಾಡುವುದು ಹೇಗೆ?

ಮುಖ್ಯವಾಗಿ ಬ್ಯಾಚುಲರ್ ಗಳಿಗೆ ಎಲ್ಲಾ ಐಟಂ ಹಾಕಿ ಅಡುಗೆ ಮಾಡುವುದು ಕಷ್ಟವಾಗುತ್ತದೆ. ಎಷ್ಟು ಸರಳ ರೆಸಿಪಿ ಇರುತ್ತದೆಯೋ ಅಂತಹ ರೆಸಿಪಿಯನ್ನು ಹುಡುಕುತ್ತಾರೆ. ಬ್ಯಾಚುಲರ್ಸ್ ಮಾತ್ರವಲ್ಲದೆ ಗೃಹಸ್ಥರಿಗೂ ಸರಳವಾಗಿ ಅಡುಗೆ ಮಾಡುವುದು ಇಷ್ಟವಾಗಬಹುದು. ಇಷ್ಟವಾಗದೆಯೂ ಇರಬಹುದು.

ಪಾಂಪ್ರೆಟ್ ಅಥವಾ ಮಾಂಜಿ ಮೀನನ್ನು ಸರಳವಾಗಿ ಹೇಗೆ ಫ್ರೈ ಮಾಡಬಹುದು ಎಂದು ತಿಳಿದುಕೊಳ್ಳೋಣ.

ಇಲ್ಲಿ ನಾನು ದೊಡ್ಡ ಗಾತ್ರದ ಅರ್ಧ ಕೆ.ಜಿ. ತೂಗುವ ಮಾಂಜಿ ಫಿಷ್ ಖರೀದಿಸಿದೆ. ಇದನ್ನು ಸ್ಲೈಸ್ ಆಗಿ ಕತ್ತರಿಸಿ, ತೊಳೆದು ಇಡಲಾಗಿದೆ. ಇದಕ್ಕೆ ಮಿಶ್ರ ಮಾಡಬೇಕಾದ ಸಿಂಪಲ್ ಮಸಾಲೆ ಇಂತಿದೆ.

ಬೇಕಾಗುವ ಸಾಮಾಗ್ರಿಗಳು

  • ಮಾಂಜಿ ಮೀನು ಅರ್ಧ ಕೆ.ಜಿ.
  • ಕೆಂಪು ಮೆಣಸಿನ ಪುಡಿ: 3 ಚಮಚ- ಖಾರ ಪ್ರಿಯರಾದರೆ ಸ್ವಲ್ಪ ಜಾಸ್ತಿನೇ ಹಾಕಿ.
  • ಅರಸಿನ ಪುಡಿ: ಅರ್ಧ ಚಮಚ
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ ಎರಡು ಚಮಚ
  • ಹುಣಸೆ ಸ್ವಲ್ಪ ನೀರಲ್ಲಿ ಮಿಕ್ಸ್ ಮಾಡಿಡಿ.
  • ರುಚಿಗೆ ತಕ್ಕಷ್ಟು ಉಪ್ಪು.
  • ಬಾಂಬೆ ರವಾ ಸ್ವಲ್ಪ

ಮಾಂಜಿ ಫಿಶ್ ಫ್ರೈ ಮಾಡುವ ವಿಧಾನ

ಮೇಲೆ ತಿಳಿಸಿದ

ಸಾಮಾಗ್ರಿಗಳನ್ನು (ರವಾ ಹೊರತುಪಡಿಸಿ) ಕೊಂಚ ನೀರಲ್ಲಿ (ಹುಣಸೆ ನೀರು ಸಾಕು) ಗಟ್ಟಿಯಾಗುವಂತೆ ಮಿಶ್ರ

ಮಾಡಿ. ಮಸಾಲ ಹೆಚ್ಚು ತೆಳು ಆಗುವುದು ಬೇಡ. ಕೊನೆಗೆ ಈ ಮಸಾಲವನ್ನು ಮೀನಿಗೆ ಅಂಟಿಸಿ. ಅರ್ಧ ಗಂಟೆಯ ನಂತರ ಒಂದು ಪ್ಲೇಟ್ ನಲ್ಲಿ ರವಾವನ್ನು ಹರಡಿ. ಅದರ ಮೇಲೆ ಮೀನನ್ನು ಇಟ್ಟು ರವಾ ನೀಟಾಗಿ ಅಂಟಿಕೊಳ್ಳುವಂತೆ ಮಾಡಿ. ತವಾ ಅಥವಾ ಡೀಪ್ ಆಯಿಲ್ ನಲ್ಲಿ ಫ್ರೈ ಮಾಡಿ.

 

ಇನ್ನೊಂದು ಸರಳ ವಿಧಾನ 🙂

ಅಂಗಡಿಯಿಂದಲೇ ಒಂದು ಪ್ಯಾಕೇಟ್ ಫಿಶ್ ಪ್ರೈ ಮಸಾಲ ತನ್ನಿ. ಸ್ವಲ್ಪ ಜಿಂಜರ್ ಮತ್ತು ಗಾರ್ಲಿಕ್ ಪೇಸ್ಟ್ ಹಾಕಿ. ನೀರಿನಲ್ಲಿ ಮಿಕ್ಸ್ ಮಾಡಿ. ಮೀನಿಗೆ ಅಂಟಿಸಿ. ಫ್ರೈ ಮಾಡಿ.

 

ಇಂತಹ ಸರಳ ವಿಧಾನ ಬೇಕಿಲ್ಲವೆಂದಾದರೆ ಯೂಟ್ಯೂಬ್ ನಲ್ಲಿರುವ ವಿವಿಧ ಫಿಶ್ ಫ್ರೈ ರೆಸಿಪಿ ನೋಡಿ ಮಾಡಿ. ಧನ್ಯವಾದ.