ರುಚಿಯಾದ ತೊಡೆದೇವು ಸವಿದಿದ್ದೀರಾ…?

Bisibele bath recipe kannada

ತೊಡೆದೇವು ಇದೊಂದು ಮಲೆನಾಡಿನ ವಿಶಿಷ್ಟ ಸಿಹಿತಿಂಡಿ. ಮಲೆನಾಡಿಗರ ಮನೆಮನೆಗಳಲ್ಲಿ ಈ ಸಾಂಪ್ರದಾಯಿಕ ತಿಂಡಿಗೆ ಪ್ರಮುಖ ಸ್ಥಾನವಿದೆ.  ತುಂಬ ಕಡಿಮೆ ವಸ್ತುಗಳನ್ನು ಬಳಸಿ ತಾಳ್ಮೆ ಹಾಗು ಜಾಣ್ಮೆಯಿಂದ ಮಾಡಬೇಕಾದ ತಿಂಡಿಯಿದು. ತೊಡೆದೇವು ತುಂಬ ಆರೋಗ್ಯಕರವಾದ ಸಿಹಿತಿಂಡಿ. ಕೇವಲ ಅಕ್ಕಿ ಮತ್ತು ಬೆಲ್ಲದಿಂದ ಮಾಡುವಂತಹ ಈ ಸಿಹಿತಿಂಡಿಯು ಪುಟ್ಟ ಮಕ್ಕಳು ಮತ್ತು ವಯೋವೃದ್ಧರಿಗೂ ಸುಲಭವಾಗಿ ಜೀರ್ಣವಾಗುತ್ತದೆ. ಗಾಳಿಯಾಡಂತೆ ಇಟ್ಟರೆ ತಿಂಗಳವರೆಗೂ ತಾಜಾತನ ಉಳಿಸಿಕೊಳ್ಳುತ್ತದೆ . ತೊಡೆದೇವುವಿಗೆ ತುಂಬ ಬೇಡಿಕೆಯಿದೆ . ಆದರೆ ಇದನ್ನು ಹದವಾಗಿ ತಯಾರಿಸಲು ಸ್ವಲ್ಪ ನೈಪುಣ್ಯತೆ ಬೇಕಾಗುವುದರಿಂದ ಎಲ್ಲರಿಗೂ ಮಾಡಲು ಕಷ್ಟ .

ಇನ್ನು ಇದನ್ನು ಮಾಡಲು ಬೇಕಾಗುವ ಸಾಮಾಗ್ರಿ ಇಲ್ಲಿದೆ ನೋಡಿ. ಅಕ್ಕಿ, ಅರಿಶಿನ, ಬೆಲ್ಲ, ಶೇಂಗಾ ಎಣ್ಣೆ, ತೊಡದೇವು ಎರೆಯುವ ಮಡಿಕೆ, ಅಡಿಕೆ ಹಾಳೆಯ ತುಂಡು ಇವಿಷ್ಟಿದ್ದರೆ ರುಚಿಯಾದ ತೊಡೆದೇವು ಸಿದ್ಧವಾಗುತ್ತೆ.

ಇನ್ನು ಮಾಡುವ ವಿಧಾನ ಹೀಗಿದೆ. ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ರಾತ್ರಿಯೇ  ನೆನೆಸಿಟ್ಟುಕೊಳ್ಳಿ. ಬೆಳಗ್ಗೆ ಅದನ್ನು ಮಿಕ್ಸಿಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಅದಕ್ಕೆ ಮುಕ್ಕಾಲು ಭಾಗದಷ್ಟು ಅಕ್ಕಿ ಹಿಟ್ಟು , ಸ್ವಲ್ಪ ಅರಿಶಿನ ಹಾಕಿ ದೋಸೆ ಹಿಟ್ಟಿನಂತೆ ಕದಡಿಕೊಳ್ಳಿ. ಇನ್ನು ಇದಕ್ಕೆ ಗ್ಯಾಸ್ಕ್ಕಿಂತ ಸೌದೆ ಒಲೆಯೇ ಬೆಸ್ಟ್. ಹಾಗೇ ತೊಡೆದೇವು ತಯಾರಿಸಲು ಅಗಲ ತಳದ ಮಣ್ಣಿನ ಗಡಿಗೆ ಬೇಕು ಈ ಗಡಿಗೆಯನ್ನು ಶುಚಿಗೊಳಿಸಿಕೊಂಡು , ಸೌದೆ ಒಲೆಯ ಮೇಲೆ ತಲೆಕೆಳಗಾಗಿ ಗಡಿಗೆಯನ್ನು ಇಡಬೇಕು. ಮಗಚಿ ಇಟ್ಟ ಮಡಿಕೆಯ ಮೇಲೆ ಶೇಂಗಾ ಎಣ್ಣೆಯಿಂದ ಸವರಬೇಕು. ನಂತರ ಆಯತಾಕಾರದ ಶುದ್ಧವಾದ ಬಟ್ಟೆಯ ಒಂದು ಅಂಚನ್ನು ಚಿಕ್ಕ ಮರದ ಕೋಲೊಂದಕ್ಕೆ ಸುತ್ತಿ  ಬಿಗಿಗೊಳಿಸಬೇಕು. ಈಗ ಈ ಬಟ್ಟೆಯನ್ನು ತಯಾರಿಸಿಕೊಂಡ ಹಿಟ್ಟಿನಲ್ಲಿ ಅದ್ದಿ ಹದವಾಗಿ ಕಾದ ಗಡಿಗೆಯ ಮೇಲೆ ಪ್ಲಸ್ ಆಕಾರದಲ್ಲಿ ಎಳೆಯಬೇಕು . ಅನಂತರ ಗರಿಗರಿಯಾದ ತೊಡೆದೇವನ್ನು ನಿಧಾನವಾಗಿ ದೋಸೆಯಂತೆ ಒಣಗಿದ ಅಡಿಕೆ ಹಾಳೆಯನ್ನು ಪುಟ್ಟದ್ದಾಗಿ ಕತ್ತರಿಸಿಕೊಂಡು ಅದರಲ್ಲಿ ತೆಗೆಯಬೇಕು. ಅನಂತರ ತ್ರಿಕೋನಾಕಾರದಲ್ಲಿ ಮಡಿಚಿಟ್ಟು, ತುಪ್ಪ ಹಾಕಿ ಸವಿಯಬಹುದು.

ನಿಮ್ಮಲ್ಲಿ ರುಚಿರುಚಿಯಾದ ಅಡುಗೆ ರೆಸಿಪಿ ಇದ್ದರೆ ಕರ್ನಾಟಕ ಬೆಸ್ಟ್.ಕಾಂಗೆ ಕಳುಹಿಸಬಹುದು. ಅಡುಗೆ ಫೋಟೊ, ನಿಮ್ಮ ಫೋಟೊವನ್ನೂ ಕಳುಹಿಸಿ. ಈ ವೆಬ್ ಸೈಟಿನಲ್ಲಿ ಕರ್ನಾಟಕ ಬೆಸ್ಟ್ ರೆಸಿಪಿಗಳನ್ನು ಪರಿಚಯಿಸಲು ಸಹಕರಿಸಿ. 

ನಮ್ಮ ಇಮೇಲ್ ವಿಳಾಸ: bpchand@gmail.com

[qcopd-directory mode=”one” list_id=”3926″ style=”simple” item_orderby=”menu_order” column=”2″ enable_embedding=”false” title_font_size=”” subtitle_font_size=”” title_line_height=”” subtitle_line_height=””]