ರುಚಿಕರವಾದ ಕುಂದಾಪುರ ಶೈಲಿಯ ಚಿಕನ್ ಸುಕ್ಕಾ

Bisibele bath recipe kannada

ಕುಂದಾಪುರ ಶೈಲಿಯ ಚಿಕನ್ ಸುಕ್ಕಾವೆಂದರೆ ಮಾಂಸಾಹಾರಿಪ್ರಿಯರ ಬಾಯಲ್ಲಿ ನೀರು ಒಸರುತ್ತದೆ. ಮಾಡುವುದಕ್ಕೆ ಅಷ್ಟೇನೂ ಕಷ್ಟವಿಲ್ಲ ಈ ಖಾದ್ಯ ದೋಸೆ, ಇಡ್ಲಿಗೆ ಒಳ್ಳೆಯ ಕಾಂಬಿನೇಷನ್. ಕೆಲವರು ಇದನ್ನು ರೊಟ್ಟಿಯ ಜತೆಗೂ ಸವಿಯುತ್ತಾರೆ. ಇದನ್ನು ಮಾಡುವ ವಿಧಾನ ಸಾಮಾಗ್ರಿಗಳು ವಿವರ ಇಲ್ಲಿದೆ ನೋಡಿ.

ಬೇಕಾಗುವ ಸಾಮಾಗ್ರಿಗಳು ಇಲ್ಲಿವೆ

ಮೊದಲಿಗೆ ಒಂದು ಕೇಜಿ ಕೋಳಿ ಮಾಂಸ, ಈರುಳ್ಳಿ ಒಂದು ದೊಡ್ಡ ಗಾತ್ರದ್ದು, ಒಣಮೆಣಸು-8ರಿಂದ 10, ಕರಿಬೇವು-8 ಎಸಳು, ಅರಿಶಿನಪುಡಿ-ಕಾಲು ಚಮಚ, ಬೆಳ್ಳುಳ್ಳಿ-8 ಎಸಳು, ಕೊತ್ತಂಬರಿ ಕಾಳು-1 ಚಮಚದಷ್ಟು, ಜೀರಿಗೆ-1/2 ಚಮಚ ತೆಗೆದುಕೊಳ್ಳಿ, ಚಕ್ಕೆ-1 ಚಿಕ್ಕ ತುಂಡು, ಏಲಕ್ಕಿ-1, ಲವಂಗ-2, ಎಣ್ಣೆ-ಮೂರು ದೊಡ್ಡಚಮಚದಷ್ಟು.ಕಾಳುಮೆಣಸು-2 ಚಮಚ, ಹುಣಸೆಹಣ್ಣು ಒಂದು ಲಿಂಬೆಹಣ್ಣಿನ ಗಾತ್ರದ್ದು, ತೆಂಗಿನ ತುರಿ ಒಂದು ಕಪ್ ನಷ್ಟುತೆಗೆದುಕೊಳ್ಳಿ.

ಮೊದಲಿಗೆ ಕೋಳಿಮಾಂಸವನ್ನು ಚೆನ್ನಾಗಿ ಶುದ್ಧವಾದ ನೀರಿನಿಂದ ತೊಳೆದುಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಕರಿಬೇವು, ಈರುಳ್ಳಿ, ಬೆಳ್ಳುಳ್ಳಿ ಹಾಕಿ. ಈರುಳ್ಳಿ ಹದ ಕೆಂಪಗೆ ಬಂದಾಗ ಅದಕ್ಕೆ ಅರಿಶಿನ ಪುಡಿ ಹಾಕಿ. ನಂತರ ತುಸು ಉಪ್ಪು ಸೇರಿಸಿ. ನಂತರ ಅದಕ್ಕೆ ಕೋಳಿ ಮಾಂಸವನ್ನು ಹಾಕಿ ಬೇಯಿಸಿ. ಕೋಳಿಮಾಂಸ ಬೇಉವಾಗ ನೀರು ಬಿಡುತ್ತದೆ. ಆಗ ಅದು ಬೆಂದಿದೆ ಎಂದು ಅರ್ಥ.

ನಂತರಕೋಳಿ ಮಾಂಸಕ್ಕೆ ಬೇಕಾದ ಮಸಾಲವನ್ನು ಸಿದ್ಧಪಡಿಸಿಕೊಳ್ಳೋಣ. ಒಂದು ಬಾಣಲೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಆಮೇಲೆ ಕೊತ್ತಂಬರಿ, ಜೀರಿಗೆ,ಕಾಳುಮೆಣಸು ಲವಂಗ, ಏಲಕ್ಕಿ, ಚಕ್ಕೆ ತುಂಡು, ಹಾಕಿ ಪರಿಮಳ ಬರುವವರಗೆ ಚೆನ್ನಾಗಿ ಹುರಿದುಕೊಳ್ಳಿ. ಹುರಿದಿಟ್ಟುಕೊಂಡ ಮಸಾಲೆಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ. ನಂತರ ಮೆಣಸು ಹಾಕಿ ಹುರಿದುಕೊಳ್ಳಿ. ಇದನ್ನುಯ ಮಿಕ್ಸಿಗೆ ಹಾಕಿ. ಆಮೇಲೆ ತೆಂಗಿನ ತುರಿ, ಸ್ವಲ್ಪ ಈರುಳ್ಳಿ, ಹುಣಸೇಹಣ್ಣು ಹಾಕಿ ನಯವಾಗಿ ರುಬ್ಬಿಕೊಳ್ಳಿ.

ಬೆಂದ ಕೋಳಿ ಮಾಂಸಕ್ಕೆ ರುಬ್ಬಿಟ್ಟುಕೊಂಡ ಈ ಮಸಾಲೆಯನ್ನು ಸೇರಿಸಿ. ಈ ಮಸಾಲೆ ಕೋಳಿ ಮಾಂಸದೊಮದಿಗೆ ಹೊಂದಿಕೊಳ್ಳಲು ತುಸು ಸಮಯ ಹಿಡಿಯುತ್ತೆ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಬೆಂದ ಪರಿಮಳ ಬರುವವರೆಗೂ ಬೇಯಿಸಿ. ಎಣ್ನೆ ಬಿಟ್ಟುಕೊಂಡ ನಂತರ ಅದು ಬೆಂದಿದೆ ಎಂದು ಅರ್ಥ. ಇನ್ನು ನಿಮಗೆ ಗ್ರೇವಿ ಬೇಕೆನಿಸಿದರೆ ಸ್ವಲ್ಪ ನೀರು ಸೇರಿಸಬಹುದು. ಇಲ್ಲದಿದ್ದರೆ ಸುಕ್ಕಾ ರೀತಿಯಲ್ಲೇ ಸವಿಯಬಹುದು. ಇದು ಅನ್ನ, ಇಡ್ಲಿ, ನೀರುದೋಸೆ ಜತೆಗೆ ಹೇಳಿಮಾಡಿಸಿದ ಕಾಂಬಿನೇಷನ್.