ಬರೀ ಆಮ್ಲೆಟ್ ಮಾಡಿ ತಿನ್ನುವ ಬದಲು ಒಮ್ಮೆ ಆಮ್ಲೆಟ್ ಗ್ರೇವಿ ಮಾಡಿ ನೋಡಿ

Bisibele bath recipe kannada

ಆಮ್ಲೆಟ್ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮೊಟ್ಟೆಯಿಂದ ತಯಾರಿಸುವ ಯಾವ ಆಹಾರವಾದರೂ ಅದು ರುಚಿಯಾಗಿಯೇ ಇರುತ್ತದೆ. ಅದರಲ್ಲಿ ಆಮ್ಲೆಟ್ ಕೂಡ ಒಂದು.

ತುಂಬಾ ಹಸಿವಾದಾಗ ತಿನ್ನಲು ಏನು ಸಿಗದಿದ್ದಾಗ ಎಲ್ಲರಿಗೂ ಮೊದಲು ನೆನಪಾಗುವುದು ಆಮ್ಲೆಟ್. ಯಾಕೆಂದರೆ ಇದನ್ನು ತುಂಬಾ ಸುಲಭವಾಗಿ, ತಕ್ಷಣ ತಯಾರಿಸಬಹುದು. ಅಲ್ಲದೇ ತಿನ್ನಲು ಬಹಳ ರುಚಿಕರವಾದ ತಿನಿಸು. ಹಾಗೇ ಈ ಆಮ್ಲೆಟ್ ನಿಂದ ಗಟ್ಟಿಯಾದ ಗ್ರೇವಿ ಕೂಡ ತಯಾರಿಸಬಹುದು. ಅದನ್ನು ಅನ್ನ, ರೊಟ್ಟಿ, ಚಪಾತಿ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಅದನ್ನು ತಯಾರಿಸುವ ವಿಧಾನ ಇಲ್ಲಿದೆ ನೋಡಿ.

ಆಮ್ಲೆಟ್ ಗ್ರೇವಿ ತಯಾರಿಸಲು ಯಾವ ಸಾಮಾಗ್ರಿಗಳು ಬೇಕೆಂಬುದನ್ನು  ನೋಡೋಣ

ಎಣ್ಣೆ 2 ಚಮಚ, ಸಣ್ಣಗೆ ಕತ್ತರಿಸಿಕೊಂಡ 2 ಈರುಳ್ಳಿ, ಸಣ್ಣಗೆ ಹೆಚ್ಚಿದ 2 ಹಸಿಮೆಣಸಿನ ಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಅರಿಶಿನಪುಡಿ ¼ ಚಮಚ, ಮೆಣಸಿನ ಪುಡಿ (ನಿಮಗೆ ಖಾರ ಎಷ್ಟು ಬೇಕೋ ಅಷ್ಟು ), ದನಿಯಾ ಪುಡಿ 2 ಚಮಚ, ಜೀರಿಗೆ ಪುಡಿ 1 ಚಮಚ, ಗರಂ ಮಸಾಲ ½ ಚಮಚ, ಟೊಮೆಟೊ ಪೇಸ್ಟ್ ½ ಕಪ್, ತೆಂಗಿನ ಹಾಲು 1 ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಎಣ್ಣೆ 3 ಚಮಚ, ಮೊಟ್ಟೆ 4, ಸಾಸಿವೆ, ಕರಿಬೇವು, ರುಚಿಗೆ ತಕಷ್ಟು ಉಪ್ಪು.

ಆಮ್ಲೆಟ್ ಗ್ರೇವಿ ಮಾಡುವ ವಿಧಾನ

ಮೊದಲಿಗೆ ಆಮ್ಲೆಟ್ ತಯಾರಿಸಿಕೊಳ್ಳಬೇಕು. ಅದಕ್ಕಾಗಿ ಒಂದು ಚಿಕ್ಕ ಪಾತ್ರೆಯಲ್ಲಿ ಮೊಟ್ಟೆ, ಹೆಚ್ಚಿದ ಈರುಳ್ಳಿ 1, ಹಸಿಮೆಣಸಿನಕಾಯಿ, ಹಾಗೇ ಸ್ವಲ್ಪ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಆಮ್ಲೆಟ್ ಮಾಡಿ. ನಂತರ ಆ ಆಮ್ಲೆಟ್ ನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ, ಅದು ಕಾದ ನಂತರ ಸಾಸಿವೆ ಹಾಕಿ ಅದು ಸಿಡಿದ ನಂತರ ಕರಿಬೇವು ಹಾಕಿ ಬಾಡಿಸಿ. ಆಮೇಲೆ ಅದಕ್ಕೆ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಿ. ಅದಕ್ಕೆ ಟೊಮೆಟೊ ಪೇಸ್ಟ್ ಹಾಕಿ 5 ನಿಮಿಷ ಕೈಯಾಡಿಸುತ್ತಾ ಬಿಸಿ ಮಾಡಿ, ನಂತರ ಜೀರಿಗೆ ಪುಡಿ, ರದನಿಯಾ ಪುಡಿ, ಗರಂ ಮಸಾಲ, ಅರಿಶಿಣ ಪುಡಿ, ಖಾರದ ಪುಡಿ ಹಾಕಿ 2 ನಿಮಿಷ ಫ್ರೈ ಮಾಡಿ, ನಂತರ ತೆಂಗಿನ ಹಾಲು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಗಟ್ಟಿ ಗ್ರೇವಿಯಾಗುವವರೆಗೆ ಕುದಿಸಿ. ಕೊನೆಯಲ್ಲಿ ಆಮ್ಲೆಟ್ ತುಂಡುಗಳನ್ನು ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿದರೆ ಬಿಸಿ ಬಿಸಿ ಆಮ್ಲೆಟ್ ಗ್ರೇವಿ ರೆಡಿ