Monthly Archives: September 2018

ಕರಿಯರ್ ಆಗಿ ಪರಿವರ್ತಿಸಬಹುದಾದ 7 ಹವ್ಯಾಸಗಳು

By | 08/09/2018

ಬಿಡುವಿನ ವೇಳೆಯಲ್ಲಿ ಅಥವಾ ಸಮಯ ಕಳೆಯಲೆಂದು ಆರಂಭಿಸಿದ ನಮ್ಮ ಹವ್ಯಾಸವೇ ಕರಿಯರ್ ಆಗಿ ಬದಲಾದರೆ ಜೀವನಪೂರ್ತಿ ಹವ್ಯಾಸದೊಂದಿಗೆ ವೃತ್ತಿ ಜೀವನ ನಡೆಸಬಹುದು. ಎಲ್ಲಾ ಹವ್ಯಾಸಗಳು ಈಗಿನ ದುಬಾರಿ ಜಗತ್ತಿನಲ್ಲಿ ಹೊಟ್ಟೆ ತುಂಬಿಸಲು ಸಾಕಾಗದು. ಆದರೆ, ಕೆಲವು ಹವ್ಯಾಸಗಳನ್ನು ಸಮರ್ಥ ಕರಿಯರ್ ಆಗಿ ಪರಿವರ್ತಿಸಿಕೊಂಡರೆ ಕೈತುಂಬಾ ಹಣ ಸಂಪಾದಿಸಬಹುದು. ಕ್ರೀಡೆ ದಿನ ಶಾಲೆ, ಕಾಲೇಜು ಮುಗಿಸಿ ಬಂದು ಕ್ರಿಕೆಟ್ ಆಡಲು ಓಡುವವರು ಅಥವಾ ಶಾಲಾ ಕಾಲೇಜುಗಳಲ್ಲಿಯೇ ಕ್ರಿಕೆಟ್ ಆಡುವವರು ನೀವಾಗಿರಬಹುದು. ಇದೇ ರೀತಿ ಹಾಕಿ, ಫುಟ್ಬಾಲ್ ಆಟಗಾರರೂ ಆಗಿರಬಹುದು. ಕ್ರೀಡೆಯನ್ನು ಕರಿಯರ್ ಆಗಿ… Read More »

ಕರ್ನಾಟಕ ಬೆಸ್ಟ್ ರೆಸಿಪಿ- ಹೀರೆಕಾಯಿ ಹುಳಿ ತೊವ್ವೆ

By | 08/09/2018

ಹೀರೆಕಾಯಿಯಿಂದ ಬೋಂಡಾ, ಪಲ್ಯ ಸಾರು ಮಾಡಿದರೆ ಎಷ್ಟು ರುಚಿಕರವಾಗಿರುತ್ತೋ ಹೀರೆಕಾಯಿಯ ಹುಳಿತೊವ್ವೆ ಕೂಡ ಅಷ್ಟೇ ರುಚಿಕರವಾಗಿರುತ್ತೆ. ಇದನ್ನು ಮಾಡುವುದಕ್ಕೂ ತುಂಬ ಕಷ್ಟವಿಲ್ಲ. ನಾರಿನಾಂಶ ಜಾಸ್ತಿ ಇರುವುದರಿಂದ ಹೀರೆಕಾಯಿ ಮಲಬದ್ಧತೆ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ. ಬಿಸಿಬಿಸಿ ಅನ್ನಕ್ಕೆ ಒಂದು ಚಮಚ ತುಪ್ಪ ಹಾಕಿ ಹೀರೆಕಾಯಿ ಹುಳಿ ತೊವ್ವೆ ಬಡಿಸಿಕೊಂಡು ತಿಂದರೆ ಅದರ ಸ್ವಾಧವೇ ಬೇರೆ. ಹಾಗಾದ್ರೆ ತಡವ್ಯಾಕೆ ಹೀರೆಕಾಯಿ ಹುಳಿತೊವ್ವೆ ಮಾಡೋಣ ಬನ್ನಿ. ಮೊದಲಿಗೆ ಬೇಕಾಗಿರುವ ಸಾಮಾಗ್ರಿಳನ್ನು ನೋಡೋಣ. ಚೆನ್ನಾಗಿ ಬಲಿತ ಹೀರೆಕಾಯಿ-3 ತೆಗೆದುಕೊಳ್ಳಿ. ದೊಡ್ಡದಿದ್ದರೆ 2 ಸಾಕು. ಹಾಗೇ ಕಾಲು ಕಪ್… Read More »

ನೀತಿಕತೆ- ಮಕ್ಕಳಂತೆ ವರ್ತಿಸುವ 24ರ ತರುಣ

By | 06/09/2018

ಕೆಲವೊಮ್ಮೆ ಬದುಕು ನಾವು ನಿರೀಕ್ಷಿಸಿ ಇರದ ದಿಕ್ಕಿಗೆ ತಿರುಗಿಕೊಳ್ಳುತ್ತದೆ. ಇಂತಹ ಸಮಯದಲ್ಲಿ ಯಾವುದೋ ನೀತಿಕತೆಗಳು ನಿಮ್ಮ ಬದುಕಿಗೆ ಹೊಸ ದಿಕ್ಕು ತೋರಿಸಬಲ್ಲದು. ಅಂತಹ ನೀತಿಕತೆಯೊಂದು ಇಲ್ಲಿದೆ. ಎಲ್ಲರ ಬದುಕಿನಲ್ಲಿಯೂ ಒಂದು ಕತೆ ಇರುತ್ತದೆ 24 ವಯಸ್ಸಿನ ತರುಣ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಕಿಟಕಿಯಾಚೆ ನೋಡಿ ಆ ಯುವಕ `ಅಪ್ಪ, ನೋಡಲ್ಲಿ, ಮರಗಳು ಹಿಂದೆ ಓಡುತ್ತಿವೆ’ ಎಂದ. ತಂದೆ ನಕ್ಕರು. ಆ ತರುಣನ ಎದುರು ಕುಳಿತ ನವದಂಪತಿಗಳಿಗೆ ಇದು ಅಸಹನೀಯ ಅನಿಸಿತು. ಇಷ್ಟು ದೊಡ್ಡ ಯುವಕ ಪುಟ್ಟ ಮಕ್ಕಳಂತೆ ಇದ್ದಾನಲ್ಲ ಎಂದೆನಿಸಿತು. ಸ್ವಲ್ಪ ಹೊತ್ತಿನಲ್ಲಿ… Read More »

ರುಚಿಕರವಾದ ಟೊಮೆಟೊ ದೋಸೆ ಮಾಡುವುದು ಹೇಗೆ ಗೊತ್ತಾ?

By | 06/09/2018

ದೋಸೆಗಳನ್ನು ತಿನ್ನಲು  ಹೆಚ್ಚಿನವರು ಇಷ್ಟಪಡುತ್ತಾರೆ. ಅದು ನಿಮ್ಮ ನಾಲಿಗೆಯ ರುಚಿಯನ್ನು ಸಹ ಹೆಚ್ಚಿಸುತ್ತದೆ. ಆದರೆ ಒಂದೇ ತರಹದ ದೋಸೆಗಳನ್ನು ತಿನ್ನತಿದ್ದರೆ ಬೇಜಾರಾಗಬಹುದು. ಆದ್ದರಿಂದ ದಿನಕ್ಕೊಂದು ವೆರೈಟಿ ದೋಸೆಗಳನ್ನು ಮಾಡಿ ತಿನ್ನಿ. ದೋಸೆಯಲ್ಲಿ ಹಲವು ವೆರೈಟಿ ದೋಸೆಗಳಿರುತ್ತವೆ. ನೀರ್ ದೋಸೆ, ಬೆಣ್ಣೆ ದೋಸೆ, ರವಾ ದೋಸೆ ಹೀಗೆ ಹಲವು ಬಗೆಯ ದೋಸೆಗಳಿವೆ. ಸೊಪ್ಪುಗಳು ಹಾಗೂ ತರಕಾರಿಗಳನ್ನು ಬಳಸಿ ಕೂಡ ದೋಸೆಗಳನ್ನು  ಮಾಡಬಹುದು. ಅದರಲ್ಲಿ ಒಂದಾದ ಟೊಮೆಟೊ ದೋಸೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಹಾಗೆ ಸುಲಭವಾಗಿ ಕೂಡ ಮಾಡಬಹುದು. ಇದಕ್ಕೆ ಬೇಕಾಗುವ ಸಾಮಾಗ್ರಿಗಳ ಲಿಸ್ಟ್… Read More »