ರೆಸಿಪಿ- ಮಕ್ಕಳು ಇಷ್ಟಪಡುವಂತಹ ಬ್ರೇಡ್ ಪಿಜ್ಜಾ

ಸಾಮಾನ್ಯವಾಗಿ ಬ್ರೇಡ್ ನ್ನು ಹಾಲು, ಟೀಯಲ್ಲಿ ಮುಳುಗಿಸಿಕೊಂಡು ತಿನ್ನತ್ತಾರೆ. ಆದರೆ ಇದನ್ನು ಹಾಗೇ ತಿನ್ನುವ ಬದಲು ಸ್ನ್ಯಾಕ್ಸ್ ರೀತಿಯಾಗಿ ತಯಾರಿಸಿಕೊಂಡು ತಿಂದರೆ ಚೆನ್ನಾಗಿರುತ್ತದೆ.
ಮಕ್ಕಳು ಹೆಚ್ಚಾಗಿ ಹೊರಗಡೆ ಸಿಗುವಂತಹ ಪಿಜ್ಜಾ, ಬರ್ಗರ್ ಗಳನ್ನು ಇಷ್ಟಪಡುತ್ತಾರೆ. ಈ ರೀತಿ ಹೊರಗಡೆ ಸಿಗುವ ತಿಂಡಿಗಳನ್ನು ತಿನ್ನುವುದರಿಂದ ಅವರ ಆರೋಗ್ಯ ಹಾಳಾಗಬಹುದು. ಆದ್ದರಿಂದ ಪಿಜ್ಜಾ ತಿನ್ನಲು ಇಷ್ಟಪಡುವ ಮಕ್ಕಳಿಗೆ ತುಂಬಾ ಸುಲಭವಾಗಿ ತಯಾರಾಗುವಂತಹ ಬ್ರೇಡ್ ಪಿಜ್ಜಾ ಮಾಡಿಕೊಡಿ. ಇದರಿಂದ ಮಕ್ಕಳು ತುಂಬಾ ಸಂತೋಷ ಪಡುತ್ತಾರೆ.
ಬ್ರೆಡ್ ಪಿಜ್ಜಾ ಮಾಡಲು ಏನೆಲ್ಲಾ ಸಾಮಾಗ್ರಿಗಳು ಬೇಕೆಂಬುದನ್ನು ನೋಡೋಣ :
ಬ್ರೇಡ್ 3 ಪೀಸ್, ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ½ ಸಾಕು, ಸಣ್ಣಗೆ ಕಟ್ ಮಾಡಿಕೊಂಡ ಕ್ಯಾಪ್ಸಿಕಂ 2 ಚಮಚ , ಚೀಸ್ 3 ಚಮಚ, ಟೊಮೆಟೊ ಸಾಸ್ 2 ಚಮಚ, ಪಿಜ್ಜಾ ಸಾಸ್ 2 ಚಮಚ, ಕಾಳುಮೆಣಸಿನ ಪುಡಿ 1 ಚಿಟಿಕೆ, ಚಿಲ್ಲಿ ಫ್ಲೇಕ್ಸ್ ಸ್ವಲ್ಪ, ಕ್ಯಾರೆಟ್ (ಬೇಕೆಂದರೆ ಮಾತ್ರ)1, ಕ್ಯಾಬೆಜ್ (ಬೇಕೆಂದರೆ ಮಾತ್ರ) 3 ಚಮಚ, ಟೊಮೆಟೊ (ಬೇಕಾದಲ್ಲಿ ಮಾತ್ರ) 1.

ಬ್ರೆಡ್ ಪಿಜ್ಜಾ ಮಾಡುವ ವಿಧಾನ :

ಮೊದಲಿಗೆ ಬ್ರೇಡ್ ಪೀಸ್ ತೆಗೆದುಕೊಂಡು ಅದರ ಒಂದು ಕಡೆ 1 ಚಮಚದಷ್ಟು ಟೊಮೆಟೊ ಸಾಸ್ ಸವರಬೇಕು, ನಂತರ ಅದರ ಮೇಲೆ ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನು ಹರಡಿ, ನಂತರ ಅದರ ಮೇಲೆ ಸಣ್ಣಗೆ ಕಟ್ ಮಾಡಿಕೊಂಡ ಕ್ಯಾಪ್ಸಿಕಂ ಪೀಸ್ಗಳನ್ನು ಹಾಕಿ ಆಮೇಲೆ ಅದರ ಮೇಲೆ ಕಾಳುಮೆಣಸಿನ ಪುಡಿ ಹಾಗೂ ಚಿಲ್ಲಿ ಫ್ಲೇಕ್ಸ್ ಹರಡಿ. ನಂತರ ಅದರ ಮೇಲೆ ಚೀಸ್ ನ್ನು ಹಾಕಿಕೊಳ್ಳಿ. ಇವಿಷ್ಟು ಆದ ಮೇಲೆ ನಿಮಗೆ ಬೇಕಾದಲ್ಲಿ ಟೊಮೆಟೊ, ಕ್ಯಾರೆಟ್, ಕ್ಯಾಬೆಜ್ ಗಳನ್ನು ಹಾಕಿಕೊಳ್ಳಬಹುದು.
ಆಮೇಲೆ ಗ್ಯಾಸ್ ಮೇಲೆ ತವಾ ಇಟ್ಟು ಅದು ಬಿಸಿಯಾದ ಬಳಿಕ ಅದಕ್ಕೆ ಸ್ವಲ್ಪ ತುಪ್ಪ ಸವರಿಕೊಂಡು ಅದರ ಮೇಲೆ ಈಗಾಗಲೇ ರೆಡಿ ಮಾಡಿಕೊಂಡ ಬ್ರೇಡನ್ನು ಇಟ್ಟು ಅದರ ಮೇಲೆ ಹಾಕಿದ ಚೀಸ್ ಕರಗುವವರೆಗೂ ಅಂದರೆ 5-7 ನಿಮಿಷಗಳ ಕಾಲ ಕಾಯಿಸಿ. ನಂತರ ಗ್ಯಾಸ್ ಆಫ್ ಮಾಡಿ ಈಗ ಬಿಸಿಯಾದ ಬ್ರೇಡ್ ಪಿಜ್ಜಾ ರೆಡಿ. ಇದನ್ನು ಬಿಸಿ ಇರುವಾಗಲೇ ತಿಂದರೆ ಹೆಚ್ಚು ರುಚಿಯಾಗಿರುತ್ತದೆ.

Karnataka Best
Karnatakabest Website
error: Content is protected !!