ಸವಿರುಚಿಯ ಸಿಗಡಿ ಫಿಶ್ ಬಿರಿಯಾನಿ ರೆಸಿಪಿ

ಬಿರಿಯಾನಿಯಲ್ಲಿ ಹಲವು ಬಗೆಗಳಿವೆ. ಸಾಮಾನ್ಯವಾಗಿ ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿಯನ್ನು ಎಲ್ಲರೂ ಹೆಚ್ಚಾಗಿ ತಿಂದಿರುತ್ತಾರೆ. ಅದೇರೀತಿ ಸಿಗಡಿಯಿಂದ ಕೂಡ ಬಿರಿಯಾನಿ ತಯಾರಿಸಬಹುದು. ಇದು ಸಕತ್ ರುಚಿಯಾಗಿರುತ್ತದೆ.

ಸಿಗಡಿ ಬಿರಿಯಾನಿ ಮಾಡಲು ಬೇಕಾಗುವ ಸಾಮಾಗ್ರಿಗಳು :

ಸಿಗಡಿ 500 ಗ್ರಾಂ, ಅಕ್ಕಿ 1 ಕಪ್ (ಅನ್ನ ಮಾಡಿಟ್ಟುಕೊಂಡಿರಿ), ಚಕ್ಕೆ- ಲವಂಗ ಸ್ವಲ್ಪ, ಶುಂಠಿ 1 ಇಂಚು, ಬೆಳ್ಳುಳ್ಳಿ 10-12 ಎಸಳು, ಹಸಿ ಮೆಣಸಿನಕಾಯಿ 4, ಹೆಚ್ಚಿಟ್ಟುಕೊಂಡ 1 ದೊಡ್ಡ ಈರುಳ್ಳಿ, 1 ದೊಡ್ಡ ಟೊಮೆಟೊ, ಪುದೀನ ಸೊಪ್ಪು ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ, ಪಲಾವ್ ಸೊಪ್ಪು ಸ್ವಲ್ಪ,  ನಿಂಬೆಹಣ್ಣು 1, ಖಾರದ ಪುಡಿ 2 ಚಮಚ, ರುಚಿಗೆ ತಕಷ್ಟು ಉಪ್ಪು, ಸ್ವಲ್ಪ ಅರಶಿನ.

ಸಿಗಡಿ ಬಿರಿಯಾನಿ ಮಾಡುವ ವಿಧಾನ :

ಮೊದಲಿಗೆ ಸಿಗಡಿಯ ಕವಚ ಬಿಡಿಸಿ ಚೆನ್ನಾಗಿ ತೊಳೆದಿಟ್ಟುಕೊಂಡಿರಿ. ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಅದು ಕಾದ ನಂತರ ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿ. ಆಮೇಲೆ ಅದಕ್ಕೆ ತೊಳೆದ ಸಿಗಡಿ,  ಅರಶಿನ, ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ. ಸಿಗಡಿ ಬೆಂದ ನಂತರ ನಿಂಬೆರಸ ಹಾಗೂ ಖಾರದ ಪುಡಿ ಹಾಕಿ ಹುರಿದು ಎತ್ತಿಟ್ಟುಕೊಳ್ಳಿ.

ನಂತರ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಅದು ಕಾದ ನಂತರ ಚಕ್ಕೆ, ಲವಂಗ, ಹಸಿ ಮೆಣಸಿನಕಾಯಿ , ಈರುಳ್ಳಿ ಹಾಕಿ ಬಾಡಿಸಿ ನಂತರ ಮಿಕ್ಸಿ ಜಾರಿಗೆ ಈ ಮಿಶ್ರಣವನ್ನು ಹಾಕಿ ಅದರ ಜೊತೆಗೆ ಶುಂಠಿ , ಬೆಳ್ಳುಳ್ಳಿ , ಕೊತ್ತಂಬರಿ ಸೊಪ್ಪು , ಪುದೀನ ಸೊಪ್ಪು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ನಂತರ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ  ಈರುಳ್ಳಿ, ಟೊಮೆಟೊ, ಪಲಾವ್ ಸೊಪ್ಪು , ಸ್ವಲ್ಪ ಉಪ್ಪು ಹಾಕಿ ಟೊಮೆಟೊ ಕರಗುವವರೆಗೂ ಬಾಡಿಸಿ ಆಮೇಲೆ ರುಬ್ಬಿದ ಮಸಾಲೆಯನ್ನು ಹಾಗೂ ಬೇಯಿಸಿಟ್ಟುಕೊಂಡ ಸಿಗಡಿಯನ್ನು ಹಾಕಿ  ಮಿಕ್ಸ್ ಮಾಡಿ.

ಒಂದು ದಪ್ಪ ತಳದ ಪಾತ್ರೆಗೆ ಒಂದು ಪದರ ಮಸಾಲೆ ಹಾಕಿ ಅದರ ಮೇಲೆ ಅನ್ನ ಹಾಕಿ, ಇದೇ ತರಹ ಎರಡು ಮೂರು ಪದರ ಹಾಕಿ ಮುಚ್ಚಿ  ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿದರೆ ಬಿಸಿಬಿಸಿಯಾದ ಸಿಗಡಿ ಬಿರಿಯಾನಿ ರೆಡಿ

[qcopd-directory mode=”one” list_id=”3926″ style=”simple” item_orderby=”menu_order” column=”1″ enable_embedding=”false” title_font_size=”” subtitle_font_size=”” title_line_height=”” subtitle_line_height=””]

 

 

Karnataka Best
Karnatakabest Website
error: Content is protected !!