ಶ್ರೀಮಂತನನ್ನು ಮದುವೆಯಾಗಲು ಏನು ಮಾಡಬೇಕು? ಈ ಪ್ರಶ್ನೆಗೆ ಮಾರ್ಮಿಕ ಉತ್ತರ ಇಲ್ಲಿದೆ ನೋಡಿ

ಅದೊಂದು ಆನ್‍ಲೈನ್‍ನ ಜನಪ್ರಿಯ ಚರ್ಚಾ ತಾಣ. ಅಲ್ಲೊಬ್ಬಳು ಯುವತಿ ಹೀಗೊಂದು ಪ್ರಶ್ನೆ ಬರೆದಿದ್ದಳು.

ಪ್ರಶ್ನೆಯ ಶೀರ್ಷಿಕೆ: ಶ್ರೀಮಂತ ಯುವಕನನ್ನು ಮದುವೆಯಾಗಲು ನಾನು ಏನು ಮಾಡಬೇಕು?

ಪ್ರಶ್ನೆಯ ವಿವರಣೆ: ನಾನು ತುಂಬಾ ಪ್ರಾಮಾಣಿಕವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ.  ನನಗೆ 25 ವರ್ಷ ವಯಸ್ಸು. ನಾನು ನೋಡಲು ತುಂಬಾ ಸುಂದರಿ. ನನ್ನ ಅಭಿರುಚಿಗಳೂ ಉತ್ತಮವಾಗಿವೆ.

ವರ್ಷಕ್ಕೆ 500 ಸಾವಿರ ಡಾಲರ್ ಅಥವಾ ಅದಕ್ಕಿಂತ ಹೆಚ್ಚು ವೇತನ ಇರುವ ಯುವಕನನ್ನು ಮದುವೆಯಾಗಬೇಕು ಎನ್ನುವುದು ನನ್ನ ಅಭಿಲಾಸೆ. 

ಈ ಫೋರ್ಮ್ ನಲ್ಲಿ ಇಷ್ಟು ವೇತನ ಇರುವ ಯಾರಾದರೂ ನನ್ನನ್ನು ಮದುವೆಯಾಗುವಿರ?

ನಿಮ್ಮಂತಹ ಶ್ರೀಮಂತ ಯುವಕರನ್ನು ಮದುವೆಯಾಗಲು ನಾನು ಏನು ಮಾಡಬೇಕು?

 ನಾನು ಡೇಟ್ ಮಾಡಿದ ಯುವಕರಲ್ಲಿ ಶ್ರೀಮಂತರೆಂದರೆ ವರ್ಷಕ್ಕೆ 250 ಸಾವಿರ ಡಾಲರ್ ಆದಾಯದವರು. ನನಗೆ ಇದಕ್ಕಿಂತ ಶ್ರೀಮಂತರನ್ನು ಪಡೆಯಲು ಯಾಕೆ ಸಾಧ್ಯವಾಗುತ್ತಿಲ್ಲ? 

ನನ್ನಲ್ಲಿ ಇನ್ನೊಂದಿಷ್ಟು ಪ್ರಶ್ನೆಗಳಿವೆ…

* ಶ್ರೀಮಂತ ಬ್ಯಾಚುಲರ್‍ಗಳು ಎಲ್ಲಿ ಇರುತ್ತಾರೆ?

* ನಾನು ಯಾವ ವಯಸ್ಸಿನವರನ್ನು ಗುರಿ ಮಾಡಬೇಕು?

* ಯಾಕೆ ಹೆಚ್ಚಿನ ಶ್ರೀಮಂತರ ಹೆಂಡತಿಯರು ನೋಡಲು ಅಷ್ಟೇನೂ ಚಂದ ಇರುವುದಿಲ್ಲ?

* ಶ್ರೀಮಂತರು ಯಾರು ತಮ್ಮ ಹೆಂಡತಿ ಆಗಬೇಕೆಂದು, ಯಾರು ಕೇವಲ ತಮ್ಮ ಗರ್ಲ್‍ಫ್ರೆಂಡ್ ಆಗಬೇಕು ಎಂದು ಹೇಗೆ ನಿರ್ಧಾರ ಕೈಗೊಳ್ಳುತ್ತಾರೆ? 

ಈ ಪ್ರಶ್ನೆಯನ್ನು ಸಾಕಷ್ಟು ಜನರು ನೋಡಿದ್ದರು. ಕೆಲವರು ನಕ್ಕು ಸುಮ್ಮನಾದರು. ಕೆಲವರು ನನ್ನನ್ನು ಮದುವೆಯಾಗು ಎಂದರು. ಆದರೆ, ಜೆ.ಪಿ. ಮೋರ್ಗಾನ್ ಎಂಬ ಅಮೆರಿಕದ ಬೃಹತ್ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಕಂಪನಿಯ ಸಿಇಒ ಇದಕ್ಕೆ ಬಹಳ ಸುಂದರವಾದ, ಮಾರ್ಮಿಕವಾದ ಉತ್ತರವನ್ನು ನೀಡಿದ್ದಾರೆ. ಆ ಉತ್ತರ ಇಲ್ಲಿದೆ.

ಪ್ರೀತಿಯ, ಸುಂದರಿ

ನಾನು ನಿಮ್ಮ ಪ್ರಶ್ನೆಯನ್ನು ಅತೀವ ಆಸಕ್ತಿಯಿಂದ ಓದಿದೆ. ನಿನ್ನಂತೆಯೇ ಸಾಕಷ್ಟು ಯುವತಿಯರು ಇಂತಹ ಪ್ರಶ್ನೆ ಹೊಂದಿದ್ದಾರೆ ಎನ್ನುವುದೂ ನನಗೆ ಗೊತ್ತು. ನಾನು ನಿನ್ನ ಪ್ರಶ್ನೆಯನ್ನು ವೃತ್ತಿಪರ ಹೂಡಿಕೆದಾರನಾಗಿ ವಿಶ್ಲೇಷಣೆ ಮಾಡಲು ಬಯಸುತ್ತೇನೆ. 

ನನ್ನ ವಾರ್ಷಿಕ ಆದಾಯವು 500 ಸಾವಿರ ಡಾಲರ್‍ಗಿಂತಲೂ ಹೆಚ್ಚಿದೆ. ಇದು ನಿನ್ನ ಅವಶ್ಯಕತೆಯನ್ನು ಪೂರೈಸುತ್ತದೆ.  

ಆದರೆ, ಒಬ್ಬ ಬಿಸ್ನೆಸ್ ವ್ಯಕ್ತಿಯಾಗಿ ನಿನ್ನನ್ನು ನಾನು ಮದುವೆಯಾಗುವುದು ಕೆಟ್ಟ ನಿರ್ಧಾರವಾಗುತ್ತದೆ. 

ಇದಕ್ಕೆ ಉತ್ತರ ಸರಳವಾಗಿದೆ. ಉತ್ತರಿಸುತ್ತೇನೆ. 

ಇಲ್ಲಿ ನೀನು ವಿನಿಮಯ ಮಾಡಲು ಬಯಸುವುದು `ಸೌಂದರ್ಯ’ ಮತ್ತು `ಹಣ’. ಎ ವ್ಯಕ್ತಿಯು ಹಣ ನೀಡುತ್ತಾನೆ. ಬಿ ವ್ಯಕ್ತಿಯು ಅದಕ್ಕಾಗಿ ಸೌಂದರ್ಯ ನೀಡುತ್ತಾರೆ. 

ಆದರೆ, ಇಲ್ಲೊಂದು ಆಘಾತಕಾರಿ ಸಮಸ್ಯೆಯಿದೆ. ನಿನ್ನ ಸೌಂದರ್ಯವು ಮಂಕಾಗಬಹುದು, ಆದರೆ, ನನ್ನ ಹಣವು ಯಾವುದೇ ಸೂಕ್ತ ಕಾರಣ ಇಲ್ಲದೆ ಕಡಿಮೆಯಾಗದು. ನನ್ನ ಆದಾಯವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತ ಹೋಗುತ್ತದೆ. ಆದರೆ, ನಿನ್ನ ಸೌಂದರ್ಯವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಹೋಗುತ್ತದೆ. 

ಅರ್ಥಶಾಸ್ತ್ರದ ದೃಷ್ಟಿಕೋನದಿಂದ ಹೇಳುವುದಾದರೆ, ನಾನು ಏರಿಕೆ ಸ್ವತ್ತು ಮತ್ತು ನೀನು ಸವಕಳಿ ಸ್ವತ್ತು. ಇದು ಸಾಮಾನ್ಯ ಸವಕಲಿ ಅಲ್ಲ, ಘಾತೀಯ ಸವಕಳಿ. ನಿಮ್ಮಲ್ಲಿ ಇದು ಮಾತ್ರವೇ ಇರುವ ಸ್ವತ್ತಾಗಿದ್ದರೆ, ಮುಂದಿನ ಹತ್ತು ವರ್ಷಗಳ ಬಳಿಕ ಈ ಸ್ವತ್ತು ಮೌಲ್ಯ ತೀರ ಕುಸಿತ ಕಾಣಲಿದೆ. 

ಷೇರುಪೇಟೆಯ ಭಾಷೆಯಲ್ಲಿ ಹೇಳುವುದಾದರೆ, ಪ್ರತಿಯೊಂದು ಟ್ರೇಡಿಂಗ್‍ಗೂ ಒಂದು ಪೊಸಿಷನ್ ಇದೆ. ನಿಮ್ಮ ಜೊತೆ ಡೇಟಿಂಗ್ ಮಾಡುವುದು ಸಹ ಒಂದು `ಟ್ರೇಡಿಂಗ್ ಪೊಸಿಷನ್’ ಆಗಿದೆ. ಎಲ್ಲಾದರೂ ಟ್ರೇಡ್ ಮೌಲ್ಯ ಕಡಿಮೆಯಾದರೆ, ಅದನ್ನು ಮಾರಾಟ ಮಾಡುತ್ತಾರೆ ಮತ್ತು ಅದನ್ನು ದೀರ್ಘಕಾಲ ಇಟ್ಟುಕೊಳ್ಳುವುದು ಉತ್ತಮ ಆಲೋಚನೆ ಅಲ್ಲ. ನಿಮ್ಮ ಪ್ರಶ್ನೆಗೂ ಇದೇ ಉತ್ತರವಾಗಬಲ್ಲದು ಎಂದು ಹೇಳುವುದು ಕ್ರೂರವಾಗಿ ಕಂಡರೂ ನಿಜವಾದ ವಿಷಯವಾಗಿದೆ. ವರ್ಷಕ್ಕೆ 500 ಸಾವಿರ ಡಾಲರ್ ಆದಾಯ ಇರುವವರು ನಿಮ್ಮನ್ನು ಮದುವೆಯಾಗಲಾರರು ಮತ್ತು ಅವರು ಕೇವಲ ನಿನ್ನ ಜೊತೆ ಟೈಂಪಾಸ್ ಮಾಡಬಲ್ಲರು. 

ನಾನು ನಿನಗೊಂದು ಅಮೂಲ್ಯ ಸಲಹೆ ನೀಡಬಲ್ಲೆ. ಶ್ರೀಮಂತ ಹುಡುಗನನ್ನು ಮದುವೆಯಾಗಿ ಸುಖವಾಗಿರುವ ಕನಸನ್ನು ಬಿಟ್ಟುಬಿಡು. ಆದರೆ, ಇದಕ್ಕೆ ಬದಲಾಗಿ, ವಾರ್ಷಿಕ 500 ಸಾವಿರ ಡಾಲರ್ ಆದಾಯದ ಶ್ರೀಮಂತ ವ್ಯಕ್ತಿ ನೀವೇ ಆಗಿ. ಇದಕ್ಕೆ ಬೇಕಾದ ಪ್ರಯತ್ನ ಮಾಡಿ. ಶುಭವಾಗಲಿ


– ಜೆಪಿ ಮೊರ್ಗಾನ್ ಸಿಇಒ(ಸಹಿಯೊಂದಿಗೆ)