Moral Story: ನಮ್ಮ ಮೌಲ್ಯ ಕಡಿಮೆಯಾಗದು

ಒಂದು ಸೆಮಿನಾರ್‍ನಲ್ಲಿ ಭಾಷಣಗಾರರು ಕೈಯಲ್ಲಿ 2000 ರೂಪಾಯಿಯ ನೋಟೊಂದನ್ನು ಹಿಡಿದು ಸಭಿಕರಲ್ಲಿ `ಈ ಹಣ ಯಾರಿಗೆ ಬೇಕು?’ ಎಂದು ಪ್ರಶ್ನಿಸಿದರು. ಬಹುತೇಕರು ಕೈ ಎತ್ತಿದರು. 

`ನಾನು ಈ ಹಣವನ್ನು ನಿಮಗೆ ನೀಡುವ ಮೊದಲು ಒಂದು ಕೆಲಸ ಮಾಡುತ್ತೇನೆ’ ಎಂದು ಹೇಳಿ ಆ ನೋಟನ್ನು ಕೆಳಗೆ ಹಾಕಿದರು. `ಈಗ ಯಾರಿಗೆ ಈ ಹಣ ಬೇಕು?’ ಎಂದರು.

ಈಗಲೂ ಬಹುತೇಕರು ಕೈ ಎತ್ತಿದರು.

ಮತ್ತೆ ಆ ಭಾಷಣಗಾರರು ಆ ಹಣವನ್ನು ಎತ್ತಿಕೊಂಡು ಅಲ್ಲಿದ್ದ ಕೊಳಕು ಮಣ್ಣಿನಲ್ಲಿ ಆ ನೋಟನ್ನು ಮುದ್ದೆ ಮಾಡಿದರು. ನಿಜಕ್ಕೂ ಆ ಸುಂದರ ನೋಟು ಗಲೀಜಾಯಿತು. 

`ಈಗ ಈ ಹಣ ಯಾರಿಗೆ ಬೇಕು?” ಎಂದು ಪ್ರಶ್ನಿಸಿದರು.

ಈಗಲೂ ಬಹುತೇಕರು ಕೈ ಎತ್ತಿದರು. 

ಭಾಷಣಗಾರ ಮಾತು ಮುಂದುವರೆಸಿದರು.

`ಸ್ನೇಹಿತರೇ, ನಾನು ನಿಮಗೊಂದು ಪ್ರಮುಖ ಪಾಠವನ್ನು ತೋರಿಸಿದೆ. ನಾನು ಹಣವನ್ನು ಏನು ಮಾಡಿದರೂ ನಿಮಗದು ಬೇಕು. ಯಾಕೆಂದರೆ, ಹಣದ ಮೌಲ್ಯ ಕಡಿಮೆಯಾಗುವುದಿಲ್ಲ. ನಮ್ಮ ಜೀವನವೂ ಅಷ್ಟೇ. ಏನೇನೋ ಕಷ್ಟಗಳು ಬರುತ್ತವೆ. ಏನೇನೋ ಸಂಗತಿಗಳು ಘಟಿಸುತ್ತವೆ. ನಾವು ನಿರಾರ್ಥಕ ಎಂದು ಭಾವಿಸುತ್ತೇವೆ. ಆದರೆ, ನಿಜಕ್ಕೂ ನಾವು ನೋಟಿನಂತೆಯೇ. ನಮ್ಮ ಮೌಲ್ಯ ಕಡಿಮೆಯಾಗುವುದಿಲ್ಲ. ಯಾರೂ ಯಾವತ್ತೂ ಮೌಲ್ಯ ಕಳೆದುಕೊಳ್ಳುವುದಿಲ್ಲ. ಯಾಕೆಂದರೆ, ನಾವೆಲ್ಲರೂ ವಿಶೇಷರು, ಮೌಲ್ಯಯುತರು” ಎಂದು ಭಾಷಣ ಮುಗಿಸಿದರು.

ನೀತಿ: ಸದಾ ಮೌಲ್ಯವಂತರಾಗಿ, ನಿಮ್ಮ ಮೌಲ್ಯ ಎಂದಿಗೂ ಮಸಕಾಗುವುದಿಲ್ಲ.

ಇದನ್ನೂ ಓದಿ  ಪ್ರಭಾ