ಬ್ಲಾಗರ್ ಗೆ ವೆಬ್ ಸೈಟ್ ರೂಪ ನೀಡುವುದು ಹೇಗೆ?

ಆಕರ್ಷಕ ವಿನ್ಯಾಸವಿದ್ದರೆ ನಿಮ್ಮ ಬ್ಲಾಗ್ ಹೆಚ್ಚು ಜನರನ್ನು ಸೆಳೆಯುತ್ತದೆ. ಜೊತೆಗೆ ಬರೆದ ಲೇಖನಗಳು, ಚಿತ್ರಗಳನ್ನು ನೀಟಾಗಿ ಜೋಡಿಸಿದ್ದರೆ ಹೆಚ್ಚು ಕ್ಲಿಕ್ ಪಡೆಯಬಹುದು. ನಿಮ್ಮ ಬ್ಲಾಗ್ ನ್ಯೂಸ್ ವೆಬ್ ಸೈಟಿನಂತೆ ಇದ್ದರೆ ಒಂದೇ ಪುಟದಲ್ಲಿ ಸಾಕಷ್ಟು ಲೇಖನಗಳನ್ನು, ಚಿತ್ರಗಳನ್ನು ಜೋಡಿಸಿಡಲು ಸಾಧ್ಯ.

ಹಿಂದಿನ ಸಂಚಿಕೆಯಲ್ಲಿ ಬ್ಲಾಗ್ ಸ್ಪಾಟ್ ನಲ್ಲಿ ಬ್ಲಾಗ್ ರಚಿಸುವುದು ಹೇಗೆ ಎಂಬ ವಿಷಯದ ಕುರಿತು ಸರಳವಾಗಿ ಮಾಹಿತಿ ನೀಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಬ್ಲಾಗರ್ ಬ್ಲಾಗ್ ಗೆ ಕಸ್ಟಮ್ ಟೆಂಪ್ಲೆಟ್ ಗಳನ್ನು ಅಳವಡಿಸುವ ಕುರಿತು ಚರ್ಚಿಸೋಣ.

ಹಿಂದಿನ ಸಂಚಿಕೆಯಲ್ಲಿ ನೀವು ರೂಪಿಸಿದ ಬ್ಲಾಗ್ ನಲ್ಲಿ ಕೆಲವೊಂದು ಲೇಖನಗಳನ್ನು ಅಪ್ಲೋಡ್ ಮಾಡಿದ್ದೀರಿ ಎಂದಿರಿಲಿ. ಅದರಲ್ಲಿ ಲೇಬಲ್ಸ್ ವಿಭಾಗದಲ್ಲಿ ಸರಿಯಾದ ಕೀವರ್ಡ್ ಗಳನ್ನು ಬರೆದಿದ್ದರೆ ಉತ್ತಮ.

ನಿಮ್ಮ ಬ್ಲಾಗ್ ವಿನ್ಯಾಸ ಯಾವ ರೀತಿ ಇರಬೇಕು ಎಂದು ಬಯಸುವಿರಿ? ನ್ಯೂಸ್ ವೆಬ್ ಸೈಟಿನಂತೆ ಇರಬೇಕೆ? ಬ್ಲಾಗರ್ ತಾಣದಂತೆ ಇರಬೇಕೆ? ಬಿಸ್ನೆಸ್ ವೆಬ್ಸೈಟ್ ಗಳಂತೆ ಇರಬೇಕೆ? ನಿರ್ಧರಿಸಿಕೊಳ್ಳಿ.

ನಿಮ್ಮ ಬ್ಲಾಗ್ ವಿನ್ಯಾಸ ಬದಲಾಯಿಸಲು ಉಚಿತ ಅಥವಾ ಪ್ರೀಮಿಯಂ ಬ್ಲಾಗರ್ ಟೆಂಪ್ಲೆಟ್ ಗಳನ್ನು ಬಳಸಿಕೊಳ್ಳಬಹುದು.

#1 ಬ್ಲಾಗರ್ ಗೆ ಲಾಗಿನ್ ಆಗಿ. ಡ್ಯಾಷ್ ಬೋರ್ಡ್ ನಲ್ಲಿರುವ ವಿವಿಧ ವಿಭಾಗಗಳನ್ನು ಪರಿಶೀಲಿಸಿರಿ. ಡ್ಯಾಷ್ ಬೋರ್ಡಿನಲ್ಲಿ ಕೆಲವು ವಿಭಾಗಗಳು ಈ ಮುಂದಿನಂತೆ ಇರುತ್ತದೆ. ಇಲ್ಲಿ ಈಗ ಥೀಮ್ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿರಿ.

 

Stats

Comments

Earnings

Pages

Layout

Theme

Settings

 

#2 ಥೀಮ್ ಕ್ಲಿಕ್ ಮಾಡಿದ ನಂತರ ಆ ಪುಟದ ಬಲಭಾಗದಲ್ಲಿ ಮೇಲ್ಗಡೆ ಬ್ಯಾಕಪ್/ ರಿಸ್ಟೋರ್ ಎಂಬ ವಿಭಾಗವಿದೆ. ಗಮನಿಸಿ. ಅದನ್ನು ಕ್ಲಿಕ್ ಮಾಡಿ ಡೌನ್ಲೋಡ್  ಥೀಮ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಡೆಸ್ಕ್ ಟಾಪ್ ನಲ್ಲಿ ಡೌನ್ಲೋಡ್ ಮಾಡಿಡಿ. ಯಾವುದೇ ಬದಲಾವಣೆ ಮಾಡುವ ಮೊದಲು ಈ ರೀತಿ ಥೀಮ್ ಡೌನ್ಲೋಡ್ ಮಾಡಿಡುವ ಅಭ್ಯಾಸ ಬೆಳೆಸಿಕೊಳ್ಳಿ.

#3. ಈಗ ನಿಮ್ಮ ಬ್ಲಾಗಿಗೆ ಸುಂದರವಾದ ಟೆಂಪ್ಲೆಟ್ ಹುಡುಕುವ ಸಮಯ. ಗೂಗಲ್ ಸರ್ಚ್ ಗೆ ಹೋಗಿ ಬ್ಲಾಗರ್ ಟೆಂಪ್ಲೆಟ್ ಎಂದು ಹುಡುಕಿ. ಹಲವು ವೆಬ್ಸೈಟ್ ಗಳು ಸಿಗುತ್ತವೆ. ಆರಂಭದಲ್ಲಿ ಉಚಿತವಾಗಿ ದೊರಕುವ ಟೆಂಪ್ಲೆಟ್ ಗಳನ್ನೇ ಬಳಸಿಕೊಳ್ಳಿರಿ.

ಕೆಲವು ಬ್ಲಾಗರ್ ಟೆಂಪ್ಲೆಟೆ್ ವೆಬ್ಸೈಟ್ ಗಳಿಗೆ ಲಿಂಕ್ ಗಳು:

1, https://gooyaabitemplates.com

  1. https://btemplates.com/

#4. ಈಗ https://gooyaabitemplates.com ವೆಬ್ಸೈಟ್ ಪ್ರವೇಶೀಸಿರಿ. ಅಲ್ಲಿರುವ ನೂರಾರು ಟೆಂಪ್ಲೆಟ್ ಗಳಲ್ಲಿ ನಿಮಗೆ ಯಾವುದು ಇಷ್ಟವಾಗುತ್ತದ್ದೋ ಅದನ್ನು ಕ್ಲಿಕ್ ಮಾಡಿ. ಅಲ್ಲಿ ಡೌನ್ಲೋಡ್ ಆಯ್ಕೆಗಳು ಇರುತ್ತವೆ. ಅದನ್ನು ಝಿಪ್ ಮಾದರಿಯಲ್ಲಿ ಡೆಸ್ಕ್ ಟಾಪ್ ನಲ್ಲಿ ಸೇವ್ ಮಾಡಿ.

 

#5. ಡೆಸ್ಕ್ ಟಾಪ್ ಗೆ ಹೋಗಿ ಝಿಪ್ ಮಾದರಿಯಲ್ಲಿರುವ ಫೈಲ್ ಅನ್ನು ಅನ್ ಝಿಪ್ ಮಾಡಿ. ಅದರ ಒಳಗೆ ಎಕ್ಸ್ ಎಂಎಲ್ ಮಾದರಿಯ ಫೈಲೊಂದು ಇರುವುದನ್ನು ಗಮನಿಸಿ.

 

#6. ಈಗ ನಿಮ್ಮ ಬ್ಲಾಗರ್ ಡ್ಯಾಷ್ ಬೋರ್ಡಿಗೆ ಹೋಗಿ. ಅಲ್ಲಿ ಥೀಮ್ ಆಯ್ಕೆಯನ್ನು ಕ್ಲಿಕ್ ಮಾಡಿ. ರಿಸ್ಟೋರ್ ಬ್ಯಾಕಪ್ ಆಯ್ಕೆಯನ್ನು ಕ್ಲಿಕ್ ಮಾಡಿರಿ.

#7. ಅಲ್ಲಿ ಛೋಸ್ ಫೈಲ್ ಆಯ್ಕೆಯನ್ನು ಕ್ಲಿಕ್ ಮಾಡಿ. ಡೆಸ್ಕ್ ಟಾಪ್ ನಲ್ಲಿ ಡೌನ್ಲೋಡ್ ಮಾಡಿಟ್ಟಿರುವ ಅನ್ ಝಿಪ್ ಮಾಡಿರುವ ಟೆಂಪ್ಲೆಟ್ ಫೋಲ್ಡರಿಗೆ ಪ್ರವೇಶಿಸಿ ಅದರಲ್ಲಿರುವ ಎಕ್ಸ್ ಎಂಎಲ್ ಮಾದರಿಯ ಫೈಲ್ ಅನ್ನು ಅಪ್ಲೋಡ್ ಮಾಡಿ.

# 8 ಅಪ್ಲೋಡ್ ಮಾಡಿದ ಬಳಿಕ ನಿಮ್ಮ ಬ್ಲಾಗ್ ಗೆ ಹೋಗಿ. ಒಂದಿಷ್ಟು ವಿನ್ಯಾಸ ಬಂದಿರುತ್ತದೆ. ಒಂದಿಷ್ಟು ಗಜಿಬಿಜಿಯಾಗಿಯೂ ಆಗಿರುತ್ತದೆ.

#9 ಗೂಗಲ್ ಡ್ಯಾಷ್ ಬೋರ್ಡಿಗೆ ಹೋಗಿ  ಅಲ್ಲಿರುವ ಲೇಯೌಟ್ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿರುವ ವಿವಿಧ ವಿಭಾಗಗಳನ್ನು ಬದಲಾಯಿಸಿರಿ. ಯಾವ ರೀತಿ ಬದಲಾಯಿಸಬೇಕು ಎಂಬ ಮಾರ್ಗದರ್ಶನವು ನೀವು ಡೌನ್ಲೋಡ್ ಮಾಡಿರುವ ಟೆಂಪ್ಲೆಟ್ ಫೈಲಿನಲ್ಲಿ ಇರುತ್ತದೆ.

#10 ಟೆಂಪ್ಲೆಟಿನಲ್ಲಿ ಅನಾವಶ್ಯಕ ಅಂಶಗಳನ್ನು ತೆಗೆಯಿರಿ. ನೀಟಾಗಿ ನಿಮ್ಮ ಬ್ಲಾಗ್ ಅನ್ನು ರಚಿಸಿ. ಅಂತಿಮವಾಗಿ ನಿಮ್ಮ ಬ್ಲಾಗ್ https://karnatakabest.blogspot.com/ ಇದೇ ರೀತಿ ಅಥವಾ ಇದಕ್ಕಿಂತ ಉತ್ತಮವಾಗಿ ಮೂಡಿಬಂದಿರಬಹುದು. ಕಂಗ್ರಾಟ್ಸ್.

 

ಬ್ಲಾಗರ್ ಟೆಂಪ್ಲೆಟ್ ಗಳನ್ನು ಬಳಸಿ ರಚಿಸಿರುವ ಕೆಲವು ವೆಬ್ಸೈಟಿಗಳಿಗೆ ಉದಾಹರಣೆಗಳು

 

ಇಲ್ಲಿ ಉದಾಹರಣೆಯಾಗಿ ನೀಡಿದ ಕೆಲವು ವೆಬ್ ತಾಣಗಳು .ಕಾಂ. .ಇನ್ ಇತ್ಯಾದಿ ಹೆಸರಿನಲ್ಲಿದೆ. ಆದರೆ, ನೀವು ಈಗ ರಚಿಸಿರುವ ಬ್ಲಾಗ್ ಹೆಸರಿನ ಮುಂದೆ .ಬ್ಲಾಗ್ ಸ್ಪಾಟ್ .ಇನ್ ಎಂದಿದೆ. ನಿಮಗೂ ನಿಮ್ಮ ಬ್ಲಾಗ್ ಅನ್ನು ವೆಬ್ಸೈಟ್ ರೂಪದಲ್ಲಿ ನೋಡಬೇಕೆನಿಸಬಹುದು. ಇದನ್ನು ನೀವು ಹೆಚ್ಚು ಖರ್ಚಿಲ್ಲದೆ ಮಾಡಬಹುದು. ಅದಕ್ಕಾಗಿ ನೀವು ಮೊದಲಿಗೆ ಒಂದು ಬ್ಲಾಗರ್ ಡೊಮೈನ್ ಹೆಸರನ್ನು ಖರೀದಿಸಬೇಕು. ಖರೀದಿಸುವ ಮೊದಲು ನೀವು ಈ ಮುಂದಿನ ಲೇಖನವನ್ನು ಓದಲು ಮರೆಯಬೇಡಿ.

ಡೊಮೈನ್ ಖರೀದಿಗೆ ಗೈಡ್

ಓದಿ: ವೆಬ್ ಸೈಟ್ ಗೈಡ್: ಡೊಮೈನ್ ಖರೀದಿ ಹೇಗೆ?