ವರ್ಡ್ ಪ್ರೆಸ್ ಬ್ಲಾಗ್: ಡೊಮೈನ್ ಮ್ಯಾಪಿಂಗ್ ಮಾಡುವುದು ಹೇಗೆ?

Photo by Nick Morrison on Unsplash

ವರ್ಡ್ ಪ್ರೆಸ್ ವೆಬ್ ಸೈಟ್ ವಿನ್ಯಾಸ ಸಂಪೂರ್ಣ ಮಾರ್ಗದರ್ಶಿಯನ್ನು ಕನ್ನಡದಲ್ಲಿ ಒದಗಿಸುವ ಈ ಹಿಂದಿನ ಲೇಖನಗಳನ್ನು ಸಾಕಷ್ಟು ಜನರು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಚಿಕೆಯಲ್ಲಿ ವರ್ಡ್ ಪ್ರೆಸ್ ಮೂಲಕ ಬ್ಲಾಗ್ ರಚನೆ ಮತ್ತು ಆ ಬ್ಲಾಗ್ ಗೆ ಡೊಮೈನ್ ಮ್ಯಾಪಿಂಗ್ ಮಾಡುವುದು ಹೇಗೆ ಎನ್ನುವುದನ್ನು ಕಲಿಯೋಣ.

ವರ್ಡ್ ಪ್ರೆಸ್ ಮೂಲಕ ಬ್ಲಾಗ್ ರಚನೆ ಹೇಗೆ?

ಮೊದಲಿಗೆ https://wordpress.com/ ಹೋಗಿ ಹೊಸ ಖಾತೆ ಆರಂಭಿಸಿ. ನಿಮ್ಮ ಬ್ಲಾಗ್ ಗೆ ಒಂದು ಹೆಸರು ನೀಡಿ. ಉದಾಹರಣೆಗೆ https://karnatakabest.wordpress.com/ ಎಂಬ ಹೆಸರಿನಲ್ಲಿ ನಿಮ್ಮ ಬ್ಲಾಗ್ ರಚನೆಯಾಗುತ್ತದೆ. ಈ ಸಮಯದಲ್ಲಿ ಡೊಮೈನ್ ಖರೀದಿಸುವಂತೆ ವರ್ಡ್ ಪ್ರೆಸ್ ಉತ್ತೇಜಿಸುತ್ತದೆ. ಬೇಕಿದ್ದರೆ ಖರೀದಿಸಬಹುದು. ಆದರೆ, ಈಗಲೇ ಅವಸರ ಮಾಡಬೇಡಿ. ಈ ಸರಣಿಯ ಎಲ್ಲಾ ಲೇಖನಗಳನ್ನು ಓದುವವರೆಗೆ ತಾಳ್ಮೆ ಇರಲಿ.

ಮೊದಲಿಗೆ ನಿಮ್ಮ ಬ್ಲಾಗ್ ಗೆ ಒಂದು ಚಂದದ ಹೆಸರು ನೀಡಿ. ನೀವು ಎಷ್ಟು ಚಂದದ ಹೆಸರು ನೀಡಿದರೂ ಅದರ ಮುಂದೆ .ವರ್ಡ್ ಪ್ರೆಸ್.ಕಾಂ ಎಂದಿರುತ್ತದೆ. ಇದು ಈ ಜಮಾನಕ್ಕೆ ಸೂಕ್ತವಲ್ಲ. ಹೀಗಾಗಿ ನೀವು ಡೊಮೈನ್ ಹೆಸರು ಖರೀದಿಸಬೇಕು. ಡೊಮೈನ್ ಹೆಸರು ಖರೀದಿಸುವ ಮೊದಲು ಡೊಮೈನ್ ಖರೀದಿ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆ ಕುರಿತು ಎಕ್ಸ್ ಕ್ಲೂಸಿವ್ ಲೇಖನವನ್ನು ಓದಬಹುದು. ಡೊಮೈನ್ ಹೆಸರನ್ನು ಈ ಕೆಳಗೆ ಆಯ್ಕೆ ಮಾಡಿನೋಡಿ.

ಏನಿದು ಡೊಮೈನ್ ಮ್ಯಾಪಿಂಗ್?

ನೀವು ಈ ಮೆಲೆ ತಿಳಿಸಿದಂತೆ ಬ್ಲಾಗ್ ರಚಿಸಿದರೆ ಬ್ಲಾಗ್ ಹೆಸರ ಮುಂದೆ .ವರ್ಡ್ ಪ್ರೆಸ್.ಕಾಂ ಎಂದಿರುತ್ತದೆ. ಉದಾಹರಣೆಗೆ https://karnatakabest.wordpress.com/ ಈ ಬ್ಲಾಗ್ ನಲ್ಲಿ ಕರ್ನಾಟಕ ಬೆಸ್ಟ್ ಮುಂದೆ ವರ್ಡ್ ಪ್ರೆಸ್ ಹೆಸರು ಇರುತ್ತದೆ. ಇದರ ಬದಲು ನಿಮ್ಮ ಬ್ಲಾಗ್ ಹೆಸರು ಮಾತ್ರ ಇರಬೇಕಾದರೆ ನೀವು ಮೊದಲಿಗೆ ನಿಮಗೆ ಬೇಕಾದ ಹೆಸರಿನ ಡೊಮೈನ್ ಖರೀದಿಸಬೇಕು. ನಂತರ ಆ ಹೆಸರನ್ನು ಈ ಬ್ಲಾಗ್ ಗೆ ಮ್ಯಾಪ್ ಮಾಡಬೇಕು.

ನೆನಪಿಡಿ ವರ್ಡ್ ಪ್ರೆಸ್ ನಲ್ಲಿ ಡೊಮೈನ್ ಮ್ಯಾಪ್ ಮಾಡಿದರೂ ಯುಆರ್ ಎಲ್ ಗಳಲ್ಲಿ ವೆರ್ಡ್ ಪ್ರೆಸ್ ಹೆಸರು ಕಾಣಿಸುತ್ತದೆ. ಕೇವಲ ಮೊದಲ ಪುಟದಲ್ಲಿ ಮಾತ್ರ ಡೊಮೈನ್ ಹೆಸರು ಪ್ರದರ್ಶಿತವಾಗುತ್ತದೆ. ಆದರೆ, ಗೂಗಲ್ ಬ್ಲಾಗರ್ ಗೆ ಡೊಮೈನ್ ಜೋಡಿಸಿದರೆ ಸಂಪೂರ್ಣವಾಗಿ ಡೊಮೈನ್ ಹೆಸರಿನಲ್ಲಿಯೇ ಬ್ಲಾಗ್ ಇರುತ್ತದೆ.

ವರ್ಡ್ ಪ್ರೆಸ್ ಹೋಸ್ಟಿಂಗ್ ಖರೀದಿಸದೆ ಇದ್ದರೆ ಮಾತ್ರ ಡೊಮೈನ್ ಹೆಸರು ಜೋಡಿಸಬಹುದು. ಹೋಸ್ಟಿಂಗ್ ಖರೀದಿಸುವ ಆಲೋಚನೆ ಇದ್ದರೆ ಡೊಮೈನ್ ಮ್ಯಾಪಿಂಗ್ ಮಾಡಬೇಕಿಲ್ಲ. ಎಲ್ಲಾದರೂ ಡೊಮೈನ್ ಮ್ಯಾಪ್ ಮಾಡಿದರೂ ನಂತರ ಆದನ್ನು ತೆಗೆದು ಹೋಸ್ಟಿಂಗ್ ಗೆ ಜೋಡಿಸಿಕೊಳ್ಳಬಹುದು. ಕಲಿಕೆಯ ವಿಷಯದಿಂದ ಮ್ಯಾಪಿಂಗ್ ಕಲಿಯಬಹುದು.

ನೀವು ಈ ಸಂದರ್ಭದಲ್ಲಿ ಓದಬಹುದಾದ ಲೇಖನಗಳು

ಈ ಮೇಲೆ ನೀಡಿದ ಲಿಂಕ್ ಗಳು ಬ್ಲಾಗರ್ ಗೆ ಸಂಬಂಧಪಟ್ಟವು. ಇನ್ನು ಮುಂದೆ ಹೇಳಿಕೊಡಲಿರುವುದು ವರ್ಡ್ ಪ್ರೆಸ್ ಗೆ ಡೊಮೈನ್ ಮ್ಯಾಪ್ ಮಾಡುವ ಕುರಿತಾಗಿ.

ಇಲ್ಲಿ ಗೋಡ್ಯಾಡಿಯಿಂದ ಡೊಮೈನ್ ಖರೀದಿಸಿದರೆ ಹೇಗೆ ವರ್ಡ್ ಪ್ರೆಸ್ ಗೆ ಮ್ಯಾಪ್ ಮಾಡುವುದು ಹೇಗೆ ಎಂದು ತಿಳಿಸಿಕೊಡಲಾಗುತ್ತದೆ. ಇತರೆ ತಾಣಗಳಿಂದ ಖರೀದಿಸಿದರೂ ಅಂತಹ ವ್ಯತ್ಯಾಸ ಇರುವುದಿಲ್ಲ. ನನಗೆ ಗೋಡ್ಯಾಡಿ ಏನೂ ಕಮಿಷನ್ ಕೊಡುವುದಿಲ್ಲ.

  • ಮೊದಲಿಗೆ ಗೋಡ್ಯಾಡಿಗೆ ಲಾಗಿನ್ ಆಗಿ. ಡೊಮೈನ್ ಸೆಟ್ಟಿಂಗ್ಸ್ ಎಂಬ ವಿಭಾಗ ಇರುತ್ತದೆ. ಅದನ್ನು ಕ್ಲಿಕ್ ಮಾಡಿ.
  • ಅಲ್ಲಿರುವ ಡೊಮೈನ್ಸ್ ಸೆಟ್ಟಿಂಗ್ಸ್ ನಲ್ಲಿ ನೀವು ಖರೀದಿಸಿದ ಡೊಮೈನ್ ಹೆಸರು ಇರುತ್ತದೆ.
  • ಅಲ್ಲಿ ಯೂಸ್ ಮೈ ಡೊಮೈನ್ ಎಂದು ಇರುತ್ತದೆ. ಅದನ್ನು ಕ್ಲಿಕ್ ಮಾಡಿ.
  • ಅಲ್ಲಿ ಕನೆಕ್ಟ್ ಟು ಆ್ಯನ್ ಎಕ್ಸಿಸ್ಟಿಂಗ್ ಸೈಟ್ ಎಂಬುದುರ ಕೆಳಗೆ ಕನೆಕ್ಟ್ ಎಂಬ ಬಟನ್ ಇರುತ್ತದೆ.
  • ಅದರ ಕೆಳಗೆ ವೆಬ್ ಸೈಟ್ ಎಂದಿರುತ್ತದೆ. ಅಲ್ಲಿ ವರ್ಡ್ ಪ್ರೆಸ್ ಕ್ಲಿಕ್ ಮಾಡಿ.
  • ವರ್ಡ್ ಪ್ರೆಸ್ ಬ್ಲಾಗ್ ಯುಆರ್ ಎಲ್ ಎಂದಿರುವಲ್ಲಿ ನೀವು ರಚಿಸಿದ ಬ್ಲಾಗ್ ಹೆಸರು ನಮೂದಿಸಿ(ಉದಾಹರಣೆಗೆ ನಿಮ್ಮಬ್ಲಾಗ್ ಹೆಸರು.ವರ್ಡ್ ಪ್ರೆಸ್.ಕಾಂ). ನಂತರ ನೆಕ್ಸ್ಟ್ ಕ್ಲಿಕ್ ಮಾಡಿ. ಫಿನಿಶ್ ಬಟನ್ ಕ್ಲಿಕ್ ಮಾಡಿ.

ನಿಮ್ಮ ಬ್ಲಾಗ್ ಕೆಲವು ಗಂಟೆಗಳ ಬಳಿಕ(ಕೆಲವೊಮ್ಮೆ ಒಂದು ದಿನದ ಬಳಿಕ ) ನೀವು ನಿಮ್ಮ ಬ್ಲಾಗ್ ಹೆಸರು ನಮೂದಿಸಿದಾಗ ಅದು ನಿಮ್ಮ ಡೊಮೈನ್ ಹೆಸರಲ್ಲಿ ತೆರೆಯುತ್ತಾದೆ. ಯಾರಿಗಾದರೂ ನಿಮ್ಮ ಬ್ಲಾಗ್ ವಿಳಾಸ ಕೊಟ್ಟಾಗ ಡೊಮೈನ್ ಹೆಸರನ್ನೇ (ಉದಾ: ಕರ್ನಾಟಕಬೆಸ್ಟ್.ಕಾಂ) ಕೊಟ್ಟರಾಯ್ತು). ಇಲ್ಲಿಗೆ ವರ್ಡ್ ಪ್ರೆಸ್ ಗೆ ಬ್ಲಾಗ್ ಜೋಡಿಸುವ ಕೆಲಸ ಪೂರ್ಣಗೊಂಡಿದೆ.

ನೆನಪಿಡಿ: ಈ ಕರ್ನಾಟಕಬೆಸ್ಟ್.ಕಾಂ ವರ್ಡ್ ಪ್ರೆಸ್ ಗೆ ಡೊಮೈನ್ ಮ್ಯಾಪ್ ಮಾಡಿದ ವೆಬ್ ಸೈಟ್ ಅಲ್ಲ. ಇದು ಹೋಸ್ಟಿಂಗ್, ಡೊಮೈನ್ ಮತ್ತು ಪ್ರೀಮಿಯಂ ಥೀಮ್ ಖರೀದಿಸಿ ರಚಿಸಿದ ವೆಬ್ ಸೈಟ್ ಆಗಿದೆ. ಇಂತಹ ವೆಬ್ ಸೈಟ್ ನಿರ್ಮಿಸಲು ಮುಂದಿನ ಅಧ್ಯಾಯಗಳಲ್ಲಿ ನೀವು ಕಲಿಯಲಿದ್ದೀರಿ.

ಮುಂದಿನ ಲೇಖನದಲ್ಲಿ ವರ್ಡ್ ಪ್ರೆಸ್.ಆರ್ಗ್ ಮೂಲಕ ಲಭ್ಯವಿರುವ ಹೋಸ್ಟಿಂಗ್ ಪ್ಲ್ಯಾನ್ ಮತ್ತು ಅವುಗಳನ್ನು ಖರೀದಿಸಬಹುದೇ ಎಂಬ ಮಾಹಿತಿಯನ್ನು ತಿಳಿಯಲಿದ್ದೀರಿ. ಅದಕ್ಕಿಂತಲೂ ಲಭ್ಯವಿರುವ ಉತ್ತಮ ಆಯ್ಕೆಗಳ ಕುರಿತು ತಿಳಿಯಲಿದ್ದೀರಿ.

ವೆಬ್ ಸೈಟ್ ಗೈಡ್ ನ ಮುಂದಿನ ಲೇಖನ ಓದಿ

ಮುಂದಿನ ಲೇಖನ: ವರ್ಡ್ ಪ್ರೆಸ್.ಕಾಂನಲ್ಲಿರುವ ವಿವಿಧ ಹೋಸ್ಟಿಂಗ್ ಪ್ಲ್ಯಾನ್ ಗಳನ್ನು ಖರೀದಿಸಬಹುದೇ?