ವೆಬ್ ಸೈಟ್ ಗೈಡ್: ವರ್ಡ್ ಪ್ರೆಸ್ನಲ್ಲಿ ಇರಬೇಕಾದ ಪ್ಲಗಿನ್ಗಳು

ವರ್ಡ್ ಪ್ರೆಸ್ ವೆಬ್ ಸೈಟ್ ರಚಿಸಿದ ಬಳಿಕ ಸಾಕಷ್ಟು ಉಚಿತ ಅಥವಾ ಪ್ರೀಮಿಯಂ ಥೀಮ್ ಮತ್ತು ಪ್ಲಗಿನ್ ಗಳನ್ನು ಅಳವಡಿಸುವ ಅವಕಾಶ ನಮಗೆ ದೊರಕುತ್ತದೆ. ಎಲ್ಲವನ್ನೂ ಪರೀಕ್ಷಿಸಿಬಿಡೋಣ ಎಂದು ಸಿಕ್ಕ ಸಿಕ್ಕ ಪ್ಲಗಿನ್ ಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವಲ್ಲ. ಇರುವ ಸಾವಿರಾರು ಪ್ಲಗಿನ್ ಗಳಲ್ಲಿ ಕೆಲವು ಪ್ಲಗಿನ್ ಗಳು ಸಮರ್ಪಕವಾಗಿ ಕೋಡಿಂಗ್ ಆಗಿರುವುದಿಲ್ಲ. ಇವು ನಿಮ್ಮ ವೆಬ್ ಸೈಟ್ ಅನ್ನು ಘಾಸಿಗೊಳಿಸಬಹುದು. ಕೆಲವು ಪ್ಲಗಿನ್ ಅಳವಡಿಸಿದ ಬಳಿಕ ವೆಬ್ ಸೈಟ್ ಕ್ರ್ಯಾಷ್ ಸಹ ಆಗಬಹುದು.

ಕೆಲವೊಂದು ಪ್ಲಗಿನ್ ಗಳು ವರ್ಡ್ ಪ್ರೆಸ್ ವೆಬ್ ಸೈಟ್ ಗೆ ಜೀವಜಲ ಇದ್ದಂತೆ. ವೆಬ್ ಸೈಟ್ ಅನ್ನು ಹ್ಯಾಕರ್ ಗಳಿಂದ, ಸ್ಪ್ಯಾಮರ್ ಗಳಿಂದ ರಕ್ಷಿಸಲು ಅವಶ್ಯವಾಗಿ ಬೇಕಿರುತ್ತದೆ. ಇನ್ನು ಕೆಲವು ಪ್ಲಗಿನ್ ಗಳು ಗೂಗಲ್ ನಲ್ಲಿ ವೆಬ್ ಸೈಟ್ ಗೆ ಉತ್ತಮ ರ್ಯಾಂಕಿಂಗ್ ದೊರಕಿಸಿಕೊಡಲು ನೆರವು ನೀಡುತ್ತವೆ. ಕೆಲವೊಂದು ಪ್ಲಗಿನ್ ಗಳು ವೆಬ್ ಸೈಟ್ ನ ಲೋಡಿಂಗ್ ವೇಗ ಇತ್ಯಾದಿಗಳನ್ನು ಹೆಚ್ಚಿಸಲು ಬೇಕಾಗುತ್ತದೆ. ನಿಮ್ಮ ವರ್ಡ್ ಪ್ರೆಸ್ ವೆಬ್ ಸೈಟ್ ನಲ್ಲಿ ಅಗತ್ಯವಾಗಿ ಇರಬೇಕಾದ ಕೆಲವು ಪ್ಲಗಿನ್ ಗಳ ವಿವರ ಇಲ್ಲಿದೆ.

ಅಕಿಸ್ಮಿತ್ ‍ಆ್ಯಂಟ್ ಸ್ಪ್ಯಾಮ್ (Akismet Anti-Spam)

ಸ್ಪ್ಯಾಮ್ ಗಳಿಂದ ನಿಮ್ಮ ವೆಬ್ ಸೈಟ್ ಅನ್ನು ರಚಿಸಲು ಅತ್ಯಂತ ಅವಶ್ಯವಾದ ಪ್ಲಗಿನ್ ಆಗಿದೆ. ಈ ಪ್ಲಗಿನ್ ಇಲ್ಲದಿದ್ದರೆ ನಿಮ್ಮ ವೆಬ್ ಸೈಟ್ ನಲ್ಲಿ ಅನಾಮಧೇಯ, ಸ್ಪ್ಯಾಮ್ ಕಾಮೆಂಟ್ ಗಳು ಸೇರಿದಂತೆ ಹಲವು ತೊಂದರೆಗಳು ಕಾಣಿಸಬಹುದು.

ಕಾಂಟ್ಯಾಕ್ಟ್ ಫಾರ್ಮ್

ನಿಮ್ಮ ವೆಬ್ ಸೈಟ್ ನಲ್ಲಿ ಸಂಪರ್ಕಿಸಿ ಎಂಬ ವಿಭಾಗ ಇರುವುದು ಅಗತ್ಯ. ನಿಮಗೆ ಬೇಕಾದ ಇಂತಹ ಫಾರ್ಮ್ ಗಳನ್ನು ರಚಿಸಿಲು ಕಾಂಟ್ಯಾಕ್ಟ್ ಫಾರ್ಮ್ ನೆರವಾಗುತ್ತದೆ.

ಜೆಟ್ ಪ್ಯಾಕ್

ನೀವು ವರ್ಡ್ ಪ್ರೆಸ್.ಕಾಂ ಮೂಲಕ ಪ್ಲ್ಯಾನ್ ಗಳನ್ನು ಖರೀದಿಸಿದ್ದರೆ ಜೆಟ್ ಪ್ಯಾಕ್ ಸೌಲಭ್ಯಗಳು ನಿಮಗೆ ನೇರವಾಗಿ ದೊರಕುತ್ತವೆ. ಎಲ್ಲಾದರೂ ನೀವು ನನ್ನಂತೆಯೇ ಹೆಚ್ಚು ಸ್ವಾತಂತ್ರ್ಯದ ಹಂಬಲದಿಂದ ವರ್ಡ್ ಪ್ರೆಸ್.ಆರ್ಗ್ ಮೂಲಕ (ಓದಿ: ಯಾಕೆ ವರ್ಡ್ ಆರ್ಗ್ ಬೆಸ್ಟ್?) ಮೂಲಕ ರಚಿಸಿದ್ದರೆ ಜೆಟ್ ಪ್ಯಾಕ್ ಪ್ಲಗಿನ್ ಡೌನ್ ಲೋಡ್ ಮಾಡಿಕೊಳ್ಳಿ. ಈ ಒಂದು ಪ್ಲಗಿನ್ ಮೂಲಕ ನೀವು ಹತ್ತು ಹಲವು ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಎಸ್ಎಸ್ಎಲ್ ಸರ್ಟಿಫಿಕೇಟ್

ಎಸ್ ಎಸ್ ಎಲ್ ಸರ್ಟಿಫಿಕೇಟ್ ಗೆ ಹಣ ನೀಡಲು ಹಿಂದೆಮುಂದೆ ಯೋಚಿಸಬಹುದು. ಯಾಕೆಂದರೆ, ಅದು ದುಬಾರಿಯಾಗಿ ಕಾಣಿಸಬಹುದು. ಇದೇ ಕಾರಣಕ್ಕೆ ಬಹುತೇಕ ವರ್ಡ್ ಪ್ರೆಸ್ ವೆಬ್ ಸೈಟ್ ಗಳು ನಾಟ್ ಸೆಕ್ಯುರ್ ಎನ್ನುವಂತೆ ಕಾಣಿಸುತ್ತದೆ. ಇಂತಹ ಸಮಯದಲ್ಲಿ ಉಚಿತ ಎಸ್ ಎಸ್ ಎಲ್ ಸರ್ಟಿಫಿಕೇಟ್ ಗಳನ್ನು ಅಳವಡಿಸಬಹುದು. ನಾನು ನನ್ನ ವೆಬ್ ಸೈಟ್ ಗೆ ಅಳವಡಿಸಿದ ಉಚಿತ ಎಸ್ ಎಸ್ ಎಲ್ ಸರ್ಟಿಫಿಕೇಟ್ ಹೆಸರು ಒನ್ ಕ್ಲಿಕ್ ಎಸ್ ಎಸ್ ಎಲ್(One Click SSL). ಇದನ್ನು ಒಂದೆರಡು ಕ್ಲಿಕ್ ಮೂಲಕ ನಿಮ್ಮ ವೆಬ್ ಸೈಟ್ ಗೆ ಅಳವಡಿಸಿಕೊಳ್ಳಬಹುದು.

ನಿಮ್ಮ ವೆಬ್ ಸೈಟ್ ಅನ್ನು ಆ್ಯಂಟಿ ವೈರಸ್, ಮಾಲ್ ವೇರ್, ಫೈರ್ ವಾಲ್ ಇತ್ಯಾದಿಗಳಿಂದ ರಕ್ಷಿಸಲು ಸ್ಕ್ಯಾನ್ ಮಾಡಲು ಈ ಪ್ಲಗಿನ್ ಸೂಕ್ತವಾಗಿದೆ. ಈಗಲೇ ಡೌನ್ ಲೋಡ್ ಮಾಡಿಕೊಳ್ಳಿ.

ಯೋಸ್ಟ್ ಎಸ್ ಇಒ

ವರ್ಡ್ ಪ್ರೆಸ್ ಮೂಲಕ ನಿರ್ಮಿಸಿದ ಬಹುತೇಕ ಕನ್ನಡ ವೆಬ್ ಸೈಟ್ ಗಳನ್ನು ನೋಡುತ್ತಿದ್ದೇನೆ. ಎಸ್ ಇ ಒ ಕುರಿತು ಯಾವುದೇ ವೆಬ್ ಸೈಟ್ ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣಿಸುತ್ತಿಲ್ಲ. ಕನ್ನಡದಲ್ಲಿಯೇ ಇರುವ ಯುಆರ್ ಎಲ್, ಬಳಸದ ಸೈಟ್ ಟೈಟಲ್, ಮೆಟಾ ಟೈಟಲ್ ಇತ್ಯಾದಿಗಳು. ಗೂಗಲ್ ಸೇರಿದಂತೆ ಸರ್ಚ್ ಎಂಜಿನ್ ಗಳಲ್ಲಿ ಉತ್ತಮ ರ್ಯಾಂಕಿಂಗ್ ದೊರಕಲು ಎಸ್ ಇಒ ಪ್ಲಗಿನ್ ಗಳು ನೆರವಾಗುತ್ತವೆ. ನಾನು ಬಳಸುತ್ತಿರುವುದು ಯೋಸ್ಟ್ ಎಸ್ ಇ ಒ.

ಕ್ಯಾಚಿ ಪ್ಲಗಿನ್

ವೆಬ್ ಸೈಟ್ ಗಳು ಲೋಡಿಂಗ್ ವೇಗ ಹೆಚ್ಚಿಸಿಕೊಳ್ಳಲು ಕ್ಯಾಚಿ ಪ್ಲಗಿನ್ ಗಳನ್ನು ಅಳವಡಿಸುವುದು ಸೂಕ್ತ. ವೆಬ್ ಸೈಟ್ ನಲ್ಲಿ ಲಭ್ಯವಿರುವ ನೂರಾರು ಕೋಡಿಂಗ್ ಸ್ಕ್ರಿಪ್ಟ್ ಗಳು, ಸಿಡಿಎನ್ ಗಳು, ಪ್ರೋಗ್ರಾಂಗಳು ವೆಬ್ ಸೈಟ್ ಲೋಡಿಂಗ್ ವೇಗವನ್ನು ಕಡಿಮೆಗೊಳಿಸುತ್ತವೆ. ಇದಕ್ಕಾಗಿ ಕ್ಯಾಚಿ ಪ್ಲಗಿನ್ ಅಳವಡಿಸುವುದು ಸೂಕ್ತ. ನಾನು ಈ ಹಿಂದೆ W3 Total Cache ಎಂಬ ಪ್ಲಗಿನ್ ಬಳಸುತ್ತಿದ್ದೆ. ಈಗ, WP Super Cache ಬಳಸುತ್ತಿದ್ದೇನೆ. ಡಬ್ಲ್ಯುಪಿ ರಾಕೆಟ್, ಹೈಪರ್ ಕ್ಯಾಚಿ ಇತ್ಯಾದಿ ಹಲವು ಕ್ಯಾಚಿ ಪ್ಲಗಿನ್ ಗಳು ಲಭ್ಯ ಇವೆ. ನಿಮಗೆ ಇಷ್ಟವಾಗಿರುವುದನ್ನು ಬಳಸಿರಿ.

  • ಇವಿಷ್ಟು ಅಗತ್ಯವಾಗಿ ಬಳಸಬೇಕಾದ ಪ್ಲಗಿನ್ ಗಳು. ನೀವು ಈ-ಸ್ಟೋರ್ ಅಥವಾ ಇ-ಕಾಮರ್ಸ್ ತಾಣ ಹೊಂದಿದ್ದರೆ ವು-ಕಾಮರ್ಸ್ ಪ್ಲಗಿನ್ ನಿನ್ನ ಬಹುತೇಕ ಅವಶ್ಯಕತೆಗಳನ್ನು ಪೂರೈಸುತ್ತದೆ.
  • ನನ್ನ ವೆಬ್ ಸೈಟ್ ನಲ್ಲಿ ಕಂಟೆಂಟ್ ಕಾಪಿ ಪ್ರೊಟೆಕ್ಷನ್, ಕ್ವಿಜ್ ಸೇರಿದಂತೆ ಇನ್ನೂ ಹಲವು ಪ್ಲಗಿನ್ ಗಳು ಇವೆ. ಅವು ನನ್ನ ವೆಬ್ ಸೈಟ್ ವಿನ್ಯಾಸಕ್ಕೆ ಅವಶ್ಯವಾದವು. ಅವುಗಳ ಅವಶ್ಯಕತೆ ನಿಮಗೆ ಇಲ್ಲದೆ ಇರಬಹುದು.
  • ಯಾವುದೇ ಪ್ಲಗಿನ್ ಬಳಸುವ ಮೊದಲು ಅವುಗಳಿಗೆ ನೀಡಿರುವ ಯೂಸರ್ ಸ್ಕೋರ್, ಡೌನ್ ಲೋಡ್ ಮಾಡಿರುವ ಸಂಖ್ಯೆ ಇತ್ಯಾದಿಗಳನ್ನು ಗಮನಿಸಿರಿ.

(ವರ್ಡ್ ಪ್ರೆಸ್ ಪ್ಲಗಿನ್ ಭಂಡಾರಕ್ಕೆ ಕೊಂಡಿ ಇಲ್ಲಿದೆ)

ಹಿಂದಿನ ಪೋಸ್ಟ್: ವರ್ಡ್ ಪ್ರೆಸ್ ಸೆಟ್ಟಿಂಗ್, ಸೆಟಪ್ ಇತ್ಯಾದಿಗಳ ಕಂಪ್ಲಿಟ್ ಗೈಡ್