ಕನ್ನಡ ಗೈಡ್: ಫೋನ್ ಸಿಮ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು?

ಫೋನ್ ಕಳೆದುಹೋದಾಗ ಅದರ ಜೊತೆ ಸಿಮ್ ಫೋನ್ ಸಹ ಕಳೆದುಹೋಗುತ್ತದೆ. ಇಂತಹ ಸಮಯದಲ್ಲಿ ಆ ಫೋನ್ ನಲ್ಲಿರುವ ಸಿಮ್ ಕಾರ್ಡ್ ಗಳನ್ನು ಡಿಆಕ್ಟಿವೇಟ್ ಮಾಡಬೇಕು. (ಓದಿ: ಫೋನ್ ಕಳೆದುಹೋದರೆ ಏನು ಮಾಡಬೇಕು?)

ಮೊದಲಿಗೆ ನಿಮ್ಮ ಸಿಮ್ ಗೆ ಸಂಬಂಧಪಟ್ಟ ಕಸ್ಟಮರ್ ಕೇರ್ ಗೆ ಕರೆ ಮಾಡಿ. ಗೂಗಲ್ ನಲ್ಲಿ ಹೋಗಿ ಹುಡುಕಿದರೆ ಕಸ್ಟಮರ್ ಕೇರ್ ನಂಬರ್ ಸಿಗುತ್ತದೆ. ಅಂದರೆ ಗೂಗಲ್ ಗೆ ಹೋಗಿ ಬಿಎಸ್ ಎನ್ ಎಲ್ ಕಸ್ಟಮರ್ ಕೇರ್ ನಂಬರ್, ಏರ್ಟೆಲ್ ಕಸ್ಟಮರ್ ಕೇರ್, ಐಡಿಯಾ ಕಸ್ಟಮರ್ ಕೇರ್… ಹೀಗೆಲ್ಲ ಬರೆದು ಹುಡುಕಬಹುದು. ಆ ಸಂಖ್ಯೆಗೆ ಕರೆ ಮಾಡಿದಾಗ ನೀವು ಸಿಮ್ ಗೆ ನೀಡಿರುವ ವಿಳಾಸ, ಇತ್ತೀಚೆಗೆ ಕರೆ ಮಾಡಿರುವ ವಿವರ ಇತ್ಯಾದಿಗಳನ್ನೆಲ್ಲ ಕೇಳಿ ನಿಮ್ಮ ಸಿಮ್ ಅನ್ನು ಡಿಆಕ್ಟಿವೇಟ್ ಮಾಡಬಹುದು.

ನಂತರ ಹೊಸ ಸಿಮ್ ಆಕ್ಟಿವೇಟ್ ಮಾಡಿಕೊಳ್ಳಬೇಕು. ಇದಕ್ಕಾಗಿ ನೀವು ಹತ್ತಿರದ ಸಿಮ್ ಕಾರ್ಡ್ ಕೇಂದ್ರಕ್ಕೆ(ಬಿಎಸ್ ಎನ್ ಎಲ್ ಕೇಂದ್ರ, ಆರ್ಟೆಲ್ ಸೆಂಟರ್ ಇತ್ಯಾದಿ) ಹೋಗಬೇಕು. ಅಲ್ಲಿ ಕಳೆದುಹೋದ ಸಿಮ್ ಬಗ್ಗೆ ತಿಳಿಸಿ ಹೊಸ ಸಿಮ್ ಪಡೆದುಕೊಳ್ಳಬಹುದು. ಕೆಲವು ಸಂಸ್ಥೆಯವರು ಇದಕ್ಕಾಗಿ ಪೊಲೀಸ್ ಕಂಪ್ಲೆಟ್ ನೀಡಿದ ಪ್ರತಿಯನ್ನು ಕೇಳಬಹುದು. ಹತ್ತಿರದ ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ದಾಖಲಿಸಿ ಅದರ ಪ್ರತಿಯನ್ನು ತರಬಹುದು.

ನೆನಪಿಡಿ: ಯಾವುದೇ ಕಾರಣಕ್ಕೂ ಫೋನ್ ನಲ್ಲಿ ಬ್ಯಾಂಕ್ ಮಾಹಿತಿ, ಪಾಸ್ ವರ್ಡ್ ಇತ್ಯಾದಿಗಳನ್ನು ಬರೆದು ಇಡಬೇಡಿ.

ಓದಿ: ಮೊಬೈಲ್ ಫೋನ್ ಕಳೆದುಹೋದರೆ ಏನು ಮಾಡಬೇಕು?