ವಿಸ್ಮಯಗಳು: 50 ಅಚ್ಚರಿಯ ಸಂಗತಿಗಳು (ಓದಿ ಬೆರಗಾಗಿ!)

ಜಗತ್ತಿನಲ್ಲಿ ನೂರಾರು ಸೋಜಿಗದ ಸಂಗತಿಗಳಿವೆ. ಇಂತಹ ವಿಷಯಗಳನ್ನು ಓದುವಾಗ ಹೌದಾ, ಓಹ್ ಎಂಬ ಉದ್ಘಾರಗಳು ನಮ್ಮಿಂದ ಮೂಡಬಹುದು. ಅಂತಹ ನೂರಾರು ಸೋಜಿಗಗಳಲ್ಲಿ 50 ಸೋಜಿಗದ, ಬೆರಗಿನ ಸಂಗತಿಗಳನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ. ಇಂತಹ ನೂರಾರು ವಿಷಯಗಳನ್ನು ಓದಲು, ಟೆಕ್ನಾಲಜಿ, ಶಿಕ್ಷಣ, ಕರಿಯರ್ ಸಂಬಂಧಿತ ಲೇಖನಗಳನ್ನು ಓದಲು ಸದಾ ಕರ್ನಾಟಕಬೆಸ್ಟ್.ಕಾಂಗೆ (https://karnatakabest.com) ಭೇಟಿ ನೀಡಿ.

ಜಗತ್ತಿನ 50 ಅಚ್ಚರಿಯ ಸಂಗತಿಗಳನ್ನು ಓದೋಣ ಬನ್ನಿರಿ

 1. ಆಯುರ್ವೇದವು ಮಾನವಕುಲದ ಮೊದಲ ಔಷಧ ಪದ್ಧತಿಯಾಗಿದೆ. 2500 ವರ್ಷಗಳ ಹಿಂದೆ ಇದನ್ನು ಆರಂಭಿಸಿದ ಚರಕ, ಸುಶ್ರತರು ಈ ಪದ್ಧತಿಯ ಜನಕರೆನಿಸಿದ್ದಾರೆ.
 2. ಪ್ರತಿ ಮನುಷ್ಯ ವರ್ಷವೊಂದಕ್ಕೆ 10,000,000 ಸಲ ಕಣ್ಣನ್ನು ಮಿಟುಕಿಸುತ್ತಾನೆ.
 3. ಬೆಕ್ಕು ಗಂಟೆಯೊಂದಕ್ಕೆ 20ಕಿ.ಮೀ ವೇಗದಲ್ಲಿ ಓಡುವ ಸಾಮರ್ಥ್ಯ ವನ್ನು ಹೊಂದಿದೆ.
 4. ಸುಮ್ಮೇರಿಯನ್ನರು ಕ್ರಿಸ್ತ ಪೂರ್ವ 3450ರಲ್ಲಿ ಚಕ್ರವನ್ನು ಕಂಡುಹಿಡಿದರು.
 5. ನ್ಯೂಯಾರ್ಕ್ ನಗರದಲ್ಲಿನ ಸರಕಾರಿ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರಲ್ಲಿ ಮೂರನೇ ಒಂದರಷ್ಟು ಮಂದಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಾರೆ
 6. ಗೋವಾ ವೆಲ್ಹಾದಲ್ಲಿರುವ ಸೇಂಟ್ ಕೆಥೆಡ್ರಲ್ ಚರ್ಚ್ ಏಷ್ಯಾದಲ್ಲೇ ಅತ್ಯಂತ ದೊಡ್ಡ ಚರ್ಚ್ ಆಗಿದೆ. ಇದನ್ನು 1617ರಲ್ಲಿ ನಿರ್ಮಸಲಾಯಿತು.
 7. ಬಾಲ್ ಪಾಯಿಂಟ್ ಪನ್ನನ್ನು ಮೊದಲ ಬಾರಿಗೆ ಅಮೆರಿಕದಲ್ಲಿ 1945ರ ಅಕ್ಟೋಬರ್‍ನಲ್ಲಿ ಪರಿಚಯಿಸಲಾಯಿತು. ನ್ಯೂ ಯಾಕ್ರ್ಸ್ ಗಿಂಬ್ಲೆ ಅವರು ಡಿಪಾರ್ಟ್ ಸ್ಟೋರ್‍ನಲ್ಲಿ ಮಾರಾಟಕ್ಕಿಟ್ಟಿದ್ದ, 12.50 ಡಾಲರ್ ಮುಖಬೆಲೆಯ 10,000 ಪೆನ್ನುಗಳು ಮೊದಲ ದಿನವೇ ಮಾರಾಟವಾಯಿತು.
 8. ಸನ್ ಗ್ಲಾಸ್ ಅನ್ನು ಮೊದಲ ಬಾರಿಗೆ ವಿನ್ಯಾಸಗೊಳಿಸಿದವರು ಜೇಮ್ಸ್ ಅಯಿಸ್‍ಕಾಫ್. ಆದರೆ 1930ರ ವರೆಗೆ ಇದು ಜನಪ್ರಿಯಗೊಳ್ಳಲಿಲ್ಲ.
 9. ಶ್ವೇತಭವನನಿಂದ ಮೊದಲ ಟೆಲಿಫೋನ್ ಕರೆಯನ್ನು ರುದರ್‍ಫೋರ್ಡ್ ಹೇಸ್ ಅವರು ಅಲೆಗ್ಸಾಂಡ್ ಗ್ರಹಾಂಬೆಲ್‍ಗೆ ಮಾಡಿದರು.
 10. ಪ್ರತಿ ವರ್ಷ ಸ್ವೀಡನ್ನಿನ ವಸಲೊಪ್ಪೆಟ್‍ನಲ್ಲಿ ಕ್ರಾಸ್ ಕಂಟ್ರಿ ಓಟದಲ್ಲಿ 14 ಸಾವಿರ ಜನರು ಭಾಗವಹಿಸುತ್ತಾರೆ.
 11. ಓಲ್ಡ್ ಇಂಗ್ಲಿಷ್ ಮಾಸ್ಟಿಫ್ ಅತ್ಯಂತ ದೊಡ್ಡ ನಾಯಿಯಾಗಿದೆ. ಅದು 343 ಪೌಂಡ್ ತೂಕವನ್ನು ಹೊಂದಿದ್ದು, ಅದರ ಮೂಗಿನಿಂದ ಬಾಲದವರೆಗೆ ಒಟ್ಟು 8ಅಡಿ 3ಇಂಚು ಉದ್ದವಾಗಿರುತ್ತದೆ.
 12. ಹಕ್ಕಿಗಳು ತಮ್ಮ ಗೂಡಿನಲ್ಲಿ ಮಲಗಿ ನಿದ್ರಿಸುವುದಿಲ್ಲ. ಆದರೆ ಆಗಾಗ ಅವು ಅದರಲ್ಲಿ ವಿಶ್ರಾಂತಿಯನ್ನು ಪಡೆಯುತ್ತವೆ.
 13. ಜರ್ಮನಿಯ ಕಾರ್ಲ್ ಬೆಂನ್ಜ್ 1885ರಲ್ಲಿ ಮೊದಲ ಬಾರಿಗೆ ಗ್ಯಾಸ್‍ನಿಂದ ಚಲಿಸುವ ಕಾರನ್ನು ವಿನ್ಯಾಸಗೊಳಿಸಿದರು. ಅದರ ಹಕ್ಕುಸ್ವಾಮ್ಯವನ್ನು 1886ರ ಜನವರಿ 29ರಂದು ಪಡೆದರು. ಅದು ಮೂರು ಚಕ್ರಗಳನ್ನು ಹೊಂದಿತ್ತು. ಅನಂತರ 1891ರಲ್ಲಿ ನಾಲ್ಕು ಚಕ್ರದ ಕಾರನ್ನು ನಿರ್ಮಿಸಿದರು.
 14. ಗೋರಿಲ್ಲಾಗಳು ದಿನವೊಂದಕ್ಕೆ 14 ಗಂಟೆಗಳ ಕಾಲ ನಿದ್ರಿಸುತ್ತವೆ.
 15. ಪ್ರಪಂಚದಲ್ಲಿ ಸುಮಾರು 2,00,000 ಜಾತಿಯ ಹೂವುಗಳಿವೆ.
 16. ಗ್ರೇ ಹುಡ್ ನಾಯಿಯು ಗಂಟೆಗೆ 42 ಮೆಲಿ ದೂರ ಓಡಬಲ್ಲದು.
 17. ಬೋಯಿಂಗ್ 767 ವಿಮಾನವನ್ನು 3,100,000 ಬಿಡಿಭಾಗಗಳಿಂದ ತಯಾರಿಸಲಾಗಿದೆ.
 18. ಶಾರ್ಕ್ ಮೀನುಗಳು 2.5 ಮೈಲಿ ದೂರದಿಂದಲೇ ಒಂದು ಬಿಂದು ರಕ್ತ ಚೆಲ್ಲಿದ್ದರೂ ಅದನ್ನು ಗ್ರಹಿಸಬಲ್ಲವು
 19. ಅಂಟಾರ್ಟಿಕಾಕ್ಕೆ ದೂರವಾಣಿ ಮಾಡಬೇಕಾದರೆ ಅಂತಾರಾಷ್ಟ್ರೀಯ ಟೆಲಿಫೋನ್ ಕೋಡ್ 672 ನ್ನು ಡಯಲ್ ಮಾಡಬೇಕು.
 20. ಬಿಳಿ ಬಣ್ಣದೊಂದಿಗೆ ಕಪ್ಪು ಪಟ್ಟೆ ಝೀಬ್ರಾದ ಮೆಮೇಲೆ ಇರುತ್ತದೆ.
 21. ನ್ಯೂಯಾರ್ಕ್ ಮಹಾನಗರದ ವ್ಯಾಪ್ತಿಯಲ್ಲಿ ಒಂದು ದಶಲಕ್ಷ ನಾಯಿಗಳು ಮತ್ತು 5,00,000 ಬೆಕ್ಕುಗಳು ವಾಸಿಸುತ್ತಿವೆ.
 22. ನೆದರ್‍ಲ್ಯಾಂಡಿನಲ್ಲಿ 1963ರಲ್ಲಿ ಆಡಿಯೋ ಕ್ಯಾಸೆಟ್‍ಗಳನ್ನು ಮೊದಲ ಬಾರಿಗೆ ಕಂಡುಹಿಡಿಯಲಾಯಿತು.
 23. ಕಾಮಿಕ್ ಸ್ಕ್ರಿಪ್ಟ್ಸ್ ಗಳಲ್ಲಿ ಎಡಬದಿಯ ವ್ಯಕ್ತಿಯು ಮೊದಲು ಮಾತನಾಡುತ್ತಾನೆ.
 24. ಅಮೆರಿಕದ ಪಿಲಡೆಲ್ಪಿಯಾದಲ್ಲಿ 1859ರಲ್ಲಿ ಮೊದಲ ಬಾರಿಗೆ ಮಗಾಲಯವನ್ನು ತೆರೆಯಲಾಯಿತು. ಈಗ ಅಮೆರಿಕದಲ್ಲಿ ಒಟ್ಟು 200 ಮಗಾಲಯಗಳಿವೆ.
 25. ಭಾರತೀಯ ರೈಲ್ವೆಯಲ್ಲಿ 1.65 ದಶಲಕ್ಷ ಜನರು ಕೆಲಸ ಮಾಡುತ್ತಾರೆ. ದೇಶದಲ್ಲಿ ಪ್ರತಿದಿನ 11ಸಾವಿರ ರೈಲುಗಳು ಸಂಚರಿಸುತ್ತವೆ. ಅದರಲ್ಲಿ 7ಸಾವಿರ ಪ್ಯಾಸೆಂಜರ್ ರೈಲುಗಳೂ ಸೇರಿವೆ. ರೈಲ್ವೆಯು ಭಾರತದ ಹೆಚ್ಚಿನ ಎಲ್ಲ ಪ್ರದೇಶಗಳಲ್ಲಿವೆ. ಆದರೆ ಗುಡ್ಡಗಾಡು ಪ್ರದೇಶಗಳಾದ ಸಿಕ್ಕಿಂ, ಲಡಾಕ್, ಉತ್ತರಾಂಚಲ ಮತ್ತು ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಇನ್ನೂ ರೈಲು ತಲುಪಲು ಸಾಧ್ಯವಾಗಿಲ್ಲ.
 26. ಆರು ಸಾವಿರ ವರ್ಷಗಳ ಹಿಂದೆ ಸಿಂಧೂ ನದಿಯಲ್ಲಿ ನೌಕಾಯಾನವು ಆರಂಭವಾಯಿತು.
 27. ವಿಶ್ವದಲ್ಲಿ ಸಾವಿರಾರು ಬಗೆಯ ಚಿಟ್ಟೆಗಳಿವೆ. ಅದರಲ್ಲಿ ಕೆಲವು ಆರು ಇಂಚು ಉದ್ದದ ಚಿಟ್ಟೆ ಚಿಕ್ಕದಾಗಿರುತ್ತವೆ. ಉಳಿದವು 8ರಿಂದ 10 ಇಂಚಿನಷ್ಟು ದೊಡ್ಡ ಗಾತ್ರದ ರೆಕ್ಕೆಗಳನ್ನು ಹೊಂದಿರುತ್ತದೆ.
 28. ಲಾತೂರಿನಲ್ಲಿ 1993ರಲ್ಲಿ ನಡೆದ ಭೂಕಂಪದಲ್ಲಿ ಹನ್ನೊಂದು ಸಾವಿರದಷ್ಟು ಜನರು ಸಾವನ್ನಪ್ಪಿದರು.
 29. ಕೈಬೆರಳುಗಳಲ್ಲಿನ ಹೆಬ್ಬಟ್ಟು ಬೆರಳಿನ ಉಗುರು ಅತ್ಯಂತ ನಿಧಾನವಾಗಿ ಬೆಳೆಯುತ್ತದೆ ಮತ್ತು ಮಧ್ಯದ ಬೆರಳಿನ ಉಗುರು ಅತ್ಯಂತ ವೇಗವಾಗಿ ಬೆಳೆಯುತ್ತದೆ.
 30. ಡೊನ್ನಾ ಗ್ರಿಫಿತ್ ಅವರು ಅತಿ ಸುದೀರ್ಘ ಕಾಲ ಸೀನನ್ನು ಸೀನಿದ ದಾಖಲೆ ದಾಖಲೆ ಇದೆ. ಅವರು 1981ರ ಜನವರಿ 13ರಂದು ಆರಂಭ ಮಾಡಿ 1983ರ ಸೆಪ್ಟೆಂಬರ್ 16ರ ವರೆಗೆ ಸೀನಿದರು. ಅವರು ಒಟ್ಟು 978 ದಿನಗಳ ನಂತರ ಸೀನುವುದನ್ನು ನಿಲ್ಲಿಸಿದ್ದರು.
 31. ವಿಕ್ಟೋರಿಯಾಗಾಗಿ ತಯಾರಿಸಿದ ರೆಡ್ ಹೋಲ್ಟ್ ಫ್ಯಾಟಸಿ ಬ್ರಾ ಅತ್ಯಂತ ದುಬಾರಿ ಬ್ರಾವಾಗಿದೆ. ಇದರ ಬೆಲೆ 15 ದಶಲಕ್ಷ ಪೌಂಡ್‍ಗಳಾಗಿದೆ. ಇದನ್ನು ಅಮೂಲ್ಯವಾದ 1,300 ಕಲ್ಲುಗಳನ್ನು ಬಳಸುವ ಮೂಲಕ ಸಿದ್ದಪಡಿಸಲಾಗಿದೆ.
 32. ಪರ್‍ಫ್ಯೂಮ್ 6 ಇದು ವಿಶ್ವದಲ್ಲೇ ಅತ್ಯಂತ ದುಬಾರಿಯಾದ ಸುಗಂಧ ದ್ರವ್ಯವಾಗಿದೆ. ಇದನ್ನು ಅರ್ಥರ್ ಬನಹಾಮ್ ಎಂಬುವವರು ತಯಾರಿಸಿದರು. ಇದು ನಾಲ್ಕು ಇಂಚು ಉದ್ದದ ಬಾಟಲಿಯಲ್ಲಿದ್ದು ಅದನ್ನು ವಜ್ರ ಮತ್ತು 71,380 ಪೌಂಡ್ ಬೆಲೆಯ 24 ಕ್ಯಾರೆಟ್ ಚಿನ್ನದಿಂದ ಮುಚ್ಚಲಾಗಿದೆ.
 33. ಆಫ್ರಿಕಾ ಖಂಡವು ವಿಶ್ವದಲ್ಲೇ ಅತಿ ಹೆಚ್ಚು ಭೌಗೋಳಿಕ ಪ್ರದೇಶವನ್ನು ಹೊಂದಿದೆ. ಇಲ್ಲಿ ಪ್ರಪಂಚದಲ್ಲಿನ ಶೇ. 23ರಷ್ಟು ಭೌಗೋಳಿಕ ಪ್ರದೇಶವನ್ನು ಹೊಂದಿದೆ.
 34. ವಿಶ್ವದ ಅತಿದೊಡ್ಡ ಪುಸ್ತಕ ”ಭೂತಾನ್: ಎ ವಿಸುವಲ್ ಒಡಿಸ್ಸಿ’ ಷಿಕಾಗೋ ಸಾರ್ವಜನಿಕ ಗ್ರಂಥಾಲಯದಲ್ಲಿದೆ. ಇದು 5 ಅಡಿ ಉದ್ದ ಮತ್ತು 7 ಅಡಿ ಅಗಲವನ್ನು ಹೊಂದಿದ್ದು, 133 ಪೌಂಡ್ ತೂಕವನ್ನು ಹೊಂದಿದೆ.
 35. ಆಸ್ಟ್ರಿಚ್ ಪಕ್ಷಿಯು 75 ವರ್ಷದ ವರೆಗೆ ಬದುಕುತ್ತದೆ ಹಾಗೂ ಸುಮಾರು 50 ವರ್ಷದವರೆಗೆ ಮರಿಹಾಕುತ್ತದೆ.
 36. ಒಬ್ಬ ವ್ಯಕ್ತಿಯು ಅತ್ಯಂತ ವೇಗವಾಗಿ ಓಡಿದರೆ ಗಂಟೆಗೆ 30 ಕಿ.ಮೀ (18 ಮೈಲಿ) ದೂರವನ್ನು ಕ್ರಮಿಸಬಲ್ಲ.
 37. ಕ್ರಿ.ಪೂ.2737ರಲ್ಲಿ ಚೀನಾದ ರಾಜ ಟೀಪುಡಿಯನ್ನು ಕಂಡು ಹಿಡಿದ. ಅಕಸ್ಮಾತ್ತಾಗಿ ಕುದಿಯುತ್ತಿರುವ ನೀರಿದ್ದ ಪಾತ್ರೆಗೆ ಟೀ ಎಲೆಗಳು ಬಿದ್ದ ಪರಿಣಾಮ ಟೀಯ ಸೃಷ್ಟಿಯಾಯಿತು. ಟೀ ಬ್ಯಾಗ್ ಅನ್ನು 1908ರಲ್ಲಿ ತಾಮಸ್ ಸುಲ್ಲಿವಾನ್ ನ್ಯೂಯಾರ್ಕ್‍ನಲ್ಲಿ ಪರಿಚಯಿಸಿದ.
 38. ಅಮೆಜಾನ್ ನದಿಪಾತ್ರದಲ್ಲಿ ಪ್ರಪಂಚದಲ್ಲಿರುವ ಶೇ.40ರಷ್ಟು ವಿವಿವಧ ಶುದ್ಧ ನೀರಿನಲ್ಲಿ ವಾಸಿಸುವ ಮೀನುಗಳು ಕಂಡು ಬರುತ್ತವೆ.
 39. ಪ್ರಪಂಚದಲ್ಲಿರುವ 8,600 ಪ್ರಭೇದದ ಪಕ್ಷಿಗಳಲ್ಲಿ ಅರ್ಧದಷ್ಟು ಪ್ರಭೇದವು ಅಮೆಜಾನ್ ನದಿ ಪಾತ್ರದ ಪ್ರದೇಶದಲ್ಲಿ ಕಂಡುಬರುತ್ತವೆ.
 40. ಆಸ್ಟ್ರಿ ಚ್ ಸ್ಟ್ರುತಿಯೊ ಕಾಮೆಲುಸ್ ಅತಿ ವೇಗವಾಗಿ ಓಡಬಲ್ಲ ಪಕ್ಷಿ. ಇದು ಗಂಟೆಗೆ 72 ಕಿ.ಮಿ ದೂರವನ್ನು ಕ್ರಮಿಸುತ್ತದೆ.
 41. ಭಾರತವನ್ನಾಳಿದ ಮೊಘಲ್ ಮೊದಲ ಆರು ಸಾಮ್ರಾಟರು ಪ್ರಥಮ ನೂರು ವರ್ಷ ವಂಶಪಾರಂಪರ್ಯವಾಗಿ ತಂದೆಯ ನಂತರ ಮಗನಂತೆ ಆಳಿದರು. ಇವರ ಆಡಳಿತದ ಅವಧಿ 1526ರಿಂದ 1707 ಆಗಿದೆ.
 42. ಮಲೇರಿಯಾ ಅತ್ಯಂತ ತೊಂದರೆಗೊಳಪಡಿಸುವ ರೋಗವಾಗಿದ್ದು ಅದಕ್ಕೆ ಪ್ರತಿ ವರ್ಷ 1.5 ದಶಲಕ್ಷ ಜನ ಬಲಿಯಾಗುತ್ತಾರೆ.
 43. ಹಸು ತನ್ನ ಜೀವಿತಾವಯಲ್ಲಿ 200,000 ಗ್ಲಾಸ್‍ಗಳಷ್ಟು ಹಾಲನ್ನು ನೀಡುತ್ತದೆ.
 44. ಊಸರವಳ್ಳಿಯ ನಾಲಗೆಯು ಅದರ ದೇಹಕ್ಕಿಂತ ಎರಡು ಪಟ್ಟು ದೊಡ್ಡದಾಗಿದೆ.
 45. ವೇಗವಾಗಿ ನೀರಿನಲ್ಲಿ ಈಜಿದರೆ ಒಬ್ಬ ಮನುಷ್ಯನು ಗಂಟೆಗೆ 6 ಮೆಲಿ ದೂರವನ್ನು ಕ್ರಮಿಸಲು ಸಾಧ್ಯ.
 46. ಜಿರಾಫೆ 21 ಇಂಚಿನ ನಾಲಗೆಯನ್ನು ಬಳಸಿ ಕಿವಿಯನ್ನು ಶುಚಿಗೊಳಿಸುತ್ತದೆ.
 47. ಪ್ರಾಣಿಗಳಲ್ಲಿ ಆನೆಗೆ ಮಾತ್ರ ಹಾರಲು(ನೆಗೆಯಲು) ಸಾಧ್ಯವಾಗುವುದಿಲ್ಲ
 48. ಬ್ರಿಟಿಷ್ ಸಂಗ್ರಹಾಲಯದಲ್ಲಿರುವ ಅಟ್ಲಾಸ್ ಪುಸ್ತಕವು ವಿಶ್ವದಲ್ಲೇ ಅತ್ಯಂತ ದೊಡ್ಡ ಪುಸ್ತಕವಾಗಿದೆ. ಇದು 5 ಅಡಿ ಎತ್ತರ ಮತ್ತು 3 ಅಡಿ 6ಇಂಚು ಅಗಲವನ್ನು ಹೊಂದಿದೆ.
 49. ಭಾರತೀಯ ರೆಲ್ವೆ ಇಲಾಖೆಯು ಪ್ರಪಂಚದಲ್ಲೇ ಅತಿ ಹೆಚ್ಚು ನೌಕರರನ್ನು ಹೊಂದಿದ್ದು, ಅದರಲ್ಲಿ ದಶಲಕ್ಷಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ.
 50. ಭಾರತವು ಪ್ರಪಂಚಲ್ಲೇ ಅತಿ ಹೆಚ್ಚು ಅಂಚೆ ಕಚೇರಿಗಳನ್ನು ಹೊಂದಿರುವ ದೇಶ.