ವರ್ಡ್‌ಪ್ರೆಸ್‌ ವೆಬ್‌ಸೈಟ್‌ ಸಂಪೂರ್ಣ ಕ್ಲೀನ್‌ ಮಾಡಿ ರಿಸೆಟ್‌ ಮಾಡುವುದು ಹೇಗೆ?

ವರ್ಡ್‌ಪ್ರೆಸ್‌ ವೆಬ್‌ಸೈಟ್ ನಲ್ಲಿ ಏನೋ ಪ್ರಯೋಗ ಮಾಡಲು ಹೋಗುವಿರಿ. ಯಾವೆಲ್ಲ ಥೀಮ್‌, ಪ್ಲಗಿನ್‌ ಇನ್‌ಸ್ಟಾಲ್‌ ಮಾಡಿರುವಿರಿ. ಹಲವು ಪುಟಗಳು, ಸ್ಯಾಂಪಲ್‌ ಪೋಸ್ಟ್‌ಗಳನ್ನು ರಚಿಸುವಿರಿ. ಯಾಕೋ ಇದು ಸರಿಬರುತ್ತಿಲ್ಲ, ಮತ್ತೆ ಹೊಸದಾಗಿ ವರ್ಡ್‌ಪ್ರೆಸ್‌ ಇನ್‌ಸ್ಟಾಲ್‌ ಮಾಡಿದಂತೆ ನಿಮ್ಮ ವರ್ಡ್‌ಪ್ರೆಸ್‌ ವೆಬ್‌ಸೈಟ್‌ ಇರಬೇಕೆಂದು ಬಯಸುವಿರಿ. ಇದಕ್ಕಾಗಿ ಏನು ಮಾಡಬೇಕು ಎಂಬ ಸರಳ ಟಿಪ್ಸ್‌ ಅನ್ನು ಇವತ್ತು ವರ್ಡ್‌ಪ್ರೆಸ್‌ ಗೈಡ್‌ ಮೂಲಕ ಇಲ್ಲಿ ನೀಡುತ್ತಿದ್ದೇನೆ.

ಇದರಿಂದ ಯಾರಿಗೆ ಅನುಕೂಲ?

  • ವಿವಿಧ ಗ್ರಾಹಕರಿಗೆ ವರ್ಡ್‌ಪ್ರೆಸ್‌ ಸೈಟ್‌ಗಳನ್ನು ರಚಿಸಿಕೊಡುವವರು ಡೆಮೊ ವೆಬ್‌ಸೈಟ್‌ ನಿರ್ಮಿಸಿರಬಹುದು. ಮತ್ತೆ ಹೊಸ ಗ್ರಾಹಕರಿಗೆ ತಾಣ ನಿರ್ಮಿಸಿಕೊಡಲು ರಿಸೆಟ್‌ ಮಾಡಲು ಇದು ಸುಲಭ ವಿಧಾನವಾಗಿರಲಿದೆ.
  • ವರ್ಡ್‌ಪ್ರೆಸ್‌ಗೆ ಹೊಸದಾಗಿ ಪ್ರವೇಶಿಸುವವರು ಏನೋ ತಪ್ಪು ಮಾಡಿದ ನಂತರ ವೆಬ್‌ಸೈಟ್‌ ತೊಂದರೆಗೆ ಒಳಗಾದಗ ರಿಸೆಟ್‌ ಮಾಡಲು ಇದರಿಂದ ಸಾಧ್ಯ.
  • ವರ್ಡ್‌ಪ್ರೆಸ್‌ ನಲ್ಲಿ ಕಲಿಯಲು ಬಯಸುವವರು ಈ ಟೂಲ್‌ ಬಳಸಬಹುದು.

ಯಾವ ರೀತಿ ಮಾಡುವುದು ಅಗತ್ಯವಿಲ್ಲ

ನೀವು ವರ್ಡ್‌ಪ್ರೆಸ್‌ ವೆಬ್‌ಸೈಟ್‌ ಅನ್ನು ಸಂಪೂರ್ಣ ಹೊಸದಾಗಿ ಮಾಡಲು ಬಯಸಿದರೆ

  • ಒಂದೊಂದಾಗಿ ಪ್ಲಗಿನ್‌ ಡಿ ಆಕ್ಟಿವೇಟ್‌ ಮಾಡಬೇಕಿಲ್ಲ. ಡಿ ಆಕ್ಟಿವೇಟ್‌ ಮಾಡಿದ ಬಳಿಕ ಡಿಲೀಟ್‌ ಕೊಡಬೇಕಿಲ್ಲ.
  • ಇನ್‌ಸ್ಟಾಲ್‌ ಮಾಡಿದ ಥೀಮ್‌ಗಳನ್ನು ಒಂದೊಂದಾಗಿ ಅನ್‌ಇನ್ ಸ್ಟಾಲ್‌ ಮಾಡಬೇಕಿಲ್ಲ.
  • ನೀವು ರಚಿಸಿದ ಪುಟಗಳನ್ನು ಒಂದೊಂದಾಗಿ ಡಿಲೀಟ್‌ ಮಾಡುವ ಕಷ್ಟವಿಲ್ಲ. ಟ್ರ್ಯಾಷ್‌ನಲ್ಲಿರುವುದನ್ನು ಮತ್ತೆ ಡಿಲೀಟ್‌ ಮಾಡಬೇಕಿಲ್ಲ.
  • ನೀವು ಮಾಡಿರುವ ಪೋಸ್ಟ್‌ಗಳನ್ನು ಒಂದೊಂದಾಗಿ ಡಿಲೀಟ್‌ ಮಾಡಬೇಕಿಲ್ಲ.

ಎಲ್ಲಾದರೂ ಮತ್ತೆ ಆ ತಾಣ ಬೇಕಿದ್ದರೆ ಏನು ಮಾಡಬೇಕು?

ಒಮ್ಮೆ ರಿಸೆಟ್‌ ಮಾಡಿದ ಬಳಿಕ ವೆಬ್‌ಸೈಟ್‌ ಮತ್ತೆ ದೊರಕದು. ಹೀಗಾಗಿ ಮೊದಲೇ ಬ್ಯಾಕಪ್‌ ತೆಗೆದಿಟ್ಟುಕೊಳ್ಳಿ.

ವರ್ಡ್‌ಪ್ರೆಸ್‌ ವೆಬ್‌ಸೈಟ್‌ ರಿಸೆಟ್‌ ಮಾಡುವುದು ಹೇಗೆ?

ಇದು ತುಂಬಾ ಸರಳ. ಇದಕ್ಕಾಗಿ ನೀವು ವರ್ಡ್‌ಪ್ರೆಸ್‌ ರಿಸೆಟ್‌ ಪ್ಲಗಿನ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

ಈ ಪ್ಲಗಿನ್‌ ಆಕ್ಟಿವೇಟ್‌ ಮಾಡಿ.
ರಿಸೆಟ್‌ ಎಂದು ಬರೆದು ರಿಸೆಟ್‌ ಮಾಡಿ. ನಿಮ್ಮ ವರ್ಡ್‌ಪ್ರೆಸ್‌ ತಾಣವು ಹೊಸದಾಗಿ ಇನ್‌ಸ್ಟಾಲ್‌ ಮಾಡಿದಂತೆ ಆಗುತ್ತದೆ.

ನಿಮ್ಮ ಕನಸಿನ ವೆಬ್‌ಸೈಟ್‌ಗೆ ಸುಂದರ ಹೆಸರು (ಡೊಮೈನ್‌ ನೇಮ್)‌ ಖರೀದಿಸಲು ಕರ್ನಾಟಕದ ಡೊಮೈನ್‌ ಮತ್ತು ಹೋಸ್ಟಿಂಗ್‌ ತಾಣ ಸರ್ವರ್‌ ಹಗ್‌ಗೆ ಭೇಟಿ ನೀಡಿ. ಸರ್ವರ್‌ ಹಗ್‌ನಲ್ಲಿ ನಿಖರ ದರ ಇರುತ್ತದೆ. ಉಳಿದ ಕಂಪನಿಗಳಂತೆ ಮೊದಲ ವರ್ಷಕ್ಕೆ ಒಂದು ದರ ನೀಡಿ, ನವೀಕರಣ ಸಮಯದಲ್ಲಿ ಹಲವು ಪಟ್ಟು ಹೆಚ್ಚಿಸುವ ಮೋಸವಿರುವುದಿಲ್ಲ. ಬೇರೆ ವಿದೇಶ ಮೂಲದ ಕಂಪನಿಗಳು ನೀಡುವ ಆರಂಭದ ಆಫರ್‌ಗಳನ್ನು ನಂಬಿ ಮೋಸ ಹೋಗಬೇಡಿ.

Buy Domain and Hosting at Best rate at serverhug

Karnataka Best
Karnatakabest Website
error: Content is protected !!