ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಮುಂದೇನು? ಇಲ್ಲಿವೆ 80+ ಕರಿಯರ್ ಆಯ್ಕೆಗಳು

ನಿಮ್ಮ ಭವಿಷ್ಯ ಬದಲಿಸುವ ಉದ್ಯೋಗ ಮತ್ತು ಶಿಕ್ಷಣ ಕೈಪಿಡಿ
ನಿಮ್ಮ ಭವಿಷ್ಯ ಬದಲಿಸುವ ಉದ್ಯೋಗ ಮತ್ತು ಶಿಕ್ಷಣ ಕೈಪಿಡಿ

ಏನು ಓದಿದರೆ, ಯಾವ ಉದ್ಯೋಗ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದು? ಈಗಿನ ಬೇಡಿಕೆಯ ಉದ್ಯೋಗಗಳು ಯಾವುವು? ಇತ್ಯಾದಿ ಶಿಕ್ಷಣ-ಕರಿಯರ್ ಮಾಹಿತಿಯನ್ನು ಯುವಜನತೆಗೆ ಒದಗಿಸುವ ಸಲುವಾಗಿ ಈ ಡಿಜಿಟಲ್‌ ಕೈಪಿಡಿಯನ್ನು ರಚಿಸಲಾಗಿದೆ. ವಿವಿಧ ಹುದ್ದೆಗಳು, ಶೈಕ್ಷಣಿಕ ಆಯ್ಕೆಗಳ ಕುರಿತು ಅಧ್ಯಯನ ನಡೆಸಿ ಮಾಹಿತಿ ನೀಡಲಾಗಿದೆ. ನಿಮ್ಮ ಕರಿಯರ್ ರೂಪಿಸಿಕೊಳ್ಳಲು ವೃತಿಪರ ಸಹಾಯದ ಅಗತ್ಯಬಿದ್ದರೆ ಇಂತಹ ಸೇವೆಯನ್ನು ಒದಗಿಸುವ ಯೋಗ್ಯ, ತಜ್ಞ ವ್ಯಕ್ತಿಗಳಿಂದ ಪಡೆಯಬೇಕು.

ಭವಿಷ್ಯ ಬದಲಾಯಿಸಬಹುದು!

ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿದ ಪರಿಚಯದ ವಿದ್ಯಾರ್ಥಿಗಳು ಪ್ರತಿವರ್ಷ ಕರೆ ಮಾಡಿ “ಯಾವ ಕೋರ್ಸ್ ಮಾಡಬೇಕು”, “ಯಾವುದನ್ನು ಓದಿದರೆ ಯಾವ ಉದ್ಯೋಗ ದೊರಕುತ್ತದೆ?”. “ಜಿಲ್ಲಾಧಿಕಾರಿಯಾಗುವುದು ಹೇಗೆ?”, “ಹಡಗಿನ ಪೈಲೆಟ್ ಆಗುವುದು ಹೇಗೆ?”, “ವಿಮಾನದ ಪೈಲೆಟ್ ಆಗಬೇಕಾದರೆ ಏನು ಓದಬೇಕು”, “ಪಶುವೈದ್ಯರಾಗುವುದು ಹೇಗೆ?”, ಹೀಗೆ ಹಲವು ಉದ್ಯೋಗಗಳ ಮಾಹಿತಿಯನ್ನು ಪಡೆಯುತ್ತಿದ್ದರು. ಮುಂದೆ ಏನು ಓದಬೇಕು? ಯಾವುದನ್ನು ಓದಿದರೆ ಯಾವ ಉದ್ಯೋಗ ದೊರಕುತ್ತದೆ? ಯಾವ ಉದ್ಯೋಗ ಪಡೆಯಲು ಯಾವ ರೀತಿಯ ಕೌಶಲ ಪಡೆಯಬೇಕು? ಎಂಬ ಪ್ರಶ್ನೆ ಈಗಿನ ವಿದ್ಯಾರ್ಥಿಗಳದ್ದು ಮತ್ತು ಅವರ ಹೆತ್ತವರದ್ದು.

ಮುಖ್ಯವಾಗಿ ಗ್ರಾಮೀಣ ಜನರಿಗೆ ಶಿಕ್ಷಣ-ಕರಿಯರ್ ಕುರಿತಾಗಿ ಸರಿಯಾದ ಮಾಹಿತಿ ದೊರಕಿರುವುದಿಲ್ಲ. ಈಗಾಗಲೇ ಗೊತ್ತಿರುವ ಒಂದಿಷ್ಟು ಉದ್ಯೋಗಗಳ ಹಿಂದೆಯೇ ಸಾಗುತ್ತಾರೆ. ಡಾಕ್ಟರ್, ಎಂಜಿನಿಯರ್, ಟೀಚರ್, ನರ್ಸ್.. ಹೀಗೆ ಕೆಲವೇ ಉದ್ಯೋಗಗಳು ಬಹುತೇಕರ ಆಯ್ಕೆಯಾಗುತ್ತದೆ. ಕಾಲೇಜುಗಳು ತಮ್ಮಲ್ಲಿರುವ ಕೋರ್ಸ್‍ಗಳಿಗೆ ವಿಶೇಷ ಪ್ರಚಾರ ನೀಡಿ “ಇದನ್ನು” ಕಲಿತರೆ ಉದ್ಯೋಗ ಖಾತ್ರಿ ಎಂಬ ಭ್ರಮೆಯನ್ನು ಸೃಷ್ಟಿಸುತ್ತವೆ. ಶಿಕ್ಷಣ ಮುಗಿಸಿ ಹೊರಗೆ ಬಂದ ನಂತರ “ಉದ್ಯೋಗ ದೊರಕದೆ ಇದ್ದಾಗ” ವಿದ್ಯಾರ್ಥಿಗಳಿಗೆ ನಿಜವಾದ ಕಷ್ಟವೇನೆಂದು ಗೊತ್ತಾಗುತ್ತದೆ.

ಹತ್ತು ವರ್ಷದ ಹಿಂದೆ ಪದವಿ ಬಳಿಕ ಮುಂದೇನೂ ಮಾಡಬೇಕೆಂದು ನಾನು ಯೋಚಿಸಿದ್ದೆ. ಆಸಕ್ತಿಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡೆ. ಈಗ ನನ್ನ ಭವಿಷ್ಯ ಬದಲಾಗಿದೆ. ಆದರೆ, ನನ್ನ ಜೊತೆ ಇದ್ದ ಬಹುತೇಕ ಸ್ನೇಹಿತರು ಇನ್ನೂ ಅತ್ಯುತ್ತಮ ಭವಿಷ್ಯ ರೂಪಿಸಿಕೊಂಡಿಲ್ಲ. ಅವರಿಗೆ ಆ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ದೊರಕಿದರೆ, “ಈ ರೀತಿಯ ಕೋರ್ಸ್ ಮಾಡಿ ಆ ಉದ್ಯೋಗ ಪಡೆಯಬಹುದು” ಎಂಬ ದಿಕ್ಕನ್ನು ತೋರಿಸಿದ್ದರೆ, “ಭವಿಷ್ಯ ಬದಲಾಗುತ್ತಿತ್ತು”.

ಈಗಲೂ ಸಾಕಷ್ಟು ವಿದ್ಯಾರ್ಥಿಗಳಿಗೆ ಯಾವ ಉದ್ಯೋಗ ಪಡೆಯಲು ಏನು ಓದಬೇಕು ಎಂಬ ಸ್ಪಷ್ಟತೆಯಿಲ್ಲ. ಕಲಾ ವಿಭಾಗ ಓದುತ್ತ, ನಾನು ಸೈಂಟಿಸ್ಟ್ ಆಗುತ್ತೇನೆ ಎನ್ನುತ್ತಾರೆ. ಪಿಯುಸಿಯಲ್ಲಿ ಸರಿಯಾಗಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳದೆ ಗಗನಯಾನಿಯಾಗುವ ಕನಸು ಕಾಣುತ್ತಾರೆ. ಇಂತಹ ಸಂದಿಗ್ಧತೆ, ಗೊಂದಲ ತಪ್ಪಿಸಲು ಕರ್ನಾಟಕ ಬೆಸ್ಟ್‌ ಪ್ರಸ್ತುತ ಪಡಿಸುವ “ಭವಿಷ್ಯ ಬದಲಿಸಬಹುದು” ಕೈಪಿಡಿ ನೆರವಾಗಬಹುದು ಎಂಬ ನಿರೀಕ್ಷೆ ನನ್ನದು.

ನೀವು ಎಸ್‍ಎಸ್‍ಎಲ್‍ಸಿ ಅಥವಾ ಪಿಯುಸಿ ಅಥವಾ ಕಾಲೇಜು ಮುಗಿಸಿದ ಬಳಿಕ ಮುಂದೆ ಏನಾಗಬೇಕು ಎಂಬ ಸ್ಪಷ್ಟತೆ ಹೊಂದಿರಬಹುದು ಅಥವಾ ಹೊಂದಿಲ್ಲದೆಯೂ ಇರಬಹುದು. ನನ್ನಿಂದ ಇಷ್ಟೇ ಸಾಧ್ಯ ಎಂದು ಸಣ್ಣ ಕನಸಿಗೆ ಜೋತುಬೀಳಬಹುದು. ದೊಡ್ಡ ಕನಸನ್ನು ಚಿವುಟಿಬಿಡಬಹುದು. ಆದರೆ, ನಿಮಗೆ ಗೊತ್ತೆ? ನೀವು ದೊಡ್ಡ ಕನಸು ಕಾಣಬಹುದು ಮತ್ತು ಅದನ್ನು ಈಡೇರಿಸಿಕೊಳ್ಳಬಹುದು. ಹಾಗಂತ, ಇದು ನಿಮ್ಮ ಭವಿಷ್ಯ ಬದಲಾವಣೆ ಹೇಗೆ ಎಂದು ಹೇಳುವ “ವ್ಯಕ್ತಿತ್ವ ವಿಕಸನ” ಪುಸ್ತಕವಲ್ಲ. ಮುಂದೆ ಏನು ಮಾಡಬಹುದು ಅಥವಾ ಮುಂದೆ ಏನಾಗಬೇಕು ಎಂದು ಅವಕಾಶಗಳ ಹುಡುಕಾಟದಲ್ಲಿರುವವರಿಗೆ ಇರುವ ನೂರಾರು ಆಯ್ಕೆಗಳನ್ನು ತೋರಿಸುವ ಕೈಪಿಡಿ ಅಥವಾ ದಿಕ್ಸೂಚಿ.

ಈಗಿನ ಉದ್ಯೋಗ ಜಗತ್ತು ಹಿಂದಿನಂತಿಲ್ಲ. ಕೆಲವು ವರ್ಷಗಳ ಹಿಂದೆ ಹೆಸರೇ ಕೇಳಿರದ ಹೊಸ ಬಗೆಯ ಉದ್ಯೋಗಗಳು, ಅದಕ್ಕೆ ಸಂಬಂಧಪಟ್ಟ ಕೋರ್ಸ್‍ಗಳು ಬಂದಿವೆ. ಇದರೊಂದಿಗೆ ಕೆಲವು ಉದ್ಯೋಗಗಳು ನೇಪತ್ಯಕ್ಕೆ ಸರಿದಿವೆ. ಕಾಲ ಎಷ್ಟೇ ಬದಲಾದರೂ ಕೆಲವು ಉದ್ಯೋಗಗಳು ಗಟ್ಟಿಯಾಗಿ ಉಳಿದಿವೆ. ಅಂತಹ ಬೇಡಿಕೆಯ ಕೆಲವು ಉದ್ಯೋಗಗಳನ್ನು ಹೆಕ್ಕಿ ಆ ಉದ್ಯೋಗ ಪಡೆಯಲು ಏನು ಓದಬೇಕು, ಯಾವ ರೀತಿ ಮುಂದುವರೆಯಬೇಕು ಎಂಬ ಮಾಹಿತಿಯನ್ನು ಪೋಣಿಸುವ ಕೆಲಸವನ್ನು ಇಲ್ಲಿ ಮಾಡಲಾಗಿದೆ.

ಆಯಾ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಇತ್ತೀಚಿನ ಬದಲಾವಣೆಗಳ ಕುರಿತು ಆಯಾ ಕ್ಷೇತ್ರದ ಪರಿಣತರಿಂದ ಮಾಹಿತಿ ಪಡೆಯಲಾಗಿದೆ. ಇಂಟರ್‍ನೆಟ್‍ನಲ್ಲಿ ಲಭ್ಯವಿರುವ ಮಾಹಿತಿಗಳನ್ನು ಪಡೆದು, ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ವಿಷಯ ವಿಸ್ತಾರ ಮಾಡಿದ್ದೇನೆ. ವಿವಿಧ ಕಾಲೇಜುಗಳ ಕೋರ್ಸ್‍ಗಳ ಪಠ್ಯಕ್ರಮವನ್ನು ಪರಿಶೀಲಿಸಲಾಗಿದೆ. ನಾನು ವಿಜಯ ಕರ್ನಾಟಕ ಕಾಂಪಿಟೇಷನ್ ವಿಕೆ, ವಿಕೆ ಮಿನಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಉದ್ಯೋಗ, ಶಿಕ್ಷಣ ಕ್ಷೇತ್ರದ ಕುರಿತು ಗಳಿಸಿದ ಜ್ಞಾನವು ಈ ಪುಸ್ತಕ ರಚನೆಯ ಸಮಯದಲ್ಲಿ ಸಾಕಷ್ಟು ನೆರವಿಗೆ ಬಂದಿದೆ. ಕೆಲವೊಂದು ಉದ್ಯೋಗಗಳ ಕುರಿತು ಹೆಚ್ಚು ವಿವರಣಾತ್ಮಕವಾಗಿ, ಕೆಲವೊಂದನ್ನು ಸಂಕ್ಷಿಪ್ತವಾಗಿ ನಿಮ್ಮ ಮುಂದಿಡಲಾಗಿದೆ. ಇಲ್ಲಿ ನಿಮಗೆ ಬೇಕಾದ ಯಾವುದಾದರೂ ಇತ್ತೀಚಿನ ಉದ್ಯೋಗದ ಮಾಹಿತಿ ದೊರಕದೆಯೂ ಇರಬಹುದು. ಏನಾದರೂ ಹೆಚ್ಚಿನ ವಿವರ ಬೇಕಿದ್ದರೆ ಈ ಕೆಳಗೆ ನೀಡಲಾದ ಕಾಮೆಂಟ್‌ ಬಾಕ್ಸ್‌ನಲ್ಲಿ ತಿಳಿಸಿ.

ಸರಕಾರಿ ಉದ್ಯೋಗಗಳು, ಬ್ಯಾಂಕ್ ಉದ್ಯೋಗಗಳು ಸೇರಿದಂತೆ ವಿವಿಧ ಉದ್ಯೋಗಗಳ ಕುರಿತು ಮಾಹಿತಿ ನೀಡುವ ಸಾಕಷ್ಟು ಪುಸ್ತಕಗಳು ಬಂದಿವೆ. ಹೀಗಾಗಿ ಅಂತಹ ಮಾಹಿತಿಗಳನ್ನು ಕಡಿಮೆಗೊಳಿಸಿ ಇತ್ತೀಚಿನ ಉದ್ಯೋಗಗಳು ಮತ್ತು ಬೇಡಿಕೆಯಲ್ಲಿರುವ ಉದ್ಯೋಗಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ವಿದ್ಯಾರ್ಥಿಗಳು, ಉದ್ಯೋಗ ಹುಡುಕಾಟದಲ್ಲಿರುವ ಯುವಜನತೆಗೆ ಈ ಪುಸ್ತಕ ಉಪಯೋಗವಾಗಬಹುದು. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಈ ಪುಸ್ತಕ ಅಷ್ಟೇನೂ ಉಪಯೋಗವಾಗದು. ಆದರೆ, ಅವರು ಈ ಮಾಹಿತಿಯ ಲಿಂಕ್‌ ಅನ್ನು ತಮ್ಮ ಮಕ್ಕಳಿಗೆ, ತಮಗೆ ತಿಳಿದ ವಿದ್ಯಾರ್ಥಿಗಳಿಗೆ ಉಡುಗೊರೆಯಾಗಿ ನೀಡಬಹುದು.


ಪಿಯುಸಿ ಬಳಿಕ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಉಚಿತ ಕಲಿಕೆ

 “ಹುಟ್ಟು ದರಿದ್ರವಾಗಿದ್ದರೂ, ಸಾವು ಇತಿಹಾಸವಾಗಬೇಕು’’

ಅಬ್ದುಲ್ ಕಲಾಂ

ಶ್ರೀಮಂತರು ಮಾತ್ರವಲ್ಲದೆ ಬಡವರೂ ಇಸ್ರೊ ಸೇರುವ ಕನಸು ರೂಪಿಸಿಕೊಳ್ಳಬಹುದು. ಇಸ್ರೊ ಸೇರುವ ಕನಸಿರುವವರು ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯುತ್ತಮ ಅಂಕ ಪಡೆಯಿರಿ. ನಂತರ ನಮ್ಮ ಶಕ್ತಿ ಅನುಸಾರ ಸರಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಪಿಯುಸಿಗೆ ಸೇರಿರಿ. ನೆನಪಿಡಿ: ಪಿಯುಸಿಯಲ್ಲಿ ವಿಜ್ಞಾನವನ್ನು (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ಆಯ್ಕೆ ಮಾಡಿಕೊಳ್ಳಬೇಕು. ಸಿಬಿಎಸ್‍ಇ ಪಠ್ಯಕ್ರಮ ಓದಿದರೆ ಇನ್ನೂ ಉತ್ತಮ. ಪಿಯುಸಿ ಸಮಯದಲ್ಲಿ ಜೆಇಇ ಮೇನ್ಸ್ ಮತ್ತು ಅಡ್ವಾನ್ಸಡ್ ಪರೀಕ್ಷೆ ಬರೆಯಬೇಕು. ಅಡ್ವಾನ್ಸಡ್‍ನಲ್ಲಿ ಸಾಧ್ಯವಿರುವಷ್ಟು ಅತ್ಯುತ್ತಮ ರ್ಯಾಂಕ್ ಪಡೆಯಬೇಕು. ಪಿಯುಸಿಯಲ್ಲಿ ಶೇಕಡ 75ಕ್ಕಿಂತ ಹೆಚ್ಚು ಅಂಕ ಪಡೆಯಬೇಕು.

ಭಾರತದ ಬಾಹ್ಯಾಕಾಶ ಸಂಶೋಧನಾ ಇಲಾಖೆಯಡಿ ಬರುವ ಸ್ವಾಯುತ್ತ ವಿಶ್ವವಿದ್ಯಾಲಯವಾಗಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಆಂಡ್ ಟೆಕ್ನಾಲಜಿ(ಐಐಎಸ್‍ಟಿ)ಯು ಪ್ರತಿವರ್ಷ ಮೇ-ಜೂನ್ ನಡುವೆ ಅಂಡರ್ ಗ್ರಾಜುಯೇಟ್ ಪದವಿಗೆ ಅರ್ಜಿ ಆಹ್ವಾನಿಸುತ್ತದೆ. ಅದಕ್ಕೆ ನೀವು ಅರ್ಜಿ ಸಲ್ಲಿಸಬೇಕು. ಐಐಎಸ್‍ಟಿಯಲ್ಲಿ ವಿವಿಧ ಕೋರ್ಸ್‍ಗಳು ಲಭ್ಯ. ಏರೋಸ್ಪೇಸ್ ಎಂಜಿನಿಯರಿಂಗ್‍ನಲ್ಲಿ 4 ವರ್ಷದ ಬಿ.ಟೆಕ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‍ನಲ್ಲಿ 4 ವರ್ಷದ ಬಿ.ಟೆಕ್, 5 ವರ್ಷದ ಡ್ಯುಯೆಲ್ ಡಿಗ್ರಿ (ಬಿಟೆಕ್ ಮತ್ತು ಮಾಸ್ಟರ್ ಆಫ್ ಸೈನ್ಸ್/ಮಾಸ್ಟರ್ ಆಫ್ ಟೆಕ್ನಾಲಜಿ) ಪಡೆಯಬಹುದು.

ಐಐಎಸ್‍ಟಿ ಇರುವುದು ಕೇರಳದ ತಿರುವನಂತಪುರದಲ್ಲಿ. ಇದು ಐಸ್ಯಾಟ್(ಐಎಸ್‍ಎಟಿ) ಪರೀಕ್ಷೆ ನಡೆಸುತ್ತದೆ. ಇಲ್ಲಿ ಜೆಇಇಯಲ್ಲಿ ಉತ್ತಮ ಅಂಕ ಪಡೆದವರಿಗೆ ಸದಾ ಸ್ವಾಗತ ಇರುತ್ತದೆ. ಇಲ್ಲಿ ಎಲ್ಲವೂ ಉಚಿತ. ಟ್ಯೂಷನ್ ಫೀಸ್ ಇಲ್ಲ. ಹಾಸ್ಟೇಲ್ ಫೀಸ್ ಇಲ್ಲವೇ ಇಲ್ಲ. ಮೆಸ್ ಅಂತೂ ಸಂಪೂರ್ಣ ಉಚಿತ. ಪುಸ್ತಕ ಖರೀದಿಸೋಕೆ ಅಂತ ಈ ಸಂಸ್ಥೆಯೇ ನಿಮಗೆ ತಿಂಗಳಿಗೆ 3 ಸಾವಿರ ರೂಪಾಯಿ ಕೊಡುತ್ತದೆ. ನಿಮ್ಮೆಲ್ಲ ಖರ್ಚುವೆಚ್ಚವನ್ನು ಇಸ್ರೊ/ಡಿಒಎಸ್ ನೋಡಿಕೊಳ್ಳುತ್ತದೆ. ಹಾಗಾದರೆ, ಏನು ಕೊಡಬೇಕು ಎನ್ನುವಿರಾ? ಪ್ರತಿ ಸೆಮಿಸ್ಟರ್‍ನಲ್ಲೂ ಐಐಎಸ್‍ಟಿ ನಿಗದಿಪಡಿಸಿದಷ್ಟು ಅಂಕವನ್ನು ನೀವು ಪಡೆಯಲೇಬೇಕು. ಅಷ್ಟು ಅಂಕ ದೊರಕದೆ ಇದ್ದರೆ ನಿಮಗೆ ಮುಂದಿನ ಸೆಮಿಸ್ಟರ್‍ಗೆ ಸ್ಕಾಲರ್‍ಷಿಪ್ ದೊರಕುವುದಿಲ್ಲ. ನಿಮ್ಮ ಶುಲ್ಕವನ್ನು ನೀವೇ ತುಂಬಬೇಕು. ಉಚಿತದೊಂದಿಗೆ ಒಂದು ನಿಬಂದನೆಯೂ ಇದೆ. ನೀವು ಇಂತಿಷ್ಟು ವರ್ಷ ಇಸ್ರೊದಲ್ಲಿ ಕೆಲಸ ಮಾಡಬೇಕೆಂಬ ನಿಯಮವಿದೆ. ಎಲ್ಲಾದರೂ ಅಮೆರಿಕದ ನಾಸಾದಲ್ಲಿ ಕೆಲಸ ಸಿಗ್ತು ಅಂತ ಇಸ್ರೊದಲ್ಲಿ ಕೆಲಸ ಮಾಡದೆ ಹೋದರೆ ನೀವು ದಂಡ (10 ಲಕ್ಷಕ್ಕಿಂತ ಹೆಚ್ಚು ಇರಬಹುದು) ಪಾವತಿಸಬೇಕಾಗುತ್ತದೆ. ಬಿಟೆಕ್ ಪೂರ್ಣಗೊಂಡ ನಂತರ ಇಸ್ರೊದ ವಿವಿಧ ಕೇಂದ್ರಗಳಲ್ಲಿ ಕೆಲಸ ಮಾಡುವ ಅವಕಾಶ ದೊರಕುತ್ತದೆ. ನೀವು ಉತ್ತಮ ಅಂಕಪಡೆದಿದ್ದರೆ ಬೆಂಗಳೂರಿನಲ್ಲಿಯೂ ಕೆಲಸ ಪಡೆಯಬಹುದಾಗಿದೆ. ಕನಸು ಈಡೇರಿಸಿಕೊಳ್ಳುವ ಮೊದಲ ಹೆಜ್ಜೆಯಾಗಿ ಸಂಪೂರ್ಣ ಮಾಹಿತಿಯನ್ನು ಐಐಎಸ್‍ಟಿ ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು.

ಇಸ್ರೊ ಸೇರಲು ಬೇರೆ ಆಯ್ಕೆಗಳೂ ಇವೆ. ದೇಶದ ಯಾವುದೇ ಅಂಗೀಕೃತ ಶಿಕ್ಷಣ ಸಂಸ್ಥೆಯಲ್ಲಿ ನೀವು ಬಿಟೆಕ್/ಎಂಟೆಕ್/ಪಿಎಚ್.ಡಿ ಪಡೆದರೂ ಇಸ್ರೊದಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸಬಹುದು. ಅದಕ್ಕಾಗಿ ನೀವು ಐಸಿಆರ್‍ಬಿ ಪರೀಕ್ಷೆ ಬರೆಯಬೇಕು. ಇದು ಇಸ್ರೊದ ಸೆಂಟ್ರಲೈಸ್ಡ್ ರಿಕ್ರೂಟ್‍ಮೆಂಟ್ ಬೋರ್ಡ್. ಪ್ರತಿವರ್ಷ ಇದರ ಮೂಲಕ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಇದು ಆಗಾಗ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸುತ್ತ ಇರುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಉತ್ತಮವಾಗಿ ಮಾಡಿದರೆ ಇಸ್ರೊದಲ್ಲಿ ಕೆಲಸ ಪಡೆಯಬಹುದು.

ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್(ಐಐಆರ್‍ಎಸ್) ಡೆಹ್ರಡೂನ್, ಬಿರ್ಲಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೆಸ್ರಾ, ರಾಂಚಿ ಸೇರಿದಂತೆ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಯಲ್ಲಿ ಕಲಿತರೂ ಇಸ್ರೊದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಬಹುದಾಗಿದೆ.


ಭವಿಷ್ಯದಲ್ಲಿ ವಿಜ್ಞಾನಿ ಆಗಬೇಕಾದರೆ ಕಲಿಕೆ ಮತ್ತು ತಯಾರಿ ಹೇಗಿರಬೇಕು?

“ಯಶಸ್ಸು ಪಡೆಯಬೇಕಾದರೆ, ಯಶಸ್ಸಿನೆಡೆಗೆ ನಿಮ್ಮ ಆಕಾಂಕ್ಷೆಯು, ವೈಫಲ್ಯದ ಭಯಕ್ಕಿಂತ ಹೆಚ್ಚಿರಬೇಕು”-

ಆಲ್ಬರ್ಟ್ ಐನ್‍ಸ್ಟೀನ್

ಸಿ.ವಿ. ರಾಮನ್, ಎಪಿಜೆ ಅಬ್ದುಲ್ ಕಲಾಂ, ಶ್ರೀನಿವಾಸ ರಾಮನುಜನ್, ಹೋಮಿ ಜೆ. ಭಾಭಾ, ಸತೇಂದ್ರನಾಥ್ ಬೋಸ್, ವಿಕ್ರಂ ಸಾರಭಾಯಿ ಹೀಗೆ ಭಾರತ ಅನೇಕ ಪ್ರಶಿದ್ಧ ವಿಜ್ಞಾನಿಗಳನ್ನು ಜಗತ್ತಿಗೆ ನೀಡಿದೆ. ನಿಮಗೂ ಭವಿಷ್ಯದಲ್ಲಿ ವಿಜ್ಞಾನಿಯಾಗಿ ಸಾಧಿಸುವ ಬಯಕೆ ಇರಬಹುದು. ಹೊಸತನ್ನು ಅನ್ವೇಷಣೆ ಮಾಡುವ ವಿಜ್ಞಾನಿಗೆ ಎಲ್ಲಿಲ್ಲದ ಗೌರವ.  ಈ ಹಿಂದಿನ ಅನ್ವೇಷಣೆಗಳನ್ನು ಆಧಾರವಾಗಿಟ್ಟುಕೊಂಡು ಅಥವಾ ಸಂಪೂರ್ಣ ಹೊಸದಾಗಿ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಾರೆ. ನಿಮ್ಮ ಭವಿಷ್ಯದ ಕರಿಯರ್ ಅನ್ನು ವಿಜ್ಞಾನಿಯಾಗಿ ಬದಲಾಯಿಸಲು ಬಯಸಿದರೆ ವಿದ್ಯಾರ್ಥಿ ಜೀವನದಿಂದಲೇ ತಯಾರಿ ಆರಂಭಿಸಿ.

ಬಾಲ್ಯದಿಂದಲೇ ವಿಜ್ಞಾನಿಯಾಗುವ ಕನಸಲ್ಲಿ ಇದ್ದರೆ ಉತ್ತಮ. ಹೈಸ್ಕೂಲ್, ಪಿಯುಸಿ, ಕಾಲೇಜು ಹಂತದಲ್ಲಿ ವಿಶ್ಲೇಷಣಾತ್ಮಕವಾಗಿ ಮತ್ತು ವಿಭಿನ್ನವಾಗಿ ಚಿಂತಿಸುವ ಕೌಶಲವನ್ನು ಬೆಳೆಸಿಕೊಳ್ಳುವುದು ವಿಜ್ಞಾನಿಯಾಗಲು ಅತ್ಯಂತ ಅಗತ್ಯವಾಗಿದೆ. ನೀವು ಗಣಿತದಲ್ಲಿ ಎಷ್ಟು ಸಾಧ್ಯವೋ ಅಷ್ಟು ಪರಿಣತಿ ಪಡೆಯಬೇಕು. ಜೈವಿಕ ವಿಜ್ಞಾನದಲ್ಲಿಯೂ ಗಣಿತವನ್ನು ಹೆಚ್ಚು ಬಳಸಲಾಗುತ್ತದೆ. ನೀವು ಶಾಲಾ ಕಾಲೇಜು ದಿನಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿರಿ. ನಿಮ್ಮದೇ ಸ್ವಂತ ಪ್ರಾಜೆಕ್ಟ್‍ಗಳ ಮೂಲಕ ಎಲ್ಲರ ಗಮನಸೆಳೆಯಿರಿ. ವಿಜ್ಞಾನಿಯಾಗಬೇಕಾದರೆ ಮೊದಲು ಬೇಸಿಕ್ಸ್ ಕಲಿಯಿರಿ. ಜೀವಶಾಸ್ತ್ರ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಮೂಲ ವಿಷಯಗಳನ್ನು ಕಲಿಯಿರಿ. ಗಮನಿಸುವಿಕೆಯ ವೈಜ್ಞಾನಿಕ ವಿಧಾನಗಳು, ಊಹಾ ಸಿದ್ಧಾಂತಗಳು ಮತ್ತು ಪ್ರಯೋಗಗಳಲ್ಲಿ ತೊಡಗಿರಿ. ನೀವು ಯಾವುದಾದರೂ ವಿಶೇಷವಾದ ಕ್ಷೇತ್ರದಲ್ಲಿ ತಜ್ಞತೆ ಪಡೆಯಲು ಬಯಸಿದರೆ ಅದಕ್ಕೆ ಸಂಬಂಧಪಟ್ಟ ಕೋರ್ಸ್‍ಗಳಿಗೆ ಸೇರಿರಿ. ಒಂದೆರಡು ವಿದೇಶಿ ಭಾಷೆ ಕಲಿತರೆ ಉತ್ತಮ. ವಿಜ್ಞಾನ ನಿಯತಕಾಲಿಕೆಗಳನ್ನು ತಪ್ಪದೇ ಓದಿರಿ. ಭವಿಷ್ಯದಲ್ಲಿ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಲು ಇಚ್ಚಿಸುವಿರಿ ಎಂದು ನಿರ್ಧರಿಸಿರಿ. ವಿಜ್ಞಾನದ ವಿವಿಧ ಶಾಖೆಗಳಲ್ಲಿ ಯಾವುದನ್ನು ಆಯ್ದುಕೊಳ್ಳುವಿರಿ? ಅಗಣಿತ ತಾರಾಮಂಡಲಗಳಿರುವ ಅಂತರಿಕ್ಷವೇ? ವೈದ್ಯಕೀಯವೇ? ಮಾನಸಿಕ ವಿಜ್ಞಾನವೇ? ತಳಿವಿಜ್ಞಾನವೇ ಅಥವಾ ಕೃಷಿ ವಿಜ್ಞಾನವೇ? ನಿಮ್ಮ ಭವಿಷ್ಯ ಎಲ್ಲಿರಬೇಕು? ಏನನ್ನು ಅಧ್ಯಯನ ಮಾಡಬೇಕು? ಖಚಿತಪಡಿಸಿಕೊಳ್ಳಿ.

ನೀವು ವಿಜ್ಞಾನಿಯಂತೆ ಬರೆಯಲು ಕಲಿಯಬೇಕು. ಬರೆದು ನಿಮ್ಮ ಸಂಶೋಧನೆಯನ್ನು ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟಿಸಬೇಕು. ಹೈಸ್ಕೂಲ್‍ನಲ್ಲಿ ಕಲಿತ ಇಂಗ್ಲಿಷ್ ಮತ್ತು ಕಾಲೇಜಿನಲ್ಲಿ ಕಲಿತ ತಾಂತ್ರಿಕ ಬರವಣಿಗೆಯ ಕೌಶಲವನ್ನು ಸೇರಿಸಿಕೊಂಡು ವಿಜ್ಞಾನ ಬರಹಗಳನ್ನು ಬರೆಯಿರಿ. ಇದಕ್ಕಾಗಿ ಸದಾ ವಿಜ್ಞಾನ ನಿಯತಕಾಲಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿರಿ. ವಿಜ್ಞಾನಿಯಾಗಬಯಸುವವರು ಕನಿಷ್ಠ ಸ್ನಾತಕೋತ್ತರ ಓದಿರಬೇಕು. ನಂತರ ನಿಮ್ಮ ಸಂಶೋಧನೆಗೆ ಸಂಬಂಧಪಟ್ಟ ವಿಭಾಗದಲ್ಲಿ ಸಂಶೋಧನಾ ಇಂಟರ್ನ್‍ಷಿಪ್ ಮಾಡಿರಿ. ಸ್ನಾತಕೋತ್ತರದ ಬಳಿಕ ಡಾಕ್ಟರೇಟ್ ಪ್ರೋಗ್ರಾಂಗಳಿಗೆ ಸೇರಿರಿ. ಇದು ನಿಮ್ಮನ್ನು ವಿಜ್ಞಾನಿಯಾಗಿ ಪರಿಪಕ್ವವಾಗಿಸಲು ಸಾಕಷ್ಟು ತರಬೇತಿ ಒದಗಿಸುತ್ತದೆ. ಪ್ರತಿದಿನ ಅಪ್‍ಡೇಟ್ ಆಗುತ್ತಿರಿ. ಸುಮಾರು ಒಂದು ದಶಕದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿರಬಹುದು. ಎಂದೋ ಓದಿದ ವಿಷಯಕ್ಕೆ ಅಂಟಿಕೊಂಡಿರಬೇಡಿ. ಇತ್ತೀಚಿನ ಬದಲಾವಣೆಗಳು, ಹೊಸ ಸಂಶೋಧನೆಗಳು, ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡಿರಿ.

ಸಂಶೋಧನೆ ಮುಂದುವರೆಸಿರಿ ಮತ್ತು ಪೂರ್ಣಕಾಲಿಕ ಉದ್ಯೋಗಕ್ಕೆ ಪ್ರಯತ್ನಿಸಿ. ವಿಜ್ಞಾನಿಗಳು ತಮ್ಮ ಪ್ರಾಜೆಕ್ಟ್ ಅಥವಾ ಐಡಿಯಾದ ಕುರಿತೇ ಕೆಲಸ ಮಾಡುತ್ತ ಇರುತ್ತಾರೆ. ನಿಮ್ಮ ಡಾಕ್ಟರೇಟ್ ಪದವಿ ಮುಗಿದ ಬಳಿಕ ನಿಮಗೊಂದು ಉದ್ಯೋಗದ ಅವಶ್ಯಕತೆ ಇರುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವಿರಾದರೆ ನಿಮಗೆ ಕಲಿಯಲು ಸಾಕಷ್ಟು ಅವಕಾಶ ಇರುತ್ತದೆ. ಬೋಧನೆ ಮತ್ತು ಸಂಶೋಧನೆಯನ್ನು ಜೊತೆಜೊತೆಯಾಗಿ ಮಾಡಬಹುದು. ಹೆಚ್ಚಿನ ವಿಜ್ಞಾನಿಗಳು ಯಾವುದಾದರೂ ಪ್ರಮುಖ ಕಂಪನಿಗಳಲ್ಲಿ ಅಥವಾ ಸರಕಾರದ ಜೊತೆ ಕೆಲಸ ಮಾಡುತ್ತಾರೆ. ಆರಂಭದಲ್ಲಿ ನೀವು ರಿಸರ್ಚ್ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸಬೇಕಾಗುತ್ತದೆ.


ವೈಮಾನಿಕ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವಿಫುಲ ಅವಕಾಶ

ಜೀವನದಲ್ಲಿ ಮೊದಲು ನಾವು ಅಂಬೆಗಾಲಿಡಲು ಕಲಿಯಬೇಕು. ನಂತರ ಎದ್ದುನಿಲ್ಲಲು, ಬಳಿಕ ನಡೆದಾಡಲು, ತರುವಾಯ ಓಡಲು ಕಲಿಯಬೇಕು. ನಂತರ ಮಾತ್ರ ನಾವು ಹಾರಲು ಪ್ರಯತ್ನಿಸಬೇಕು.-

ಅನಾಮಿಕ

ಬಹುತೇಕರಿಗೆ ವಿಮಾನವೆಂದರೆ ಏನೋ ಆಕರ್ಷಣೆ. ಕೆಲವರಿಗೆ ವಿಮಾನದ ಪೈಲೆಟ್ ಆಗುವ ಕನಸು. ಇನ್ನು ಕೆಲವರಿಗೆ ವಿಮಾನದೊಳಗೆ ಆತಿಥ್ಯ ನೀಡುವ ಗಗನಸಖಿ ಇತ್ಯಾದಿ ಕ್ಯಾಬಿನ್ ಕ್ರ್ಯೂ ಕೆಲಸ ಅಚ್ಚುಮೆಚ್ಚು. ಇನ್ನು ಕೆಲವರಿಗೆ ವಿಮಾನ ಕಟ್ಟುವ, ಬಿಚ್ಚುವ ಅಥವಾ ಹೊಸತನ್ನು ಅನ್ವೇಷಿಸುವ ಟೆಕ್ನಿಕಲ್ ವಿಭಾಗ ಇಷ್ಟ. ಇಂತವರು ಹೆಚ್ಚಾಗಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಎಂಜಿನಿಯರಿಂಗ್‍ನಲ್ಲೇ ಹೆಚ್ಚು ಸವಾಲಿನಿಂದ ಕೂಡಿದ ಎಂಜಿನಿಯರಿಂಗ್ ವಿಭಾಗ ಎಂದೇ ಹೆಸರುವಾಸಿಯಾಗಿದೆ.

ವಿಮಾನಯಾನ, ಬಾಹ್ಯಾಕಾಶ ಮತ್ತು ರಕ್ಷಣಾ ವ್ಯವಸ್ಥೆಗಳಿಗೆ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗ ಮಾಡುತ್ತದೆ. ಹೈಟೆಕ್ ಸಿಸ್ಟಮ್‍ಗಳನ್ನು ವಿನ್ಯಾಸ ಮಾಡುವುದು ಮತ್ತು ತಯಾರಿಸುವುದು ಸಹ ಈ ಎಂಜಿನಿಯರಿಂಗ್‍ನಲ್ಲಿ ಸೇರಿದೆ. ವೈಮಾನಿಕ ಎಂಜಿನಿಯರ್‍ಗೆ ಮ್ಯಾನುಯಲ್, ಟೆಕ್ನಿಕಲ್ ಮತ್ತು ಮೆಕ್ಯಾನಿಕಲ್ ಸಾಮಾಥ್ರ್ಯ ಇರಬೇಕಾಗುತ್ತದೆ.

ವಾಣಿಜ್ಯ ವಿಮಾನಗಳು ಮತ್ತು ಬಾಹ್ಯಾಕಾಶ ನೌಕೆಗಳನ್ನು ವಿನ್ಯಾಸ ಮಾಡುವುದು, ನಿರ್ಮಾಣ ಮಾಡುವುದು, ಅಭಿವೃದ್ಧಿಪಡಿಸುವುದು, ಪರೀಕ್ಷೆ ನಡೆಸುವುದು ಮತ್ತು ನಿರ್ವಹಣೆ ಮಾಡುವುದು ಇವರ ಪ್ರಮುಖ ಕೆಲಸಗಳಾಗಿವೆ. ವೈಮಾನಿಕ ಎಂಜಿನಿಯರಿಂಗ್‍ನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಮತ್ತು ಆಸ್ಟ್ರೋನಾಟಿಕಲ್ ಎಂಜಿನಿಯರಿಂಗ್ ಎಂಬ ಎರಡು ವಿಭಾಗಳಿವೆ. ಏರೊನಾಟಿಕಲ್ ಎಂಜಿನಿಯರಿಂಗ್ ವಿಮಾನಗಳು, ಕ್ಷಿಪಣಿಗಳು ಮತ್ತು ಹೆಲಿಕಾಪ್ಟರ್‍ಗೆ ಸಂಬಂಧಪಟ್ಟದ್ದಾಗಿದೆ. ಆಸ್ಟ್ರೊನಾಟಿಕಲ್ ಎಂಜಿನಿಯರಿಂಗ್ ಎನ್ನುವುದು ಬಾಹ್ಯಾಕಾಶ ನೌಕೆಗಳು, ರಾಕೆಟ್‍ಗಳು ಮತ್ತು ಬಾಹ್ಯಾಕಾಶ ನಿಲ್ದಾಣಕ್ಕೆ ಸಂಬಂಧಿಸಿದ್ದಾಗಿದೆ.

ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಓದಿದವರು ಬ್ಯಾಚುಲರ್ ಪದವಿಗೆ ಸೇರಬಹುದು. ಐಐಟಿಗಳಿಗೆ ಸೇರಲು ಐಐಟಿ ಜೆಇಇ ಪರೀಕ್ಷೆ ಪಾಸಾಗಿರಬೇಕು. ಸ್ನಾತಕೊತ್ತರ ಪದವಿಗೆ ಸೇರಲು ಬಿ.ಇ/ಬಿ.ಟೆಕ್ ಪಡೆದಿರಬೇಕು. ಪದವಿ ಹಂತದಲ್ಲಿ  ಬ್ಯಾಚುಲರ್ ಆಫ್ ಸೈನ್ಸ್ ಇನ್ ಏರ್‍ಕ್ರಾಫ್ಟ್ ಎಂಜಿನಿಯರಿಂಗ್, ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಇನ್ ಏರೋನಾಟಿಕಲ್ ಎಂಜಿನಿಯರಿಂಗ್, ಟೆಕ್ನಾಲಜಿ ಇನ್ ಏರೋನಾಟಿಕಲ್ ಎಂಜಿನಿಯರಿಂಗ್, ಎಂಜಿನಿಯರಿಂಗ್ ಇನ್ ಏರೋಸ್ಪೇಸ್ ಎಂಜಿನಿಯರಿಂಗ್, ಟೆಕ್ನಾಲಜಿ ಇನ್ ಏರೋಸ್ಪೇಸ್ ಎಂಜಿನಿಯರಿಂಗ್ ಕೋರ್ಸ್‍ಗಳಿವೆ. ಇದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳೂ ಲಭ್ಯ ಇವೆ.

ಸಾಮಾನ್ಯವಾಗಿ ಏರೋಸ್ಪೇಸ್ ಎಂಜಿನಿಯರ್‍ಗಳನ್ನು ಕನ್ಸಲ್ಟೆಂಟ್ಸ್ ಆಗಿ, ಥರ್ಮಲ್ ಡಿಸೈನ್ ಎಂಜಿನಿಯರ್‍ಗಳಾಗಿ, ಮೆಕ್ಯಾನಿಕಲ್ ಡಿಸೈನ್ ಎಂಜಿನಿಯರ್‍ಗಳಾಗಿ, ಏರೋಸ್ಪೇಸ್ ಟೆಕ್ನಾಲಜಿಸ್ಟ್, ಏರ್‍ಕ್ರಾಫ್ಟ್ ಪೆÇ್ರಡಕ್ಷನ್ ಮ್ಯಾನೇಜರ್, ಅಸಿಸ್ಟೆಂಟ್ ಟೆಕ್ನಿಕಲ್ ಆಫೀಸರ್ಸ್, ಏರೋಸ್ಪೇಸ್ ಡಿಸೈನ್ ಚೆಕ್ಕರ್, ಗ್ರಾಜುವೇಟ್ ಎಂಜಿನಿಯರ್ ಟ್ರೈನಿಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಏರೋಸ್ಪೇಸ್ ಎಂಜಿನಿಯರ್‍ಗಳು ಖಾಸಗಿ ಅಥವಾ ಸಾರ್ವಜನಿಕ ಕಂಪನಿಗಳಲ್ಲಿ ಕೆಲಸ ಪಡೆಯಬಹುದಾಗಿದೆ. ಈ ಪದವಿ ಪಡೆದವರಿಗೆ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಉತ್ತಮ ಉದ್ಯೋಗಾವಕಾಶ ದೊರಕುತ್ತದೆ. ಎಚ್‍ಎಎಲ್, ಡಿಆರ್‍ಡಿಒ, ಇಸ್ರೊ, ನಾಗರಿಕ ವಿಮಾನಯಾನ ಇಲಾಖೆ, ಏರ್ ಇಂಡಿಯಾ, ಇಸ್ರೊ ಇತ್ಯಾದಿಗಳು ಈ ಪದವೀಧರರನ್ನು ಹೆಚ್ಚಾಗಿ ನೇಮಕ ಮಾಡಿಕೊಳ್ಳುತ್ತವೆ.


ವಿಮಾನ ಪೈಲೆಟ್ ಆಗುವುದು ಹೇಗೆ?

“ಬಹುತೇಕ ಜನರಿಗೆ ಆಕಾಶವೇ ಮಿತಿ. ಆದರೆ, ವೈಮಾನಿಕ ಕ್ಷೇತ್ರ ಇಷ್ಟಪಡುವವರಿಗೆ ಆಕಾಶವು ಮನೆ’’-

ಅನೊನ್

ಪುಟ್ಟ ಲೋಹದ ಹಕ್ಕಿ ಆಕಾಶದಲ್ಲಿ ಹಾರಾಟ ನಡೆಸಿದಾಗ ಕಣ್ಣೆತ್ತಿ ನೋಡುವ ಅಭ್ಯಾಸ ನಿಮಗೂ ಇರಬಹುದು. ಒಮ್ಮೆಯೂ ವಿಮಾನಯಾನ ಮಾಡದವರಿಗೆ  ಆಕಾಶಯಾನ ಮಾಡಬೇಕೆಂಬ ಕನಸು ಮೂಡುತ್ತದೆ. ಇನ್ನಷ್ಟು ಮಹಾತ್ವಕಾಂಕ್ಷೆಯುಳ್ಳವರಿಗೆ ವಿಮಾನದ ಪೈಲೆಟ್ ಆಗಬೇಕೆಂಬ ಆಸೆಯೂ ಮೂಡಬಹುದು. ಬಸ್ ಚಾಲಕನ ಪಕ್ಕ ಕುಳಿತ ಮಕ್ಕಳು ಚಾಲಕನಾಗಬೇಕೆಂಬ ಕನಸು ಕಂಡರೆ ಅದು ಈಡೇರಬಹುದು. ಆದರೆ, ವಿಮಾನ ಪೈಲೆಟ್ ಆಗುವುದು ಸುಲಭವಲ್ಲ. ಹಾಗಂತ, ಅದು ಈಡೇರದ ಕನಸೇನೂ ಅಲ್ಲ!

ಈಗಲೂ ವಿಮಾನ ಪೈಲೆಟ್ ಅತ್ಯಾಕರ್ಷಕ ಉದ್ಯೋಗ. ಈ ಹುದ್ದೆ ನಿಮಗೆ ಸಮಾಜದಲ್ಲಿ ಅತ್ಯುನ್ನತ ಪ್ರತಿಷ್ಠೆ ಒದಗಿಸುತ್ತದೆ. ದೇಶದಲ್ಲಿ ಕೆಲವೇ ಸಂಖ್ಯೆಯಲ್ಲಿರುವ ಪೈಲೆಟ್‍ಗಳಲ್ಲಿ ನೀವೂ ಒಬ್ಬರಾಗಬಹುದು. ಇದೆಲ್ಲಕ್ಕಿಂತ ಪೈಲೆಟ್ ಉದ್ಯೋಗದ ಕುರಿತು ಆಕರ್ಷಣೆ ಹೆಚ್ಚಲು ಕಾರಣ ಅದರ ಆಕರ್ಷಕ ವೇತನ. ನಿಜ, ವಿಮಾನ ಪೈಲೆಟ್‍ಗಳಿಗೆ ಅತ್ಯುತ್ತಮ ಎನ್ನಬಹುದಾದಷ್ಟು ವೇತನ ದೊರಕುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಸವಾಲಿನ ಉದ್ಯೋಗ ಮಾಡಬಯಸುವವರಿಗೆ, ಧೈರ್ಯಶಾಲಿಗಳಿಗೆ ಇದು ಅತ್ಯಂತ ಇಷ್ಟದ ಉದ್ಯೋಗ. ಆಕಾಶದಲ್ಲಿ ಮೋಡಗಳ ನಡುವೆ ಸಾಗುವ ಸಾಹಸಿ ಮನೋಭಾವವೇ ಈ ಉದ್ಯೋಗವನ್ನು ಇಷ್ಟಪಡಲು ಕಾರಣವಾಗುತ್ತದೆ.

ಮುಂದಿನ ಕೆಲವೇ ವರ್ಷಗಳಲ್ಲಿ ಭಾರತವು ಜಗತ್ತಿನ ಮೂರನೇ ಬೃಹತ್ ವೈಮಾನಿಕ ಮಾರುಕಟ್ಟೆಯಾಗುವ ಕನಸಿನಲ್ಲಿದೆ. ಪುರುಷರು ಮಾತ್ರವಲ್ಲದೇ ಮಹಿಳಾ ಪೈಲೆಟ್‍ಗಳಿಗೂ ಬೇಡಿಕೆಯಿದೆ. ಮುಂದಿನ 2 ದಶಕದಲ್ಲಿ ಏಷ್ಯಾಕ್ಕೆ 2,26,000 ಪೈಲೆಟ್‍ಗಳ ಅವಶ್ಯಕತೆ ಇದೆಯೆಂದು ಇತ್ತೀಚಿನ ವರದಿಯೊಂದು ಹೇಳಿದೆ.

ನೀವೂ ಸಹ ಪೈಲೆಟ್ ಆಗಲು ಬಯಸಿದರೆ ವಿದ್ಯಾರ್ಥಿದೆಸೆಯಲ್ಲಿಯೇ ಪ್ರಯತ್ನ ಆರಂಭಿಸಿ. ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಮುಗಿಸಿದ ನಂತರ ವಾಣಿಜ್ಯ ಪೈಲೆಟ್ ಕೋರ್ಸ್‍ಗಳಿಗೆ ಅರ್ಜಿ ಸಲ್ಲಿಸಿರಿ. ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಲ್ಲಿ ಉತ್ತಮ ಅಂಕ ಪಡೆದಿರಬೇಕು. ಪಿಯುಸಿ ಬಳಿಕ ದೇಶದಲ್ಲಿ ಲಭ್ಯವಿರುವ ಪೈಲೆಟ್ ತರಬೇತಿ ಸಂಸ್ಥೆಗಳಿಗೆ ಸೇರಬಹುದು. ಇಲ್ಲಿ ಲಿಖಿತ ಪರೀಕ್ಷೆ ಮತ್ತು ದೈಹಿಕ ಸಾಮಥ್ರ್ಯ ಪರೀಕ್ಷೆ ನಡೆಸಿ ದಾಖಲಾತಿ ನಡೆಸಲಾಗುತ್ತದೆ. ಈ ಪರೀಕ್ಷೆ ಪಾಸ್ ಆದ ಬಳಿಕ ಅವರು ಹೇಳಿದಷ್ಟು ಲಕ್ಷ ಶುಲ್ಕ ಕಟ್ಟಿ ಸೇರಬೇಕು. ಮಹಾತ್ವಕಾಂಕ್ಷೆ ಇರುವವರು ಇದಕ್ಕಾಗಿ ಶೈಕ್ಷಣಿಕ ಸಾಲ ಇತ್ಯಾದಿಗಳನ್ನು ತೆಗೆದುಕೊಳ್ಳಬೇಕಾಗಬಹುದು.

ಕೆಲವು ಸರಕಾರಿ ವಿಮಾನ ಪೈಲೆಟ್ ತರಬೇತಿ ಸಂಸ್ಥೆಗಳಲ್ಲಿರುವ ಸೀಮಿತ ಸೀಟುಗಳನ್ನು ಹೊರತುಪಡಿಸಿ ಭಾರತದಲ್ಲಿಂದು ಪೈಲೆಟ್ ಲೈಸನ್ಸ್ ಕೋರ್ಸ್ ಕಲಿಕೆ ದುಬಾರಿಯಾಗಿ ಪರಿಣಮಿಸಿದೆ.

ಪೈಲೆಟ್ ತರಬೇತಿ ಪಡೆದ ಕೂಡಲೇ ನೀವು ವಿಮಾನ ಹಾರಾಟ ನಡೆಸಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ಪೈಲೆಟ್ ಲೈಸನ್ಸ್ ಪಡೆಯಬೇಕು. ದೇಶದಲ್ಲಿಂದು ಮೂರು ರೀತಿಯ ಪೈಲೆಟ್ ಲೈಸನ್ಸ್ ಲಭ್ಯ ಇದೆ. ವಿದ್ಯಾರ್ಥಿ ಪೈಲೆಟ್ ಪರವಾನಿಗೆ, ಖಾಸಗಿ ಪೈಲೆಟ್ ಪರವಾನಿಗೆ ಮತ್ತು ಕಮರ್ಷಿಯಲ್ ಪೈಲೆಟ್ ಪರವಾನಿಗೆ ಎಂಬ ಮೂರು ಆಯ್ಕೆಗಳಿವೆ. ವಿದ್ಯಾರ್ಥಿಯಾಗಿದ್ದಾಗ ವಿಮಾನ ಹಾರಾಟ ನಡೆಸಲು ವಿದ್ಯಾರ್ಥಿ ಪೈಲೆಟ್ ಲೈಸನ್ಸ್ ಬೇಕಾಗುತ್ತದೆ. ಕಮರ್ಷಿಯಲ್ ಪೈಲೆಟ್ ಲೈಸನ್ಸ್ ದೊರಕಿದ ನಂತರ ವಿಮಾನ ಹಾರಾಟ ನಡೆಸಬಹುದು. ಬೆಂಗಳೂರಿನ ಜಕ್ಕೂರಿನಲ್ಲಿರುವ ಗವರ್ನ್‍ಮೆಂಟ್ ಫ್ಲೈಯಿಂಗ್ ಸ್ಕೂಲ್‍ನÀಲ್ಲಿ  ಕಮರ್ಷಿಯಲ್ ಮತ್ತು ಪ್ರೈವೇಟ್ ಪೈಲೆಟ್ ಲೈಸನ್ಸ್ ಪಡೆಯಬಹುದು. ಇಲ್ಲಿ ವರ್ಷಕ್ಕೆ ಸೀಮಿತ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಬಡ ವಿದ್ಯಾರ್ಥಿ ಪೈಲೆಟ್ ಆಗಬಹುದೇ?

ಈಗಾಗಲೇ ಹತ್ತಿಪ್ಪತ್ತು ಲಕ್ಷ ಶುಲ್ಕದ ವಿಷಯ ಕೇಳಿ ಬಡವರಾಗಿ ಹುಟ್ಟಿದ್ದೇ ತಪ್ಪು, ನಾವು ಪೈಲೆಟ್ ಆಗುವ ಕನಸು ಕಾಣುವಂತೆ ಇಲ್ಲವೆಂದು ಅಂದುಕೊಳ್ಳಬೇಡಿ. ಅವಕಾಶದ ಹುಡುಕಾಟ ಮತ್ತು ಪ್ರಯತ್ನಪಟ್ಟರೆ ಬಡ ವಿದ್ಯಾರ್ಥಿಯೂ ಪೈಲೆಟ್ ಆಗಬಹುದು. ಇದಕ್ಕಾಗಿ ವಾಯುಪಡೆ ನಡೆಸುವ (ಎನ್‍ಡಿಎ ಇತ್ಯಾದಿ) ಪರೀಕ್ಷೆ ಪಾಸಾಗಬೇಕು. ನೀವು ಸಾಮಾನ್ಯ ವಿಮಾನದ ಪೈಲೆಟ್ ಮಾತ್ರವಲ್ಲದೆ ಯುದ್ಧವಿಮಾನವನ್ನೇ ಆಕಾಶದಲ್ಲಿ ರೋಂಯ್ .. ಎಂದು ಹಾರಿಸಬಹುದು!


ಹೆಲಿಕಾಪ್ಟರ್ ಪೈಲೆಟ್ ಆಗುವುದು ಹೇಗೆ?

ಮೋಟಾರ್ ಇಲ್ಲದೆಯೂ ಹಾರಾಟ ನಡೆಸಲು ಸಾಧ್ಯವಿರಬಹುದು. ಆದರೆ, ಜ್ಞಾನ ಮತ್ತು ಕೌಶಲ ಇಲ್ಲದೆ ಹಾರಾಟ ನಡೆಸುವುದು ಸಾಧ್ಯವಿಲ್ಲ-

ವಿಲ್ಬರ್ಟ್ ರೈಟ್

ದೊಡ್ಡ ಕನಸು ಕಂಡು ಅದನ್ನು ಈಡೇರಿಸಿಕೊಂಡು ಭವಿಷ್ಯ ಬದಲಾಯಿಸಲು ಬಯಸುವವರು ರೆಕ್ಕೆ ತಿರುಗಿಸುತ್ತ ಹಾರುವ ಹೆಲಿಕಾಪ್ಟರ್ ಪೈಲೆಟ್ ಸೀಟಲ್ಲಿ ಕುಳಿತುಕೊಳ್ಳುವ ಕುರಿತು ಆಲೋಚಿಸಬಹುದು. ಹೆಲಿಕಾಪ್ಟರ್ ಪೈಲೆಟ್ ಆಗಲು ಬಯಸುವವರಿಗೆ ಕಮರ್ಷಿಯಲ್ ಹೆಲಿಕಾಪ್ಟರ್ ಪೈಲಟ್ ಲೈಸನ್ಸ್ (ಸಿಎಚ್‍ಪಿಎಲ್) ಮತ್ತು ಪ್ರೈವೇಟ್ ಹೆಲಿಕಾಪ್ಟರ್ ಪೈಲಟ್ ಲೈಸನ್ಸ್ (ಪಿಎಚ್‍ಪಿಎಲ್) ಕೋರ್ಸ್‍ಗಳು ಲಭ್ಯ ಇರುತ್ತವೆ. ಈ ಕೋರ್ಸ್‍ಗಳ ಅವಧಿ ಬಹುತೇಕ 1 ಅಥವಾ 2 ವರ್ಷದ ಒಳಗೆ ಇರುತ್ತದೆ. ಈ ಕೋರ್ಸ್ ಅನ್ನು ಪುರುಷರು ಅಥವಾ ಮಹಿಳೆಯರು ಪಡೆದುಕೊಳ್ಳಬಹುದಾಗಿದೆ. ಆಯಾ ತರಬೇತಿ ಸಂಸ್ಥೆಗಳಿಗೆ ಅನುಗುಣವಾಗಿ ಕನಿಷ್ಠ 17 ಅಥವಾ 18 ವರ್ಷ ಪೂರ್ಣಗೊಳಿಸಿದವರು ಈ ತರಬೇತಿಗೆ ಸೇರಬಹುದು. ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಒಳಗೊಂಡ 10+2 ವಿದ್ಯಾರ್ಹತೆ ಹೊಂದಿರಬೇಕು. ಡಿಜಿಸಿಎ ಬಯಸಿದಂತೆ ದೈಹಿಕ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು.

ಸಿಎಚ್‍ಪಿಎಲ್ ಅಥವಾ ಪಿಎಚ್‍ಪಿಎಲ್ ವಿದ್ಯಾರ್ಥಿಗಳು ಏರ್ ರೆಗ್ಯುಲೇಷನ್ಸ್, ಏರ್ ನ್ಯಾವಿಗೇಷನ್, ಏವಿಯೇಷನ್ ಮೆಥಾಡಲಜಿ, ಟೆಕ್ನಿಕಲ್ (ಏರ್‍ಕ್ರಾಫ್ಟ್ ಮತ್ತು ಎಂಜಿನ್ಸ್) ಮತ್ತು ಸಿಗ್ನಲ್ಸ್ ಸಿಲಬಸ್‍ಗೆ ತಕ್ಕಂತೆ ಲಿಖಿತ ಪರೀಕ್ಷೆ ಬರೆಯಬೇಕು. ನೀವು ಯಾವ ಹೆಲಿಕಾಪ್ಟರ್ ತರಬೇತಿ ಸಂಸ್ಥೆಗೆ ಸೇರುವಿರೋ ಆ ಸಂಸ್ಥೆಯೇ ಈ ವಿಷಯಗಳನ್ನು ಬೋಧಿಸುತ್ತದೆ. ಈ ಪರೀಕ್ಷೆಯಲ್ಲಿ ಪಾಸ್ ಆದವರು ಮುಂದಿನ ಹಂತದ ತರಬೇತಿ ಪಡೆಯಲು ಅರ್ಹತೆ ಪಡೆಯುತ್ತಾರೆ.

ಈಗಿರುವ ಡಿಜಿಸಿಎ ನಿಯಮಗಳಂತೆÉ ವಿದ್ಯಾರ್ಥಿಯು ಹಲವು ಗಂಟೆಗಳ ಕಾಲ ಹೆಲಿಕಾಪ್ಟರ್ ಹಾರಾಟ ನಡೆಸಿದ ಅನುಭವ ಹೊಂದಿರಬೇಕಾಗುತ್ತದೆ. ಸಾಮಾನ್ಯವಾಗಿ 30 ಗಂಟೆ ಅಥವಾ 40 ಗಂಟೆ ಗಂಟೆ ಇತ್ಯಾದಿ ಹಾರಾಟ ಅನುಭವವನ್ನು ಬಯಸಲಾಗುತ್ತದೆ. ಸೂಕ್ತವಾದ ತರಬೇತಿ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಿ. ಪೂರ್ಣ ಪ್ರಮಾಣದಲ್ಲಿ ಖಾಸಗಿ ಸಂಸ್ಥೆಯಾದರೆ ದುಬಾರಿ ಶುಲ್ಕ ಪಾವತಿಸಬೇಕಾದೀತು.

ಪೈಲೆಟ್ ತರಬೇತಿ ಪಡೆದ ಕೂಡಲೇ ನೀವು ಹೆಲಿಕಾಪ್ಟರ್ ಹಾರಾಟ ನಡೆಸಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ಪೈಲೆಟ್ ಲೈಸನ್ಸ್ ಪಡೆಯಬೇಕು. ದೇಶದಲ್ಲಿಂದು ಮೂರು ರೀತಿಯ ಪೈಲೆಟ್ ಲೈಸನ್ಸ್ ಲಭ್ಯ ಇದೆ. ವಿದ್ಯಾರ್ಥಿ ಕಲಿಕಾ ಪೈಲೆಟ್ ಪರವಾನಿಗೆ, ಖಾಸಗಿ ಪೈಲೆಟ್ ಪರವಾನಿಗೆ ಮತ್ತು ಕಮರ್ಷಿಯಲ್ ಪೈಲೆಟ್ ಪರವಾನಿಗೆ ಎಂಬ ಮೂರು ಆಯ್ಕೆಗಳಿವೆ.

ಕೆಲವು ಗಂಟೆಯ ಪ್ರಯಾಣಕ್ಕೆ ಹೆಲಿಕಾಪ್ಟರ್ ಬಳಸಲು ಹಲವು ಸಾವಿರ ರೂ. ನೀಡಬೇಕಾಗುತ್ತದೆ. ಇದರ ನಿರ್ವಹಣಾ ವೆಚ್ಚ ಇತ್ಯಾದಿಗಳು ಹೆಚ್ಚಿರುವುದರಿಂದ ಇದರ ಕಲಿಕಾ ವೆಚ್ಚವೂ ಹೆಚ್ಚಿದೆ. ಹೆಲಿಕಾಪ್ಟರ್ ತರಬೇತಿಗೆ ಕೆಲವು ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ. ಹಾಗಾದರೆ ಬಡವರೂ ಪೈಲೆಟ್‍ಗಳಾಗುವುದು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ನಮ್ಮ ದೇಶದ ವಿಮಾನ ಅಥವಾ ಹೆಲಿಕಾಪ್ಟರ್ ನಡೆಸುವವರಲ್ಲಿ ಸಾಕಷ್ಟು ಜನರು ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು. ವಿದ್ಯಾರ್ಥಿಗಳು ಈ ತರಬೇತಿಗೆ ಬ್ಯಾಂಕ್ ಲೋನ್ ಪಡೆಯಬಹುದು. ಸ್ಕಾಲರ್‍ಷಿಪ್ ನೆರವೂ ಪಡೆಯಬಹುದು.

6.  ವೈದ್ಯರಾಗುವುದು ಹೇಗೆ?

“ಉತ್ತಮ ವೈದ್ಯರು ರೋಗಕ್ಕೆ ಚಿಕಿತ್ಸೆ ನೀಡುತ್ತಾರೆ. ಅತ್ಯುತ್ತಮ ವೈದ್ಯರು ರೋಗ ಇರುವ ರೋಗಿಗೆ ಚಿಕಿತ್ಸೆ ನೀಡುತ್ತಾರೆ”

– ವಿಲಿಯಮ್ ಓಸ್ಲೆರ್

ಹೆಚ್ಚಿನ ವಿದ್ಯಾರ್ಥಿಗಳಿಗೆ ವೈದ್ಯ ವೃತ್ತಿ ಅಚ್ಚುಮೆಚ್ಚು. ರೋಗಿಗಳ ಪಾಲಿಗೆ ದೇವರಾಗುವ ಅದ್ಭುತ ಅವಕಾಶವಿದು. ಆದರೆ, ಈಗಿನ ದುಬಾರಿ ಶಿಕ್ಷಣವು ಸಾಕಷ್ಟು ವಿದ್ಯಾರ್ಥಿಗಳನ್ನು ವೈದ್ಯ ವೃತ್ತಿಯಿಂದ ದೂರವಿಟ್ಟಿದೆ. ಆದರೆ, ಅತ್ಯುತ್ತಮ ಅಂಕದ ನೆರವಿನಿಂದ ಸ್ಕಾಲರ್‍ಷಿಪ್ ಮತ್ತು ಬ್ಯಾಂಕ್ ಸಾಲ ಪಡೆದು ವೈದ್ಯರಾದ ಸಾಕಷ್ಟು ಜನರು ನಮ್ಮ ನಿಮ್ಮ ನಡುವೆ ಇದ್ದಾರೆ.

ಪಿಯುಸಿಯಲ್ಲಿ ವಿಜ್ಞಾನ ಓದಿರಬೇಕು. ವೈದ್ಯರಾಗಬೇಕಾದರೆ ಮೊದಲ ಹಂತವಾಗಿ ಎಂಬಿಬಿಎಸ್ ಪದವಿ ಪಡೆಯಬೇಕು. ಇಂಟರ್ನ್‍ಷಿಪ್ ಸೇರಿದಂತೆ ಸುಮಾರು 5-6 ವರ್ಷ ಓದಬೇಕು. ಎಂಬಿಬಿಎಸ್, ಬಿಡಿಎಸ್ ಮತ್ತು ವೆಟರ್ನಿಟಿ ವಿಜ್ಞಾನ ಇತ್ಯಾದಿ ಓದಲು ನೀವು ಮೊದಲು ನೀಟ್ ಎಂಬ ಪ್ರವೇಶ ಪರೀಕ್ಷೆ ಬರೆಯಬೇಕು.

ಡಾಕ್ಟರ್ ಆಗುವ ಕನಸಿನಲ್ಲಿರುವ ವಿದ್ಯಾರ್ಥಿಗಳು ಪಿಯುಸಿ ಸಮಯದಲ್ಲಿ ವಿಜ್ಞಾನ(ಸಂಬಂಧಪಟ್ಟ ವಿಷಯಗಳನ್ನು ಒಳಗೊಂಡಂತೆ) ಆಯ್ದುಕೊಳ್ಳಿ. ವೈದ್ಯರಾಗುವ ಕನಸಿನಲ್ಲಿ ಚೆನ್ನಾಗಿ ಅಧ್ಯಯನ ಮಾಡಿ. ಒಳ್ಳೆಯ ಅಂಕ ಪಡೆದುಕೊಳ್ಳಿ. ನಂತರ ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿ. ಸಮರ್ಪಕವಾಗಿ ಸಿದ್ಧತೆ ನಡೆಸಿ ಪರೀಕ್ಷೆ ಬರೆಯಿರಿ.

ಪ್ರತಿವರ್ಷ ನೀಟ್ ಪರೀಕ್ಷೆಯನ್ನು ಸಿಬಿಎಸ್‍ಇ ಆಯೋಜಿಸುತ್ತದೆ. ನೀಟ್‍ನಲ್ಲಿ ಪಿಯುಸಿಯಲ್ಲಿ ಓದಿರುವ ಫಿಸಿಕ್ಸ್, ಕೆಮಿಸ್ಟ್ರಿ ಮತ್ತು ಬಯೋಲಜಿ ವಿಷಯಗಳದ್ದೇ ಪ್ರಶ್ನೆಗಳು ಇರುತ್ತವೆ. ನೀವು ಸರಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಸೇರಲು ನೀಟ್ ಪರೀಕ್ಷೆಯಲ್ಲಿ ಪಡೆದ ರ್ಯಾಂಕ್ ಪ್ರಮುಖ ಅಂಕವೇ ಮಾನದಂಡವಾಗಿದೆ. ನೀಟ್ ಪರೀಕ್ಷೆಯಲ್ಲಿ ಆಬ್ಜೆಕ್ಟೀವ್ ಮಾದರಿಯ ಪ್ರಶ್ನೆಗಳು ಇರುತ್ತವೆ. ಒಟ್ಟು 180 ಪ್ರಶ್ನೆಗಳು ಇರುತ್ತವೆ. ಬಯೋಲಜಿಗೆ 90 ಅಂಕಗಳು, ಉಳಿದ ಎರಡು ವಿಷಯಗಳಿಗೆ ತಲಾ 45 ಅಂಕ ಇರುತ್ತವೆ.

ಇತ್ತೀಚಿನ ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ ಪ್ರತಿವರ್ಷ ಸುಮಾರು 40ಕ್ಕೂ ಹೆಚ್ಚು ಸಾವಿರ ಅಭ್ಯರ್ಥಿಗಳು ಈ ಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಾರೆ. 10-12 ಸಾವಿರ ಅಭ್ಯರ್ಥಿಗಳು ಮಾತ್ರ ನೀಟ್‍ನಲ್ಲಿ ಯಶಸ್ವಿಯಾಗುತ್ತಾರೆ. ಎಂಬಿಬಿಎಸ್ ಪೂರ್ಣಗೊಳಿಸಿದ ಬಳಿಕ ಯಾವುದಾದರೂ ಆಸ್ಪತ್ರೆಯಲ್ಲಿ ಪ್ರ್ಯಾಕ್ಟೀಸ್ ಮಾಡಬಹುದು. ವೈದ್ಯರಾಗಿ ಸೇವೆ ಸಲ್ಲಿಸಬಹುದು.

ದೇಶದಲ್ಲಿಂದು ಎಂಬಿಬಿಎಸ್ ಓದಿರುವ ವೈದ್ಯರಿಗೆ ಬೇಡಿಕೆ ಕಡಿಮೆಯಾಗುತ್ತಿದೆ ಎನ್ನಲಾಗುತ್ತಿದೆ. ಎಂಡಿ, ಎಂಎಸ್, ಪಿಜಿಡಿಎಂ ಇತ್ಯಾದಿ ಉನ್ನತ ಕೋರ್ಸ್ ಮಾಡಿರುವವರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ರೋಗಿಗಳು ವೈದ್ಯರ ಬಳಿಗೆ ಹೋಗುವ ಮೊದಲು ಇವರು ಕೇವಲ ಎಂಬಿಬಿಎಸ್ ವೈದ್ಯರೇ ಅಥವಾ ಎಂಡಿ ಇತ್ಯಾದಿ ಕೋರ್ಸ್ ಮಾಡಿದ್ದಾರೆಯೇ ಎಂದು ಪರಿಶೀಲಿಸಿ ಹೋಗುತ್ತಿದ್ದಾರೆ. ಡೆರ್ಮಟೊಲಜಿ, ಸೈಕ್ಯಾಟ್ರಿ, ಕಾರ್ಡಿಯೊಲಜಿ, ಗೈನೊಕೊಲಜಿ, ನ್ಯೋರೊಲಜಿ ಸೇರಿದಂತೆ ಹಲವು ವಿಷಯಗಳಲ್ಲಿ ಎಂಡಿ ಮತ್ತು ಪಿಡಿಯಾಟ್ರಿಕ್ ಸರ್ಜರಿ, ಕಾಸ್ಮೆಟಿಕ್ ಸರ್ಜರಿ, ಯುರೊಲಜಿ, ಪ್ಲಾಸ್ಟಿಕ್ ಸರ್ಜರಿ ಇತ್ಯಾದಿ ಹಲವು ವಿಷಯಗಳಲ್ಲಿ ಎಂಎಸ್ ಪದವಿ ಪಡೆಯಬಹುದು.

ದಂತವೈದ್ಯರಾಗಬೇಕಾದರೆ ಬಿಡಿಎಸ್, ಆರ್ಯುವೇದ ವೈದ್ಯರಾಗಬೇಕಾದರೆ ಬಿಎಎಂಎಸ್, ಹೋಮಿಯೊಪತಿ ಡಾಕ್ಟರ್ ಆಗಬೇಕಿದ್ದರೆ ಬಿಎಚ್‍ಎಂಎಸ್, ಯುನಾನಿ ವೈದ್ಯರಾಗಬೇಕಾದರೆ ಬಿಯುಎಂಎಸ್, ವೆಟರ್ನರಿ ವೈದ್ಯರಾಗಬೇಕಾದರೆ ಬಿ.ವಿ.ಎಸ್ಸಿ ಮತ್ತು ಎಎಚ್, ಫಿಜಿಯೊಥೆರಪಿ ವೈದ್ಯರಾಗಬೇಕಾದರೆ ಫಾರ್ಮ್ ಡಿ ಬಿಪಿಟಿ, ಆಕ್ಯುಪೇಷನಲ್ ಥೆರಪಿಗೆ ಬಿಒಟಿ ಆಯ್ಕೆ ಮಾಡಿಕೊಳ್ಳಬೇಕು. ಇದರೊಂದಿಗೆ ವಿವಿಧ ಪಿಎಚ್.ಡಿ ಅಧ್ಯಯನವನ್ನೂ ಮಾಡಬಹುದು.


ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಕ್ಷೇತ್ರದಲ್ಲಿ ಕರಿಯರ್‌ ರೂಪಿಸಿಕೊಳ್ಳಿ

“ಇಂದಿನ ವಿಜ್ಞಾನವೇ ನಾಳೆಯ ತಂತ್ರಜ್ಞಾನ”

– ಎಡ್ವರ್ಡ್ ಟೆಲ್ಲರ್

ಸ್ಮಾರ್ಟ್‍ಫೋನ್ ಇಂದು ಎಲ್ಲರಿಗೂ ಅನಿವಾರ್ಯ ಸಾಧನವಾಗಿಬಿಟ್ಟಿದೆ. ವಿವಿಧ ಕಂಪನಿಗಳಿಗೆ, ಬಿಸ್ನೆಸ್‍ಗಳಿಗೆ ಗ್ರಾಹಕರನ್ನು ತಲುಪಲು ಮೊಬೈಲ್ ಆ್ಯಪ್ ಅನಿವಾರ್ಯವಾಗಿಬಿಟ್ಟಿದೆ. ಮೊಬೈಲ್ ಸಾಧನಗಳು, ಅಪ್ಲಿಕೇಷನ್‍ಗಳು ನಮ್ಮ ಸಂವಹನದ ರೀತಿಯನ್ನೇ ಬದಲಾಯಿಸಿಬಿಟ್ಟಿದೆ. ಇದೇ ಕಾರಣಕ್ಕೆ ಮೊಬೈಲ್ ಆ್ಯಪ್‍ಗಳನ್ನು ಅಭಿವೃದ್ಧಿಪಡಿಸುವುದು ಅತ್ಯುತ್ತಮ ಬೇಡಿಕೆಯ ಮತ್ತು ವೇಗವಾಗಿ ಪ್ರಗತಿ ಕಾಣುತ್ತಿರುವ ಐಟಿ ಕರಿಯರ್ ಆಗಿದೆ. ಈ ಉದ್ಯೋಗವನ್ನು ಪ್ರಿಲ್ಯಾನ್ಸ್ ಆಗಿಯೂ ಮಾಡಬಹುದು.

ಆ್ಯಪ್ ಅಭಿವೃದ್ಧಿಪಡಿಸಬೇಕಾದರೆ ಮೊದಲು ಪ್ರೋಗ್ರಾಮಿಂಗ್ ಭಾಷೆಯನ್ನು ಕಲಿಯಬೇಕು. ಸಿ, ಸಿಪ್ಲಸ್‍ಪ್ಲಸ್, ಜಾವಾ ಇತ್ಯಾದಿಗಳನ್ನು ಕಲಿಯಬೇಕು. ಗೂಗಲ್ ಆಂಡ್ರಾಯ್ಡ್, ಆಪಲ್ ಐಒಎಸ್‍ಗೆ ತಕ್ಕಂತೆ ನೀವು ಕೌಶಲ ಕಲಿಯಬೇಕು. ಈ ರೀತಿಯ ಬೇರೆ ಬೇರೆಯಾದ ಆಪ್ ವೇದಿಕೆಗಳಿಗೆ ಬಳಸುವ ಕೋರ್ ಭಾಷೆಯೂ ಭಿನ್ನವಾಗಿರುತ್ತದೆ.

ನಿಮಗೂ ಆ್ಯಪ್ ಡೆವಲಪರ್ ಆಗಬೇಕಿದ್ದರೆ ಕಂಪ್ಯೂಟರ್ ವಿಜ್ಞಾನದ ಪದವಿ ಅಥವಾ ಸ್ನಾತಕೋತ್ತರ ಪಡೆಯಿರಿ. ಜೊತೆಗೆ ಆ್ಯಪ್ ಡೆವಲಪ್‍ಮೆಂಟ್‍ಗೆ ಸಂಬಂಧಪಟ್ಟ ಸರ್ಟಿಫಿಕೇಷನ್‍ಗಳನ್ನು ಪಡೆದರೆ ಒಳ್ಳೆಯದು. ಹೈಸ್ಕೂಲ್, ಪಿಯುಸಿ ಹಂತದಲ್ಲಿಯೇ ಮೊಬೈಲ್ ಆ್ಯಪ್ ಅಭಿವೃದ್ಧಿ, ವೆಬ್‍ಸೈಟ್ ವಿನ್ಯಾಸ ಇತ್ಯಾದಿಗಳಿಗೆ ಸಂಬಂಧಪಟ್ಟ ಉಚಿತ ಕೋರ್ಸ್‍ಗಳನ್ನು, ಮಾಹಿತಿಗಳನ್ನು ಆನ್‍ಲೈನ್ ಮೂಲಕ ಪಡೆಯಿರಿ.

ಈಗ ಹೆಚ್ಚಿನ ಕಾಲೇಜುಗಳು ಆ್ಯಪ್ ಡೆವಲಪ್‍ಮೆಂಟ್ ವಿಷಯವನ್ನು ತಮ್ಮ ಪಠ್ಯಕ್ರಮದಲ್ಲಿ ಸೇರಿಸಿಕೊಳ್ಳುತ್ತಿವೆ. ನಿಮ್ಮ ಸಮೀಪದ ಕಾಲೇಜುಗಳಲ್ಲಿ ಆ್ಯಪ್ ಡೆವಲಪ್‍ಮೆಂಟ್ ಕೋರ್ಸ್‍ಗಳಿವೆಯೇ ಎಂದು ಕೇಳಿ ತಿಳಿದುಕೊಳ್ಳಬಹುದು. ಕೆಲವು ಸಂಸ್ಥೆಗಳಲ್ಲಿ ಇಂತಹ ಕಲಿಕೆಗೆ ಅವಕಾಶವಿದ್ದರೂ, ಕಲಿಸುವ ಗುಣಮಟ್ಟ ಅಥವಾ ಸೌಲಭ್ಯಗಳ ಕೊರತೆ ಇರಬಹುದು. ಅಂತಹ ಕಾಲೇಜುಗಳಿಂದ ದೂರವಿರುವುದು ಒಳಿತು. ಇನ್ನು ಕೆಲವು ಖಾಸಗಿ ಸಂಸ್ಥೆಗಳು ಆ್ಯಪ್ ಡೆವಲಪರ್ ಕಲಿಕೆಗೆ ದುಬಾರಿ ಶುಲ್ಕ ಬಯಸಬಹುದು. ಕೆಲವು 3 ಅಥವಾ 6 ತಿಂಗಳ ಶಾರ್ಟ್‍ಟರ್ಮ್ ಕೋರ್ಸ್‍ಗಳು ಇರಬಹುದು. ಹೀಗೆ ನಿಮ್ಮ ಆದ್ಯತೆ ನೋಡಿಕೊಂಡು ಕಲಿಯಬಹುದು.

ದೇಶದಲ್ಲಿಂದು ಸ್ಮಾರ್ಟ್‍ಫೆÇೀನ್‍ಗಳಲ್ಲಿ  ಆಂಡ್ರಾಯ್ಡ್ ಬಳಕೆದಾರರ ಸಂಖ್ಯೆ ಶೇಕಡ 90ಕ್ಕಿಂತಲೂ ಹೆಚ್ಚಿದೆ. ದೇಶ ಮಾತ್ರವಲ್ಲದೆ ಜಗತ್ತಿನಲ್ಲಿ ಸ್ಮಾರ್ಟ್‍ಫೆÇೀನ್‍ಗಳ ಬೇಡಿಕೆಗೆ ತಕ್ಕಷ್ಟು ಆ್ಯಪ್ ಡೆವಲಪರ್‍ಗಳಿಲ್ಲ. ಹೀಗಾಗಿ ಆ್ಯಪ್ ಡೆವಲಪರ್‍ಗಳಿಗೆ ಬೇಡಿಕೆ ದಿನೇ ದಿನೇ ಏರಿಕೆ ಕಾಣುತ್ತಿದೆ. ಈ ಕೊರತೆಯನ್ನು ನೀಗಿಸಲು ಹೆಚ್ಚು ಹೆಚ್ಚು ಆ್ಯಪ್ ಡೆವಲಪರ್‍ಗಳನ್ನು ಸೃಷ್ಟಿಸಲು ಗೂಗಲ್ ಪ್ರಯತ್ನಿಸುತ್ತಿದೆ.  ತನ್ನ ವೆಬ್‍ಸೈಟ್‍ನಲ್ಲಿಯೇ ಇದಕ್ಕಾಗಿ ವೇದಿಕೆಯನ್ನೂ ಗೂಗಲ್ ನೀಡಿದೆ. ನಿಮ್ಮಲ್ಲಿ ಕೋಡಿಂಗ್‍ನ ಸಾಮಾನ್ಯ ಜ್ಞಾನ ಇದ್ದರೆ ಗೂಗಲ್‍ನಲ್ಲೇ ನೀವು ಉಚಿತವಾಗಿ ಆ್ಯಪ್ ಅಭಿವೃದ್ಧಿ ಮಾಡುವುದನ್ನು ಕಲಿಯಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಗೂಗಲ್ ಡೆವಲಪರ್ಸ್ ಟ್ರೇನಿಂಗ್ ಎಂದು ಗೂಗಲ್ ಸರ್ಚ್ ಎಂಜಿನ್‍ನಲ್ಲಿ ಹುಡುಕಿರಿ. ಇದರೊಂದಿಗೆ ಡಬ್ಲ್ಯು3ಸ್ಕೂಲ್ ಇತ್ಯಾದಿ ತಾಣಗಳ ಮೂಲಕ ಸಾಕಷ್ಟು ವಿಷಯಗಳನ್ನು ಕಲಿಯಬಹುದು. ಉಡಾಸಿಟಿ, ಸಿಂಪ್ಲಿಲರ್ನ್, ಉದೆಮಿ ಇತ್ಯಾದಿ ಇ-ಕಲಿಕಾ ವೇದಿಕೆಗಳ ಮೂಲಕವೂ ಕಲಿಯಬಹುದಾಗಿದೆ. ಈಗಿನ ಸ್ಮಾರ್ಟ್‍ಫೋನ್ ಜಗತ್ತು ಸ್ಮಾರ್ಟ್‍ಫೋನ್ ಮೂಲಕವೇ ಕಲಿಯಲು ಸಾಕಷ್ಟು ಅವಕಾಶಗಳನ್ನು ನೀಡಿದೆ. ನಿಮ್ಮ ಕೈಯಲ್ಲಿರುವ ಸ್ಮಾರ್ಟ್‍ಫೋನೇ ನಿಮಗೆ ವಿಶ್ವವಿದ್ಯಾಲಯವಾಗಬಹುದು. ಇಂತಹ ಅವಕಾಶಗಳನ್ನು ಬಳಸಿಕೊಳ್ಳಿರಿ.


ಅಪರಾಧಿಗಳ ಪತ್ತೆಗೆ “ಕ್ರಿಮಿನಾಲಜಿ”

“ಶಿಕ್ಷೆ ಇರುವುದು ಸೇಡು ತೀರಿಸಿಕೊಳ್ಳಲು ಅಲ್ಲ. ಅಪರಾಧವನ್ನು ಕಡಿಮೆ ಮಾಡಲು ಮತ್ತು ಅಪರಾಧಿಯನ್ನು ಸರಿದಾರಿಗೆ ತರುವ ಕಾರಣಕ್ಕಾಗಿ”

– ಎಲಿಜಬೆತ್ ಫ್ರೈ

ಕ್ರಿಮಿನಾಲಜಿ ಎನ್ನುವುದು ವಿಜ್ಞಾನದ ಒಂದು ಶಾಖೆಯಾಗಿದ್ದು ಅಪರಾಧಗಳ ಪತ್ತೆ ಮತ್ತು ಅಪರಾಧಗಳ ತಡೆಗಟ್ಟುವಿಕೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನಿಮಗೆ ಫೆÇೀರೆನ್ಸಿಕ್ ಸೈನ್ಸ್ ಬಗ್ಗೆ ಗೊತ್ತಿರಬಹುದು. ಇದು ಕ್ರಿಮಿನಾಲಜಿಯ ಒಂದು ಭಾಗವಷ್ಟೇ. ಭಾರತ ಸೇರಿದಂತೆ ಜಗತ್ತಿನಾದ್ಯಂತ ಅಪರಾಧಗಳು ದಿನೇದಿನೇ ಹೆಚ್ಚಾಗುತ್ತಿವೆ. ಇದರಿಂದ ಕ್ರಿಮಿನಾಲಜಿ ಓದಿರುವವರಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಕ್ರಿಮಿನಾಲಜಿ ಕ್ಷೇತ್ರವು ಸವಾಲಿನಿಂದ ಕೂಡಿದ್ದು, ಆಸಕ್ತಿದಾಯಕ ಉದ್ಯೋಗವೂ ಹೌದು.

ಕ್ರಿಮಿನಾಲಜಿ ಎನ್ನುವುದು ಸಾಕ್ಷ್ಯಾಧಾರಗಳ ವಿಜ್ಞಾನ, ಅಪರಾಧ ನಡೆದ ಸ್ಥಳದಲ್ಲಿ ದೊರಕುವ ರಕ್ತ, ಕೂದಲು, ಎಂಜಲು, ದೇಹದ ದ್ರವಗಳು, ಫಿಂಗರ್‍ಪ್ರಿಂಟ್ಸ್, ಕೆಮಿಸ್ಟ್ರಿ, ವಂಶವಾಹಿ ಗುರುತುಗಳು ಇತ್ಯಾದಿಗಳನ್ನು ವಿಶ್ಲೇಷಣೆ ಮಾಡಿ ಅಪರಾಧಗಳನ್ನು ಪತ್ತೆಹಚ್ಚಲಾಗುತ್ತದೆ ಕ್ರಿಮಿನಾಲಜಿ ಎನ್ನುವುದು ವೈಯಕ್ತಿಕ ಅಥವಾ ಸಾಮಾಜಿಕ ಅಪರಾಧದ ಅಧ್ಯಯನವಾಗಿದೆ. ಪ್ರಕರಣವೊಂದರ ಹಿನ್ನಲೆ, ಅಪರಾಧಕ್ಕೆ ಕಾರಣ, ಅಪರಾಧದ ಅಂಕಿಅಂಶಗಳು, ಅಪರಾಧಗಳ ತಡೆ, ಅಪರಾಧಗಳ ವರ್ತನೆ ಇತ್ಯಾದಿಗಳನ್ನು ಕ್ರಿಮಿನಾಲಜಿ ಅಧ್ಯಯನ ಮಾಡುತ್ತದೆ.

ಈ ಕ್ಷೇತ್ರದ ಕುರಿತು ನಿಮಗೆ ಆಸಕ್ತಿಯಿದ್ದರೆ ಈ ಮುಂದಿನ ಕೋರ್ಸ್‍ಗಳಲ್ಲಿ ಯಾವುದಾದರೂ ಒಂದನ್ನು ಮಾಡಬಹುದು. 1. ಸರ್ಟಿಫಿಕೇಷನ್ ಕೋರ್ಸ್ (ಫೋರೆನ್ಸಿಕ್ ಸೈನ್ಸ್). 2. ಡಿಪ್ಲೊಮಾ ಕೊರ್ಸ್ (ಸೈಬರ್ ಕ್ರೈಮ್) 3. ಡಿಪ್ಲೊಮಾ ಕೋರ್ಸ್ (ಫೋರೆನ್ಸಿಕ್ ಸೈನ್ಸ್ ಮತ್ತು ಕ್ರಿಮಿನಾಲಜಿ). 4. ಡಿಪ್ಲೊಮಾ ಇನ್ ಕ್ರಿಮಿನಲ್ ಲಾ (ಡಿ.ಕ್ರಿನ್). 5. ಡಿಪೆÇ್ಲಮಾ ಇನ್ ಕ್ರಿಮಿನಾಲಜಿ ಮತ್ತು ಪೆನೊಲಜಿ 6. ಬ್ಯಾಚುಲರ್ ಡಿಗ್ರಿ ಕೋರ್ಸ್ ಫೋರೆನ್ಸಿಕ್ ಸೈನ್ಸ್ ಮತ್ತು ಕ್ರಿಮಿನಾಲಜಿ). 7.ಸ್ನಾತಕೋತ್ತರ ಪದವಿ (ಫೋರೆನ್ಸಿಕ್ ಸೈನ್ಸ್ ಮತ್ತು ಕ್ರಿಮಿನಾಲಜಿ). 8.ಸ್ನಾತಕೋತ್ತರ ಪದವಿ (ಫೆÇೀರೆನ್ಸಿಕ್ ಸೈನ್ಸ್ ಮತ್ತು ಕ್ರಿಮಿನಾಲಜಿ ರಿಸರ್ಚ್). 9. ಕ್ರಿಮಿನಾಲಜಿ ಮಾಸ್ಟರ್ ಡಿಗ್ರಿ(ಎಂಎಸ್ಸಿ). 10. ಕ್ರಿಮಿನಾಲಜಿ ಮತ್ತು ಕ್ರಿಮಿನಲ್ ಜಸ್ಟಿಸ್ ಎಂಎ. 11.ಆ್ಯಂಟಿ ಟೆರರಿಸಂ ಲಾ (ಎಂಎ ಸ್ನಾತಕೋತ್ತರ). 12. ಕ್ರಿಮಿನಲ್ ಲಾ ಮತ್ತು ಕ್ರಿಮಿನಾಲಜಿ(ಎಲ್‍ಎಲ್‍ಎಂ). 13. ಕ್ರೈಮ್ಸ್ ಮತ್ತು ಟೋಟ್ರ್ಸ್ (ಎಲ್‍ಎಲ್‍ಎಂ). 14. ಕ್ರಿಮಿನಲ್ ಲಾ(ಎಲ್‍ಎಲ್‍ಎಂ). 15.ಪೆÇೀಸ್ಟ್ ಗ್ರಾಜುವೇಟ್ಡಿಪ್ಲೊಮಾ ಕೋರ್ಸ್ (ಫೆÇೀರೆನ್ಸಿಕ್ ಸೈನ್ಸ್ ಮತ್ತು ಕ್ರಿಮಿನಾಲಜಿ).

ಪಿಯುಸಿಯಲ್ಲಿ ವಿಜ್ಞಾನ ಓದಿರುವವರು ಕ್ರಿಮಿನಾಲಜಿ ಕೋರ್ಸ್‍ಗಳಿಗೆ ದಾಖಲಾತಿ ಪಡೆಯಬಹುದು. ಬಿಎ ಪದವಿ ಪೆÇ್ರೀಗ್ರಾಂಗಳಿಗೆ ಪಿಯುಸಿಯಲ್ಲಿ ಆಟ್ರ್ಸ್ ಓದಿರುವವರೂ ಸೇರಬಹುದಾಗಿದೆ. ಕ್ರಿಮಿನಾಲಜಿ ಸಂಬಂಧಪಟ್ಟ ಎಂಎ ಅಥವಾ ಎಲ್‍ಎಲ್‍ಎಂ ಕೋರ್ಸ್‍ಗಳಿಗೆ ಆಯಾ ವಿಷಯದಲ್ಲಿ ಪದವಿ ಪಡೆದವರು ಸೇರಬಹುದಾಗಿದೆ. ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಕ್ರಿಮಿನಾಲಜಿಯನ್ನು ಒಂದು ವಿಷಯವಾಗಿಯೂ ಕಲಿಯಬಹುದಾಗಿದೆ. ಸರ್ಟಿಫಿಕೇಷನ್ ಕೋರ್ಸ್‍ಗಳ ಅವಧಿ ಸಾಮಾನ್ಯವಾಗಿ 6 ತಿಂಗಳು ಇರುತ್ತದೆ. ಕೆಲವು ವಿಶ್ವವಿದ್ಯಾಲಯಗಳು 1 ವರ್ಷದ ಸರ್ಟಿಫಿಕೇಷನ್ ಸಹ ನೀಡುತ್ತವೆ.

ಬಹುತೇಕ ಕಾಲೇಜುಗಳಲ್ಲಿ ಕ್ರಿಮಿನಾಲಜಿಗೆ ಸಂಬಂಧಪಟ್ಟ ಕೋರ್ಸ್‍ಗಳನ್ನು ಕಲಿಸಲಾಗುತ್ತದೆ. ನೀವು ನಿಮ್ಮ ಹತ್ತಿರದ ಕಾಲೇಜಿನಲ್ಲಿ ಈ ಕುರಿತು ವಿಚಾರಿಸಬಹುದು. ಈ ಕೋರ್ಸ್‍ಗಳು ಲಭ್ಯವಿರುವ ಕೆಲವು ಶಿಕ್ಷಣ ಸಂಸ್ಥೆಗಳ ಹೆಸರು ಇಂತಿದೆ: ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್‍ಸ್ಟಿಟ್ಯೂಟ್.,  ಕಸ್ತೂರಿಬಾ ಮೆಡಿಕಲ್ ಕಾಲೇಜು, ಮಣಿಪಾಲ., ಡಾ. ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಬೆಂಗಳೂರು., ಎಂಎಸ್ ರಾಮಯ್ಯ ಮೆಡಿಕಲ್ ಕಾಲೇಜು, ಬೆಂಗಳೂರು., ಜವಾಹಾರ್‍ಲಾಲ್ ನೆಹರೂ ಮೆಡಿಕಲ್ ಕಾಲೇಜು, ಬೆಳಗಾವಿ., ಜೈನ್ ಯೂನಿವರ್ಸಿಟಿ, ಬೆಂಗಳೂರು., ಮಾನಸಗಂಗೋತ್ರಿ, ಮೈಸೂರು., ಬಿಎಲ್‍ಟಿಎಸ್ ಪಿಲಾನಿ, ಕರ್ನಾಟಕ., ಡಿಪಾರ್ಟ್‍ಮೆಂಟ್ ಆಫ್ ಕ್ರಿಮಿನಾಲಜಿ ಆಂಡ್ ಫೋರೆನ್ಸಿಕ್ ಸೈನ್ಸ್, , ಕುವೆಂಪು ವಿವಿ ಅಥವಾ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಭಾರತ ಮತ್ತು ವಿದೇಶದಲ್ಲಿ ಕ್ರಿಮಿನಾಲಜಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ. ಕ್ರಿಮಿನಾಲಜಿಯಲ್ಲಿ ಪದವಿ ಅಥವಾ ಡಾಕ್ಟರೇಟ್ ಪದವಿ ಪಡೆದವರನ್ನು ಕ್ರಿಮಿನಾಲಜಿಸ್ಟ್ ಎನ್ನುತ್ತಾರೆ. ಸೈಂಟಿಸ್ಟ್, ರಿಸರ್ಚ್ ಅಸಿಸ್ಟೆಂಟ್, ಕ್ರಿಮಿನಾಲಜಿಸ್ಟ್, ಫೋರೆನ್ಸಿಕ್ ಸೈಂಟಿಸ್ಟ್, ಇನ್ವೆಸ್ಟಿಗೇಟರ್ ಇತ್ಯಾದಿ ಹುದ್ದೆಗಳನ್ನು ಪಡೆಯಬಹುದು. ಸರಕಾರದ ವಿವಿಧ ಇಲಾಖೆಗಳಲ್ಲಿಯೂ ಕೆಲಸ ಪಡೆಯಬಹುದು. ಅಂದರೆ, ಫೆÇೀರೆನ್ಸಿಕ್ ಇಲಾಖೆ, ಪೆÇಲೀಸ್, ಸಂಶೋಧನಾ ಕ್ಷೇತ್ರ, ಮೆಡಿಕಲ್ ಆಸ್ಪತ್ರೆಗಳು, ಸಿಬಿಐ, ನ್ಯಾಯಾಲಯ, ಕ್ರೈಮ್ ಲ್ಯಾಬೋರೇಟರಿಗಳು, ಕಾಲೇಜುಗಳು ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸಬಹುದಾಗಿದೆ.

ಈ ಮುಂದಿನ ಹುದ್ದೆಗಳನ್ನು ಪಡೆಯಬಹುದು. ಪತ್ತೆದಾರರು, ಕ್ರೈಮ್ ಸೀನ್ ಅನಾಲಿಸ್ಟ್, ಕ್ರೈಮ್ ಲ್ಯಾಬೋರೇಟರಿ ಅನಾಲಿಸ್ಟ್, ಎಫ್‍ಬಿಐ ಏಜೆಂಟ್, ಫೋರೆನ್ಸಿಕ್ ಸರ್ಜನ್,ಫೋರೆನ್ಸಿಕ್ ಎಂಜಿನಿಯರ್,  ಪೊಲೀಸ್ ಆಫೀಸರ್, ಕ್ರೈಮ್ ಇಂಟಲಿಜೆನ್ಸ್ ಅನಾಲಿಸ್ಟ್, ಕನ್ಸೂಮರ್ ಅಡ್ವೋಕೇಟ್, ಡ್ರಗ್ ಪಾಲಿಸಿ ಅಡ್ವೈಸರ್, ಎನ್ವಾಯರ್ನ್‍ಮೆಂಟಲ್ ಪ್ರೊಟೆಕ್ಷನ್ ಅನಾಲಿಸ್ಟ್ ಇತ್ಯಾದಿ. ಈ ವಿಭಾಗದಲ್ಲಿ ಉದ್ಯೋಗ ಪಡೆಯಲು ವಿಶ್ಲೇಷಣಾತ್ಮಕ ಕೌಶಲ, ಅಪರಾಧ ಸ್ಥಳದಲ್ಲಿ ಪತ್ತೆಹಚ್ಚಬೇಕಾದ ಮಾಹಿತಿಗಳ ಅರಿವು, ಅಪರಾಧ ತಂತ್ರಗಳ ಕುರಿತು ಜ್ಞಾನ, ಅಪರಾಧಿಗಳ ವರ್ತನೆಯ ಕುರಿತು ತಿಳಿವಳಿಕೆ ಮತ್ತು ಸಂಶೋಧನಾ ಕೌಶಲ ಹೊಂದಿರಬೇಕು.


ಸೈಬರ್ ಸೆಕ್ಯೂರಿಟಿ- ಸೈಬರ್ ಕ್ಷೇತ್ರಕ್ಕೆ ಕಾವಲುಗಾರರು

“ಕೆಟ್ಟ ಹುಡುಗನಿಂದ ಅಂತರ್‍ಜಾಲವನ್ನು ಕಾಪಾಡಲು, ಇಂಟರ್‍ನೆಟ್‍ನಲ್ಲಿ ಒಳ್ಳೆಯ ಹುಡುಗ ಇರಬೇಕು”

– ಅನಾಮಿಕ

ಪ್ರತಿನಿತ್ಯ ಮಾಧ್ಯಮಗಳಲ್ಲಿ ಸೈಬರ್ ಮೋಸಕ್ಕೆ ಈಡಾದವರ ಸುದ್ದಿಗಳು ಹೆಚ್ಚಾಗುತ್ತಿವೆ. ಸೈಬರ್ ವಂಚಕರಿಂದ ಕೆಲವು ಲಕ್ಷಗಳಿಂದ ಹಲವು ಕೋಟಿ ರೂ. ಕಳೆದುಕೊಂಡವರಿದ್ದಾರೆ. ಹೊಸ ತಂತ್ರಜ್ಞಾನಗಳು ಮತ್ತು ಸಂಪರ್ಕ ಸಾಧನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಸೈಬರ್ ಅಟ್ಯಾಕ್, ಹ್ಯಾಕಿಂಗ್ ಇತ್ಯಾದಿಗಳು ಹೆಚ್ಚಾಗುತ್ತಿರುವುದರಿಂದ ಈಗ ಸೈಬರ್ ಭದ್ರತಾ ತಜ್ಞರಿಗೆ ಬೇಡಿಕೆ ಹೆಚ್ಚಿದೆ. ದೇಶದಲ್ಲೀಗ ಮೊಬೈಲ್‍ನಲ್ಲಿ ಇಂಟರ್‍ನೆಟ್ ಬಳಕೆ ಹೆಚ್ಚುತ್ತಿದೆ. ಸೋಷಿಯಲ್, ಮೊಬೈಲ್, ಅನಾಲಿಟಿಕ್ಸ್ ಮತ್ತು ಕ್ಲೌಡ್ ಕಂಪ್ಯೂಟರ್, ಇಂಟರ್‍ನೆಟ್ ಆಫ್ ಥಿಂಗ್ಸ್‍ಗಳ ಬಳಕೆ ಹೆಚ್ಚಿರುವುದರಿಂದ ನೆಟ್‍ವರ್ಕ್ ಸೆಕ್ಯೂರಿಟಿ ಎಂಜಿನಿಯರ್‍ಗಳಿಗೆ ಹೊಸ ಸವಾಲು ಎದುರಾಗಿದೆ.

ಸೈಬರ್ ಲೋಕದ ಇಂತಹ ಸವಾಲುಗಳೇ ಹೊಸ ಬಗೆಯ ಉದ್ಯೋಗಗಳನ್ನು ಇತ್ತೀಚಿನ ವರ್ಷಗಳಲ್ಲಿ ಸೃಷ್ಟಿಸಿದೆ. ಸೆಕ್ಯುರಿಟಿ ಅಡ್ಮಿನಿಸ್ಟ್ರೇಟರ್ಸ್, ಸೈಬರ್ ಸೆಕ್ಯುರಿಟಿ ಅನಾಲಿಸ್ಟ್ ಮತ್ತು ನೆಟ್‍ವರ್ಕ್ ಸೆಕ್ಯುರಿಟಿ ಸಾಫ್ಟ್‍ವೇರ್ ಎಂಜಿನಿಯರ್ ಸೇರಿದಂತೆ ಸೈಬರ್ ಭದ್ರತಾ ವಿಭಾಗದಲ್ಲಿ ಹಲವು ಉದ್ಯೋಗಗಳಿವೆ. ಇಂತಹ ಉದ್ಯೋಗ ಪಡೆಯಲು ಕಂಪ್ಯೂಟರ್ ಸೈನ್ಸ್‍ನಲ್ಲಿ ಪದವಿ ಪಡೆದಿರಬೇಕು. ಸೈಬರ್ ಸೆಕ್ಯೂರಿಟಿಯ ಯಾವುದಾದರೂ ವಿಶೇಷ ವಿಭಾಗದಲ್ಲಿಯೇ ಪದವಿ ಪಡೆದಿದ್ದರೆ ಇನ್ನೂ ಉತ್ತಮ.

ನೀವು ಕಾಲೇಜಿನಲ್ಲಿ ಓದಿದ ವಿಷಯಗಳ ಮಾನದಂಡದಲ್ಲಿಯೇ ಸೈಬರ್ ಸೆಕ್ಯೂರಿಟಿ ವಿಷಯಗಳಲ್ಲಿ ಪರಿಣತಿ ಪಡೆಯುವುದು ಸಾಧ್ಯವಿಲ್ಲ. ಯಾಕೆಂದರೆ ಈ ಕ್ಷೇತ್ರದಲ್ಲಿ ಸದಾ ಹೊಸತು ಬರುತ್ತಲೇ ಇವೆ. ಇದಕ್ಕಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿರಬೇಕು. ಈಗಿನ ಸ್ಕಿಲ್‍ಗೆ ಹೆಚ್ಚುವರಿಯಾಗಿ ಯಾವುದಾದರೂ ಸ್ಕಿಲ್ ಸೇರಿಸಲು ಸರ್ಟಿಫಿಕೇಷನ್‍ಗಳನ್ನು ಪಡೆಯಿರಿ. ನೆಟ್‍ವರ್ಕ್ ಸೆಕ್ಯೂರಿಟಿ ಅಥವಾ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನುಭವ ಇರುವವರಿಗೆ ಹೆಚ್ಚಿನ ಕಂಪನಿಗಳು ಆದ್ಯತೆ ನೀಡುತ್ತವೆ.

ಕೆಲವು ಕಂಪನಿಗಳು ಈ ಕ್ಷೇತ್ರ ಮಾತ್ರವಲ್ಲದೆ ಇದೇ ಕ್ಷೇತ್ರಕ್ಕೆ ಪೂರಕವಾದ ಇತರ ಉದ್ಯೋಗದಲ್ಲಿ ಅನುಭವ ಇರುವವರನ್ನೂ ಸೈಬರ್ ಭದ್ರತಾ ಪಡೆಗೆ ಸೇರಿಸಿಕೊಳ್ಳುತ್ತವೆ. ಉದಾಹರಣೆಗೆ ನೆಟ್‍ವರ್ಕಿಂಗ್, ಬಿಗ್ ಡೇಟಾ, ಮೊಬಿಲಿಟಿ ಇತ್ಯಾದಿ ಕ್ಷೇತ್ರದ ಅನುಭವ ಇರುವವರಿಗೂ ಮಣೆ ಹಾಕುತ್ತವೆ. ಕೋಡ್‍ಗಳ ಬಗ್ಗೆ ನೀವು ಕಲಿತಷ್ಟು ಒಳ್ಳೆಯದು. ಸಿಐಎಸ್‍ಎಸ್‍ಪಿ, ಎಸ್‍ಎಸ್‍ಸಿಪಿ, ಐಎಸ್‍ಎಸ್‍ಇಪಿ, ಐಎಸ್‍ಎಸ್‍ಎಪಿ, ಐಎಸ್‍ಎಸ್‍ಎಂಪಿ, ಸಿಎಪಿ ಮತ್ತು ಸಿಎಸ್‍ಎಸ್‍ಎಲ್‍ಪಿ ಇತ್ಯಾದಿ ಸರ್ಟಿಫಿಕೇಷನ್‍ಗಳನ್ನು ಐಎಸ್‍ಸಿ2 ಮತ್ತು ಐಎಸ್‍ಎಸಿಎ ಎಂಬೆರಡು ನಾನ್ ಪ್ರಾಫಿಟ್ ಸಂಸ್ಥೆಗಳು ನೀಡುತ್ತವೆ. ಇಂತಹ ಸಂಸ್ಥೆಗಳಲ್ಲಿ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದರೆ ನಿಮಗೆ ಸೈಬರ್ ಭದ್ರತಾ ವಿಭಾಗದಲ್ಲಿ ಉದ್ಯೋಗ ಪಡೆಯುವುದು ಸುಲಭವಾಗಬಹುದು.

ಈ ಉದ್ಯೋಗ ಪಡೆಯಬೇಕಾದರೆ ಕ್ಲಿಷ್ಟವಾದ ನೆಟ್‍ವರ್ಕ್ ಸೆಕ್ಯೂರಿಟಿಯ ವ್ಯವಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಸಾಮಥ್ರ್ಯ ನಿಮ್ಮಲ್ಲಿ ಇರಬೇಕು. ಐಟಿ ಸೆಕ್ಯೂರಿಟಿ ವಿಭಾಗದಲ್ಲಿ ಕರಿಯರ್ ರೂಪಿಸಲು ಬಯಸುವವರು ಕೇವಲ ನೆಟ್‍ವರ್ಕ್ ಡಯಾಗ್ರಾಂ ರಚಿಸಲು ಕಲಿತರೆ ಸಾಲದು. ತಾವು ರಚಿಸಿದ ನೆಟ್‍ವರ್ಕ್ ಎಷ್ಟು ಸುಭದ್ರವಾಗಿದೆ ಎಂದು ತಿಳಿದುಕೊಳ್ಳಬೇಕು. ಈಗಾಗಲೇ ಸೈಬರ್ ಭದ್ರತಾ ವಿಭಾಗದಲ್ಲಿ ಸಕ್ರಿಯರಾಗಿರುವ ವೃತ್ತಿಪರರು ನೀಡಿರುವ ಸೆಮಿನಾರ್‍ಗಳನ್ನು ಗಮನಿಸುತ್ತಿರಿ. ವೃತ್ತಿಪರ ಸೋಷಿಯಲ್ ನೆಟ್‍ವರ್ಕ್ ತಾಣಗಳಲ್ಲಿ ಇಂತವರೊಂದಿಗೆ ಕನೆಕ್ಟ್ ಆಗಿರಿ. ಅವರೊಂದಿಗೆ ಸಲಹೆ ಸೂಚನೆಗಳನ್ನು ಪಡೆಯುತ್ತಿರಿ. ನೆಟ್‍ವರ್ಕ್ ಸೆಕ್ಯೂರಿಟಿ ತಜ್ಞರಿಗೆ ಬೇಡಿಕೆ ಹೆಚ್ಚಾಗುತ್ತಿರುವುದಕ್ಕೆ ಪೂರಕವಾಗಿ ಸಾಕಷ್ಟು ಶೈಕ್ಷಣಿಕ ಸಂಸ್ಥೆಗಳು ಹುಟ್ಟಿಕೊಂಡಿವೆ. ಕೆಲವು ಸಂಸ್ಥೆಗಳು ಸೈಬರ್ ಸೆಕ್ಯೂರಿಟಿ ವಿಷಯದಲ್ಲಿಯೇ ಕೋರ್ಸ್‍ಗಳನ್ನು ನೀಡುತ್ತಿವೆ. ಇವುಗಳನ್ನು ನೀವು ಅಧ್ಯಯನ ಮಾಡಬಹುದಾಗಿದೆ.

ಖಾಸಗಿ ಕಂಪನಿಗಳಲ್ಲಿ ಮಾತ್ರವಲ್ಲದೆ ಸರಕಾರದ ಸೈಬರ್ ವಿಭಾಗಗಳಲ್ಲಿಯೂ ಉದ್ಯೋಗಾವಕಾಶ ಇರುತ್ತದೆ. ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಅವಶ್ಯಕತೆ ಇರುವುದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಪರಿಣತರ ಲಭ್ಯತೆಯಿದೆ. ಭವಿಷ್ಯದಲ್ಲಿ ಜಗತ್ತು ಇನ್ನಷ್ಟು ಸೈಬರ್‍ಮಯವಾಗುವುದರಿಂದ ಈ ಹುದ್ದೆಗೂ ಉತ್ತಮ ಭವಿಷ್ಯವಿದೆ. ಹೀಗಾಗಿ, ಈ ವಿಷಯಗಳ ಕಲಿಕೆಯಿಂದ ನೀವು ನಿಮ್ಮ ಭವಿಷ್ಯವನ್ನು ಬದಲಾಯಿಸಿಕೊಳ್ಳಬಹುದು.


ಲಾಯರ್ ಆಗುವುದು ಹೇಗೆ?

“ಉತ್ತಮ ವಕೀಲರಿಗೆ ಕಾನೂನು ಬಗ್ಗೆ ತಿಳಿದಿರುತ್ತದೆ. ಅತ್ಯುತ್ತಮ ಲಾಯರ್‍ಗೆ ನ್ಯಾಯಮೂರ್ತಿ ಬಗ್ಗೆ ಅರಿವಿರುತ್ತದೆ”  

– ಅನಾಮಿಕ

ಕೋರ್ಟ್‍ನಲ್ಲಿ ಕಪ್ಪು ಕೋಟ್ ಧರಿಸಿ ವಾದ- ಪ್ರತಿವಾದ ಮಾಡುವ, ಅಪರಾಧಿಗಳಿಗೆ ಶಿಕ್ಷೆ ನೀಡಿಸುವ, ನಿರಾಪರಾಧಿಗಳನ್ನು ಪಾರುಮಾಡುವ ವಕೀಲರನ್ನು ಕಂಡರೆ ನಿಮಗೆ ಗೌರವ ಇರಬಹುದು. ನಿಮ್ಮ ಊರಿನಲ್ಲಿ, ಬಂಧುಬಳಗದಲ್ಲಿ ಅಥವಾ ಟೀವಿಗಳಲ್ಲಿ ಕಾಣುವ ಅಥವಾ ಕೋರ್ಟ್‍ಗಳಲ್ಲಿ ಕಾಣಿಸುವ ವಕೀಲರನ್ನು ಕಂಡಾಗ ನಾನೂ ಭವಿಷ್ಯದಲ್ಲಿ ಲಾಯರ್ ಆಗಬೇಕು ಎಂದು ನೀವು ಕನಸು ಕಂಡಿರಬಹುದು. ದೇಶದ ಪ್ರಮುಖ ಅಂಗಗಳಲ್ಲಿ ಒಂದಾದ ನ್ಯಾಯಾಂಗದಲ್ಲಿ ಕಾರ್ಯನಿರ್ವಹಿಸಲು ಕಾನೂನು ಕ್ಷೇತ್ರವು ಒಂದು ಪ್ರಮುಖ ಆಯ್ಕೆಯಾಗಿದೆ. ವಕೀಲರಾಗಿ, ಜಡ್ಜ್ ಆಗಿ ಮುಂದೊಂದು ದಿನ ನೀವು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯೂ ಆಗಿ ಕರ್ನಾಟಕಕ್ಕೆ ಹೆಸರು ತರಬಹುದು. ನಿಮ್ಮ ಭವಿಷ್ಯವನ್ನು ಈ ರೀತಿ ಬದಲಾಯಿಸಲು ಇಚ್ಚಿಸಿದರೆ ಮೊದಲಿಗೆ ನೀವು ಕಾನೂನು ಪದವಿಯನ್ನು ಅಧ್ಯಯನ ಮಾಡಬೇಕು.

ಕಾನೂನು ಪದವಿ ಅಧ್ಯಯನ ನಡೆಸಲು ಎರಡು ಆಯ್ಕೆಗಳಿವೆ. ನೀವು ಪಿಯುಸಿ ಬಳಿಕ ಐದು ವರ್ಷದ ಎಲ್‍ಎಲ್‍ಬಿ ಕೋರ್ಸ್‍ಗೆ ಸೇರಬಹುದು ಅಥವಾ ಪದವಿ ಮುಗಿಸಿ (3ವರ್ಷ) ಎಲ್‍ಎಲ್‍ಬಿ ಕೋರ್ಸ್ ಮಾಡಬಹುದು. ಎಲ್‍ಎಲ್‍ಬಿ ನಂತರ ಎಲ್‍ಎಲ್‍ಎಂನಂತಹ ಉನ್ನತ ಶಿಕ್ಷಣವನ್ನು ಪಡೆಯಬಹುದು. ಎಲ್‍ಎಲ್‍ಬಿ ಹಂತದಲ್ಲಿಯೇ ಕಾನೂನಿಗೆ ಸಂಬಂಧಪಟ್ಟ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿರಿ. ಪ್ರತಿನಿತ್ಯ ಕಾನೂನುಲೋಕದಲ್ಲಿ ನಡೆಯುವ ವಿದ್ಯಮಾನಗಳ ಕುರಿತು ಗಮನಹರಿಸಿರಿ. ಪ್ರತಿದಿನ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನೀಡುವ ವಿಶೇಷ ತೀರ್ಪುಗಳನ್ನು ಗಮನಿಸಿರಿ.

ಮೂರು ವರ್ಷದ ಕಾನೂನು ಪದವಿಯಲ್ಲಿ ಕ್ರಿಮಿನಲ್ ಲಾ, ಜ್ಯೂರಿಸ್‍ಪ್ರುಡೆನ್ಸ್, ಬಿಸ್ನೆಸ್ ಲಾ, ಇಂಟಲೆಕ್ಚವಲ್ ಪ್ರಾಪರ್ಟಿ ಲಾ ಇತ್ಯಾದಿಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ನೀವು ಪದವಿಯಲ್ಲಿ ಬಿಎ ಅಥವಾ ಬಿಬಿಎ ಓದಿರುವಿರೋ ಎಂಬ ಆಧಾರದಲ್ಲಿ ವಿಷಯಗಳನ್ನು ಓದಬೇಕಾಗುತ್ತದೆ. ನೀವು 5 ವರ್ಷದ ಕೋರ್ಸ್ ಆಯ್ಕೆ ಮಾಡಿಕೊಡರೆ ಕಾಮರ್ಸ್ ಸಂಬಂಧಿತ ವಿಷಯಗಳು ಅಥವಾ ಕಲಾ ವಿಭಾಗಕ್ಕೆ ಸಂಬಂಧಿತ ವಿಷಯಗಳಾದ ಸಮಾಜಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ ಇತ್ಯಾದಿಗಳನ್ನು ಕಾನೂನು ವಿಷಯಗಳೊಂದಿಗೆ ಅಧ್ಯಯನ ಮಾಡಬೇಕಾಗುತ್ತದೆ.

“ಕಾನೂನು ಪದವಿ ಉತ್ತೀರ್ಣರಾದ ನಂತರ ರಾಜ್ಯದ ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ವಕೀಲಿ ವೃತ್ತಿಗೆ ವ್ಯಕ್ತಿ ಸೂಕ್ತರಾಗಿದ್ದಾರೆಯೇ ಎಂದು ತಿಳಿಯಲು ಔಪಚಾರಿಕ ಸಂದರ್ಶನವನ್ನೂ ನಡೆಸಲಾಗುತ್ತದೆ. ಸುಮಾರು ಹತ್ತು ವರ್ಷಗಳ ಹಿಂದೆ ಇಷ್ಟು ಪ್ರಕ್ರಿಯೆ ಮುಗಿದ ಬಳಿಕ ವಕೀಲಿ ವೃತ್ತಿ ಆರಂಭಿಸಬಹುದಿತ್ತು. ವಕಾಲತಿಗೆ ಸಹಿ ಹಾಕಬಹುದಿತ್ತು. ಆದರೆ, ಈಗ ಆಲ್ ಇಂಡಿಯಾ ಬಾರ್ ಕೌನ್ಸಿಲ್ ಎಗ್ಸಾಂ ಬರೆದು ಉತ್ತೀರ್ಣರಾಗಬೇಕು. ಇಷ್ಟಾದ ಬಳಿಕ ನೀವು ಅಧಿಕೃತಕವಾಗಿ ವಕೀಲರಾಗಬಹುದು. ಕೆಲವೊಂದು ರಾಜ್ಯಗಳಲ್ಲಿ ಅಭ್ಯರ್ಥಿಯ ವಿರುದ್ಧ ಯಾವುದಾದರೂ ಪೊಲೀಸ್ ಪ್ರಕರಣಗಳು ಇರುವುದೇ ಎಂದು ತಿಳಿಯಲು ಪೊಲೀಸ್ ದೃಢೀಕರಣವೂ ನಡೆಯುತ್ತದೆ. ಕರ್ನಾಟಕಕ್ಕೆ ಸದ್ಯ ಈ ವಿಧಾನ ಬಂದಿಲ್ಲ. ಇಷ್ಟು ಪ್ರಕ್ರಿಯೆ ಮುಗಿದ ಬಳಿಕ ನೀವು ಯಾವುದೇ ರಾಜ್ಯದಲ್ಲಿಯೂ ವಕೀಲ ವೃತ್ತಿ ಮಾಡಬಹುದು” (ಪೂರಕ ಮಾಹಿತಿ ಒದಗಿಸಿರುವುದು ಬೆಂಗಳೂರಿನ ಜನಪ್ರಿಯ ವಕೀಲರಾದ ಜಯಪ್ರಕಾಶ್ ರೈ ಬೆಳ್ಳಾರೆ)

ಪದವಿ ಮುಗಿದ ಬಳಿಕ ಈಗಾಗಲೇ ವಕೀಲಿ ವೃತ್ತಿಯಲ್ಲಿ ಸಾಕಷ್ಟು ಹೆಸರುಮಾಡಿರುವ ಹಿರಿಯ ವಕೀಲರ ಬಳಿ ಜೂನಿಯರ್ ಲಾಯರ್ ಆಗಿ ಸುಮಾರು 5-7 ವರ್ಷ ಕಾರ್ಯನಿರ್ವಹಿಸಿ. ನೀವು ಕಾನೂನು ಪದವಿಯಲ್ಲಿ ಓದಿರುವುದಕ್ಕಿಂತ ಹಲವು ಪಟ್ಟು ಜ್ಞಾನ ದೊರಕುತ್ತದೆ. ಮುಖ್ಯವಾಗಿ ಪ್ರ್ಯಾಕ್ಟಿಕಲ್ ಜ್ಞಾನವನ್ನು ಇಲ್ಲಿ ಪಡೆಯಬಹುದು. ಪ್ರತಿನಿತ್ಯ ಕೋರ್ಟ್ ಕಲಾಪಗಳಲ್ಲಿ ಭಾಗವಹಿಸುವುದು, ಕಕ್ಷಿದಾರರನ್ನು ಭೇಟಿಯಾಗುವುದು ಇತ್ಯಾದಿಗಳನ್ನು ಮಾಡಬೇಕಾಗುತ್ತದೆ. ಮುಖ್ಯವಾಗಿ ಕೋರ್ಟ್‍ನಲ್ಲಿ ಯಾವ ವಕೀಲರು ಹೇಗೆ ವಾದ ಮಾಡುತ್ತಾರೆ? ಯಾರ ವಾದ-ಪ್ರತಿವಾದ ಪರಿಣಾಮಕಾರಿಯಾಗಿದೆ? ಯಾವ ರೀತಿ ವಾದ ಮಾಡಬಾರದು? ಜಡ್ಜ್ ಅವರೊಂದಿಗೆ ಹೇಗೆ ವರ್ತಿಸಬೇಕು? ಕಕ್ಷಿದಾರರೊಂದಿಗೆ ಹೇಗೆ ವ್ಯವಹರಿಸಬೇಕು? ಅತ್ಯುತ್ತಮ ಸಾಕ್ಷಿ ಕಲೆಹಾಕುವುದು ಹೇಗೆ? ಒಂದು ಪ್ರಕರಣಕ್ಕೆ ಪೂರಕವಾದ ಇತರೆ ಪ್ರಕರಣಗಳ ತೀರ್ಪುಗಳ ಅಧ್ಯಯನ ಮಾಡುವಿಕೆ ಸೇರಿದಂತೆ ಈ ಹಂತದಲ್ಲಿ ನೀವು ಸಾಕಷ್ಟು ವಿಷಯಗಳನ್ನು ಕಲಿಯಬಹುದು.

ನೆನಪಿಡಿ, ಅಪರಾಧಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಲಾ ಓದಿರುವವರಿಗೆ ಬೇಡಿಕೆ ಇರುವುದು ನಿಜ. ಆದರೆ, ದೇಶದಲ್ಲಿ ಇಂದು ಸಾಕಷ್ಟು ವಕೀಲರು ಇದ್ದಾರೆ. ಲಾ ಕಾಲೇಜುಗಳ ಸಂಖ್ಯೆಯೂ ಹೆಚ್ಚಿದೆ. ಇಲ್ಲಿ ಹೆಚ್ಚು ಪ್ರತಿಭೆ ಇರುವವರು ಮಾತ್ರ ಉನ್ನತ ಹಂತ ತಲುಪಲು ಸಾಧ್ಯವಾಗುತ್ತದೆ. ಹೀಗಾಗಿ ಪದವಿ ಮುಗಿಸಿದ ಬಳಿಕ ಸಾಕಷ್ಟು ಹೆಸರುಮಾಡಿರುವ, ನಿಮಗೆ ಕಲಿಯಲು ಹೆಚ್ಚು ಅವಕಾಶ ಒದಗಿಸುವ ಹಿರಿಯ ವಕೀಲರ ಬಳಿ ಪ್ರಾಕ್ಟೀಸ್ ಮಾಡಿರಿ.

ಸುಮಾರು 5-7 ವರ್ಷ ಜೂನಿಯರ್ ಆಗಿ ಕಾರ್ಯನಿರ್ವಹಿಸಿದ ಬಳಿಕ ನೀವು ಸ್ವಂತವಾಗಿ ವಕೀಲರಾಗಿ ಅಥವಾ ಅಡ್ವೋಕೆಟ್ ಆಗಿ ವೃತ್ತಿಜೀವನ ಆರಂಭಿಸಬಹುದು. ಇಂತಹ ಸಮಯದಲ್ಲಿ ನೀವು ನಿಮ್ಮದೇ ಸ್ವಂತ ಆಫೀಸ್ ತೆರೆಯಬಹುದು. ಕ್ಲಯೆಂಟ್‍ಗಳನ್ನು ಪಡೆಯಬಹುದು. ಹೀಗೆ, ಒಂದಿಷ್ಟು ವರ್ಷ ಅನುಭವ ಪಡೆದ ಸಮಯದಲ್ಲಿ ಕೋರ್ಟ್ ನೇಮಕಗಳ ಕುರಿತೂ ಗಮನಹರಿಸಿರಿ. ಜಿಲ್ಲಾ ನ್ಯಾಯಾಲಯದ ಜಡ್ಜ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದಾಗ ಅರ್ಜಿ ಸಲ್ಲಿಸಿರಿ. ಈ ರೀತಿ ಹಂತಹಂತವಾಗಿ ಜಿಲ್ಲಾ ನ್ಯಾಯಾಲಯದ ಜಡ್ಜ್, ಸರಕಾರಿ ಅಭಿಯೋಜಕರು, ಹೈಕೋರ್ಟ್ ಜಡ್ಜ್, ಸುಪ್ರೀಂಕೋರ್ಟ್ ಜಡ್ಜ್ ಇತ್ಯಾದಿ ಹುದ್ದೆಗಳಿಗೆ ಏರುತ್ತ ಹೋಗಬಹುದು.

ಕಾನೂನು ಪದವಿ ಓದಿರುವವರನ್ನು ಕಾರ್ಪೊರೆಟ್ ಸಂಸ್ಥೆಗಳೂ ನೇಮಕ ಮಾಡಿಕೊಳ್ಳುತ್ತವೆ. ನೀವು ಲೀಗಲ್ ಅಡ್ವೈಸರ್ ಆಗಿ ಕಂಪನಿಗಳಲ್ಲಿ ಉದ್ಯೋಗ ಪಡೆಯಬಹುದು. ಬ್ಯಾಂಕ್‍ಗಳು ಸಹ ಕಾನೂನು ಪದವೀಧರರನ್ನು ನೇಮಕ ಮಾಡಿಕೊಳ್ಳುತ್ತವೆ. ನಾಗರಿಕ ಸೇವಾ ಪರೀಕ್ಷೆಯನ್ನೂ ಬರೆಯಬಹುದು. ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪಡೆದು ಕಾನೂನು ವಿಷಯದಲ್ಲಿ ಬೋಧಕರಾಗಬಹುದು. ಕಾನೂನು ಪಂಡಿತರಾಗಬಹುದು. ಕಾನೂನು ಸಲಹೆಗಾರರಾಗಬಹುದಾಗಿದೆ.


ಷೇರುಪೇಟೆಯಲ್ಲಿ ಉದ್ಯೋಗ ಪಡೆಯುವುದು ಹೇಗೆ?

“ಷೇರುಪೇಟೆ ಕುರಿತು ಪ್ರತಿದಿನ ಕಲಿಯಿರಿ. ಆದರೆ, ಇತರರ ಅನುಭವದಿಂದ ಕಲಿಯಿರಿ. ಯಾಕೆಂದರೆ, ಅದು ಅಗ್ಗವಾಗಿದೆ. ನಿಮ್ಮ ಅನುಭವದಿಂದ ಕಲಿತರೆ ದುಬಾರಿಯಾಗುತ್ತದೆ”

– ಜಾನ್ ಬೊಗ್ಲೆ, ತೆರಿಗೆ ತಜ್ಞ

ಷೇರುಪೇಟೆಯೆಂದರೆ ಒಂದಿಷ್ಟು ಜನರಿಗೆ ಏನೋ ಆಕರ್ಷಣೆ. ಇಲ್ಲಿ ಹಣ ಹೂಡಿಕೆ ಮಾಡಿದರೆ ಮುಂದೊಂದು ದಿನ ಬಂಪರ್ ಹೊಡೆಯಬಹುದು. ಪ್ರತಿದಿನದ ವಹಿವಾಟಿನ ಏರಿಳಿತದಲ್ಲಿ ಸಾಕಷ್ಟು ಹಣ ಸಂಪಾದಿಸಬಹುದು. ದುಡಿದ ಒಂದಿಷ್ಟು ಹಣವನ್ನು ಷೇರುಪೇಟೆಯಲ್ಲಿ ತೊಡಗಿಸುತ್ತಾರೆ. ಷೇರುಪೇಟೆ ಸಂಬಧಿಂತ ಉದ್ಯೋಗ ಹೆಚ್ಚಿನವರಿಗೆ ಅಚ್ಚುಮೆಚ್ಚು. ಸೆನ್ಸೆಕ್ಸ್ ಗೂಳಿ ಕರಡಿ ಕುಣಿತಕ್ಕೆ ತಕ್ಕಂತೆ ಗ್ರಾಹಕರನ್ನು ನಿರ್ವಹಿಸುವ ಪಾತ್ರವದು. ಷೇರು ವಹಿವಾಟಿಗೆ ಸಾಥ್ ನೀಡುವ ಬ್ರೋಕಿಂಗ್ ಹೌಸ್‍ಗಳು, ಸೆಕ್ಯುರಿಟೀಸ್ ಕಂಪನಿಗಳು ಷೇರುಪೇಟೆಯ ಜ್ಞಾನವಿರುವ ಚತುರರನ್ನು ನೇಮಿಸಿಕೊಳ್ಳುತ್ತವೆ. ಅಲ್ಲಿ ಈಕ್ವಿಟಿ ಡೀಲರ್, ಟ್ರೇಡ್ ಎಕ್ಸಿಕ್ಯೂಟಿವ್ಸ್, ವೆಬ್ ಅಸಿಸ್ಟ್ ಡೀಲರ್ಸ್, ಷೇರ್ ಕನ್ಸಲ್ಟೆಂಟ್ ಸೇರಿದಂತೆ ಹಲವು ಬಗೆಯ ಉದ್ಯೋಗಾವಕಾಶಗಳಿವೆ. ಇಲ್ಲಿ ಮಾತ್ರವಲ್ಲದೆ ಷೇರು ವಿನಿಮಯ ಕೇಂದ್ರಗಳಲ್ಲಿಯೂ ಅವಕಾಶ ಪಡೆಯಬಹುದು.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಎನ್‍ಎಸ್‍ಇ ಮತ್ತು ಮುಂಬೈ ಷೇರುಪೇಟೆ ಬಿಎಸ್‍ಇ ಇತರ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಲ್ಪಾವಧಿಯ ಕೋರ್ಸ್‍ಗಳನ್ನು ನಡೆಸಿ ಸರ್ಟಿಫಿಕೇಟ್‍ಗಳನ್ನು ಕೊಡುತ್ತವೆ. ಆನ್‍ಲೈನ್‍ನಲ್ಲೂ ಇಂತಹ ಕೋರ್ಸ್‍ಗಳನ್ನು ಕಲಿಯುವ ಅವಕಾಶವಿದೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವು(ಎನ್‍ಎಸ್‍ಐ) ಈ ನಿಟ್ಟಿನಲ್ಲಿ ಸರ್ಟಿಫೈಡ್ ಕ್ಯಾಪಿಟಲ್ ಮಾರ್ಕೆಟ್ ಪೆÇ್ರಫೆಷನಲ್(ಎನ್‍ಸಿಸಿಎಂಪಿ) ಎಂಬ ಕ್ಲಾಸ್ ರೂಂ ಕೋರ್ಸ್ ನಡೆಸುತ್ತದೆ. ಇದು 100 ಗಂಟೆ ಕೋರ್ಸ್. ಅಂದರೆ, 3-4 ತಿಂಗಳ ಅವಧಿಯದ್ದಾಗಿದೆ. ಈ ಅವಧಿಯಲ್ಲಿ ಬಂಡವಾಳ ಮಾರುಕಟ್ಟೆಗೆ ಸಂಬಂಧಿಸಿದ ಥಿಯರಿ ಮತ್ತು ಪ್ರಾಕ್ಟಿಕಲ್ ಕ್ಲಾಸ್‍ಗಳಿರುತ್ತವೆ. ಈ ಕೋರ್ಸ್‍ನಲ್ಲಿ ಪಾಸಾದವರಿಗೆ ಎನ್‍ಎಸ್‍ಇ ಮತ್ತು ಕೋರ್ಸ್ ನೀಡಿರುವ ಶಿಕ್ಷಣ ಸಂಸ್ಥೆ ಜೊತೆಯಾಗಿ ಸರ್ಟಿಫಿಕೇಟ್ ನೀಡುತ್ತವೆ. ಈಕ್ವಿಟಿ ಮಾರುಕಟ್ಟೆ, ಡೆಪ್ಟ್ ಮಾರ್ಕೆಟ್, ಡಿರೈವಿಟಿವ್ಸ್, ಮ್ಯಾಕ್ರೊ ಎಕಾನಮಿಕ್ಸ್, ಟೆಕ್ನಿಕಲ್ ಅನಾಲಿಸಿಸ್, ಫಂಡಮೆಂಟಲ್ ಅನಾಲಿಸಿಸ್ ಸಬ್ಜೆಕ್ಟ್‍ಗಳ ಬಗ್ಗೆ ಈ ಕೋರ್ಸ್‍ನಲ್ಲಿ ತಿಳಿದುಕೊಳ್ಳಬಹುದು.

ಮುಂಬೈ ಷೇರು ವಿನಿಮಯ ಕೇಂದ್ರ ಬಿಎಸ್‍ಇ ತನ್ನದೇ ವಿದ್ಯಾಸಂಸ್ಥೆಯನ್ನು ಹೊಂದಿದೆ. ಬಿಎಸ್‍ಇ ಇನ್‍ಸ್ಟಿಟ್ಯೂಟ್ ಲಿಮಿಟೆಡ್‍ನಲ್ಲಿ ಷೇರುಪೇಟೆಗೆ ಸಂಬಂಧಿಸಿದ ಕಡಿಮೆ ಅವಧಿಯ ಮತ್ತು ದೀರ್ಘಾವಧಿಯ ಕೋರ್ಸ್‍ಗಳಿವೆ. ಸರ್ಟಿಫಿಕೇಟ್ ಆನ್ ಕ್ಯಾಪಿಟಲ್ ಮಾರ್ಕೆಟ್ ಕೋರ್ಸ್‍ನಲ್ಲಿ ಷೇರುಪೇಟೆಯ ಬಗ್ಗೆ ವಿಸ್ತೃತವಾಗಿ ಕಲಿಯಬಹುದು. ಈ ಕೋರ್ಸ್‍ಗೆ ಫೈನಾನ್ಶಿಯಲ್ ಮತ್ತು ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಯುಜಿಸಿ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿಯಲ್ಲಿ ಶೇಕಡ 50ಕ್ಕಿಂತ ಹೆಚ್ಚು ಅಂಕ ಪಡೆದವರು ಈ ಕೋರ್ಸ್ ಮಾಡಬಹುದು.

ಆನ್‍ಲೈನ್‍ನಲ್ಲಿಯೂ ಷೇರುಪೇಟೆಗೆ ಸಂಬಂಧಪಟ್ಟ ವಿವಿಧ ಕೋರ್ಸ್‍ಗಳು ಇವೆ. ನೀವು ಯಾವ ಹುದ್ದೆ ಪಡೆಯಬೇಕೋ ಅದಕ್ಕೆ ಸಂಬಂಧಪಟ್ಟ ಕೋರ್ಸ್‍ಗಳನ್ನು ಮಾಡಬಹುದು.

ಎನ್‍ಎಸ್‍ಇ ಅಂಗೀಕೃತ ಇಲರ್ನ್‍ಮಾರ್ಕೆಟ್ ವೆಬ್‍ಸೈಟ್‍ನಲ್ಲಿ ಷೇರುಪೇಟೆಗೆ ಸಂಬಂಧಪಟ್ಟ ಕೋರ್ಸ್‍ಗಳಿವೆ. ಇಲ್ಲಿ 83ಕ್ಕೂ ಹೆಚ್ಚು ಬೋಧನಾ ವಿಷಯಗಳು, 100ಕ್ಕೂ ಹೆಚ್ಚು ಬೋಧನಾ ವಿಡಿಯೋಗಳಿವೆ. ಷೇರುಪೇಟೆಯ ಬೇಸಿಕ್ಸ್ ವಿಷಯಗಳಿಂದ ಸಮಗ್ರ ಅ`À್ಯಯನದವರೆಗೆ ಕಲಿಯುವ ಅವಕಾಶವಿದೆ. ಆನ್‍ಲೈನ್ ಕೋರ್ಸ್‍ನಲ್ಲಿ ಎನ್‍ಎಸ್‍ಇ ಸರ್ಟಿಫಿಕೇಟ್ ಮಾತ್ರವಲ್ಲದೆ ಇತರ ಜಾಬ್ ಓರಿಯೆಂಟೆಡ್ ಸರ್ಟಿಫಿಕೇಟ್ ದೊರಕುತ್ತದೆ. ಪ್ರತಿಯೊಂದು ಚಾಪ್ಟರ್ ಮುಗಿದ ನಂತರ ಆನ್‍ಲೈನ್ ಪರೀಕ್ಷೆ ಸಹ ನಡೆಯುತ್ತದೆ. ಪಾಸಾದರೆ ಸರ್ಟಿಫಿಕೇಟ್ ನಿಮ್ಮದಾಗುತ್ತದೆ.

ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರು ಐಐಟ್ರೇಡ್ ವೆಬ್‍ಸೈಟ್‍ನಲ್ಲಿ ಷೇರು ಮಾರುಕಟ್ಟೆಗೆ ಸಂಬಂಧಪಟ್ಟ ಕೋರ್ಸ್ ಮಾಡಬಹುದು. ಇಲ್ಲಿ ಮೂರು ಹಂತದ ಕೋರ್ಸ್‍ಗಳಿವೆ. ಲೆವೆಲ್ 1ರಲ್ಲಿ  ಫೈನಾನ್ಸಿಯಲ್ ಮಾರ್ಕೆಟ್ಸ್, ಮ್ಯೂಚುಯಲ್ ಫಂಡ್ಸ್ ಬಗ್ಗೆ ತಿಳಿದುಕೊಳ್ಳಬಹುದು. ಲೆವೆಲ್ 2ನಲ್ಲಿ ಬಂಡವಾಳ ಮಾರುಕಟ್ಟೆ, ಕರೆನ್ಸಿ ಮಾರುಕಟ್ಟೆ, ಕಮಾಡಿಟಿ ಮಾರುಕಟ್ಟೆ, ಡಿರೈಟಿವ್ ಮಾರ್ಕೆಟ್, ಫೈನಾನ್ಸಿಯಲ್ ಅಡ್ವೈಸರಿ ಸರ್ವೀಸಸ್ ಬಗ್ಗೆ ಕೋರ್ಸ್ ಮಾಡಬಹುದು. ಮೂರನೇ ಲೆವೆಲ್‍ನಲ್ಲಿ ಅನಾಲಿಸ್ಟ್ ಸಂಬಂಸಿದ ಕೋರ್ಸ್‍ಗಳಿವೆ. ಇದರಲ್ಲಿ ಸರ್ಟಿಫೈಡ್ ಈಕ್ವಿಟಿ ಅನಾಲಿಸ್ಟ್, ಸರ್ಟಿಫೈಡ್ ಟೆಕ್ನಿಕಲ್ ಅನಾಲಿಸ್ಟ್ ಕೋರ್ಸ್‍ಗಳಿವೆ. ಕೊನೆಗೆ ಐಐಟ್ರೇಡ್ ಮತ್ತು ಎನ್‍ಎಸ್‍ಇ ಜೊತೆಯಾಗಿ ಸರ್ಟಿಫಿಕೇಟ್ ನೀಡುತ್ತವೆ.

ದಲಾಲ್‍ಸ್ಟ್ರೀಟ್ ಅಕಾಡೆಮಿಯೂ ಆನ್‍ಲೈನ್‍ನಲ್ಲಿ ಷೇರುಪೇಟೆ ಸರ್ಟಿಫಿಕೇಟ್ ಕೋರ್ಸ್ ನಡೆಸುತ್ತಿದೆ. ಕೋರ್ಸ್ ಹೆಸರು ಸರ್ಟಿಫಿಕೇಟ್ ಇನ್ ಸ್ಟಾರ್ಕ್ ಮಾರ್ಕೆಟ್ ಆ್ಯಂಡ್ ಈಕ್ವಿಟಿ ರಿಸರ್ಚ್. ಈ ಕೋರ್ಸ್‍ಗೆ ಈಗಾಗಲೇ ವೃತ್ತಿಯಲ್ಲಿರುವವರು, ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರು ಸೇರಬಹುದು. ಇಲ್ಲಿ ಒಟ್ಟು ನಾಲ್ಕು ಮಾಡ್ಯುಲ್‍ಗಳಲ್ಲಿ ಕಲಿಸಲಾಗುತ್ತದೆ. ಮಾಡ್ಯುಲ್ 1ರಲ್ಲಿ ಹೂಡಿಕೆಯ ಬೇಸಿಕ್ಸ್, ಈಕ್ವಿಟಿ ಷೇರುಗಳ ಬಗ್ಗೆ, ಐಪಿಒ, ಸೆಕೆಂಡರಿ ಮಾರ್ಕೆಟ್, ಟ್ರೇಡಿಂಗ್, ಕ್ಲೀಯರಿಂಗ್ ಮತ್ತು ಸಟ್ಲ್‍ಮೆಂಟ್ ಬಗ್ಗೆ ಕಲಿಯಬಹುದು. ಮಾಡ್ಯುಲ್ 2ರಲ್ಲಿ ಎಕಾನಮಿಕ್ಸ್, ಇಂಡಸ್ಟ್ರಿ, ಕಂಪನಿ, ಟೆಕ್ನಿಕಲ್ ಅನಾಲಿಸಿಸ್ ಬಗ್ಗೆ ಕಲಿಯಬಹುದು. ಮಾಡ್ಯುಲ್‍ನಲ್ಲಿ ಷೇರು ಹೂಡಿಕೆ, ಹೂಡಿಕೆದಾರರ ವರ್ತನೆಗಳು, ಆನ್‍ಲೈನ್ ವಹಿವಾಟು, ಶಾರ್ಟ್ ಟರ್ಮ್ ಟ್ರೇಡಿಂಗ್, ಪೆÇೀಟ್‍ಪೆÇೀಲಿಯೊ ಮ್ಯಾನೇಜ್‍ಮೆಂಟ್ ಬಗ್ಗೆ ತಿಳಿದುಕೊಳ್ಳಬಹುದು. ಮಾಡ್ಯುಲ್ 4ರಲ್ಲಿ ಮ್ಯೂಚುಯಲ್ ಫಂಡ್ಸ್, ಈಕ್ವಿಟಿ ಡಿರೈಟಿವ್ಸ್, ಕಮಾಡಿಟಿಸ್ ಮತ್ತು ಕಮಾಡಿಟಿಸ್ ಟ್ರೇಡಿಂಗ್ ಬಗ್ಗೆ ಕಲಿಯಬಹುದು. ಇವೆಲ್ಲದರ ನಂತರ ಲೈವ್ ಪ್ರಾಜೆಕ್ಟ್ ಮತ್ತು ಫೈನಲ್ ಎಗ್ಸಾಂ ಇರುತ್ತದೆ.


ಡೇಟಾ ಸೈಂಟಿಸ್ಟ್- ಅತ್ಯಧಿಕ ಬೇಡಿಕೆಯ ಉದ್ಯೋಗ

“ಬಿಗ್‍ಡೇಟಾ ವಿಶ್ಲೇಷಣೆ ಇಲ್ಲದೆ ಇದ್ದರೆ ಕಂಪನಿಗಳು ಕಿವುಡು ಮತ್ತು ಕುರುಡು ಜಿಂಕೆಗಳಂತೆ ದಾರಿ ಕಾಣದೆ ಅಲೆದಾಡಬೇಕಾಗಬಹುದು”

– ಜಿಯೊಫ್ರಿ ಮೊರೆ

ಬಿಗ್ ಡೇಟಾ ಕ್ಷೇತ್ರದಲ್ಲಿ ಈಗ ವಿಫುಲ ಉದ್ಯೋಗಾವಕಾಶವಿದೆ. ಜುಲೈ 2018ರ ವರದಿಯೊಂದರ ಪ್ರಕಾರ ದೇಶದಲ್ಲಿ ಡೇಟಾ ವಿಜ್ಞಾನಿಗಳಿಗೆ ಬೇಡಿಕೆ ಇರುವಷ್ಟು ಪ್ರತಿಭಾನ್ವಿತರ ಪೂರೈಕೆಯಾಗುತ್ತಿಲ್ಲವಂತೆ. ಅಂದರೆ, 100 ಡೇಟಾ ಸೈಂಟಿಸ್ಟ್ ಉದ್ಯೋಗ ಲಭ್ಯವಿದ್ದರೆ, ಅದಕ್ಕೆ ಸಂಬಂಧಪಟ್ಟ ಪರಿಣತಿ ಪಡೆದವರು 20ಕ್ಕಿಂತಲೂ ಕಡಿಮೆ ಇದ್ದಾರಂತೆ. ಈಗ ಎಲ್ಲವೂ ಆನ್‍ಲೈನ್ ಮಯವಾಗುತ್ತಿದ್ದು, ಇಂಟರ್‍ನೆಟ್‍ನೊಳಗೆ ಅಗಾಧ ಮಾಹಿತಿಗಳು ತುಂಬುತ್ತಿವೆ. ಹೀಗಾಗಿ, ಭವಿಷ್ಯದಲ್ಲಿ ಇದು ಅತ್ಯುತಮ ಬೇಡಿಕೆಯ ಉದ್ಯೋಗವಾಗಿರಲಿದೆ. ಇದಕ್ಕೆ ಸಂಬಂಧಪಟ್ಟ ಕೋರ್ಸ್ ಕಲಿತು ಒಂದಿಷ್ಟು ಅನುಭವ ಸಂಪಾದಿಸಿದರೆ ಅತ್ಯುತ್ತಮ ವೇತನದ ಆಫರ್ ಅನ್ನು ಕೇಳಬಹುದು.

ಬಿಗ್ ಡೇಟಾ ಲೋಕದಲ್ಲಿ ಡೇಟಾ ವಿಜ್ಞಾನಿಯಾಗಲು ಬಯಸುವುದಿದ್ದರೆ ಶಾಲಾ ಕಾಲೇಜು ಹಂತದಲ್ಲಿಯೇ ಕಂಪ್ಯೂಟರ್ ಕುರಿತು ಆಸಕ್ತಿ ಬೆಳೆಸಿಕೊಳ್ಳಿ. ಇಂಟರ್‍ನೆಟ್‍ನಲ್ಲಿ ಲಭ್ಯವಿರುವ ಉಚಿತ ಕೋರ್ಸ್‍ಗಳನ್ನು ಬಿಡುವಿನ ವೇಳೆಯಲ್ಲಿ ಕಲಿಯಿರಿ. ರಾಜ್ಯದಲ್ಲಿ ಅಥವಾ ಹೊರರಾಜ್ಯದಲ್ಲಿ ಲಭ್ಯವಿರುವ ಬಿಗ್‍ಡೇಟಾ ಸಂಬಂಧಪಟ್ಟ ಪದವಿ, ಸರ್ಟಿಫಿಕೇಷನ್ ಕೋರ್ಸ್‍ಗಳಿಗೆ ಸೇರಿರಿ. ಈಗ ಬಹುತೇಕ ಶಿಕ್ಷಣ ಸಂಸ್ಥೆಗಳು ಬಿಗ್ ಡೇಟಾವನ್ನು ತಮ್ಮ ಪಠ್ಯಕ್ರಮದಲ್ಲಿ ಸೇರಿಸಿಕೊಳ್ಳುತ್ತಿವೆ. ಆದರೆ, ಎಲ್ಲಾ ಕಾಲೇಜುಗಳಲ್ಲಿಯೂ ಇದಕ್ಕೆ ಸಂಬಂಧಪಟ್ಟ ಪರಿಣತರು ಇರುತ್ತಾರೆ ಎನ್ನುವಂತೆ ಇಲ್ಲ. ಹೀಗಾಗಿ, ಈ ವಿಭಾಗದಲ್ಲಿ ಹೆಸರುಪಡೆದಿರುವ ಶಿಕ್ಷಣ ಸಂಸ್ಥೆಗಳನ್ನೇ ಆಯ್ಕೆ ಮಾಡಿಕೊಳ್ಳಿರಿ.

ಡೇಟಾ ಸೈಂಟಿಸ್ಟ್ ಆಗಲು ಫೌಂಡೇಷನ್ ಅಥವಾ ಅಡ್ವಾನ್ಸಡ್ ಕೋರ್ಸ್ ಕಲಿಯೋದು ಉತ್ತಮ. ಫೌಂಡೇಷನ್‍ನಲ್ಲಿ ಪೈಥಾನ್ ವಿಷಯದಲ್ಲಿ ಬೇಸಿಕ್ಸ್, ಇಂಟರ್‍ಮಿಡಿಯೇಟ್ ಮತ್ತು ಅಡ್ವಾನ್ಸಡ್ ವಿಷಯಗಳನ್ನು ಕಲಿಯಬಹುದು. ಅಂಕಿಅಂಶ, ಸಂಭಾವನಿಯತೆ, ರೇಖಾತ್ಮಕ ಬೀಜಗಣಿತ, ರೇಖೀಯ ಹಿಂಜರಿತ, ಸಮಯ ಸರಣಿ ಮತ್ತು ಕಾಸ್ಟ್ ಫಂಕ್ಷನ್, ಡೇಟಾದ ವಿಧಗಳು, ಪರಿಶೋಧನೆಯ ಮಾಹಿತಿ ವಿಶ್ಲೇಷಕಗಳು, ವಿಶ್ಲೇಷಣೆಗಾಗಿ ಡೇಟಾವನ್ನು ಸಂಗ್ರಹಿಸುವುದು, ಹೊರತೆಗೆಯುವುದು, ಪ್ರಶ್ನಿಸುವುದು, ಸ್ವಚ್ಛಗೊಳಿಸುವುದು ಮತ್ತು ಒಟ್ಟುಗೂಡಿಸುವುದು, ಡೇಟಾ ಸೋರ್ಸಸ್, ಕ್ಲೀನಿಂಗ್ ಮತ್ತು ವ್ರಾಂಗ್ಲಿಂಗ್, ಎಪಿಐಗಳ ಜೊತೆ ಕೆಲಸ ಮಾಡುವುದು ಮತ್ತು ವೆಬ್ ಸ್ಕ್ರಾಪಿಂಗ್ ಇತ್ಯಾದಿ ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.

ಅಡ್ವಾನ್ಸಡ್ ಅಥವಾ ಸುಧಾರಿತ ಬಿಗ್ ಡೇಟಾ ಸೈಂಟಿಸ್ಟ್‍ಗೆ ಸಂಬಂಧಪಟ್ಟ ಕೋರ್ಸ್‍ನಲ್ಲಿ ಡಿಸಿಷನ್ ಟ್ರೀಸ್, ಕಂಡಿಷನಲ್ ಟ್ರೀಸ್, ಸಮನ್ವಯ ತಂತ್ರಗಳು, ಬಿಗ್ ಡೇಟಾ ಮತ್ತು ಹಡೂಪ್ ಎಕೊಸಿಸ್ಟಮ್ ಮತ್ತು ಸ್ಪಾರ್ಕ್, ಎಚ್‍ಡಿಎಫ್‍ಎಸ್ ಆರ್ಕಿಟೆಕ್ಚರ್, ಹೈವ್ ಕ್ಯೂಎಲ್, ಪಿಗ್, ಡೇಟಾದ ಜೊತೆಗೆ ಕತೆ ಹೇಳುವುದು, ಟಾಬ್ಲೂ, ನೈವ್ ಬಯೆಸ್, ಎನ್‍ಎಲ್‍ಪಿ, ಟೆಕ್ಸ್ಟ್ ಕ್ಲಸ್ಟರಿಂಗ್, ಎನ್‍ಎಲ್‍ಟಿಕೆ ಇತ್ಯಾದಿ ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.

ನಿಮಗೆ ಗೊತ್ತಿರಲಿ. ಕಂಪ್ಯೂಟರ್, ತಂತ್ರಜ್ಞಾನ ಸಂಬಂಧಪಟ್ಟ ಉದ್ಯೋಗಗಳಿಗೆ ಈ ರೀತಿ ಕೇವಲ ಥಿಯರಿ ಜ್ಞಾನ ಸಾಕಾಗುವುದಿಲ್ಲ. ಇಲ್ಲಿ ನೀವು ಸಾಕಷ್ಟು ಕೆಲಸ ಮಾಡಿ ಅನುಭವ ಸಂಪಾದಿಸಬೇಕು. ಪ್ರ್ಯಾಕ್ಟಿಕಲ್ ಮತ್ತು ಥಿಯರಿಟಿಕಲ್ ಜ್ಞಾನಗಳೆರಡರ ನೆರವಿನಿಂದ ನೀವು ಡೇಟಾ ವಿಜ್ಞಾನಿಯಾಗಿ ಅದ್ಭುತ ಯಶಸ್ಸು ಗಳಿಸಬಹುದು.

ಈಗ ಬಹುತೇಕ ವ್ಯವಹಾರಗಳು ಆನ್‍ಲೈನ್ ಮೂಲಕವೇ ನಡೆಯುತ್ತದೆ. ಇ-ಕಾಮರ್ಸ್ ಕಂಪನಿಗಳೂ ಹೆಚ್ಚಾಗಿವೆ. ಸ್ಮಾರ್ಟ್‍ಫೋನ್ ಅಪ್ಲಿಕೇಷನ್‍ಗಳು, ಕಂಪನಿ ವೆಬ್‍ಸೈಟ್‍ಗಳು, ಸೋಷಿಯಲ್ ಮೀಡಿಯಾಗಳು ಪ್ರತಿನಿಮಿಷಕ್ಕೆ ಹಲವು ಟ್ರಿಲಿಯನ್ ಜಿಬಿ ಡೇಟಾ ಸೃಜಿಸುತ್ತವೆ. ಅಧ್ಯಯನವೊಂದರ ಪ್ರಕಾರ ಡೇಟಾ ವಿಜ್ಞಾನಿಗಳಿಗೆ ಬೇಡಿಕೆ ಶೇಕಡ 400ರಷ್ಟು ಹೆಚ್ಚಾಗಿದೆ. ಈ ವಿಷಯದಲ್ಲಿ ಶಿಕ್ಷಣ ಮತ್ತು ಪರಿಣತಿ ಪಡೆದವರಿಗೆ ಉದ್ಯೋಗಾವಕಾಶ ಸಿಗುವುದು ಕಷ್ಟವಾಗದು.


ಡೇಟಾಬೇಸ್ ಡೆವಲಪರ್ ಅಥವಾ ಎಸ್‍ಕ್ಯುಎಲ್ ಡೆವಲಪರ್

“ನೀವು ಇಷ್ಟಪಡುವ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನಂತರ ನೀವು ಯಾವುದೇ ದಿನ ಕೆಲಸ ಮಾಡುವ ಅವಶ್ಯಕತೆಯಿಲ್ಲ!”

– ಕನ್‍ಫ್ಯೂಸಿಯಸ್

ಕೈತುಂಬಾ ವೇತನ ದೊರಕುವ ಇತ್ತೀಚಿನ ಉದ್ಯೋಗಗಳಲ್ಲಿ ಮತ್ತು ಅತ್ಯುತ್ತಮ ಭವಿಷ್ಯವಿರುವ ಉದ್ಯೋಗಗಳಲ್ಲಿ ಡೇಟಾಬೇಸ್ ಡೆವಲಪರ್/ ಎಸ್‍ಕ್ಯುಎಲ್ ಡೆವಲಪರ್ ಪ್ರಮುಖವಾದದ್ದು. ವಿನ್ಯಾಸಗೊಳಿಸಿದ ಪ್ರಶ್ನೆ ಭಾಷೆ ಅಥವಾ ಸ್ಟ್ರಕ್ಚರ್ಡ್ ಕ್ವಾರಿ ಲ್ಯಾಂಗ್ವೇಜ್(ಎಸ್‍ಕ್ಯುಎಲ್) ಡೇಟಾ ಬೇಸ್‍ಗಳ ವಿನ್ಯಾಸ, ಅನುಷ್ಠಾನ ಮತ್ತು ನಿರ್ವಹಣೆಯ ಕೆಲಸವನ್ನು ಇವರು ಮಾಡುತ್ತಾರೆ.

ನೀವೂ ಎಸ್‍ಕ್ಯುಎಲ್ ಡೆವಲಪರ್ ಆಗಿ ನಿಮ್ಮ ಭವಿಷ್ಯವನ್ನು ಬದಲಾಯಿಸಿಕೊಳ್ಳಲು ಉದ್ದೇಶಿಸಿದ್ದರೆ ಅತ್ಯುತ್ತಮ ವಿಶ್ಲೇಷಣಾತ್ಮಕ(ಅನಾಲಿಟಿಕಲ್), ಸಂವಹನ ಮತ್ತು ಸಮಸ್ಯೆ ಬಗೆಹರಿಸುವ ಕೌಶಲ ಹೊಂದಿರಬೇಕು. ಎಸ್‍ಕ್ಯುಎಲ್ ಸರ್ವರ್‍ಗಳು, ಸರ್ವರ್ ಇಂಟಿಗ್ರೇಷನ್ ಸರ್ವೀಸಸ್(ಎಸ್‍ಎಸ್‍ಐಎಸ್) ಮತ್ತು ಸರ್ವರ್ ರಿಪೋರ್ಟಿಂಗ್ ಸರ್ವೀಸಸ್(ಎಸ್‍ಎಸ್‍ಆರ್‍ಎಸ್) ಜ್ಞಾನ ಹೊಂದಿರುವುದು ಅತ್ಯಂತ ಅಗತ್ಯವಾಗಿದೆ.

ಮೊದಲಿಗೆ ಕಂಪ್ಯೂಟರ್ ವಿಜ್ಞಾನ ಅಥವಾ ಕಂಪ್ಯೂಟರ್ ಮಾಹಿತಿ ವ್ಯವಸ್ಥೆ(ಸಿಐಎಸ್) ಅಥವಾ ಸಂಬಂಧಪಟ್ಟ ವಿಷಯಗಳಲ್ಲಿ ಪದವಿ ಪಡೆಯಿರಿ. ಈ ಪದವಿಯಲ್ಲಿ ಹೆಚ್ಚಾಗಿ ಕಂಪ್ಯೂಟರ್ ನೆಟ್‍ವರ್ಕಿಂಗ್ ಮತ್ತು ಪ್ರೋಗ್ರಾಮಿಂಗ್ ಮತ್ತು ಡೇಟಾಬೇಸ್ ನಿರ್ವಹಣೆ ಇತ್ಯಾದಿ ಕೌಶಲಗಳನ್ನು ಪಡೆಯಬಹುದು. ಇದರೊಂದಿಗೆ ಬೀಜಗಣಿತ, ಕಲನಶಾಸ್ತ್ರ(ಛಿಚಿಟಛಿuಟus) ಮತ್ತು ಕಂಪ್ಯೂಟರ್ ಕ್ರಮಾವಳಿಗಳಲ್ಲಿಯೂ ಪರಿಣತಿ ಪಡೆಯಬೇಕು. ಕೇವಲ ಪದವಿ ಕಲಿಕೆಗೆ ಸೀಮಿತರಾಗಬೇಡಿ. ಇಂಟರ್ನ್‍ಶಿಪ್‍ಗಳಲ್ಲಿ ಪಾಲ್ಗೊಳ್ಳಿ. ಪಾರ್ಟ್‍ಟೈಂ ಕೆಲಸವನ್ನೂ ಮಾಡಬಹುದು. ಆನ್‍ಲೈನ್‍ನಲ್ಲಿ ಲಭ್ಯವಿರುವ ಇತ್ತೀಚಿನ ತಂತ್ರಜ್ಞಾನಗಳ ಕುರಿತಾದ ಜ್ಞಾನವನ್ನು ನಿಮ್ಮದಾಗಿಸಿಕೊಳ್ಳಿರಿ.

ಈ ಹುದ್ದೆಯಲ್ಲಿ ನೀವು ಕೈತುಂಬಾ ವೇತನ ಪಡೆಯಬೇಕಾದರೆ ಆರಂಭಿಕವಾಗಿ ಒಂದಿಷ್ಟು ಉದ್ಯೋಗದ ಅನುಭವವನ್ನು ನಿಮ್ಮದಾಗಿಸಿಕೊಳ್ಳಬೇಕು. ಡೇಟಾಬೇಸ್ ಸಿಸ್ಟಮ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸಿ. ನೀವು ಯಶಸ್ವಿ ಎಸ್‍ಕ್ಯುಎಲ್ ಡೆವಲಪರ್ ಆಗಬೇಕಾದರೆ ಇದು ಅತ್ಯಂತ ಮುಖ್ಯವಾಗಿದೆ. ಈಗ ಪ್ರೋಗ್ರಾಮರ್ಸ್ ಅಥವಾ ಡೆವಲಪರ್ಸ್ ಆಗಿಯೂ ಆರಂಭಿಕ ಹುದ್ದೆಯನ್ನು ಪಡೆಯಬಹುದಾಗಿದೆ.

ಈ ವಿಭಾಗಕ್ಕೆ ಸಂಬಂಧಪಟ್ಟ ಸರ್ಟಿಫಿಕೇಷನ್‍ಗಳನ್ನು ಪಡೆದುಕೊಳ್ಳಿರಿ. ಉದಾಹರಣೆಗೆ ಮೈಕ್ರೋಸಾಫ್ಟ್‍ನ ಎಂಸಿಪಿಡಿ, ಒರಾಕಲ್‍ನ ಪಿಎಲ್/ಎಸ್‍ಕ್ಯುಎಲ್ ಡೆವಲಪರ್ ಸರ್ಟಿಫೈಡ್ ಅಸೋಸಿಯೇಟ್ ಇತ್ಯಾದಿಗಳನ್ನು ನಿಮ್ಮದಾಗಿಸಿಕೊಳ್ಳಿ. ಇವೆಲ್ಲ ನಿಮ್ಮಲ್ಲಿ ಇದ್ದರೆ ನಿಮ್ಮ ರೆಸ್ಯೂಂನ ತೂಕ ಹೆಚ್ಚುತ್ತದೆ. ಅತ್ಯುತ್ತಮ ವೇತನ ನೀಡುವ ಮತ್ತು ನಿಮಗೆ ಬೆಳೆಯಲು ಸಾಕಷ್ಟು ಅವಕಾಶ ಇರುವ ಕಂಪನಿಗಳಿಗೆ ಅರ್ಜಿ ಸಲ್ಲಿಸಿ.


ಬಿಗ್ ಡೇಟಾ ಲೋಕದಲ್ಲಿ ಇನ್ನೂ ಹತ್ತು ಹಲವು ಉದ್ಯೋಗಗಳಿವೆ. ಇವೆಲ್ಲ ಅತ್ಯುತ್ತಮ ವೇತನ ನೀಡುವ ಉದ್ಯೋಗಗಳಾಗಿವೆ. ಇವುಗಳಿಗೆ ಕಲಿಯಬೇಕಾದ ಪದವಿ, ಕೌಶಲಗಳಲ್ಲಿ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಆಯಾ ಹುದ್ದೆಗೆ ಸಂಬಂಧಪಟ್ಟ ವಿಷಯಗಳು, ಕೋರ್ಸ್‍ಗಳನ್ನು ಮಾಡಿರಬೇಕಾಗುತ್ತದೆ. ಈ ಹಿಂದೆ ತಿಳಿಸಿದ ಡೇಟಾ ವಿಜ್ಞಾನಿ, ಎಸ್‍ಕ್ಯುಎಲ್ ಡೆವಲಪರ್ಸ್ ರೀತಿಯೇ ಇವುಗಳಿಗೆ ನೀವು ಅಧ್ಯಯನ ನಡೆಸಬೇಕಾಗುತ್ತದೆ. ಬಿಗ್ ಡೇಟಾ ಕ್ಷೇತ್ರದ ಕೆಲವು ಹುದ್ದೆಗಳ ಸಂಕ್ಷಿಪ್ತ ವಿವರವನ್ನು ಮುಂದೆ ನೀಡಲಾಗಿದೆ.


ಡೇಟಾ ಅನಾಲಿಸ್ಟ್ ಆಗುವುದು ಹೇಗೆ?

“ನಾನು 9 ಸಾವಿರ ಅತ್ಯುತ್ತಮ ಚಿತ್ರಗಳನ್ನು ಶೂಟ್ ಮಾಡಲಾಗದೆ ಸೋತೆ, 300 ಆಟಗಳಲ್ಲಿ ಸೋತೆ. ಪ್ರತಿಬಾರಿಯೂ ಸೋತಾಗ ಗೆದ್ದೇ ಗೆಲ್ಲುವೆ ಎಂದುಕೊಂಡೆ. ಮತ್ತೆಮತ್ತೆ ಸೋತೆ. ಇದೇ ಕಾರಣಕ್ಕೆ ಈಗ ನಾನು ಯಶಸ್ಸು ಪಡೆದಿರುವೆ”

– ಮೈಕಲ್ ಜೋರ್ಡನ್

ಬೃಹತ್ ಪ್ರಮಾಣದಲ್ಲಿರುವ ಡೇಟಾದ ಜೊತೆಗೆ ಕೆಲಸ ಮಾಡುವ ವಿಶ್ಲೇಷಕರು ಇವರು. ಕಂಪನಿಗಳು ಅತ್ಯುತ್ತಮ ನಿರ್ಣಯ ಕೈಗೊಳ್ಳಲು ಇವರು ನೀಡುವ ಮಾಹಿತಿಯು ನೆರವಾಗುತ್ತದೆ. ಆರೋಗ್ಯ ಸೇವೆಯಿಂದ ಹಣಕಾಸು, ರಿಟೇಲ್ ಮತ್ತು ತಂತ್ರಜ್ಞಾನ ಸೇರಿದಂತೆ ಬಹುತೇಕ ಉದ್ಯಮಗಳಲ್ಲಿ ಇವರು ಕಾರ್ಯನಿರ್ವಹಿಸುತ್ತಾರೆ. ಹೆಚ್ಚಾಗಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಇವರು ಕಾರ್ಯನಿರ್ವಹಿಸುತ್ತಾರೆ. ಸಮಸ್ಯೆ ಬಗೆಹರಿಸುವುದನ್ನು, ಸಂವಹನವನ್ನು ಇಷ್ಟಪಡುವವರಿಗೆ ಇದು ಅತ್ಯುತ್ತಮ ಉದ್ಯೋಗವಾಗಿದೆ.

ಈ ಉದ್ಯೋಗ ಪಡೆಯಬೇಕಾದರೆ ಮೊದಲು ಕನಿಷ್ಠ ಬ್ಯಾಚುಲರ್ ಪದವಿ ಪಡೆದಿರಬೇಕು. ಪದವಿಯಲ್ಲಿ ಗಣಿತ, ಅಂಕಿಅಂಶ, ಅರ್ಥಶಾಸ್ತ್ರ, ಮಾರ್ಕೆಟಿಂಗ್, ಹಣಕಾಸು ಅಥವಾ ಕಂಪ್ಯೂಟರ್ ವಿಜ್ಞಾನ ಇತ್ಯಾದಿ ಯಾವುದಾದರೂ ವಿಷಯವನ್ನು ಓದಿರಬೇಕು. ಡೇಟಾ ಅನಾಲಿಸ್ಟ್ ವಿಭಾಗದಲ್ಲಿ ಉನ್ನತ ಹುದ್ದೆಗಳು ಸಿಗಬೇಕಾದರೆ ಸ್ನಾತಕೋತ್ತರ, ಪಿಎಚ್.ಡಿ ಇತ್ಯಾದಿ ವಿದ್ಯಾರ್ಹತೆ ಇರಬೇಕಾಗುತ್ತದೆ. ಇದರೊಂದಿಗೆ ಯಾವುದಾದರೂ ಸರ್ಟಿಫಿಕೇಷನ್ ಪಡೆದಿದ್ದರೆ ಇನ್ನೂ ಉತ್ತಮ. ಈ ಹಿಂದೆ ಬಿಗ್ ಡೇಟಾಗೆ ಸಂಬಂಧಪಟ್ಟ ಉದ್ಯೋಗಗಳಿಗೆ ತಿಳಿಸಿದ ಆಲ್ಜಿಬ್ರಾ, ಸ್ಟ್ಯಾಟಿಸ್ಟಿಕ್ಸ್, ಕೋಡಿಂಗ್, ಪ್ರೋಗ್ರಾಮಿಂಗ್, ಪ್ರಸಂಟೇಷನ್ ಇತ್ಯಾದಿ ಕೌಶಲ ನಿಮಗಿರಬೇಕು. ಇದರೊಂದಿಗೆ ಮೈಕ್ರೊಸಾಪ್ಟ್ ಎಕ್ಸೆಲ್‍ನಲ್ಲಿ ಸಂಪೂರ್ಣ ಪರಿಣತಿ ನಿಮಗೆ ಇರಬೇಕಾಗುತ್ತದೆ. ಡೇಟಾ ವಿಶ್ಲೇಷಣೆಗೆ ಮೆಷಿನ್ ಲರ್ನಿಂಗ್ ತಂತ್ರವು ತಿಳಿದಿರುವುದು ಅತ್ಯಂತ ಅವಶ್ಯಕವಾಗಿದೆ. ಮೆಷಿನ್ ಲರ್ನಿಂಗ್‍ನಲ್ಲಿ ಮೇಲ್ವಿಚಾರಣೆ ಬಯಸುವ ಮೆಷಿನ್ ಲರ್ನಿಂಗ್(ಸೂಪರ್‍ವೈಸ್ಡ್ ಲರ್ನಿಂಗ್), ಮೇಲ್ವಿಚಾರಣೆ ಬಯಸದ(ಅನ್‍ಸೂಪರ್‍ವೈಸ್ಡ್) ಲರ್ನಿಂಗ್ ಮತ್ತು ಬಲವರ್ಧನೆಯ (ರಿಇನ್‍ಫೋರ್ಸ್‍ಮೆಂಟ್) ಕಲಿಕೆ ಎಂಬ ಮೂರು ವಿಧಗಳಿವೆ.

ಇಂತಹ ಶೈಕ್ಷಣಿಕ ಅರ್ಹತೆ ಮತ್ತು ಕೌಶಲಗಳನ್ನು ಪಡೆದ ಬಳಿಕ ಇದಕ್ಕೆ ಸಂಬಂಧಪಟ್ಟ ಉದ್ಯೋಗಗಳಿಗೆ ಸೇರಿ ಅನುಭವ ಪಡೆಯಿರಿ. ನಿಮ್ಮ ಕೆಲಸದ ಅನುಭವ ಹೆಚ್ಚಾದಂತೆ ಒಳ್ಳೆಯ ವೇತನದ ಆಫರ್ ನಿಮಗೆ ದೊರಕಬಹುದು.

***

ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಆಗುವುದು ಹೇಗೆ?

ವೈಫಲ್ಯ ಎಂದರೆ ನೀವು ಸೋತಿರಿ ಎಂದಲ್ಲ. ನೀವು ಇನ್ನೂ ಯಶಸ್ಸು ಪಡೆದಿಲ್ಲವೆಂದರ್ಥ”

– ರಾಬರ್ಟ್ ಎಚ್. ಸ್ಕುಲ್ಲರ್

ಈಗಷ್ಟೇ ನಾವು ಚರ್ಚಿಸಿದ ಡೇಟಾಬೇಸ್ ಡೆವಲಪರ್ ಹುದ್ದೆಗೂ ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಹುದ್ದೆಗೂ ಕೊಂಚ ವ್ಯತ್ಯಾಸವಿದೆ. ಹೆಸರೇ ಹೇಳುವಂತೆ ಈ ಹುದ್ದೆಯ ಕೆಲಸ ಆಡಳಿತದ್ದು. ಕೆಲವು ಕಂಪನಿಗಳಲ್ಲಿ ಈ ಕೆಲಸವನ್ನು ಡೇಟಾಬೇಸ್ ಮ್ಯಾನೇಜರ್ ಮಾಡುತ್ತಾರೆ. ಇಲ್ಲಿ ಡೇಟಾಬೇಸ್ ಕಾರ್ಯದಕ್ಷತೆಯ ಮೇಲೆ ನಿಗಾ ಇಟ್ಟು, ಯಾವುದೇ ಹಾನಿ, ಪ್ರತಿಕೂಲ ಪರಿಣಾಮ ಉಂಟಾಗದಂತೆ ನೋಡಿಕೊಳ್ಳುವುದು ಇವರ ಕಾರ್ಯ. ಕೆಲವೊಮ್ಮೆ ವೆಬ್‍ಸೈಟ್‍ಗೆ ಅತ್ಯಧಿಕ ಪ್ರಮಾಣದಲ್ಲಿ ಟ್ರಾಫಿಕ್ (ತುಂಬಾ ಜನರು ಒಂದೇ ಸಾರಿ ಭೇಟಿ ನೀಡುವುದು) ಬರಬಹುದು. ಇಂತಹ ಸಮಯದಲ್ಲಿ ವೆಬ್‍ಸೈಟ್ ಕ್ರಾಷ್ ಉಂಟಾಗಬಹುದು. ಈ ರೀತಿ ಆಗದಂತೆ ನೋಡಿಕೊಳ್ಳುವುದು ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಕಾರ್ಯವಾಗಿದೆ. ಇದರೊಂದಿಗೆ ಇವರು ಐಟಿ ಭದ್ರತಾ ವೃತ್ತಿಪರರ ಜೊತೆ ಡೇಟಾ ಭದ್ರತೆ ಖಾತ್ರಿ ಪಡಿಸಿಕೊಳ್ಳಲು ಕಾರ್ಯನಿರ್ವಹಿಸಬೇಕಾಗುತ್ತದೆ.

ಈ ಹುದ್ದೆ ಪಡೆಯಲು ಮೊದಲು ಕಂಪ್ಯೂಟರ್ ಅಡ್ಮಿನಿಸ್ಟ್ರೇಷನ್ ಸಿಸ್ಟಮ್ಸ್‍ನಲ್ಲಿ ಪದವಿ ಪಡೆಯಿರಿ. ಇದಕ್ಕೆ ಪೂರಕವಾದ ಇತರೆ ವಿಷಯಗಳಲ್ಲಿಯೂ ಪದವಿ ಪಡೆಯಬಹುದು. ಡೇಟಾಬೇಸ್ ರಚನೆ, ವೆಬ್‍ಪೇಜ್ ಅಪ್ಲಿಕೇಷನ್ಸ್, ಡೇಟಾಬೇಸ್ ಸಿಸ್ಟಮ್ಸ್, ಡೇಟಾ ಸ್ಟ್ರಕ್ಚರ್ ಮತ್ತು ಮೈನಿಂಗ್, ಡೇಟಾಬೇಸಸ್ ಮತ್ತು ಡಿಸ್ಟ್ರಿಬ್ಯೂಟೆಡ್ ಸಿಸ್ಟಮ್ಸ್, ಡೇಟಾ ಕಮ್ಯುನಿಕೇಷನ್ಸ್ ಮತ್ತು ಡೇಟಾಬೇಸ್ ಮ್ಯಾನೇಜ್‍ಮೆಂಟ್ ಇತ್ಯಾದಿ ವಿಷಯಗಳನ್ನು ಕಲಿಯಬೇಕಾಗುತ್ತದೆ. ನಂತರ ಡೇಟಾಬೇಸ್ ಡೆವಲಪರ್ ಅಥವಾ ಡೇಟಾಬೇಸ್ ಅನಾಲಿಸ್ಟ್ ಇತ್ಯಾದಿ ಹುದ್ದೆಗಳನ್ನು ಪಡೆಯಿರಿ. ಇಲ್ಲಿ ಅನುಭವ ಪಡೆದ ನಂತರ ಮುಂದೊಂದು ದಿನ ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಹುದ್ದೆಗೆ ಪ್ರಯತ್ನಿಸಬಹುದು.

***

ಡೇಟಾ ಮಾಡೆಲರ್ (ಅಥವಾ ಮಾಡ್ಯುಲರ್) ಆಗುವುದು ಹೇಗೆ?

“ಭವಿಷ್ಯದ ಕುರಿತು ಅತ್ಯುತ್ತಮ ಮುನ್ನೋಟ ಪಡೆಯಲು ನೀವೇ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ನನ್ನ ಭವಿಷ್ಯದಲ್ಲಿ ಏನೋ ಬರೆದಿದೆ. ಹಾಗೆಯೇ ಆಗಲಿ ಎಂದು ಕಾಯುತ್ತ ಕೂರುವುದಲ್ಲ”

– ಅಬ್ರಾಹಂ ಲಿಂಕನ್

ಡೇಟಾ ಮಾಡೆಲರ್‍ಗಳು ಕಂಪ್ಯೂಟರ್ ವ್ಯವಸ್ಥೆಯಲ್ಲಿ ಎಲ್ಲಾ ಮಾಹಿತಿ ಅಥವಾ ಡೇಟಾವನ್ನು ಸಂಘಟಿಸಲು ನೆರವಾಗುತ್ತಾರೆ. ಆಯಾ ಉದ್ಯಮಕ್ಕೆ ತಕ್ಕಂತೆ ಇವರ ಕೆಲಸದ ರೀತಿ ರಿವಾಜುಗಳು ಬೇರೆಬೇರೆ ರೀತಿಯಾಗಿರುತ್ತವೆ. ಇವರು ಹೆಚ್ಚು ಸಂಕೀರ್ಣವಾಗುವ ಸಂಗತಿಗಳನ್ನು ಸರಳವಾಗಿ ಮಾಡುವಂತೆ ಮಾಡುತ್ತಾರೆ. ಇದು ಸಂಪೂರ್ಣವಾಗಿ ಕಂಪ್ಯೂಟರ್ ಅವಲಂಬಿತ ಕರಿಯರ್ ಆಗಿದೆ.

ಡೇಟಾ ಮಾಡೆಲರ್ ಆಗಬೇಕಿದ್ದರೆ ನೀವು ಆರಂಭದಲ್ಲಿ ಕಂಪ್ಯೂಟರ್ ವಿಜ್ಞಾನ, ಮಾಹಿತಿ ವಿಜ್ಞಾನ ಅಥವಾ ಅನ್ವಯಿಕ ಗಣಿತ ವಿಷಯದಲ್ಲಿ ಪದವಿ ಪಡೆಯಿರಿ. ನಂತರ ಎಂಬಿಎ ಅಥವಾ ಬಿಸ್ನೆಸ್ ಅಥವಾ ಇನ್‍ಫಾರ್ಮೆಷನ್ ಸಿಸ್ಟಮ್ಸ್ ಮ್ಯಾನೇಜ್‍ಮೆಂಟ್ ಇತ್ಯಾದಿ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರೆ ಹೆಚ್ಚು ಅವಕಾಶಗಳು ದೊರಕುತ್ತವೆ.

ಶಿಕ್ಷಣ ಪಡೆದ ಬಳಿಕ ಇಂಟರ್ನ್‍ಷಿಪ್, ಆರಂಭಿಕ ಅನುಭವಕ್ಕಾಗಿ ಕೆಲಸಕ್ಕೆ ಸೇರಿರಿ. ಇಲ್ಲಿ ಡೇಟಾ ನಿರ್ವಹಣೆ, ಡೇಟಾ ಮರುರಚನೆ, ಡೊಮೈನ್ ಜ್ಞಾನ ಸೇರಿದಂತೆ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸಬೇಕು. ಇಲ್ಲಿ ಪಡೆದ ಅನುಭವಗಳು ಮುಂದೊಂದು ದಿನ ನಿಮ್ಮನ್ನು ಡೇಟಾ ಮಾಡೆಲರ್ ಹುದ್ದೆಗೆ ಕರೆದುಕೊಂಡು ಹೋಗುತ್ತದೆ.


ಬಿಸ್ನೆಸ್ ಇಂಟಲಿಜೆನ್ಸ್ ಅನಾಲಿಸ್ಟ್ ಆಗುವುದು ಹೇಗೆ?

“ನಿಮ್ಮಿಂದ ಆ ಕನಸು ಕಾಣಲು ಸಾಧ್ಯವಿದೆ ಎಂದಾದರೆ, ಅದನ್ನು ಈಡೇರಿಸಿಕೊಳ್ಳಲೂ ಸಾಧ್ಯವಿದೆ”

– ವಾಲ್ಟ್ ಡಿಸ್ನಿ

 ಬಿಗ್‍ಡೇಟಾ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆಯಿರುವ ಉದ್ಯೋಗಗಳಲ್ಲಿ ಬಿಸ್ನೆಸ್ ಇಂಟಲಿಜೆನ್ಸ್ ಅನಾಲಿಸ್ಟ್ ಸಹ ಪ್ರಮುಖವಾದದ್ದು. ಕಂಪನಿಗಳು ತಮ್ಮ ಪ್ರಗತಿಯ ಕಾರ್ಯತಂತ್ರಗಳು ಮತ್ತು ಭವಿಷ್ಯದಲ್ಲಿ ಅತ್ಯುತ್ತಮ ಲಾಭಕ್ಕಾಗಿ ಬಿಸ್ನೆಸ್ ಇಂಟಲಿಜೆನ್ಸ್ ತಂತ್ರವನ್ನು ಬಳಸುತ್ತವೆ. ಕಂಪನಿಯ ಒಟ್ಟಾರೆ ವ್ಯವಹಾರ, ಪ್ರತಿಸ್ಪರ್ಧಿಗಳು ಮತ್ತು ಉದ್ಯಮ ಡೇಟಾಗಳ ವಿಶ್ಲೇಷಣೆ ಮಾಡುವ ಕೆಲಸವೂ ಇದಾಗಿದೆ.

ಈ ಹುದ್ದೆ ಪಡೆಯಲು ಕಂಪ್ಯೂಟರ್ ಸೈನ್ಸ್ ಪದವಿ ಓದಿರಬೇಕು. ಕೆಲವೊಂದು ಕಂಪನಿಗಳು ಈ ಹುದ್ದೆಗೆ ಇನ್‍ಫಾರ್ಮೆಷನ್ ಟೆಕ್ನಾಲಜಿ(ಐಟಿ), ಇನ್‍ಫಾರ್ಮೆಷನ್ ಸಿಸ್ಟಮ್ಸ್, ಫೈನಾನ್ಸ್, ಎಕಾನಮಿಕ್ಸ್ ಮತ್ತು ಬಿಸ್ನೆಸ್ ಅಡ್ಮಿನಿಸ್ಟ್ರೇಷನ್ ಇತ್ಯಾದಿ ವಿಷಯಗಳಲ್ಲಿ ಪದವಿ ಪಡೆದವರನ್ನು ನೇಮಕ ಮಾಡಲು ಆದ್ಯತೆ ನೀಡುತ್ತಿವೆ.

ಬಿಗ್‍ಡೇಟಾ ಕ್ಷೇತ್ರದಲ್ಲಿ ಡೇಟಾಬೇಸ್ ಮ್ಯಾನೇಜರ್, ಡೇಟಾ ವೇರ್‍ಹೌಸ್ ಮ್ಯಾನೇಜರ್, ಡೇಟಾ ಆರ್ಕಿಟೆಕ್ಟ್, ಬಿಗ್ ಡೇಟಾ ಎಂಜಿನಿಯರ್ ಸೇರಿದಂತೆ ಹಲವು ಉದ್ಯೋಗಗಳು ಇವೆ.

***

18. ಸಿಎ ಅಥವಾ ಚಾರ್ಟೆಡ್ ಅಕೌಂಟೆಂಟ್

“ಜೀವನದಲ್ಲಿ ಯಾರಾದರೂ ತಪ್ಪುಗಳನ್ನು ಮಾಡಿಲ್ಲವೆಂದಾದರೆ, ಅವರು ಹೊಸತಾಗಿ ಏನಾದರೂ ಮಾಡಲು ಪ್ರಯತ್ನಿಸಿಲ್ಲವೆಂದು ಅರ್ಥ”- ಆಲ್ಬರ್ಟ್ ಐನ್‍ಸ್ಟೀನ್

ಸಿಎ ಪರೀಕ್ಷೆಯು ಜಗತ್ತಿನ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂಬ ನಂಬಿಕೆಯಿದೆ. ಎಲ್ಲರಿಗೂ ಇದನ್ನು ಉತ್ತೀರ್ಣರಾಗುವುದು ಕಷ್ಟವೆಂಬ ಅಭಿಪ್ರಾಯವೂ ಇದೆ. ಇದು ಐಎಎಸ್, ಐಪಿಎಸ್‍ನಂತೆ ಕಠಿಣ ವಿಷಯವೆಂದು ಹೇಳಲಾಗುತ್ತದೆ. ಸಿಎ ಆಗಲು ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ತಾಳ್ಮೆ ಎಂಬ ಮೂರು ಅಂಶಗಳು ಅತ್ಯಂತ ಅಗತ್ಯವಾಗಿದೆ. 1949ರ ಜುಲೈ 1ರಂದು ಆರಂಭವಾದ ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ)ವು ಇಲ್ಲಿಯವರೆಗೆ ದೇಶಕ್ಕೆ 2.20 ಲಕ್ಷಕ್ಕಿಂತಲೂ ಹೆಚ್ಚು ಸಿಎಗಳನ್ನು ನೀಡಿದೆ. ಈಗ ಜಿಎಸ್‍ಟಿ ಆಗಮನದ ನಂತರ ಸಿಎಗಳಿಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಂಡಿದೆ.

ಆರಂಭದಲ್ಲಿ ಸಿಎ ಕೋರ್ಸ್ ಮೂರು ಹಂತಗಳನ್ನು ಹೊಂದಿತ್ತು. 1. ಪ್ರೊಫೆಷನಲ್ ಎಗ್ಸಾಮಿನೇಷನ್-1(ಪಿಎ-1), ಪಿಇ-2 ಮತ್ತು ಫೈನಲ್ಸ್ ಎಂದಾಗಿತ್ತು. ಚಾರ್ಟೆಡ್ ಅಕೌಂಟೆಂಟ್ ಬಳಿ ಪ್ರಾಕ್ಟಿಕಲ್ ತರಬೇತಿ(ಪಿಟಿ) ಮಾಡಲು ಪಿಇ-2 ಪರೀಕ್ಷೆ ಉತ್ತೀರ್ಣರಾಗುವುದು ಅವಶ್ಯವಾಗಿತ್ತು. ಇತ್ತೀಚೆಗೆ ಈ ಪರೀಕ್ಷೆಯಲ್ಲಿ ಮಾರ್ಪಾಡುವ ಮಾಡಲಾಗಿದ್ದು ಸಿಪಿಟಿ ಮತ್ತು ಡೈರೆಕ್ಟ್ ಎಂಟ್ರಿ ಎಂಬ ಎರಡು ವಿಭಾಗಗಳ ಮೂಲಕ ಚಾರ್ಟೆಡ್ ಅಕೌಂಟೆಂಟ್ ಕೋರ್ಸ್‍ಗೆ ಪ್ರವೇಶಿಸಬಹುದಾಗಿದೆ.

ಸಿಪಿಟಿ ಹಾದಿ: ಸಿಪಿಟಿ ಎಂದರೆ ಕಾಮನ್ ಪ್ರೊಫಿಸಿಯೆನ್ಸಿ ಟೆಸ್ಟ್. ಎಸ್‍ಎಸ್‍ಎಲ್‍ಸಿ ಅಥವಾ ಸಿಬಿಎಸ್‍ಇ 10ನೇ ತರಗತಿ ಉತ್ತೀರ್ಣರಾದ ಬಳಿಕ ಸಿಪಿಟಿ ಕೋರ್ಸ್‍ಗೆ ಹೆಸರು ನೋಂದಾಯಿಸಬಹುದು. ನೋಂದಾಯಿಸಿ ನಿರ್ದಿಷ್ಟ ಅವಧಿ (ಈಗ 60 ದಿನಗಳು) ಪೂರ್ಣಗೊಳಿಸಿದ ಬಳಿಕ, 10+2 ವಿದ್ಯಾರ್ಹತೆ ಹೊಂದಿರಿ. ಇದರ ನಡುವೆ ನೀವು ಸಿಪಿಟಿ ಪರೀಕ್ಷೆಯನ್ನು ಬರೆಯಬಹುದು. ಸಿಪಿಟಿ ಪರೀಕ್ಷೆಯು ವರ್ಷಕ್ಕೆ ಎರಡು ಬಾರಿ ಜೂನ್ ಮತ್ತು ಡಿಸೆಂಬರ್‍ನಲ್ಲಿ ನಡೆಯುತ್ತದೆ. 10+2 ವಿದ್ಯಾರ್ಹತೆ ಮತ್ತು ಸಿಪಿಟಿ ಪರೀಕ್ಷೆ ಪೂರ್ಣಗೊಳಿಸಿದ ಬಳಿಕ ನೀವು ಮುಂದಿನ ಹಂತವಾದ ಇಂಟಿಗ್ರೇಟೆಡ್ ಪ್ರೊಫೆಷನಲ್ ಕಾಂಪಿಟೆನ್ಸ್ (ಐಪಿಸಿ) ಕೋರ್ಸ್‍ಗೆ ಸೇರಬೇಕು. ನೀವು ಗ್ರೂಪ್ 1 ಅಥವಾ ಎರಡೂ ಗ್ರೂಪ್‍ಗೂ ಸೇರಬಹುದು. ಪಿಟಿಗೆ ನೋಂದಾಯಿಸುವ ಮೊದಲು ನೀವು 35 ಗಂಟೆಗಳ ಓರಿಯೆಂಟೇಷನ್ ಕೋರ್ಸ್ ಮತ್ತು 100 ಗಂಟೆಗಳ ಮಾಹಿತಿ ತಂತ್ರಜ್ಞಾನ ತರಬೇತಿ(ಐಟಿಟಿ) ಕೋರ್ಸ್ ಅನ್ನು ಪೂರ್ಣಗೊಳಿಸಿರಬೇಕು.

ನಂತರದ ಹಂತಗಳು ಐಸಿಎಸ್‍ಐ (ದಿ ಇನ್‍ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ) ಮತ್ತು ದಿ ಇನ್‍ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಇಂಟರ್‍ಮೀಡಿಯೇಟ್ ಪರೀಕ್ಷೆ ಉತ್ತೀರ್ಣಗೊಂಡ ಬಳಿಕದ ಹಂತಗಳೂ ಒಂದೇ ರೀತಿ ಇರುತ್ತವೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿರಿ. 8 ತಿಂಗಳ ಸ್ಟಡಿ ಕೋರ್ಸ್ ಮುಗಿದ ಬಳಿಕ ನೀವು ಐಪಿಸಿ ಪರೀಕ್ಷೆಗೆ ಹಾಜರಾಗಬಹುದು. ಈ ಪರೀಕ್ಷೆಯು ಸಾಮಾನ್ಯವಾಗಿ ವರ್ಷದಲ್ಲಿ ಎರಡು ಬಾರಿ ಅಂದರೆ ಮೇ ಮತ್ತು ನವೆಂಬರ್ ತಿಂಗಳಿನಲ್ಲಿ ನಡೆಯುತ್ತದೆ. ಗ್ರೂಪ್ 1 ಅಥವಾ ಎರಡೂ ಗ್ರೂಪ್‍ಗಳನ್ನು ಸಂಪೂರ್ಣಗೊಳಿಸಿದ ಬಳಿಕ ನೀವು 3 ವರ್ಷಗಳ ಗ್ರೂಪ್ 2 ಪರೀಕ್ಷೆಗೆ ಸೇರಬಹುದು. ಅಂದರೆ, ಮೊದಲ ಪ್ರಯತ್ನದಲ್ಲಿ ಗ್ರೂಪ್ 2 ಉತ್ತೀರ್ಣರಾಗದವರು ಈ ಸಮಯದಲ್ಲಿ ಪ್ರಯತ್ನಿಸಬಹುದು.

ಪಿಟಿಯ ಮೊದಲ ವರ್ಷದಲ್ಲಿ ನೀವು 15 ದಿವಸಗಳ ಮೊದಲ ಜನರಲ್ ಮ್ಯಾನೇಜ್‍ಮೆಂಟ್ ಮತ್ತು ಕಮ್ಯುನಿಕೇಷನ್ ಸ್ಕಿಲ್ಸ್ ಕೋರ್ಸ್ (ಜಿಎಂಸಿಎಸ್) ಪೂರೈಸಬೇಕು. ಪಿಟಿಯಲ್ಲಿ 18 ತಿಂಗಳು ಪೂರೈಸಿದ ಬಳಿಕ, ಪೂರ್ತಿ ಪಿಟಿ ಮುಗಿಯುವ ಮೊದಲು ಎರಡನೇ ಜಿಎಂಸಿಎಸ್ ಕೋರ್ಸ್ ಪೂರ್ಣಗೊಳಿಸಬೇಕು. ನಂತರದ ಹಂತ ಐಪಿಸಿ ಆಗಿದೆ. ಐಪಿಸಿ(ಎರಡೂ ಗ್ರೂಪ್‍ನಲ್ಲಿಯೂ) ಪೂರ್ಣಗೊಳಿಸಿದ ಬಳಿಕ ನೀವು ಸಿಎ ಅಂತಿಮ ಕೋರ್ಸ್‍ಗೆ ನೋಂದಾಯಿಸಬಹುದು. ಸಿಎ ಅಂತಿಮ ಪರೀಕ್ಷೆ ಬರೆಯುವ ಮೊದಲು ಪಿಟಿಯ ಕೊನೆಯ ವರ್ಷದಲ್ಲಿ ನೀವು ಅಡ್ವಾನ್ಸ್ ಇನ್‍ಫಾರ್ಮೆಷನ್ ಟೆಕ್ನಾಲಜಿ ಟ್ರೇನಿಂಗ್ ಅನ್ನು ಪೂರ್ಣಗೊಳಿಸಿರಬೇಕು.

ಸಿಎ ಅಂತಿಮ ಪರೀಕ್ಷೆಯು ಸಾಮಾನ್ಯವಾಗಿ ಪ್ರತಿವರ್ಷ ಎರಡು ಬಾರಿ ಅಂದರೆ ಮೇ ಮತ್ತು ನವೆಂಬರ್ ತಿಂಗಳಲ್ಲಿ ನಡೆಯುತ್ತದೆ. ಮೂರು ವರ್ಷ ಮುಗಿದ ಬಳಿಕ ಅಥವಾ ಪಿಟಿಯ ಕೊನೆಯ 6 ತಿಂಗಳು ಇರುವಾಗ ನೀವು ಈ ಪರೀಕ್ಷೆ ಬರೆಯಬಹುದಾಗಿದೆ. ಒಮ್ಮೆ ನೀವು ಸಿ ಅಂತಿಮ ಪರೀಕ್ಷೆಯ ಎಲ್ಲಾ ಗ್ರೂಪ್ಸ್‍ಗಳನ್ನು ಪೂರ್ಣಗೊಳಿಸಿದ ಬಳಿಕ ನೀವು ಐಸಿಎಐ ಸದಸ್ಯರಾಗಿ ಹೆಸರು ನೋಂದಾಯಿಸಬಹುದು. ನಂತರವಷ್ಟೇ ನಿಮ್ಮ ಹೆಸರಿಗೆ ಚಾರ್ಟೆಡ್ ಅಕೌಂಟೆಂಟ್ ಎಂದು ಸೇರಿಸಬಹುದು.

ಡೈರೆಕ್ಟ್ ಎಂಟ್ರಿ ಅಥವಾ ನೇರ ಪ್ರವೇಶ

ಈ ಹಾದಿಯ ಮೂಲಕವೂ ಚಾರ್ಟೆಡ್ ಅಕೌಂಟೆಂಟ್ ಆಗಬಹುದು. ನೀವು ವಾಣಿಜ್ಯ ವಿಷಯದಲ್ಲಿ ಶೇಕಡ 55ಕ್ಕಿಂತ ಕಡಿಮೆ ಇಲ್ಲದಂತೆ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆಯಿರಿ. ನಂತರ ಐಸಿಎಐನಲ್ಲಿ ಐಪಿಸಿಯ ಎರಡೂ ಗ್ರೂಪ್ಸ್‍ಗೆ ಹೆಸರು ನೋಂದಾಯಿಸಿರಿ. ಬಳಿಕ 35 ಗಂಟೆಗಳ ಓರಿಯೆಂಟೇಷನ್ ಕೋರ್ಸ್ ಮತ್ತು 100 ಗಂಟೆಗಳ ಐಟಿ ತರಬೇತಿ ಪೂರ್ತಿಗೊಳಿಸಿರಿ. ನಂತರ 3 ವರ್ಷಗಳ ಪಿಟಿಗೆ ನೊಂದಾಯಿಸಿರಿ. ಇಲ್ಲಿ ನೀವು ಜಿಎಂಸಿಎಸ್ ಕೋರ್ಸ್ ಪಡೆಯಬಹುದು.

ನಂತರದ ಹಂತ ಐಪಿಸಿ ಪರೀಕ್ಷೆ ಬರೆಯುವುದು. 9 ತಿಂಗಳ ಪಿಟಿ ಮತ್ತು 8 ತಿಂಗಳ ಸ್ಟಡಿ ಕೋರ್ಸ್ ಪೂರ್ಣಗೊಳಿಸಿದ ಬಳಿಕವಷ್ಟೇ ನೀವು ಐಪಿಸಿ ಪರೀಕ್ಷೆ ಬರೆಯಬಹುದು. ನೀವು ಐಪಿಸಿ ಪರೀಕ್ಷೆಯ ಎರಡೂ ಗ್ರೂಪ್‍ಗಳನ್ನು ಪೂರ್ಣಗೊಳಿಸಿದ ಬಳಿಕ ನೀವು ಸಿಎ ಅಂತಿಮ ಪರೀಕ್ಷೆ ಬರೆಯಬಹುದಾಗಿದೆ. 18 ತಿಂಗಳ ಪಿಟಿ ಮುಗಿಸಿದ ಬಳಿಕ ಆದರೆ, 3 ವರ್ಷದ ಪಿಟಿ ಮುಗಿಯುವ ಮೊದಲು ನಈವು ಜಿಎಂಸಿಎಸ್-2 ಪರೀಕ್ಷೆ ಎದುರಿಸಬೇಕು.ಪಿಟಿಯ ಅಂತಿಮ ವರ್ಷದಲ್ಲಿ ಅಡ್ವಾನ್ಸ್ ಐಟಿ ತರಬೇತಿಯ ಅಂತಿಮ ಪರೀಕ್ಷೆ ನಡೆಯುತ್ತದೆ. ಇದರ ನಡುವೆ ನೀವು ಸಿಎ ಜೊತೆ ಕಾರ್ಯನಿರ್ವಹಿಸಿ ಅನುಭವ ಪಡೆಯಬೇಕು.

ಕೊನೆಗೆ ಸಿಎ ಅಂತಿಮ ಪರೀಕ್ಷೆಯನ್ನು ಎರಡೂ ಗ್ರೂಪ್‍ನಲ್ಲಿಯೂ ಪೂರೈಸಿ. ಇಲ್ಲಿ ನೀಡಲಾದ ಕೆಲವು ಅಂಶಗಳ ವಿವರಕ್ಕೆ ಮೇಲೆ ತಿಳಿಸಿದ ಸಿಪಿಟಿ ಹಾದಿಯನ್ನು ಪರಾಮರ್ಶಿಸಬಹುದು. ನೀವು 3 ವರ್ಷದ ಪಿಟಿ ಪೂರೈಸಿದ ಬಳಿಕ ಐಸಿಎಐ ಸದಸ್ಯರಾಗಲು ಅರ್ಹರಾಗುವಿರಿ.


ಭವಿಷ್ಯದಲ್ಲಿ ಎಂಜಿನಿಯರ್ ಆಗಬೇಕೆ?

“ಎಂಜಿನಿಯರ್‍ಗಳಾಗಿ ನಾವು ಜಗತ್ತನ್ನು ಬದಲಾಯಿಸುವ ಹುದ್ದೆಯಲ್ಲಿ ಇದ್ದೇವೆ.- ಕೇವಲ ಎಂಜಿನಿಯರಿಂಗ್ ಅನ್ನು ಅಧ್ಯಯನ ಮಾಡಲು ಅಲ್ಲ”

– ಹೆನ್ರಿ ಪೆಟ್ರೋಸ್ಕಿ

ಬಹುತೇಕ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಎಂದರೆ ಅಚ್ಚುಮೆಚ್ಚು. ಇದಕ್ಕೆ ಸಂಬಂಧಪಟ್ಟ ಕೋರ್ಸ್‍ಗಳ ವಿವರವೂ ಹೆಚ್ಚಿನವರಿಗೆ ತಿಳಿದಿರುತ್ತದೆ. ಯಾಕೆಂದರೆ, ಈಗಿನ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣದ ಕುರಿತು ಹೆಚ್ಚಿನ ಮಾಹಿತಿ ಇರುತ್ತದೆ. ಹೀಗಾಗಿ ಕೆಲವು ಎಂಜಿನಿಯರಿಂಗ್ ವಿಭಾಗಗಳ ಕುರಿತು ಸಂಕ್ಷಿಪ್ತವಾಗಿ ಇಲ್ಲಿ ಮಾಹಿತಿ ನೀಡಲಾಗುತ್ತದೆ. ಕೆಲವೊಂದು ಎಂಜಿನಿಯರಿಂಗ್ ವಿಭಾಗಗಳ ವಿವರವನ್ನು ಇಲ್ಲಿ ನೀಡಲಾಗಿಲ್ಲ ಎನ್ನುವುದನ್ನೂ ಗಮನಿಸಿರಿ. ಜೊತೆಗೆ ಕೆಲವು ಎಂಜಿನಿಯರಿಂಗ್ ವಿಭಾಗದಲ್ಲಿ ಉದ್ಯೋಗಾವಕಾಶವೂ ಕಡಿಮೆಯಾಗಿದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಮೆಕ್ಯಾನಿಕಲ್ ಎಂಜಿನಿಯರ್

ಈ ವಿಭಾಗದಲ್ಲಿ ಉದ್ಯೋಗ ಮಾಡಲು ಬಯಸುವವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆಯಬಹುದು. ಮ್ಯಾನುಫ್ಯಾಕ್ಚರಿಂಗ್, ಏರೋನಾಟಿಕ್ಸ್, ನ್ಯಾನೊಟೆಕ್ನಾಲಜಿ, ನ್ಯೂಕ್ಲಿಯರ್ ಪವರ್ ಪೆÇ್ರಡಕ್ಷನ್, ಹೀಟಿಂಗ್ ಮತ್ತು ಕೂಲಿಂಗ್ ಹೀಗೆ ವಿವಿಧ ಬಗೆಯ ಉದ್ಯಮಗಳಿಗೆ ಸಂಬಂಧಪಟ್ಟ ಮೆಕ್ಯಾನಿಕಲ್ ಸಿಸ್ಟಮ್ಸ್ ವಿನ್ಯಾಸ ಮಾಡಲು ವಿವಿಧ ಬಗೆಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್‍ಗಳನ್ನು ಮಾಡಬಹುದು.

ಏರೋಸ್ಪೇಸ್ ಎಂಜಿನಿಯರ್

ಗಾಳಿ ಮತ್ತು ಅಂತರಿಕ್ಷ ಪ್ರಯಾಣಕ್ಕೆ ಸಂಬಂಧಪಟ್ಟ ಅಧ್ಯಯನ ಮತ್ತು ವಿನ್ಯಾಸವನ್ನು ಏರೋಸ್ಪೇಸ್ ಎಂಜಿನಿಯರಿಂಗ್ ಒಳಗೊಂಡಿದೆ. ಮಿಲಿಟರಿ ಏರ್‍ಕ್ರಾಫ್ಟ್ ವಿನ್ಯಾಸ ಮತ್ತು ಅಭಿವೃದ್ಧಿ, ವಾಣಿಜ್ಯ ವಿಮಾನ ವಿನ್ಯಾಸ, ಉಪಗ್ರಹ ತಂತ್ರಜ್ಞಾನ ಇತ್ಯಾದಿಗಳನ್ನು ಇದು ಒಳಗೊಂಡಿದೆ. ಈಗ ದೇಶದ ಕೆಲವು ಶಿಕ್ಷಣ ಸಂಸ್ಥೆಗಳು ಏರೋಸ್ಪೇಸ್‍ಗೆ ಸಂಬಂಧಪಟ್ಟ ಕೋರ್ಸ್‍ಗಳನ್ನು ನೀಡುತ್ತವೆ. ಇಂತಹ ಪದವಿ ನೀಡುವ ಶಿಕ್ಷಣ ಸಂಸ್ಥೆಗಳ ಕುರಿತು ವಿದ್ಯಾರ್ಥಿಗಳ ಅಭಿಪ್ರಾಯ, ಅಲ್ಲಿನ ಪ್ಲೇಸ್‍ಮೆಂಟ್ ಅವಕಾಶಗಳು, ಕ್ಯಾಂಪಸ್ ಇಂಟರ್‍ವ್ಯೂಗೆ ಬರುವ ಕಂಪನಿಗಳು, ಕಾಲೇಜು ಕುರಿತು ಆನ್‍ಲೈನ್ ವಿಮರ್ಶೆಗಳನ್ನು ಓದಿ ಮುಂದುವರೆಯಿರಿ.

ಬಯೊಮೆಡಿಕಲ್ ಎಂಜಿನಿಯರ್

ಬಯೊಮೆಡಿಕಲ್ ಎಂಜಿನಿಯರಿಂಗ್ ಎಂದರೆ ಮೆಡಿಸಿನ್ ಮತ್ತು ಬಯೊಲಾಜಿ ಸಂಯುಕ್ತ ಅಧ್ಯಯನವಾಗಿದೆ. ಈ ಎಂಜಿನಿಯರಿಂಗ್ ಪದವೀಧರರು ಬಯೊಲಾಜಿಕಲ್ ಮತ್ತು ಮೆಡಿಕಲ್ ಸೈನ್ಸ್‍ಗೆ ತಮ್ಮ ವಿನ್ಯಾಸ ಕೌಶಲವನ್ನು ಅನ್ವಯಿಸುತ್ತಾರೆ. ಈ ಪದವೀಧರರು ಹೆಲ್ತ್‍ಕೇರ್ ಟ್ರೀಟ್‍ಮೆಂಟ್ ಟೆಕ್ನಾಲಜಿಯ ಸುಧಾರಣೆಗೆ ಬೆಂಬಲ ನೀಡುತ್ತಾರೆ. ಇಸಿಜಿ, ಎಂಆರ್‍ಐ ಮತ್ತು ಇತರೆ ಇಮೇಜಿಂಗ್ ಸಾಧನಗಳ ಅಭಿವೃದ್ಧಿಗೆ ನೆರವಾಗುತ್ತಾರೆ.

ಬಯೊಮೆಕ್ಯಾನಿಕಲ್ ಎಂಜಿನಿಯರ್

ಜೀವಿಗಳು ಮತ್ತು ಯಂತ್ರಗಳ ಅಧ್ಯಯನವನ್ನು ಬಯೊಮೆಕ್ಯಾನಿಕಲ್ ಎಂಜಿನಿಯರಿಂಗ್ ಒಳಗೊಂಡಿದೆ ಮತ್ತು ಇವೆರಡರ ಸಂಯೋಜನೆಯಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತದೆ. ತ್ಯಾಜ್ಯ ನಿರ್ವಹಣೆ ಮತ್ತು ಜಲಸಂಪನ್ಮೂಲವನ್ನು ಮಾಲಿನ್ಯದಿಂದ ರಕ್ಷಿಸುವುದು ಸೇರಿದಂತೆ ಹಲವು ಸವಾಲುಗಳನ್ನು ನಿಭಾಯಿಸಲು ಈ ಎಂಜಿನಿಯರಿಂಗ್ ನೆರವಾಗುತ್ತದೆ. ಈ ಪದವಿಯು ಬಯೊಮೆಡಿಕಲ್ ಎಂಜಿನಿಯರಿಂಗ್ ಮತ್ತು ಅಗ್ರಿಕಲ್ಚರಲ್ ಎಂಜಿನಿಯರಿಂಗ್‍ಗೆ ಹತ್ತಿರದ್ದಾಗಿದೆ.

ಆಟೋಮೋಟಿವ್ ಎಂಜಿನಿಯರಿಂಗ್

ಇದರ ಹೆಸರೇ ಹೇಳುವಂತೆ ಆಟೋಮೋಟಿವ್ ಎಂಜಿನಿಯರಿಂಗ್ ಎನ್ನುವುದು ವಾಹನಗಳ ವಿನ್ಯಾಸ ಮತ್ತು ಉತ್ಪಾದನೆಯನ್ನು ಒಳಗೊಂಡಿದೆ. ಆಟೋಮೋಟಿವ್ ಉದ್ಯಮವು ವೈವಿಧ್ಯಮಯವಾಗಿದ್ದು, ಮೆಕ್ಯಾನಿಕಲ್ ಡಿಸೈನ್, ವಾಹನಗಳ ಕಾರ್ಯಕ್ಷಮತೆ, ತಯಾರಿಕೆ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಸಿಸ್ಟಮ್ ಮ್ಯಾನೇಜ್‍ಮೆಂಟ್ ಇತ್ಯಾದಿ ವಿಭಾಗದಲ್ಲಿ ಎಂಜಿನಿಯರ್‍ಗಳನ್ನು ಬಯಸುತ್ತದೆ. ನೆನಪಿಡಿ, ವಾಹನೋದ್ಯಮದಲ್ಲಿ ದೇಶವು ಹೆಚ್ಚು ಪ್ರಗತಿ ಕಾಣುತ್ತಿದ್ದು, ಪರಿಣತರಿಗೆ ಉತ್ತಮ ಬೇಡಿಕೆಯಿದೆ.

ಸಿವಿಲ್ ಎಂಜಿನಿಯರಿಂಗ್

ನಿರ್ಮಾಣ ಕಾರ್ಯಗಳು, ಮೂಲಸೌಕರ್ಯ ಯೋಜನೆಗಳು ಹೆಚ್ಚಾಗುತ್ತಿದೆ. ಇದರಿಂದ ಸಿವಿಲ್ ಎಂಜಿನಿಯರ್‍ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕಟ್ಟಡಗಳು, ರೈಲ್ವೆ, ರಸ್ತೆ ನಿರ್ಮಾಣ, ಅಣೆಕಟ್ಟು ಮತ್ತು ಸಾಮಾನ್ಯ ಪ್ರಾಜೆಕ್ಟ್ ನಿರ್ವಹಣೆ ಇತ್ಯಾದಿ ಮೂಲಸೌಕರ್ಯ ಅಭಿವೃದ್ಧಿಯ ಕಲಿಕಾ ವಿಷಯಗಳನ್ನು ಸಿವಿಲ್ ಎಂಜಿನಿಯರಿಂಗ್ ಪದವಿಯು ಒಳಗೊಂಡಿದೆ. ಪ್ರಾಕೃತಿಕ ವಿಕೋಪ ಇತ್ಯಾದಿಗಳಿಂದ ಹಾನಿಗೀಡಾದ ಮೂಲಸೌಕರ್ಯವನ್ನು ಮರುನಿರ್ಮಾಣ ಮಾಡುವ ಪ್ರಾಜೆಕ್ಟ್‍ಗಳಲ್ಲಿಯೂ ಈ ಎಂಜಿನಿಯರ್‍ಗಳು ಕಾರ್ಯನಿರ್ವಹಿಸುತ್ತಾರೆ. ಈ ಎಂಜಿನಿಯರ್‍ಗಳು ಸಾರ್ವಜನಿಕ ಅಥವಾ ಖಾಸಗಿ ಕ್ಷೇತ್ರದಲ್ಲಿ ಉತ್ತಮ ಅವಕಾಶ ಪಡೆಯಬಹುದು.

ಸ್ಟ್ರಕ್ಚರಲ್ ಎಂಜಿನಿಯರಿಂಗ್

ಇದು ಸಿವಿಲ್ ಎಂಜಿನಿಯರಿಂಗ್‍ನ ಒಂದು ಶಾಖೆ. ವಿವಿಧ ರಚನೆಗಳು, ಮನೆಗಳು, ವಾಣಿಜ್ಯ ಕಟ್ಟಡಗಳು, ಮ್ಯೂಸಿಯಂಗಳು, ಅಂಗಡಿಗಳು ಹೀಗೆ ವಿವಿಧÀ ಬಗೆಯ ಸ್ಟ್ರಕ್ಚರಲ್ ನಿರ್ಮಾಣ ಕಾರ್ಯವನ್ನು ಒಳಗೊಂಡಿದೆ. ಕಟ್ಟಡ ನಿರ್ಮಾಣ ಸಮಯದಲ್ಲಿ ನೈಸರ್ಗಿಕ ಲಕ್ಷಣಗಳಾದ ಗಾಳಿಯ ದಿಕ್ಕು, ಭೂ ಸವೆತ ಮತ್ತು ನೀರು ಇತ್ಯಾದಿಗಳನ್ನು ನೋಡಿಕೊಂಡು, ಕಟ್ಟಡಗಳು ಮತ್ತು ರಚನೆಗಳು ದೀರ್ಘಕಾಲಕ್ಕೆ ಸುರಕ್ಷಿತವಾಗಿರುವಂತೆ ರಚಿಸಲು ಸ್ಟ್ರಕ್ಚರಲ್ ಎಂಜಿನಿಯರ್‍ಗಳ ಕೌಶಲ ಅಗತ್ಯವಿರುತ್ತದೆ. ಇದು ಸಹ ಅತ್ಯುತ್ತಮ ಬೇಡಿಕೆ ಇರುವ ಉದ್ಯೋಗವಾಗಿದೆ.

ಆರ್ಕಿಟೆಕ್ಚರಲ್ ಎಂಜಿನಿಯರಿಂಗ್

ಪ್ರಾಜೆಕ್ಟ್ ಹಂತಗಳ ಯೋಜನೆ, ವಿನ್ಯಾಸ ಮತ್ತು ನಿರ್ಮಾಣದ ಕಾರ್ಯವನ್ನು ಆರ್ಕಿಟೆಕ್ಚರಲ್ ಎಂಜಿನಿಯರ್‍ಗಳು ಮಾಡುತ್ತಾರೆ. ಕಟ್ಟಡದ ರಚನೆ ಮತ್ತು ಇಂಟಿರಿಯರ್ ವಿನ್ಯಾಸದ ಕುರಿತೂ ಗಮನ ನೀಡುತ್ತಾರೆ. ಅಂದರೆ, ಹೀಟಿಂಗ್, ವೆಂಟಿಲೇಷನ್, ಏರ್ ಕಂಡಿಷನಿಂಗ್, ಎಲೆಕ್ಟ್ರಿಕಲ್, ಫೈರ್ ಪೆÇ್ರಟೆಕ್ಷನ್, ಬೆಳಕು, ಪ್ಲಂಬಿಂಗ್ ಇತ್ಯಾದಿ ಇಂಟಿರಿಯರ್ ಜೋಡಣೆಗೆ ಸಂಬಂಧಪಟ್ಟ ಕಾರ್ಯಗಳಿಗೂ ಇವರ ನೆರವು ಬೇಕಿರುತ್ತದೆ. ಈ ಉದ್ಯೋಗ ಪಡೆಯಲು ನೀವು ಆರ್ಕಿಟೆಕ್ಚರಲ್ ಎಂಜಿನಿಯರಿಂಗ್ ಕೋರ್ಸ್ ಮಾಡಬೇಕಾಗುತ್ತದೆ.

ಎಲೆಕ್ಟ್ರಿಕಲ್ ಎಂಜಿನಿಯರಿಂಗ್

ವಿದ್ಯುತ್‍ಗೆ ಸಂಬಂಧಪಟ್ಟಂತೆ ಸಾಧನಗಳನ್ನು ಅಭಿವೃದ್ಧಿಪಡಿಸುವುದು ಎಲೆಕ್ಟ್ರಿಕಲ್ ಎಂಜಿನಿಯರ್‍ಗಳ ಪ್ರಮುಖ ಕಾರ್ಯವಾಗಿದೆ. ಎನರ್ಜಿಯು ಎಲೆಕ್ಟ್ರಿಕಲ್, ಹೈಡ್ರೊ ಮತ್ತು ನೈಸರ್ಗಿಕ ಮೂಲಗಳಾದ ಮಾರುತ ಮತ್ತು ಸೌರ ವಿದ್ಯುತ್ ಇತ್ಯಾದಿಗಳನ್ನು ಒಳಗೊಂಡಿದೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದವರು ಎಲೆಕ್ಟ್ರಾನಿಕ್ ಈಕ್ವಿಪ್‍ಮೆಂಟ್, ಕಮ್ಯುನಿಕೇಷನ್ ಸಿಸ್ಟಮ್ಸ್, ಪವರ್ ಗ್ರಿಡ್‍ಗಳು, ಆಟೋಮೊಬೈಲ್ಸ್ ಇತ್ಯಾದಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬಹುದು.

ಕಂಪ್ಯೂಟರ್ ಎಂಜಿನಿಯರ್

ಮಾಹಿತಿ ತಂತ್ರಜ್ಞಾನ(ಐಟಿ) ಉದ್ಯಮದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿಗೆ ಹೆಚ್ಚಿನ ಬೇಡಿಕೆಯಿದೆ. ಈ ಕೋರ್ಸ್ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅನ್ನು ಒಳಗೊಂಡಿದೆ. ಈ ಕೋರ್ಸ್ ಮಾಡಿರುವವರು ಟೆಲಿಕಮ್ಯುನಿಕೇಷನ್ಸ್, ನೆಟ್‍ವರ್ಕಿಂಗ್, ಸಾಫ್ಟ್‍ವೇರ್ ಅಪ್ಲಿಕೇಷನ್ ಅಭಿವೃದ್ಧಿ ಅಥವಾ ತಯಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಆ್ಯಪ್ ಅಭಿವೃದ್ಧಿ, ವೆಬ್ ಡೆವಲಪ್‍ಮೆಂಟ್, ನೆಟ್‍ವರ್ಕ್ ಸೆಕ್ಯುರಿಟಿ/ಸೈಬರ್ ಸೆಕ್ಯುರಿಟಿ, ಕ್ಲೌಡ್ ಕಂಪ್ಯೂಟಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸಬಹುದಾಗಿದೆ.

ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್

ನಮ್ಮ ಪ್ರತಿದಿನದ ಬದುಕನ್ನು ತಂತ್ರಜ್ಞಾನ, ಮುಖ್ಯವಾಗಿ ಎಲೆಕ್ಟ್ರಾನಿಕ್ಸ್ ಬದಲಾಯಿಸುತ್ತಿರುತ್ತದೆ. ಪ್ರತಿದಿನ ಹೊಸ ತಂತ್ರಜ್ಞಾನದ ಮೊಬೈಲ್‍ಗಳು ಬರುತ್ತಿವೆ. ದೇಶದ ಬಹುತೇಕರು ಯಾವುದಾದರೂ ಗ್ಯಾಜೆಟ್‍ಗಳನ್ನು ಬಳಸುತ್ತಾರೆ. ಹೀಗಾಗಿ ಈಗ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದವರಿಗೆ ಸಾಕಷ್ಟು ಬೇಡಿಕೆಯಿದೆ. ಭವಿಷ್ಯದಲ್ಲಿಯೂ ಉತ್ತಮ ಬೇಡಿಕೆ ಇರುವ ಉದ್ಯೋಗ ಇದಾಗಿದೆ.

ಮೆಕ್ರಾಟ್ರೋನಿಕ್ಸ್ ಎಂಜಿನಿಯರಿಂಗ್

ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‍ನ ಮಿಶ್ರಣ ಇದಾಗಿದೆ. ಇದು ಹೈಬ್ರಿಡ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಈಗ ಹೆಚ್ಚಿನ ಮೆಕ್ಯಾನಿಕಲ್ ಸಾಧನಗಳು ಎಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್‍ವೇರ್‍ಗಳನ್ನು ಒಳಗೊಂಡಿದೆ. ಕಂಪ್ಯೂಟರ್, ಹಾರ್ಡ್‍ವೇರ್, ಸಾಫ್ಟ್‍ವೇರ್ ಮತ್ತು ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಇತ್ಯಾದಿಗಳ ಜ್ಞಾನವನ್ನು ಮೆಕ್ರಾಟ್ರೋನಿಕ್ಸ್ ಎಂಜಿನಿಯರಿಂಗ್ ಬಯಸುತ್ತದೆ. ಮುಂದಿನ ದಿನಗಳಲ್ಲಿ ಹೈಬ್ರಿಡ್ ಕಾರು, ಹೈಬ್ರಿಡ್ ಸಾಧನಗಳು, ವಿಶೇಷ ಗ್ಯಾಡ್ಜೆಟ್‍ಗಳಿಗೆ ಬೇಡಿಕೆ ಹೆಚ್ಚಲಿದ್ದು, ಮೆಕ್ರಾಟ್ರೋನಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದವರಿಗೂ ಅವಕಾಶದ ಬಾಗಿಲು ತೆರೆದಿರಲಿದೆ.

ಎಂಜಿನಿಯರಿಂಗ್ ಉದ್ಯೋಗಗಳಿಗೆ ಸಂಬಂಧಪಟ್ಟಂತೆ ಒಂದು ಪುಸ್ತಕ ಬರೆಯಬಹುದು. ಅಷ್ಟೊಂದು ವಿಭಾಗಗಳಿವೆ. ಜೊತೆಗೆ, ಆಯಾ ಕಾಲಕ್ಕೆ ತಕ್ಕಂತೆ ಕೆಲವು ಎಂಜಿನಿಯರಿಂಗ್ ಕೋರ್ಸ್‍ಗಳು ಬೇಡಿಕೆ ಪಡೆದುಕೊಳ್ಳುತ್ತವೆ. ಮೇಲೆ ತಿಳಿಸಲಾದ ವಿವಿಧ ಎಂಜಿನಿಯರಿಂಗ್ ಹುದ್ದೆಗಳು ಮಾತ್ರವಲ್ಲದೆ ಇನ್ನೂ ಅನೇಕ ಎಂಜಿನಿಯರಿಂಗ್ ಶಾಖೆಗಳು ಇವೆ. ಅವುಗಳಲ್ಲಿ ರೋಬೊಟಿಕ್ಸ್ ಎಂಜಿನಿಯರಿಂಗ್ ಸಹ ಪ್ರಮುಖವಾದದ್ದು.  ಈಗಿನ ಆಟೋಮೇಷನ್ ಕಾಲದಲ್ಲಿ ರೋಬೊಟಿಕ್ಸ್ ಎಂಜಿನಿಯರಿಂಗ್ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದೆ. ಮೈಕ್ರೊಎಲೆಕ್ಟ್ರಾನಿಕ್ ಎನ್ನುವುದು ಸಹ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‍ನ ಉಪವಿಭಾಗವಾಗಿದೆ. ಮುಖ್ಯವಾಗಿ ಸಣ್ಣ ಸಾಧನÀಗಳ ಅಭಿವೃದ್ಧಿಯನ್ನು ಮೈಕ್ರೊಎಲೆಕ್ಟ್ರಿಕಲ್ ಎಂಜಿನಿಯರ್‍ಗಳು ಮಾಡುತ್ತಾರೆ.

ಕೆಮಿಕಲ್ ಎಂಜಿನಿಯರಿಂಗ್ ಎನ್ನುವುದು ರಾಸಾಯನಿಕಕ್ಕೆ ಸಂಬಂಧಪಟ್ಟಿದೆ. ಕಾಸ್ಮಿಟಿಕ್ಸ್, ಆಹಾರ, ಫಾರ್ಮಾಸ್ಯುಟಿಕಲ್ಸ್, ಪಾನೀಯಗಳು, ರಾಸಾಯನಿಕಗಳನ್ನು ಬಳಸುವ ಇತರೆ ಸಾಮಾಗ್ರಿಗಳ ಉತ್ಪಾದನೆ ಅಥವಾ ವಿಶ್ಲೇಷಣೆಯ ಕಾರ್ಯವನ್ನು ಕೆಮಿಕಲ್ ಎಂಜಿನಿಯರ್‍ಗಳು ಮಾಡುತ್ತಾರೆ. ಎನ್ವಾಯರ್ನ್‍ಮೆಂಟಲ್ ಎಂಜಿನಿಯರಿಂಗ್ ಎನ್ನುವುದು ಪರಿಸರಕ್ಕೆ ಸಂಬಂಧಪಟ್ಟ ಎಂಜಿನಿಯರಿಂಗ್ ಪದವಿಯಾಗಿದೆ. ನಿಮಗೆ ನಿಮ್ಮ ಭವಿಷ್ಯವನ್ನು ಎಂಜಿನಿಯರಿಂಗ್‍ನ ಯಾವ ಶಾಖೆಯಲ್ಲಿ ರೂಪಿಸಬೇಕೆಂದು ಬಯಸುವಿರೋ ಆ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬಹುದು.


ಅಗ್ನಿಶಾಮಕ ವಿಭಾಗದಲ್ಲಿ ಫೈರ್ ಎಂಜಿನಿಯರ್ ಉದ್ಯೋಗ

“ಜೀವನ ಇರುವುದು ನಿಮ್ಮನ್ನು ನೀವು ಕಂಡುಕೊಳ್ಳುವುದಕ್ಕಲ್ಲ. ಇದು ಇರುವುದು ನಿಮ್ಮನ್ನು ನೀವು ರಚಿಸಿಕೊಳ್ಳಲು”

– ಜಾರ್ಜ್ ಬರ್ನಾಡ್ ಶಾ

ಇದು ಎಂಜಿನಿಯರಿಂಗ್‍ನ ಒಂದು ಶಾಖೆಯಾಗಿದ್ದರೂ ಮೇಲೆ ತಿಳಿಸಿದ ಎಂಜಿನಿಯರ್‍ಗಳ ಕಾರ್ಯವಿಧಾನಕ್ಕೂ ಫೈರ್ ಎಂಜಿನಿಯರ್‍ಗಳ ಕಾರ್ಯವಿಧಾನಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಎಲ್ಲಾದರೂ ಅಗ್ನಿ ಆಕಸ್ಮಿಕಗಳಾದ ಬಂದು ಜನರನ್ನು, ಆಸ್ತಿಪಾಸ್ತಿಯನ್ನು ಕಾಪಾಡುವ ಫೈರ್ ಎಂಜಿನಿಯರ್‍ಗಳನ್ನು ಕಂಡಾಗ ನಿಮಗೂ ಇದೇ ಹುದ್ದೆಯು ಸಾಹಸದ ದೃಷ್ಟಿಯಿಂದ ಆಕರ್ಷಣೀಯ ಎಂದೆನಿಸಿರಬಹುದು. ನೀವು ಫೈರ್ ಎಂಜಿನಿಯರ್ ಆಗಿ ಭವಿಷ್ಯ ರೂಪಿಸಿಕೊಳ್ಳಲು ಬಯಸಿದರೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಬೆಂಕಿ ಆಕಸ್ಮಿಕವಾದಾಗ ಆಪತ್‍ಬಾಂಧÀವರಂತೆ ಬರುವ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡಲು ಬಯಸುವುದು ಬಹುತೇಕ ಎಲ್ಲರಿಗೂ ಇಷ್ಟವಾಗಬಹುದು. ಇದಕ್ಕೆ ಸಂಬಂಧಪಟ್ಟಂತೆ ಆಯಾ ರಾಜ್ಯಗಳು, ಕೇಂದ್ರ ಸರಕಾರವು ಕಾಲಕಾಲಕ್ಕೆ ನೇಮಕಾತಿ ಕೈಗೊಳ್ಳುತ್ತವೆ. ಸರಕಾರಿ ಮಾತ್ರವಲ್ಲದೆ ಖಾಸಗಿ ಕಂಪನಿಗಳಲ್ಲಿಯೂ ಫೈರ್ ಎಂಜಿನಿಯರ್‍ಗಳಿಗೆ, ಫೈರ್ ವಿಭಾಗದ ಇತರೆ ವೃತ್ತಿಪರರಿಗೆ ಉತ್ತಮ ಬೇಡಿಕೆಯಿದೆ.  ಫೈರ್ ಎಂಜಿನಿಯರಿಂಗ್ ಎನ್ನುವುದು ಅತ್ಯಂತ ಬೇಡಿಕೆಯ ಮತ್ತು ಕಠಿಣ ಕರಿಯರ್ ಕ್ಷೇತ್ರವಾಗಿದೆ. ಸಾರ್ವಜನಿಕ ಸೇವೆ ಮಾಡುವ ದೃಢಬದ್ಧತೆ ಇರಬೇಕಿರುವ ಅಪಾಯಕಾರಿ ವೃತ್ತಿ ಇದಾಗಿದೆ. ಅಗ್ನಿ ಆಕಸ್ಮಿಕವನ್ನು ತಪ್ಪಿಸುವುದು, ಅಗ್ನಿ ಆಕಸ್ಮಿಕ ಸಮಯದಲ್ಲಿ ಜನರನ್ನು ರಕ್ಷಣೆ ಮಾಡುವುದು ಸೇರಿದಂತೆ ಫೈರ್ ಎಂಜಿನಿಯರ್‍ಗಳು ಹಲವು ಬಗೆಯ ಕಾರ್ಯಗಳನ್ನು ಮಾಡಬೇಕಿರುತ್ತದೆ. ಬೆಂಕಿಯಿಂದ ಜನರನ್ನು, ಆಸ್ತಿಪಾಸ್ತಿಯನ್ನು ರಕ್ಷಿಸುವುದು ಫೈರ್ ಎಂಜಿನಿಯರ್ ಪ್ರಮುಖ ಕಾರ್ಯವಾಗಿದೆ. ಎಷ್ಟು ಕ್ಷಣಾರ್ಧದಲ್ಲಿ ಸಾಧ್ಯವೋ ಅಷ್ಟು ಬೇಗ ಬದಲಾವಣೆಗಳನ್ನು ಅನ್ವಯಿಸಿಕೊಂಡು ಕಾರ್ಯನಿರ್ವಹಿಸಬೇಕಾಗುತ್ತದೆ.

ಫೈರ್ ಎಂಜಿನಿಯರ್ ಆಗಬೇಕಿದ್ದರೆ ಅತ್ಯುತ್ತಮ ಸಂವಹನ ಕೌಶಲ, ಸಾಂಸ್ಥಿಕ ಸಾಮಥ್ರ್ಯ(ಜೊತೆಯಾಗಿ ಕಾರ್ಯನಿರ್ವಹಿಸುವ ಸಾಮಥ್ರ್ಯ), ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುವ ಕೌಶಲ,  ತಕ್ಷಣ ತೀರ್ಮಾನ ತೆಗೆದುಕೊಳ್ಳುವುದು ಮತ್ತು ಸಮಸ್ಯೆ ಬಗೆಹರಿಸುವುದು, ನಾಯಕತ್ವ ಗುಣ ಮತ್ತು ಅದೇ ಸಮಯದಲ್ಲಿ ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸುವ ಸಾಮಥ್ರ್ಯ,  ಯಾವುದೇ ಕಠಿಣ ಪರಿಸ್ಥಿತಿಯಲ್ಲಿಯೂ ಸಮಸ್ಯೆಯನ್ನು ಸರಿಪಡಿಸಲು ದೈಹಿಕ ಸಾಮಥ್ರ್ಯ ಮತ್ತು ಮಾನಸಿಕ ಕೌಶಲ ಇತ್ಯಾದಿ ಹಲವು ಗುಣಗಳನ್ನು ಹೊಂದಿರಬೇಕಾಗುತ್ತದೆ.

ನಿಮ್ಮಲ್ಲಿ ಇಂತಹ ಕೌಶಲಗಳು ಇದ್ದರೆ ನೀವು ಫೈರ್ ಎಂಜಿನಿಯರಿಂಗ್ ಓದಬಹುದು. ಫೈರ್ ಎಂಜಿನಿಯರಿಂಗ್‍ನಲ್ಲಿ ಬಿಇ, ಕೆಮಿಸ್ಟ್ರಿ ಮತ್ತು ಫಿಸಿಕ್ಸ್ ಅಥವಾ ಗಣಿತ ಇತ್ಯಾದಿ ವಿಷಯಗಳಲ್ಲಿ ಬಿಎಸ್ಸಿ ಪದವಿ ಪಡೆದವರು ಫೈರ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಪ್ರವೇಶಿಸಬಹುದು. ಫೈರ್ ಎಂಜಿನಿಯರಿಂಗ್ ಡಿಪೆÇ್ಲಮಾ ಕೋರ್ಸ್ ಮಾಡಲು 10+2 ವಿದ್ಯಾರ್ಹತೆ ಹೊಂದಿರಬೇಕು. ಪಿಯುಸಿಯಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಅಥವಾ ತತ್ಸಮಾನ ವಿಷಯಗಳಲ್ಲಿ ಪರೀಕ್ಷೆ ಬರೆದಿರಬೇಕು.

ಫೈರ್ ಎಂಜಿನಿಯರಿಂಗ್ ಎನ್ನುವುದು ಹೆಚ್ಚು ದೈಹಿಕ ಶ್ರಮ ಬೇಡುವ ಕೆಲಸವಾಗಿದೆ. ಹೀಗಾಗಿ, ಈ ಕ್ಷೇತ್ರದಲ್ಲಿ ಕರಿಯರ್ ರೂಪಿಸಲು ಬಯಸುವ ಅಭ್ಯರ್ಥಿಗಳು ದೈಹಿಕವಾಗಿ ಸದೃಢರಾಗಿರಬೇಕು. ಗಂಭೀರ ಕಾಯಿಲೆಗಳನ್ನು ಹೊಂದಿರಬಾರದು. ಕನಿಷ್ಠ ಎತ್ತರ 165 ಸೆಂ.ಮೀ., 50 ಕೆ.ಜಿ. ತೂಕ, ಎದೆಯ ಸುತ್ತಳತೆ 81 ಸೆಂ.ಮೀ., ದೃಷ್ಟಿ 6/6 ಇತ್ಯಾದಿ ಹಲವು ದೈಹಿಕ ಅರ್ಹತೆಗಳನ್ನು ಬಯಸಲಾಗುತ್ತದೆ.

ರಾಜ್ಯದಲ್ಲಿ, ಹೊರರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಫೈರ್ ಎಂಜಿನಿಯರಿಂಗ್‍ಗೆ ಸಂಬಂಧಪಟ್ಟ ವಿವಿಧ ಕೋರ್ಸ್‍ಗಳು ಲಭ್ಯ ಇವೆ. ಕೆಲವು ಶಿಕ್ಷಣ ಸಂಸ್ಥೆಗಳ ವಿವರ ಇಂತಿದೆ. ಇಂಟರ್‍ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಸೇಫ್ಟಿ ಮ್ಯಾನೇಜ್‍ಮೆಂಟ್, ನಾಗರಬಾವಿ, ಬೆಂಗಳೂರು., ಇನ್‍ಸ್ಟಿಟ್ಯೂಟ್ ಆಫ್ ಫೈರ್ ಆಂಡ್ ಸೇಫ್ಟಿ ಎಂಜಿನಿಯರಿಂಗ್ ಬೆಂಗಳೂರು., ಸುರಕ್ಷಾ ಫೈರ್ ಆಂಡ್ ಸೇಫ್ಟಿ ಕಾಲೇಜು, ಚಿತ್ರದುರ್ಗ., ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಪೆÇ್ರಫೆಷನಲ್ ಟ್ರೈನಿಂಗ್, ಬೆಂಗಳೂರು., ನ್ಯಾಷನಲ್ ಅಕಾಡೆಮಿ ಆಫ್ ಫೈರ್ ಆಂಡ್ ಸೇಫ್ಟಿ ಎಂಜಿನಿಯರಿಂಗ್, ಮಹಾರಾಷ್ಟ್ರ., ದೆಹಲಿ ಇನ್‍ಸ್ಟಿಟ್ಯೂಟ್ ಆಫ್ ಫೈರ್ ಎಂಜಿನಿಯರಿಂಗ್, ದೆಹಲಿ., ನ್ಯಾಷನಲ್ ಸೆಂಟರ್ ಫಾರ್ ಪೆÇ್ರಫೆಷನಲ್ ಟ್ರೈನಿಂಗ್, ಕೇರಳ.,  ಯೂನಿವರ್ಸಿಟಿ ಆಫ್ ಪೆಟ್ರೋಲಿಯಂ ಆಂಡ್ ಎನರ್ಜಿ ಸ್ಟಡೀಸ್, ಮುಂಬೈ ಮತ್ತು ಡೆಹಡ್ರೂನ್ ಇತ್ಯಾದಿ.

ಫೈರ್ ಎಂಜಿನಿಯರಿಂಗ್ ಓದಿರುವವರು ಸರಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸಬಹುದು. ಪೆಟ್ರೋಲಿಯಂ ರಿಫೈನರಿಗಳು, ಜವಳಿ ಉದ್ಯಮ, ರಾಸಾಯನಿಕ ಉದ್ಯಮ ಸೇರಿದಂತೆ ಇತರೆ ಉದ್ಯಮಗಳಲ್ಲಿಯೂ ಉದ್ಯೋಗ ಪಡೆಯಬಹುದಾಗಿದೆ. ಫೈರ್ ಎಂಜಿನಿಯರ್‍ಗಳಿಗೆ ಉತ್ತಮ ಬೇಡಿಕೆಯಿದೆ. ತಯಾರಿಕೆ, ರಾಸಾಯನಿಕ ಹ್ಯಾಂಡ್ಲಿಂಗ್ ಬಾಟ್ಲಿಂಗ್ ಘಟಕಗಳು ಸೇರಿದಂತೆ ಹಲವು ವಿಭಾಗದಲ್ಲಿ  ನೇಮಕಾತಿ ಉತ್ತಮವಾಗಿದೆ. ವಿಮಾ ಕಂಪನಿಗಳಲ್ಲಿ ಸಮೀಕ್ಷದಾರರಾಗಿಯೂ ಕಾರ್ಯನಿರ್ವಹಿಸಬಹುದಾಗಿದೆ. ಡಿಸೈನ್ ಡೈರೆಕ್ಟರ್, ಎಂಜಿನಿಯರ್, ಫೈರ್ ಪ್ರಿವೆನ್ಸನ್ ರಿಸರ್ಚ್ ಎಂಜಿನಿಯರ್, ಫೈರ್ ಪೆÇ್ರಟೆಕ್ಷನ್ ಎಂಜಿನಿಯರ್ ಮತ್ತು ಲಾಸ್ ಕಂಟ್ರೋಲ್ ಮ್ಯಾನೇಜರ್ ಆಗಿ ಕೆಲಸ ಮಾಡಬಹುದಾಗಿದೆ.


ಓದುವುದು ಇಷ್ಟವೇ?

ಸಂಕ್ಷಿಪ್ತ ಮಾಹಿತಿ

“ಈಗಲೇ ಇರುವ ದಾರಿಯಲ್ಲಿ ಸಾಗುವುದಕ್ಕಿಂತ ದಾರಿ ಇಲ್ಲದ ಕಡೆಗಳಲ್ಲಿ ನೀವೇ ದಾರಿ ಸೃಷ್ಟಿಸುತ್ತ ಸಾಗುವುದು ಉತ್ತಮ” –ರಾಲ್ಫಾ ವಾಲ್ಡೊ ಎಮರ್ಸನ್.

ಆಸಕ್ತಿದಾಯಕ ಪುಸ್ತಕಗಳನ್ನು ಓದುವುದನ್ನು ನೀವು ಇಷ್ಟಪಡಬಹುದು. ನಿಮಗೆ ಪುಸ್ತಕ ಓದುವ ಹುಚ್ಚಿದ್ದರೆ, ನೀವು ಲೈಬ್ರೆರಿಗೆ ಹೋದಾಗ ಅಲ್ಲಿ ಇರುವ ರಾಶಿರಾಶಿ ಪುಸ್ತಕಗಳನ್ನು ನೋಡಿದಾಗ `ಅಯ್ಯೋ, ನನಗೆ ಇಲ್ಲೇ ಕೆಲಸ ಇರಬಾರದಿತ್ತಾ’ ಎಂದೆನಿಸಬಹುದು. ದಿನಾ ಪತ್ರಿಕೆ ಓದುವ ಅಭ್ಯಾಸ ನಿಮಗಿದ್ದರೆ ನನಗೆ ಪೇಪರ್ ಆಫೀಸ್‍ನಲ್ಲೇ ಕೆಲಸ ಇರಬೇಕಿತ್ತು ಎಂದೆನಿಸಬಹುದು. ಕೆಲವೊಂದು ಉದ್ಯೋಗಗಳಲ್ಲಿ ನೀವು ಪುಸ್ತಕಗಳ ನಡುವೆಯೇ ಇರಬೇಕಾಗುತ್ತದೆ. ನೀವು ಪುಸ್ತಕದ ಮಳಿಗೆ ಹೊಂದಿದ್ದರೆ, ಪ್ರಕಾಶಕರಾಗಿದ್ದರೆ, ಲೈಬ್ರೆರಿಯನ್ ಆಗಿದ್ದರೆ, ಉಪನ್ಯಾಸಕರಾಗಿದ್ದರೆ.. ಹೀಗೆ ಹತ್ತು ಹಲವು ಉದ್ಯೋಗಗಳಲ್ಲಿ ಓದುವ ಸುವರ್ಣ ಅವಕಾಶ ದೊರಕುತ್ತದೆ. ಇಂತಹ ಕೆಲವು ಉದ್ಯೋಗಗಳ ವಿವರ ಇಲ್ಲಿದೆ.

ಈಗಿನ ಯುವಜನತೆಗೆ ಪತ್ರಿಕೆಗಳಲ್ಲಿ ಜರ್ನಲಿಸ್ಟ್ ಆಗುವುದು, ಟೀವಿಯಲ್ಲಿ ಆಂಕರ್‍ಗಳಾಗುವುದು, ಟೀವಿ ವರದಿಗಾರರಾಗುವುದು… ಇತ್ಯಾದಿ ಹುದ್ದೆಗಳ ಕುರಿತು ಏನೋ ಆಕರ್ಷಣೆ ಇದೆ. ಮಾಧ್ಯಮ ಕ್ಷೇತ್ರಕ್ಕೆ ಹೆಚ್ಚು ವಿದ್ಯಾಭ್ಯಾಸ ಇಲ್ಲದೆಯೂ ಬಂದು ಸತತ ಪ್ರಯತ್ನದಿಂದ ಉನ್ನತ ಹಂತ ತಲುಪಿದವರು ಇದ್ದಾರೆ. ಈಗ ಪತ್ರಿಕೋದ್ಯಮಕ್ಕೆ ಸಂಬಂಧಪಟ್ಟ ಶಿಕ್ಷಣವನ್ನು ಬಹುತೇಕ ಕಾಲೇಜುಗಳು, ವಿಶ್ವವಿದ್ಯಾಲಯಗಳು ನೀಡುತ್ತಿವೆ. ಇಂತಹ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಂಡರೆ ಉದ್ಯೋಗ ಪಡೆಯುವುದು ಸುಲಭವಾಗಬಹುದು. ಮಾಧ್ಯಮ ಕ್ಷೇತ್ರಕ್ಕೆ ಯಾವುದೋ ಆಕರ್ಷಣೆಯಿಂದ ಬಂದು ಭ್ರಮನಿರಶನ ಆದವರೂ ಇದ್ದಾರೆ. ನಿಮ್ಮಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಕುರಿತು ಉತ್ಕøಷ್ಟ ಆಸಕ್ತಿ ಇದ್ದರೆ ಇದಕ್ಕೆ ಸಂಬಂಧಪಟ್ಟ ಪದವಿ, ಸ್ನಾತಕೋತ್ತರ ಪದವಿಗಳನ್ನು ಮಾಡಬಹುದು.

ಪತ್ರಿಕೋದ್ಯಮ ವಿಭಾಗದಲ್ಲಿ ವರದಿಗಾರರು/ ಉಪಸಂಪಾದಕರು, ಹಿರಿಯ, ಮುಖ್ಯ ಉಪಸಂಪಾದಕರು/ ವರದಿಗಾರರು, ಸಹಾಯಕ ಸಂಪಾದಕರು, ಸಂಪಾದಕರು ಸೇರಿದಂತೆ ವಿವಿಧ ಹುದ್ದೆಗಳು ಇವೆ. ಟೀವಿಯಲ್ಲಿ ವರದಿಗಾರರು, ಆಂಕರ್‍ಗಳು, ಉಪ ಸಂಪಾದಕರು, ಗ್ರಾಫಿಕ್ ವಿನ್ಯಾಸಕರಾರರು, ಕ್ಯಾಮೆರಾಮೆನ್ ಸೇರಿದಂತೆ ಹಲವು ಹುದ್ದೆಗಳು ಇರುತ್ತವೆ. ರೇಡಿಯೋದಲ್ಲಿಯೂ ನಿರೂಪಣೆಗಾರರು, ಆರ್‍ಜೆ ಇತ್ಯಾದಿ ಹುದ್ದೆಗಳಿವೆ.

ಮಾಧ್ಯಮ ಕ್ಷೇತ್ರದಲ್ಲಿ ಈಗ ಡಿಜಿಟಲ್ ಮಾಧ್ಯಮ ಪ್ರವರ್ಧಮಾನಕ್ಕೆ ಬರುತ್ತಿದೆ. ಪತ್ರಿಕೆಗಳಿಗೆ ಭವಿಷ್ಯ ಹೆಚ್ಚುದಿನವಿಲ್ಲ ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ. ಸುದ್ದಿ, ಲೇಖನಗಳು ಡಿಜಿಟಲ್ ರೂಪದಲ್ಲಿ ಹೆಚ್ಚು ಜನರನ್ನು ತಲುಪಿದೆ. ಹೀಗಾಗಿ ಆನ್‍ಲೈನ್ ಸುದ್ದಿಪೋರ್ಟಲ್‍ಗಳು, ಆನ್‍ಲೈನ್ ಮ್ಯಾಗಜಿನ್‍ಗಳಲ್ಲಿಯೂ ಉದ್ಯೋಗಾವಕಾಶ ಹೆಚ್ಚುತ್ತಿದೆ. ಸುದ್ದಿಯನ್ನು ಓದುಗರಿಗೆ ಉಣಬಡಿಸಲು ತಿಳಿದವರಿಗೆ, ಆಕರ್ಷಕವಾಗಿ ಮತ್ತು ಪತ್ರಿಕೋದ್ಯಮದ ನೀತಿನಿಯಮಗಳಿಗೆ ಬದ್ಧವಾಗಿ ನೀಡಲು ಸಾಧ್ಯವಿರುವವರಿಗೆ ಇಲ್ಲಿ ಅತ್ಯುತ್ತಮ ಅವಕಾಶವಿದೆ. ಈ ಕ್ಷೇತ್ರಕ್ಕೆ ಪ್ರವೇಶಿಸಲು ಬಯಸುವವರು ಏನೋ ಆಕರ್ಷಣೆಗೆ ಈಡಾಗಿ ಬರುವುದಕ್ಕಿಂತ ನಿಜವಾದ ಕಾಳಜಿಯಿಂದ ಬರಬೇಕಾಗುತ್ತದೆ. ಸಾಕಷ್ಟು ಅಧ್ಯಯನ, ಪ್ರತಿನಿತ್ಯ ನಡೆಯುವ ಘಟನೆಗಳು, ಸಮಾಜಕ್ಕೆ ಒಳಿತು ಮಾಡುವ ಕಾಳಜಿ ಇತ್ಯಾದಿಗಳು ಇರಬೇಕು. ಪತ್ರಿಕೋದ್ಯಮವನ್ನು ಉದ್ಯಮ ಎಂದು ಪರಿಗಣಿಸದೆ ಇದು ಜನರಿಗೆ ಒಳಿತು ಮಾಡಲು ಇರುವ ಅತ್ಯುತ್ತಮ ಅವಕಾಶವೆಂದು ಪರಿಗಣಿಸಬೇಕು. 


ಸಂಪಾದಕರು

ಓದು ಇಷ್ಟಪಡುವವರಿಗೆ ಸಂಪಾದಕ ವೃತ್ತಿ ಸೂಕ್ತವಾದದ್ದು. ಮಾಧ್ಯಮ ಲೋಕದಲ್ಲಿ ಮಾತ್ರವೇ ಸಂಪಾದಕ ಹುದ್ದೆ ಇರುವುದಲ್ಲ. ಯಾವುದಾದರೂ ಪ್ರಕಾಶನ ಸಂಸ್ಥೆಗಳಲ್ಲಿ, ಮನುಸ್ಕ್ರಿಪ್ಟ್ ಅಧ್ಯಯನ ವಿಭಾಗದಲ್ಲಿ ಸೇರಿದಂತೆ ಹಲವು ವಿಭಾಗಗಳಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸಬಹುದು. ಸಂಪಾದಕ ಹುದ್ದೆಯು ವಿವಿಧ ಬಡ್ತಿಗಳ ನಂತರ ದೊರಕುವ ಪಟ್ಟವಾಗಿದೆ. ಸಾಮಾನ್ಯ ವರದಿಗಾರನಾಗಿದ್ದ ವ್ಯಕ್ತಿಯು ಮುಂದೊಂದು ದಿನ ಪತ್ರಿಕೆಯೊಂದರ ಸಂಪಾದಕನಾಗಬಹುದು.

ಈ ಹುದ್ದೆಗೆ ಇಂತಿಷ್ಟೇ ವಿದ್ಯಾಭ್ಯಾಸ ನಿಗದಿಪಡಿಸದೆ ಇದ್ದರೂ ಯಾವುದಾದರೂ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿರಬೇಕು. ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಪಡೆದಿದ್ದರೆ ಉತ್ತಮ. ಮಾಧ್ಯಮ ಹೊರತುಪಡಿಸಿದ ಇತರೆ ವಿಭಾಗದಲ್ಲಿ ಉದ್ಯೋಗ ಪಡೆಯಲು ಆಯಾ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆದಿರಬೇಕು. ಜೊತೆಗೆ, ಆಯಾ ಕ್ಷೇತ್ರದಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿ ಅನುಭವ ಸಂಪಾದಿಸಬೇಕು.

ಆರ್ಕಿವಿಸ್ಟ್ ಅಥವಾ ಸಂಗ್ರಹಗಾರರು

ಐತಿಹಾಸಿಕ ದಾಖಲೆಗಳನ್ನು, ಮಾಹಿತಿಗಳನ್ನು ಸಂಗ್ರಹಿಸುವ ಕೆಲಸ ಮಾಡುವ ಆರ್ಕಿವಿಸ್ಟ್ ಹುದ್ದೆಗೂ ನೀವು ಪ್ರಯತ್ನಿಸಬಹುದು. ಸರಕಾರದ ಇಲಾಖೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಾಗಿ ಈ ಹುದ್ದೆಗಳು ಇರುತ್ತವೆ. ಈ ಹುದ್ದೆ ಪಡೆಯಲು ಬಯಸುವವರು ಇತಿಹಾಸ ಅಥವಾ ಲೈಬ್ರೆರಿ ವಿಜ್ಞಾನ ಇತ್ಯಾದಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕೆಲವೊಂದು ಶಿಕ್ಷಣ ಸಂಸ್ಥೆಗಳು ಆರ್ಕಿವಲ್ ಸೈನ್ಸ್ ಕೋರ್ಸ್‍ಗಳನ್ನು ಹೊಂದಿದ್ದು, ಆಸಕ್ತರು ಸೇರಬಹುದು.

ಕಂಟೆಂಟ್ ಎಡಿಟರ್

ಮಾಧ್ಯಮ ಸಂಸ್ಥೆಗಳಲ್ಲಿ, ಬ್ರಾಂಡ್ ಅಥವಾ ಪ್ರಕಾಶನ ಸಂಸ್ಥೆಗಳಲ್ಲಿ ಕಂಟೆಂಟ್ ಎಡಿಟರ್ ಉದ್ಯೋಗ ದೊರಕುತ್ತದೆ. ಈಗ ಜಗತ್ತು ಮಾಹಿತಿಗಳ ಪ್ರವಾಹದಲ್ಲಿ ನಡೆಯುತ್ತಿದೆ. ಇಂತಹ ಸಮಯದಲ್ಲಿ ತಮ್ಮ ಸಂಸ್ಥೆಯ ಓದುಗರಿಗೆ ಬರಹಗಳನ್ನು ಮರುರೂಪಿಸುವುದು, ಹೊಸದಾಗಿ ಪ್ರಸ್ತುತಪಡಿಸುವ ಕೆಲಸ ಇವರದ್ದಾಗಿದೆ. ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರು ಹೆಚ್ಚಾಗಿ ಕಂಟೆಂಟ್ ಎಡಿಟರ್ ಉದ್ಯೋಗಕ್ಕೆ ಪ್ರಯತ್ನಿಸಬಹುದು. ಪತ್ರಿಕೋದ್ಯಮ, ಇಂಗ್ಲಿಷ್ ಎಂಎ, ಕನ್ನಡ ಎಂಎ ಇತ್ಯಾದಿ ಪದವಿ ಪಡೆದವರಿಗೆ ಹೆಚ್ಚಿನ ಆದ್ಯತೆ ಇರುತ್ತದೆ.

ಕಾಪಿ ಎಡಿಟರ್

ಬೇರೆಯವರು ಬರೆದ ಲೇಖನಗಳನ್ನು ಸಂಪಾದಿಸುವುದು, ಕಾಗುಣಿತ ದೋಷಗಳಿವೆಯೇ ಎಂದು ಪರಿಶೀಲಿಸುವುದು, ವ್ಯಾಕರಣ, ಕಾಮಾ, ಪ್ಯಾರಾಗ್ರಾಫ್ ಇತ್ಯಾದಿಗಳನ್ನು ಪರಿಶೀಲಿಸುವುದು ಇವರ ಕಾರ್ಯ. ಕೆಲವೊಂದು ಸಂಸ್ಥೆಗಳಲ್ಲಿ ಕಾಪಿ ಎಡಿಟರ್ ಮತ್ತು ಕಂಟೆಂಟ್ ಎಡಿಟರ್ ಹುದ್ದೆ ಒಂದೇ ಆಗಿರುತ್ತದೆ. ಈ ಉದ್ಯೋಗಕ್ಕೂ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಗ್ರಾಂಟ್ ಬರಹಗಾರರು

ನಿಮ್ಮ ಬರವಣಿಗೆ ಮತ್ತು ಓದುವ ಪ್ರೀತಿಯನ್ನು ಬಳಸಿಕೊಂಡು ಗ್ರಾಂಟ್ ಬರಹಗಾರರು ಉದ್ಯೋಗಕ್ಕೆ ಪ್ರಯತ್ನಿಸಬಹುದು. ಮುಖ್ಯವಾಗಿ ಅನುದಾನಕ್ಕೆ ಸಂಬಂಧಪಟ್ಟ ಬರಹಗಳನ್ನು ಬರೆಯಬೇಕಾಗುತ್ತದೆ. ವಿವಿಧ ವರದಿಗಳು, ಅಧ್ಯಯನಗಳು ಮತ್ತು ಸುದ್ದಿಗಳನ್ನು ಸಾಕಷ್ಟು ಸಂಶೋಧನೆ ನಡೆಸಿ ಬರೆಯಬೇಕು. ಈ ರೀತಿ ಅಧ್ಯಯನ ನಡೆಸಿ ಬರೆದು ತಮ್ಮ ಸಂಸ್ಥೆ ಅಥವಾ ಪ್ರಾಜೆಕ್ಟ್‍ಗೆ ಅನುದಾನ ದೊರಕಿಸಿಕೊಡಲು ವಿನಂತಿಯನ್ನು ಇವರು ಬರೆಯುತ್ತಾರೆ. ಈ ಹುದ್ದೆಗೂ ಪದವಿ ಅಥವಾ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಬಯಸಲಾಗುತ್ತದೆ.

ಗ್ರಂಥಪಾಲಕರು

ನೀವು ಗ್ರಂಥಪಾಲಕರಾದರೆ ನಿಮ್ಮ ಸುತ್ತಮುತ್ತ ಪ್ರತಿನಿತ್ಯ ಪುಸ್ತಕಗಳು ಇರುತ್ತವೆ. ಓದುಗರಿಗೆ ಪುಸ್ತಕಗಳನ್ನು ಒದಗಿಸಲು ಮತ್ತು ಅವುಗಳನ್ನು ಸರಿಯಾಗಿ ಕಾಪಾಡುವ ಕೆಲಸ ಗ್ರಂಥಪಾಲಕರದ್ದು. ಸಂಶೋಧಕರಿಗೆ ಪರಾಮರ್ಶೆಗೆ ಬೇಕಾದ ಪುಸ್ತಕಗಳನ್ನೆಲ್ಲ ಇವರು ಹುಡುಕಿ ಕೊಡಬೇಕಾಗುತ್ತದೆ. ಲೈಬ್ರರಿಯಲ್ಲಿ ಎಲ್ಲರೂ ಮೌನವಾಗಿ ಓದುತ್ತಿರುವಾಗ ತನ್ನ ನಿತ್ಯದ ಕೆಲಸವನ್ನು ಮುಗಿಸಿದ ನಂತರ ಗ್ರಂಥಪಾಲಕರಿಗೂ ಓದಲು ಸಾಕಷ್ಟು ಸಮಯ ದೊರಕುತ್ತದೆ. ಈ ವಿಭಾಗದಲ್ಲಿ ಹುದ್ದೆಗಳನ್ನು ಪಡೆಯಲು ಲೈಬ್ರೆರಿ ಸೈನ್ಸ್‍ಗೆ ಸಂಬಂಧಪಟ್ಟ ಶಿಕ್ಷಣ ಪಡೆದಿರಬೇಕು.

ಪೊಲಿಟಿಕಲ್ ಸೈಂಟಿಸ್ಟ್

ರಾಜಕೀಯ ವಿಜ್ಞಾನಿಗಳಿಗೆ ರಾಜಕೀಯ ಇತಿಹಾಸ, ವಿವಿಧ ಬಗೆಯ ಸರಕಾರದ ವ್ಯವಸ್ಥೆ, ರಾಜಕೀಯದ ಮೇಲೆ ಪರಿಣಾಮ ಬೀರುವ ವಿವಿಧ ಟ್ರೆಂಡ್‍ಗಳು ಮತ್ತು ವಿಚಾರಗಳ ಕುರಿತು ತಿಳಿದಿರಬೇಕಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ನಿತ್ಯ ವರದಿಗಳನ್ನು, ಲೇಖನಗಳು, ಅಂಕಿಅಂಶ ಮಾಹಿತಿಗಳನ್ನು ಸದಾ ಓದುತ್ತಿರಬೇಕಾಗುತ್ತದೆ. ಈ ಹುದ್ದೆ ಪಡೆಯಲು  ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದಿರಬೇಕು.

ಅನುವಾದಕರು

ನೀವು ಒಂದಕ್ಕಿಂತ ಹೆಚ್ಚು ಭಾಷೆಯ ಮೇಲೆ ಹಿಡಿತ ಹೊಂದಿದ್ದರೆ ಅನುವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಮಾಹಿತಿಯನ್ನು ಅನುವಾದ ಮಾಡಬೇಕು. ಮೂಲ ಬರಹಗಾರರು ಬರೆದಿರುವ ವಿಷಯ, ವಸ್ತುವಿಗೆ ಚ್ಯುತಿಬರದಂತೆ ಅನುವಾದ ಮಾಡಬೇಕು. ಇದು ಓದುತ್ತ, ಅರ್ಥಮಾಡಿಕೊಳ್ಳುತ್ತ ಬರೆಯುವ ಕೆಲಸ. ಇದರಿಂದ ನಿಮ್ಮ ಪದಸಂಪತ್ತಿನ ಜೊತೆಗೆ ಜ್ಞಾನವೂ ವೃದ್ಧಿಯಾಗುತ್ತದೆ. ಅನುವಾದಕರಾಗಲು ಪದವಿ ಅಥವಾ ಸ್ನಾತಕೋತ್ತರ ಶಿಕ್ಷಣ ಪಡೆದಿರಬೇಕು. ಅನುವಾದಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಕೋರ್ಸ್ ಮಾಡಿದ್ದರೆ ಉತ್ತಮ.


  ಕಂಪನಿ ಸೆಕ್ರೆಟರಿ (ಸಿಎಸ್)

“ಯಶಸ್ಸಿನಿಂದ ಸಂತೋಷ ದೊರಕುವುದಿಲ್ಲ. ಸಂತೋಷವೇ ಯಶಸ್ಸಿಗೆ ದಾರಿ. ನೀವು ಮಾಡುವ ಕೆಲಸವನ್ನು ಪ್ರೀತಿಸಿ. ಯಶಸ್ಸು ಹೊಂದುವಿರಿ”

ಆಲ್ಬರ್ಟ್ ಸ್ವಿಟಿಝರ್

ಕಂಪನಿ ಸೆಕ್ರೆಟರಿ ಎನ್ನುವ ಹುದ್ದೆಯು ಹೆಚ್ಚು ಜವಾಬ್ದಾರಿ ಬಯಸುವ ಉದ್ಯೋಗ.  2013ರ ಕಂಪನಿ ಕಾಯಿದೆ ಪ್ರಕಾರ ಕಂಪನಿ ಕಾರ್ಯದರ್ಶಿಯನ್ನು ಪ್ರಮುಖ ಆಡಳಿತ ನಿರ್ವಹಣಾ ಸಿಬ್ಬಂದಿ (ಕೀ ಮ್ಯಾನೇಜೆರಿಯಲ್ ಪರ್ಸನಲ್-ಕೆಜಿಪಿ) ಎಂದು ಪರಿಗಣಿಸಲಾಗಿದೆ. ಕಂಪನಿ ಕಾರ್ಯದರ್ಶಿ ಎಂದರೆ ಕೇವಲ ಬಾಸ್‍ನ ಅಸಿಸ್ಟೆಂಟ್ ಅಲ್ಲ. ಸಿಎಸ್‍ಗೆ ತನ್ನದೇ ಆದ ಹಲವು ಜವಾಬ್ದಾರಿಗಳಿವೆ. ಸಾರ್ವಜನಿಕ ಸಂಬಂಧ, ಮಾನವ ಸಂಪನ್ಮೂಲ ನಿರ್ವಹಣೆ, ಬಂಡವಾಳ ಮಾರುಕಟ್ಟೆ, ಕಾಪೆರ್Çರೇಟ್ ಆಡಳಿತದ ತಜ್ಞರಾಗಿ, ಕಂಪನಿಯ ಯೋಜನೆ, ಕಾರ್ಯತಂತ್ರಗಳ ಮ್ಯಾನೇಜರ್ ಆಗಿ, ಆಡಳಿತ ಮಂಡಳಿಯ ನಿರ್ದೇಶಕರಿಗೆ ಕಾಪೆರ್Çರೇಟ್ ಆಡಳಿತದ ಬಗ್ಗೆ ಮುಖ್ಯ ಸಲಹೆಗಾರರಾಗಿ ಮತ್ತು ಕಂಪನಿಯ ಕಾನೂನು ಸಂಬಂಧಿತ ವ್ಯವಹಾರಗಳನ್ನು ನೋಡಿಕೊಳ್ಳುವ ತಜ್ಞರಾಗಿ ಕಂಪನಿ ಸೆಕ್ರೆಟರಿ ಸೇವೆಗಳನ್ನು ನೀಡಬಹುದು. ಕಂಪನಿ ಸೆಕ್ರೆಟರಿಯು ಕಂಪನಿ ಮತ್ತು ಅದರ ನಿರ್ದೇಶಕರುಗಳು, ಶೇರು ಹೂಡಿಕೆದಾರರು, ಸರಕಾರ ಮತ್ತು ನಿಯಂತ್ರಣ ಪ್ರಾಧಿಕಾರ ಸೇರಿದಂತೆ ಹಲವು ವಿಭಾಗಗಳ ನಡುವಿನ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.

ಪಿಯುಸಿ ನಂತರ ಯಾರೂ ಬೇಕಾದರೂ ಕಂಪನಿ ಸೆಕ್ರೆಟರಿ ಕೋರ್ಸ್‍ಗೆ ಸೇರಬಹುದಾಗಿದೆ. ದೂರಶಿಕ್ಷಣದ ಮೂಲಕವೂ ಕಲಿಯಬಹುದು. ಇ-ಲರ್ನಿಂಗ್ ಮೂಲಕ ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ಈ ಕೋರ್ಸ್‍ಗೆ ಪ್ರಾಕ್ಟೀಸ್ ಮಾಡುತ್ತಿರಬಹುದು. ಈ ಕೋರ್ಸ್‍ಗಾಗಿ ಮಾಡಿರುವ ರಿಜಿಸ್ಟ್ರೇಷನ್ 3-5 ವರ್ಷ ವ್ಯಾಲಿಡಿಟಿ ಹೊಂದಿರುತ್ತದೆ. ಪ್ರತಿವರ್ಷ ಎರಡು ಸಲ(ಜೂನ್ ಮತ್ತು ಡಿಸೆಂಬರ್) ಸಿಎಸ್ ಕೋರ್ಸ್‍ಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಫೌಂಡೇಷನ್ ಪೆÇ್ರೀಗ್ರಾಂ, ಎಕ್ಸಿಕ್ಯೂಟಿವ್ ಪೆÇ್ರೀಗ್ರಾಂ (ಪ್ರತಿ ಮಾಡ್ಯುಲ್‍ಗೆ) ಮತ್ತು ಪೆÇ್ರಫೆಷನಲ್ ಪೆÇ್ರೀಗ್ರಾಂ(ಪ್ರತಿ ಮಾಡ್ಯುಲ್‍ಗೆ) ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಬಹುದು. ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಬರೆಯಲು ಅವಕಾಶವಿದೆ. ಪ್ರತಿ ಪತ್ರಿಕೆಯಲ್ಲೂ ಶೇಕಡ 40ರಷ್ಟು ಅಂಕ ಮತ್ತು ಎಲ್ಲಾ ವಿಷಯಗಳಲ್ಲಿ ಒಟ್ಟಾರೆ ಶೇಕಡ 50ರಷ್ಟು ಅಂಕ ಪಡೆಯಬೇಕು.

ಕಂಪನಿ ಸೆಕ್ರೆಟರಿ ವೃತ್ತಿಪರರಾಗಿ ಉತ್ತಮ ಉದ್ಯೋಗಾವಕಾಶ ಪಡೆಯಬಹುದು. ಕಂಪನಿ ಸೆಕ್ರೆಟರಿಯಾಗಿ ಕ್ವಾಲಿಫಿಕೇಷನ್ ಪಡೆದ ಅಭ್ಯರ್ಥಿಯು ಕಂಪನಿಗಳಲ್ಲಿ ಅಥವಾ ಸ್ವತಂತ್ರವಾಗಿ ಕಂಪನಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಬಹುದು. ಕಂಪನಿ ಸೆಕ್ರೆಟರಿ ಶೈಕ್ಷಣಿಕ ಸಂಸ್ಥೆಯಿಂದ `ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸ್’ ಪಡೆದ ನಂತರ ಇಂಡಿಪೆಂಡೆಂಟ್ ಪ್ರ್ಯಾಕ್ಟೀಸ್ ಆರಂಭಿಸಬಹುದು. ಸಿಎಸ್‍ಗೆ ಕಂಪನಿಯ ಉನ್ನತ್ತ ಆಡಳಿತದೊಂದಿಗೆ ನೇರ ವ್ಯವಹಾರ ಇರುತ್ತದೆ. ಉತ್ತಮ ವೇತನ ಮತ್ತು ಪ್ರಗತಿಯ ಅವಕಾಶವೂ ಇದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ದಿ ಇನ್‍ಸಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ (ಐಸಿಎಸ್‍ಐ) ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು.

ದಿ ಇನ್‍ಸಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ(ಐಸಿಎಸ್‍ಐ)ಯು ಮೂರು ಹಂತಗಳಲ್ಲಿ ಕಂಪನಿ ಸೆಕ್ರೆಟರಿಶಿಪ್ ಪರೀಕ್ಷೆಗಳನ್ನು ನಡೆಸುತ್ತದೆ. ಫೌಂಡೇಷನ್ ಪೆÇ್ರೀಗ್ರಾಂ: ಸೀನಿಯರ್ ಸೆಕೆಂಡರಿ ಎಗ್ಸಾಂ(10 ಪ್ಲಸ್ 2) ಪೂರೈಸಿದವರು ಫೌಂಡೇಷನ್ ಪೆÇ್ರೀಗ್ರಾಂ ಪರೀಕ್ಷೆ ಬರೆಯಬಹುದು. ಸಿಲೆಬಸ್: ಬಿಸಿನೆಸ್ ಎನ್‍ವಯರ್ನ್‍ಮೆಂಟ್ ಆ್ಯಂಡ್ ಎಂಟರ್‍ಪ್ರಿನರ್‍ಶಿಪ್, ಬಿಸಿನೆಸ್ ಮ್ಯಾನೇಜ್‍ಮೆಂಟ್, ಎಥಿಕ್ಸ್ ಆ್ಯಂಡ್ ಕಮ್ಯುನಿಕೇಷನ್, ಬಿಸಿನೆಸ್ ಎಕಾನಮಿಕ್ಸ್, ಫೌಂಡಮೆಂಟಲ್ಸ್ ಆಫ್ ಅಕೌಂಟಿಂಗ್ ಆ್ಯಂಡ್ ಅಡಿಟಿಂಗ್. ಎಕ್ಸಿಕ್ಯೂಟಿವ್ ಪೆÇ್ರೀಗ್ರಾಂ: ಫೈನ್ ಆಟ್ರ್ಸ್ ಹೊರತುಪಡಿಸಿ ಮಿಕ್ಕೆಲ್ಲ ವಿಷಯಗಳಲ್ಲಿ ಪದವಿ ಪಡೆದ ಅ`À್ಯರ್ಥಿಗಳು ಎಕ್ಸಿಕ್ಯೂಟಿವ್ ಪೆÇ್ರೀಗ್ರಾಂಗೆ ಸೇರಬಹುದು.  ಸಿಎಸ್ ಎಕ್ಸಿಕ್ಯೂಟಿವ್ ಪೆÇ್ರೀಗ್ರಾಮ್ ಎಗ್ಸಾಂ ಪಾಸ್ ಆಗಲು ಕಡ್ಡಾಯ ಕಂಪ್ಯೂಟರ್ ತರಬೇತಿ ಪಡೆದಿರಬೇಕು. ಸಿಲೆಬಸ್: ಇದರಲ್ಲಿ 7 ಪೇಪರ್‍ಗಳಿವೆ. ಮಾಡ್ಯುಲ್ 1ರಲ್ಲಿ ಕಂಪನಿ ಕಾನೂನು, ಕಾಸ್ಟ್ ಆ್ಯಂಡ್ ಮ್ಯಾನೇಜ್‍ಮೆಂಟ್ ಅಕೌಂಟಿಂಗ್, ಎಕಾನಮಿಕ್ ಆ್ಯಂಡ್ ಕಮರ್ಷಿಯಲ್ ಲಾ, ಟ್ಯಾಕ್ಸ್ ಲಾ ಮತ್ತು ಪ್ರಾಕ್ಟೀಸ್ ವಿಷಯಗಳನ್ನು ಓದಬೇಕು. ಮಾಡ್ಯುಲ್ 2ರಲ್ಲಿ ಕಂಪನಿ ಅಕೌಂಟ್ಸ್ ಮತ್ತು ಅಡಿಟಿಂಗ್ ಪ್ರಾಕ್ಟೀಸ್, ಕ್ಯಾಪಿಟಲ್ ಮಾರ್ಕೆಟ್ಸ್, ಸೆಕ್ಯುರಿಟೀಸ್ ಲಾ, ಇಂಡಸ್ಟ್ರಿಯಲ್ ಲೇಬರ್ ಆ್ಯಂಡ್ ಜನರಲ್ ಲಾ ಎಂಬ 3 ಪೇಪರ್‍ಗಳನ್ನು ಅಧ್ಯಯನ ಮಾಡಬೇಕು.  ಪೆÇ್ರಫೆಷನಲ್ ಪೆÇ್ರೀಗ್ರಾಂ: ಎಕ್ಸಿಕ್ಯೂಟಿವ್ ಪೂರೈಸಿದವರು ಮತ್ತು ಪ್ರಾಕ್ಟಿಕಲ್ ಅನುಭವ ಮತ್ತು ತರಬೇತಿ ಅಗತ್ಯಗಳನ್ನು ಪೂರೈಸಿದವರು ಪೆÇ್ರಫೆಷನಲ್ ಪೆÇ್ರೀಗ್ರಾಂಗೆ ಜಾಯಿನ್ ಆಗಬಹುದಾಗಿದೆ. ಸಿಲೆಬಸ್: ಮಾಡ್ಯುಲ್ 1ರಲ್ಲಿ ಅಡ್ವಾನ್ಸಡ್ ಕಂಪನಿ ಲಾ ಮತ್ತು ಪ್ರಾಕ್ಟೀಸ್, ಸೆಕ್ರೇಟೇರಿಯಲ್ ಅಡಿಟ್, ಕಂಪ್ಲಿಯೆನ್ಸ್ ಮ್ಯಾನೇಜ್‍ಮೆಂಟ್, ಡ್ಯೂ ಡೆಲಿಜೆನ್ಸ್, ಕಾಪೆರ್Çರೇಟ್ ರಿಸ್ಟ್ರಕ್ಟರಿಂಗ್, ವ್ಯಾಲುಯೇಷನ್, ಇನ್‍ಸಾಲ್ವೆನ್ಸಿ ವಿಷಯಗಳನ್ನು ಓದಬೇಕು. ಮಾಡ್ಯುಲ್ 2ರಲ್ಲಿ ಇನ್‍ಫಾರ್ಮೆಷನ್ ಟೆಕ್ನಾಲಜಿ ಮತ್ತು ಸಿಸ್ಟಮ್ಸ್ ಅಡಿಟ್, ಫೈನಾನ್ಸಿಯಲ್ ಟ್ರೆಸರಿ ಮತ್ತು ಫಾರೆಕ್ಸ್ ಮ್ಯಾನೇಜ್‍ಮೆಂಟ್, ಎಥಿಕ್ಸ್, ಗವರ್ನೆನ್ಸ್, ಸಸ್ಟೆನೈಬಿಲಿಟಿ ವಿಷಯಗಳನ್ನು ಓದಬೇಕು. ಮಾಡ್ಯುಲ್ 3ರಲ್ಲಿ ಅಡ್ವಾನ್ಸಡ್ ಟ್ಯಾಕ್ಸ್ ಲಾ ಆ್ಯಂಡ್ ಪ್ರಾಕ್ಟೀಸ್, ಡ್ರಾಫ್ಟಿಂಗ್, ಅಪಿಯರೆನ್ಸ್, ಪ್ಲೀಡಿಂಗ್ಸ್, ಇತ್ಯಾದಿಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.

ಎಲ್‍ಎಲ್‍ಬಿ ಜೊತೆಗೆ ಕಂಪನಿ ಸೆಕ್ರೆಟರಿ ಕೋರ್ಸ್ ಮಾಡಿದರೆ ಕಂಪನಿಗಳಲ್ಲಿ ಉತ್ತಮ ಅವಕಾಶ ಪಡಬಹುದು. ಎಲ್‍ಎಲ್‍ಬಿಯು ಸಿಎಸ್ ಜೊತೆ ಅತ್ಯುತ್ತಮ ಹೊಂದಾಣಿಕೆ ಹೊಂದಿದೆ. ಈಗಿನ ದಿನಗಳಲ್ಲಿ ಕಂಪನಿ ಸೆಕ್ರೆಟರಿಯಾಗಿ ಕಾನೂನು ಪದವೀಧರರನ್ನು ನೇಮಕ ಮಾಡುವುದು ಹೆಚ್ಚಾಗುತ್ತಿದೆ. ಚಾರ್ಟೆಡ್ ಅಕೌಂಟೆಂಟ್ ಮಾಡಿಯೂ ಕಂಪನಿ ಸೆಕ್ರೆಟರಿ ಕೋರ್ಸ್ ಮಾಡಬಹುದು. ಈಗ ಅತ್ಯಕ ಸಂಖ್ಯೆಯ ವಿದ್ಯಾರ್ಥಿಗಳು ಸಿಎ ಜೊತೆಗೆ ಸಿಎಸ್ ಮಾಡುತ್ತಿದ್ದಾರೆ. ಸೆಕ್ರೆಟೇರಿಯಲ್ ಮತ್ತು ಹಣಕಾಸು ವಿಭಾಗ, ತೆರಿಗೆ ಇತ್ಯಾದಿ ವಿಭಾಗಗಳನ್ನು ನೋಡಿಕೊಳ್ಳಲು ಸಿಎ ಜೊತೆಗೆ ಸಿಎಸ್ ಕಲಿಕೆ ನೆರವು ನೀಡುತ್ತದೆ. ಎಂಬಿಎ ಫೈನಾನ್ಸ್ ಜೊತೆಗೆ ಕಂಪನಿ ಸೆಕ್ರೆಟರಿ ಶಿಕ್ಷಣ ಪಡೆದರೆ ಅತ್ಯುತ್ತಮ ಅವಕಾಶ, ಜ್ಞಾನ ದೊರಕುತ್ತದೆ. ಹಣಕಾಸು ವೃತ್ತಿಪರ ಮತ್ತು ಕಾನೂನು ಜ್ಞಾನವೂ ಜೊತೆಯಿರುತ್ತದೆ. ಕಂಪನಿ ಸೆಕ್ರೆಟರಿ ಕೋರ್ಸ್ ಕೊತೆಗೆ ಮುಂಬೈನ ನ್ಯಾಷನಲ್ ಸ್ಟಾಕ್ ಎಕ್ಸ್‍ಚೇಂಜ್ ನಡೆಸುವ ಎನ್‍ಸಿಎಫ್‍ಎಂ ಕೋರ್ಸ್ ಅನ್ನೂ ಮಾಡಬಹುದು. ಶೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳಲ್ಲಿ ಕಂಪನಿ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಬಹುದು.


ಯುಪಿಎಸ್‍ಸಿ: ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ

“ಸಾರ್ವಜನಿಕ ಸೇವೆ ಎನ್ನುವುದು ದಕ್ಷತೆ ಮತ್ತು ಪ್ರಾಮಾಣಿಕತೆಗಿಂತಲೂ ಹೆಚ್ಚಿನದನ್ನು ಬಯಸುತ್ತದೆ. ಇದು ಜನರಿಗೆ ಮತ್ತು ದೇಶಕ್ಕಾಗಿ ಸಂಪೂರ್ಣ ಅರ್ಪಣಾ ಮನೋಭಾವದಿಂದ ಮಾಡಬೇಕಾದ ಕಾರ್ಯ”

– ಮಾರ್ಗರೇಟ್ ಸಿ. ಸ್ಮಿತ್

ನೀವು ಬಿಎ, ಬಿ.ಕಾಂ., ಬಿಎಸ್ಸಿ, ಎಂಬಿಬಿಎಸ್, ಎಂಎ, ಡಾಕ್ಟರೇಟ್ ಯಾವುದೇ ಪದವಿ, ಸ್ನಾತಕೋತ್ತರ, ಉನ್ನತ ಶಿಕ್ಷಣ ಪಡೆದಿರಿ. ಯಾವುದೇ ತಾರತಮ್ಯವಿಲ್ಲದೆ ಯುಪಿಎಸ್‍ಸಿ ಪರೀಕ್ಷೆ ಬರೆಯಬಹುದು. ಈ ಪರೀಕ್ಷೆ ಬರೆಯಲು ಯುಜಿಸಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ವಿದ್ಯಾರ್ಹತೆ ಪಡೆದಿದ್ದರೆ ಸಾಕು. ಕಡುಬಡವರೂ ಸಹ ಕಷ್ಟಪಟ್ಟು ಸರಕಾರಿ ಕಾಲೇಜಲ್ಲಿ ಪದವಿ ಮುಗಿಸಿದರೆ ಈ ಪರೀಕ್ಷೆ ಬರೆಯಬಹುದು. ನೀವು ಅಂತಿಮ ವರ್ಷದ ಪದವಿಯಲ್ಲಿದ್ದರೂ ಅರ್ಜಿ ಸಲ್ಲಿಸಬಹುದು.

ಯುಪಿಎಸ್‍ಸಿಯು ಪ್ರಿಲಿಮ್ಸ್ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದಾಗ ಅರ್ಜಿ ಸಲ್ಲಿಸಿ. ಪರೀಕ್ಷೆಯು ಪ್ರತಿವರ್ಷ ಮೇ, ಜೂನ್ ತಿಂಗಳಲ್ಲಿ ನಡೆಯುತ್ತದೆ. ಪರೀಕ್ಷೆಯಲ್ಲಿ ಸಾಮಾನ್ಯ ಅಧ್ಯಯನದ ಪ್ರಶ್ನೆಗಳು ಇರುತ್ತವೆ. ಮತ್ತೊಂದು ಪೇಪರ್ ನೀವು ಆಯ್ದುಕೊಂಡ ಐಚ್ಛಿಕ ವಿಷಯದ ಮೇಲೆ ನಡೆಯುತ್ತದೆ. ಪ್ರಶ್ನೆಗಳು ಬಹುಆಯ್ಕೆ ಮಾದರಿಯಲ್ಲಿರುತ್ತದೆ. ಸಾಮಾನ್ಯ ಅಧ್ಯಯನಕ್ಕೆ 150 ಅಂಕ, ಐಚ್ಛಿಕ ವಿಷಯಕ್ಕೆ 300 ಅಂಕ ಇರುತ್ತದೆ.

ಐಚ್ಛಿಕ ವಿಷಯವಾಗಿ ನೀವು ಯಾವುದೇ ವಿಷಯವನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಅಂದರೆ, ಕೃಷಿ, ಅನಿಮಲ್ ಹಸ್ಬೆಂಡರಿ, ಬಾಟನಿ, ಕೆಮಿಸ್ಟ್ರಿ, ಸಿವಿಲ್ ಎಂಜಿನಿಯರಿಂಗ್, ವಾಣಿಜ್ಯ, ಅರ್ಥಶಾಸ್ತ್ರ, ಭೂಗೋಳ, ಜಿಯೊಲಜಿ, ಇತಿಹಾಸ, ಕಾನೂನು, ಗಣಿತ, ಮೆಕ್ಯಾನಿಕಲ್ ಎಂಜಿನಿಯರಿಂಗ್, ವೈದ್ಯಕೀಯ ವಿಜ್ಞಾನ, ತತ್ವಶಾಸ್ತ್ರ, ಭೌತಶಾಸ್ತ್ರ, ರಾಜ್ಯಶಾಸ್ತ್ರ, ಮನೋಶಾಸ್ತ್ರ, ಸಾರ್ವಜನಿಕ ಆಡಳಿತ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಸಮಾಜಶಾಸ್ತ್ರ, ಸ್ಟ್ಯಾಟಿಸ್ಟಿಕ್ಸ್, ಝುವಾಲಜಿ ಮುಂತಾದ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಪರೀಕ್ಷೆಗೆ ತಯಾರಿ ನಡೆಸಬಹುದು.

ಪ್ರಿಲಿಮ್ಸ್‍ನಲ್ಲಿ ಉತ್ತೀರ್ಣರಾದವರನ್ನು ಯುಪಿಎಸ್‍ಸಿ ಮೇನ್ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ. ಇದರಲ್ಲಿ ಒಂಬತ್ತು ಪತ್ರಿಕೆಗಳು ಇರುತ್ತವೆ. ಪ್ರತಿಯೊಂದು ಪೇಪರ್ ಬರೆಯಲು 3 ಗಂಟೆಗಳ ಕಾಲಾವಧಿ ಇರುತ್ತದೆ. ಎಲ್ಲಾ ಪ್ರಶ್ನೆಪತ್ರಿಕೆಗಳು ತಲಾ 300 ಅಂಕಗಳದ್ದಾಗಿರುತ್ತವೆ. ಭಾರತೀಯ ಭಾಷೆ, ಇಂಗ್ಲಿಷ್, ಪ್ರಬಂಧ, ಸಾಮಾನ್ಯ ಅಧ್ಯಯನ, ತಲಾ 300 ಅಂಕಗಳ ಎರಡು ಐಚ್ಛಿಕ ಪತ್ರಿಕೆಗಳು ಇರುತ್ತವೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಪ್ರಮುಖ ಸುತ್ತು ಆಗಿರುವ ಸಂದರ್ಶನಕ್ಕೆ ಆಯ್ಕೆಯಾಗುತ್ತಾರೆ.

ಸಂದರ್ಶನ ನಡೆದ ಬಳಿಕ ಯುಪಿಎಸ್‍ಸಿ ರ್ಯಾಂಕ್ ಪಟ್ಟಿ ಪ್ರಕಟಿಸುತ್ತದೆ. ನೀವು ಪಡೆದ ರ್ಯಾಂಕ್‍ಗೆ ಅನುಗುಣವಾಗಿ ಐಎಎಸ್, ಐಪಿಎಸ್, ಐಎಫ್‍ಎಸ್ ಇತ್ಯಾದಿ ಕೇಡರ್‍ಗೆ ನಿಯೋಜಿಸಲಾಗುತ್ತದೆ. ಆಯ್ಕೆಪ್ರಕ್ರಿಯೆಯ ಭಾಗವಾಗಿ ದಾಖಲಾತಿ ಪರಿಶೀಲನೆ, ಆರೋಗ್ಯ ಪರಿಶೀಲನೆ ಇತ್ಯಾದಿಗಳೂ ಇರುತ್ತವೆ. ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಕಡ್ಡಾಯ ಫೌಂಡೇಷನ್ ತರಬೇತಿಯಲ್ಲಿ ಭಾಗವಹಿಸಬೇಕು. ಕಠಿಣ ಪರಿಶ್ರಮ, ಹಠ, ಎಚ್ಚರಿಕೆಯ ಸಿದ್ಧತೆ ನಡೆಸಿ ಪರೀಕ್ಷೆ ಬರೆದರೆ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಖಂಡಿತಾ ಯಶಸ್ಸು ಪಡೆಯಬಹುದು.

ಯುಪಿಎಸ್‍ಸಿಯಲ್ಲಿ ಯಶಸ್ಸು ಪಡೆದವರು ಯಾವೆಲ್ಲ ಹುದ್ದೆಗಳನ್ನು ಪಡೆಯಬಹುದು ಎಂಬ ವಿವರವನ್ನು ಮುಂದೆ ಸಂಕ್ಷಿಪ್ತವಾಗಿ ನೀಡಲಾಗಿದೆ. ನೆನಪಿಡಿ ಫಾರೆಸ್ಟ್ ಸರ್ವೀಸ್ ಇತ್ಯಾದಿಗಳನ್ನು ಆಯ್ಕೆ ಮಾಡಿಕೊಳ್ಳುವವರು ಪ್ರತ್ಯೇಕ ಮೇನ್ಸ್ ಪರೀಕ್ಷೆ ಬರೆಯಬೇಕಾಗುತ್ತದೆ. ಎಲ್ಲಾ ಹುದ್ದೆಗಳಿಗೂ ಒಂದೇ ರೀತಿಯ ಪ್ರಿಲಿಮ್ಸ್ ಪರೀಕ್ಷೆ ಇರುತ್ತದೆ.

ಐಎಎಸ್

ಜಗತ್ತಿನ ಅತ್ಯಂತ ಪ್ರತಿಷ್ಠಿತ ಹುದ್ದೆಗಳಲ್ಲಿ ಐಎಎಸ್ ಒಂದಾಗಿದೆ. ದೇಶದ ವಿವಿಧ ಜಿಲ್ಲೆಗಳ ಉಸ್ತುವಾರಿ ಅಥವಾ ಯಾವುದಾದರೂ ಸಚಿವಾಲಯದ ಪ್ರಮುಖ ಹುದ್ದೆ ಅಥವಾ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಉಸ್ತುವಾರಿ ಸೇರಿದಂತೆ ಹತ್ತು ಹಲವು ವಿಭಾಗಳಲ್ಲಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಅನುಭವ ಹೆಚ್ಚಾದಂತೆ ಇವರನ್ನು ಅತ್ಯಂತ ಪ್ರಮುಖ ವಿಭಾಗಗಳಿಗೆ ಬಡ್ತಿ ನೀಡಲಾಗುತ್ತದೆ. ಐಎಎಸ್ ಅಧಿಕಾರಿಗಳಿಗೆ ಸರಕಾರವು ನೀಡುವ ಸೌಲಭ್ಯವೂ ಅತ್ಯುತ್ತಮವಾಗಿರುತ್ತದೆ. ದೊಡ್ಡ ಬಂಗಲೆ, ಸರಕಾರಿ ಕಾರು, ಉತ್ತಮ ವೇತನ ಹೀಗೆ ಹತ್ತು ಹಲವು ಸೌಕರ್ಯ ಇರುವ ಐಎಎಸ್ ಅಧಿಕಾರಿಯ ಖದರೇ ಬೇರೆ. ದೇಶಕ್ಕೆ ಒಳ್ಳೆಯದನ್ನು ಮಾಡಲು ಸಾಕಷ್ಟು ಅವಕಾಶ ಇವರಿಗೆ ಇರುತ್ತದೆ. ದೇಶದಲ್ಲಿ ಸಾಕಷ್ಟು ಪ್ರಾಮಾಣಿಕ ಐಎಎಸ್ ಅಧಿಕಾರಿಗಳು ತಮ್ಮ ಒಳ್ಳೆಯ ಕೆಲಸದಿಂದ ಹೆಸರು ಮಾಡಿದ್ದಾರೆ.

ಐಎಫ್‍ಎಸ್

ಯುಪಿಎಸ್‍ಸಿ ಪರೀಕ್ಷೆಯ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾದವರು ಭಾರತದ ವಿದೇಶಾಂಗ ಸೇವೆ(ಐಎಫ್‍ಎಸ್)ಗೂ ಸೇರಬಹುದು. ಈ ಹುದ್ದೆಗೆ ಆಯ್ಕೆಯಾದವರು ವಿದೇಶದಲ್ಲಿ ಭಾರತದ ರಾಯಭಾರಿಗಳಾಗಿ, ಆಯುಕ್ತರಾಗಿ, ಕೌನ್ಸಲ್ ಜನರಲ್ ಆಗಿ, ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿ, ವಿದೇಶಾಂಗ ಕಾರ್ಯದರ್ಶಿಯಾಗಿ… ಹೀಗೆ ಹತ್ತು ಹಲವು ಅವಕಾಶಗಳನ್ನು ಪಡೆದುಕೊಳ್ಳಬಹುದು.

ಐಪಿಎಸ್

ಐಪಿಎಸ್ ಅಧಿಕಾರಿಯಾಗುವುದು ಬಹುತೇಕರ ಕನಸು. ಈ ಕನಸು ನಿಮ್ಮಲ್ಲಿಯೂ ಇರಬಹುದು. ಯುಪಿಎಸ್‍ಸಿ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಅತ್ಯುತ್ತಮ ಅಂಕ ಪಡೆದು ಉನ್ನತ ರ್ಯಾಂಕ್ ಪಡೆದು ನಿಮ್ಮ ಈ ಕನಸನ್ನು ಈಡೇರಿಸಿಕೊಳ್ಳಬಹುದು. ಗೃಹ ಸಚಿವಾಲಯದಡಿ ಬರುವ ಭಾರತೀಯ ಪೊಲೀಸ್ ಅಧಿಕಾರಿ/ಣಿಯಾಗಿ ನೀವು ಮಿಂಚಬಹುದು. ದೇಶದಲ್ಲಿ ನಡೆಯುವ ಅಪರಾಧಗಳಿಗೆ ಅಂಕುಶ ಹಾಕಬಹುದು.

ಐಪಿಆಂಡ್‍ಟಿ ಎಎಫ್‍ಎಸ್

ಯುಪಿಎಸ್‍ಸಿಯಲ್ಲಿ ರ್ಯಾಂಕ್ ಪಡೆದು ಆಯ್ಕೆಯಾದವರು ಇಂಡಿಯನ್ ಪೋಸ್ಟ್ ಮತ್ತು ಟೆಲಿಕಮ್ಯುನಿಕೇಷನ್ ಅಕೌಂಟ್ಸ್ ಮತ್ತು ಫೈನಾನ್ಸ್ ಸರ್ವೀಸ್‍ನಲ್ಲಿಯೂ ಉನ್ನತ್ತ ಹುದ್ದೆ ಪಡೆಯಬಹುದು. ಯುಪಿಎಸ್‍ಸಿ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ವಿಭಾಗದಲ್ಲಿ 2 ವರ್ಷದ ಪ್ರೊಬೆಷನರಿ ಅವಧಿಯ ತರಬೇತಿ ಇರುತ್ತದೆ. ಈ ಸಮಯದಲ್ಲಿ ಫೌಂಡೇಷನ್ ಕೋರ್ಸ್, ಪ್ರೊಫೆಷನಲ್ ಟ್ರೇನಿಂಗ್ ಕೋರ್ಸ್ ಮತ್ತು ಇಲಾಖಾ ತರಬೇತಿ ನೀಡಲಾಗುತ್ತದೆ. ಪ್ರೊಬೆಷನರಿ ಅವಧಿ ಬಳಿಕ ಅಸಿಸ್ಟೆಂಟ್ ಚೀಫ್ ಅಕೌಂಟ್ಸ್ ಆಫೀಸರ್, ಅಸಿಸ್ಟೆಂಟ್ ಡೈರೆಕ್ಟರ್ ಜನರಲ್, ಡೈರೆಕ್ಟರ್, ಡೆಪ್ಯೂಟಿ ಡೈರೆಕ್ಟರ್, ಕಂಟ್ರೋಲರ್ ಆಫ್ ಕಮ್ಯುನಿಕೇಷನ್ ಆನ್ ಅಕೌಂಟ್ಸ್, ಜನರಲ್ ಮ್ಯಾನೇಜರ್ ಇತ್ಯಾದಿ ಉನ್ನತ ಹುದ್ದೆಗಳನ್ನು ಪಡೆಯಬಹುದು.

ಐಎ ಆಂಡ್ ಎಎಸ್

ಇದನ್ನು ಐಎಎಎಸ್ ಎಂದೂ ಕರೆಯುತ್ತಾರೆ. ಇದರರ್ಥ ಇಂಡಿಯನ್ ಅಡಿಟ್ ಮತ್ತು ಅಕೌಂಟ್ಸ್ ಸರ್ವೀಸ್. ಇದು ಭಾರತ ಸರಕಾರದ ನಾಗರಿಕ ಸೇವೆಯಲ್ಲಿ ಗ್ರೂಪ್ ಎ ಹುದ್ದೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಾಗೂ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ಲೆಕ್ಕಪರಿಶೋಧನೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುವುದು ಇವರ ಕಾರ್ಯವಾಗಿದೆ. ಯುಪಿಎಸ್‍ಸಿ ಪರೀಕ್ಷೆಯಲ್ಲಿ ಈ ಕೇಡರ್‍ಗೆ ಆಯ್ಕೆಯಾದವರಿಗೆ ಹಿಮಾಚಲಪ್ರದೇಶದ ಶಿಮ್ಲಾದಲ್ಲಿರುವ ನ್ಯಾಷನಲ್ ಅಕಾಡೆಮಿ ಆಫ್ ಅಡಿಟ್ ಆಂಡ್ ಅಕೌಂಟ್ಸ್‍ನಲ್ಲಿ ತರಬೇತಿ ನೀಡಲಾಗುತ್ತದೆ.

ಇಂತಹ ಹಲವು ಕೇಡರ್‍ಗಳಿಗೆ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಅವರ ರ್ಯಾಂಕ್‍ಗೆ ಅನುಗುಣವಾಗಿ ನೇಮಕ ಮಾಡಲಾಗುತ್ತದೆ. ಉಳಿದ ಕೇಡರ್‍ಗಳ ಹೆಸರುಗಳು ಈ ಮುಂದಿನಂತೆ ಇವೆ.

ಇನ್ನುಳಿದ ಕೇಡರ್‍ಗಳು

•             ಐಆರ್‍ಎಸ್ (ಸಿ ಮತ್ತು ಸಿಇ): ಇಂಡಿಯನ್ ರೆವೆನ್ಯೂ ಸರ್ವೀಸ್

•             ಐಡಿಎಎಸ್: ಭಾರತೀಯ ರಕ್ಷಣಾ ಆಡಳಿತ ಸೇವೆ

•             ಐಆರ್‍ಎಸ್ (ಐಟಿ)

•             ಐಒಎಫ್‍ಎಸ್ ಅಧಿಕಾರಿ: ಭಾರತೀಯ ರಕ್ಷಣಾ ಶಸ್ತ್ರಾಗಾರ ವಿಭಾಗದಲ್ಲಿ ಹುದ್ದೆ

•             ಐಒಪಿಎಸ್: ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

•             ಐಸಿಎಎಸ್: ಆಫೀಸ್ ಆಫ್ ದಿ ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್

•             ಐಆರ್‍ಟಿಎಸ್: ರೈಲ್ವೆ ಇಲಾಖೆಯಲ್ಲಿ ಉನ್ನತ ಹುದ್ದೆಗಳು

•             ಐಆರ್‍ಎಎಸ್: ರೈಲ್ವೆ ಇಲಾಖೆ

•             ಐಆರ್‍ಪಿಎಸ್: ರೈಲ್ವೆ ಇಲಾಖೆ

•             ಆರ್‍ಪಿಎಫ್: ರೈಲ್ವೆ ರಕ್ಷಣಾ ಪಡೆ

•             ಐಡಿಇಎಸ್: ರಕ್ಷಣಾ ಪಡೆ

•             ಐಐಎಸ್: ಇನ್‍ಫಾರ್ಮೆಷನ್ ಮತ್ತು ಬ್ರಾಡ್‍ಕಾಸ್ಟಿಂಗ್ ಸಚಿವಾಲಯ

•             ಐಟಿಎಸ್: ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

•             ಸಿಎಸ್‍ಎಸ್: ಸಿಬ್ಬಂದಿ ಮತ್ತು ತರಬೇತಿ ಇಲಾಖೆ

•             ಆರ್‍ಬಿಎಸ್‍ಎಸ್: ರೈಲ್ವೆ

•             ಎಎಫ್‍ಎಚ್‍ಕ್ಯೂ: ರಕ್ಷಣಾ ಸಚಿವಾಲಯ

•             ಸಿಎಎಸ್: ಹಣಕಾಸು ಸಚಿವಾಲಯ

•             ಡಿಎಎನ್‍ಐಸಿಎಸ್: ಗೃಹ ಸಚಿವಾಲಯ

•             ಡಿಎಎನ್‍ಐಪಿಎಸ್: ಗೃಹ ಸಚಿವಾಲಯ

•             ಪಿಒಎನ್‍ಡಿಐಸಿಎಸ್: ಪುದುಚೇರಿ ಸರಕಾರ, ಮುಖ್ಯ ಕಾರ್ಯದರ್ಶಿ

•             ಪಿಒಎನ್‍ಡಿಐಸಿಎಸ್: ಪುದುಚೇರಿ ಸರಕಾರ, ಮುಖ್ಯ ಕಾರ್ಯದರ್ಶಿ

•             ಐಸಿಎಲ್‍ಎಸ್: ಕಂಪನಿ ವ್ಯವಹಾರಗಳ ಸಚಿವಾಲಯದಲ್ಲಿ ನೇಮಕ


ಇತರರ ಭವಿಷ್ಯ ರೂಪಿಸುವ ಶಿಕ್ಷಕ ವೃತ್ತಿ

 “ಟೀಚರ್ ಆಗುವುದು ಕಠಿಣ ಕೆಲಸವಲ್ಲ. ಆದರೆ, ಒಳ್ಳೆಯ ಟೀಚರ್ ಆಗುವುದು ಕಷ್ಟದ ಕೆಲಸ”

– ಅನಾಮಿಕ

ಇದು ಭವಿಷ್ಯ ಬದಲಾಯಿಸಿಕೊಳ್ಳಲು ಮತ್ತು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವಂತೆ ಮಾಡಲು ಇರುವ ಅನನ್ಯ ಅವಕಾಶವಾಗಿದೆ. ಪ್ರಾಥಮಿಕ, ಹೈಸ್ಕೂಲ್ ಶಿಕ್ಷಕ/ಕಿ ಆಗುವುದು ಹೇಗೆ? ಕಾಲೇಜಿನ ಪ್ರೊಫೆಸರ್ ಆಗುವುದು ಹೇಗೆ? ಅಸಿಸ್ಟೆಂಟ್ ಪ್ರೊಫೆಸರ್ ಇತ್ಯಾದಿ ಹುದ್ದೆ ಪಡೆಯುವುದು ಹೇಗೆ? ಇತ್ಯಾದಿ ಬೋಧಕ ವೃತ್ತಿಗೆ ಸಂಬಂಧಪಟ್ಟ ಮಾಹಿತಿಯು ಹೆಚ್ಚಿನವರಿಗೆ ಇರುತ್ತದೆ. ಯಾಕೆಂದರೆ, ಈ ಹುದ್ದೆಯು ಅಷ್ಟೊಂದು ಜನಪ್ರಿಯವಾಗಿದೆ. ಹೀಗಾಗಿ, ಬೋಧಕ ವೃತ್ತಿಯ ಕುರಿತು ಸಂಕ್ಷಿಪ್ತ ವಿವರಣೆ ನೀಡಲಾಗಿದೆ.

ಮೊದಲಿಗೆ ನೀವು ಯಾವ ವಿದ್ಯಾರ್ಥಿಗಳಿಗೆ ಬೋಧಿಸಲು ಬಯಸುವಿರಿ ಎನ್ನುವುದನ್ನು ನಿರ್ಧರಿಸಿಕೊಳ್ಳಿ. ಪ್ರಾಥಮಿಕ, ಹೈಸ್ಕೂಲ್, ಪಿಯುಸಿ, ಡಿಗ್ರಿ, ಸ್ನಾತಕೋತ್ತರ ಅಥವಾ ಇತರೆ ಯಾವ ಕೋರ್ಸ್‍ಗೆ ನೀವು ಬೋಧಕರಾಗಿ ಸೇರಲು ಬಯಸುವಿರಿ ಎನ್ನುವುದನ್ನು ನಿರ್ಧರಿಸಿಕೊಳ್ಳಿ. ನಂತರ ಅದಕ್ಕೆ ಪೂರಕವಾದ ಶಿಕ್ಷಣ ಪಡೆಯಿರಿ.

ಪ್ರೈಮರಿ ಶಿಕ್ಷಕ/ಕಿಯಾಗಿ ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನ, ವಿಜ್ಞಾನ, ಗಣಿತ, ನೈತಿಕ ಶಿಕ್ಷಣ, ಕಂಪ್ಯೂಟರ್ ಜ್ಞಾನ, ಕನ್ನಡ, ಹಿಂದಿ ಇತ್ಯಾದಿ ಹಲವು ವಿಷಯಗಳನ್ನು ಬೋಧಿಸಬೇಕಾಗುತ್ತದೆ. ಸೆಕೆಂಡರಿ ಸ್ಕೂಲ್ ಅಥವಾ ಹೈಸ್ಕೂಲ್‍ನಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ, ಇತಿಹಾಸ… … ಇತ್ಯಾದಿ ಹಲವು ವಿಷಯಗಳನ್ನು ಬೋಧಿಸಬೇಕಾಗುತ್ತದೆ.

ಪ್ರಾಥಮಿಕ ಶಿಕ್ಷಕರಾಗಲು ಟಿಸಿಎಚ್, ಬಿಎ ಬಿಎಡ್, ನರ್ಸರಿ ಟೀಚರ್ ಆಗಲು ನರ್ಸರಿ ಟೀಚರ್ ತರಬೇತಿ ಹೀಗೆ ಹಲವು ಬಗೆಯ ಕಲಿಕೆಗಳಿವೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈಗ ಶಿಕ್ಷಕ/ಕಿ ಆಗಲು ಅರ್ಹತಾ ಪರೀಕ್ಷೆಯನ್ನು ಕಡ್ಡಾಯವಾಗಿ ಉತ್ತೀರ್ಣರಾಗಬೇಕು. ಟಿಇಟಿ: ಪ್ರೈಮರಿ ಮತ್ತು ಸೆಕೆಂಡರಿ ಹಂತದ ಶಿಕ್ಷಕ/ಕಿಯಾಗಲು ಕಡ್ಡಾಯವಾಗಿ ಟಿಇಟಿ ಅಥವಾ ಟೀಚರ್ ಎಲಿಜಿಬಿಲಿಟಿ ಪರೀಕ್ಷೆಯನ್ನು ಉತ್ತೀರ್ಣರಾಗಬೇಕು. ಈ ಪರೀಕ್ಷೆಯನ್ನು ಎನ್‍ಸಿಟಿಇ(ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಎಜುಕೇಷನ್) ನಡೆಸುತ್ತದೆ. ಸಿಟಿಇಟಿ: ನೀವು ಕೇಂದ್ರೀಯ ಸರಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಟೀಚಿಂಗ್ ವೃತ್ತಿ ಮಾಡಲು ಸೆಂಟ್ರಲ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ ಉತ್ತೀರ್ಣರಾಗಬೇಕು. ಇವೆರಡು ಪರೀಕ್ಷೆಗಳು ಎರಡು ವಿಭಾಗದಲ್ಲಿ ನಡೆಯುತ್ತದೆ. 1ರಿಂದ 5ನೇ ತರಗತಿಯ ಟೀಚರ್ ಆಗಲು ಒಂದು ವಿಭಾಗ, 6ರಿಂದ 8ನೇ ತರಗತಿವರೆಗೆ ಟೀಚರ್ ಆಗಲು ಇನ್ನೊಂದು ವಿಭಾಗದಲ್ಲಿ ಪರೀಕ್ಷೆ ನಡೆಯುತ್ತದೆ.

ಕಾಲೇಜು ಬೋಧಕರಾಗಲು ಎಂಎ ಇತ್ಯಾದಿ ಸ್ನಾತಕೋತ್ತರ ಪದವಿ ಪಡೆಯಬೇಕು. ಬಳಿಕ ನೆಟ್ ಇತ್ಯಾದಿ ಪರೀಕ್ಷೆ ಬರೆಯಬೇಕು. ಪಿಜಿಟಿ, ಟಿಜಿಟಿ ಇತ್ಯಾದಿ ಕೋರ್ಸ್‍ಗಳನ್ನು ಮಾಡಬೇಕು. ಬೋಧಕ ವೃತ್ತಿಯ ಕುರಿತು ಮಾಹಿತಿಯು ಸುಲಭವಾಗಿ ದೊರಕುವುದರಿಂದ ಇಲ್ಲಿ ಹೆಚ್ಚು ವಿವರವನ್ನು ನೀಡಲಾಗಿಲ್ಲ.


ವಿವಿಧ ಉದ್ಯೋಗ ಕ್ಷೇತ್ರಗಳಲ್ಲಿ ಮ್ಯಾನೇಜರ್ ಹುದ್ದೆ

“ಅತ್ಯುತ್ತಮ ವ್ಯವಸ್ಥಾಪಕರು ತಮ್ಮ ಜನರಿಗಾಗಿ ಹೋರಾಡುತ್ತಾರೆ. ತನ್ನ ತಂಡದ ಬೆಳವಣಿಗೆಯೇ ತನ್ನ ಬೆಳವಣಿಗೆ ಎಂದುಕೊಳ್ಳುತ್ತಾರೆ”

– ಲಿಜ್ ಬ್ರಿನರ್

ಯಾವುದೇ ಉದ್ಯಮ ಇರಲಿದೆ. ಅಲ್ಲಿ ಮ್ಯಾನೇಜರ್ ಎಂಬ ವ್ಯಕ್ತಿ ಇದ್ದೇ ಇರುತ್ತಾನೆ/ಳೆ. ಮ್ಯಾನೇಜರ್ ಎಂಬ ಹುದ್ದೆಗೆ ಈಗಲೂ ಬೇಡಿಕೆಯಿದೆ. ಮುಂದೆಯೂ ಬೇಡಿಕೆ ಇರಲಿದೆ. ಇತರರನ್ನು ನಿರ್ವಹಿಸುವ, ಕೆಲಸ ಮಾಡುವಂತೆ ಉತ್ತೇಜಿಸುವ ಉದ್ಯೋಗವಿದು. ಕೌಶಲ ಇರುವ ಮ್ಯಾನೇಜರ್‍ಗೆ ಯಾವಾಗಲೂ ಬೇಡಿಕೆಯಿದೆ. ಅತ್ಯುತ್ತಮ ವೇತನವೂ ದೊರಕುತ್ತದೆ.

ಮ್ಯಾನೇಜರ್ ಹುದ್ದೆಗೆ ಇದೇ ಶಿಕ್ಷಣ ಪಡೆಯಬೇಕೆಂದಿಲ್ಲ. ಹೆಚ್ಚಾಗಿ ಎಂಬಿಎ ಇತ್ಯಾದಿ ಮ್ಯಾನೇಜ್‍ಮೆಂಟ್ ಶಿಕ್ಷಣ ಪಡೆದವರು ಮ್ಯಾನೇಜ್‍ಮೆಂಟ್ ಹುದ್ದೆಗಳಲ್ಲಿ ಹೆಚ್ಚಾಗಿ ಇರುತ್ತಾರೆ. ಸಾಮಾನ್ಯವಾಗಿ ಮ್ಯಾನೇಜರ್‍ಗಳನ್ನು ಮೂರು ಹಂತಗಳಾಗಿ ವಿಭಾಗಿಸಬಹುದು. 1. ಉನ್ನತ ಹಂತದ ವ್ಯವಸ್ಥಾಪಕರು ಅಥವಾ ಹಿರಿಯ ಮ್ಯಾನೇಜರ್. 2. ಮಧ್ಯಮ ಹಂತದ ಮ್ಯಾನೇಜರ್ ಅಥವಾ ಮಿಡಲ್ ಮ್ಯಾನೇಜ್‍ಮೆಂಟ್. 3. ಸೂಪರ್‍ವೈಸರ್‍ಗಳು. ಇದರಲ್ಲಿ ಟಾಪ್ ಲೆವೆಲ್ ಮ್ಯಾನೇಜರ್ ಹುದ್ದೆಗೆ ತನ್ನದೇ ಆದ ವಿಶೇಷ ಜವಾಬ್ದಾರಿ ಇರುತ್ತದೆ. ಕಂಪನಿಯನ್ನು ಕಠಿಣ ಪರಿಸ್ಥಿತಿಯಲ್ಲಿಯೂ ಮುನ್ನಡೆಸುವ ಛಾತಿ ಇರಬೇಕಾಗುತ್ತದೆ. ಮಧ್ಯಮ ಹಂತದ ಮ್ಯಾನೇಜರ್‍ಗೆ ದೃಢವಾದ ಸಮಸ್ಯೆ ಬಗೆಹರಿಸುವ ಕೌಶಲ ಇರಬೇಕಾಗುತ್ತದೆ. ದೊಡ್ಡ ಗುಂಪನ್ನು ನಿಭಾಯಿಸುವ ಸಾಮಥ್ರ್ಯ ಇರಬೇಕಾಗುತ್ತದೆ. ಸೂಪರ್‍ವೈಸರ್‍ಗೆ ಉದ್ಯೋಗಿಗಳನ್ನು ನಿರ್ವಹಣೆ ಮಾಡುವ ಸಾಮಥ್ರ್ಯ ಅಗತ್ಯವಾಗಿರಬೇಕು. ನಿಗದಿಪಡಿಸಿದ ಕೆಲಸವನ್ನು ಸರಿಯಾದ ಸಮಯಕ್ಕೆ ಮತ್ತು ಸಮರ್ಪಕವಾಗಿ ಮಾಡಿಸುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಇವರಿಗೆ ಇರುತ್ತದೆ.

ಆಡಳಿತ ಸೇವೆಯ ವ್ಯವಸ್ಥಾಪಕರು ಕಂಪನಿಯ ಸೇವೆಗಳ ಕುರಿತು ಯೋಜಿಸುವ, ಸಮನ್ವಯತೆ ಸಾಧಿಸುವ ಕೆಲಸ ಮಾಡುತ್ತಾರೆ. ಅಂದರೆ, ಮೀಟಿಂಗ್ ಆಯೋಜಿಸುವುದು, ಇಮೇಲ್ ಮೂಲಕ ನಿರ್ದೇಶನಗಳನ್ನು ನೀಡುವುದು ಇತ್ಯಾದಿ. ಜಾಹೀರಾತು ಅಥವಾ ಮಾರುಕಟ್ಟೆ ವಿಭಾಗದ ಮ್ಯಾನೇಜರ್‍ಗಳು ಹೊಸ ಕ್ಯಾಂಪೈನ್ ರಚಿಸಬೇಕು ಮತ್ತು ಅದನ್ನು ಸಾಧಿಸಲು ಉದ್ಯೋಗಿಗಳನ್ನು ನಿಯೋಜಿಸಬೇಕು. ಅಭಿಯಾನವು ಯಶಸ್ಸುಗೊಳ್ಳುವಂತೆ ನೋಡಿಕೊಳ್ಳಬೇಕು. ಎಚ್‍ಆರ್ ವಿಭಾಗದ ಮ್ಯಾನೇಜರ್‍ಗಳು ಉದ್ಯೋಗಿಗಳ ವೇತನ ಯೋಜನೆ, ಬೋನಸ್, ವೇತನ ಹೆಚ್ಚಳ, ಕಂಪನಿಯ ಉದ್ಯೋಗಿಗಳಿಗೆ ವಿವಿಧ ಸೌಲಭ್ಯ ಇತ್ಯಾದಿಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಐಟಿ ಮ್ಯಾನೇಜರ್‍ಗಳು ಕಂಪನಿಯ ತಾಂತ್ರಿಕ ಅವಶ್ಯಕತೆಗಳನ್ನು ಗುರುತಿಸಬೇಕು ಮತ್ತು ಆ ಅವಶ್ಯಕತೆಗಳನ್ನು ಯಾವ ರೀತಿ ಪೂರೈಸಬೇಕು ಎನ್ನುವುದನ್ನು ಯೋಜಿಸಬೇಕು. ಸಾಫ್ಟ್‍ವೇರ್ ಅಪ್‍ಡೇಟ್‍ಗಳಿಗೆ ಸೌಕರ್ಯ ಅಭಿವೃದ್ಧಿಪಡಿಸುವುದು ಸೇರಿದಂತೆ ವಿವಿಧ ಕಾರ್ಯಗಳನ್ನು ಮಾಡಬೇಕು. ಹಣಕಾಸು ಮ್ಯಾನೇಜರ್ ಸಹ ಇನ್ನೊಂದು ಪ್ರಮುಖ ವ್ಯವಸ್ಥಾಪಕ ಹುದ್ದೆಯಾಗಿದೆ. ಕಂಪನಿಯ ಹಣಕಾಸು ಸ್ಥಿತಿ ಉತ್ತಮವಾಗಿರುವಂತೆ ನೋಡಿಕೊಳ್ಳುವಲ್ಲಿ ಇವರ ಪಾತ್ರ ಹಿರಿದು. ಕಂಪನಿ ನಷ್ಟದಲ್ಲಿರುವಾಗ ವೆಚ್ಚ ಕಡಿತ, ಲಾಭ ಹೆಚ್ಚಿಸುವ ಯೋಜನೆಗಳನ್ನು ರೂಪಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಮಾಡುತ್ತಾರೆ. ಆಹಾರ ಸೇವಾ ಮ್ಯಾನೇಜರ್‍ಗಳು ರೆಸ್ಟೂರೆಂಟ್ ಅಥವಾ ಹೋಟೇಲ್‍ಗಳಿಗೆ ದಿನನಿತ್ಯ ಆಹಾರ ಸರಕುಗಳನ್ನು ಪೂರೈಸುವ ಹೊಣೆಗಾರಿಕೆ ಇವರಿಗೆ ಇರುತ್ತದೆ. ವೈದ್ಯಕೀಯ ಸೇವಾ ಮ್ಯಾನೇಜರ್‍ಗಳು ವೈದ್ಯರ ಕ್ಲಿನಿಕ್‍ಗಳಲ್ಲಿ, ಆಸ್ಪತ್ರೆಗಳಲ್ಲಿ ಪ್ರತಿನಿತ್ಯದ ವ್ಯವಹಾರದ ಉಸ್ತುವಾರಿಯನ್ನು ನೋಡಿಕೊಳ್ಳಬೇಕು.

ಬಹುತೇಕ ಉದ್ಯಮಗಳು ಮ್ಯಾನೇಜರ್ ಎಂಬ ಹುದ್ದೆಯನ್ನು ಹೊಂದಿದೆ. ಆ ಹುದ್ದೆಗಳ ಹೆಸರು ಮುಂದಿನಂತೆ ಇದೆ. ಅದಕ್ಕೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಮ್ಯಾನೇಜ್‍ಮೆಂಟ್ ಶಿಕ್ಷಣ ಪಡೆದು ಈ ವಿಭಾಗದಲ್ಲಿ ಹುದ್ದೆ ಪಡೆಯಬಹುದು. ಕೆಲವು ಮ್ಯಾನೇಜರ್ ಹುದ್ದೆಗಳು: ಅಕೌಂಟಿಂಗ್ ಮ್ಯಾನೇಜರ್, ಅಕೌಂಟ್ ಮ್ಯಾನೇಜ್‍ಮೆಂಟ್, ಅಡ್ವೈಟರ್ಸಿಂಗ್ ಮ್ಯಾನೇಜರ್, ಅಸೋಸಿಯೇಟ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಆಟೋಮೋಟಿವ್ ಮ್ಯಾನೇಜರ್, ಬ್ರಾಂಚ್ ಮ್ಯಾನೇಜರ್, ಬಜೆಟ್ ಮ್ಯಾನೇಜರ್, ಬಿಸ್ನೆಸ್ ಡೆವಲಪ್‍ಮೆಂಟ್ ಮ್ಯಾನೇಜರ್, ಬಿಸ್ನೆಸ್ ಮ್ಯಾನೇಜರ್, ಜಿಲ್ಲಾ ಮ್ಯಾನೇಜರ್, ವಿಭಾಗೀಯ ಮ್ಯಾನೇಜರ್, ಗ್ರಾಹಕ ಸೇವಾ ವ್ಯವಸ್ಥಾಪಕರು, ಎಂಪ್ಲಾಯಿ ಬೆನಿಫಿಟ್ಸ್ ಮ್ಯಾನೇಜರ್, ರಿಲೇಷನ್ ಮ್ಯಾನೇಜರ್, ಗ್ರಾಂಟ್ ಮ್ಯಾನೇಜರ್, ಹ್ಯೂಮನ್ ರಿಸೋರ್ಸ್ ಮ್ಯಾನೇಜರ್, ಲೀಸಿಂಗ್ ಮ್ಯಾನೇಜರ್, ಮ್ಯಾನೇಜ್‍ಮೆಂಟ್ ಟ್ರೇನಿ, ಮಾರ್ಕೆಟಿಂಗ್ ಮ್ಯಾನೇಜರ್, ಮರ್ಚೆಂಡೈಸ್ ಮ್ಯಾನೇಜರ್, ಆಫೀಸ್ ಮ್ಯಾನೇಜರ್, ಪೋರ್ಟ್‍ಪೊಲಿಯೊ ಮ್ಯಾನೇಜರ್, ಪ್ರೊಡಕ್ಷನ್ ಮ್ಯಾನೇಜರ್, ಪ್ರಾಡಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಮ್ಯಾನೇಜರ್, ರೆಸ್ಟೂರೆಂಟ್ ಮ್ಯಾನೇಜರ್, ಸೇಫ್ಟಿ ಮ್ಯಾನೇಜರ್, ಸೇಲ್ಸ್ ಮ್ಯಾನೇಜರ್ ಹೀಗೆ… ನೂರಾರು ಬಗೆಯ ಮ್ಯಾನೇಜರ್ ಹುದ್ದೆಗಳಿವೆ. ಇವುಗಳಲ್ಲಿ ನೀವು ಯಾವ ಮ್ಯಾನೇಜರ್ ಆಗುವಿರಿ? ನಿಮ್ಮ ಭವಿಷ್ಯವನ್ನು ಯಾವ ಹುದ್ದೆಯ ಮೂಲಕ ಬದಲಾಯಿಸಿಕೊಳ್ಳಲು ಬಯಸುವಿರಿ? ಯೋಚಿಸಿ.

ಪ್ರತಿಯೊಂದು ಉದ್ಯಮಕ್ಕೂ ಮ್ಯಾನೇಜರ್ ಹುದ್ದೆಯು ಅತ್ಯಂತ ಅವಶ್ಯಕವಾಗಿದೆ. ಕಂಪನಿಯೊಂದರ ಉನ್ನತಿ, ದುರ್ಗತಿಯ ಹಿಂದೆ ಮ್ಯಾನೇಜರ್ ಕಾರ್ಯನಿರ್ವಹಣೆ ಪ್ರಮುಖ ಪಾತ್ರವಹಿಸುತ್ತದೆ. ಸಾಮಾನ್ಯ ಮ್ಯಾನೇಜರ್ ಆಗಿ ಹುದ್ದೆ ಆರಂಭಿಸಿದ ವ್ಯಕ್ತಿಯು ಭವಿಷ್ಯದಲ್ಲಿ ಕಂಪನಿಯೊಂದರ ಅತ್ಯುನ್ನತ ಹುದ್ದೆಗೂ ಏರಬಹುದು.


  ಸಾಫ್ಟ್‌ವೇರ್‌ ಎಂಜಿನಿಯರ್

“ನಾವು ಎದುರಿಸುತ್ತಿರುವ ಮಹತ್ವದ ಸಮಸ್ಯೆಗಳನ್ನು ಅವುಗಳನ್ನು ರಚಿಸಿದ ಅದೇ ಮಟ್ಟದ ಚಿಂತನೆಯಿಂದ ಪರಿಹರಿಸಲಾಗುವುದಿಲ್ಲ”

– ಆಲ್ಬರ್ಟ್ ಐನ್‍ಸ್ಟೀನ್

ಈಗಲೂ ದೇಶ-ವಿದೇಶಗಳಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‍ಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಮುಖ್ಯವಾಗಿ ಈ ಹುದ್ದೆಯ ಕುರಿತಾದ ಮೋಹವೂ ಕಡಿಮೆಯಾಗಿಲ್ಲ. ಮದುವೆಯಾದ್ರೆ ಸಾಫ್ಟ್‍ವೇರ್ ಎಂಜಿನಿಯರನ್ನೇ ಮದುವೆಯಾಗಬೇಕು? ನಾನು ಸಾಫ್ಟ್‌ವೇರ್‌, ಗಂಡನೂ ಸಾಫ್ಟ್‍ವೇರ್ ಎಂಜಿನಿಯರ್ ಆಗಿರಬೇಕು? ನನ್ನ ಹೆಂಡತಿಯೂ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ರೆ ಮಾತ್ರ ಮದುವೆಯಾಗುವುದು… ಹೀಗೆ ಅನೇಕ ಅಭಿಪ್ರಾಯಗಳು ಈಗಿನ ತಲೆಮಾರಿನ ಯುವಕ-ಯುವತಿಯರಲ್ಲಿ ಇದೆ. ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಭವಿಷ್ಯದಲ್ಲಿಯೂ ಈ ಹುದ್ದೆ ಬೇಡಿಕೆ ಕಳೆದುಕೊಳ್ಳುವ ಯಾವುದೇ ಸೂಚನೆಯೂ ಇಲ್ಲ. ಪ್ರತಿನಿತ್ಯದ ಬದುಕಿನಲ್ಲಿ ತಂತ್ರಜ್ಞಾನ ಅಷ್ಟೊಂದು ಆವರಿಸಿದೆ. ನಮ್ಮ ಬದುಕನ್ನು ಸುಲಭವಾಗಿಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಾಫ್ಟ್‍ವೇರ್ ಎಂಜಿನಿಯರ್‍ಗಳ ಕೊಡುಗೆಯೂ ಅಪಾರವಾದದ್ದು. ನೀವೂ ನಿಮ್ಮ ಭವಿಷ್ಯವನ್ನು ಸಾಫ್ಟ್‍ವೇರ್ ಎಂಜಿನಿಯರ್ ಆಗಿ ಬದಲಾಯಿಸಲು ಇಚ್ಚಿಸಿದರೆ ಇಲ್ಲಿ ನೀಡಿರುವ ಮಾಹಿತಿಗಳು ನೆರವಿಗೆ ಬರಬಹುದು.

ಸಾಫ್ಟ್‌ವೇರ್‌ಎಂಜಿನಿಯರ್ ಆಗಬೇಕಾದರೆ ಮೊದಲಿಗೆ ಸಾಫ್ಟ್‌ವೇರ್‌ ಎಂಜಿನಿಯರಿಂಗ್ ಅಥವಾ ಅದಕ್ಕೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಒಂದು ಪದವಿ ಪಡೆದುಕೊಳ್ಳಬೇಕು. ಕಂಪ್ಯೂಟರ್ ವಿಜ್ಞಾನವೂ ಉತ್ತಮ ಆಯ್ಕೆಯಾಗಬಲ್ಲದು. ಇದರೊಂದಿಗೆ ಯಾವುದಾದರೂ ಅಸೋಸಿಯೇಟ್ ಪದವಿ ಪಡೆದರೆ ಅವಕಾಶ ಉತ್ತಮವಾಗಿರುತ್ತದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿಯೊಂದೇ ಸಾಕಾಗುವುದಿಲ್ಲ. ಅದಕ್ಕೆ ಸಂಬಂಧಪಟ್ಟ ಕೌಶಲಗಳಿಗೆ ಪ್ರತಿದಿನ ಅಪ್‍ಡೇಟ್ ಆಗಬೇಕು. ನೀವು ಪದವಿ ಓದುತ್ತಿರುವಾಗಲೇ ಪ್ರೋಗ್ರಾಮಿಂಗ್ ಭಾಷೆ ಕಲಿಯಲು ಆದ್ಯತೆ ನೀಡಿ. ಮುಖ್ಯವಾಗಿ ಕೋಡಿಂಗ್‍ನಲ್ಲಿ ಪರಿಣಿತಿ ಪಡೆಯಿರಿ. ಇತ್ತೀಚಿನ ವರದಿಗಳ ಪ್ರಕಾರ ದೇಶದ ಬಹುತೇಕ ಎಂಜಿನಿಯರ್‍ಗಳಿಗೆ ಸರಿಯಾಗಿ ಕೋಡಿಂಗ್ ಮಾಡಲು ಬರೋದಿಲ್ವಂತೆ. ನೀವು ಆ ಪಟ್ಟಿಗೆ ಸೇರಬೇಡಿ. ಸಿಪ್ಲಸ್‍ಪ್ಲಸ್, ಸಿ#, ಜಾವಾ, ಜಾವಸ್ಕ್ರಿಪ್ಟ್, ಪೈಥಾನ್ ಇತ್ಯಾದಿ ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಪರಿಣತಿ ಪಡೆಯಿರಿ.

ಶಾಲಾ ಕಾಲೇಜು ದಿನಗಳಲ್ಲಿ ಗಣಿತವನ್ನು ಪ್ರೀತಿಸಿ. ಯಾಕೆಂದರೆ, ಸಾಫ್ಟ್‍ವೇರ್ ಎಂಜಿನಿಯರ್‍ಗಳಿಗೆ ಹೆಚ್ಚಾಗಿ ಕ್ರಮಾವಳಿ ರೂಪಿಸುವ ಕೆಲಸ ಇರುತ್ತದೆ. ಇದಕ್ಕೆ ಪೂರಕವಾಗಿ ನಿಮ್ಮ ಗಣಿತ ಕೌಶಲವಿರಲಿ. ನೀವು ಸಾಫ್ಟ್‍ವೇರ್ ಎಂಜಿನಿಯರ್ ಆಗುವ ಮೊದಲು ಸಾಫ್ಟ್‍ವೇರ್ ಅಭಿವೃದ್ಧಿಪಡಿಸಲು ಕಲಿಯಿರಿ. ನೀವು ಸಾಫ್ಟ್‍ವೇರ್ ವಿನ್ಯಾಸ, ಕೋಡಿಂಗ್ ಮಾಡುತ್ತ ಇದ್ದರೆ ಹೆಚ್ಚಿನ ಜ್ಞಾನ ಸಂಪಾದಿಸಬಹುದು. ಕಾಲೇಜು ಮುಗಿಸಿದ ಬಳಿಕ ಇಂಟರ್ನ್‍ಷಿಪ್‍ಗೆ ಸೇರಿರಿ. ಇಲ್ಲೂ ಪ್ರಾಕ್ಟಿಕಲ್‍ಗೆ ಹೆಚ್ಚಿನ ಅವಕಾಶ ದೊರಕುತ್ತದೆ. ಸಾಫ್ಟ್‍ವೇರ್ ಅಭಿವೃದ್ಧಿಪಡಿಸುವ ಕುರಿತು ಆನ್‍ಲೈನ್‍ನಲ್ಲಿ ದೊರಕುವ ಕೋರ್ಸ್‍ಗಳು, ಮಾಹಿತಿಗಳನ್ನು ಪಡೆದುಕೊಳ್ಳಿ.

ನಂತರ ನೀವು ಪ್ರೋಗ್ರಾಮರ್ ಆಗಿ ವೃತ್ತಿ ಜೀವನ ಆರಂಭಿಸಬಹುದು. ಮುಂದೊಂದು ದಿನ ಸಾಫ್ಟ್‌ವೇರ್‌ ಎಂಜಿನಿಯರ್ ಆಗುವ ಗುರಿಯನ್ನು ಇಟ್ಟುಕೊಂಡೇ ಆರಂಭಿಕ ಕರಿಯರ್ ಅನ್ನು ಆಯ್ಕೆ ಮಾಡಿಕೊಳ್ಳಿರಿ. ಸಾಫ್ಟ್‍ವೇರ್ ಉದ್ಯಮವು ಪ್ರತಿದಿನ ಬದಲಾಗುತ್ತಿದೆ. ಬದಲಾಗುವ ಕಾಲಘಟ್ಟಕ್ಕೆ ತಕ್ಕಂತೆ ಜ್ಞಾನ ಸಂಪಾದನೆ ಮಾಡಿಕೊಳ್ಳಿ. ಸಾಫ್ಟ್‍ವೇರ್ ಎಂಜಿನಿಯರಿಂಗ್‍ಗೆ ಸಂಬಂಧಪಟ್ಟ ಸ್ನಾತಕೋತ್ತರ ಪದವಿ ಪಡೆದರೆ ನಿಮಗೆ ದೊರಕುವ ಹುದ್ದೆಯು ಉನ್ನತ ಹಂತದಾಗಿರುತ್ತದೆ. ಪದವಿ ಮಟ್ಟದ ಶಿಕ್ಷಣ ಪಡೆದೂ ಉನ್ನತ ಹಂತಕ್ಕೆ ಹೋದವರಿದ್ದಾರೆ. ಇದರೊಂದಿಗೆ ಕೆಲವು ಸರ್ಟಿಫಿಕೇಷನ್ ಕೋರ್ಸ್‍ಗಳನ್ನೂ ಮಾಡಿರಿ.

ಸಾಫ್ಟ್‌ವೇರ್‌ ವಿನ್ಯಾಸ ಮತ್ತು ಕೋಡಿಂಗ್ ಜ್ಞಾನವನ್ನು ವೃದ್ಧಿಸಿಕೊಂಡ ಬಳಿಕ ನೀವು ಗಿತ್‍ಹಬ್‍ನಲ್ಲಿ ಇತರ ಪ್ರೋಗ್ರಾಮರ್ಸ್ ಜೊತೆ ಸೇರಿ ಕಾರ್ಯನಿರ್ವಹಿಸಬಹುದು. ಇದರೊಂದಿಗೆ ಕೋಡಿಂಗ್ ಬೂಟ್‍ಕ್ಯಾಂಪ್‍ಗಳಿಗೂ ಸೇರಬಹುದು. ನೀವು ಕಲಿಯಲು ಹಣ ಹೂಡಿಕೆ ಮಾಡಲು ಸಿದ್ಧರಿದ್ದರೆ ಇಂತಹ ಸಾಕಷ್ಟು ಕಲಿಕಾ ಅವಕಾಶಗಳು ದೊರಕುತ್ತವೆ. ನೀವು ಉದ್ಯೋಗ ಮಾಡುತ್ತಲೇ ಈ ರೀತಿಯ ಕಲಿಕಾ ಆಯ್ಕೆಗಳ ಮೂಲಕ ಕೌಶಲ ವೃದ್ಧಿಸಿಕೊಳ್ಳಬಹುದಾಗಿದೆ. ಇದರೊಂದಿಗೆ ನೀವು ಗೇಮ್ ಅಪ್ಲಿಕೇಷನ್, ಬಿಸ್ನೆಸ್ ಸಾಫ್ಟ್‍ವೇರ್ ಇತ್ಯಾದಿಗಳನ್ನು ಸ್ವಂತವಾಗಿ ಅಭಿವೃದ್ಧಿಪಡಿಸಲು ಪ್ರಯತ್ನಿಸಬಹುದು. ಹೀಗೆ, ಸಾಕಷ್ಟು ಅನುಭವ ಸಂಪಾದಿಸಿದ ಬಳಿಕ ನೀವು ದೊಡ್ಡ ಕಂಪನಿಗಳಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್ ಹುದ್ದೆ ಪಡೆಯಬಹುದಾಗಿದೆ.

***

ಸಿಇಒ(ಚೀಫ್ ಎಕ್ಸಿಕ್ಯುಟಿವ್ ಆಫೀಸರ್)

“ಸಿಇಒಗೆ ಅಲ್ಪಾವಧಿಯ, ಮಧ್ಯಾವಧಿಯ ಮತ್ತು ದೀರ್ಘಾವಧಿಯ ಕನಸುಗಳಿರಬೇಕು ಮತ್ತು ಗುರಿಗಳು ಇರಬೇಕು”

– ಕಾರ್ಲೊಸ್ ಘೋಸ್ನ್

ಯಾವುದಾದರೂ ಕಂಪನಿಯ ಪ್ರಮುಖ ಹುದ್ದೆಗೆ ಏರುವ ಕನಸು ನಿಮ್ಮಲ್ಲಿ ಇರಬಹುದು. ಕಂಪನಿಯೆಂದರೆ ಅಲ್ಲಿ ಚೇರ್ಮನ್, ಸಿಇಒ, ಸಿಒಒ ಇತ್ಯಾದಿ ಹಲವು ಹುದ್ದೆಗಳು ಇರುತ್ತವೆ. ಇವುಗಳಲ್ಲಿ ಸಿಇಒ ಎಂಬ ಅತ್ಯುನ್ನತ ಹುದ್ದೆಗೆ ಏರುವ ಕನಸು ಕಾಣಿರಿ. ಸಿಇಒ ಎಂಬ ಹುದ್ದೆಯು ತಕ್ಷಣಕ್ಕೆ ದೊರಕುವ ಹುದ್ದೆಯಲ್ಲ. ನೀವು ಸಾಮಾನ್ಯ ಹಂತದಿಂದ ಕಠಿಣ ಪರಿಶ್ರಮದಿಂದ ಈ ಹುದ್ದೆಗೆ ಏರಬೇಕು. ತಕ್ಷಣಕ್ಕೆ ಸಿಇಒ ಆಗಬೇಕಿದ್ದರೆ ನೀವೇ ಒಂದು ಕಂಪನಿಯನ್ನು ಸ್ಥಾಪಿಸಿ ಸಿಇಒ ಸೀಟಿನಲ್ಲಿ ಕುಳಿತುಕೊಳ್ಳಬೇಕು.

ಸಿಇಒ ಆಗಬೇಕಿದ್ದರೆ ನೀವು ವಿದ್ಯಾಭ್ಯಾಸದಲ್ಲಿ ಹೆಚ್ಚು ಶ್ರದ್ಧೆ ತೋರಿಸಬೇಕು. ಪಾಠದೊಂದಿಗೆ ನಾಯಕತ್ವ ಇತ್ಯಾದಿ ಕೌಶಲವನ್ನು ನಿಮ್ಮದಾಗಿಸಿಕೊಳ್ಳಬೇಕು. ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯಿರಿ. ನೀವು ಯಾವ ಉದ್ಯಮದಲ್ಲಿ ಸಿಇಒ ಆಗಲು ಬಯಸುವಿರೋ ಅದಕ್ಕೆ ಸಂಬಂಧಪಟ್ಟ ಶಿಕ್ಷಣ ಪಡೆಯಿರಿ. ನಂತರ ಸಂಬಂಧಪಟ್ಟ ವಿಭಾಗದಲ್ಲಿ ಉದ್ಯೋಗ ಮಾಡಬಹುದು. ಜೊತೆಗೆ ಎಂಬಿಎ ಕೋರ್ಸ್‍ಗೂ ಸೇರಬಹುದು. ಇಲ್ಲಿ ನಿಮಗೆ ಸಿಇಒ ಹುದ್ದೆ ಪಡೆಯಲು ಶಿಕ್ಷಣ, ಸರ್ಟಿಫಿಕೇಟ್‍ಗಳು ಮಾತ್ರವೇ ಮಾನದಂಡವಾಗಿರುವುದಿಲ್ಲ. ಕಡಿಮೆ ಶಿಕ್ಷಣ ಪಡೆದವರೂ ಈ ಹುದ್ದೆಗೆ ಏರಿದ್ದಾರೆ. ಸಿಇಒ ಆಗಬೇಕಾದರೆ ನಿಮಗೆ ಹಣಕಾಸು ಜ್ಞಾನ ಉತ್ತಮವಾಗಿರಬೇಕು. ಇದಕ್ಕಾಗಿ ಫೈನಾನ್ಸ್‍ಗೆ ಸಂಬಂಧಪಟ್ಟ ಶಿಕ್ಷಣವನ್ನು ಪಡೆಯಿರಿ. ಅಕೌಂಟಿಂಗ್, ಅರ್ಥಶಾಸ್ತ್ರ ಅಥವಾ ಹಣಕಾಸು ವಿಷಯದಲ್ಲಿ ಪದವಿ, ಸ್ನಾತಕೋತ್ತರ ಇತ್ಯಾದಿ ಶಿಕ್ಷಣ ಪಡೆದರೆ ಉತ್ತಮ. ಎಂಬಿಎ ಫೈನಾನ್ಸ್ ಇತ್ಯಾದಿಯು ಸೂಕ್ತ ಆಯ್ಕೆಯಾಗಬಹುದು. ಇವೆಲ್ಲವನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನೀವು ಸಿಇಒ ಆಗಲು ಬ್ಯಾಚುಲರ್ ಪದವಿ ಅಥವಾ/ಮತ್ತು ಸ್ನಾತಕೋತ್ತರ ಪದವಿ ಅಥವಾ ಎಂಬಿಎ, ಬಿಸ್ನೆಸ್ ಅಥವಾ ಮ್ಯಾನೇಜ್‍ಮೆಂಟ್ ಶಿಕ್ಷಣ ಅವಶ್ಯಕ.

ಕಾಲೇಜಿನಲ್ಲಿ ಓದುತ್ತಿರುವಾಗಲೇ ಬಿಸ್ನೆಸ್ ಸೆಮಿನಾರುಗಳಲ್ಲಿ, ನೆಟ್‍ವರ್ಕಿಂಗ್ ಇವೆಂಟ್‍ಗಳಲ್ಲಿ ಪಾಲ್ಗೊಳ್ಳಿ. ನಿಮ್ಮ ನಾಯಕತ್ವ ಕೌಶಲ ಪ್ರದರ್ಶಿಸಲು ಅವಕಾಶ ಇರುವಲ್ಲಿ ಉದ್ಯೋಗ ಮಾಡಿರಿ. ಆರಂಭದಲ್ಲಿಯೇ ನೀವು ಸಿಇಒ ಹುದ್ದೆಗೆ ಏರುವುದಿಲ್ಲವೆನ್ನುವುದು ನೆನಪಿನಲ್ಲಿರಲಿ. ಸಿಇಒ ಆಗುವುದು ನಿಮ್ಮ ದೀರ್ಘಾವಧಿಯ ಕನಸು ಆಗಿರಲಿ. ಅದಕ್ಕೆ ಬೇಕಾದ ಪರಿಶ್ರಮವನ್ನು ಪ್ರತಿನಿತ್ಯ ಹಾಕುತ್ತ ಇರಿ. ಬೇರೆ ಕಂಪನಿಗಳಲ್ಲಿ ಇರುವ ಉನ್ನತ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತ ಇರಿ. ಸಾಧ್ಯವಾದರೆ ಕಂಪನಿಯ ಆಡಳಿತ ಮಂಡಳಿಯ ಸದಸ್ಯರಾಗಿ. ನೀವು ಸಿಇಒ ಆಗಲು ಇಂತಹ ಹಲವು ಮೆಟ್ಟಿಲುಗಳನ್ನು ದಾಟಿ ಹೋಗಬೇಕಾಗುತ್ತದೆ. ಸಿಇಒ ಎಂಬ ಹುದ್ದೆಯು ದೊರಕಿದ ನಂತರ ಕಂಪನಿಯ ಉನ್ನತಿಗಾಗಿ ಶ್ರಮವಹಿಸಿ. ಯಶಸ್ವಿ ಸಿಇಒ ಆಗಿ.


  ಬರಹಗಾರರಾಗುವ ಕನಸು ಈಡೇರಿಸಿಕೊಳ್ಳಿ

“ಬರೆಯವುದು ಎಂದರೆ ಅನ್ವೇಷಣೆ. ಖಾಲಿಯಾಗಿ ಆರಂಭಿಸುವಿರಿ ಮತ್ತು ಮುಂದೆ ಹೋಗುತ್ತ ಕಲಿಯುತ್ತ ಸಾಗುವಿರಿ”

– ಇ.ಎಲ್. ಡಾಕ್ಟ್ರೊ

ದೇಶಕ್ಕೆ ಅನೇಕ ಶ್ರೇಷ್ಠ ಬರಹಗಾರರನ್ನು ಕರ್ನಾಟಕ ನೀಡಿದೆ. ಕುವೆಂಪು, ಕಾರಂತ, ತೇಜಸ್ವಿ, ಲಂಕೇಶ್, ಆರ್.ಕೆ. ನಾರಾಯಣ್, ಬೀಚಿ, ಎಸ್.ಎಲ್. ಬೈರಪ್ಪ, ಕೆ.ವಿ. ಸುಬ್ಬಣ್ಣ, ತ್ರಿವೇಣಿ, ಜಯಂತ ಕಾಯ್ಕಿಣಿ… ಹೀಗೆ ರಾಜ್ಯದ ಬರಹಗಾರರನ್ನು ಪಟ್ಟಿ ಬೆಳೆಯುತ್ತ ಹೋಗುತ್ತದೆ. ಇವರಲ್ಲಿ ಬಹುತೇಕರು ಅತ್ಯುತ್ತಮ ಶಿಕ್ಷಣ ಪಡೆದವರು. ಇನ್ನು ಕೆಲವರು ಹೆಚ್ಚಿನ ಔಪಚಾರಿಕ ಶಿಕ್ಷಣ ಪಡೆದವರಲ್ಲ. ದೇಶದಲ್ಲಿ ಚೇತನ್ ಭಗತ್ ಮುಂತಾದವರು ಸಾಕಷ್ಟು ಅಭಿಮಾನಿ ಬಳಗವನ್ನು ಸೃಷ್ಟಿಕೊಂಡಿದ್ದಾರೆ.

ನಿಮ್ಮ ಜೀವನ ಅನುಭವವನ್ನು, ತಜ್ಞತೆಯನ್ನು ಅಕ್ಷರರೂಪಕ್ಕೆ ಇಳಿಸಿ ಬರಹಗಾರರಾಗಬಹುದು. ಬರೆಯುವ ಮೊದಲು ನನ್ನ ಈ ಕೃತಿಯಿಂದ ಯಾರಿಗಾದರೂ ಒಳಿತು ಆಗಬಹುದೇ ಎಂದು ಯೋಚಿಸಿ (ಹೀಗೆಂದು ನಿಯಮವಿಲ್ಲ). ಟೆಕ್ನಿಕಲ್ ರೈಟಿಂಗ್ ಇತ್ಯಾದಿ ಬರವಣಿಗೆಯ ಉದ್ಯೋಗಗಳೂ ಇವೆ. ಬರಹಗಾರರಾಗುವ ಕನಸನ್ನು ಈಡೇರಿಸಿಕೊಳ್ಳಲು ಪದವಿ, ಸ್ನಾತಕೋತ್ತರ, ಪಿಎಚ್.ಡಿ ಇತ್ಯಾದಿ ವಿದ್ಯಾರ್ಹತೆಯನ್ನು ಪಡೆಯಿರಿ(ನೆನಪಿಡಿ, ಇದಕ್ಕೆ ಈ ರೀತಿಯ ವಿದ್ಯಾರ್ಹತೆ ಇರಲೇಬೇಕೆಂದಿಲ್ಲ). ಸಾಹಿತ್ಯದಲ್ಲಿ ಎಂಎ, ಪತ್ರಿಕೋದ್ಯಮ ಇತ್ಯಾದಿ ಪದವಿ ಪಡೆದಿದ್ದರೆ ಉತ್ತಮ.

ಬರಹಗಾರರಾಗಬೇಕಿದ್ದರೆ ಮೊದಲು ಏನು ಬರೆಯಬೇಕೆಂದು ಯೋಚಿಸಿ. ಕಾಲ್ಪನಿಕ, ಕವನ, ಕತೆ, ಕಾದಂಬರಿ, ಐತಿಹಾಸಿಕ ಇತ್ಯಾದಿ ಹಲವು ಪ್ರಕಾರದ ಬರಹಗಳಿವೆ. ಇವುಗಳಲ್ಲಿ ನೀವು ಯಾವ ವಿಭಾಗದ ಬರಹಗಾರರಾಗಬೇಕೆಂದು ಯೋಚಿಸಿ. ಈಗ ಇ-ಪುಸ್ತಕಗಳನ್ನೂ ಬರೆದು ಆನ್‍ಲೈನ್ ಓದುಗರಿಗೆ ನೀಡಬಹುದು.

ಬರೆಯುವ ಕೆಲಸ ಸರಳವಾದದ್ದೇನು ಅಲ್ಲ. ಇದಕ್ಕೆ ಶ್ರದ್ಧೆ ಅತ್ಯಂತ ಅವಶ್ಯಕ. ದಿನದ ಇಂತಿಷ್ಟು ಸಮಯವನ್ನು ಬರವಣಿಗೆಗೆ, ಅಧ್ಯಯನಕ್ಕೆ ಮೀಸಲಿಡಿ. ಬರೆಯಲು ಸೂಕ್ತವಾದ ವಾತಾವರಣ ಇರಲಿ. ಕೆಲವು ಬರಹಗಾರರು ಹೆಚ್ಚು ಸದ್ದು ಇರದ ಮುಂಜಾನೆಯ ಸಮಯವನ್ನು ಆಯ್ದುಕೊಳ್ಳುತ್ತಾರೆ. ಮಧ್ಯರಾತ್ರಿಯವರೆಗೂ ಬರೆಯುವವರಿದ್ದಾರೆ. ನಿಮ್ಮ ಅನುಕೂಲ ನೋಡಿಕೊಂಡು ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದು.

ನೀವು ಏನು ಬರೆಯುವಿರೋ ಅದರ ಮೊದಲ ಓದುಗರು ನೀವೇ. ಬರೆದದ್ದನ್ನು ಮತ್ತೆಮತ್ತೆ ಓದಿ. ಎಲ್ಲಿ ತಪ್ಪಿದೆ ಗುರುತಿಸಿ. ಎಲ್ಲಿ ಇನ್ನಷ್ಟು ಉತ್ತಮಪಡಿಸಬಹುದು ಕಂಡುಹಿಡಿಯಿರಿ. ಬರವಣಿಗೆಯಲ್ಲಿ ನಿಮ್ಮತನ ಇರಲಿ. ಯಾವುದೇ ಲೇಖಕರನ್ನು ಅನುಕರಿಸಿ ಬರೆಯಬೇಡಿ. ಹೆಚ್ಚು ಓದಿ. ಕಡಿಮೆ ಬರೆಯಿರಿ.


ಶೆಫ್ ಮತ್ತು ಹೋಟೇಲ್ ಮ್ಯಾನೇಜ್‍ಮೆಂಟ್

“ಯಶಸ್ಸು ಅಂತಿಮವಲ್ಲ. ಸೋಲು ಮಾರಕವಲ್ಲ. ಇವು ಮುಂದುವರೆಸಲು ಇರುವ ಒಂದು ಹಂತವಷ್ಟೇ”

– ವಿನ್‍ಸ್ಟನ್ ಚರ್ಚಿಲ್

ಅಡುಗೆ ಮಾಡುವವರಿಗೆ ಎಲ್ಲಿಲ್ಲದ ಬೇಡಿಕೆ. ನೀವಿರುವ ಊರಲ್ಲಿಯೇ ಮದುವೆ, ಪೂಜೆ, ಕಾರ್ಯಕ್ರಮಗಳಿಗೆ ಅಡುಗೆ ಮಾಡಲು ಊರಿನ ಜನಪ್ರಿಯ ಅಡುಗೆ ಮಾಡುವ ವ್ಯಕ್ತಿಯನ್ನು ಕರೆಸುವಿರಿ. ಈಗ ಬಹುತೇಕರು ಕೆಟರಿಂಗ್ ಮೊರೆ ಹೋಗುತ್ತಾರೆ. ಎಲ್ಲಾ ಕೆಟರಿಂಗ್‍ಗಳು ಜನಪ್ರಿಯವಲ್ಲ. ಯಾವ ಕೆಟರಿಂಗ್‍ನ ಸವಿರುಚಿ ಜನಪ್ರಿಯವಾಗಿದೆಯೋ ಆ ಕೆಟರಿಂಗ್ ಹೆಚ್ಚು ಜನಪ್ರಿಯವಾಗುತ್ತದೆ. ಒಳ್ಳೆಯ ಅಡುಗೆ ಮಾಡುವ ವ್ಯಕ್ತಿ ಸಿಕ್ಕರೆ ಹೋಟೆಲ್‍ಗಳಿಗೆ ಬೇಡಿಕೆ. ಗ್ರಾಹಕರ ಬಾಯಿರುಚಿ ಕೆಡಿಸಿಬಿಟ್ಟರೆ ಹೋಟೆಲ್‍ನ ಅಧೋಗತಿ ಆರಂಭವಾಯಿತು ಎಂದರ್ಥ. ಇದೇ ರೀತಿ ಪ್ರಮುಖ ಹೋಟೆಲ್‍ಗಳಿಗೆ, ಫೈವ್ ಸ್ಟಾರ್ ಹೋಟೆಲ್‍ಗಳಿಗೆ, ರೆಸ್ಟೂರೆಂಟ್‍ಗಳಿಗೆ ನುರಿತ ಬಾಣಸಿಗರು ಬೇಕು. ಇಂತಹ ಅವಶ್ಯಕತೆಯನ್ನು ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗಳು, ಶೆಫ್ ಕೋರ್ಸ್‍ಗಳು ಪೂರೈಸುತ್ತವೆ.

ರುಚಿಯಾದ ಅಡುಗೆ ಮಾಡುವುದು ನಿಮಗೆ ಇಷ್ಟವೇ? ಹೊಸ ರುಚಿ ಕಂಡುಹಿಡಿಯುವ ಆಸಕ್ತಿ ನಿಮಗೆ ಇದೆಯೇ? ಆಹಾರ ಸಿದ್ಧಪಡಿಸುವುದನ್ನು ಇಷ್ಟಪಡುವವರಿಗೆ ಶೆಫ್ ಹುದ್ದೆ ಅತ್ಯಂತ ಸೂಕ್ತವಾದದ್ದು. ಈಗ ಮನೆಯಲ್ಲಿ ಟೊಮೊಟೊ ಸಾಂಬಾರ್ ಮಾಡಲು ಆಸಕ್ತಿ ಇಲ್ಲದವರೂ ಹೋಟೇಲ್ ಮ್ಯಾನೇಜ್‍ಮೆಂಟ್‍ಗೆ ಸೇರುತ್ತಿದ್ದಾರೆ. ಮುಖ್ಯವಾಗಿ ವಿದೇಶದಲ್ಲಿ ಶೆಫ್‍ಗಳಿಗೆ ಲಕ್ಷಗಟ್ಟಲೆ ವೇತನ ದೊರಕುತ್ತದೆ ಎಂಬ ಮಾತೇ ಈ ಕೋರ್ಸ್‍ಗೆ ಬೇಡಿಕೆ ಹೆಚ್ಚಿಸುತ್ತಿದೆ. ಇದು ಸುಳ್ಳಲ್ಲ. ಶೆಫ್ ಈಗಿನ ಬೇಡಿಕೆಯ ಉದ್ಯೋಗ. ಒಳ್ಳೆಯ ಅಡುಗೆ ತಯಾರಿಕರಿಗೆ ಎಲ್ಲೆಲ್ಲೂ ಸ್ವಾಗತವಿದೆ.

ಒಳ್ಳೆಯ ವ್ಯಕ್ತಿತ್ವ, ಹೊಸ ರುಚಿ ಕಲಿಯಲು, ಟ್ರಿಕ್ಸ್‍ಗಳನ್ನು ಅಳವಡಿಸುವ ಕೌಶಲ, ಕೆಲಸದಲ್ಲಿ ಶ್ರದ್ಧೆ, ಭರವಸೆ, ಮುಖ್ಯವಾಗಿ ಶುಚಿತ್ವ, ಪ್ರಯೋಗ ಮಾಡುವ ಆಸಕ್ತಿ, ಒಳ್ಳೆಯ ಅಭಿರುಚಿ ಇರುವವರು ಶೆಫ್ ಆಗಬಹುದು. ಆಹಾರದ ಸ್ವಾದ ಬಲ್ಲವರು, ವಾಸನೆ ಅಥವಾ ಆಗ್ರಾಣಿಸಿ ಆಹಾರದ ರುಚಿಯ ಕುರಿತು ಷರಾ ಬರೆಯುವವರಿಗೆ, ಯಾವ ಆಹಾರಕ್ಕೆ ಯಾವ ಸಾಮಾಗ್ರಿಗಳನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂದು ತಿಳಿದವರಿಗೆ, ಸ್ಥಳೀಯ, ದೇಶೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರೆಸಿಪಿ ಕಲಿತು ನೆನಪಿಟ್ಟುಕೊಳ್ಳಲು ಸಾಧ್ಯವಿರುವವರಿಗೆ ಶೆಫ್ ಹುದ್ದೆ ಸೂಕ್ತವಾಗಿದೆ.

ರೆಸಿಪಿ ರಚಿಸುವುದು, ಊಟ ಸಿದ್ಧಪಡಿಸುವುದು ಶೆಫ್‍ನ ಪ್ರಮುಖ ಕೆಲಸ, ಸೂಪ್, ಸ್ಟಾಟರ್ಸ್, ಸ್ನ್ಯಾಕ್, ಸಲಾಡ್, ಪ್ರಮುಖ ಡಿಶಸ್, ಡೆಸಾರ್ಟ್, ವಿಶೇಷ ಆಹಾರಗಳನ್ನು ಸಿದ್ಧಪಡಿಸಲು ಪ್ರಮುಖವಾಗಿ ಶೆಫ್‍ಗೆ ತಿಳಿದಿರಬೇಕಾಗುತ್ತದೆ. ನೀವು ಶೆಫ್‍ನಲ್ಲಿಯೂ ಉನ್ನತ ಹುದ್ದೆಗೆ ಬಡ್ತಿ ಪಡೆಯಬಹುದು. ನಂತರ ಅಡುಗೆಮನೆ ಉಸ್ತುವಾರಿ, ಸಿಬ್ಬಂದಿಗಳಿಗೆ ನಿರ್ದೇಶನ ನೀಡುವುದು ಮತ್ತು ಆಹಾರದ ಕುರಿತು ಯೋಜಿಸುವುದು ನಿಮ್ಮ ಜವಾಬ್ದಾರಿಯಾಗುತ್ತದೆ. ಶೆಫ್‍ನ ಜವಾಬ್ದಾರಿ ಇಷ್ಟೇ ಅಲ್ಲ. ಎಷ್ಟು ಪ್ರಮಾಣದಲ್ಲಿ ಆಹಾರ ನೀಡಬೇಕು, ಮೆನು ಹೇಗಿರಬೇಕು ಇತ್ಯಾದಿಗಳಿಗೂ ಶೆಫ್ ಬಾಧ್ಯಸ್ಥ.

ಶೆಫ್ ಆಗಲು ಬಯಸುವವರು ನೀವಾಗಿದ್ದರೆ ಮನೆಯಲ್ಲಿ ಅಡುಗೆಮನೆಗೆ ಹೋಗಲು ಹಿಂಜರಿಯಬೇಡಿ. ರುಚಿರುಚಿಯಾದ ಅಡುಗೆಯನ್ನು ಅಮ್ಮನಿಂದ, ಅಜ್ಜಿಯಿಂದ ಕಲಿತುಕೊಳ್ಳಿ. ಅವರಿಗೆ ಅಡುಗೆ ಮಾಡಲು ಸಹಾಯ ಮಾಡಿ. ಇದು ಹೆಣ್ಣು ಮಕ್ಕಳಿಗೆ ಮಾತ್ರ ನೀಡುವ ಟಿಪ್ಸ್ ಅಲ್ಲ. ಗಂಡುಮಕ್ಕಳೂ ಅಡುಗೆ ಮನೆಗೆ ಹೋಗಬಹುದು. ಯಾಕೆಂದರೆ ದೇಶ ವಿದೇಶದಲ್ಲಿ ನುರಿತ ಬಾಣಸಿಗರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಿದೆ. ಅಡುಗೆ ಮನೆಗೆ ಹೋಗಲು ಯಾವುದೇ ಅಂಜಿಕೆಪಡದೆ ನಳಮಹಾರಾಜರಾಗಿ.

ಪಿಯುಸಿ ಮುಗಿದ ಬಳಿಕ ಹೋಟೇಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ ಸೇರಿ. ನ್ಯಾಷನಲ್ ಕೌನ್ಸಿಲ್ ಆಫ್ ಹೋಟೇಲ್ ಮ್ಯಾನೇಜ್‍ಮೆಂಟ್‍ನಲ್ಲಿ ನೋಂದಾಯಿಸಿದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ಸೇರಿದರೆ ಉತ್ತಮ. ಇದರೊಂದಿಗೆ ಕೆಲವು ಹೋಟೇಲ್ ಚೈನ್‍ಗಳು, ವಿದೇಶಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್‍ನಿಂದ ಅನುಮತಿ ಪಡೆದು ಹೋಟೇಲ್ ಮ್ಯಾನೇಜ್‍ಮೆಂಟ್ ಕೋರ್ಸ್ ನೀಡುತ್ತವೆ. ಇಲ್ಲೂ ಕಲಿಯಬಹುದು. ಸಾಧ್ಯವಾದಷ್ಟು ಉತ್ತಮ ಶಿಕ್ಷಣ ಸಂಸ್ಥೆಗೆ ಸೇರಿ. ನಿಮ್ಮ ಸೀನಿಯರ್‍ಗಳಲ್ಲಿ, ಪರಿಚಯದ ವ್ಯಕ್ತಿಗಳಲ್ಲಿ ಶಿಕ್ಷಣ ಸಂಸ್ಥೆಯ ಬಗ್ಗೆ ತಿಳಿದುಕೊಂಡು ಮುಂದುವರೆಯಿರಿ. ನೆನಪಿಡಿ, ದುಬಾರಿ ಶುಲ್ಕವಿದೆ ಎನ್ನುವುದು ಮಾತ್ರ ಒಳ್ಳೆಯ ಶಿಕ್ಷಣ ಸಂಸ್ಥೆಗೆ ಮಾನದಂಡವಲ್ಲ.

ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಅಥವಾ ನಾಲ್ಕು ವರ್ಷದ ಬ್ಯಾಚುಲರ್ ಪದವಿಯನ್ನು ಮಾಡಬಹುದು. ಬೆಂಗಳೂರಿನಲ್ಲಿ ಆರ್ಮಿ ಇನ್‍ಸ್ಟಿಟ್ಯೂಟ್ ಆಫ್ ಹೋಟೇಲ್ ಮ್ಯಾನೇಜ್‍ಮೆಂಟ್ ಮತ್ತು ಕೇಟರಿಂಗ್ ಟೆಕ್ನಾಲಜಿಯು ಮೂರು ವರ್ಷದ ಡಿಪ್ಲೊಮಾ ನೀಡುತ್ತದೆ. ಮಣಿಪಾಲದ ವೆಲ್ಕಂ ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೋಟೇಲ್ ಅಡ್ಮಿನಿಸ್ಟ್ರೇಷನ್ ಪದವಿ ಕೋರ್ಸ್ ನೀಡುತ್ತದೆ. ಇವೆರಡು ಉದಾಹರಣೆಯಷ್ಟೇ. ಇಂಟರ್‍ನೆಟ್‍ನಲ್ಲಿ ನಿಮಗೆ ಸೂಕ್ತವಾದ ಶಿಕ್ಷಣ ಸಂಸ್ಥೆಗಳನ್ನು ಹುಡುಕಬಹುದು. ಆಯಾ ಶಿಕ್ಷಣ ಸಂಸ್ಥೆಗಳ ಕುರಿತು ವಿದ್ಯಾರ್ಥಿಗಳು ನೀಡಿರುವ ಪ್ರತಿಕ್ರಿಯೆಗಳು, ದೂರುಗಳನ್ನು ಗಮನಿಸಿ ಮುಂದುವರೆಯಬೇಕು.

ಕೆಲವೊಂದು ರಾಜ್ಯಗಳಲ್ಲಿ ಫುಡ್‍ಕ್ರಾಫ್ಟ್ ಇನ್‍ಸ್ಟಿಟ್ಯೂಟ್ ಇರುತ್ತವೆ. ಬೆಂಗಳೂರಿನಲ್ಲಿಯೂ ಇದೆ. 10ನೇ ತರಗತಿ ಅಥವಾ ಪಿಯುಸಿ ಮುಗಿದ ಬಳಿಕ ಇಂತಹ ಶಿಕ್ಷಣ ಸಂಸ್ಥೆಗಳಿಗೆ ಸೇರಬಹುದು. ಸುಮಾರು ಆರರಿಂದ ಹದಿನೆಂಟು ತಿಂಗಳ ಕೋರ್ಸ್‍ಗಳು ಇಲ್ಲಿರುತ್ತವೆ. ಈ ಕೋರ್ಸ್ ಕಲಿತು ಜೂನಿಯರ್ ಹಂತದ ಹುದ್ದೆಗಳಿಗೆ ಸೇರಬಹುದು. ನಂತರ ಉನ್ನತ ಹಂತಗಳಿಗೆ ಬಡ್ತಿ ಪಡೆಯುತ್ತ ಹೋಗಬಹುದು.

ಹೋಟೇಲ್ ಮ್ಯಾನೇಜ್‍ಮೆಂಟ್ ಪದವಿ, ಡಿಪ್ಲೊಮಾ ಶಿಕ್ಷಣ ಪಡೆಯಬೇಕಾದರೆ 10+2 ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ ಶೇಕಡ 60 ಅಂಕಗಳನ್ನು ಪಡೆಯಬೇಕು. ಕೆಲವೊಂದು ಶಿಕ್ಷಣ ಸಂಸ್ಥೆಗಳು ಇಂತಿಷ್ಟು ಅಂಕ ಪಡೆದಿರಬೇಕು ಎಂಬ ಮಿತಿಯನ್ನು ಹಾಕಿಕೊಳ್ಳದೆಯೂ ಇರಬಹುದು. ಹೋಟೇಲ್ ಮ್ಯಾನೇಜ್‍ಮೆಂಟ್‍ಗೆ ಪ್ರವೇಶಿಸಲು 2 ಗಂಟೆಯ ಪ್ರವೇಶ ಪರೀಕ್ಷೆಯೂ ಇರುತ್ತದೆ. ಇದರಲ್ಲಿ ಇಂಗ್ಲಿಷ್, ರೀಸನಿಂಗ್, ಸಾಮಾನ್ಯ ವಿಜ್ಞಾನ ಮತ್ತು ಸಾಮಾನ್ಯ ಜ್ಞಾನದ ಪ್ರಶ್ನೆಗಳು ಇರುತ್ತವೆ. ಬಳಿಕ ಗುಂಪು ಚರ್ಚೆ, ಸಂದರ್ಶನ ಇತ್ಯಾದಿಗಳು ಇರುತ್ತವೆ. ಆಯಾ ಅಕಾಡೆಮಿಕ್ ಅವಧಿಯಲ್ಲಿ ಪ್ರವೇಶ ಪರೀಕ್ಷೆಗಳು ನಡೆಯುತ್ತವೆ. ಈ ಕುರಿತು ನಿಮ್ಮ ಹತ್ತಿರವಿರುವ ಹೋಟೇಲ್ ಮ್ಯಾನೇಜ್‍ಮೆಂಟ್ ಶಿಕ್ಷಣ ಸಂಸ್ಥೆಗಳಿಂದ ಪಡೆದುಕೊಳ್ಳಬಹುದು.

ಫ್ರಂಟ್ ಆಫೀಸ್ ನಿರ್ವಹಣೆ, ಹೌಸ್ ಕೀಪಿಂಗ್, ಆಹಾರ ಮತ್ತು ಪಾನೀಯ ಹಾಗೂ ಅಡುಗೆ ಮನೆ ಸೇರಿದಂತೆ ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನಲ್ಲಿ ಹಲವು ವಿಷಯಗಳನ್ನು ಕಲಿಯಬೇಕಾಗುತ್ತದೆ. ಇದರೊಂದಿಗೆ ಪಠ್ಯಕ್ರಮದಲ್ಲಿ ಕಾನೂನು, ಅರ್ಥಶಾಸ್ತ್ರ, ಲೆಕ್ಕಪರಿಶೋಧನೆ, ಸಾರ್ವಜನಿಕ ಸಂಬಂಧ, ಸಾಮಾನ್ಯ ನಿರ್ವಹಣೆ ಮತ್ತು ಯಾವುದಾದರೂ ಒಂದು ವಿದೇಶಿ ಭಾಷೆ ಕಲಿಕೆಯೂ ಇರುತ್ತದೆ. ಮಾರಾಟ ಮತ್ತು ಮಾರುಕಟ್ಟೆ ವಿಷಯಗಳೂ ಸಿಲೇಬಸ್‍ನಲ್ಲಿ ಇರಬಹುದು. ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಇತ್ಯಾದಿಗಳನ್ನೂ ಹೋಟೇಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನಲ್ಲಿ ಕಲಿಯಬೇಕು. ಜೊತೆಗೆ ಆಹಾರದಲ್ಲಿರುವ ಪೌಷ್ಠಿಕಾಂಶದ ಪ್ರಮಾಣವನ್ನೂ ತಿಳಿದುಕೊಳ್ಳಬೇಕು.

ಹೋಟೇಲ್ ಮ್ಯಾನೇಜ್‍ಮೆಂಟ್ ಪದವಿ ಅಥವಾ ಡಿಪ್ಲೊಮಾ ತರಗತಿಯಲ್ಲಿ ಕುಳಿತು ಪಾಠ ಕೇಳುವುದರೊಂದಿಗೆ ಪ್ರಾಕ್ಟಿಕಲ್ ತರಬೇತಿಯೂ ಇರುತ್ತದೆ. ಹೋಟೇಲ್ ಮ್ಯಾನೇಜ್‍ಮೆಂಟ್ ಕಾಲೇಜುಗಳಲ್ಲಿ ಸುಸಜ್ಜಿತ ಅಡುಗೆ ಮನೆ ಇದ್ದೇ ಇರುತ್ತದೆ. ಸುಮಾರು 6 ತಿಂಗಳ ಕಾಲ ಕಾಲೇಜಿನಿಂದ ಹೊರಕ್ಕೆ ಪ್ರಾಕ್ಟಿಕಲ್ ತರಬೇತಿಗೆ ಸೇರಬೇಕಾಗುತ್ತದೆ. ನೀವು ಶೆಫ್ ಆಗಬೇಕೆಂದೇ ತೀರ್ಮಾನಿಸಿದರೆ ಹೋಟೇಲ್ ಮ್ಯಾನೇಜ್‍ಮೆಂಟ್ ಶಿಕ್ಷಣದಲ್ಲಿ ಅಡುಗೆಮನೆ ವಿಷಯವನ್ನು ನಿಮ್ಮ ಸ್ಪೆಷಾಲೈಜೇಷನ್ ಆಗಿ ತೆಗೆದುಕೊಳ್ಳಿ.

ಆರಂಭದಲ್ಲಿ ಟ್ರೇನಿಯಾಗಿರುವಾಗ 7ರಿಂದ 10 ಸಾವಿರ ರೂ. ವೇತನ ದೊರಕಬಹುದು. ಆಫೀಸರ್ ಗ್ರೇಡ್‍ಗೆ ಹೋದ ಬಳಿಕ ಕೊಂಚ ವೇತನ ಹೆಚ್ಚಾಗಬಹುದು. ಶೆಫ್ ಆಗಿ ಆರಂಭದಲ್ಲಿ 30 ಸಾವಿರ ರೂ.ವರೆಗೆ ವೇತನ ದೊರಕಬಹುದು. ಕಿಚನ್ ಉಸ್ತುವಾರಿ ವಹಿಸುವ ಶೆಫ್ ಆದ ಬಳಿಕ (ಸುಮಾರು ಐದಾರು ವರ್ಷ ಅನುಭವ ಪಡೆದÀ ಬಳಿಕ) ವೇತನ 50 ಸಾವಿರ ರೂ.ಗಿಂತ ಹೆಚ್ಚಾಗಬಹುದು. ಅನುಭವ 10 ವರ್ಷ ಕಳೆದ ಬಳಿಕ ನಿಮ್ಮ ವೇತನವು ನಿಮ್ಮ ಕೌಶಲಕ್ಕೆ ತಕ್ಕಂತೆ ಲಕ್ಷ ದಾಟಬಹುದು. ಈಗ ಕೆಲವೇ ವರ್ಷ ಅನುಭವ ಪಡೆದು ವಿದೇಶಗಳಲ್ಲಿ ಹಲವು ಲಕ್ಷ ವೇತನ ಪಡೆಯುವವರು ಇದ್ದಾರೆ. ಇವೆಲ್ಲ ಆಯಾ ವ್ಯಕ್ತಿಗಳ ಕೌಶಲ, ಪರಿಣತಿ ಮತ್ತು ಅಡುಗೆ ಮಾಡುವ ರೀತಿಯ ಮೇಲೆ ಅವಲಂಬಿತ.

ಈ ಉದ್ಯೋಗದಲ್ಲಿ ಒಳ್ಳೆಯ ವೇತನ ದೊರಕಬಹುದು. ಆದರೆ, ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಿರಬೇಕು. ಹಬ್ಬ ಹರಿದಿನಗಳ ಸಮಯದಲ್ಲಿ ಕುಟುಂಬದಿಂದ ದೂರವಿದ್ದು ನೀವು ಕೆಲಸ ಮಾಡುವಲ್ಲಿ ಅತಿಥಿಗಳಿಗೆ ಹಬ್ಬದ ಅಡುಗೆ ಮಾಡುತ್ತ ಇರಬೇಕಾಗಬಹುದು. ಇಂತಹ ಹಲವು ಗುಣ ಮತ್ತು ಅವಗುಣಗಳನ್ನು ಗಮನದಲ್ಲಿಟ್ಟುಕೊಂಡು ಶೆಫ್ ಉದ್ಯೋಗದತ್ತ ಮುಖ ಮಾಡಬಹುದು.


ಗಗನಯಾನಿ: ಅಂತರಿಕ್ಷ ಪ್ರಯಾಣದ ಕನಸು

“ನೀವು ನಿಜಕ್ಕೂ ಎಷ್ಟು ಸಣ್ಣ ಎಂದು ತಿಳಿಯಲು ಎತ್ತರಕ್ಕೆ, ಇನ್ನೂ ಎತ್ತರಕ್ಕೆ ಹೋಗಬೇಕು”

– ಫೆಲಿಕ್ಸ್ ಬುಮರ್ಗನರ್

ಭಾರತದ ಮೊದಲ ಗಗನಯಾನಿ ರಾಕೇಶ್ ಶರ್ಮಾ, ಇವರಿಗೆ ಬ್ಯಾಕಪ್ ಗಗನಯಾನಿಯಾಗಿದ್ದ ರವೀಶ್ ಮಲ್ಹೋತ್ರಾ, ಮೊದಲ ಭಾರತೀಯ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಹೀಗೆ ದೇಶದ ಹಲವು ಗಗನಯಾನಿಗಳು ನಿಮಗೆ ಸ್ಪೂರ್ತಿಯಾಗಿರಬಹುದು. ನಿಮಗೂ ಗಗನಯಾನಿಯಾಗಬೇಕು, ಭೂಮಿಯಾಚೆ ಇರುವ ಗ್ರಹಕ್ಕೆ ಸಾಗಬೇಕು. ಅಂತರಿಕ್ಷ ನಿಲ್ದಾಣದಲ್ಲಿ ಒಂದಿಷ್ಟು ದಿನ ತೇಲಿ ಬರಬೇಕು. ಹೀಗೆ… ಅದ್ಭುತ ಕನಸುಗಳು ಇರಬಹುದು. ಇಂತಹ ಕನಸುಗಳನ್ನು ಈಡೇರಿಸಿಕೊಳ್ಳಲು ಸ್ಪಷ್ಟವಾದ ಹಾದಿಯನ್ನು ಸೂಚಿಸುವುದು ಕಷ್ಟ. ಯಾಕೆಂದರೆ, ಮೊದಲನೆಯದಾಗಿ ನೀವು ಬಾಹ್ಯಾಕಾಶ ಸಂಸ್ಥೆಯಲ್ಲಿ ಅವಕಾಶ ಪಡೆಯಬೇಕು. ಅಲ್ಲಿ ನೀವು ಗಗನಯಾನ ಕಾರ್ಯಕ್ರಮಗಳಿಗೆ ಆಯ್ಕೆಯಾಬೇಕು. ಆದರೆ, ದೃಢ ನಿರ್ಧಾರ ಇದ್ದರೆ ನಿಮ್ಮ ಈ ಕನಸನ್ನು ಈಡೇರಿಸಿಕೊಳ್ಳಬಹುದು. ಗಗನಯಾನಿಯಾಗಿ ನಿಮ್ಮ ಭವಿಷ್ಯವನ್ನು ಬದಲಾಯಿಸಿಕೊಳ್ಳಬಹುದು.

ದೇಶದ ಮೊದಲ ಗಗನಯಾನಿ ರಾಕೇಶ್ ಶರ್ಮಾ ಓದಿದ್ದು ಹೈದರಾಬಾದ್‍ನ ನಿಜಾಮ್ ಕಾಲೇಜಿನಲ್ಲಿ. ನಂತರ ಏರ್ ಫೋರ್ಸ್ ಕೆಡೆಟ್ ಆಗಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ (ಎನ್‍ಡಿಎ)ಗೆ ಸೇರಿದರು. ನೀವೂ ಎನ್‍ಡಿಎ ಪರೀಕ್ಷೆ ಬರೆದು ಇಂತಹ ಅವಕಾಶ ಪಡೆಯಲು ಸಾಧ್ಯವಿದೆಯೇ ಎಂದು ನೋಡಬಹುದು. ರಾಕೇಶ್ ಶರ್ಮಾ ಅವರು ಭಾರತೀಯ ವಾಯುಪಡೆಯಲ್ಲಿ ಪೈಲೆಟ್ ಆದರು. ನಂತರ ಇವರ ಆಸಕ್ತಿ, ಕೌಶಲವು ಇವರನ್ನು ಗಗನಯಾನಿಯಾಗಿ (ಕಾಸ್ಮೊನಟ್) ಆಗಿಸಿತು. ರವೀಶ್ ಮಲ್ಹೋತ್ರಾ ಅವರೂ ಭಾರತೀಯ ವಾಯುಪಡೆಯಲ್ಲಿ (ಐಎಎಫ್) ಟೆಸ್ಟ್ ಪೈಲೆಟ್ ಆಗಿದ್ದವರು. ಬಳಿಕ ಅವರು ಸಂಶೋಧನಾ ಕಾಸ್ಮೊನಟ್ ಆಗಿ ಆಯ್ಕೆಯಾದರು. ಆದರೆ, ಕಲ್ಪನಾ ಚಾವ್ಲಾ ಅವರು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ)ಯ ಮೂಲಕ ಗಗನಯಾನಿಯಾದರು. ಅವರು ಓದಿದ್ದು ಚಂಡೀಗಢದ ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಅಮೆರಿಕಕ್ಕೆ ತೆರಳಿ ಅಲ್ಲಿ ಡಬಲ್ ಡಿಗ್ರಿ, ಪಿಎಚ್.ಡಿ ಪದವಿ ಪಡೆದರು. ನಂತರ ನಾಸಾದ ಗಗನಯಾನಿ ಪಡೆಗೆ ಸೇರಿದರು. ಬಾಹ್ಯಾಕಾಶ ಮಿಷನ್‍ಗೆ ಆಯ್ಕೆಯಾದರು.

ಈಗ ನೀವು ಏನು ಓದಬೇಕು ಎಂದು ಬಯಸುವಿರಿ. ಇಸ್ರೋ ಸೇರಲು ಯಾವುದಾದರೂ ಹಾದಿಗಳಿವೆಯೇ. ಭಾರತೀಯ ವಾಯುಪಡೆಗೆ ಸೇರಲು ಪ್ರಯತ್ನಿಸುವಿರಾ? ಆಯ್ಕೆ ನಿಮ್ಮದು. ಹೆಚ್ಚಿನ ಗಗನಯಾನಿಗಳು ಎಂಜಿನಿಯರಿಂಗ್ ಹಿನ್ನೆಲೆಯಿಂದ ಬಂದವರು. ಹೆಚ್ಚಿನ ಗಗನಯಾನಿಗಳು ಮಿಲಿಟರಿ ಹಿನ್ನೆಲೆಯಿಂದ ಬಂದಿರುತ್ತಾರೆ. ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್ ಮತ್ತು ಗಣಿತ) ಹಿನ್ನೆಲೆಯಿಂದ ಬಂದರೆ ಉತ್ತಮ. ಏರೋಸ್ಪೇಸ್, ಕೆಮಿಕಲ್, ಮೆಕ್ಯಾನಿಕಲ್, ಕಂಪ್ಯೂಟರ್ ಎಂಜಿನಿಯರಿಂಗ್, ಗಣಿತ(ಪ್ಯೂರ್ ಆಂಡ್ ಅಪ್ಲೈಡ್) ಇತ್ಯಾದಿ ವಿಷಯಗಳನ್ನು ಓದಿದದವರೂ ಗಗನಯಾತ್ರಿಗಳಾಗಿದ್ದಾರೆ. ಈ ಪುಸ್ತಕ ಬರೆಯುವ ಸಮಯದಲ್ಲಿ ಸಾಕಷ್ಟು ಗಗನಯಾನಿಗಳ ಶಿಕ್ಷಣವನ್ನು ನೋಡಿದಾಗ ಇಂತಹ ಅಂಶಗಳು ಗಮನಕ್ಕೆ ಬಂದವು.

ಏರೋಸ್ಪೇಸ್, ಕೆಮಿಕಲ್, ಮೆಕ್ಯಾನಿಕಲ್, ಕಂಪ್ಯೂಟರ್ ಎಂಜಿನಿಯರಿಂಗ್, ಗಣಿತ ಇತ್ಯಾದಿ ಕ್ಷೇತ್ರಗಳ್ಲಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯಿರಿ. ಗಗನಯಾನಿಯಾಗಬೇಕಾದರೆ ಇಸ್ರೋ ಅಥವಾ ಇತರೆ ಅಂತರಿಕ್ಷ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಪ್ರಮುಖ ಕೋರ್ಸ್‍ಗಳಿಗೆ ಸೇರುವುದು ಉತ್ತಮ. ಅಲ್ಲಿ ನೀವು ನಿಮ್ಮ ಕೌಶಲ ಮತ್ತು ಅವಕಾಶಗಳ ಸಮರ್ಥ ಬಳಕೆಯಿಂದ ಗಗನಯಾನಿಯಾಗಬಹುದು.

ಭಾರತವು ಭವಿಷ್ಯದಲ್ಲಿ ಮಾನವಸಹಿತ ಗಗನಯಾನ ಯೋಜನೆ ಹೊಂದಿರಬಹುದು. ಅದಕ್ಕಾಗಿ ಸಾಕಷ್ಟು ಅಭ್ಯರ್ಥಿಗಳು ಕಾದುಕುಳಿತಿರಬಹುದು ಅಥವಾ ನೀವೇ ಆ ಯೋಜನೆಗೆ ಆಯ್ಕೆಯಾಗಬಹುದು. ನಾಸಾ, ಐರೋಪ್ಯ ಬಾಹ್ಯಾಕಾಶ ಸಂಸ್ಥೆ, ಜಾಕ್ಸಾ ಹೀಗೆ ವಿದೇಶಗಳ ಅಂತರಿಕ್ಷ ಸಂಸ್ಥೆಗಳಲ್ಲಿ ಗಗನಯಾನಿಯಾಗಬೇಕಾದರೆ ನೀವು ಆ ದೇಶದ ಪೌರತ್ವ ಪಡೆಯಬೇಕು.

ಗಗನಯಾನಿಯಾಗಲು ನೀವು ಶಾಲಾ ದಿನಗಳಲ್ಲಿಯೇ ಕನಸು ಕಾಣಿರಿ. ಕೇವಲ ಕನಸು ಮಾತ್ರ ಕಾಣದೆ ಓದು, ಕ್ರೀಡೆ ಎಲ್ಲದರಲ್ಲಿಯೂ ಮುಂದೆ ಇರಲು ಪ್ರಯತ್ನಿಸಿ. ನಾಯಕತ್ವ ಗುಣಗಳನ್ನು ಕಲಿಯಿರಿ. ಪ್ರೋಗ್ರಾಮಿಂಗ್ ಕಲಿಯಿರಿ. ಗಿಟಾರ್ ಕಲಿಯಿರಿ. ವಿದೇಶಿ ಭಾಷೆ ಕಲಿಯಿರಿ. ಅಂತರಿಕ್ಷ, ಬಾಹ್ಯಾಕಾಶ ವಿಜ್ಞಾನ ಇತ್ಯಾದಿಗಳಿಗೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಿರಿ. ಬಾಹ್ಯಾಕಾಶ ಶಿಕ್ಷಣ ಸಂಸ್ಥೆಗೆ ಸೇರಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯಿರಿ. ಪೈಲೆಟ್ ಆಸ್ಟ್ರೋನಟ್ ಆಗಲು ಎಂಜಿನಿಯರಿಂಗ್, ಬಯೋಲಜಿಕಲ್ ಸೈನ್ಸ್, ಫಿಸಿಕಲ್ ಸೈನ್ಸ್ ಅಥವಾ ಗಣಿತದಲ್ಲಿ ಎಂಜಿನಿಯರಿಂಗ್ ಪದವಿ ಪಡೆಯಿರಿ. ಕನಿಷ್ಠ 1 ಸಾವಿರ ಗಂಟೆ ಪೈಲೆಟ್ ಇನ್ ಕಮಾಂಟ್ ಸಮಯ ವಿಮಾನ ಹಾರಾಟದ ಅನುಭವ ಬೇಕು. ಫ್ಲೈಟ್ ಟೆಸ್ಟ್ ಅನುಭವ ಇದ್ದರೆ ಇನ್ನೂ ಉತ್ತಮ.

ಹೀಗೆ ಗಗನಯಾತ್ರಿಯಾಗಲು ನೀವು ಮಾಡುವ ಪ್ರಯತ್ನವು ನಿಮ್ಮನ್ನು ಗಗನಯಾತ್ರಿಯಾಗಿಸಬಹುದು ಅಥವಾ ಗಗನಯಾತ್ರಿ ಆಗಿಸದೆಯೂ ಇರಬಹುದು. ಆದರೆ, ದೇಶದ ಬಾಹ್ಯಾಕಾಶ ಸಂಸ್ಥೆಗೆ ಒಬ್ಬ ಹೆಮ್ಮೆಯ ಉದ್ಯೋಗಿಯನ್ನು ನೀಡಬಹುದು. ಪೈಲೆಟ್ ತರಬೇತಿ ಇತ್ಯಾದಿಗಳು ನಿಮಗೆ ದುಬಾರಿ ಎಂದು ಪರಿಣಮಿಸಿದರೆ ಎನ್‍ಡಿಎ ಪರೀಕ್ಷೆ ಬರೆಯಿರಿ. ಅಲ್ಲಿ ಅತ್ಯುತ್ತಮ ಅವಕಾಶಕ್ಕಾಗಿ ಪ್ರತಿದಿನವೂ ಪ್ರಯತ್ನಿಸಿ.


ಉದ್ಯಮಿಯಾಗುವುದು ಹೇಗೆ?

“ಉದ್ಯಮಿಯಾಗಲು ನಿಮ್ಮಲ್ಲಿ ವಿದ್ಯಾರ್ಹತೆ, ಹಣ, ದೊಡ್ಡ ಮಿದುಳು ಅಥವಾ ಅತ್ಯುತ್ತಮ ಐಡಿಯಾದ ಅವಶ್ಯಕತೆ ಬೇಕಿಲ್ಲ. ಆದರೆ, ಮಹಾತ್ವಾಕಾಂಕ್ಷೆ ಬೇಕು”

– ಒಲಿವರ್ ಎಂಬೆರ್ಟನ್

ಎಷ್ಟೋ ವರ್ಷದ ಹಿಂದೆ ಬಾಡಿಗೆ ಕಾರು ಓಡಿಸುತ್ತಿದ್ದ ವ್ಯಕ್ತಿ ಈಗ ಪುತ್ತೂರಿನಲ್ಲಿರುವ ಶಂಕರ್ ಗ್ರೂಪ್ಸ್ ಆಫ್ ಕಂಪನಿಯ ಮಾಲೀಕರಾಗಿ ಕೋಟ್ಯಧಿಪತಿಯಾಗಿದ್ದಾರೆ. ಅವರ ಕಂಪನಿಯ ಬಿಂದು ವಾಟರ್, ಜೀರಾ ಪಾನೀಯಗಳು ತುಂಬಾ ಫೇಮಸ್ ಆಗಿವೆ. ಪುತ್ತೂರಿನ ಮಧುಮಲ್ಟಿಪ್ಲಸ್ ಎಂಬ ಕಂಪನಿಯ ಉತ್ಪನ್ನಗಳೂ ಈಗ ರಾಜ್ಯದಲ್ಲಿ ಹೆಚ್ಚು ಜನಪ್ರಿಯವಾಗಿವೆ. ಹತ್ತಿಪ್ಪತ್ತು ವರ್ಷಗಳ ಹಿಂದೆ ಈ ಫ್ಯಾಕ್ಟರಿಯ ಮಾಲೀಕರಾದ ಮಳಿ ವೆಂಕಟಕೃಷ್ಣ ಭಟ್ ಅವರು ಚಂದಮಾಮ ಮಾರಾಟ ಮಾಡುತ್ತ ಇದ್ದವರು. ನಂತರ ಜೇನು ಸಂಗ್ರಹ ಇತ್ಯಾದಿ ಹವ್ಯಾಸವನ್ನು ಬೆಳೆಸಿಕೊಂಡು ಪುಟ್ಟದಾಗಿ ಜೇನು ಉತ್ಪನ್ನಗಳು, ಪಾನೀಯ ಉತ್ಪನ್ನಗಳನ್ನು ಆರಂಭಿಸಿದರು. ಇವರಿಬ್ಬರು ಉದಾಹರಣೆಯಷ್ಟೇ, ನೀವಿರುವ ಊರಿನಲ್ಲಿಯೇ ಹಲವು ಯಶಸ್ವಿ ಉದ್ಯಮಿಗಳು ಇರಬಹುದು. ಅವರ ಆರಂಭಿಕ ಜೀವನದ ಬಗ್ಗೆ ತಿಳಿದುಕೊಳ್ಳಿ. ಅವರ ಆರಂಭಿಕ ಬದುಕು ನಿಮ್ಮ ಈಗಿನ ಬದುಕಿಗಿಂತಲೂ ಕಷ್ಟಕರವಾಗಿದ್ದಿರಬಹುದು. ಉದ್ಯಮ ಆರಂಭದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದವರು. ಆದರೆ, ಅವರಲ್ಲಿದ್ದ ದೃಢವಾದ ಸಂಕಲ್ಪವು ಇಂದು ಯಶಸ್ವಿ ಉದ್ಯಮಿಗಳನ್ನಾಗಿ ಮಾಡಿದೆ.

ಇದೇ ರೀತಿ ರತನ್ ಟಾಟಾ ಅವರ ತಂದೆಯ ಆ ಆರಂಭಿಕ ಉದ್ಯಮದ ದಿನಗಳು, ಇನ್ಫೋಸಿಸ್ ಆರಂಭದ ಕತೆಯನ್ನೂ ನೀವು ಕೇಳಿರಬಹುದು. ಇವರಷ್ಟೇ ಅಲ್ಲದೆ ಈಗಿನ ತಲೆಮಾರಿನ ಫೇಸ್‍ಬುಕ್ ಆರಂಭ ಮತ್ತು ಅದರ ಯಶಸ್ಸಿನ ಕತೆಯೂ ನಿಮಗೆ ತಿಳಿದಿರಬಹುದು. ಸಣ್ಣ ಉದ್ಯಮ ಅಥವಾ ನವೋದ್ಯಮ (ಸ್ಟಾರ್ಟಪ್) ಮೂಲಕವೂ ಈಗಿನ ತರುಣ-ತರುಣಿಯರು ಯಶೋಗಾಥೆ ಬರೆದಿದ್ದಾರೆ. ನೀವೂ ಶಾಲಾ-ಕಾಲೇಜು ಓದುತ್ತಿರುವಾಗಲೇ ಭವಿಷ್ಯದಲ್ಲಿ ದೊಡ್ಡ ಉದ್ಯಮಿಯಾಗುವ, ಯಶಸ್ವಿ ವ್ಯಕ್ತಿಯಾಗುವ ಕನಸು ಕಾಣಬಹುದು. ಆ ಕನಸನ್ನು ಈಡೇರಿಸಿಕೊಳ್ಳಬಹುದು ಮತ್ತು ಭವಿಷ್ಯ ಬದಲಿಸಿಕೊಳ್ಳಬಹುದು.

ಇಲ್ಲಿ ಅಭ್ಯರ್ಥಿಗಳನ್ನು ಎರಡು ವಿಧಗಳಾಗಿ ಆಯ್ಕೆ ಮಾಡಿಕೊಳ್ಳೋಣ. ಮೊದಲನೆಯ ವಿಭಾಗದವರು ಕಡಿಮೆ ವಿದ್ಯಾರ್ಹತೆ ಹೊಂದಿರುವವರು ಮತ್ತು ದೊಡ್ಡ ಕನಸು ಹೊಂದಿರುವವರು. ಇನ್ನೊಂದು ವರ್ಗದವರು ಹೆಚ್ಚು ವಿದ್ಯಾರ್ಹತೆ ಹೊಂದಿರುವವರು ಮತ್ತು ಉನ್ನತ ಕನಸು ಹೊಂದಿರುವವರು. ನೆನಪಿಡಿ, ಯಾವುದೇ ಉದ್ಯಮದ ಯಶಸ್ಸಿಗೂ ಉನ್ನತ ಮತ್ತು ದೊಡ್ಡ ಕನಸು ಅತ್ಯಂತ ಅವಶ್ಯಕ. ನಿಮ್ಮಲ್ಲಿ ಕಡಿಮೆ ವಿದ್ಯಾಭ್ಯಾಸ ಹೊಂದಿದ್ದರೂ ದೊಡ್ಡ ಉದ್ಯಮಿಯಾಗಿ ಬೆಳೆಯಬಹುದು. ಪುಟ್ಟ ಅಂಗಡಿ, ಕಂಪನಿ ಸ್ಥಾಪಿಸಿ ಅಲ್ಲಿ ಉತ್ಪನ್ನಗಳನ್ನು ಮಾರಾಟ ಗಳಿಸುತ್ತ ಯಶಸ್ಸು ಪಡೆಯಬಹುದು. ಮುಂದೆ ನಿಮ್ಮ ಅಂಗಡಿ, ಕಂಪನಿಯ ಶಾಖೆಗಳನ್ನು ಹೆಚ್ಚಿಸುತ್ತ ಹೋಗಬಹುದು. ಒಂದು ಟ್ರಾವೆಲ್ ವಾಹನ, ಲಾರಿ ಖರೀದಿಸಿ ಅದರಲ್ಲಿ ಯಶಸ್ಸು ಪಡೆದು ನಂತರ ವಾಹನಗಳ ಸಂಖ್ಯೆ ಹೆಚ್ಚಿಸುತ್ತ ಹೋಗಬಹುದು. ವಿಆರ್‍ಎಲ್ ಸಮೂಹ ಬೆಳೆದದ್ದು ಸಹ ಇದೇ ರೀತಿ. ಕಡಿಮೆ ಹಣವಿದ್ದರೆ ಸಣ್ಣ ಬಜೆಟ್‍ನಿಂದ ಉದ್ಯಮ ಆರಂಭಿಸಿ. ಹೆಚ್ಚು ಹಣವಿದ್ದರೂ ಕಡಿಮೆ ಬಜೆಟ್‍ನಿಂದಲೇ ಆರಂಭಿಸಿ ಒಂದಿಷ್ಟು ಅನುಭವ ಗಳಿಸಿದ ಬಳಿಕ ವ್ಯವಹಾರವನ್ನು ವಿಸ್ತರಿಸಿ.

ನಿಮ್ಮಲ್ಲಿ ಉನ್ನತ ವಿದ್ಯಾಭ್ಯಾಸವಿದ್ದು, ಮಹೋನ್ನತ ಕನಸು ಇದ್ದರೂ ನಿಮಗೆ ನೀವು ಆಯ್ಕೆ ಮಾಡಿಕೊಳ್ಳುವ ಉದ್ಯಮದ ಕುರಿತು ಸಂಪೂರ್ಣ ಅರಿವು ಬೇಕು. ಅದಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಅನುಭವ ಸಂಪಾದಿಸಿಕೊಳ್ಳಬೇಕು. ನೆನಪಿಡಿ, ನೀವು ಕನಸು ಕಂಡಂತೆ ವಾಸ್ತವ ಇರುವುದಿಲ್ಲ. ಅನುಭವ ಮತ್ತು ವಾಸ್ತವ ಪರಿಸ್ಥಿತಿಯು ನಿಮಗೆ ಬೇರೆಯದ್ದೇ ಆದ ಪಾಠ ಕಲಿಸಬಹುದು. ಅಂತಹ ಪಾಠಗಳಿಂದ ಕಲಿಯುತ್ತ ಬೆಳೆಯಿರಿ. ಸೋಲು ಬಂದಾಗ ಎದೆಗುಂದದಿರಿ. ಬಹುತೇಕ ಯಶಸ್ವಿ ಉದ್ಯಮಿಗಳು ತಮ್ಮ ಉದ್ಯಮದ ಹಲವು ಹಂತಗಳಲ್ಲಿ ಕಂಗೆಟ್ಟಿದ್ದಾರೆ. ಸೋತಿದ್ದಾರೆ. ಆದರೆ, ಕಟ್ಟಕಡೆಗೆ ಗೆದ್ದಿದ್ದಾರೆ.

ಮೊದಲಿಗೆ ನೀವು ಯಾಕೆ ಉದ್ಯಮಿಯಾಗಬೇಕು ಎನ್ನುವ ಕುರಿತು ಆಲೋಚಿಸಿ. ನಿಮ್ಮಲ್ಲಿ ಇರುವ ಸಾಮಥ್ರ್ಯ ಮತ್ತು ದೌರ್ಬಲ್ಯಗಳ ಬಗ್ಗೆ ತಿಳಿದುಕೊಳ್ಳಿ. ಉದ್ಯಮ ಆರಂಭದಲ್ಲಿ ಹಲವು ಕಷ್ಟಗಳು ಎದುರಾಗಬಹುದು. ನಿಮ್ಮ ಕುಟುಂಬದ ಜೊತೆಗಿನ ಆರಾಮದಾಯಕ ಬದುಕಿಗೆ ತೊಂದರೆ ನೀಡಬಹುದು. ಇದಕ್ಕೆ ಸಿದ್ಧರಾಗಿರಿ. ಈ ಸಮಯದಲ್ಲಿ ನೀವು ಕೊಂಚ ಕಳೆದುಕೊಳ್ಳಬೇಕಾಗಬಹುದು. ಆದರೆ, ಮುಂದೆ ಅದರ ಹಲವು ಪಟ್ಟು ಪಡೆದುಕೊಳ್ಳಲಿದ್ದೀರಿ. ನೀವು ಈ ಹಿಂದೆ ಓದಿರುವುದಿಕ್ಕಿಂತ, ಕಲಿತಿರುವುದಕ್ಕಿಂತ ಅಸಾಮಾನ್ಯವಾದದ್ದನ್ನು ಕಲಿಯಲಿದ್ದೀರಿ. ನೀವು ಸ್ವತಂತ್ರವಾಗಿ ಯೋಚಿಸಲಿದ್ದೀರಿ. ನಿಮಗೆ ನೀವೆ ಮತ್ತು ಇತರರಿಗೆ ಬಾಸ್ ಆಗಲಿದ್ದೀರಿ. ಯಾರ ಕೈಕೆಳಗೆ ದುಡಿಯುವ ಹಂಗು ನಿಮಗೆ ಇರುವುದಿಲ್ಲ. ಪ್ರತಿದಿನ ನಿಮ್ಮನ್ನು ನೀವು ಉತ್ತೇಜಿಸಿಕೊಂಡು ಉದ್ಯಮವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು. ನೀವು ಹೆಚ್ಚು ದೃಢರಾಗಲಿದ್ದೀರಿ. ಭಯಕಳೆದುಕೊಳ್ಳಲಿದ್ದೀರಿ.

ಹೆಚ್ಚಿನ ಉದ್ಯಮಾಸಕ್ತರಲ್ಲಿ ಒಂದು ಪ್ರಶ್ನೆ ಇರುತ್ತದೆ. ಉದ್ಯಮಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಕೋರ್ಸ್ ಮಾಡಬೇಕೆ? ಬೇಡವೇ? ನಿಮ್ಮ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಉತ್ತಮ ಕೋರ್ಸ್ ಲಭ್ಯವಿದ್ದರೆ ಖಂಡಿತವಾಗಿಯೂ ಪಡೆಯಬಹುದು. ನೆನಪಿಡಿ, ದೊಡ್ಡ ಉದ್ಯಮಿಯಾಗುವ ಕನಸು ಈಡೇರಿಸಿಕೊಳ್ಳಲು ಸಣ್ಣದಾಗಿ ಉದ್ಯಮ ಆರಂಭಿಸಲು ನಾಚಿಕೆ ಪಡಬೇಡಿ.

ನೀವು ಬಡವರು, ಶ್ರೀಮಂತರು, ಹಣವಿರುವವರು, ಹಣವಿಲ್ಲದವರು, ವಿದ್ಯಾರ್ಥಿ, ಹೆಚ್ಚು ಓದಿರುವವರು, ಕಡಿಮೆ ಓದಿರುವವರು ಇತ್ಯಾದಿ ಅಂಶಗಳನ್ನು ಪಕ್ಕಕ್ಕಿಡಿ. ಈಗಾಗಲೇ ಉದ್ಯೋಗದಲ್ಲಿರುವವರು, ಇನ್ನೊಬ್ಬರ ಜೊತೆ ಕೆಲಸ ಮಾಡಿ ಸಾಕಾಗಿ ಹೋದವರೂ ಆಗಿರಬಹುದು. ಆದರೆ, ಉದ್ಯಮಿಯಾಗಲು ಇವೆಲ್ಲಕ್ಕಿಂತ ಅಗತ್ಯವಾಗಿ ಬೇಕಿರುವ ಅವಶ್ಯಕತೆ ಎಂದರೆ- ಸಾಮಾಥ್ರ್ಯ ಮತ್ತು ಸಂಕಲ್ಪ.

ನೀವು ಆರಂಭಿಸುವ ಉದ್ಯಮದ ಮೂಲಭೂತ ಲಕ್ಷಣಗಳನ್ನು ಅಧ್ಯಯನ ಮಾಡಿ. ಸಾಧ್ಯವಾದರೆ ಇದಕ್ಕೆ ಸಂಬಂಧಪಟ್ಟಂತೆ ಪದವಿ, ಸ್ನಾತಕೋತ್ತರ ಶಿಕ್ಷಣವಿರಲಿ. ಯಾವುದಾದರೂ ಬಿಸ್ನೆಸ್ ಮ್ಯಾನೇಜ್‍ಮೆಂಟ್ ಕೋರ್ಸ್ ಕಲಿತರೆ ಉತ್ತಮ. ನೀವು ಆಯ್ಕೆ ಮಾಡುವ ಉದ್ಯಮಕ್ಕೆ ಸಂಬಂಧಪಟ್ಟ ವಿವಿಧ ಲೆಕ್ಚರ್ಸ್ ಮತ್ತು ಸೆಮಿನಾರ್‍ಗಳಲ್ಲಿ ಭಾಗಿಯಾಗಿ. ನೀವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರದ ಈಗಿನ ಪರಿಸ್ಥಿತಿ ಮತ್ತು ಭವಿಷ್ಯದ ಮುನ್ನೋಟವನ್ನು ಅಂದಾಜು ಮಾಡಿಕೊಳ್ಳಿ. ಈಗಾಗಲೇ ಉದ್ಯಮಗಳಲ್ಲಿ ಯಶಸ್ಸು ಪಡೆದವರು ಮತ್ತು ಸೋತವರನ್ನು ಭೇಟಿಯಾಗಿ. ಅವರ ಅಭಿಪ್ರಾಯಗಳನ್ನು ಪಡೆದುಕೊಳ್ಳಿ. ಅವರು ಹೇಳುವ ಸಕಾರಾತ್ಮಕ ಅಂಶಗಳನ್ನು ಮಾತ್ರ ಗಮನಿಸಿ. ಈಗಿನ ಕಾಲದಲ್ಲಿ ನಿಮ್ಮ ಅಭಿಲಾಸೆಗೆ ತಣ್ಣೀರು ಎರಚುವವರೂ ಇರುತ್ತಾರೆ. ನಕಾರಾತ್ಮಕವಾಗಿ ಬುದ್ಧಿ ಹೇಳುವವರ ಮಾತಿಗೆ ಗಮನ ನೀಡಬೇಡಿ. ಕಾಲೇಜು ಮುಗಿದ ಬಳಿಕ ಇಂಟರ್ನ್‍ಷಿಪ್ ಮಾಡಿ. ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಒಂದಿಷ್ಟು ಸಮಯ ಕೆಲಸ ಮಾಡಿ ಅನುಭವ ಸಂಪಾದಿಸಿಕೊಳ್ಳಿ. ವ್ಯವಹಾರ ಸೂಕ್ಷ್ಮಗಳನ್ನು ಕಲಿತುಕೊಳ್ಳಿ.

ಉದ್ಯಮ ಆರಂಭಿಸಿ. ನೋಂದಣಿ ಪ್ರಕ್ರಿಯೆಗಳನ್ನು ಮುಗಿಸಿ. ಅಲ್ಪಾವಧಿಯ ಮತ್ತು ದೀರ್ಘಾವಧಿಯ ಗುರಿಗಳನ್ನು ಹಾಕಿಕೊಂಡು ಕೆಲಸ ಮಾಡಿ. ನೀವು ಆರಂಭಿಸಿದ ಉದ್ಯಮವು ಗ್ರಾಹಕರಿಗೆ ಇಷ್ಟವಾಗುವಂತೆ ಇರಲಿ. ಗ್ರಾಹಕರ ವಿಶ್ವಾಸ ಗಳಿಸಲು ಪ್ರಯತ್ನಿಸಿ. ದೊಡ್ಡ ಪ್ರಾಜೆಕ್ಟ್‍ಗಳನ್ನು ಪಡೆಯಲು ಪ್ರಯತ್ನಿಸಿ. ನೀವು ಮಾಡುವ ಕೆಲಸವು ನಿಮ್ಮ ಆರೋಗ್ಯದ ಮೇಲೆ, ವೈಯಕ್ತಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಸಮತೋಲನ ಸಾಧಿಸಲು ಯತ್ನಿಸಿ. ಯಶಸ್ವಿ ಉದ್ಯಮಿಯಾಗಲೂ ಮತ್ತು ಯಶಸ್ವಿ ಬದುಕಿಗೆ ಇದೂ ಅವಶ್ಯಕ. ಅವಶ್ಯಕತೆ ಇರುವಷ್ಟೇ ಬ್ಯಾಂಕ್ ಸಾಲ ಪಡೆಯಿರಿ. ಹೆಚ್ಚು ಸಾಲದ ಹೊರೆಯನ್ನು ಮೈಮೇಲೆ ಹಾಕಿಕೊಳ್ಳಬೇಡಿ. ಜನರಿಗೆ ಅತ್ಯುತ್ತಮವಾದದ್ದನ್ನೇ ನೀಡಿರಿ. ನಿಮ್ಮ ಉದ್ಯಮಕ್ಕೆ ಸಂಬಂಧಪಟ್ಟಂತೆ ನೆಟ್‍ವರ್ಕ್ ಉತ್ತಮಪಡಿಸಿ. ನಿಮ್ಮ ಗ್ರಾಹಕರು, ಪ್ರತಿಸ್ಪರ್ಧಿಗಳ ಕುರಿತು ಸರಿಯಾಗಿ ಅರ್ಥಮಾಡಿಕೊಳ್ಳಿ. ಸಮರ್ಥ ಸಿಬ್ಬಂದಿಗಳನ್ನೇ ನೇಮಕಮಾಡಿಕೊಳ್ಳಿರಿ.

ಉದ್ಯಮ ಆರಂಭಿಸಿದ ಬಳಿಕ ಅದನ್ನು ಉಳಿಸಲು ಪ್ರಯತ್ನಿಸಬೇಕು. ಅದಕ್ಕಾಗಿ ಸಾಕಷ್ಟು ಕಷ್ಟಪಡಬೇಕಾಗಬಹುದು. ಕಠಿಣ ಪರಿಶ್ರಮಪಟ್ಟು ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಮ್ಮ ಉದ್ಯಮವನ್ನು ಉಳಿಸಿ, ಬೆಳೆಸಿರಿ. ಒಂದಿಷ್ಟು ಹಣವನ್ನು ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಪ್ರಯತ್ನಿಸಿ. ಇದು ಕಷ್ಟಕಾಲದಲ್ಲಿ ನಿಮಗೆ ನೆರವಾಗಲಿದೆ. ಲೆಕ್ಕಾಚಾರದ ಸವಾಲುಗಳನ್ನು ತೆಗೆದುಕೊಂಡು ಮುಂದುವರೆಯಿರಿ. ಖಂಡಿತಾ ಯಶಸ್ಸು ಪಡೆದೇ ಪಡೆಯುವಿರಿ.

***

54.          ಸಮುದ್ರ ಇಷ್ಟಪಡುವವರಿಗೆ ಮೆರಿನ್ ಎಂಜಿನಿಯರಿಂಗ್

“ನೀವು ಕೇವಲ ನಿಂತಿದ್ದರೆ ಅಥವಾ ದಿಟ್ಟಿಸಿ ನೋಡಿದರೆ ಸಮುದ್ರವನ್ನು ದಾಟಲು ಸಾಧ್ಯವಿಲ್ಲ”- ರವೀಂದ್ರನಾಥ ಠಾಗೋರ್

ಕೆಲವರಿಗೆ ವಾಹನೋದ್ಯಮ ಇಷ್ಟ. ಇನ್ನು ಕೆಲವರಿಗೆ ವೈಮಾನಿಕ ಕ್ಷೇತ್ರವೆಂದರೆ ಆಕರ್ಷಣೆ. ಕೆಲವರಿಗೆ ಸಾಗರವೆಂದರೆ ಇಷ್ಟ. ಆದರೆ, ಇತರೆ ಉದ್ಯೋಗ ಕ್ಷೇತ್ರಕ್ಕೆ ಹೋಲಿಸಿದರೆ ಕಡಲಿನಲ್ಲಿ ಹಡಗಿನಲ್ಲಿ ಕಾರ್ಯನಿರ್ವಹಿಸುವುದು ತುಂಬಾ ಭಿನ್ನ. ಇಲ್ಲಿ ಹಲವು ತಿಂಗಳುಗಳ ಕಾಲ ಸಾಗರವೇ ಸಂಗಾತಿಯಾಗಿರುತ್ತದೆ. ಒಂಟಿತನ ಕಾಡಬಹುದು. ಕುಟುಂಬದವರನ್ನು ಬಯಸಿದಾಗ ಭೇಟಿಯಾಗುವುದು ಕಷ್ಟವಾಗಬಹುದು. ಕೆಲಸ ಕಠಿಣವಾಗಿರುತ್ತದೆ. ಇಂತಹ ಹಲವು ಅವಗುಣಗಳ ನಡುವೆಯೂ ಮೆರಿನ್ ಎಂಜಿನಿಯರಿಂಗ್ ಅತ್ಯುತ್ತಮ ಬೇಡಿಕೆಯ ಉದ್ಯೋಗ. ತಿಂಗಳ ವೇತನ ಲಕ್ಷ ರೂ.ಗಳಲ್ಲಿ ದೊರಕುತ್ತದೆ (ಆರಂಭದಲ್ಲಿಯೇ 30-60 ಸಾವಿರ ರೂ. ಮಾಸಿಕ ವೇತನ ಇರಬಹುದು). ನೀವು ಇರುವ ಹುದ್ದೆಯಲ್ಲಿ ಬಡ್ತಿ ದೊರಕಿದಂತೆ ವೇತನ ಹಲವುಪಟ್ಟು ಹೆಚ್ಚಾಗುತ್ತದೆ. ಈ ಹುದ್ದೆಯಲ್ಲಿ ಜವಾಬ್ದಾರಿ ಹೆಚ್ಚಿರುತ್ತದೆ. ಇದು ನಿಮಗೆ ಹೆಮ್ಮೆಯ ಸಂಗತಿಯೂ ಆಗಬಹುದು. ಉದ್ಯೋಗ ನಿಮಿತ್ತ ಹಲವು ದೇಶಗಳಿಗೆ ಭೇಟಿ ನೀಡುವ ಸದವಕಾಶ ದೊರಕುತ್ತದೆ. ಬಡ್ತಿ ದೊರಕಿದಂತೆ ಹೆಚ್ಚು ದೈಹಿಕ ಶ್ರಮ ಬೇಡುವ ಕೆಲಸ ಕಡಿಮೆಯಾಗುತ್ತದೆ. ಇವೆಲ್ಲ ಮೆರಿನ್ ಎಂಜಿನಿಯರಿಂಗ್‍ನ ಸಕಾರಾತ್ಮಕ ಅಂಶಗಳು.

ಏನಿದು ಮೆರಿನ್ ಎಂಜಿನಿಯರಿಂಗ್?

ನೀರಿನಲ್ಲಿ ಸಾಗುವ ವಾಹನಗಳ(ಹಡಗು, ದೋಣಿಗಳು ಇತರೆ) ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆ ಮಾಡುವ ಕೆಲಸವಿದು. ಹಡಗು ನಿರ್ಮಾಣ, ಸಮುದ್ರದಲ್ಲಿ ತೈಲ ಉತ್ಪಾದನಾ ಪ್ಲಾಟ್‍ಫಾರ್ಮ್‍ಗಳನ್ನು, ಬಂದರುಗಳನ್ನು ನಿರ್ಮಿಸಲು ಮೆರಿನ್ ಎಂಜಿನಿಯರಿಂಗ್ ತಂತ್ರಜ್ಞಾನ ಮತ್ತು ತಂತ್ರವನ್ನು ಬಳಸಲಾಗುತ್ತದೆ.

ಏನು ಓದಬೇಕು?: ಮೆರಿನ್ ಎಂಜಿನಿಯರಿಂಗ್ ಓದಲು ಬಯಸುವವರು 10+2 ವಿದ್ಯಾರ್ಹತೆ ಹೊಂದಿರಬೇಕು. ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಓದಿರಬೇಕು. ಅಂಕ ಶೇಕಡ 60ಕ್ಕಿಂತ ಹೆಚ್ಚಿರಲಿ. ಇಂಗ್ಲಿಷ್‍ನಲ್ಲಿ ಉತ್ತಮ ಅಂಕ ಪಡೆಯಿರಿ. ಅಂದರೆ ಶೇಕಡ 50ಕ್ಕಿಂತ ಹೆಚ್ಚು ಅಂಕವಿರಲಿ. ಬಳಿಕ ಮೆರಿನ್ ಎಂಜಿನಿಯರಿಂಗ್ ಪದವಿಗೆ ಸೇರಿರಿ. ಸಾಮಾನ್ಯವಾಗಿ ಈ ಶಿಕ್ಷಣಕ್ಕೆ ವರ್ಷಕ್ಕೆ ಇಂತಿಷ್ಟು (ಕಡಿಮೆಯೆಂದರೂ 2-4 ಲಕ್ಷ ರೂ. ) ಶುಲ್ಕವಿರುತ್ತದೆ. ಮೆರಿನ್ ಪ್ರಪಲ್ಷನ್, ಫ್ಲೂಯಿಡ್ ಡೈನಾಮಿಕ್ಸ್ ಮತ್ತು ಶಿಪ್ ವಿನ್ಯಾಸ ಇತ್ಯಾದಿ ವಿಷಯಗಳನ್ನು ಪದವಿಯಲ್ಲಿ ಓದಬೇಕಾಗುತ್ತದೆ. ಕಾಲೇಜಿಗೆ ಸೇರಿದ ಬಳಿಕ ಆಗಾಗ ಮನೆಗೆ ಭೇಟಿ ನೀಡುವ ಅವಕಾಶವನ್ನು ಹೆಚ್ಚಿನ ಮೆರಿನ್ ಎಂಜಿನಿಯರಿಂಗ್ ಕಾಲೇಜುಗಳು ನೀಡುವುದಿಲ್ಲ. ನಿಮ್ಮನ್ನು ಸಮುದ್ರದ ಕೆಲಸಕ್ಕೆ ಸಿದ್ಧಪಡಿಸುವ ಕಾರ್ಯವು ಅಲ್ಲಿಂದಲೇ ಆರಂಭವಾಗುತ್ತದೆ. ನಂತರ ಸ್ನಾತಕೋತ್ತರ ಅಥವಾ ಡಾಕ್ಟರೇಟ್ ಪದವಿಯಲ್ಲಿ ಇನ್ನೂ ಅಡ್ವಾನ್ಸಡ್ ವಿಷಯಗಳನ್ನು ಕಲಿಯಬಹುದು.

ಅರ್ಹತೆ ಏನಿರಬೇಕು?: ಮೆರಿನ್ ಎಂಜಿನಿಯರಿಂಗ್ ಓದಲು ಒಂದಿಷ್ಟು ದೈಹಿಕ ಅರ್ಹತೆಯನ್ನೂ ಬಯಸಲಾಗುತ್ತದೆ. ಸಾಮಾನ್ಯವಾಗಿ ಕನಿಷ್ಠ 17 ವರ್ಷ ಮತ್ತು ಗರಿಷ್ಠ 25 ವರ್ಷ ವಯೋಮಿತಿ ಇರುತ್ತದೆ. ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಕಣ್ಣಿನ ದೃಷ್ಟಿಯೂ ಉತ್ತಮವಾಗಿರಬೇಕು. ಕಲರ್ ಬ್ಲೈಂಡ್‍ನೆಸ್ ಇತ್ಯಾದಿಗಳು ಇರಬಾರದು. ದೇಹದ ತೂಕ 42 ಕೆ.ಜಿ.ಗಿಂತ ಹೆಚ್ಚಿರಬೇಕು. ಎತ್ತರ 150 ಸೆಂ.ಮೀ.ಗಿಂತ ಹೆಚ್ಚಿರಬೇಕು. ಮಾನಸಿಕವಾಗಿ ಸ್ಥಿರವಿರಬೇಕು. ದೈಹಿಕವಾಗಿ ಸಮರ್ಥರಿರಬೇಕು.

ಮೆರಿನ್ ಎಂಜಿನಿಯರ್ ಕೆಲಸವೇನು ಎಂಬ ಪ್ರಶ್ನೆಯು ನಿಮ್ಮಲ್ಲಿ ಇರಬಹುದು. ಕೆಲವು ಮೆರಿನ್ ಎಂಜಿನಿಯರ್‍ಗಳು ಆನ್‍ಬೋರ್ಡ್ ಶಿಪ್‍ನಲ್ಲಿಯೂ ಕಾರ್ಯನಿರ್ವಹಿಸುತ್ತಾರೆ. ಇವರಿಗೆ ಹೆಚ್ಚಾಗಿ ಶಿಪ್ ಎಂಜಿನಿಯರ್‍ಗಳು ಎಂದು ಹೇಳಲಾಗುತ್ತದೆ. ಸ್ಟಿಯರಿಂಗ್ ಅಥವಾ ನಿರ್ವಹಣಾ ವ್ಯವಸ್ಥೆ ಇತ್ಯಾದಿ ಆನ್‍ಬೋರ್ಡ್ ಸಿಸ್ಟಮ್‍ಗಳ ಜೊತೆ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರೊಂದಿಗೆ ಗ್ಯಾಸ್ ಟರ್ಬೈನ್, ಡೀಸೆಲ್ ಎಂಜಿನ್ ಅಥವಾ ನ್ಯೂಕ್ಲಿಯರ್ ರಿಯಾಕ್ಟರ್ ಇತ್ಯಾದಿ ಪ್ರಪಲ್ಷನ್ ವ್ಯವಸ್ಥೆಯನ್ನೂ ವಿನ್ಯಾಸ ಅಥವಾ ನಿರ್ವಹಣೆ ಮಾಡಬೇಕಾಗುತ್ತದೆ. ನೌಕಾಪಡೆಯಲ್ಲಿಯೂ ಉದ್ಯೋಗಾವಕಾಶವನ್ನು ಪಡೆದುಕೊಳ್ಳಬಹುದು. ಪರಿಸರ ಸಂಶೋಧನೆ, ಸಾಗರ ಸಂಶೋಧನೆ, ಅಂತಾರಾಷ್ಟ್ರೀಯ ವ್ಯಾಪಾರ ಇತ್ಯಾದಿ ವಿಭಾಗದಲ್ಲಿಯೂ ಕಾರ್ಯನಿರ್ವಹಿಸಬಹುದು. ಗಣಿತ ಮತ್ತು ಭೌತಶಾಸ್ತ್ರದಲ್ಲಿ ಅತ್ಯುತ್ತಮ ಹಿಡಿತ ಇರಬೇಕಾಗುತ್ತದೆ. ಸ್ವತಂತ್ರವಾಗಿ ಯೋಚಿಸುವ ಶಕ್ತಿ ಮತ್ತು ಸಹಯೋಗದಿಂದ ಕಾರ್ಯನಿರ್ವಹಿಸುವ ಕೌಶಲ ಇರಬೇಕಾಗುತ್ತದೆ.

ಕೆಲವೊಂದು ಕೋರ್ಸ್‍ಗಳ ವಿವರ ಇಂತಿದೆ. * ಡಿಪ್ಲೊಮಾ ಇನ್ ಮೆರಿನ್ ಎಂಜಿನಿಯರಿಂಗ್. * ಬಿಇ/ಬಿ.ಟೆಕ್ ಇನ್ ಮೆರಿನ್ ಎಂಜಿನಿಯರಿಂಗ್. ಎಂ.ಇ/ಎಂ.ಟೆಕ್ ಇನ್ ಮೆರಿನ್ ಎಂಜಿನಿಯರಿಂಗ್. ಎಂ.ಎಸ್ಸಿ ಇನ್ ಮೆರಿನ್ ಜಿಯೊಲಜಿ ಇತ್ಯಾದಿ ಕೋರ್ಸ್‍ಗಳಿವೆ.

ಕೆಲವೊಂದು ಕಾಲೇಜುಗಳು: * ಇಂಟರ್‍ನ್ಯಾಷನಲ್ ಮೆರಿನ್ ಕಮ್ಯುನಿಕೇಷನ್ ಸೆಂಟರ್, ಕೊಚ್ಚಿನ್ ಯೂನಿವರ್ಸಿಟಿ. * ಮೆರಿನ್ ಎಂಜಿನಿಯರಿಂಗ್ ಆಂಡ್ ರಿಸರ್ಚ್ ಇನ್‍ಸ್ಟಿಟ್ಯೂಟ್, ಕೊಲ್ಕೊತ್ತಾ. * ಮೆರಿನ್ ಎಂಜಿನಿಯರಿಂಗ್ ಮತ್ತು ರಿಸರ್ಚ್ ಇನ್‍ಸ್ಟಿಟ್ಯೂಟ್, ಚೆನ್ನೈ. ಮೆರಿನ್ ಎಂಜಿನಿಯರಿಂಗ್ ಮತ್ತು ರಿಸರ್ಚ್ ಇನ್‍ಸ್ಟಿಟ್ಯೂಟ್, ಮುಂಬೈ. * ಇಂಡಿಯನ್ ಮೆರಿಟೈಮ್ ಯೂನಿವರ್ಸಿಟಿ, ಮಂಗಳೂರು. ಟೊಲಾನಿ ಮೆರಿಟೈಮ್ ಇನ್‍ಸ್ಟಿಟ್ಯೂಟ್ ಇನ್‍ಸ್ಟಿಟ್ಯೂಟ್ (ಟಿಎಂಐ), ಪುಣೆ. ವೆಲ್ಸ್ ಅಕಾಡೆಮಿ ಆಫ್ ಮೆರಿಟೈಮ್ ಸ್ಟಡೀಸ್, ಚೆನ್ನೈ. ಮಹಾರಾಷ್ಟ್ರ ಅಕಾಡೆಮಿ ಆಫ್ ನಾವೆಲ್ ಎಜುಕೇಷನ್ ಆಂಡ್ ಟ್ರೇನಿಂಗ್ (ಎಂಎಎನ್‍ಇಟಿ), ಪುಣೆ… ಹೀಗೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಬಹುದು.

ಮೆರಿನ್ ಎಂಜಿನಿಯರ್‍ಗಳು ಶಿಪ್ಪಿಂಗ್, ಹಡಗು ತಯಾರಿಕೆ, ಉಕ್ಕು ಉದ್ಯಮ, ವಿದ್ಯುತ್ ವಲಯ, ತಯಾರಿಕಾ ವಲಯ, ಸಮಲೋಚನಾ ಕಂಪನಿ ಸೇರಿದಂತೆ ವಿವಿಧೆಡೆ ಉದ್ಯೋಗ ಪಡೆಯಬಹುದು. ಅವರು ನಾಟಿಕಲ್ ಈಕ್ವಿಪ್‍ಮೆಂಟ್‍ಗಳನ್ನು ಈ ಎಂಜಿನಿಯರ್‍ಗಳು ವಿನ್ಯಾಸ ಮಾಡುತ್ತಾರೆ, ಅಭಿವೃದ್ಧಿಪಡಿಸುತ್ತಾರೆ. ಮೆರಿನ್ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಹಡಗಿನಲ್ಲಿ ಥರ್ಡ್ ಅಸಿಸ್ಟೆಂಟ್ ಎಂಜಿನಿಯರ್ ಅಥವಾ ಫೋರ್ತ್ ಎಂಜಿನಿಯರ್ ಆಗಿ ಉದ್ಯೋಗಪಡೆಯಬಹುದು. ದೇಶದ ಅಥವಾ ವಿದೇಶಿ ಶಿಪ್ಪಿಂಗ್ ಕಂಪನಿಗಳಲ್ಲಿ ಉದ್ಯೋಗ ಪಡೆದು ಭವಿಷ್ಯ ಬದಲಿಸಿಕೊಳ್ಳಬಹುದು.


ಫ್ಯಾಷನ್ ಡಿಸೈನರ್ ಆಗುವುದು ಹೇಗೆ?

“ಪ್ರತಿಯೊಂದನ್ನು ವಿನ್ಯಾಸ ಮಾಡಲಾಗಿರುತ್ತದೆ. ಆದರೆ, ಕೆಲವನ್ನು ಮಾತ್ರ ಅತ್ಯುತ್ತಮವಾಗಿ ವಿನ್ಯಾಸ ಮಾಡಲಾಗಿರುತ್ತದೆ”

ಬಹುತೇಕರಿಗೆ ಫ್ಯಾಷನ್ ಡಿಸೈನರ್ ಆಗುವ ಕನಸು ಇರುತ್ತದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಬೇಕು. ತಾನು ರಚಿಸಿದ ಉಡುಗೆ ವಿನ್ಯಾಸ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಂಡಬೇಕು ಎಂಬೆಲ್ಲ ಕನಸು ನಿಮ್ಮಲ್ಲಿ ಇರಬಹುದು. ಇದು ಅತ್ಯುತ್ತಮ ಅವಕಾಶ ನೀಡುವ ಕರಿಯರ್ ಕ್ಷೇತ್ರವಾಗಿದೆ. ಪ್ರತಿಭೆ ಇರುವವರು ಅದ್ಭುತವಾದದ್ದನ್ನು ಇಲ್ಲಿ ಸಾಧಿಸಬಹುದು. ಮೊದಲಿಗೆ ಯಾವ ಬಗೆಯ ಡಿಸೈನಿಂಗ್ ಕ್ಷೇತ್ರವನ್ನು ಜೀವನಪೂರ್ತಿ ಆಯ್ಕೆ ಮಾಡಿಕೊಳ್ಳಬೇಕು ಎಂಬ ಕುರಿತು ಸ್ಪಷ್ಟತೆ ಇರಲಿ. ಅಂದರೆ, ವುಮೆನ್ ಡೇ ವಿಯರ್, ಇವಿನಿಂಗ್ ವಿಯರ್, ಪುರುಷರ ಬಟ್ಟೆಗಳು, ಹುಡುಗರ ಬಟ್ಟೆಗಳು, ಯುವತಿಯರ ಬಟ್ಟೆಗಳು, ಸ್ಪೋಟ್ರ್ಸ್ ಬಟ್ಟೆಗಳು, ಫಿಟ್ ನೆಸ್ ಬಟ್ಟೆಗಳು, ರಾತ್ರಿ ಧರಿಸುವ ಉಡುಪುಗಳು, ಆಯಾ ಋತುವಿಗೆ ತಕ್ಕಂತೆ ಧರಿಸುವ ಉಡುಗೆಗಳು, ಬ್ರಿದಲ್ ವಿಯರ್, ಕ್ಯಾಷುಯಲ್ ಧಿರಿಸುಗಳು, ಸಿನಿಮಾ ನಟನಟಿಯರು ಧರಿಸುವ ಉಡುಗೆಗಳು, ಜಾಹೀರಾತು ಉದ್ಯಮ, ರಿಟೇಲ್ ಉದ್ದೇಶದ ಉಡುಪುಗಳು ಹೀಗೆ… ಫ್ಯಾಷನ್ ಡಿಸೈನಿಂಗ್‍ನೊಳಗೆ ವಿವಿಧ ಆಯ್ಕೆಗಳು ಇವೆ.

ದೇಶದಲ್ಲಿಂದು ಲೆಕ್ಕವಿಲ್ಲದಷ್ಟು ಫ್ಯಾಷನ್ ಡಿಸೈನಿಂಗ್ ಸ್ಕೂಲ್‍ಗಳಿವೆ. ಆದರೆ, ಎಲ್ಲವೂ ಅತ್ಯುತ್ತಮವಾಗಿವೆ ಎಂದು ಹೇಳುವಂತಿಲ್ಲ. ಕೆಲವೊಂದು ಖಾಸಗಿ ಸಂಸ್ಥೆಗಳು ಅಧಿಕ ಶುಲ್ಕ ತೆಗೆದುಕೊಂಡರೂ ಕಲಿಕಾ ಗುಣಮಟ್ಟ ಉತ್ತಮವಾಗಿರುವುದಿಲ್ಲ. ಫ್ಯಾಷನ್ ಡಿಸೈನಿಂಗ್ ಕೋರ್ಸ್‍ಗೆ ಸೇರಲು ನಿಮಗೆ 10+2 ವಿದ್ಯಾರ್ಹತೆ ಇರಬೇಕು. ಹೊಲಿಗೆ ಮತ್ತು ಡ್ರಾಯಿಂಗ್ ಅನುಭವ ಇದ್ದರೆ ಉತ್ತಮ. ಕಡ್ಡಾಯವಲ್ಲ. ಫ್ಯಾಷನ್ ಬಗೆಗೆ ಪ್ಯಾಷನ್ ಇರುವ ವಿದ್ಯಾರ್ಥಿಗಳು ಫ್ಯಾಷನ್ ಡಿಸೈನಿಂಗ್ ಕೋರ್ಸ್‍ಗೆ ಸೇರಬಹುದು.

ಹೆಚ್ಚಿನ ಫ್ಯಾಷನ್ ಡಿಸೈನಿಂಗ್ ಕೋರ್ಸ್‍ಗಳು 3ರಿಂದ 4 ವರ್ಷಗಳದ್ದಾಗಿರುತ್ತವೆ. ಈ ಸಮಯದಲ್ಲಿ ನೀವು ನಿಮ್ಮ ಐಡಿಯಾವನ್ನು ಮತ್ತು ದೃಷ್ಟಿಕೋನವನ್ನು ಬಳಸಿಕೊಂಡು ಯಾವ ರೀತಿ ಡಿಸೈನ್ ಮಾಡಬಹುದು ಎನ್ನುವುದನ್ನು ಕಲಿಯಬಹುದು. ಡ್ರಾಯಿಂಗ್, ಬಣ್ಣಗಳ ಮಾಹಿತಿ, ಸಂಯೋಜನೆ, ಹೊಲಿಯುವುದು, ಬಟ್ಟೆ ಕತ್ತರಿಸುವುದು ಹೀಗೆ ಹಲವು ವಿಷಯಗಳನ್ನು ಕಲಿಯಬೇಕಾಗುತ್ತದೆ. ಇದರೊಂದಿಗೆ ಬಿಸ್ನೆಸ್ ಮತ್ತು ಮಾರ್ಕೆಟಿಂಗ್ ಸಂಬಂಧಪಟ್ಟ ವಿಷಯಗಳನ್ನೂ ಓದಬೇಕಾಗುತ್ತದೆ.

ನೀವು ಈ ಸಂಸ್ಥೆಗಳಲ್ಲಿ ಕಲಿತು ಸರ್ಟಿಫಿಕೇಟ್ ಪಡೆದ ಮಾತ್ರಕ್ಕೆ ನಿಮ್ಮ ಕನಸು ಈಡೇರಿಸಿಕೊಳ್ಳುವುದು ಸಾಧ್ಯವಿಲ್ಲ. ಈ ಕ್ಷೇತ್ರದ ಬಗ್ಗೆ ಅದ್ಭುತ ತುಡಿತ ನಿಮ್ಮಲ್ಲಿ ಇರಬೇಕು. ಬಿಡುವಿನ ಸಮಯದಲ್ಲಿ ನವೀನ ಉಡುಗೆ ತೊಡುಗೆ ವಿನ್ಯಾಸಕ್ಕೆ ಪ್ರಯತ್ನಿಸಬೇಕು. ಇದಕ್ಕೆ ಸಂಬಂಧಪಟ್ಟಂತೆ ಇಂಟರ್ನ್‍ಷಿಪ್ ಸಹ ಮಾಡಬಹುದು. ದೇಶದಲ್ಲಿ ಫ್ಯಾಷನ್ ಡಿಸೈನಿಂಗ್ ಕುರಿತು ಸಾಕಷ್ಟು ಜನರಿಗೆ ಸಾಕಷ್ಟು ಮಾಹಿತಿಯಿದ್ದು, ಈ ಕರಿಯರ್ ಆಯ್ಕೆ ಮಾಡಿಕೊಳ್ಳುವವರು ಹೆಚ್ಚಿದ್ದಾರೆ. ಹೀಗಾಗಿ, ಈ ಪುಸ್ತಕದಲ್ಲಿ ಈ ಕುರಿತು ಇಷ್ಟು ವಿವರ ಸಾಕೆನಿಸುತ್ತದೆ.

ಲೆಕ್ಕವಿಲ್ಲದಷ್ಟು ಫ್ಯಾಷನ್ ಡಿಸೈನಿಂಗ್ ಇನ್‍ಸ್ಟಿಟ್ಯೂಷನ್‍ಗಳು ಇರುವುದರಿಂದ ನೀವು ನಿಮಗೆ ಸೂಕ್ತವಾದ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬಹುದು. ಮುಖ್ಯವಾಗಿ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ(ಎನ್‍ಐಎಫ್‍ಟಿ)( ತಿತಿತಿ.ಟಿiಜಿಣ.ಚಿಛಿ.iಟಿ) ಮತ್ತು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್(ತಿತಿತಿ.ಟಿiಜ.eಜu) ಸೇರಿದಂತೆ ಹಲವು ಪ್ರಮುಖ ಫ್ಯಾಷನ್ ಡಿಸೈನಿಂಗ್ ಸಂಸ್ಥೆಗಳು ಬೆಂಗಳೂರು ಸೇರಿದಂತೆ ವಿವಿಧೆಡೆ ಫ್ಯಾಷನ್ ಡಿಸೈನಿಂಗ್ ಕೋರ್ಸ್‍ಗಳನ್ನು ನಡೆಸುತ್ತವೆ. ಇವುಗಳಿಗೆ ಸೇರಿ ನಿಮ್ಮ ಭವಿಷ್ಯ ಬದಲಿಸಿಕೊಳ್ಳಬಹುದು.


ವಿವಿಧ ಬಿಎಸ್ಸಿ ಕೋರ್ಸ್‍ಗಳು ಮತ್ತು ಉದ್ಯೋಗಗಳು

ಕನಸನ್ನು ಕಾಣಿರಿ. ಕನಸು ಯೋಜನೆಯಾಗಿ ರೂಪಾಂತರಗೊಳ್ಳುತ್ತದೆ. ಯೋಜನೆಯು ಕ್ರಿಯೆಯಾಗಿ ಮಾರ್ಪಾಡುತ್ತದೆ”

– ಡಾ. ಎಪಿಜೆ ಅಬ್ದುಲ್ ಕಲಾಂ

ದ್ವಿತೀಯ ಪಿಯುಸಿ ಓದಿದ ಬಳಿಕ ವಿಜ್ಞಾನಪ್ರಿಯರು ಬಿಎಸ್ಸಿಗೆ ಸೇರಲು ಬಯಸುತ್ತಾರೆ. ಆದರೆ, ಬಿಎಸ್ಸಿ ವಿಭಾಗದಲ್ಲಿ ಹಲವು ಕೋರ್ಸ್‍ಗಳಿವೆ. ಇವು ಯಾವುವು ಎಂದು ತಿಳಿದರೆ ಭವಿಷ್ಯದಲ್ಲಿ ಸೂಕ್ತ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದು ನಿಮಗೆ ಸುಲಭವಾಗುತ್ತದೆ.

ಬಿಎಸ್ಸಿ ಅಗ್ರಿ ಕೋರ್ಸ್

ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಬಿಎಸ್ಸಿ ಅಗ್ರಿ ಕೋರ್ಸ್ ಮಾಡಬಹುದು. ಕೌಶಲವಂತ ಕೃಷಿ ವೃತ್ತಿಪರರನ್ನು ರೂಪಿಸಲು ಈ ಕೋರ್ಸ್ ಇದೆ. ಬಿಎಸ್ಸಿ ಅಗ್ರಿಕಲ್ಚರ್‍ನಲ್ಲಿ ವಿಜ್ಞಾನ, ಬಯೋಲಾಜಿ, ಟೆಕ್ನಾಲಜಿ, ಕೆಮೆಸ್ಟ್ರಿ ಮತ್ತು ಕೃಷಿ ವಿಜ್ಞಾನ ಒಳಗೊಂಡಿದೆ. ಈ ಕೋರ್ಸ್ ಪಡೆಯಲು ಪಿಯುಸಿಯಲ್ಲಿ ವಿಜ್ಞಾನ ಓದಿರಬೇಕಾಗಿರುವುದು ಕಡ್ಡಾಯ. ತೋಟಗಾರಿಕೆ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಲ್ಲಿಯೂ ಉದ್ಯೋಗ ಪಡೆಯಬಹುದು.

ಬಿಎಸ್ಸಿ ಫಾರೆಸ್ಟ್ರಿ

ಅರಣ್ಯ ಇಲಾಖೆ ಸೇರಿದಂತೆ ವಿವಿಧ ವಿಭಾಗದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವವರು ಬಿಎಸ್ಸಿ ಫಾರೆಸ್ಟ್ರಿ ಓದಬಹುದು. ಅರಣ್ಯ ವಿಜ್ಞಾನ, ಪರಿಸರ ವಿಜ್ಞಾನ, ಬಯೋಲಾಜಿ, ಕೃಷಿ ಮತ್ತು ತಂತ್ರಜ್ಞಾನವನ್ನು ಬಿಎಸ್ಸಿ ಫಾರೆಸ್ಟ್ರಿ ಒಳಗೊಂಡಿದೆ. ಫಾರೆಸ್ಟ್ರಿ ಓದಿದವರಿಗೆ ಮುಖ್ಯವಾಗಿ ಅರಣ್ಯ ಇಲಾಖೆಯಲ್ಲಿ ಹೆಚ್ಚಿರುತ್ತದೆ. ಪ್ಲಾಂಟೇಷನ್, ರೆಸಾರ್ಟ್ ಮ್ಯಾನೇಜರ್, ಫಾರೆಸ್ಟ್ ಪ್ರಾಡಕ್ಟ್ ಮಾರ್ಕೆಟಿಂಗ್, ಫಾರೆಸ್ಟ್ ಪ್ರಾಡಕ್ಟ್ ಪರ್ಚೇಸಿಂಗ್ ಮ್ಯಾನೇಜರ್, ರಿಸರ್ಚ್ ಮತ್ತು ಡೆವಲಪ್‍ಮೆಂಟ್ ವಿಭಾಗದ ಹುದ್ದೆಗಳನ್ನು ಪಡೆಯಬಹುದಾಗಿದೆ. ಐಎಫ್‍ಎಸ್ ಆಗಲು ಬಯಸುವವರೂ ಈ ಪದವಿ ಪಡೆದರೆ ಪರೀಕ್ಷೆ ಸುಲಭ ಇರಬಹುದು.

ಮಾಹಿತಿ ತಂತ್ರಜ್ಞಾನ

ಈ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಬಿಎಸ್ಸಿ ಐಟಿ ಪದವಿ ಆಯ್ಕೆ ಮಾಡಿಕೊಳ್ಳಬಹುದು. ಐಟಿ ಸಿಸ್ಟಮ್ಸ್, ಡಿಬಿಎಂಎಸ್, ಆಪರೇಟಿಂಗ್ ಸಿಸ್ಟಮ್ ಹೀಗೆ ಹಲವು ವಿಭಾಗದಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ನೀವು ಐಟಿ ವೃತ್ತಿಪರರಾಗಲು ಬಯಸಿದರೆ ಈ ಕೋರ್ಸ್ ಸೂಕ್ತವಾಗಿದೆ.

ಕಂಪ್ಯೂಟರ್ ವಿಜ್ಞಾನ

ಈ ವಿಷಯದಲ್ಲಿ ಬಿಎಸ್ಸಿ ಪಡೆದರೆ ಈಗಿನ ಕಂಪ್ಯೂಟರ್ ಯುಗದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ಪೆÇ್ರೀಗ್ರಾಮಿಂಗ್ ಲ್ಯಾಂಗ್ವೇಜಸ್, ಕಂಪ್ಯೂಟರ್ ಹಾರ್ಡ್‍ವೇರ್, ಸಾಫ್ಟ್‍ವೇರ್, ಮ್ಯಾಥಮೆಟಿಕ್ಸ್ ಇತ್ಯಾದಿ ವಿಷಯಗಳನ್ನು ಕಂಪ್ಯೂಟರ್ ಸೈನ್ಸ್‍ನಲ್ಲಿ ಓದಬೇಕು. ಮುಂದೆ ಗಣಕ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯವನ್ನು ಬದಲಿಸಿಕೊಳ್ಳಬಹುದು.

ರಸಾಯನಶಾಸ್ತ್ರ-ಬಿಎಸ್ಸಿ ಕೆಮಿಸ್ಟ್ರಿ

ಇದು ಬಿಎಸ್ಸಿ ಕೆಮಿಸ್ಟ್ರಿ ವಿಷಯವಾಗಿದೆ. ರಾಸಾಯನಿಕಗಳ ಪ್ರಕ್ರಿಯೆಗಳು, ಪ್ರತಿಕ್ರಿಯೆಗಳು, ಉತ್ಪನ್ನಗಳ ಕುರಿತು ಕಲಿಯಬೇಕು. ಅನಾಲಿಟಿಕಲ್ ಕೆಮಿಸ್ಟ್, ಕೆಮಿಕಲ್ ಎಂಜಿನಿಯರ್, ಹೆಲ್ತ್‍ಕೇರ್ ಸೈಂಟಿಸ್ಟ್, ಕ್ಲಿನಿಕಲ್ ಬಯೊಕೆಮಿಸ್ಟ್ರಿ, ಫಾರೆನ್ಸಿಕ್ ಸೈಂಟಿಸ್ಟ್, ನ್ಯಾನೊಟೆಕ್ನೊಲಾಜಿಸ್ಟ್, ಫಾರ್ಮಾಕೊಲೊಜಿಸ್ಟ್, ರಿಸರ್ಚ್ ಸೈಂಟಿಸ್ಟ್(ಫಿಸಿಕಲ್ ಸೈನ್ಸ್), ಟಾಕ್ಸಿಕೊಲಾಜಿಸ್ಟ್ ಇತ್ಯಾದಿ ಹುದ್ದೆಗಳನ್ನು ಪಡೆಯಬಹುದು. ಇದು ಸಹ ಬೇಡಿಕೆಯಲ್ಲಿರುವ ಉದ್ಯೋಗ ಕ್ಷೇತ್ರವಾಗಿದೆ.

ಗಣಿತ- ಬಿಎಸ್ಸಿ ಮ್ಯಾಥಮೆಟಿಕ್ಸ್

ಗಣಿತ ಪ್ರಿಯರು ಬಿಎಸ್ಸಿ ಮ್ಯಾಥಮೆಟಿಕ್ಸ್ ಪದವಿಗೆ ಸೇರಬಹುದು. ಗಣಿತಶಾಸ್ತ್ರಜ್ಞರು, ಚಾರ್ಟೆಡ್ ಅಕೌಂಟೆನ್ಸಿ, ಬ್ಯಾಂಕಿಂಗ್, ಅಕ್ಯುರಿಯಲ್ ಸೈನ್ಸ್, ಡೇಟಾ ಅನಾಲಿಸಿಸ್, ಆಪರೇಷನ್ಸ್ ಅನಾಲಿಸಿಸ್, ಪ್ರಾಜೆಕ್ಟ್ ಡೆವಲಪ್‍ಮೆಂಟ್, ಡೇಟಾ ಸೈನ್ಸ್ ಇತ್ಯಾದಿ ಹುದ್ದೆಗಳನ್ನು ಪಡೆಯಲು ಬಿಎಸ್ಸಿ ಗಣಿತ ರಹದಾರಿಯಾಗಬಲ್ಲದು. ಗಣಿತವು ಹಲವು ಉದ್ಯೋಗ ಕ್ಷೇತ್ರಗಳಿಗೆ ಅವಶ್ಯಕ ಕೌಶಲವಾಗಿದೆ.

ಭೌತಶಾಸ್ತ್ರ-ಬಿಎಸ್ಸಿ ಫಿಸಿಕ್ಸ್

ಈ ವಿಷಯದ ಕುರಿತು ಆಸಕ್ತಿ ಇರುವವರು ಬಿಎಸ್ಸಿ ಫಿಸಿಕ್ಸ್ ಪದವಿಗೆ ಸೇರಬಹುದು. ಪದವಿ ನಂತರ ಅಥವಾ ಪದವಿ ಮುಗಿಸಿ ಸ್ನಾತಕೋತ್ತರ ಪಡೆದ ನಂತರ ಭೌತಶಾಸ್ತ್ರಕ್ಕೆ ಸಂಬಂಧಪಟ್ಟ ಹುದ್ದೆಗಳನ್ನು ಪಡೆಯಬಹುದು. ಅಂದರೆ, ಲ್ಯಾಬ್ ಸೂಪರ್‍ವೈಸರ್, ರಿಸರ್ಚರ್, ಟೆಕ್ನಿಷಿಯನ್, ಟೀಚರ್, ಮ್ಯಾನೇಜರ್, ಸೈಂಟಿಸ್ಟ್, ಕನ್ಸಲ್ಟಿಂಗ್ ಫಿಸಿಸ್ಟ್, ರಿಸರ್ಚ್ ಅಸೋಸಿಯೇಟ್, ಸೀನಿಯರ್ ಫಿಸಿಸ್ಟ್, ಅಸಿಸ್ಟೆಂಟ್ ಸೈಂಟಿಸ್ಟ್, ರೇಡಿಯೇಷನ್ ಆಂಕೊಲಾಜಿಸ್ಟ್ ಇತ್ಯಾದಿ ಹಲವು ಹುದ್ದೆಗಳನ್ನು ಪಡೆದು ಭವಿಷ್ಯ ಬದಲಿಸಿಕೊಳ್ಳಬಹುದು.

ಬಿಎಸ್ಸಿ -ಹೋಟೇಲ್ ಮ್ಯಾನೇಜ್‍ಮೆಂಟ್:

ಹೋಟೇಲ್ ಮ್ಯಾನೇಜ್‍ಮೆಂಟ್: ಈ ವಿಷಯದಲ್ಲಿ ಬಿಎಸ್ಸಿ ಪಡೆದವರು ಎಚ್‍ಆರ್ ಮ್ಯಾನೇಜ್‍ಮೆಂಟ್, ಆಪರೇಷನ್ಸ್ ಮ್ಯಾನೇಜ್‍ಮೆಂಟ್, ಹೋಟೆಲ್ ಆ್ಯಂಡ್ ಹಾಸ್ಪಿಟಲಿಟಿ ಮ್ಯಾನೇಜ್‍ಮೆಂಟ್, ಫೈನಾನ್ಸ್ ಮ್ಯಾನೇಜ್‍ಮೆಂಟ್, ಮೆಟಿರಿಯಲ್ ಮ್ಯಾನೇಜ್‍ಮೆಂಟ್ ಇತ್ಯಾದಿ ಹಲವು ವಿಷಯಗಳನ್ನು ಓದಬಹುದು. ಏರ್‍ಲೈನ್ ಕೆಟರಿಂಗ್ ಮತ್ತು ಕ್ಯಾಬಿನ್ ಸರ್ವೀಸಸ್, ಕ್ಲಬ್ ಮ್ಯಾನೇಜ್‍ಮೆಂಟ್, ಕ್ರೂಷ್ ಶಿಪ್ ಹೋಟೆಲ್ ಮ್ಯಾನೇಜ್‍ಮೆಂಟ್, ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಮತ್ತು ಕೆಟರಿಂಗ್, ಹೋಟೆಲ್ ಮತ್ತು ಟೂರಿಸಂ ಅಸೋಸಿಯೇಷನ್ಸ್ ಸೇರಿದಂತೆ ವಿವಿಧೆಡೆ ಉದ್ಯೋಗ ಪಡೆಯಬಹುದು. ಶೆಪ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್ ವಿಷಯದ ಕುರಿತು ಪ್ರತ್ಯೇಕ ಅಧ್ಯಾಯದಲ್ಲಿ ತಿಳಿಸಲಾಗಿದೆ.

ನಾಟಿಕಲ್ ಸೈನ್ಸ್

ಮರ್ಚೆಂಟ್ ನೇವಿಯಲ್ಲಿ ಕರಿಯರ್ ಪಡೆಯಲು ಬಯಸುವವರು ಬಿಎಸ್ಸಿ ನಾಟಿಕಲ್ ಸೈನ್ಸ್ ಓದಬಹುದು. ಹಡಗಿನ ಕ್ಯಾಪ್ಟನ್, ಡೆಕ್ ಆಫೀಸರ್, ಮೆರಿನ್ ಎಂಜಿನಿಯರ್, ಒಸಿನೊಗ್ರಾಫರ್, ರೇಡಿಯೋ ಆಫೀಸರ್, ಸ್ಕೂಬಾ ಡ್ರೈವರ್ ಇತ್ಯಾದಿ ಕರಿಯರ್ ಆಯ್ಕೆ ಮಾಡಿಕೊಳ್ಳಲು ಬಿಎಸ್ಸಿ ನಾಟಿಕಲ್ ಸೈನ್ಸ್ ನೆರವಾಗುತ್ತದೆ.

ಬಿಎಸ್ಸಿ ಎಲೆಕ್ಟ್ರಾನಿಕ್ಸ್

ಎಲೆಕ್ಟ್ರಾನಿಕ್ಸ್: ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಕೆಲಸ ಮಾಡಲು ಬಯಸುವವರು ಬಿಎಸ್ಸಿ ಎಲೆಕ್ಟ್ರಾನಿಕ್ಸ್ ಪದವಿ ಪಡೆಯಬಹುದು. ಎಲೆಕ್ಟ್ರಾನಿಕ್ ಸಿಸ್ಟಮ್ಸ್, ಈಕ್ವಿಪ್‍ಮೆಂಟ್, ಸಕ್ರ್ಯೂಟ್ ಇತ್ಯಾದಿ ವಿಷಯಗಳನ್ನು ಈ ಕೋರ್ಸ್‍ನಲ್ಲಿ ಓದಬಹುದಾಗಿದೆ. ಎಲೆಕ್ಟ್ರಾನಿಕ್ಸ್ ವಿಭಾಗವು ಸದಾ ಬೇಡಿಕೆಯಲ್ಲಿರುವ ಉದ್ಯೋಗವಾಗಿದೆ.

ಬಿಎಸ್ಸಿ ಬಯೊಟೆಕ್ನಾಲಜಿ

ಬಯೊಟೆಕ್ನಾಲಜಿ: ಬಿಎಸ್ಸಿ ಬಯೊಟೆಕ್ನಾಲಜಿಯು ಹೆಚ್ಚು ಜನಪ್ರಿಯ ಕೋರ್ಸ್. ಹೆಲ್ತ್‍ಕೇರ್, ಅಗ್ರಿಕಲ್ಚರ್, ಫುಡ್ ಪೆÇ್ರಡಕ್ಷನ್ ಮತ್ತು ನ್ಯೂಟಿಷಿಯನ್ ವಿಭಾಗದಲ್ಲಿ ಕೆಲಸ ಮಾಡಲು ಈ ಕೋರ್ಸ್ ನೆರವಾಗುತ್ತದೆ. ಜೈವಿಕ ತಂತ್ರಜ್ಞಾನಕ್ಕೆ ಪರಿಣತರ ಅಗತ್ಯ ಹೆಚ್ಚಿದ್ದು, ಈ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯ ಬದಲಿಸಿಕೊಳ್ಳಲು ಪ್ರಯತ್ನಿಸಬಹುದು.

ಹೆಲ್ತ್‌ಕೇರ್‌ಗೆ ಸಂಬಂಧಪಟ್ಟ ಬಿಎಸ್ಸಿ ಕೋರ್ಸ್‌ಗಳು

ನರ್ಸಿಂಗ್, ಮೆಡಿಕಲ್ ಸೇರಿದಂತೆ ಆರೋಗ್ಯಕ್ಷೇತ್ರದಕ್ಕೆ ಸಂಬಂಧಪಟ್ಟ ಹಲವು ಕೋರ್ಸ್‍ಗಳಿವೆ. ಬಿಎಸ್ಸಿ ನರ್ಸಿಂಗ್ ಓದಿ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಪ್ಯಾರಾ ಮೆಡಿಕಲ್‍ಗೆ ಸಂಬಂಧಪಟ್ಟ ಬಿಎಸ್ಸಿ ಕೋರ್ಸ್‍ಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು (ಈ ಕುರಿತು ಪ್ರತ್ಯೇಕ ಅಧ್ಯಾಯದಲ್ಲಿ ಮಾಹಿತಿ ನೀಡಲಾಗಿದೆ). ಎಂಬಿಬಿಎಸ್, ಬಿಡಿಎಸ್, ಬಿ.ಫಾರ್ಮಾ, ಬಿಎಸ್ಸಿ ನರ್ಸಿಂಗ್, ಬಿಪಿಟಿ, ಬಿಒಟಿ, ಬಿಎಚ್‍ಎಂಎಸ್, ಬಿಯುಎಂಎಸ್, ಆಪೆÇ್ಟಮೆಟ್ರಿ, ಲ್ಯಾಬ್ ಟೆಕ್ನಾಲಜಿ, ಬಿಎಎಂಎಸ್, ಸಾನಿಟರಿ ಇನ್‍ಸ್ಪೆಕ್ಟರ್ ಮೆಡಿಕಲ್ ಕೋರ್ಸ್, ಜನರಲ್ ನರ್ಸಿಂಗ್, ಆರ್ಥೊಪೆಡಿಕ್, ಆಕ್ಯುಪೇಷನಲ್‍ಥೆರಪಿ, ರೇಡಿಯೊಲಾಜಿಕಲ್ ಅಸಿಸ್ಟೆಂಟ್, ನ್ಯೂಕ್ಲಿಯರ್ ಮೆಡಿಸಿನ್ ಟೆಕ್ನಾಲಜಿ ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಕಷ್ಟು ಡಿಪೆÇ್ಲಮಾ/ಪದವಿ/ಬಿಎಸ್ಸಿ ಕೋರ್ಸ್‍ಗಳು ಲಭ್ಯ ಇವೆ.

ಬಿಎಸ್ಸಿ ಪದವಿಯಲ್ಲಿ ಇನ್ನೂ ಅನೇಕ ಕೋರ್ಸ್‍ಗಳಿವೆ. ಮೈಕ್ರೊಬಯೋಲಾಜಿ, ಅಗ್ರಿಕಲ್ಚರಲ್ ಆ್ಯಂಡ್ ಡೈರಿ ಸೈನ್ಸ್, ಫಿಸಿಯೋಥೆರಪಿ, ಆಕ್ಯುಪೇಷನಲ್ ಥೆರಪಿ, ಬಾಟನಿ, ಇನ್‍ಸ್ಟ್ರುಮೆಂಟೇಷನ್, ಪಾಲಿಮರ್ ಸೈನ್ಸಸ್, ಜಿಯೊಲಾಜಿ, ಫಿಸಿಕಲ್ ಸೈನ್ಸ್, ಇಂಡಸ್ಟ್ರಿಯಲ್ ಕೆಮಿಸ್ಟರಿ, ಜಿಯೊಲಾಜಿ, ಆಂಥ್ರೊಪಾಲಜಿ, ವೆಟರ್ನರಿ ಸೈನ್ಸ್, ಝೂವಲಾಜಿ, ಇಮ್ಯುನಾಲಜಿ, ಫುಡ್ ಟೆಕ್ನಾಲಜಿ, ಹೋಂ ಸೈನ್ಸ್, ಫಾರೆನ್ಸಿಕ್ ಸೈನ್ಸ್ ಹೀಗೆ ಹಲವು ಬಿಎಸ್ಸಿ ಪದವಿಗಳಿವೆ. ನಿಮಗೆ ಅಚ್ಚುಮೆಚ್ಚಿನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಿರಿ.


ವಾಯುಪಡೆ ಸೇರಲು ಎಎಫ್‍ಕ್ಯಾಟ್ ಪರೀಕ್ಷೆ

“ಎಲ್ಲಾದರೂ ಆಕಾಶವೇ ನಿಮಗೆ ಮಿತಿ ಎಂದಾದರೆ, ಅಲ್ಲಿಗೆ ಹೋಗಿ”

– ಸಂಗ್ರಹ

ಆಕಾಶದಲ್ಲಿ ಯುದ್ಧವಿಮಾನಗಳ ಕಸರತ್ತು ಕಂಡು, ಕೇಳಿ ತಿಳಿದ ನಿಮಗೆ ವಾಯುಪಡೆಗೆ ಸೇರಿ ಭವಿಷ್ಯ ಬದಲಾಯಿಸಿಕೊಳ್ಳುವ ಬಯಕೆ ಉಂಟಾಗಿರಬಹುದು. ವಾಯುಪಡೆಯು ಆಗಾಗ ದಿನಪತ್ರಿಕೆಗಳಲ್ಲಿ “ಜಾಯಿನ್ ಏರ್‍ಫೋರ್ಸ್” ಎಂದು ಪೂರ್ಣಪುಟದಲ್ಲಿ ಜಾಹೀರಾತು ನೀಡುತ್ತಿರುತ್ತದೆ. ವಾಯುಪಡೆಯಲ್ಲಿ ಸೈನಿಕರೇ ಆಗಬೇಕೆಂದಿಲ್ಲ. ಪೈಲೆಟ್ ಆಗಬಹುದು. ತಾಂತ್ರಿಕ ವಿಭಾಗದಲ್ಲಿಯೂ ಕಾರ್ಯನಿರ್ವಹಿಸಬಹುದು. ವಾಯುಪಡೆಗೆ ಸೇರಲು ಅತ್ಯಂತ ಪ್ರಮುಖ ಹಾದಿ ಎಎಫ್‍ಕ್ಯಾಟ್ ಪರೀಕ್ಷೆ. ಭಾರತೀಯ ವಾಯುಪಡೆಯು ವರ್ಷಕ್ಕೆ ಎರಡು ಬಾರಿ ಎಎಫ್‍ಕ್ಯಾಟ್ ಪರೀಕ್ಷೆ ನಡೆಸುತ್ತದೆ. ವಾಯುಪಡೆಯಲ್ಲಿ ಆಫೀಸರ್ ಆಗಲು ಈ ಪರೀಕ್ಷೆ ಮೊದಲ ಹೆಜ್ಜೆಯಾಗಿದೆ.

ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಎಎಫ್‍ಕ್ಯಾಟ್ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕರೆಯಲಾಗುತ್ತದೆ. ಬಹುಆಯ್ಕೆ (ಆಬ್ಜೆಕ್ಟೀವ್) ಮಾದರಿಯ ಎರಡು ಗಂಟೆಯ ಪರೀಕ್ಷೆ ಇದಾಗಿದೆ. ವರ್ಬಲ್, ನ್ಯೂಮರಿಕಲ್ ಎಬಿಲಿಟಿ, ರೀಸನಿಂಗ್, ಜನರಲ್ ಅವೆರ್ನೆಸ್ ಹಾಗೂ ಸೇನೆಗೆ ಸಂಬಂಸಿದ  ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಮೂರು ಹಂತದಲ್ಲಿ  (ಹಂತ1,ಹಂತ 2 ಮತ್ತು ಹಂತ 3) ಪರೀಕ್ಷೆ ನಡೆಸಲಾಗುತ್ತದೆ.  ಪ್ರತಿ ತಪ್ಪು ಉತ್ತರಕ್ಕೂ ಶಿಕ್ಷೆಯಾಗಿ ಒಂದು ಅಂಕ ಕಡಿತ ಮಾಡಲಾಗುತ್ತದೆ. ಮೊದಲ ಹಂತದ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಬೌದ್ಧಿಕ ಸಾಮಥ್ರ್ಯವನ್ನು ಒರೆಹಚ್ಚುವ ಪರೀಕ್ಷೆಯನ್ನು ನಡೆಸಲಾಗುತ್ತದೆ. ಎರಡನೇ ಹಂತದ ಪರೀಕ್ಷೆಯು ಐದು ದಿನದ್ದಾಗಿದ್ದು, ಸೈಕಾಲಜಿಕಲ್ ಟೆಸ್ಟ್, ಗ್ರೂಪ್ ಟೆಸ್ಟ್ ಮತ್ತು ಇಂಟರ್‍ವ್ಯೂ ಇರುತ್ತದೆ.  ಮೂರನೇ ಹಂತದಲ್ಲಿ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಯನ್ನು ಎದುರಿಸಲಾಗುತ್ತದೆ. ಬೆಂಗಳೂರು ಅಥವಾ ದೆಹಲಿಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.

ವರ್ಬಲ್ ಎಬಿಲಿಟಿ ಇಂಗ್ಲಿಷ್‍ನಲ್ಲಿ ಕಾಂಪ್ರಹೆನ್ಷನ್, ಎರರ್ ಡಿಟೆಕ್ಷನ್, ಸೆಂಟೆನ್ಸ್ ಕಾಂಪ್ಲೆನ್ಷನ್, ಸಿನೊನಿಮ್ಸ್, ಆ್ಯಂಟೊನಿಮ್ಸ್ ಮತ್ತು ವೊಕಾಬಲರಿ ಟೆಸ್ಟಿಂಗ್ ಸಂಬಂಧಿತ ಪ್ರಶ್ನೆಗಳಿರುತ್ತವೆ. ನ್ಯೂಮರಿಕಲ್ ಎಬಿಲಿಟಿಯಲ್ಲಿ ದಶಮಾಂಶ ಭಿನ್ನರಾಶಿ, ಸರಳೀಕರಣ, ಸರಾಸರಿ, ಆದಾಯ ಮತ್ತು ಲಾಭ, ಶೇಕಡವಾರು, ಸಾಮಾನ್ಯ ಬಡ್ಡಿ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇರುತ್ತವೆ. ರೀಸನಿಂಗ್ ಮತ್ತು ಮಿಲಿಟಿರಿ ಆ್ಯಪ್ಟಿಟ್ಯೂಡ್‍ನಲ್ಲಿ ವರ್ಬಲ್ ಸ್ಕಿಲ್ಸ್ ಮತ್ತು ಸ್ಪಾಟೀಯಲ್(ಪ್ರದೇಶ) ಸಾಮಥ್ರ್ಯ ಕುರಿತಾದ ಪ್ರಶ್ನೆಗಳಿರುತ್ತವೆ.

ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು  ಏರ್‍ಫೆÇೀರ್ಸ್ ಸೆಲೆಕ್ಷನ್ ಬೋರ್ಡ್ ಇತರ ಪರೀಕ್ಷೆಗಳಿಗಾಗಿ ಆಹ್ವಾನಿಸುತ್ತದೆ.  ನಮ್ಮ ರಾಜ್ಯದ ಮೈಸೂರಿನಲ್ಲಿಯೂ ಈ ಬೋರ್ಡ್ ಇದೆ. ಕÀರ್ನಾಟಕದ ಅಭ್ಯರ್ಥಿಗಳು ಈ ಪರೀಕ್ಷೆ ಬರೆಯಲು ಬೆಂಗಳೂರು, ಬೀದರ್ ಮತ್ತು ಮೈಸೂರನ್ನು ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿಕೊಳ್ಳಬಹುದು. ಟೆಕ್ನಿಕಲ್ ಬ್ರಾಂಚ್‍ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಜೊತೆಗೆ ಎಂಜಿನಿಯರಿಂಗ್ ನಾಲೇಜ್ ಟೆಸ್ಟ್ ಕೂಡ ಇರುತ್ತದೆ. ಏರ್‍ಫೆÇೀರ್ಸ್ ಬೋರ್ಡ್ ನಡೆಸುವ ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹರೆಂದು ಪರಿಗಣಿಸಲ್ಪಟ್ಟ ಅಭ್ಯರ್ಥಿಗಳನ್ನು ಮಾತ್ರ ಆಯಾ ಬ್ರಾಂಚ್‍ಗಳಿಗೆ ತರಬೇತಿಗೆ ನೇಮಿಸುತ್ತಾರೆ. ತರಬೇತಿ ಅವಯು 74 ವಾರಗಳz್ದÁಗಿದ್ದು ಗ್ರೌಂಡ್ ಡ್ಯೂಟಿ ಬ್ರ್ಯಾಂಚ್‍ಗಳಲ್ಲಿ ಮಾತ್ರ 52 ವಾರಗಳ ತರಬೇತಿ ಇರುತ್ತದೆ. 

ಎಎಫ್‍ಕ್ಯಾಟ್ ಪರೀಕ್ಷೆ ಬರೆಯಲು ವಿದ್ಯಾರ್ಹತೆ ಮತ್ತು ವಯೋಮಿತಿ ಏನು ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಎಎಫ್‍ಕ್ಯಾಟ್ ಫ್ಲೈಯಿಂಗ್ ಬ್ರಾಂಚ್‍ಗೆ ಗಣಿತ ಮತ್ತು ಫಿಸಿಕ್ಸ್ ವಿಷಯದೊಂದಿಗೆ 10+2 ವಿದ್ಯಾರ್ಹತೆ ಮತ್ತು ಯಾವುದೇ ವಿಷಯದಲ್ಲಿ ಪದವಿ ಅಥವಾ ಬಿಇ/ಬಿಟೆಕ್(4 ವರ್ಷ) ಕೋರ್ಸ್ ಪಡೆದಿರಬೇಕು. ಎಲ್ಲಾ ವಿದ್ಯಾರ್ಹತೆಯಲ್ಲಿಯೂ ಕನಿಷ್ಠ ಶೇಕಡ 60 ಅಂಕ ಪಡೆದಿರಬೇಕಾದದ್ದು ಕಡ್ಡಾಯ. ವಯೋಮಿತಿ: 20-24 ವರ್ಷ.

ಗ್ರೌಂಡ್ ಡ್ಯೂಟಿ (ಟೆಕ್ನಿಕಲ್ ಬ್ರಾಂಚ್)ಯ ಎಎಫ್‍ಕ್ಯಾಟ್ ಪರೀಕ್ಷೆ ಬರೆಯುವವರು 4 ವರ್ಷದ ಎಂಜಿನಿಯರಿಂಗ್ ಪದವಿ ಪಡೆಯಬೇಕು. ಅರ್ಜಿ ಆಹ್ವಾನಿಸಿದ ಸಂದರ್ಭದಲ್ಲಿ ಯಾವ ಬ್ರಾಂಚ್‍ಗೆ ಅರ್ಜಿ ಸಲ್ಲಿಸಿದ್ದಾರೋ ಅದಕ್ಕೆ ಸಂಬಂಧಪಟ್ಟಂತೆ ಎಲೆಕ್ಟ್ರಾನಿಕ್ಸ್, ಟೆಲಿಕಮ್ಯುನಿಕೇಷನ್ ಇತ್ಯಾದಿ ಪದವಿ ಬಯಸಲಾಗುತ್ತದೆ. ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ಮತ್ತು ಗರಿಷ್ಠ 26 ವರ್ಷ ವಯೋಮಿತಿ ಇರುತ್ತದೆ.

ಗ್ರೌಂಡ್ ಡ್ಯೂಟಿ (ತಾಂತ್ರಿಕೇತರ ಶಾಖೆ) ವಿಭಾಗಕ್ಕೆ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಎಂಜಿನಿಯರಿಂಗ್ ಅಥವಾ ಏರೋನಾಟಿಕಲ್‍ಗೆ ಸಂಬಂಧಪಟ್ಟ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು. ಇಲ್ಲಿ ಅಕೌಂಟ್ಸ್ ಸಂಬಂಧಿತ ಹುದ್ದೆಗೆ ಬಿ.ಕಾಂ, ಶಿಕ್ಷಣ ವಿಭಾಗಕ್ಕೆ ಎಂಬಿಎ/ಎಂಸಿಎ/ ಎಂಎ/ಎಂಎಸ್ಸಿ ಇತ್ಯಾದಿ ಪದವಿ ಬಯಸಲಾಗುತ್ತದೆ.

ಸಮರ್ಪಕ ಅಭ್ಯಾಸ, ತಯಾರಿ ನಡೆಸಿದರೆ ಖಂಡಿತವಾಗಿಯೂ ಎಎಫ್‍ಕ್ಯಾಟ್ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬಹುದು. ಎಎಫ್‍ಕ್ಯಾಟ್‍ಗೆ ಸಂಬಂಧಪಟ್ಟ ಪುಸ್ತಕಗಳು, ಎಫ್‍ಕ್ಯಾಟ್ ಕ್ಲಾಸ್‍ರೂಂ ಕೋಚಿಂಗ್ ಮೂಲಕ ಕಲಿಯಬಹುದು. ಪ್ರತಿ ತಪ್ಪು ಉತ್ತರಕ್ಕೂ ಒಂದೊಂದು ಅಂಕ ಕಡಿತ ಇರುವುದರಿಂದ ಎಚ್ಚರಿಕೆಯಿಂದ ಉತ್ತರಗಳನ್ನು ಬರೆಯಿರಿ. ಟೆಕ್ನಿಕಲ್ ಟ್ರೇಡ್‍ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಜಿನಿಯರಿಂಗ್ ಜ್ಞಾನ ಪರೀಕ್ಷೆ(ಇಕೆಟಿ) ಉತ್ತೀರ್ಣರಾಗಿರಬೇಕು.


ಏರ್ ಟ್ರಾಫಿಕ್ ಕಂಟ್ರೋಲರ್ ಆಗುವುದು ಹೇಗೆ?

“ನಿಮ್ಮ ಕನಸು ಎತ್ತರದಲ್ಲಿರಲಿ. ಅಲ್ಲಿಗೆ ತಲುಪುವ ತನಕ ನಿಲ್ಲದಿರಿ”

ಬೊ ಜಾಕ್ಸನ್

 ಕಾರು, ಬೈಕು, ಬಸ್ ಇತ್ಯಾದಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಇದ್ದಾರೆ. ಇದೇ ರೀತಿ ಆಕಾಶದಲ್ಲಿ ಹಾರಾಟ ನಡೆಸುವ ವಿಮಾನಗಳ ಸುಗಮ ಸಂಚಾರಕ್ಕೆ ನೆರವಾಗಲು ಟ್ರಾಫಿಕ್ ಪೊಲೀಸರು ಇರುವ ಕುರಿತು ಗೊತ್ತೆ? ಈ ಹುದ್ದೆಯ ಹೆಸರು ಏರ್ ಟ್ರಾಫಿಕ್ ಕಂಟ್ರೋಲರ್. ವಿಮಾನ ಆಗಮನ ಮತ್ತು ನಿರ್ಗಮನ ಸಮಯದಲ್ಲಿ ವಿಮಾನ ನಿಯಂತ್ರಕರು ಕೊಂಚ ಮೈಮರೆತರೂ ದೊಡ್ಡ ಅನಾಹುತ ಸಂಭವಿಸಬಹುದು. ನೀವು ಏರ್ ಟ್ರಾಫಿಕ್ ಕಂಟ್ರೋಲರ್ ಆಗಿ ಭವಿಷ್ಯ ಬದಲಾಯಿಸಿಕೊಳ್ಳಲು ಬಯಸಿದರೆ ಇಲ್ಲಿದೆ ಮಾಹಿತಿ.

ಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆ ಪಡೆಯಬೇಕಾದರೆ ಸಿವಿಲ್ ಎಟಿಸಿ ಪ್ರವೇಶ ಪರೀಕ್ಷೆ ಉತ್ತೀರ್ಣರಾಗಬೇಕು. ಈ ಪರೀಕ್ಷೆಗೆ ಎಲೆಕ್ಟ್ರಾನಿಕ್ಸ್/ ಟೆಲಿ ಕಮ್ಯುನಿಕೇಷನ್/ರೇಡಿಯೊ ಎಂಜಿನಿಯರಿಂಗ್ ಇತ್ಯಾದಿ ವಿಷಯಗಳಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು ಎಟಿಸಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ವೈರ್‍ಲೆಸ್ ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್, ರೇಡಿಯೋ ಫಿಸಿಕ್ಸ್ ಅಥವಾ ರೇಡಿಯೊ ಎಂಜಿನಿಯರಿಂಗ್ ಅನ್ನು ವಿಶೇಷ ವಿಷಯವಾಗಿ ಆಯ್ಕೆ ಮಾಡಿಕೊಂಡು ಎಂಎಸ್ಸಿ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು. ಈ ಪರೀಕ್ಷೆ ಬರೆಯಲು ಕನಿಷ್ಠ 21 ವರ್ಷ ಮತ್ತು ಗರಿಷ್ಠ 27 ವರ್ಷ ವಯಸ್ಸಿನ ಮಿತಿ ಇರುತ್ತದೆ.

ಲಿಖಿತ ಪರೀಕ್ಷೆಯಲ್ಲಿ ಶೈಕ್ಷಣಿಕ ಅರ್ಹತೆಗೆ ಪೂರಕವಾದ ಶೇಕಡ 50ರಷ್ಟು ಪ್ರಶ್ನೆಗಳಿರುತ್ತವೆ. ಉಳಿದ ಶೇಕಡ 50ರಷ್ಟು ಪ್ರಶ್ನೆಗಳು ಸಾಮಾನ್ಯ ಜ್ಞಾನ, ಸಾಮಾನ್ಯ ಬುದ್ಧಿಮತ್ತೆ(ಇಂಟಲಿಜೆನ್ಸ್), ಜನರಲ್ ಆ್ಯಪ್ಟಿಟ್ಯೂಡ್, ಇಂಗ್ಲಿಷ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಏರ್ ಟ್ರಾಫಿಕ್ ಕಂಟ್ರೋಲರ್ ಸಮರ್ಪಕವಾಗಿ ಧ್ವನಿ ಸಂದೇಶಗಳನ್ನು ಕಳುಹಿಸಬೇಕು. ಇದಕ್ಕಾಗಿ ಲಿಖಿತ ಪರೀಕ್ಷೆ ನಡೆಸಿದ ಬಳಿಕ ಧ್ವನಿ ಪರೀಕ್ಷೆ ಇರುತ್ತದೆ. ಬಳಿಕ ಸಂದರ್ಶನ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ನಾಗರಿಕ ವಿಮಾನಯಾನ ತರಬೇತು ಕಾಲೇಜುಗಳಿಗೆ ತರಬೇತಿಗಾಗಿ ಅಭ್ಯರ್ಥಿಗಳನ್ನು ಕಳುಹಿಸಲಾಗುತ್ತದೆ. ಈ ತರಬೇತಿ ಖರ್ಚುವೆಚ್ಚವನ್ನು ಸಂಪೂರ್ಣವಾಗಿ ವಿಮಾನಯಾನ ಪ್ರಾಧಿಕಾರ ನೋಡಿಕೊಳ್ಳುತ್ತದೆ. ತರಬೇತಿ ಅವಧಿ 1 ವರ್ಷದ್ದಾಗಿರುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಜೂನಿಯರ್ ಎಕ್ಸಿಕ್ಯುಟಿವ್(ಎಟಿಸಿ) ಹುದ್ದೆ ದೊರಕುತ್ತದೆ. ಬಳಿಕ ಮ್ಯಾನೇಜರ್, ಸೀನಿಯರ್ ಅಸಿಸ್ಟೆಂಟ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಎಕ್ಸಿಕ್ಯುಟಿವ್ ಡೈರೆಕ್ಟರ್, ಎಎಐ ಆಡಳಿತ ಮಂಡಳಿಯ ಸದಸ್ಯ ಇತ್ಯಾದಿ ಹುದ್ದೆಗಳಿಗೆ ಭಡ್ತಿ ಪಡೆಯುವ ಅವಕಾಶವಿದೆ.

ಈ ಹುದ್ದೆಯಲ್ಲಿ ಒತ್ತಡ ಅಧಿಕವಾಗಿರಬಹುದು. ಪಾಳಿಯಲ್ಲಿ ಕೆಲಸ ಮಾಡಬೇಕು. ರಜೆಯ ಕೊರತೆಯೂ ಇರಬಹುದು. ಅತ್ಯಧಿಕ ವೃತ್ತಿಪರ ರಿಸ್ಕ್ ಇರುವ ಉದ್ಯೋಗ ಇದಾಗಿದ್ದು, ಕೆಲಸದಲ್ಲಿ ಮೈಮರೆಯುವಂತೆ ಇಲ್ಲ.


ವಾಹನೋದ್ಯಮ ಕ್ಷೇತ್ರದಲ್ಲಿ ಉದ್ಯೋಗ

“ವ್ಯವಹಾರವು ವಾಹನದಂತೆ. ಚಾಲನೆ ಮಾಡಿದರೆ ಮಾತ್ರ ಫಲಿತಾಂಶ ದೊರಕುತ್ತದೆ”

ಬಿ.ಸಿ. ಫೋಬ್ಸ್

ದೇಶದಲ್ಲಿಂದು ವಾಹನ ಕ್ಷೇತ್ರ ಸಾಕಷ್ಟು ಪ್ರಗತಿ ಕಾಣುತ್ತಿದೆ. ಜಗತ್ತಿನಲ್ಲಿ ವಾಹನ ಉತ್ಪಾದನೆಯಲ್ಲಿ ಭಾರತಕ್ಕೆ ಅಗ್ರ 7ನೇ ಸ್ಥಾನವಿದೆ. ದೇಶದ ಜಿಡಿಪಿಗೆ ವಾಹನೋದ್ಯಮದ ಕೊಡುಗೆ ಶೇಕಡ 7ರಷ್ಟಿದೆ. ಇಂತಹ ಅಂಕಿಅಂಶಗಳ ಅಗತ್ಯ ಇಲ್ಲ. ಸುಮ್ಮನೆ ರಸ್ತೆಯನ್ನೊಮ್ಮೆ ನೋಡಿದರೆ ಸಾಕು. ಹೆಚ್ಚುತ್ತಿರುವ ವಾಹನ ದಟ್ಟಣೆಯೇ ಆಟೋಮೊಬೈಲ್ ಕ್ಷೇತ್ರದ ಅಗಾಧತೆಯ ಕಥೆ ಹೇಳುತ್ತದೆ. ಸಹಜವಾಗಿ ಆಟೋಮೊಬೈಲ್ ಕ್ಷೇತ್ರದಲ್ಲಿ ಉದ್ಯೋಗಾವಕಾಶವೂ ಹೆಚ್ಚಾಗಿದೆ. ಪರಿಣತರಿಗೆ ಬೇಡಿಕೆ ಹೆಚ್ಚಾಗಿದೆ.

ಆಟೋಮೊಬೈಲ್ ಎಂಜಿನಿಯರಿಂಗ್ ಎಂದರೆ ವಾಹನ ವಿನ್ಯಾಸ, ತಯಾರಿಕೆ ಮತ್ತು ನಿರ್ವಹಣೆ ಕುರಿತು ಕಲಿಸುವ ಎಂಜಿನಿಯರಿಂಗ್‍ನ ಶಾಖೆಯಾಗಿದೆ.  ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಸಾಫ್ಟ್‍ವೇರ್ ಮತ್ತು ಸುರಕ್ಷತೆಯ ಎಂಜಿನಿಯರಿಂಗ್‍ಗಳನ್ನು ಒಳಗೊಂಡ ವಿಭಾಗ ಇದಾಗಿದೆ. ಇವನ್ನೆಲ್ಲ ಅನ್ವಯಿಸಿಕೊಂಡು ಬಸ್, ಬೈಕ್, ಟ್ರಕ್, ಕಾರು, ಜೀಪು, ಲಾರಿ ಇತ್ಯಾದಿಗಳನ್ನು ವಿನ್ಯಾಸ ಮಾಡುವುದು ಮತ್ತು ತಯಾರಿಸುವುದು ಆಟೋಮೊಬೈಲ್ ಎಂಜಿನಿಯರ್‍ನ ಕೆಲಸವಾಗಿದೆ. ವಾಹನ ತಯಾರಿಸುವುದು ಮಾತ್ರವಲ್ಲದೆ ಅವುಗಳ ಸುರಕ್ಷತೆ ಕುರಿತು ಟೆಸ್ಟ್ ಮಾಡುವ ಕೆಲಸವೂ ಇಲ್ಲಿದೆ.

ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಲ್ಲಿ ಕನಿಷ್ಠ ಶೇಕಡ 50 ಅಂಕ ಪಡೆದು ಪಿಯುಸಿ ಪೂರ್ಣಗೊಳಿಸಿದವರು ಆಟೋಮೊಬೈಲ್ ಎಂಜಿನಿಯರಿಂಗ್ ಓದಬಹುದು. ಎಲ್ಲಾದರೂ ಐಐಟಿಗಳಲ್ಲಿರುವ ಆಟೋಮೊಬೈಲ್ ಎಂಜಿನಿಯರಿಂಗ್ ಓದಲು ಜೆಇಇ ಮೇನ್ಸ್ ಮತ್ತು ಅಡ್ವಾನ್ಸಡ್ ಎಗ್ಸಾಂ ಪೂರ್ಣಗೊಳಿಸಿರಬೇಕು. ಜೆಇಇ ಮೇನ್ಸ್‍ನಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಎನ್‍ಐಟಿಗಳಿಗೆ ಸೇರುವ ಅವಕಾಶ ದೊರಕುತ್ತದೆ.

ಆಟೋಮೊಬೈಲ್ ಎಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು ಹೀಗಿವೆ. ಆಟೋಮೊಬೈಲ್‍ಎಂಜಿನಿಯರಿಂಗ್‍ನಲ್ಲಿ ಬ್ಯಾಚುಲರ್ ಪದವಿ ಪಡೆದವರು/ ಆಟೋಮೊಟೀವ್ ಎಂಜಿನಿಯರಿಂಗ್‍ನಲ್ಲಿ ಬಿ.ಟೆಕ್ ಓದಿರುವವರು ಅರ್ಜಿ ಸಲ್ಲಿಸಬಹುದು. ಆಟೋಮೊಬೈಲ್ ಎಂಜಿನಿಯರಿಂಗ್‍ನ ಕೋರ್ಸ್‍ನ ಅವಧಿಯು ಸಾಮಾನ್ಯವಾಗಿ ನಾಲ್ಕು ವರ್ಷ ಇರುತ್ತದೆ.

ಆಟೋಮೊಬೈಲ್ ಡಿಪೆÇ್ಲಮಾ ಓದಲು 10+2 (ವಿಜ್ಞಾನ ಪಿಸಿಎಂ) ಶಿಕ್ಷಣ ಅರ್ಹತೆ ಇರಬೇಕು. ಇವಿಷ್ಟು ಮಾತ್ರವಲ್ಲದೆ ಆಟೋಮೋಟಿವ್ ಎಂಜಿನಿಯರಿಂಗ್ ಡಿಪೆÇ್ಲಮಾ, ಆಟೋಮೋಟಿವ್ ಎಂಜಿನಿಯರಿಂಗ್‍ನಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್, ಆಟೋಮೋಟಿವ್ ಎಂಜಿನಿಯರಿಂಗ್‍ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ಮತ್ತು ಆಟೋಮೋಟಿವ್ ಎಂಜಿನಿಯರಿಂಗ್‍ನಲ್ಲಿ ಮಾಸ್ಟರ್ ಆಫ್ ಟೆಕ್ನಾಲಜಿ ಓದಬಹುದಾಗಿದೆ.

ಓದಬೇಕಾದ ವಿಷಯಗಳು- ಎಂಜಿನ್ ಸಿಸ್ಟಮ್ಸ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಂಟ್ರೋಲ್ ಸಿಸ್ಟಮ್ಸ್, ಫ್ಯೂಯಲ್ ಟೆಕ್ನಾಲಜಿ ಆ್ಯಂಡ್ ಎಮಿಷನ್ಸ್ ಫ್ಲೂಯಿಡ್ ಮೆಕ್ಯಾನಿಕ್ಸ್, ಏರೊಡೈನಾಮಿಕ್ಸ್, ಥರ್ಮೊಡೈನಾಮಿಕ್ಸ್, ರ್ಯಾಪಿಡ್ ಪೆÇ್ರಟೊಟೈಪಿಂಗ್, ಆಲ್ಟರ್‍ನೇಟಿವ್ ಫ್ಯೂಯೆಲ್ಸ್, ಕಂಪ್ಯೂಟರ್ ಬೇಸ್ಡ್ ಸಿಸ್ಟಮ್ಸ್ ಆ್ಯಂಡ್ ಎಲೆಕ್ಟ್ರಾನಿಕ್ಸ್,  ಎಮಿಷನ್ ಕಂಟ್ರೋಲ್, ವೆಹಿಕಲ್ ಆ್ಯಂಡ್ ಪೆಡೆಸ್ಟ್ರಿಯನ್ ಸೇಫ್ಟಿ ಇತ್ಯಾದಿ ಹಲವು ಸ್ಪೆಷಲೈಜೇಷನ್‍ಗಳಿವೆ.

ಕೌಶಲವಂತ ವೃತ್ತಿಪರರಿಗೆ ವಾಹನ ಕ್ಷೇತ್ರದಲ್ಲಿ ಆಸಕ್ತಿದಾಯಕ ಮತ್ತು ಸವಾಲಿನ ಉದ್ಯೋಗಗಳು ದೊರಕುತ್ತವೆ. ವಾಹನ ಮತ್ತು ವಾಹನಗಳ ಬಿಡಿಭಾಗಗಳ ವಿನ್ಯಾಸ, ವಾಹನಗಳ ಅಭಿವೃದ್ಧಿ ಮತ್ತು ತಯಾರಿಕೆ ಕೆಲಸಕ್ಕೆ ಸೇರಬಹುದು. ವಾಹನಗಳು ಮತ್ತು ಅವುಗಳ ಬಿಡಿಭಾಗಗಳ ಬ್ಲೂಪ್ರಿಂಟ್ ರಚಿಸುವರಿಗೂ ಈ ಕ್ಷೇತ್ರದಲ್ಲಿ ಉತ್ತಮ ಬೇಡಿಕೆಯಿದೆ. ಆಟೋಮೊಬೈಲ್ ವರ್ಕ್‍ಶಾಪ್‍ಗಳಲ್ಲಿ, ವೈಮಾನಿಕ ಉದ್ಯಮಗಳಲ್ಲಿ, ವಿಮಾನಯಾನ ಸಂಸ್ಥೆಗಳಲ್ಲಿ, ಹಡಗುಗಳಲ್ಲಿ ಮತ್ತು ಡೀಸೆಲ್ ಪವರ್ ಸ್ಟೇಷನ್‍ಗಳಲ್ಲಿ ಮೇಂಟೆನ್ಸ್ ಮತ್ತು ಸರ್ವೀಸ್ ಎಂಜಿನಿಯರ್‍ಗಳಾಗಿ ಕಾರ್ಯನಿರ್ವಹಿಸಬಹುದಾಗಿದೆ. ಆಟೋಮೊಬೈಲ್ ಟೆಕ್ನಿಷಿಯನ್ಸ್,  ಬೈಕ್ ಮೆಕ್ಯಾನಿಕ್ಸ್,  ಡೀಸೆಲ್ ಮೆಕ್ಯಾನಿಕ್ಸ್,  ಕಾರ್ ಮೆಕ್ಯಾನಿಕ್ಸ್,  ವಾಹನ ವಿನ್ಯಾಸಕರು ಮಾತ್ರವಲ್ಲದೆ ಕಾರ್ಯನಿರ್ವಹಕ ಮತ್ತು ವ್ಯವಸ್ಥಾಪಕ ಹುದ್ದೆಗಳನ್ನೂ ಪಡೆಯಬಹುದಾಗಿದೆ.

ವಾಹನಗಳ ಸಂಖ್ಯೆಯ ಹೆಚ್ಚಳದ ಜೊತೆಗೆ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶವೂ ಹೆಚ್ಚಾಗುತ್ತಿದೆ. ಆಟೋಮೊಬೈಲ್ ಎಂಜಿನಿಯರಿಂಗ್ ಓದಿದವರಿಗೆ ಬೇಡಿಕೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಕೌಶಲವಂತರಿಗೆ ಇನ್ನಷ್ಟು ಬೇಡಿಕೆ ಇರುವ ನಿರೀಕ್ಷೆಯಿದೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಆಟೋಮೊಬೈಲ್ ಎಂಜಿನಿಯರಿಂಗ್ ಓದಿದವರಿಗೆ ಬೇಡಿಕೆ ಇದೆ. ವಾಹನ ಕಂಪನಿಗಳು ಮಾತ್ರವಲ್ಲದೆ ಸರ್ವೀಸ್ ಸ್ಟೇಷನ್‍ಗಳಲ್ಲಿ, ಡೀಲರ್‍ಷಿಪ್‍ಗಳಲ್ಲಿ, ಟ್ರಾನ್ಸ್‍ಪೆÇೀರ್ಟ್ ಸರ್ವೀಸ್‍ಗಳಲ್ಲಿ, ರಕ್ಷಣಾ ವಿಭಾಗಗಳಲ್ಲಿಯೂ ಉದ್ಯೋಗ ಪಡೆಯಬಹುದಾಗಿದೆ. ಆಟೋಮೊಬೈಲ್ ಟೆಕ್ನಿಷಿಯನ್ಸ್, ಬೈಕ್ ಮೆಕ್ಯಾನಿಕ್ಸ್, ಡೀಸೆಲ್ ಮೆಕ್ಯಾನಿಕ್ಸ್, ಕಾರ್ ಮೆಕ್ಯಾನಿಕ್ಸ್, ವಾಹನ ವಿನ್ಯಾಸಕರು, ಕಾರ್ಯನಿರ್ವಹಕ ಮತ್ತು ವ್ಯವಸ್ಥಾಪಕ ಹುದ್ದೆಗಳನ್ನೂ ಪಡೆಯಬಹುದು.

ಟೆಲ್ಕೊ, ಎಲ್‍ಆ್ಯಂಡ್‍ಟಿ, ಅಶೋಕ್ ಲೇಲ್ಯಾಂಡ್, ಮಹೀಂದ್ರ ಆ್ಯಂಡ್ ಮಹೀಂದ್ರ, ಹೆಲ್ಡೆಕ್ಸ್ ಇಂಡಿಯಾ, ಬಜಾಜ್ ಆಟೋ, ಮಾರುತಿ ಸುಜುಕಿ, ಟೊಯೊಟಾ, ಯಮಹಾ, ಹುಂಡೈ, ಹೀರೊ ಮೊಟೊಕಾರ್ಪ್, ಫೆÇೀಕ್ಸ್‍ವ್ಯಾಗನ್, ಔಡಿ, ರೆನೊ ಇತ್ಯಾದಿ ಕಂಪನಿಗಳಿಗೆ ಉದ್ಯೋಗ ಪಡೆದು ನಿಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು.

***

ಪ್ಯಾರಾ ಮೆಡಿಕಲ್ ಕೋರ್ಸ್‍ಗಳು

“ಸಕಾರಾತ್ಮಕ ಆಲೋಚನೆ ಜೊತೆ ಸಕಾರಾತ್ಮಕ ಕ್ರಮವು ನಿಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ”

– ಶಿವ್ ಖೇರಾ

ದೇಶದ ಬಹುತೇಕ ಯುವಕ-ಯುವತಿಯರು ಪಿಯುಸಿ ಬಳಿಕ ಉದ್ಯೋಗ ದೊರಕುವಂತಹ ಕೋರ್ಸ್‍ಗಳ ಹುಡುಕಾಟದಲ್ಲಿರುತ್ತಾರೆ. ಪಿಯುಸಿ ಬಳಿಕ ಪದವಿ ಶಿಕ್ಷಣ ಪಡೆದರೆ ಉದ್ಯೋಗ ದೊರಕುವ ಕುರಿತು ಖಾತ್ರಿ ಇರುವುದಿಲ್ಲ. ಇಂತಹ ಸಮಯದಲ್ಲಿ ಉದ್ಯೋಗ ದೊರಕುವಂತಹ ಕೌಶಲ ಅಥವಾ ಕೋರ್ಸ್ ಕಲಿತರೆ ಹೆಚ್ಚು ಪ್ರಯೋಜನವಾಗುತ್ತದೆ. ಇಂತಹ ಸಮಯದಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್‍ಗಳು ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಆಯ್ಕೆಯಾಗುತ್ತದೆ.

ಪ್ಯಾರಾ ಮೆಡಿಕಲ್‍ಗೆ ಸಂಬಂಧಪಟ್ಟಂತೆ ವಿವಿಧ ವಿಶ್ವವಿದ್ಯಾಲಯಗಳು ಬಿಎಸ್ಸಿ ಪದವಿಯನ್ನೂ ನೀಡುತ್ತವೆ. ಆದರೆ, ಇಲ್ಲಿ ಕೇವಲ ಡಿಪ್ಲೊಮಾ ಕೋರ್ಸ್‍ಗಳ ವಿವರವನ್ನು ನೀಡಲಾಗಿದೆ. ಅವುಗಳಲ್ಲಿ ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡ್‍ನಲ್ಲಿ ಲಭ್ಯವಿರುವ ಕೋರ್ಸ್‍ಗಳ ವಿವರವನ್ನು ಮಾತ್ರ ನೀಡಲಾಗಿದೆ. ನೆನಪಿಡಿ, ಪ್ಯಾರಾ ಮೆಡಿಕಲ್ ಕೋರ್ಸ್‍ಗಳಲ್ಲಿ ಕೆಲವು ಕೋರ್ಸ್‍ಗಳು ಎಲ್ಲರಿಗೂ ಉದ್ಯೋಗ ದೊರಕಿಸಿಕೊಡುತ್ತದೆ ಎಂದು ಹೇಳಲಾಗುವುದಿಲ್ಲ. ಉದಾಹರಣೆಗೆ ಹೆಲ್ತ್ ಇನ್ಸ್‍ಪೆಕ್ಟರ್ ಕೋರ್ಸ್ ಮಾಡಿ ಉದ್ಯೋಗ ದೊರಕದೆ ಪರಿತಪಿಸುವವರು ಇದ್ದಾರೆ. ಕೆಲವು ಕೋರ್ಸ್‍ಗಳು ಸರಕಾರಿ ಉದ್ಯೋಗ ಪಡೆಯಲು ಮಾತ್ರ ಸೂಕ್ತ. ಆದರೆ, ಇನ್ನು ಕೆಲವು ಕೋರ್ಸ್‍ಗಳನ್ನು ಕಲಿತವರಿಗೆ ದೇಶ-ವಿದೇಶದಲ್ಲಿ ಉತ್ತಮ ಬೇಡಿಕೆ ಇರುತ್ತದೆ.

ಪ್ಯಾರಾಮೆಡಿಕಲ್ ವೃತ್ತಿಪರರ ಕುರಿತು ನಿಮಗೆ ಗೊತ್ತಿರಬಹುದು. ಮನುಷ್ಯರ ದೇಹದ ಕಾಯಿಲೆಗಳನ್ನು ವಿವಿಧ ಉಪಕರಣಗಳ ಸಹಾಯದಿಂದ ಪತ್ತೆಹಚ್ಚಲು ಸಹಾಯ ಮಾಡುವ ವೃತ್ತಿಯಿದು. ಅಂದರೆ, ರಕ್ತಪರೀಕ್ಷೆ, ಎಕ್ಸ್-ರೇ, ಎಂಆರ್‍ಐ, ಸಿಟಿಸ್ಕ್ಯಾನ್, ಆಲ್ಟ್ರಾಸೌಂಡ್ ಇತ್ಯಾದಿ ಸಾಧನಗಳನ್ನು ಬಳಸಿ ವಿವಿಧ ಕಾಯಿಲೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತಾರೆ. ಇಷ್ಟು ಮಾತ್ರವಲ್ಲದೆ ಇವರು ವೈದ್ಯರಿಗೆ ಸಹಾಯಕರಾಗಿ ವಿವಿಧ ಥೆರಪಿಗಳಿಗೆ, ಚೆಕಪ್‍ಗಳಿಗೆ ನೆರವು ನೀಡುತ್ತಾರೆ.

ಕರ್ನಾಟಕದ ಪ್ಯಾರಾ ಮೆಡಿಕಲ್ ಬೋರ್ಡ್‍ನಡಿಯಲ್ಲಿ ವಿವಿಧ ಪ್ಯಾರಾಮೆಡಿಕಲ್ ಕೋರ್ಸ್‍ಗಳಿವೆ. ಸರಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಬಹುದು. ಖಾಸಗಿ ಸಂಸ್ಥೆಗಳಲ್ಲಿ ಶುಲ್ಕ ದುಬಾರಿಯಾಗಿರಬಹುದು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಸರಕಾರಿ ಕ್ವೋಟಾದಡಿಯಲ್ಲಿಯೂ ಸೀಟು ಪಡೆಯಲು ಪ್ರಯತ್ನಿಸಬಹುದು.

ಪಿಯುಸಿಯಲ್ಲಿ ವಿಜ್ಞಾನ ಓದಿದ್ದರೆ ಉತ್ತಮ. ವಿಜ್ಞಾನವನ್ನು ಓದಿರದೆ ಇದ್ದರೆ ಡಿಪ್ಲೊಮಾ ಹಂತದಲ್ಲಿ ಒಂದು ವರ್ಷ ಹೆಚ್ಚುವರಿಯಾಗಿ ವಿಜ್ಞಾನ ವಿಷಯವನ್ನು ಓದಬೇಕಾಗುತ್ತದೆ. ಕೆಲವು ಪ್ಯಾರಾಮೆಡಿಕಲ್ ಕೋರ್ಸ್‍ಗಳಿಗೆ ಪಿಯುಸಿಯಲ್ಲಿ ವಿಜ್ಞಾನ ಓದಿರುವವರು ಮಾತ್ರ ಕರ್ನಾಟಕ ಆರೋಗ್ಯ ಇಲಾಖೆ ಆಹ್ವಾನಿಸುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕಲಾ ವಿಭಾಗ ಓದಿ ಸರಕಾರಿ ಹುದ್ದೆಗೆ ಪ್ರಯತ್ನಿಸಲಾಗದೆ ಹಲವು ಅಭ್ಯರ್ಥಿಗಳು ಪರಿತಪಿಸುತ್ತಾರೆ. ಆರೋಗ್ಯ ಇಲಾಖೆಯ ಪ್ಯಾರಾಮೆಡಿಕಲ್ ಉದ್ಯೋಗ ಅಧಿಸೂಚನೆಗಳಲ್ಲಿ ಪಿಯುಸಿ(ವಿಜ್ಞಾನ) ಓದಿರಬೇಕು ಎಂದಿರುತ್ತದೆ. ಆದರೆ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಪಡೆಯಲು ಪಿಯುಸಿಯಲ್ಲಿ ವಿಜ್ಞಾನವನ್ನೇ ಓದಬೇಕೆಂದಿಲ್ಲ.

ಇದೇ ವಿಷಯದಲ್ಲಿ ಬಿಎಸ್ಸಿ ಪದವಿಗಳೂ ಇರುತ್ತವೆ. ಆದರೆ, ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡ್‍ನಲ್ಲಿ ಲಭ್ಯವಿರುವ ಡಿಪ್ಲೊಮಾ ಕೋರ್ಸ್ ವಿವರವನ್ನು ಮಾತ್ರ ಇಲ್ಲಿ ನೀಡಲಾಗಿದೆ. ರಾಜ್ಯದಲ್ಲಿ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್‍ಗಳು ಲಭ್ಯ ಇವೆ. ಇಲ್ಲಿ ಸರಕಾರಿ ಸೀಟಿಗೂ ಪ್ರಯತ್ನಪಟ್ಟರೆ ಶುಲ್ಕ ಕಡಿಮೆಯಾಗುತ್ತದೆ. ಕರ್ನಾಟಕ ಪ್ಯಾರಾಮೆಡಿಕಲ್ ಬೋರ್ಡ್‍ನಲ್ಲಿರುವ ಲಭ್ಯವಿರುವ ಕೋರ್ಸ್‍ಗಳು ಮತ್ತು ಉದ್ಯೋಗಾವಕಾಶಗಳ ಕುರಿತು ಸಂಕ್ಷಿಪ್ತ ವಿವರವನ್ನು ಈ ಮುಂದೆ ನೀಡಲಾಗಿದೆ. ನೆನಪಿಡಿ, ಕೆಲವೊಂದು ಡಿಪ್ಲೊಮಾ ಕೋರ್ಸ್‍ಗಳಿಗೆ ಎಸ್‍ಎಸ್‍ಎಲ್‍ಸಿ ಓದಿದರೂ ಸಾಕಾಗುತ್ತದೆ. ಆದರೆ, ಬಹುತೇಕ ಕೋರ್ಸ್‍ಗಳಿಗೆ 10+2 ವಿದ್ಯಾರ್ಹತೆ ಬಯಸಲಾಗುತ್ತದೆ.


ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ (ಲ್ಯಾಬ್ ಟೆಕ್ನಿಷಿಯನ್)

ಪಿಯುಸಿ ಓದಿದ ಬಳಿಕ ನಿಮಗೆ ಹತ್ತಿರದಲ್ಲಿರುವ ಪ್ಯಾರಾ ಮೆಡಿಕಲ್ ಶಿಕ್ಷಣ ನೀಡುವ ಕಾಲೇಜಿನಲ್ಲಿ ಸೀಟು ಪಡೆಯಲು ಪ್ರಯತ್ನಿಸಿ. ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿಗೆ ಕ್ಲಿನಿಕಲ್ ಲ್ಯಾಬೋರೇಟರಿ ಸೈನ್ಸ್ ಎಂಬ ಹೆಸರೂ ಇದೆ. ವೈದ್ಯಕೀಯ ಪ್ರಯೋಗಾಲಯ ಪರೀಕ್ಷೆಗಳ ಮೂಲಕ ರೋಗ ನಿರ್ಣಯ ಮಾಡಲು, ಚಿಕಿತ್ಸೆ ನೀಡಲು ಮತ್ತು ಕಾಯಿಲೆ ಬರದಂತೆ ತಡೆಯಲು ಲ್ಯಾಬ್ ಟೆಕ್ನಿಷಿಯನ್ ವೃತ್ತಿಪರರು ನೆರವಾಗುತ್ತಾರೆ. ಈ ವೃತ್ತಿಪರರು ಕಾಯಿಲೆ ನಿರ್ಣಯ ಮಾಡಲು ದೇಹದ ರಕ್ತದ ಮಾದರಿ, ದ್ರವ ಮಾದರಿ ಇತ್ಯಾದಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಈ ರೀತಿ ಮಾದರಿಯನ್ನು ಪರೀಕ್ಷಿಸಿ ವರದಿ ಮಾಡಬೇಕು ಮತ್ತು ದಾಖಲಿಸಿಡಬೇಕು.

ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ಕಲಿತವರು ಬ್ಲಡ್ ಬ್ಯಾಂಕಿಂಗ್, ಕ್ಲಿನಿಕಲ್ ಕೆಮಿಸ್ಟ್ರಿ, ಹೆಮೊಟೊಲಜಿ (ರಕ್ತಕ್ಕೆ ಸಂಬಂಧಪಟ್ಟದ್ದು), ಇಮ್ಯುನೋಲಜಿ (ರೋಗನಿರೋಧಕಕ್ಕೆ ಸಂಬಂಧಪಟ್ಟದ್ದು), ಮೈಕ್ರೊಬಯೊಲಜಿ (ಬ್ಯಾಕ್ಟೀರಿಯಾ ಇತ್ಯಾದಿ), ಸೈಟೊಟೆಕ್ನಾಲಜಿ (ಮಾನವ ಅಂಗಾಂಶಗಳಿಗೆ ಸಂಬಂಧಪಟ್ಟ ಅಧ್ಯಯನ), ಪಿಲಿಬೊಟೊಮಿ, ಯುರಿನ್ ಅನಾಲಿಸಿಸ್, ಪ್ಯಾರಾಸಿಟೊಲಜಿ, ರಕ್ತದ ಮಾದರಿ ಹೊಂದಾಣಿಕೆ, ಸೆರೊಲಜಿ ಇತ್ಯಾದಿ ಹಲವು ವಿಷಯಗಳಲ್ಲಿ ಪರಿಣತಿ ಪಡೆಯಬೇಕಾಗುತ್ತದೆ.

ದೇಶದಲ್ಲಿ ಲ್ಯಾಬ್ ಟೆಕ್ನಿಷಿಯನ್ ಓದಿ ಉತ್ತೀರ್ಣರಾದವರಿಗೆ ಉದ್ಯೋಗಾವಕಾಶ ಉತ್ತಮವಾಗಿದೆ. ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಾಗಿದ್ದು, ಇದೊಂದು ಉದ್ಯೋಗ ಖಾತ್ರಿ ಕೋರ್ಸ್ ಎಂದು ತಜ್ಞರು ಹೇಳುತ್ತಾರೆ. ಆದರೆ, ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತ್ಯುತ್ತಮ ಪರಿಣತಿ ಇದ್ದವರು ಮಾತ್ರ ಉತ್ತಮ ಅವಕಾಶ ಪಡೆಯುತ್ತಾರೆ. ಕರ್ನಾಟಕ ಆರೋಗ್ಯ ಇಲಾಖೆಯೂ ಆಗಾಗ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸುತ್ತದೆ. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಕೆಲಸದ ಒತ್ತಡ ಹೆಚ್ಚಿರಬಹುದು. ವಿದೇಶಗಳಲ್ಲಿಯೂ ಉದ್ಯೋಗ ಪಡೆಯಬಹುದು.


ಎಕ್ಸ್-ರೇ ಟೆಕ್ನಾಲಜಿ: ಪ್ಯಾರಾ ಮೆಡಿಕಲ್‌ ಕೋರ್ಸ್

ಎಕ್ಸ್-ರೇ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಎನ್ನುವುದು ರೇಡಿಯೊಗ್ರಫಿ ಕೋರ್ಸ್ ಆಗಿದೆ. ಎಕ್ಸ್-ರೇ ತಂತ್ರಜ್ಞಾನದ ಮೂಲಕ ತೆಗೆದ ದೇಹದ ಚಿತ್ರದ ಮೂಲಕ ವೈದ್ಯರಿಗೆ ಸರಿಯಾಗಿ ರೋಗ ನಿರ್ಣಯ ಮಾಡಲು ಸಾಧ್ಯವಾಗುತ್ತದೆ. ಉದಾಹರಣೆಗೆ ಅಪಘಾತದಲ್ಲಿ ಎಲುಬು ಮುರಿದಿದ್ದರೆ ಎಕ್ಸ್-ರೇ ಮೂಲಕ ಪತ್ತೆಹಚ್ಚಬಹುದು. ಎಕ್ಸ್-ರೇ ತಂತ್ರಜ್ಞಾನವನ್ನು ಬಳಸಲು ಪರಿಣಿತರ ಅವಶ್ಯಕತೆಯಿದೆ. ಈ ಅವಶ್ಯಕತೆಯನ್ನು ಎಕ್ಸ್-ರೇ ಟೆಕ್ನಾಲಜಿ ಕೋರ್ಸ್‍ಗಳು ಪೂರೈಸುತ್ತವೆ. ಈ ಕೋರ್ಸ್‍ನಲ್ಲಿ ತಾಂತ್ರಿಕ ಮಾಹಿತಿಯ ಜೊತೆಗೆ ದೇಹದ ಅನಾಟಮಿ ಮತ್ತು ರೋಗಿಯ ಕಾಳಜಿಯ ಕುರಿತೂ ಕಲಿಯಬೇಕಾಗುತ್ತದೆ.

10+2 ವಿದ್ಯಾರ್ಹತೆ ಬಳಿಕ ಈ ವಿಷಯದ ಪ್ಯಾರಾ ಮೆಡಿಕಲ್ ಕೋರ್ಸ್‍ಗೆ ಸೇರಿರಿ. ಎಕ್ಸ್‍ರೇ ಟೆಕ್ನಾಲಜಿ ಕೋರ್ಸ್‍ನಲ್ಲಿ ಅನಾಟಮಿ ಮತ್ತು ಫಿಸಿಯೊಲಜಿ, ಕ್ಲಿನಿಕಲ್ ಕೆಮಿಸ್ಟ್ರಿ, ಹೆಮಟೊಲಜಿ, ಯುರಿನಲಿಸಿಸ್, ಎಲೆಕ್ಟ್ರೊಕಾರ್ಡಿಯೊಗ್ರಫಿ, ಇಮೇಜ್ ಅಕ್ವಿಸಿಷನ್, ಲ್ಯಾಬೋರೇಟರಿ ಪ್ರೊಸಿಜರ್ ಮತ್ತು ಕ್ವಾಲಿಟಿ ಮ್ಯಾನೇಜ್‍ಮೆಂಟ್, ಲ್ಯಾಬ್ ರಿಸಲ್ಟ್ ಕರೆಕ್ಷನ್, ರೋಗಿಯ ಕಾಳಜಿ, ರೇಡಿಯೊಗ್ರಫಿಕ್ ಕಾರ್ಯವಿಧಾನ ಇತ್ಯಾದಿ ವಿಷಯಗಳನ್ನು ಓದಬೇಕಾಗುತ್ತದೆ.

ಈ ಕೋರ್ಸ್ ಕಲಿತ ಬಳಿಕ ನೀವು ಪ್ರಯೋಗಾಲಯ ಪರೀಕ್ಷೆಗಳು, ಸಾಮಾನ್ಯ ರೇಡಿಯೊಗ್ರಫಿ ಮತ್ತು ಎಲೆಕ್ಟ್ರೊಕಾರ್ಡಿಯೊಗ್ರಾಮ್ಸ್ ಇತ್ಯಾದಿ ವಿಷಯಗಳಲ್ಲಿ ನಿಮ್ಮ ಜ್ಞಾನ ಹೆಚ್ಚಾಗುತ್ತದೆ. ನಂತರ ನೀವು ವೈದ್ಯರ ಕ್ಲಿನಿಕ್‍ಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ, ಮೆಡಿಕಲ್ ಲ್ಯಾಬ್‍ಗಳಲ್ಲಿ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ, ವೈದ್ಯಕೀಯ ಕಂಟೆಂಟ್ ಬರೆಯುವ ವಿಭಾಗದಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಎಕ್ಸ್-ರೇ ಟೆಕ್ನಿಷಿಯನ್, ಅಸಿಸ್ಟೆಂಟ್ ಎಕ್ಸ್-ರೇ ಟೆಕ್ನಿಷಿಯನ್, ರೇಡಿಯೊಲಜಿಸ್ಟ್, ಎಕ್ಸ್-ರೇ ಟೆಸ್ಟಿಂಗ್ ಟೆಕ್ನಿಷಿಯನ್, ಕನ್ಸಲ್ಟೆಂಟ್ ರೇಡಿಯೊಲಜಿಸ್ಟ್ ಇತ್ಯಾದಿ ಹುದ್ದೆಗಳನ್ನು ಪಡೆದು ನಿಮ್ಮ ಭವಿಷ್ಯ ಬದಲಿಸಿಕೊಳ್ಳಬಹುದು.


ಹೆಲ್ತ್‌ ಇನ್ಸ್‌ಪೆಕ್ಟರ್: ಪ್ಯಾರಾ ಮೆಡಿಕಲ್‌ ಕೋರ್ಸ್

ಪರಿಸರ ಮತ್ತು ನೈರ್ಮಲ್ಯ ಮಾನದಂಡಗಳನ್ನು ಸರಿಯಾಗಿ ಪಾಲಿಸುವಂತೆ ನೋಡಿಕೊಳ್ಳುವ ಉದ್ಯೋಗವಿದು. ಹೋಟೆಲ್, ರೆಸ್ಟೂರೆಂಟ್, ಈಜುಕೊಳ, ಕೈಗಾರಿಕಾ ಪ್ರದೇಶಗಳು, ಆಸ್ಪತ್ರೆಗಳು ಇತ್ಯಾದಿಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವ ಕಾರ್ಯವನ್ನು ಹೆಲ್ತ್ ಇನ್ಸ್‍ಪೆಕ್ಟರ್ ಮಾಡುತ್ತಾರೆ. ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡ್‍ನಲ್ಲಿಯೂ ಹೆಲ್ತ್ ಇನ್ಸ್‍ಪೆಕ್ಟರ್ ಕೋರ್ಸ್ ಇದೆ. ಆದರೆ, ಈ ಕೋರ್ಸ್ ಕಲಿತ ಒಂದಿಷ್ಟು ವಿದ್ಯಾರ್ಥಿಗಳನ್ನು ಮಾತನಾಡಿಸಿದೆ. ಸರಕಾರಿ ನೇಮಕವಿದ್ದರೆ ಮಾತ್ರ ಹೆಚ್ಚು ಉದ್ಯೋಗಾವಕಾಶ ಇರುವುದು ತಿಳಿದುಬಂತು. ಕೆಲವು ಯುವಕರು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೆರಳೆಣಿಕೆಯ ಯುವತಿಯರೂ ಉದ್ಯೋಗ ಪಡೆದಿದ್ದಾರೆ. ಆದರೆ, ಇತರೆ ಪ್ಯಾರಾ ಮೆಡಿಕಲ್ ಕೋರ್ಸ್‍ಗಳಷ್ಟು ಉದ್ಯೋಗಾವಕಾಶ ಕಂಡುಬರಲಿಲ್ಲ.


ಮೆಡಿಕಲ್ ರೆಕಾರ್ಡ್ ಟೆಕ್ನಾಲಜಿ: ಪ್ಯಾರಾ ಮೆಡಿಕಲ್‌ ಕೋರ್ಸ್

ಜಗತ್ತಿನಲ್ಲಿಂದು ಆಸ್ಪತ್ರೆಗಳು ಅಧಿಕವಾಗಿರುವುದರಿಂದ ವೈದ್ಯಕೀಯ ದಾಖಲೆ ನೋಡಿಕೊಳ್ಳುವ ವೃತ್ತಿಪರರಿಗೆ ಬೇಡಿಕೆ ಉತ್ತಮವಾಗಿಯೇ ಇದೆ. ಈ ವೃತ್ತಿಯಲ್ಲಿರುವವರು ಕೇವಲ ರೋಗಿಗಳ ದಾಖಲೆಯನ್ನು ಕಾಪಾಡುವ ಕೆಲಸವನ್ನು ಮಾತ್ರ ಮಾಡದೆ ಗುಣಮಟ್ಟ ಅಧ್ಯಯನ, ರೋಗಿಯ ಮತ್ತು ಆಸ್ಪತ್ರೆಯ ಹಣಕಾಸು ಮತ್ತು ಕಾನೂನು ಹಿತಾಸಕ್ತಿ ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ. ಈ ಕೋರ್ಸ್ ಕಲಿತ ವಿದ್ಯಾರ್ಥಿಗಳು ಬಿಲ್ಲಿಂಗ್ ಮಾಡುವುದು ಹೇಗೆ? ವಿಮಾ ಕೋಡಿಂಗ್ ವಿಧಾನ, ವೈದ್ಯಕೀಯ ಸಾಫ್ಟ್‍ವೇರ್‍ಗಳ ಬಳಕೆ ಇತ್ಯಾದಿಗಳನ್ನು ತಿಳಿದಿರುತ್ತಾರೆ. ಹಳೆಯ ಕಾಲದ ವೈದ್ಯಕೀಯ ದಾಖಲೆ ಪದ್ಧತಿ ಜೊತೆಗೆ ಇತ್ತೀಚಿನ ಸುಧಾರಿತ ದಾಖಲೆ ಸಂಗ್ರಹಿಸುವ ತಂತ್ರವನ್ನು ಇವರು ತಿಳಿದಿರಬೇಕಾಗುತ್ತದೆ.

ಮೆಡಿಕಲ್ ರೆಕಾರ್ಡ್ ಟೆಕ್ನಾಲಜಿ ಕೋರ್ಸ್‍ನಲ್ಲಿ ಬೇಸಿಕ್ ಹ್ಯೂಮನ್ ಸೈನ್ಸಸ್, ಇಂಗ್ಲಿಷ್ ಸಂವಹನ, ಕಂಪ್ಯೂಟರ್ ಅಪ್ಲಿಕೇಷನ್, ಮೆಡಿಕಲ್ ಟರ್ಮಿನಲಜಿ, ಮೆಡಿಕಲ್ ರೆಕಾರ್ಡ್ ಸೈನ್ಸ್, ಕೋಡಿಂಗ್ ಆಫ್ ಡಿಸೀಸ್ ಮತ್ತು ಪ್ರೊಸಿಜರ್, ಜನರಲ್ ಹಾಸ್ಪಿಟಲ್ ಸ್ಟಾಟಿಸ್ಟಿಕ್ಸ್, ಆಡಳಿತ ಮತ್ತು ನಿರ್ವಹಣೆ ಇತ್ಯಾದಿ ಹಲವು ವಿಷಯಗಳನ್ನು ಓದಬೇಕಾಗುತ್ತದೆ. ಡಿಪ್ಲೊಮಾ ಮುಗಿದ ಬಳಿಕ ಉನ್ನತ ಶಿಕ್ಷಣವನ್ನೂ ಪಡೆಯಬಹುದು. ಆಸ್ಪತ್ರೆಗಳಲ್ಲಿ, ವೈದ್ಯಕೀಯ ಕಾಲೇಜುಗಳಲ್ಲಿ, ನರ್ಸಿಂಗ್ ಹೋಂಗಳಲ್ಲಿ, ಕ್ಲಿನಿಕ್‍ಗಳಲ್ಲಿ ಕೆಲಸ ಮಾಡಬಹುದು.

ಈ ಕೋರ್ಸ್ ಕಲಿತವರು ಬಿಲ್ಲಿಂಗ್ ಮತ್ತು ಕೋಡಿಂಗ್ ಟೆಕ್ನಿಷಿಯನ್, ಹೆಲ್ತ್ ಇನ್‍ಫಾರ್ಮೆಷನ್ ಟೆಕ್ನಿಷಿಯನ್, ಮೆಡಿಕಲ್ ಕೋಡರ್, ಮೆಡಿಕಲ್ ಆಫೀಸ್ ಮ್ಯಾನೇಜರ್, ಮೆಡಿಕಲ್ ರಿಸೆಪ್ಷನಿಸ್ಟ್ ಇತ್ಯಾದಿ ಹುದ್ದೆಗಳನ್ನು ಪಡೆದು ಕರಿಯರ್ ಭವಿಷ್ಯ ರೂಪಿಸಿಕೊಳ್ಳಬಹುದು.


ಆಪರೇಷನ್ ಥಿಯೇಟರ್ ಟೆಕ್ನಾಲಜಿ: ಪ್ಯಾರಾ ಮೆಡಿಕಲ್‌ ಕೋರ್ಸ್

ಶಸ್ತ್ರಚಿಕಿತ್ಸೆ ಕೊಠಡಿಯೊಳಗೆ ಶಸ್ತ್ರಚಿಕಿತ್ಸಕರಿಗೆ ಬೆನ್ನೆಲುಬು ಆಗಿ, ಶಸ್ತ್ರಚಿಕಿತ್ಸಕರು ಕೇಳುವ ಸಾಧನಗಳನ್ನು ನೀಡುವುದು ಸೇರಿದಂತೆ ಹಲವು ಕಾರ್ಯಗಳನ್ನು ಮಾಡಲು ಸಹಾಯಕರ ಅಗತ್ಯವಿದೆ. ಆಪರೇಷನ್ ಥಿಯೇಟರ್ ಟೆಕ್ನಾಲಜಿ ಕಲಿತ ಅಭ್ಯರ್ಥಿಗಳು ಶಸ್ತ್ರಚಿಕಿತ್ಸಾ ಕೊಠಡಿಯೊಳಗೆ ಒಟಿ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇಲ್ಲಿ ಶಸ್ತ್ರಚಿಕಿತ್ಸೆಯನ್ನು ಕಣ್ಣಾರೆ ನೋಡುವ ಅವಕಾಶ ದೊರಕುತ್ತದೆ. ಕೆಲಸದ ಆರಂಭಿಕ ಹಂತದಲ್ಲಿ ಈ ಕಾರ್ಯನಿರ್ವಹಿಸುವಾಗ ರಕ್ತ, ಮಾಂಸ ಇತ್ಯಾದಿಗಳನ್ನು ನೋಡಿ ಕೆಲವು ಅಭ್ಯರ್ಥಿಗಳು ತಲೆತಿರುಗಿ ಬೀಳುವುದುಂಟು. ಜೊತೆಗೆ, ಶಸ್ತ್ರಚಿಕಿತ್ಸೆ ಮುಗಿಯುವವರೆಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರಿಂದ ಇಂತಿಷ್ಟೇ ಹೊತ್ತಿಗೆ ಊಟ, ಟೀಕಾಫಿ, ತಿಂಡಿ ತಿನ್ನಲು ಸಾಧ್ಯವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವೊಂದು ಶಸ್ತ್ರಚಿಕಿತ್ಸಾ ಕಾರ್ಯವಿಧಾನಗಳು ಹಲವು ಗಂಟೆಗಳ ಕಾಲ ನಡೆಯುತ್ತದೆ. ಇಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ಉದ್ಯೋಗಾವಕಾಶವನ್ನು ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕಾಗಿ ನೀವು ಆಪರೇಷನ್ ಥಿಯೇಟರ್ ಟೆಕ್ನಿಷಿಯನ್ ಕೋರ್ಸ್ ಮಾಡಬಹುದು.

ಕೆಲವೊಂದು ಶಿಕ್ಷಣ ಸಂಸ್ಥೆಗಳು ಈ ಕೋರ್ಸ್ ಅನ್ನು ವಿವಿಧ ಹೆಸರುಗಳಲ್ಲಿ ನೀಡುತ್ತವೆ. ಸಾಮಾನ್ಯವಾಗಿ ಈ ಕೋರ್ಸ್‍ಗೆ ಇರುವ ವಿವಿಧ ಹೆಸರುಗಳು ಇಂತಿವೆ:- ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಆಪರೇಷನ್ ಥಿಯೇಟರ್ ಮ್ಯಾನೇಜ್‍ಮೆಂಟ್, ಆಪರೇಷನ್ ಥಿಯೇಟರ್ ಟೆಕ್ನಿಕ್ಸ್, ಆಪರೇಷನ್ ಥಿಯೇಟರ್ ಮತ್ತು ಅನೇಸ್ತೇಶಿಯಾ ಟೆಕ್ನಾಲಜಿ. ಈ ಕೋರ್ಸ್ ಮಾಡಿದವರು ವಿವಿಧ ಕಾರ್ಯಗಳನ್ನು ಮಾಡಬೇಕಾಗುತ್ತದೆ, ಅಂದರೆ, ಶಸ್ತ್ರಚಿಕಿತ್ಸೆಗೆ ಮೊದಲು ಶಸ್ತ್ರಚಿಕಿತ್ಸೆಗೆ ಬೇಕಾದ ಸರ್ಜಿಕಲ್ ಸಾಧನಗಳನ್ನು ಜೋಡಿಸಿಡುವುದು, ಶಸ್ತ್ರಚಿಕಿತ್ಸೆಗೆ ಮೊದಲು ಸಲಕರಣೆಗಳನ್ನು ಸ್ಟೆರಿಲೈಜ್ ಮಾಡುವುದು, ಶಸ್ತ್ರಚಿಕಿತ್ಸೆಯ ಬಳಿಕ ಸಾಧನಗಳು, ಸಲಕರಣೆಗಳನ್ನು ಸ್ವಚ್ಛಗೊಳಿಸಿ ಇಡುವುದು, ಶಸ್ತ್ರಚಿಕಿತ್ಸೆ ನಡೆಯುವಾಗ ವೈದ್ಯರು ನೀಡುವ ಆದೇಶಗಳನ್ನು ಪಾಲಿಸುವುದು, ಅರಿವಳಿಕೆ ಸಾಧನಗಳ ಕಾಳಜಿ ವಹಿಸುವುದು ಸೇರಿದಂತೆ ಹಲವು ಬಗೆಯ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಇಲ್ಲಿ ಕೆಲವು ವೈದ್ಯರು ಒಟಿ ಟೆಕ್ನಿಷಿಯನ್‍ಗಳ ಜೊತೆ ಆತ್ಮೀಯವಾಗಿ ಇರುತ್ತಾರೆ. ಸಲಹೆ ಸೂಚನೆಗಳನ್ನು ಮತ್ತು ಮಾರ್ಗದರ್ಶನಗಳನ್ನು ನೀಡುತ್ತಾರೆ. ಬಯ್ಯುವವರು ಇರುತ್ತಾರೆ. ಒಟ್ಟಾರೆ ತುಂಬಾ ಎಚ್ಚರಿಕೆಯಿಂದ ನಾಜೂಕಾಗಿ ವರ್ತಿಸಬೇಕಾಗುತ್ತದೆ ಎಂದು ನನಗೆ ತಿಳಿದಿರುವ ಒಟಿ ಟೆಕ್ನಿಷಿಯನ್ ಒಬ್ಬರು ಮಾಹಿತಿ ನೀಡಿದ್ದಾರೆ. ಒಸಿ ಟೆಕ್ನಿಷಿಯನ್‍ಗಳು ಆಪರೇಷನ್ ಥಿಯೇಟರ್ ಒಳಗೆ, ಐಸಿಯುನಲ್ಲಿ, ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರ ಜೊತೆಗೆ ಕಾರ್ಯನಿರ್ವಹಿಸಬೇಕಾಗುತ್ತದೆ.

***

65.          ಡಯಾಲಿಸಿಸ್ ಟೆಕ್ನಾಲಜಿ

ಆರೋಗ್ಯವಂತ ಮಾನವನ ದೇಹದಲ್ಲಿ ರಕ್ತವನ್ನು ಶುದ್ಧೀಕರಿಸುವ ಕೆಲಸ ಮೂತ್ರಪಿಂಡದ್ದು. ಇದರೊಂದಿಗೆ ನಾನಾ ಕಾರ್ಯಗಳನ್ನು ಮೂತ್ರಪಿಂಡ ಮಾಡುತ್ತದೆ. ಎಲ್ಲಾದರೂ ಕಿಡ್ನಿ ಅಥವಾ ಮೂತ್ರಪಿಂಡಕ್ಕೆ ತನ್ನ ಕಾರ್ಯವನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗದೆ ಇದ್ದರೆ ಚಿಕಿತ್ಸೆ ಪಡೆಯುವುದು ಅನಿವಾರ್ಯ. ಇತ್ತೀಚಿನ ದಿನಗಳಲ್ಲಿ ಕಿಡ್ನಿ ತೊಂದರೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲಿಯವರೆಗೆ ಕಿಡ್ನಿಯು ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆಯೋ ಅಲ್ಲಿಯವರೆಗೆ ಕಿಡ್ನಿ ಡಯಾಲಿಸಿಸ್ ಅಗತ್ಯವಿಲ್ಲ. ಕಿಡ್ನಿ ಕಾರ್ಯದಲ್ಲಿ ವ್ಯತ್ಯಯವಾದರೆ ಡಯಾಲಿಸಿಸ್ ಅಗತ್ಯ ಬೀಳಬಹುದು. ನೈಸರ್ಗಿಕವಾಗಿ ಕಿಡ್ನಿಗೆ ರಕ್ತದ ಶುದ್ಧೀಕರಣ ಮಾಡಲು ಸಾಧ್ಯವಾಗದೆ ಇದ್ದರೆ ಕೃತಕ ತಂತ್ರದ ಮೊರೆ ಹೋಗಬೇಕಾಗುತ್ತದೆ.

ಡಯಾಲಿಸಿಸ್ ಎನ್ನುವುದು ರಕ್ತದ ಕೃತಕ ಶುದ್ಧೀಕರಣ ಪ್ರಕ್ರಿಯೆಯಾಗಿದೆ. ಡಯಾಲಿಸಿಸ್ ಪ್ರಕ್ರಿಯೆಯ ಮೂಲಕ ಹೆಚ್ಚುವರಿ ತ್ಯಾಜ್ಯ, ಹೆಚ್ಚುವರಿ ನೀರು ಮತ್ತು ಇತರೆ ಅನಗತ್ಯ ದ್ರವಗಳನ್ನು ರೋಗಿಯ ರಕ್ತದಿಂದ ತೆಗೆಯಲಾಗುತ್ತದೆ. ಆಧುನಿಕ ಆಸ್ಪತ್ರೆಗಳು ಮತ್ತು ಕ್ಲಿನಿಕ್‍ಗಳಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಹೆಮೊಡಯಾಲಿಸಿಸ್ ಯಂತ್ರಗಳನ್ನು ಬಳಸಿ ಕೃತಕವಾಗಿ ಶುದ್ಧೀಕರಣ ಪ್ರಕ್ರಿಯೆ ನಡೆಸಲಾಗುತ್ತದೆ. ಹೆಮೊಡಯಾಲಿಸಿಸ್ ಯಂತ್ರವನ್ನು ನಿರ್ವಹಿಸಿ, ಡಯಾಲಿಸಿಸ್ ಪೂರ್ವ, ವರ್ತಮಾನ ಮತ್ತು ಭವಿಷ್ಯದ ಪ್ರಕ್ರಿಯೆಗಳನ್ನು ನಡೆಸಲು ಡಯಾಲಿಸಿಸ್ ಟೆಕ್ನಿಷಿಯನ್ ಎಂಬ ವೃತ್ತಿಪರರ ಅಗತ್ಯ ಬೀಳುತ್ತದೆ.

ನನ್ನ ಹೆಂಡತಿಯ ಸಹೋದರಿ ರೇಷ್ಮಾ ರಜನೀಶ್ ಡಯಾಲಿಸಿಸ್ ಟೆಕ್ನಿಷಿಯನ್ ವೃತ್ತಿಪರೆ. ಹೀಗಾಗಿ ಈ ವೃತ್ತಿ ಮತ್ತು ಉದ್ಯೋಗಾವಕಾಶಗಳ ಕುರಿತು ಅವರಿಂದ ಸಾಕಷ್ಟು ಮಾಹಿತಿ ದೊರಕಿತು. ಡಯಾಲಿಸಿಸ್ ಟೆಕ್ನಿಷಿಯನ್‍ಗಳು ಡಯಾಲಿಸಿಸ್ ಯಂತ್ರವನ್ನು ಸೆಟಪ್ ಮಾಡುವುದು, ಸ್ಟೆರಿಲೈಜೇಷನ್ ಮಿಕ್ಸ್‍ಗೆ ಸಿದ್ಧವಾಗುವುದು, ರೋಗಿಯ ದೇಹದ ರಕ್ತದ ಸ್ಥಿತಿ(ಉಷ್ಣಾಂಶ, ರಕ್ತದ ಒತ್ತಡ, ವಯಸ್ಸು, ನಾಡಿಮಿಡಿತ ಮತ್ತು ತೂಕ)ಯನ್ನು ದಾಖಲಿಸುವುದು, ರೋಗಿಯ ಕುರಿತು ನಿಗಾ, ರೋಗಿಗೆ ನಿರ್ದೇಶನಗಳನ್ನು ನೀಡುವುದು, ರೋಗಿ ಜೊತೆ ಸಂವಹನ, ಡಯಾಲಿಸಿಸ್ ಯಂತ್ರ ನಿರ್ವಹಿಸುವುದು, ಡಯಾಲಿಸಿಸ್ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳುವುದು, ರಕ್ತದ ಹರಿವಿನ ಲೆಕ್ಕಾಚಾರ, ಡಯಾಲಿಸಿಸ್ ಯಂತ್ರದ ಪರಿಶೀಲನೆ ಮತ್ತು ಶುಚಿಗೊಳಿಸುವಿಕೆ ಇತ್ಯಾದಿ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಇದರೊಂದಿಗೆ ಕಾರ್ಯವಿಧಾನ ನಡೆಸಲು ಶುದ್ಧ ನೀರಿನ ನಿರ್ವಹಣೆಯನ್ನೂ ಡಯಾಲಿಸಿಸ್ ಥೆರಪಿಸ್ಟ್‍ಗಳು ಮಾಡಬೇಕಾಗುತ್ತದೆ,

ಡಿಪ್ಲೊಮಾ ಹಂತದಲ್ಲಿ ವಿದ್ಯಾರ್ಥಿಗಳು ಡಯಾಲಿಸಿಸ್ ಸಾಧನಗಳ ನಿರ್ವಹಣೆಯ ಬಗ್ಗೆ ಕಲಿಯಬೇಕು. ತಾಂತ್ರಿಕ ತರಬೇತಿಯ ಜೊತೆಗೆ ಹ್ಯೂಮನ್ ಅನಾಟಮಿ ಮತ್ತು ಸೈಕಾಲಜಿ, ಕಿಡ್ನಿ ಕಾಯಿಲೆಗಳು, ಇತರೆ ಸಂಬಂಧಪಟ್ಟ ಕಾಯಿಲೆಗಳು, ರಕ್ತದ ಕೆಮಿಸ್ಟ್ರಿ ಇತ್ಯಾದಿಗಳನ್ನು ಅಭ್ಯಸಿಸಬೇಕಾಗುತ್ತದೆ. ರಾಜ್ಯದಲ್ಲಿ ಡಿಪ್ಲೊಮಾ ಮಾತ್ರವಲ್ಲದೆ ಡಯಾಲಿಸಿಸ್ ಟೆಕ್ನಾಲಜಿಗೆ ಸಂಬಂಧಪಟ್ಟ ಬಿಎಸ್ಸಿ ಕೋರ್ಸ್‍ಗಳನ್ನೂ ಸಾಕಷ್ಟು ವಿದ್ಯಾಸಂಸ್ಥೆಗಳು ನೀಡುತ್ತಿವೆ.

“ಡಯಾಲಿಸಿಸ್ ಟೆಕ್ನಿಷಿಯನ್‍ಗೆ ಡಯಾಲಿಸಿಸ್ ಥೆರಪಿಸ್ಟ್ ಇತ್ಯಾದಿ ಹೆಸರುಗಳು ಇವೆ. ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶವಿದೆ. ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಉತ್ತಮ ಅವಕಾಶ ದೊರಕುತ್ತದೆ. ಸರಕಾರಿ ಕಾಯಂ ಉದ್ಯೋಗ ದೊರಕುವುದು ಅಪರೂಪ. ಆರೋಗ್ಯ ಇಲಾಖೆಯು ಗುತ್ತಿಗೆ ಆಧಾರದಲ್ಲಿ ಡಯಾಲಿಸಿಸ್ ಟೆಕ್ನಿಷಿಯನ್‍ಗಳನ್ನು ಹೆಚ್ಚಾಗಿ ನೇಮಕ ಮಾಡಿಕೊಳ್ಳುತ್ತವೆ. ಈಗ ಸಣ್ಣ ಪಟ್ಟಣಗಳಲ್ಲಿಯೂ ಡಯಾಲಿಸಿಸ್ ಸೆಂಟರ್‍ಗಳು, ಕ್ಲಿನಿಕ್‍ಗಳು ಇವೆ. ಹೀಗಾಗಿ ಉದ್ಯೋಗ ದೊರಕಲು ಕಷ್ಟವಾಗುವುದಿಲ್ಲ’’ ಎನ್ನುವ ಅಭಿಪ್ರಾಯವನ್ನು ರೇಷ್ಮಾ ವ್ಯಕ್ತಪಡಿಸಿದರು.

ಪಿಯುಸಿ ಬಳಿಕ ಉದ್ಯೋಗ ಖಾತ್ರಿ ಕೋರ್ಸ್‍ಗಳ ಹುಡುಕಾಟದಲ್ಲಿರುವವರಿಗೆ ಈ ಪ್ಯಾರಾ ಮೆಡಿಕಲ್ ಕೋರ್ಸ್ ಸೂಕ್ತ ಆಯ್ಕೆಯಾಗಬಲ್ಲದು.

***

ಆಪ್ತಾಲ್ಮಿಕ್ ಟೆಕ್ನಾಲಜಿ: ಪ್ಯಾರಾ ಮೆಡಿಕಲ್‌ ಕೋರ್ಸ್

ಅತ್ಯಂತ ಬೇಡಿಕೆಯಲ್ಲಿರುವ ಪ್ಯಾರಾ ಮೆಡಿಕಲ್ ಉದ್ಯೋಗಗಳಲ್ಲಿ ಆಪ್ತಾಲ್ಮಿಕ್ ಟೆಕ್ನಾಲಜಿಯು ಒಂದಾಗಿದೆ. ನನಗೂ ಈ ಕೋರ್ಸ್ ಕುರಿತು ವಿಫುಲ ಮಾಹಿತಿ ದೊರಕಲು ಪತ್ನಿ ರಶ್ಮಿ ಕಾರಣ. ಆಕೆ ಆಪ್ತಾಲ್ಮಿಕ್ ಡಿಪ್ಲೊಮಾ ಮತ್ತು ಬ್ಯಾಚುಲರ್ ಆಫ್ ಆಪ್ತೊಮೆಟ್ರಿ ಮತ್ತು ಆಪ್ತಾಲ್ಮಿಕ್ ಟೆಕ್ನಾಲಜಿ ಬಿಎಸ್ಸಿ ಓದಿದ್ದು, ವಿವಿಧ ಆಸ್ಪತ್ರೆಗಳಲ್ಲಿ, ಆಪ್ಟಿಕಲ್‍ಗಳಲ್ಲಿ ಕಾರ್ಯನಿರ್ವಹಿಸಿ ಈ ಕ್ಷೇತ್ರದಲ್ಲಿರುವ ಅಗಾಧ ಉದ್ಯೋಗಾವಕಾಶಗಳ ಪರಿಚಯ ಮಾಡಿಕೊಟ್ಟಿದ್ದಾರೆ.

ನೇತ್ರ ವೈದ್ಯರಿಗೆ(ಆಪ್ತಾಲ್ಮೊಜಿಸ್ಟ್)ಗಳಿಗೆ ವೈದ್ಯಕೀಯ ತಾಂತ್ರಿಕ ಸಹಕಾರ ನೀಡುವುದು ಆಪ್ತಾಲ್ಮಾಜಿ ಟೆಕ್ನಾಲಜಿಸ್ಟ್‍ಗಳ ಪ್ರಮುಖ ಕಾರ್ಯ. ಕಣ್ಣಿನ ಕಾಯಿಲೆಗಳ ರೋಗನಿರ್ಣಯ ಮಾಡುವಲ್ಲಿ, ಕಣ್ಣಿನ ಶಸ್ತ್ರಚಿಕಿತ್ಸೆಗಳಲ್ಲಿ ಸಹಾಯಕರಾಗಿ ಆಪ್ಲಾಲ್ಮಿಕ್ ಟೆಕ್ನಾಲಜಿಸ್ಟ್‍ಗಳು ನೆರವು ನೀಡುತ್ತಾರೆ. ಇದರೊಂದಿಗೆ ಕಣ್ಣಿನ ಪರೀಕ್ಷೆಗೆ ಬೇಕಾದ ಆಧುನಿಕ ಉಪಕರಣಗಳ ನಿರ್ವಹಣೆಯೂ ಇವರಿಗೆ ತಿಳಿದಿರಬೇಕಾಗುತ್ತದೆ. ರೋಗಿಗಳಿಗೆ ಇರುವ ತೊಂದರೆಯ ಕುರಿತು, ಕಾರ್ಯವಿಧಾನಗಳ ಕುರಿತು ವಿವರಣೆಯನ್ನೂ ಈ ವೃತ್ತಿಪರರು ನೀಡಬೇಕಾಗುತ್ತದೆ. ಆಸ್ಪತ್ರೆಗಳಲ್ಲಿ ಮಾತ್ರವಲ್ಲದೆ ಆಪ್ಟಿಕಲ್‍ಗಳಲ್ಲಿಯೂ ಇವರಿಗೆ ಉದ್ಯೋಗ ದೊರಕುತ್ತದೆ.

ಕರ್ನಾಟಕ ಪ್ಯಾರಾಮೆಡಿಕಲ್ ಬೋರ್ಡ್‍ನಲ್ಲಿಯೂ ಈ ವಿಷಯದಲ್ಲಿ ಡಿಪ್ಲೊಮಾ ಕೋರ್ಸ್ ಇದೆ. ರಾಜ್ಯದ ಹಲವು ಶಿಕ್ಷಣ ಸಂಸ್ಥೆಗಳು ಬಿಎಸ್ಸಿ ಕೋರ್ಸ್ ಅನ್ನೂ ನೀಡುತ್ತವೆ. ಆರೋಗ್ಯ ಇಲಾಖೆಯೂ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತವೆ. ಸರಕಾರಿ ಉದ್ಯೋಗ ಪಡೆದವರು ನೇತ್ರ ಸಹಾಯಕರಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. 

ಡಿಪ್ಲೊಮಾ ಕೋರ್ಸ್ ಅನ್ನು 10+2 ವಿದ್ಯಾರ್ಹತೆಯಾದ ಬಳಿಕ ಮಾಡಬಹುದು. ಕೆಲವೊಂದು ಶಿಕ್ಷಣ ಸಂಸ್ಥೆಗಳು ಎಸ್‍ಎಸ್‍ಎಲ್‍ಸಿ ಬಳಿಕವೂ 3 ವರ್ಷದ ಡಿಪ್ಲೊಮಾ ನೀಡುತ್ತವೆ. ಕರ್ನಾಟಕ ಆರೋಗ್ಯ ಇಲಾಖೆಯು ಕಳೆದ ಕೆಲವು ವರ್ಷಗಳಿಂದ ಹೊರಡಿಸಿದ ಉದ್ಯೋಗ ಅಧಿಸೂಚನೆಗಳಲ್ಲಿ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಬಯಸಲಾಗಿದೆ. ಸರಕಾರಿ ಉದ್ಯೋಗ ಮಾತ್ರವಲ್ಲದೆ ಖಾಸಗಿ ಕ್ಷೇತ್ರದಲ್ಲಿಯೂ ಈ ಕೋರ್ಸ್ ಕಲಿತವರಿಗೆ ಉತ್ತಮ ಬೇಡಿಕೆಯಿದೆ. ಕಣ್ಣಿನ ಆಸ್ಪತ್ರೆಗಳಲ್ಲಿ ಉದ್ಯೋಗ ಪಡೆದು ಹೆಚ್ಚಿನ ಅನುಭವ ಪಡೆದುಕೊಳ್ಳಬಹುದು. ಆಸ್ಪತ್ರೆಗಳಿಗೆ ಹೋಲಿಸಿದರೆ ಪರಿಣಿತರಿಗೆ ಆಪ್ಟಿಕಲ್‍ಗಳಲ್ಲಿ ಉತ್ತಮ ವೇತನ ದೊರಕುತ್ತದೆ. ಆಪ್ತೊಮೊಲಜಿಸ್ಟ್ ವೃತ್ತಿಪರರಿಗೆ ವಿದೇಶಗಳಲ್ಲಿಯೂ ಉತ್ತಮ ಬೇಡಿಕೆಯಿದೆ.

ದೃಷ್ಟಿದೋಷವಿರುವ ರೋಗಿಗಳ ಪರೀಕ್ಷೆ, ಕಣ್ಣಿನ ತೊಂದರೆ ಇರುವವರಿಗೆ ಬೇಸಿಕ್ ಟ್ರೀಟ್‍ಮೆಂಟ್, ಕಣ್ಣಿನ ಪರೀಕ್ಷೆ ಮಾಡುವುದು, ಇತರೆ ಆಪ್ತಾಲ್ಮಿಕ್ ಸಾಧನಗಳನ್ನು ಬಳಸುವುದು, ರೋಗಿಗಳ ಕುರಿತು ನಿಗಾ ವಹಿಸುವುದು, ಸೂಕ್ತ ಕನ್ನಡಕ ನೀಡುವುದು, ಕಾಂಟ್ಯಾಕ್ಟ್ ಲೆನ್ಸ್‍ಗಳನ್ನು ಸೂಚಿಸುವುದು ಇತ್ಯಾದಿ ಹಲವು ಕಾರ್ಯಗಳನ್ನು ಮಾಡಲು ಅವಕಾಶ ನೀಡುವ ಈ ಪ್ಯಾರಾ ಮೆಡಿಕಲ್ ಕೋರ್ಸ್ ಮಾಡುವ ಮೂಲಕ ನಿಮ್ಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ.

ಇವಿಷ್ಟು ಪ್ಯಾರಾ ಮೆಡಿಕಲ್ ಕೋರ್ಸ್‍ಗಳು ಮಾತ್ರವಲ್ಲದೆ ಡೆಂಟಲ್ ಮೆಕ್ಯಾನಿಕ್ಸ್, ಡೆಂಟಲ್ ಹೈಜಿನ್ ಸೇರಿದಂತೆ ಇನ್ನೂ ಹಲವು ಕೋರ್ಸ್‍ಗಳಿವೆ. ನಿಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.       

ಆರೋಗ್ಯ ಕ್ಷೇತ್ರದಲ್ಲಿ ಪ್ಯಾರಾಮೆಡಿಕಲ್ ಮಾತ್ರವಲ್ಲದೆ ಇನ್ನೂ ಹಲವು ವಿಭಾಗದಲ್ಲಿ ಉದ್ಯೋಗಾವಕಾಶವಿದೆ. ನರ್ಸಿಂಗ್ ಕುರಿತು ಬಹುತೇಕ ಎಲ್ಲರಿಗೂ ಮಾಹಿತಿ ಇದ್ದೇ ಇದೆ. ಡಾಕ್ಟರ್, ನರ್ಸ್ ಮಾತ್ರವಲ್ಲದೆ ಆರೋಗ್ಯ ಸೇವೆಗೆ ಸಂಬಂಧಪಟ್ಟ ಇತರೆ ಉದ್ಯೋಗಗಳೂ ಬೇಡಿಕೆ ಪಡೆಯುತ್ತಿವೆ. ಫಾರ್ಮಸಿಸ್ಟ್, ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್ಸ್, ಮೆಡಿಕಲ್ ರೆಪ್ರಸೆಂಟಿಟೀವ್, ಹೆಲ್ತ್‍ಕೇರ್ ಅಡ್ಮಿನಿಸ್ಟ್ರೇಟರ್, ಮೆಡಿಕಲ್ ಟ್ರಾನ್ಸ್‍ಕ್ರಿಪ್ಷನಿಸ್ಟ್ ಸೇರಿದಂತೆ ಹತ್ತು ಹಲವು ಬಗೆಯ ಉದ್ಯೋಗಗಳಿವೆ.


ಸೋಷಿಯಲ್ ವರ್ಕ್ ಅಥವಾ ಸಮಾಜಸೇವೆ ಎಂಬ ವೃತ್ತಿ

“ನಿಮ್ಮನ್ನು ಕಂಡುಕೊಳ್ಳಲು ಅತ್ಯುತ್ತಮ ದಾರಿಯೆಂದರೆ, ಇತರರ ಸೇವೆಯ ಮೂಲಕ ನಿಮ್ಮನ್ನು ಮರೆತುಬಿಡುವುದು”

– ಮಹಾತ್ಮ ಗಾಂಧಿ

ಮೌಂಟೇನ್ ಮ್ಯಾನ್ ಎಂದೇ ಖ್ಯಾತವಾದ ಬಿಹಾರದ ಗಯಾದ ಸಮೀಪದ ಗೆಹ್ಲೌರ್ ಹಳ್ಳಿಯಲ್ಲಿ ಕೃಷಿಕನಾಗಿದ್ದ ದಶರಥ ಮಂಜಿ ಬಗ್ಗೆ ನೀವು ತಿಳಿದಿರಬಹುದು. ಆತ ಏಕಾಂಗಿಯಾಗಿ ಸುಮಾರು ಎರಡು ದಶಕಗಳ ಕಾಲ ಗೆಹ್ಲೌರ್ ಬೆಟ್ಟವನ್ನು ಕೊರೆದು 360 ಅಡಿ ಉದ್ದ ಮತ್ತು 30 ಅಡಿ ಅಗಲದ ರಸ್ತೆಯನ್ನು ನಿರ್ಮಿಸಿದ. ಆ ಮೂಲಕ ಆ ಹಳ್ಳಿಯ ಜನರ ಪ್ರಯಾಣದ ಬವಣೆಯನ್ನು ನೀಗಿಸಿದ. ಕೈಲಾಶ್ ಸತ್ಯಾರ್ಥಿಯ ಬಗ್ಗೆಯೂ ನಿಮಗೆ ಗೊತ್ತಿರಬಹುದು. 144 ದೇಶಗಳಿಂದ ಸುಮಾರು 83 ಸಾವಿರ ಮಕ್ಕಳನ್ನು ರಕ್ಷಿಸಿ ಅವರ ಬದುಕನ್ನು ಬದಲಾಯಿಸಿದ ವ್ಯಕ್ತಿ ಈ ಸತ್ಯಾರ್ಥಿ. ಇಂತಹ ಸಾವಿರಾರು ಸಮಾಜ ಸೇವಕರು ನಮ್ಮ ನಿಮ್ಮ ನಡುವೆ ಇದ್ದಾರೆ. ಸೋಷಿಯಲ್ ವರ್ಕ್ ಪದವಿಯ ಅವಶ್ಯಕತೆ ಇಲ್ಲದೆ ಸಮಾಜ ಸೇವೆ ಮಾಡಬಹುದು ಅಥವಾ ಸಮಾಜ ಸೇವೆಗೆ ಸಂಬಂಧಪಟ್ಟ ಶಿಕ್ಷಣವನ್ನೂ ಪಡೆದು ಸೋಷಿಯಲ್ ವರ್ಕ್ ಮಾಡಬಹುದು. ಒಂದೆಡೆ ಸಮಾಜ ಸೇವೆ ಮಾಡಿದ ತೃಪ್ತಿ ಮತ್ತು ಸಮಾಜ ಸೇವೆಯಿಂದ ನಿತ್ಯ ಜೀವನಕ್ಕೆ ಏನೂ ತೊಂದರೆಯಾಗದ ಸಂತೃಪ್ತಿ ಜೊತೆಯಾಗುತ್ತದೆ.

ಎನ್‍ಜಿಒ, ಸಂಘಸಂಸ್ಥೆಗಳ ಹೆಸರಿನಲ್ಲಿ ಜಗತ್ತಿನೆಲ್ಲೆಡೆ ಇಂದು ಸೋಷಿಯಲ್ ವರ್ಕ್ ವ್ಯಾಪಿಸಿದೆ. ಶಿಕ್ಷಣ ಕ್ಷೇತ್ರದಿಂದ ವೈದ್ಯಕೀಯ ಕ್ಷೇತ್ರದವರೆಗೆ, ಅರಣ್ಯ ರಕ್ಷಣೆಯಿಂದ ಪ್ರಾಣಿ ರಕ್ಷಣೆಯವರೆಗೆ ಇದರ ಅಸ್ತಿತ್ವ ಇದೆ. ಸಂಶೋಧನಾ ಕೆಲಸ, ಶಿಕ್ಷಣ, ಸಾಮಾಜಿಕ ಅಭಿವೃದ್ಧಿ, ಸಮುದಾಯದ ಕೆಲಸಗಳು ಸೇರಿದಂತೆ ಎಲ್ಲೆಡೆ ಸೋಷಿಯಲ್ ವರ್ಕ್ ವೃತ್ತಿಪರರು ಕಾರ್ಯನಿರ್ವಹಿಸಬಹುದಾಗಿದೆ.

ಸೋಷಿಯಲ್ ವರ್ಕ್ ಅನ್ನು ನಿಮ್ಮ ವೃತ್ತಿಯಾಗಿ ರೂಪಿಸಿಕೊಳ್ಳಲು ಬಯಸಿದರೆ ಅದಕ್ಕೆ ಸಂಬಂಧಪಟ್ಟ ಕೋರ್ಸ್‍ಗಳಿವೆ. ಅವುಗಳಲ್ಲಿ ಸರ್ಟಿಫಿಕೇಟ್ ಇನ್ ಸೋಷಿಯಲ್ ವರ್ಕ್, ಸರ್ಟಿಫಿಕೇಟ್ ಇನ್ ರಿಹಬಿಲಿಟೇಷನ್ ಕೌನ್ಸಿಲಿಂಗ್, ಅಡ್ವಾನ್ಸಡ್ ಸರ್ಟಿಫಿಕೇಟ್ ಇನ್ ಸೋಷಿಯಲ್ ವೆಲ್‍ಫೇರ್ ಅಡ್ಮಿನಿಸ್ಟ್ರೇಷನ್, ಡಿಪೆÇ್ಲಮಾ ಇನ್ ಪರ್ಸನಲ್ ಮ್ಯಾನೇಜ್‍ಮೆಂಟ್, ಡಿಪೆÇ್ಲಮಾ ಇನ್ ಹಾಸ್ಪಿಟಲ್ ಮ್ಯಾನೇಜ್‍ಮೆಂಟ್, ಸೋಷಿಯಲ್ ವೆಲ್‍ಫೇರ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಸ್ನಾತಕೋತ್ತರ ಪದವಿ, ರಿಸರ್ಚ್ ಮೆಥಾಡಲಜಿಯಲ್ಲಿ ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಕೋರ್ಸ್‍ಗಳನ್ನು ಕಲಿಯಬಹುದು.

ಎಂಎಸ್‍ಡಬ್ಲ್ಯು ಎನ್ನುವುದು ಸ್ನಾತಕೋತ್ತರ ಪದವಿಯಾಗಿದ್ದು, ನಾಲ್ಕು ಸೆಮಿಸ್ಟಾರ್‍ಗಳನ್ನು ಹೊಂದಿದೆ. ಇದು ವೃತ್ತಿಪರ ಪದವಿಯೂ ಹೌದು, ಅಕಾಡೆಮಿಕ್ ಡಿಗ್ರಿಯೂ ಹೌದು. ಈ ಸ್ನಾತಕೋತ್ತರ ಪದವಿಯನ್ನು ರೆಗ್ಯುಲರ್ ಕ್ಲಾಸ್‍ಗಳ ಮೂಲಕ ಮಾತ್ರವಲ್ಲದೆ ದೂರಶಿಕ್ಷಣದ ಮೂಲಕವೂ ಕಲಿಯಬಹುದು. ಈಗ ಬಹುತೇಕ ಡಿಗ್ರಿ ಕಾಲೇಜುಗಳು ಬಿಎ, ಬಿಕಾಂ, ಬಿಎಸ್ಸಿ ಮಾತ್ರವಲ್ಲದೆ ಬಿಎಸ್‍ಡಬ್ಲ್ಯು ಕೋರ್ಸ್‍ಗಳನ್ನೂ ಆಫರ್ ಮಾಡುತ್ತಿವೆ

ದೇಶದಲ್ಲಿ ಎಂಎಸ್‍ಡಬ್ಲ್ಯು ಕಲಿಕೆಯಲ್ಲಿ ಕಮ್ಯುನಿಟಿ ಡೆವಲಪ್‍ಮೆಂಟ್, ಫ್ಯಾಮಿಲಿ ಮತ್ತು ಚೈಲ್ಡ್ ವೆಲ್‍ಫೇರ್, ಮೆಡಿಕಲ್ ಆ್ಯಂಡ್ ಸೈಕ್ಯಾಟ್ರಿಕ್ ಸೋಷಿಯಲ್ ವರ್ಕ್, ಇಂಡಸ್ಟ್ರಿಯಲ್ ರಿಲೇಷನ್ ಆ್ಯಂಡ್ ಲೇಬರ್ ವೆಲ್‍ಫೇರ್ ಇತ್ಯಾದಿ ಸ್ಪೆಷಲೈಜೇಷನ್‍ಗಳು ಜನಪ್ರಿಯತೆ ಪಡೆದಿವೆ. ಇವು ಮಾತ್ರವಲ್ಲದೆ ಮಾನವ ಸಂಪನ್ಮೂಲ ನಿರ್ವಹಣೆ, ಪರ್ಸನಲ್ ಮ್ಯಾನೇಜ್‍ಮೆಂಟ್, ಗ್ರಾಮೀಣ ಮತ್ತು ನಗರ ಸಮುದಾಯ ಅಭಿವೃದ್ಧಿ, ಸ್ಕೂಲ್ ಸೋಷಿಯಲ್ ವರ್ಕ್, ಕ್ರಿಮಿನಾಲಜಿ ಮತ್ತು ಕರೆಕ್ಷನಲ್ ಅಡ್ಮಿನಿಸ್ಟ್ರೇಷನ್ ಕೂಡ ಜನಪ್ರಿಯತೆ ಉಳಿಸಿಕೊಂಡಿವೆ. ಸಾಮಾನ್ಯವಾಗಿ ಎಂಎಸ್‍ಡಬ್ಲ್ಯುನಲ್ಲಿ ಎರಡು ಸ್ಪೆಷಲೈಜೇಷನ್‍ಗಳನ್ನು ತೆಗೆದುಕೊಳ್ಳಲು ಅವಕಾಶವಿರುತ್ತದೆ.

ಈ ರೀತಿ ಕಲಿತು ಸ್ವಂತವಾಗಿ ಸಮಾಜ ಸೇವೆ ಮಾಡಬಹುದು ಅಥವಾ ಯಾವುದಾದರೂ ಎನ್‍ಜಿಒಗೆ ಸೇರಿ ಕಾರ್ಯನಿರ್ವಹಿಸಬಹುದಾಗಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ, ಕಾಪೆರ್Çರೇಟ್ ಕಂಪನಿಗಳಲ್ಲಿ, ಮಾನವ ಸಂಪನ್ಮೂಲ ವಿಭಾಗಗಳಲ್ಲಿ, ಆಸ್ಪತ್ರೆಗಳಲ್ಲಿ, ನ್ಯಾಯಾಲಯಗಳಲ್ಲಿ, ವಿವಿಧ ಏಜೆನ್ಸಿಗಳಲ್ಲಿ ಉದ್ಯೋಗ ಪಡೆದು ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ನೈಸರ್ಗಿಕ ವಿಪತ್ತು ಅಥವಾ ಇತರ ಬಿಕ್ಕಟ್ಟುಗಳ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಬೇಕಾದ ಸಿಬ್ಬಂದಿಗಳನ್ನು ಸರಕಾರವೂ ನೇಮಕ ಮಾಡಿಕೊಳ್ಳುತ್ತಿದೆ. ಈ ರೀತಿ ಸಮಾಜ ಸೇವೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಪಿಎಚ್.ಡಿ. ಅಥವಾ ಎಂ.ಫಿಲ್ ಮಾಡಿ ಸಂಶೋಧನಾ ಕ್ಷೇತ್ರ, ನೀತಿ ನಿರೂಪಣೆ ಅಥವಾ ಕನ್ಸಲ್ಟೆನ್ಸಿ ವಿಭಾಗದಲ್ಲೂ ಕಾರ್ಯನಿರ್ವಹಿಸಬಹುದಾಗಿದೆ.

ನಿಮಗೆ ಯಾವುದಾದರೂ ವಿಷಯವನ್ನು ಚೆನ್ನಾಗಿ ವಿಶ್ಲೇಷಣೆ ಮಾಡಲು ಸಾಧ್ಯವಿದ್ದರೆ, ಮಾನವ ಸಂಬಂಧಗಳನ್ನು, ಮಾನವೀಯತೆಯನ್ನು ಅರ್ಥಮಾಡಿಕೊಳ್ಳುವಿರಾದರೆ, ಉತ್ತಮ ನಿರ್ಣಯ ತೆಗೆದುಕೊಳ್ಳುವ ಸಾಮಥ್ರ್ಯ ಇರುವವರಾದರೆ ಮಾತ್ರ ಸೋಷಿಯಲ್ ವರ್ಕ್ ಶಿಕ್ಷಣ ಕಲಿಯಿರಿ.


ವರ್ಚ್ಯುವಲ್‌ ರಿಯಾಲಿಟಿ ಮತ್ತು ಅಗ್ಯುಮೆಂಟೆಂಡ್ ರಿಯಾಲಿಟಿ (ವಿಆರ್ ಮತ್ತು ಎಆರ್)

“ನಾವು ನಾಳೆಗೆ ಮಾಡುವ ಅತ್ಯುತ್ತಮ ಸಿದ್ಧತೆ ಎಂದರೆ, ಇಂದಿನ ಕೆಲಸ ಅತ್ಯುತ್ತಮವಾಗಿ ಮಾಡುವುದಾಗಿದೆ”

– ಎಚ್. ಜಾಕ್ಸನ್ ಬ್ರೌನ್

ವಚ್ರ್ಯುಯಲ್ ರಿಯಾಲಿಟಿ ಎನ್ನುವುದು ಕೃತಕ, ಕಂಪ್ಯೂಟರ್‍ನಿಂದ ನಿರ್ಮಿಸಲ್ಪಟ್ಟ ಸಿಮ್ಯುಲೇಷನ್ ಅಥವಾ ನಿಜಜೀವನದ ಪರಿಸರ ಅಥವಾ ಸ್ಥಿತಿಯನ್ನು ಮರುಸೃಷ್ಟಿಸಿ ತೋರಿಸುವುದಾಗಿದೆ. ದೃಷ್ಟಿ ಮತ್ತು ಶಬ್ದ ಎರಡನ್ನೂ ಬಳಸಿ ಇಂತಹ ಭ್ರಾಮಕ ಜಗತ್ತನ್ನು ಮೂಡಿಸಲಾಗುತ್ತದೆ. ವಚ್ರ್ಯುಯಲ್ ರಿಯಾಲಿಟಿ ಎಂದರೆ ವಿಆರ್ ಕಾರ್ಡ್‍ಬೋರ್ಡ್ ಅನ್ನು ಕಣ್ಣಿನ ಮುಂದಿಟ್ಟು ವಿಡಿಯೋ ಅಥವಾ ದೃಶ್ಯಗಳನ್ನು ನೋಡುವಂತಹ ತಂತ್ರಜ್ಞಾನ. ವಿವಿಧ ಗೇಮಿಂಗ್, ಮನರಂಜನೆ ಮತ್ತು ಪ್ಲೇ ಅಥವಾ 3ಡಿ, 4ಡಿ ಇತ್ಯಾದಿ ಸಿನಿಮಾಗಳನ್ನು ವಚ್ರ್ಯುಯಲ್ ರಿಯಾಲಿಟಿ ಸಾಧನಗಳ ಮೂಲಕ ಅದ್ಭುತವಾಗಿ ನೋಡಬಹುದಾಗಿದೆ.  ವಿಮಾನ ಚಾಲನೆ ಕಲಿಕೆ, ವಾಹನ ಕಲಿಕೆಗೆ ಬಳಸುವ ಸಿಮ್ಯುಲೇಷನ್‍ಗಳಿಗೂ ವಿಆರ್ ಬಳಕೆಯಾಗುತ್ತದೆ.

ಈಗಿರುವ ವಾಸ್ತವದ ಮೇಲೆ ಕಂಪ್ಯೂಟರ್ ನಿರ್ಮಿತ ಹೊಸ ಪದರವೊಂದನ್ನು ಸೃಷ್ಟಿಸುವುದನ್ನು ಆಗ್ಯುಮೆಂಟೆಂಡ್ ರಿಯಾಲಿಟಿ ಎನ್ನಬಹುದು. ವಿವಿಧ ಆ್ಯಪ್‍ಗಳಲ್ಲಿ ಇಂತಹ ಎಆರ್ ತಂತ್ರಜ್ಞಾನವನ್ನು ಬಳಸುತ್ತಾರೆ. ಸ್ಪೋಟ್ರ್ಸ್ ಗೇಮ್‍ಗಳಲ್ಲಿ, 3ಡಿ ಇಮೇಲ್‍ಗಳಲ್ಲಿ, ಫೆÇೀಟೊಗಳಲ್ಲಿ ಅಥವಾ ಟೆಕ್ಸ್ಟ್ ಮೆಸೆಜ್‍ಗಳಲ್ಲಿ ಇದನ್ನು ಬಳಕೆ ಮಾಡಬಹುದು.

ಅಗ್ಯಮೆಂಟೆಂಡ್ ಮತ್ತು ವಚ್ರ್ಯುಯಲ್ ರಿಯಾಲಿಟಿಯು ನೋಡಲು ಒಂದೇ ತರಹ ಕಾಣಬಹುದು. ಒಂದರ ಪ್ರತಿಬಿಂಬ ಮತ್ತೊಂದರಂತೆ ಕಾಣಬಹುದು. ನಿಜ ಜಗತ್ತನ್ನು ಡಿಜಿಟಲ್ ಮೂಲಕ ಮರುಸೃಷ್ಟಿಸಿ ಪ್ರದರ್ಶಿಸುವುದನ್ನು ವಚ್ರ್ಯುಯಲ್ ರಿಯಾಲಿಟಿಯಾಗಿದೆ. ನಿಜ ಜಗತ್ತಿನ ಮೇಲೆ ವಚ್ರ್ಯುಯಲ್ ರಿಯಾಲಿಟಿಯ ಅಂಶಗಳನ್ನು ಅಳವಡಿಸಿಕೊಂಡು ಪ್ರದರ್ಶಿಸುವುದು ಅಗ್ಯುಮೆಂಟೆಂಡ್ ರಿಯಾಲಿಟಿಯಾಗಿದೆ.

ಇವೆರಡೂ ತಂತ್ರಜ್ಞಾನವನ್ನೂ ಮನರಂಜನೆಯ ಉz್ದÉೀಶಕ್ಕಾಗಿ ಹೆಚ್ಚು ಬಳಸಲಾಗುತ್ತದೆ. ಕಾಲ್ಪನಿಕ ವಿಜ್ಞಾನ ಕತೆಗಳಲ್ಲಿ, ಕೃತಕ ಜಗತ್ತನ್ನು ತೋರಿಸಲು ಇವುಗಳನ್ನು ಬಳಕೆ ಮಾಡಲಾಗುತ್ತದೆ. ಇವೆರಡೂ ವಿಜ್ಞಾನ ಮತ್ತು ತಂತ್ರಜ್ಞಾನ ವಲಯಕ್ಕೆ ಸಾಕಷ್ಟು ಕೊಡುಗೆ ನೀಡುತ್ತವೆ. ರಿಮೋಟ್ ಸರ್ಜರಿ ಮೂಲಕ ಮೆಡಿಕಲ್ ಕ್ಷೇತ್ರಕ್ಕೆ ನೆರವಾಗುತ್ತದೆ. ಹಲವು ಚಿಕಿತ್ಸೆಗಳಿಗೆ ತಯಾರಿ ನಡೆಸಲು ಇವು ನೆರವಾಗುತ್ತವೆ.

ಇದೀಗ ಇವೆರಡು ತಂತ್ರಜ್ಞಾನದ ಕುರಿತು ನಿಮಗೆ ಕೊಂಚ ಮಾಹಿತಿ ದೊರಕಿರಬಹುದು. ಈ ತಂತ್ರಜ್ಞಾನ ಕಲಿಯಲು ಇರುವ ಕೆಲವು ಆಯ್ಕೆಗಳ ಬಗ್ಗೆ ತಿಳಿಯೋಣ. ವಚ್ರ್ಯುಯಲ್ ರಿಯಾಲಿಟಿ ಮತ್ತು ಅಗ್ಯುಮೆಂಟೆಡ್ ರಿಯಾಲಿಟಿ ಕುರಿತು ಅಲ್ಪಾವಧಿ ಮತ್ತು ದೀರ್ಘಕಾಲಿಕ ಕೋರ್ಸ್‍ಗಳು ಲಭ್ಯ ಇವೆ. ಈ ಕೋರ್ಸ್ ಮೂಲಕ ವಿಆರ್/ಎಆರ್ ಕುರಿತು ಮೂಲಭೂತ ಅಂಶಗಳು, ಮಾನವ/ಕಂಪ್ಯೂಟರ್ ಇಂಟರ್‍ಫೇಸ್ ಮತ್ತು ಇಂಟರ್ಯಾಕ್ಷನ್ ಡಿಸೈನ್, ವಿಆರ್ ಡಿಸೈನ್ ಪ್ರಿನ್ಸಿಪಾಲ್ ಇತ್ಯಾದಿ ಹಲವು ಅಂಶಗಳನ್ನು ಕಲಿಯಬಹುದು. ಇಂತಹ ಕೋರ್ಸ್‍ಗಳನ್ನು ಕಲಿಸಲು ಹೆಚ್ಚಿನ ಪ್ರಮಾಣದಲ್ಲಿ ಕಾಲೇಜುಗಳು ಕರ್ನಾಟಕದಲ್ಲಿಲ್ಲ. ಕೆಲವೊಂದು ಸಂಸ್ಥೆಗಳು ಇಂತಹ ಕೋರ್ಸ್‍ಗಳನ್ನು ಪರಿಚಯಿಸುತ್ತಿವೆ. ಆದರೆ, ದೇಶದಲ್ಲಿ ಈ ಕುರಿತು ಕೆಲವು ಸಂಸ್ಥೆಗಳು ಸರ್ಟಿಫಿಕೇಷನ್ ನೀಡುತ್ತಿವೆ.

ಗೂಗಲ್‍ನಲ್ಲಿ ಹೋಗಿ ಕಾಗ್ಸ್‍ವೆಲ್ ಎಜು, ಕೊಯ್ನಿಂಗ್ ಕ್ಯಾಂಪಸ್, ಕೋರ್ಸ್ ಎರಾ ಮುಂತಾದ ಶಿಕ್ಷಣ ಸಂಸ್ಥೆಗಳಲ್ಲಿ ಈ ಕೋರ್ಸ್ ಹುಡುಕಬಹುದು. ಬಹುತೇಕ ತಂತ್ರಜ್ಞಾನ ಮತ್ತು ಮನರಂಜನಾ ಕಂಪನಿಗಳು ವಿಆರ್ ಮತ್ತು ಎಆರ್ ಪರಿಣತರಿಗೆ ಉದ್ಯೋಗ ನೀಡುತ್ತವೆ. ಮುಂದೆಯೂ ಇಂತಹ ಪರಿಣತರಿಗೆ ಉತ್ತಮ ಭವಿಷ್ಯವಿದೆ.

ಕಂಪ್ಯೂಟರ್ ಗ್ರಾಫಿಕ್ಸ್ ವೃತ್ತಿಪರರು, ಕಂಪ್ಯೂಟರ್ ಎಂಜಿನಿಯರಿಂಗ್ ವೃತ್ತಿಪರರು, ಡಿಜಿಟಲ್ ಕಲಾವಿದರು, ಡಿಜಿಟಲ್ ಆಟ್ರ್ಸ್ ಅಥವಾ ಎಂಜಿನಿಯಿರಿಂಗ್ ಪೆÇ್ರೀಗ್ರಾಂನಲ್ಲಿ ಇತ್ತೀಚಿಗೆ ಪದವಿ ಪಡೆದವರು, ಮೀಡಿಯಾ ಆರ್ಟ್ ಅಥವಾ ಗೇಮ್ ಪೆÇ್ರೀಗ್ರಾಂ ಕಲಿತವರು, 3ಡಿ ಮಾಡೆಲಿಂಗ್ ಕಲಿತವರು ಈ ವಿಷಯದ ಅಧ್ಯಯನ ಮಾಡಿ ಹೊಸ ಬಗೆಯ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸಬಹುದು.

***

ಸ್ಟ್ಯಾಂಡಪ್‌ ಕಾಮಿಡಿ ಕರಿಯರ್‌ ಆಗಬಹುದೇ?

“ನಿಮ್ಮ ನಗು ನಿಮಗೆ ಸಕಾರಾತ್ಮಕ ಭಾವ ಮೂಡಿಸುತ್ತದೆ ಮತ್ತು ನಿಮ್ಮ ಸುತ್ತಮುತ್ತ ಇರುವವರಿಗೂ”

– ಸಂಗ್ರಹ

ಈ ಒತ್ತಡದ ಜಗತ್ತಿನಲ್ಲಿ ಜನರು ನಗುವಿಗಾಗಿ, ನಗಿಸುವರಿಗಾಗಿ ಕಾಯುತ್ತಿದ್ದಾರೆ. ಆಕರ್ಷಕ ಜೋಕ್ಸ್ ಹೇಳುತ್ತ ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವವರಿಗೆ ಇಂದು ಬಹುಬೇಡಿಕೆಯಿದೆ. ಕನ್ನಡದ ಹೆಮ್ಮೆಯ ಪ್ರಾಣೇಶ್ ಅವರ ಹಾಸ್ಯ ಮಾತುಗಳಿಗೆ ಎಷ್ಟೋ ಜನ ಕಾಯುತ್ತಾರೆ. ಯೂಟ್ಯೂಬ್‍ನಲ್ಲಿ ಹೋಗಿ ಸ್ಟಾಂಡಪ್ ಕಾಮಿಡಿ ಎಂದು ಹುಡುಕಿ. ಅಲ್ಲಿ ಒಂದೊಂದು ವಿಡಿಯೋವನ್ನು ಎಷ್ಟೋ ಸಾವಿರ, ಲಕ್ಷ ಜನರು ವೀಕ್ಷಿಸಿದ್ದಾರೆ ಎಂದು ನೋಡಿ. ಸ್ಟಾಂಡಪ್ ಕಾಮಿಡಿಯ ಜನಪ್ರಿಯತೆಗೆ ಇದು ಸಾಕ್ಷಿ. ನೀವು ಇಂತಹ ಕೌಶಲ ಪ್ರದರ್ಶಿಸುವ ಮೂಲಕ ದೇಶವಿದೇಶಗಳಲ್ಲಿ ಬಹುಬೇಡಿಕೆಯ ಸ್ಟಾಂಡಪ್ ಕಾಮಿಡಿಯನ್ ಆಗಿ ಜನಪ್ರಿಯತೆ ಪಡೆಯಬಹುದು.

ಸ್ಟಾಂಡಪ್ ಕಾಮಿಡಿಯನ್ ಆಗಲು ಇಂತಿಷ್ಟು ವಿದ್ಯಾರ್ಹತೆ ಇರಬೇಕೆಂದಿಲ್ಲ. ಸಾಮಾನ್ಯ ಶಿಕ್ಷಣ ಪಡೆದವರಿಂದ ಉನ್ನತ ಶಿಕ್ಷಣ ಪಡೆದವರೂ ಈ ಆಯ್ಕೆಯನ್ನು ಮಾಡಿಕೊಳ್ಳಬಹುದು. ಮುಖ್ಯವಾಗಿ ನಿಮ್ಮಲ್ಲಿ ನಗಿಸುವ ಗುಣ ಇರಬೇಕು. ಇದು ನಿಮ್ಮ ವೃತ್ತಿಯೂ ಆಗಬಹುದು. ಪ್ರವೃತ್ತಿಯೂ ಆಗಬಹುದು. ಯಾವುದಾದರೂ ಉದ್ಯೋಗದಲ್ಲಿದ್ದುಕೊಂಡು ಬಿಡುವಿನ ವೇಳೆಯಲ್ಲಿ ಯೂಟ್ಯೂಬ್ ಅಥವಾ ಸ್ಟೇಜ್ ಪ್ರದರ್ಶನಗಳನ್ನು ನೀಡಬಹುದು.

ಯೂಟ್ಯೂಬ್‍ನಲ್ಲಿ ನಿಮ್ಮ ಕಾಮಿಡಿಗಳು ಸೂಪರ್‍ಹಿಟ್ ಆದರಂತೂ ಗೂಗಲ್ ಆ್ಯಡ್‍ಸೆನ್ಸ್‍ನ ಜಾಹೀರಾತುಗಳಿಂದ ಕೈತುಂಬಾ ಹಣಗಳಿಸಬಹುದು. ಸ್ಟೇಜ್‍ಗಳಲ್ಲಿ ಒಂದು ಪ್ರದರ್ಶನಕ್ಕೆ ಒಬ್ಬರಿಗೆ ಇಂತಿಷ್ಟು ಟಿಕೇಟ್ ಎಂದು ನಿಗದಿಪಡಿಸಿಯೂ ಕೈತುಂಬಾ ಹಣ ಸಂಪಾದಿಸುವ ಸಾಕಷ್ಟು ಸ್ಟಾಂಡಪ್ ಕಾಮಿಡಿ ಕಲಾವಿದರು ಇದ್ದಾರೆ. ವಿಶೇಷವೆಂದರೆ ಸ್ಟಾಂಡಪ್ ಕಾಮಿಡಿ ಕಲಾವಿದರು ಆಗಲು ನೀವು ಯಾವುದೇ ರ್ಯಾಂಕ್ ಪಡೆದಿರಬೇಕಿಲ್ಲ. ನೀವು ಕಡಿಮೆ ಅಂಕ ಪಡೆದಿರುವುದನೇ ಜೋಕ್ಸ್‍ನಂತೆ ಹೇಳಿ ಚಪ್ಪಾಳೆ ಗಿಟ್ಟಿಸಬಹುದು!.

***

ಬ್ಲಾಗರ್- ವೋಲ್ಗರ್: ಬ್ಲಾಗ್ ಮತ್ತು ಯೂಟ್ಯೂಬ್ ಮೂಲಕ ಆದಾಯ ಗಳಿಸಿ

“ಯಶಸ್ಸಿನ ಹಾದಿಯೂ ಮತ್ತು ವೈಫಲ್ಯದ ಹಾದಿಯೂ ಬಹುತೇಕ ಒಂದೇ ರೀತಿ ಇರುತ್ತದೆ”

– ಕೊಲಿನ್ ಆರ್ ಡೇವಿಸ್

ಬ್ಲಾಗರ್ ಆಗಲು ಇಂತಿಷ್ಟೇ ವಿದ್ಯಾರ್ಹತೆ ಇರಬೇಕೆಂದಿಲ್ಲ. ಜನರು ಓದಬಲ್ಲ ಬರಹಗಳನ್ನು ಬರೆಯುವವರು ಬ್ಲಾಗರ್ ಆಗಬಹುದು. ಪ್ರವಾಸದ ಅನುಭವ, ಅಡುಗೆ ರೆಸಿಪಿ, ತಂತ್ರಜ್ಞಾನ ಸಲಹೆಗಳು ಸೇರಿದಂತೆ ಯಾವುದೇ ವಿಷಯದಲ್ಲಿ ಬ್ಲಾಗ್ ರಚಿಸಬಹುದು. ಕನ್ನಡದಲ್ಲಿ 2018ರವರೆಗೆ ಗೂಗಲ್ ಆಡ್‍ಸೆನ್ಸ್ ಜಾಹೀರಾತು ಬೆಂಬಲ ದೊರಕಿಲ್ಲ. ಹೀಗಾಗಿ ಸದ್ಯಕ್ಕೆ ಇಂಗ್ಲಿಷ್, ಹಿಂದಿ ಮುಂತಾದ ಬ್ಲಾಗರ್‍ಗಳು ಮಾತ್ರ ಇಂತಹ ಜಾಹೀರಾತುಗಳಿಂದ ಹಣ ಸಂಪಾದಿಸುತ್ತಿದ್ದಾರೆ.

ಬ್ಲಾಗ್‍ಸ್ಪಾಟ್ ಅಥವಾ ವರ್ಡ್‍ಪ್ರೆಸ್‍ನಲ್ಲಿ ಉಚಿತ ಬ್ಲಾಗ್ ಆರಂಭಿಸಿ. ಹಣ ಖರ್ಚು ಮಾಡಲು ಸಿದ್ಧರಿದ್ದರೆ ಡೊಮೈನ್ ಮತ್ತು ಹೋಸ್ಟಿಂಗ್ ಖರೀದಿಸಬಹುದು. ನಿಮ್ಮ ಬ್ಲಾಗ್‍ಸ್ಪಾಟ್ ಅಥವಾ ವರ್ಡ್‍ಪ್ರೆಸ್ ಬ್ಲಾಗ್‍ಗೆ ಡೊಮೈನ್ ಹೆಸರನ್ನು ಜೋಡಿಸಿ ವೆಬ್‍ಸೈಟ್ ರೂಪ ನೀಡಬಹುದು.

ಮೊದಲನೆಯದಾಗಿ ಬ್ಲಾಗಿಂಗ್ ಆರಂಭದಲ್ಲಿ ಹಣಸಂಪಾದನೆ ನಿಮ್ಮ ಉದ್ದೇಶವಾಗಿರುವುದು ಬೇಡ. ಹೆಚ್ಚು ಓದುಗರನ್ನು ಪಡೆಯಲು ಪ್ರಯತ್ನಿಸಿ. ಅತ್ಯುತ್ತಮ ಲೇಖನಗಳನ್ನು ಬರೆಯಿರಿ. ನೀವು ಬರೆಯುವುದು ಜನರಿಗೆ ಉಪಯುಕ್ತವಾಗಿರಲಿ. ಈಗ ಪ್ರತಿಯೊಬ್ಬರು ಪ್ರತಿಯೊಂದು ವಿಷಯವನ್ನು ಗೂಗಲ್‍ನಲ್ಲಿ ಹುಡುಕುತ್ತಾರೆ. ಅವರಿಗೆ ನಿಮ್ಮ ಲೇಖನ ಸುಲಭವಾಗಿ ದೊರಕುವಂತೆ ಇರಲಿ.

ನಿಮ್ಮ ಬ್ಲಾಗ್‍ಗೆ ಸಾಕಷ್ಟು ಓದುಗರು ದೊರಕಿದ ಬಳಿಕ ಜಾಹೀರಾತುಗಳನ್ನು ಜೋಡಿಸಬಹುದು. ನೀವು ಯಾವುದಾದರೂ ಟೆಕ್ ವಿಮರ್ಶೆ, ವಾಹನ ವಿಮರ್ಶೆ, ಉತ್ಪನ್ನಗಳ ವಿಮರ್ಶೆ ಇತ್ಯಾದಿಗಳನ್ನು ಬರೆಯುವರಾದರೆ ಪ್ರೊಬ್ಲಾಗರ್ ಆಗಬಹುದು. ಅಂದರೆ, ಕೆಲವೊಂದು ಕಂಪನಿಗಳು ತಮ್ಮ ಉತ್ಪನ್ನಗಳ ವಿಮರ್ಶೆಯ ಅವಕಾಶ ನಿಮಗೆ ನೀಡಬಹುದು. ಸಾಕಷ್ಟು ಬ್ಲಾಗರ್‍ಗಳು ಈ ಮೂಲಕ ಹಣ ಸಂಪಾದಿಸುತ್ತಿದ್ದಾರೆ. ಈಗಿನ ಟೆಕ್ ಜಗತ್ತಿನಲ್ಲಿ ಆನ್‍ಲೈನ್‍ನಲ್ಲಿ ನಿಮ್ಮ ಅಸ್ತಿತ್ವವನ್ನು ಪ್ರದರ್ಶಿಸಲು ಬ್ಲಾಗಿಂಗ್ ಅಥವಾ ಸ್ವಂತ ವೆಬ್‍ಸೈಟ್ ನೆರವಾಗುತ್ತದೆ.

ಇದೇ ರೀತಿ ಯೂಟ್ಯೂಬ್ ಚಾನೆಲ್ ಆರಂಭಿಸಬಹುದು. ಅಲ್ಲಿ ಉಪಯುಕ್ತ ವಿಡಿಯೋಗಳನ್ನು ಹಂಚಿಕೊಳ್ಳಬಹುದು. ವಿಡಿಯೋ ಎಡಿಟಿಂಗ್ ಕೌಶಲ ಕಲಿತರೆ ಉತ್ತಮ. ಯೂಟ್ಯೂಬ್ ಮೂಲಕ ಹಣಸಂಪಾದಿಸಲು ಸುಮಾರು 1 ಸಾವಿರ ಚಂದಾದಾರರನ್ನು, 1 ಲಕ್ಷ ವೀಕ್ಷಣೆ ಇತ್ಯಾದಿ ಹಲವು ಮಾನದಂಡಗಳನ್ನು ಎದುರಿಸಬೇಕಾಗುತ್ತದೆ. ಆರಂಭದಲ್ಲಿ ಹಣಸಂಪಾದನೆಯನ್ನು ಗಮನದಲ್ಲಿಟ್ಟುಕೊಳ್ಳದೆ ಗುಣಮಟ್ಟದ ಕಂಟೆಂಟ್ ನೀಡಲು ಆದ್ಯತೆ ನೀಡಿ. ನಿಮ್ಮ ರೆಸಿಪಿ ವಿಡಿಯೋಗಳು, ಪ್ರವಾಸಿ ಮಾಹಿತಿ ವಿಡಿಯೋಗಳು ಅಥವಾ ಇತರೆ ಯಾವುದಾದರೂ ವಿಷಯಗಳ ನೂರಾರು ವಿಡಿಯೋಗಳು ಯೂಟ್ಯೂಬ್‍ನಲ್ಲಿ ತುಂಬಲಿ. ಕೆಲವು ವರ್ಷದ ಬಳಿಕ ನೀವು ಹೊಸ ವಿಡಿಯೋ ಅಪ್ಲೋಡ್ ಮಾಡದೆ ಇದ್ದರೂ, ನಿಮಗೆ ಆದಾಯ ದೊರಕುತ್ತಿರುತ್ತದೆ.


ಹೂಡಿಕೆ ಬ್ಯಾಂಕರ್ ಅಥವಾ ಇನ್ವೆಸ್ಟ್‍ಮೆಂಟ್ ಬ್ಯಾಂಕರ್

“ನೀವು ಈ ಜಗತ್ತಿನಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ ಎನ್ನುವ ಎರಡು ಬಗೆಯ ಜನರಿದ್ದಾರೆ: ಒಬ್ಬರು ಬದಲಾವಣೆ ಮಾಡಲು ಭಯಪಡುವವರು ಮತ್ತು ಮತ್ತೊಬ್ಬರು ನೀವು ಯಶಸ್ಸು ಗಳಿಸಬಹುದೆಂದು ಭಯಪಡುವವರು”

– ರೇ ಗೊಫೋರ್ತ್

ದೇಶದಲ್ಲಿ ಅತ್ಯಧಿಕ ವೇತನ ನೀಡುತ್ತಿರುವ ಉದ್ಯೋಗಗಳಲ್ಲಿ ಇದೂ ಒಂದು. ನನ್ನ ಸಂಬಂಧಿಕರೊಬ್ಬರ ಸ್ನೇಹಿತರ ಮೂಲಕ ಈ ಉದ್ಯೋಗದ ಕುರಿತು ಹೆಚ್ಚಿನ ಮಾಹಿತಿ ದೊರಕಿತು. ಈ ಹುದ್ದೆಯ ಹೆಸರಿನಲ್ಲಿ ಬ್ಯಾಂಕರ್ ಎಂದಿದ್ದರೂ ಇದು ಸಂಪೂರ್ಣವಾಗಿ ಸಾಮಾನ್ಯ ಬ್ಯಾಂಕಿಂಗ್ ಜಾಬ್ ಅಲ್ಲ. ಅಕೌಂಟಿಂಗ್, ಬಿಸ್ನೆಸ್, ಫೈನಾನ್ಸ್, ಎಕಾನಾಮಿಕ್ಸ್, ಸ್ಟಟಿಸ್ಟಿಕ್ಸ್, ಎಂಜಿನಿಯರಿಂಗ್ (ಸಾಫ್ಟ್‍ವೇರ್, ಅನಾಲಿಟಿಕ್ಸ್) ಇತ್ಯಾದಿ ಕಲಿತವರು ಈ ಹುದ್ದೆಗೆ ಹೋಗಬಹುದು. ಹೂಡಿಕೆ ಬ್ಯಾಂಕರ್ ಉದ್ಯೋಗ ಪಡೆಯಲು ಅತ್ಯುತ್ತಮ ವಿಶ್ಲೇಷಣಾತ್ಮಕ ಕೌಶಲ, ಸಂವಹನ ಕೌಶಲ ಅತ್ಯಂತ ಅಗತ್ಯವಂತೆ. ಆರಂಭದಲ್ಲಿ ಅನಾಲಿಸ್ಟ್ ಆಗಿ, ನಂತರ ಕೆಲವು ವರ್ಷ ಅನುಭವ ಪಡೆದ ನಂತರ ಅಸೋಸಿಯೇಟ್ ಆಗಬಹುದು. ಈ ಅನುಭವದ ನಂತರ ಉಪಾಧ್ಯಕ್ಷರಾಗಬಹುದು ಮತ್ತು ಕೊನೆಯದಾಗಿ ನಿರ್ದೇಶಕರಾಗಬಹುದು. ಗೋಲ್ಡ್‍ಮನ್ ಸಾಚ್ಸ್, ಜೆಪಿ ಮೊರ್ಗಾನ್ ಚೇಸ್, ಮೊರ್ಗಾನ್ ಸ್ಟೇನ್ಲಿ ಇತ್ಯಾದಿ ಕಂಪನಿಗಳಲ್ಲಿ ಹುದ್ದೆಯನ್ನು ಪಡೆಯಬಹುದು. ಎಂಬಿಎ, ಅರ್ಥಶಾಸ್ತ್ರ ಇತ್ಯಾದಿ ವಿದ್ಯಾರ್ಹತೆ ಇರುವವರು ಹೂಡಿಕೆ ಬ್ಯಾಂಕರ್ ಆಗಿ ಕೈತುಂಬಾ ಹಣ ಸಂಪಾದಿಸಬಹುದು.


ಎಥಿಕಲ್ ಹ್ಯಾಕಿಂಗ್: ಹ್ಯಾಕ್ ಪ್ರಿಯರಿಗೆ ಆಕರ್ಷಕ ಉದ್ಯೋಗ

“ಹ್ಯಾಕರ್‍ಗಳನ್ನು ಹಿಡಿಯಲು ನೀವು ಹ್ಯಾಕರ್ ಆಗಬೇಕು”

– ಸಂಗ್ರಹ

ಹ್ಯಾಕಿಂಗ್ ಎಂದಾಗ ಒಂದುಕ್ಷಣ ನಿಮಗೆ ನಿಮ್ಮ ಮೊಬೈಲ್, ಕಂಪ್ಯೂಟರ್‍ನ ಸುರಕ್ಷತೆಯ ನೆನಪಾಗಬಹುದು. ವಿವಿಧ ಹ್ಯಾಕರ್‍ಗಳಿಂದ ದೇಶಗಳು, ಬ್ಯಾಂಕ್‍ಗಳು, ವಿವಿಧ ಕಂಪನಿಗಳು ಸಾಕಷ್ಟು ಸವಾಲನ್ನು ಎದುರಿಸುತ್ತವೆ. ಯಾವುದೋ ದೇಶದ ಮೂಲೆಯಲ್ಲಿ ಕುಳಿತುಕೊಂಡು ನಮ್ಮ ಕಂಪ್ಯೂಟರ್‍ಗೆ ಕನ್ನ ಹಾಕುವ ಇಂತಹ ಹ್ಯಾಕರ್‍ಗಳಿಂದ ಪಾರಾಗುವುದು ಪ್ರತಿಯೊಂದು ಸಂಸ್ಥೆಗೂ ಸವಾಲು. ಹ್ಯಾಕರ್‍ಗಳನ್ನು ಹಿಡಿಯಲು ನೀವು ಹ್ಯಾಕರ್ ಆಗಬೇಕು ಎನ್ನುವುದು ಟೆಕ್ ಜಗತ್ತಿನಲ್ಲಿ ಪ್ರಚಲಿತದಲ್ಲಿರುವ ಮಾತು.

ಹ್ಯಾಕಿಂಗ್ ಎಂದಾಕ್ಷಣ ನಕಾರಾತ್ಮಕವಾಗಿ ಯೋಚಿಸಬೇಕಿಲ್ಲ. ಹ್ಯಾಕಿಂಗ್ ಮಾಡುವುದು ಗುರುತರ ಅಪರಾಧ. ಹ್ಯಾಕ್ ಮಾಡಿ ಸಿಕ್ಕಿಬಿದ್ದರೆ ಜೈಲೂಟ ಗ್ಯಾರಂಟಿ. ಇಂತಹ ಹ್ಯಾಕರ್‍ಗಳನ್ನು ಹಿಡಿಯಲು ಎಥಿಕಲ್ ಹ್ಯಾಕರ್ ಅಥವಾ ನೈತಿಕ ಹ್ಯಾಕರ್ ನೀವಾಗಬಹುದು. ಇಂತಹ ಹ್ಯಾಕರ್‍ಗಳಿಂದ ತಮ್ಮ ಸಂಸ್ಥೆಯನ್ನು ಪಾರು ಮಾಡಲು ಕಂಪ್ಯೂಟರ್ ಮತ್ತು ನೆಟ್‍ವರ್ಕಿಂಗ್ ಬಳಸುವ ಕಂಪನಿಗಳು, ಬ್ಯಾಂಕ್‍ಗಳು ನೈತಿಕ ಹ್ಯಾಕರ್‍ಗಳನ್ನು ನೇಮಕ ಮಾಡಿಕೊಳ್ಳುತ್ತಿವೆ.

ಹ್ಯಾಕರ್‍ಗಳಿಂದ ಲಾಭವೂ ಇದೆ. ನಷ್ಟವೂ ಇದೆ. ಆನ್‍ಲೈನ್ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು ಹ್ಯಾಕರ್‍ಗಳು ನೆರವಾಗುತ್ತಾರೆ. ದುರುದ್ದೇಶಪೂರಿತ ಹ್ಯಾಕರ್‍ಗಳಿಂದ ಯಾಹೂ ಸೇರಿದಂತೆ ಸಾಕಷ್ಟು ಕಂಪನಿಗಳು ಪರಿತಪಿಸಿವೆ. ಲಕ್ಷಾಂತರ ಬಳಕೆದಾರರ ಮಾಹಿತಿಯನ್ನು ಕದಿಯುವ, ಬ್ಯಾಂಕ್‍ನ ಭದ್ರತೆಗೆ ಸವಾಲೊಡ್ಡುವ ಇಂತಹ ಹ್ಯಾಕರ್‍ಗಳಿಂದ ಪಾರಾಗಲು ನಂಬಿಗಸ್ಥ ನೈತಿಕ ಹ್ಯಾಕರ್‍ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ನಿಮಗೆ ಗೊತ್ತೆ, ಇದು ದೇಶದಲ್ಲಿ ಅತ್ಯಧಿಕ ಬೇಡಿಕೆಯ ಉದ್ಯೋಗ.

ಹ್ಯಾಕಿಂಗ್ ಕಲಿಸಲು ಯಾವುದೇ ಮಂತ್ರವಿದ್ಯೆ ಇಲ್ಲ. ಒಂದು ರಾತ್ರಿಯಲ್ಲಿ ಹ್ಯಾಕರ್ ಆಗಲು ಸಾಧ್ಯವಿಲ್ಲ. ಇದು ಇತರ ಕೋರ್ಸ್‍ಗಳಂತೆ ಶ್ರದ್ಧೆಯಿಟ್ಟು ಕಲಿತು ಪಡೆದುಕೊಳ್ಳಬಹುದಾದ ಪರಿಣತಿಯಾಗಿದೆ. ನಿಮಗೆ ಅಪರೇಟಿಂಗ್ ಸಿಸ್ಟಮ್, ಅದರ ಕಾರ್ಯಚಟುವಟಿಕೆಗಳು, ಕಂಪ್ಯೂಟರ್ ನೆಟ್‍ವರ್ಕ್‍ಗಳು, ಕಂಪ್ಯೂಟರ್ ಭದ್ರತೆ ಇತ್ಯಾದಿಗಳ ಬಗ್ಗೆ ಉತ್ತಮ ಮಾಹಿತಿ, ಜ್ಞಾನವಿದ್ದರೆ ನೀವು ನೈತಿಕ ಹ್ಯಾಕಿಂಗ್ ಅನ್ನು ಕಲಿಯಬಹುದು. ಅಮೆರಿಕದ ಇಸಿ ಕೌನ್ಸಿಲ್‍ನಡಿ ನೈತಿಕವಾಗಿ ಹ್ಯಾಕಿಂಗ್ ಮಾಡಲು ಕಲಿಸಿಕೊಡುವ ಹಲವು ಶಿಕ್ಷಣ ಸಂಸ್ಥೆಗಳು ದೇಶದಲ್ಲಿವೆ.

ಕಂಪ್ಯೂಟರ್‍ನ ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್ ಅನ್ನು ಅದನ್ನು ನಿರ್ಮಿಸಿದವರ ಪ್ರಮುಖ ಉz್ದÉೀಶಕ್ಕೆ ಬದಲಾಗಿ ಅನ್ಯವ್ಯಕ್ತಿ ತನಗೆ ಬೇಕಾದಂತೆ ಬದಲಾಯಿಸುವುದನ್ನು ಕಂಪ್ಯೂಟರ್ ಹ್ಯಾಕಿಂಗ್ ಎನ್ನಬಹುದು. ಸಾಫ್ಟ್‍ವೇರ್/ಮಾಡ್ಯುಲ್‍ಗಳಲ್ಲಿರುವ ಕುಂದುಕೊರತೆಗಳನ್ನು ಕಂಡುಹಿಡಿಯಲು ಹ್ಯಾಕಿಂಗ್ ಎಂಬ ಕಲೆಯನ್ನು ಬಳಸಲಾಗುತ್ತದೆ. ತನ್ನ ವೃತ್ತಿಯಲ್ಲಿ ಅಪೂರ್ಣತೆ ಪಡೆದವನನ್ನು ಹೆಸರಿಸಲು `ಹ್ಯಾಕ್’ ಎಂಬ ಪದ ಬಳಕೆ ಮಾಡಲಾಗುತ್ತದೆ. ಸಾಫ್ಟ್‍ವೇರ್ ಇತ್ಯಾದಿಗಳು ಅಪೂರ್ಣಗೊಂಡಿದ್ದರೆ ಹ್ಯಾಕರ್‍ಗಳ ದಾಳಿಗೆ ತುತ್ತಾಗುತ್ತವೆ.

ಕಂಪ್ಯೂಟರ್ ಮತ್ತು ನೆಟ್‍ವರ್ಕ್ ಬಳಸಿ ಬಹುಕೋಟಿ ವ್ಯವಹಾರ ನಡೆಸುವ ಬಹುತೇಕ ಕಂಪನಿಗಳು ಸುರಕ್ಷತೆಯ ದೃಷ್ಟಿಯಿಂದ `ನೈತಿಕ ಹ್ಯಾಕರ್’ಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ಎಥಿಕಲ್ ಹ್ಯಾಕರ್‍ಗಳಿಗೆ ಸೆಕ್ಯೂರಿಟಿ ಥ್ರೀಟ್ಸ್, ರಿಸ್ಕ್ ಮತ್ತು ಕೌಂಟರ್‍ಮೆಷರ್‍ಗಳ ಜ್ಞಾನ ಇರುವುದು ಅತ್ಯಂತ ಅಗತ್ಯ. ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಸೆಕ್ಯುರಿಟಿ ಅಡಿಟರ್, ಹ್ಯಾಕಿಂಗ್ ಟೂಲ್ ಅನಾಲಿಸ್ಟ್‍ಗಳಿಗಿಂತ ಹೆಚ್ಚು ಜ್ಞಾನ ಬಯಸುವ ಉದ್ಯೋಗವಿದು. ಹೆಚ್ಚಿನ ಕಂಪನಿಗಳು ಪ್ರತಿಭಾನ್ವಿತ ನೈತಿಕ ಹ್ಯಾಕರ್‍ಗಳಿಗೆ ತಮ್ಮ ಕಂಪನಿಯಲ್ಲಿ ಸ್ಥಾನ ನೀಡುತ್ತವೆ. ನಿಮ್ಮಲ್ಲಿ ಪದವಿ ಅಥವಾ ಸರ್ಟಿಫಿಕೇಷನ್‍ಗಳಿದ್ದರೂ ಕೆಲವೊಮ್ಮೆ ಐಟಿ ಭದ್ರತಾ ಅನುಭವ ಇಲ್ಲದೆ ಇದ್ದರೆ ಉದ್ಯೋಗ ಪಡೆಯುವುದು ಕಷ್ಟವಾಗಬಹುದು.

ನೈತಿಕ ಹ್ಯಾಕರ್ ಆಗಲು ಬಯಸುವವರು ಸಿಇಎಚ್ ವಿ9(ಪೂರಕ ಮಾಹಿತಿಗೆ: ತಿತಿತಿ.eಛಿಛಿouಟಿಛಿiಟ.oಡಿg)  ಎಂಬ ಕೋರ್ಸ್ ಮಾಡಬಹುದು. ಇದು ಎಥಿಕಲ್ ಹ್ಯಾಕಿಂಗ್‍ನಲ್ಲಿ ಜಗತ್ತಿನಲ್ಲೇ ಅಡ್ವಾನ್ಡಡ್ ಆಗಿರುವ ಕೋರ್ಸ್. ಸುಮಾರು 18 ಸೆಕ್ಯುರಿಟಿ ಡೊಮೈನ್‍ಗಳ ಭದ್ರತೆಯನ್ನು ಇದರಲ್ಲಿ ಕಲಿಯಬಹುದು. ಇದಕ್ಕಾಗಿ 18 ಮಾಡ್ಯುಲ್‍ಗಳು ಇವೆ. ಹ್ಯಾಕರ್‍ಗಳು ಸಾಮಾನ್ಯವಾಗಿ ಬಳಸುವ 270 ಹ್ಯಾಕಿಂಗ್, ಅಟ್ಯಾಕ್ ತಂತ್ರಜ್ಞಾನವನ್ನು ಕಲಿಯಬಹುದಾಗಿದೆ.

ಇಂತಹ ಕೋರ್ಸ್‍ಗಳನ್ನು ನೀಡುವ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲಿಯೂ ಇವೆ. ಸಿಂಪ್ಲಿಲರ್ನ್‍ನಂತಹ ಆನ್‍ಲೈನ್ ಕಲಿಕಾ ಕೇಂದ್ರಗಳಲ್ಲಿಯೂ ನೈತಿಕ ಹ್ಯಾಕಿಂಗ್ ಕೋರ್ಸ್‍ಗಳು ಇವೆ. ಬೆಂಗಳೂರಿನ ಐಕಾನ್ ಟೆಕ್ನಾಲಜೀಸ್, ಕ್ಯೂಸ್ಟ್ ಇನ್‍ಸ್ಟಿಟ್ಯೂಟ್ ಆಫ್ ನಾಲೆಡ್ಜ್, ಜೆಟ್‍ಕಿಂಗ್ ಇನ್ಫೋಟೈಮ್, ಸಿಎಂಎಸ್ ಕಂಪೂಟರ್ ಇನ್‍ಸ್ಟಿಟ್ಯೂಟ್ ಇತ್ಯಾದಿ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯಬಹುದಾಗಿದೆ. ಭವಿಷ್ಯದಲ್ಲಿ ಇಂಟರ್‍ನೆಟ್ ಬಳಕೆ ಇನ್ನಷ್ಟು ಹೆಚ್ಚುವುದರಿಂದ ನೈತಿಕ ಹ್ಯಾಕರ್‍ಗಳಿಗೆ ಸಹಜವಾಗಿ ಬೇಡಿಕೆ ಹಲವು ಪಟ್ಟು ಹೆಚ್ಚಾಗಲಿದೆ.


ಭಾರತೀಯ ರೈಲ್ವೆ: ಸೆಂಟ್ರಲ್ ಗವರ್ನಮೆಂಟ್ ಜಾಬ್

“ಪ್ರತಿಯೊಂದು ಶಿಖರಗಳಲ್ಲಿಯೂ ದಾರಿಗಳಿರುತ್ತವೆ. ಆದರೆ, ಅದು ಶಿಖರದ ಬುಡದಿಂದ ಕಾಣಿಸುವುದಿಲ್ಲ”

– ಥಿಯೊಡರ್ ರೋತೆಕ್

2018ರಲ್ಲಿ ಭಾರತೀಯ ರೈಲ್ವೆಯು ಸುಮಾರು 90 ಸಾವಿರ ಟೆಕ್ನಿಷಿಯನ್ ಮತ್ತು ಅಸಿಸ್ಟೆಂಟ್ ಲೊಕೊ ಪೈಲೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಎರಡೂವರೆ ಕೋಟಿ ದಾಟಿತ್ತು. ರೈಲ್ವೆಯ ಭರ್ಜರಿ ವೇತನ, ಪ್ರಯಾಣ ಭತ್ತೆ, ಮನೆಬಾಡಿಗೆ, ವೈದ್ಯಕೀಯ ಸೌಲಭ್ಯ, ರೈಲ್ವೆ ಕ್ವಾಟರ್ಸ್, ಸಬ್ಸಿಡಿ ಆಹಾರ, ಉನ್ನತ ಹುದ್ದೆಗೆ ಹೋಗಲು ಅಥವಾ ಉನ್ನತ ಶಿಕ್ಷಣ ಪಡೆಯಲು ಇರುವ ಅವಕಾಶಗಳು, ಪಿಂಚಣಿ, ಕೆಲಸದ ಭದ್ರತೆ, ಕೆಲಸದ ಅತ್ಯುತ್ತಮ ವಾತಾವರಣ, ರೈಲ್ವೆ ಉದ್ಯೋಗಿಗಳ ಮಕ್ಕಳಿಗಾಗಿ ಇರುವ ಶಾಲೆಗಳು ಮತ್ತು ಕಾಲೇಜುಗಳು, ಆಸ್ಪತ್ರೆ ಮತ್ತು ವೈದ್ಯಕೀಯ ಸೇವೆ, ಸಂಬಂಧಿಗಳಿಗೆ ಉದ್ಯೋಗ ಹೀಗೆ ರೈಲ್ವೆ ಉದ್ಯೋಗ ಪಡೆಯಲು ನೂರಾರು ಕಾರಣಗಳು ಇವೆ.

ರೈಲ್ವೆಯಲ್ಲಿ ಎಲ್ಲಾ ವಿದ್ಯಾರ್ಹತೆಯವರಿಗೂ ಉದ್ಯೋಗವಿದೆ. ಆದರೆ, ರೈಲ್ವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಸಾಮಥ್ರ್ಯ ನಿಮ್ಮಲ್ಲಿ ಇರಬೇಕು. ರೈಲ್ವೆ ಪರೀಕ್ಷೆಗೆ ಸಿದ್ಧತೆ ನಡೆಸುವ ಮೊದಲು ಎರಡು ವಿಧದ ಅರ್ಹತೆಗಳನ್ನು ಗಮನದಲ್ಲಿಟ್ಟುಕೊಳ್ಳಿ. ಮೊದಲನೆಯದ್ದು ಶೈಕ್ಷಣಿಕ ಅರ್ಹತೆ. ಎರಡನೆಯದು ರೈಲ್ವೆ ನೇಮಕ ಪರೀಕ್ಷೆ. ರೈಲ್ವೆ ಉದ್ಯೋಗಗಳ ಅಧಿಸೂಚನೆ ಬಂದಾಗ ಅರ್ಜಿ ಸಲ್ಲಿಸಲು ಮರೆಯಬೇಡಿ. ರೈಲ್ವೆಯು ಆಗಾಗ ನೇಮಕಾತಿ ಅಧಿಸೂಚನೆಗಳನ್ನು ಹೊರಡಿಸುತ್ತದೆ. ಇಂತಹ ಮಾಹಿತಿಗಳನ್ನು ಆದಷ್ಟು ಭಾರತೀಯ ರೈಲ್ವೆಯ ಅಧಿಕೃತ ವೆಬ್‍ಸೈಟ್‍ನಿಂದಲೇ ಪಡೆಯಿರಿ.

ಯಾವುದೇ ಪರೀಕ್ಷೆಗೂ ಸರಿಯಾದ ಸಿದ್ಧತೆ ನಡೆಸುವುದು ಅಗತ್ಯ. ಸಾಧ್ಯವಾದರೆ ರೈಲ್ವೆ ಪರೀಕ್ಷೆಗಳಿಗೆ ಕೋಚಿಂಗ್ ನೀಡುವ ಸಂಸ್ಥೆಗಳಿಗೆ ಸೇರಿ ತರಬೇತಿ ಪಡೆಯಿರಿ. ನೀವು ಇಂಟರ್‍ನೆಟ್ ಅಥವಾ ಪಠ್ಯಗಳ ನೆರವಿನಿಂದ ಸ್ವಯಂ ಅಧ್ಯಯನವನ್ನೂ ನಡೆಸಬಹುದಾಗಿದೆ. ತರಬೇತಿ ಜೊತೆಗೆ ಸಂಪನ್ಮೂಲದ ಲಭ್ಯತೆಯೂ ನಿಮಗೆ ಸಮರ್ಪಕವಾಗಿರಬೇಕು. ಅಂದರೆ, ಶೈಕ್ಷಣಿಕ ಸಂಪನ್ಮೂಲಗಳು ಮತ್ತು ಸ್ಟಡಿ ಮೆಟಿರಿಯಲ್‍ಗಳನ್ನು ಪಡೆದು ಸಿದ್ಧತೆ ನಡೆಸಿರಿ.

ಹೈಯರ್ ಸೆಕೆಂಡರಿ ಸ್ಕೂಲ್ ಅಥವಾ 10+2 ಶಿಕ್ಷಣ ಮುಗಿಸಿದ ತಕ್ಷಣ ಸ್ಪೆಷಲ್ ಕ್ಲಾಸ್ ರೈಲ್ವೆ ಅಪ್ರೆಂಟಿಸ್(ಎಸ್‍ಸಿಆರ್‍ಎ)ಗೆ ಸೇರಬಹುದು. ಈ ಪರೀಕ್ಷೆಯನ್ನು ಭಾರತೀಯ ಲೋಕ ಸೇವಾ ಆಯೋಗ(ಯುಪಿಎಸ್‍ಸಿ) ನಡೆಸುತ್ತದೆ. ಇಲ್ಲಿ ಕೆಲವೇ ಸೀಟುಗಳಿರುವುದರಿಂದ ಈ ಪರೀಕ್ಷೆಯು ತುಂಬಾ ಸ್ಪರ್ಧಾತ್ಮಕವಾಗಿರುತ್ತದೆ. ಈ  ಪರೀಕ್ಷೆಯಲ್ಲಿ ಯಶಸ್ಸು ಪಡೆದವರು ಟೆಕ್ನಿಕಲ್ ಅಪ್ರೆಂಟಿಸ್‍ಷಿಪ್ (ಸ್ಪೆಷಲ್ ಕ್ಲಾಸ್)ಗೆ ಸೇರಬಹುದು. ಇವರನ್ನು ಜಮ್ಲಪುರದಲ್ಲಿರುವ ಇಂಡಿಯನ್ ರೈಲ್ವೆ ಇನ್‍ಸ್ಟಿಟ್ಯೂಟ್ ಆಫ್ ಮೆಕ್ಯಾನಿಕಲ್ ಎಂಜಿನಿಯರ್‍ಗೆ ಸೇರಿಸಲಾಗುತ್ತದೆ. ಇಲ್ಲಿ ಟೆಕ್ನಿಕಲ್ ಕೋರ್ಸ್ ಕಲಿಯಬೇಕಾಗುತ್ತದೆ.

ಈ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರೈಸಿದವರನ್ನು ಇಂಡಿಯನ್ ರೈಲ್ವೇಸ್ ಸರ್ವೀಸ್ ಆಫ್ ಮೆಕ್ಯಾನಿಕ್ ಎಂಜಿನಿಯರಿಂಗ್ (ಐಆರ್‍ಎಸ್‍ಎಂಇ)ನ ಆಫೀಸರ್ ಕೇಡರ್‍ಗೆ ಸೇರಿಸಲಾಗುತ್ತದೆ. ಈ ಹಾದಿಯ ಮೂಲಕ ಆಫೀಸರ್ ಆಗಿ ನೇಮಕಗೊಂಡವರಿಗೆ ಇತರ ಹಾದಿಗಳ ಮೂಲಕ ಪ್ರವೇಶ ಪಡೆದವರಿಗಿಂತ ಹೆಚ್ಚು ಲಾಭಗಳಿವೆ. ಈ ಕೋರ್ಸ್ ಮಾಡಿ ಬಂದವರು ಭಾರತೀಯ ರೈಲ್ವೆ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಅಥವಾ ಸದಸ್ಯರಂತಹ ಉನ್ನತ್ತ ಸ್ಥಾನಕ್ಕೂ ಏರಬಹುದಾಗಿದೆ.

ಇನ್ನೊಂದು ಆಯ್ಕೆ ಐಇಎಸ್ ಪರೀಕ್ಷೆ ಬರೆಯುವುದಾಗಿದೆ. ಎಂಜಿನಿಯರಿಂಗ್ ಪದವಿ ಪಡೆದ ನಂತರ ಭಾರತೀಯ ರೈಲ್ವೆಗೆ ನೇಮಕಗೊಳ್ಳಲು ಬಯಸುವವರು ಇಂಡಿಯನ್ ಎಂಜಿನಿಯರಿಂಗ್ ಸರ್ವೀಸಸ್(ಐಇಎಸ್) ಪರೀಕ್ಷೆ ಬರೆಯಬೇಕಾಗುತ್ತದೆ. ಈ ಪರೀಕ್ಷೆಯನ್ನು ಭಾರತೀಯ ಲೋಕ ಸೇವಾ ಆಯೋಗ (ಯುಪಿಎಸ್‍ಸಿ) ನಡೆಸುತ್ತದೆ. ಈ ಪರೀಕ್ಷೆಯು ಕಠಿಣವಾಗಿರುತ್ತದೆ. ನೀವು ಎಂಜಿನಿಯರಿಂಗ್‍ನಲ್ಲಿ ಓದಿದ ವಿಷಯಗಳ ಕುರಿತು ಪ್ರಶ್ನೆಗಳಿರುತ್ತವೆ. ಈ ಹುದ್ದೆಗಳಿಗೆ ಹಲವು ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಸ್ಪರ್ಧೆ ಹೆಚ್ಚಿರುತ್ತದೆ. ಉತ್ತಮ ರ್ಯಾಂಕ್ ಪಡೆದವರಷ್ಟೇ ಅವಕಾಶ ಪಡೆಯಲು ಸಫಲರಾಗುತ್ತಾರೆ.

ಎಂಜಿನಿಯರಿಂಗ್‍ನ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಬ್ರಾಂಚ್‍ನಲ್ಲಿ ಓದಿದವರಿಗೆ ಆಯಾ ಕೇಡರ್‍ನಲ್ಲಿ ಉದ್ಯೋಗ ದೊರಕುತ್ತದೆ. ಉದ್ಯೋಗ ಪಡೆಯುವ ಮುನ್ನ ರೈಲ್ವೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ತರಬೇತಿ ಪಡೆಯಬೇಕಾಗುತ್ತದೆ. ಉದಾಹರಣೆಗೆ ನಾಸಿಕ್‍ನಲ್ಲಿರುವ ಇಂಡಿಯನ್ ರೈಲ್ವೇಸ್ ಇನ್‍ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ವಡೋದರಾದಲ್ಲಿರುವ ರೈಲ್ವೆ ಸ್ಟಾಫ್ ಕಾಲೇಜ್ ಮುಂತಾದೆಡೆ ತರಬೇತಿ ಪಡೆಯಬೇಕಾಗುತ್ತದೆ.

ದೇಶದ ಬಹುತೇಕ ಯುವಜನತೆಯ ನೆಚ್ಚಿನ ಆಯ್ಕೆ ಆರ್‍ಆರ್‍ಬಿ. ಭಾರತೀಯ ರೈಲ್ವೆಯು ಟೆಕ್ನಿಕಲ್ ಹಂತದ ಹುದ್ದೆಗಳು ಮತ್ತು ಕೆಳ ಹಂತದ ಹುದ್ದೆಗಳಿಗೆ ಆಗಾಗ ನೇಮಕಾತಿ ಕೈಗೊಳ್ಳುತ್ತದೆ. ಈ ಹುದ್ದೆಗಳಿಗೆ ಪ್ರಾದೇಶಿಕ ರೈಲ್ವೆ ನೇಮಕಾತಿ ಮಂಡಳಿಗಳ ಮೂಲಕ ನೇಮಕ ನಡೆಯುತ್ತದೆ. ಇಲ್ಲಿ ಡ್ರೈವರ್ಸ್, ಅಸಿಸ್ಟೆಂಟ್ ಡ್ರೈವರ್ಸ್, ಸ್ಟೇಷನ್ ಮಾಸ್ಟರ್ಸ್, ಸೆಕ್ಷನ್ ಎಂಜಿನಿಯರ್ಸ್ ಇತ್ಯಾದಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ನೀವು ಸಿವಿಲ್ ಸರ್ವೀಸ್ ಎಗ್ಸಾಮಿನೇಷನ್ ಮೂಲಕವೂ ರೈಲ್ವೆಯಲ್ಲಿ ಕೆಲಸ ಪಡೆಯಬಹುದು. ಇಲ್ಲಿ ನೀವು ಇಂಡಿಯನ್ ರೈಲ್ವೆ ಟ್ರಾಫಿಕ್ ಸರ್ವೀಸ್ (ಐಆರ್‍ಟಿಎಸ್) ಅಥವಾ ಇಂಡಿಯನ್ ರೈಲ್ವೇಸ್ ಅಕೌಂಟ್ಸ್ ಸರ್ವೀಸ್ (ಐಆರ್‍ಎಎಸ್)ನಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸಬಹುದು.

ಕ್ರೀಡೆಯಲ್ಲಿ ಸಾಕಷ್ಟು ಸಾಧನೆ ಮಾಡಿರುವವರು ಕ್ರೀಡಾ ಮೀಸಲಾತಿಯಡಿ  ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆದುಕೊಳ್ಳುವ ಅವಕಾಶವಿದೆ. ಡಾಕ್ಟರ್ ಮತ್ತು ಸರ್ಜನ್‍ಗಳು ರೈಲ್ವೆಗೆ ಸೇರಬಹುದು. ಇವರು ಇಂಡಿಯನ್ ರೈಲ್ವೇಸ್ ಮೆಡಿಕಲ್ ಸರ್ವೀಸ್ (ಐಆರ್‍ಎಂಎಸ್) ಕೇಡರ್ ಮೂಲಕ ರೈಲ್ವೆಯಲ್ಲಿ ಉದ್ಯೋಗ ಪಡೆದುಕೊಳ್ಳಬಹುದಾಗಿದೆ.

ಭಾರತೀಯ ರೈಲ್ವೆಯಲ್ಲಿ ವಲಯವಾರು ಮತ್ತು ವಿಭಾಗೀಯ ಹಂತದ ಪ್ರಧಾನ ಕಚೇರಿಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿವೆ. ಇಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟ ಹಲವು ಉದ್ಯೋಗಗಳು ಇರುತ್ತವೆ. 

ಮಾನವೀಯತೆ ಆಧಾರದಲ್ಲಿ ದೊರಕುವ ಹಲವು ಉದ್ಯೋಗಾವಕಾಶಗಳು ಭಾರತೀಯ ರೈಲ್ವೆಯಲ್ಲಿದೆ. ಎಲ್ಲಾದರೂ ರೈಲ್ವೆ ಉದ್ಯೋಗಿಯು ಕೆಲಸದಲ್ಲಿದ್ದ ಸಂದರ್ಭದಲ್ಲಿ ಅವರ ಹತ್ತಿರದ ಸಂಬಂಧಿಗೆ ಉದ್ಯೋಗ ಪಡೆಯುವ ಅವಕಾಶ ಇರುತ್ತದೆ. ಇನ್ನುಳಿದಂತೆ ಹೆಲ್ಪರ್, ಅಟೆಂಡೆಂಟ್, ಬಂಗ್ಲೆಗಳಿಗೆ ಕಾವಲುಗಾರರು ಇತ್ಯಾದಿ ಹುದ್ದೆಗಳು ಭಾರತೀಯ ರೈಲ್ವೆಯಲ್ಲಿ ಇರುತ್ತದೆ. ರೈಲ್ವೆಯಲ್ಲಿ ಉದ್ಯೋಗ ಪಡೆದು ಭವಿಷ್ಯ ಬದಲಿಸಲು ಬಯಸುವವರು ರೈಲ್ವೆ ಪರೀಕ್ಷೆಗೆ ಸಮರ್ಪಕವಾಗಿ ಸಿದ್ಧತೆ ನಡೆಸಿ ಅತ್ಯುತ್ತಮವಾಗಿ ಪರೀಕ್ಷೆ ಬರೆದು ಕನಸು ಈಡೇರಿಸಿಕೊಳ್ಳಿರಿ.

***

ಜುವೆಲ್ಲರಿ ಡಿಸೈನರ್- ಆಭರಣ ವಿನ್ಯಾಸ ಮಾಡುವ ಉದ್ಯೋಗ

“ಪ್ರತಿಯೊಬ್ಬರೂ ಯಶಸ್ಸು ಎಂಬ ಚಿನ್ನದ ರಾಯಭಾರಿಗಳೇ, ಆದರೆ, ಬಹುತೇಕರು ಚಿನ್ನ ಪಡೆಯಲು ಪ್ರಯತ್ನವೆಂಬ ಗಣಿಗಾರಿಕೆ ಮಾಡುವುದಿಲ್ಲ”

– ಸಂಗ್ರಹ

ಭಾರತೀಯರಿಗೆ ಆಭರಣವೆಂದರೆ ಏನೋ ಪ್ರೀತಿ. ವಿವಿಧ ವಿನ್ಯಾಸದ ಆಭರಣ ಧರಿಸುವುದು ಮಹಿಳೆಯರಿಗೆ ಅಚ್ಚುಮೆಚ್ಚು. ಮೊದಲೆಲ್ಲ ಆಭರಣ ವಿನ್ಯಾಸದ ಕೆಲಸ ಕೆಲವೇ ವರ್ಗಕ್ಕೆ ಸೀಮಿತವಾಗಿತ್ತು. ಆದರೆ, ಈಗ ಅದು ಒಂದು ಬೃಹತ್ ಉದ್ಯಮಾಗಿ ಬೆಳೆದಿದೆ. ಆಭರಣ ವಿನ್ಯಾಸಕರಿಗೆ ಬೇಡಿಕೆಯೂ ಹೆಚ್ಚಾಗಿದೆ. ಸುಂದರ ಆಭರಣ ವಿನ್ಯಾಸ ಮಾಡಲು ಅಪಾರ ಪರಿಶ್ರಮ, ತಾಳ್ಮೆ, ಕಲೆಗಾರಿಕೆ ಇರಬೇಕಾಗುತ್ತದೆ.

ಈಗ ಆಭರಣ ವಿನ್ಯಾಸಕ್ಕೆ ತಂತ್ರಜ್ಞಾನದ ನೆರವು ಸಹ ಇದೆ. ಅಂದರೆ, ಕ್ಯಾಡ್ ಸಾಫ್ಟ್‍ವೇರ್, ಕ್ಯಾಮ್ ಹಾರ್ಡ್‍ವೇರ್ ಮತ್ತು 3ಡಿ ಪ್ರಿಂಟರ್‍ಗಳ ಮೂಲಕ ಆಭರಣಗಳ ಮೂಲಕ ರೂಪಿಸಲಾಗುತ್ತಿದೆ. ಬೆಲೆಬಾಳುವ ಲೋಹ, ವಜ್ರ, ಮಣಿ ಮತ್ತು ರತ್ನಗಳನ್ನು ಧರಿಸಲು ಸಾಧ್ಯವಾಗುವಂತೆ ರೂಪಿಸುವುದು ಆಭರಣ ವಿನ್ಯಾಸಕರ ಕೆಲಸ. ತಂತ್ರಜ್ಞಾನದ ನೆರವಿಲ್ಲದೆ ಕೈಯಿಂದ ವಿನ್ಯಾಸ ಮಾಡಿದ `ಹ್ಯಾಂಡ್ ಮೇಡ್’ ಆಭರಣಗಳಿಗೂ ಉತ್ತಮ ಬೇಡಿಕೆಯಿದೆ.

ಆಭರಣ ವಿನ್ಯಾಸವನ್ನು ಕಲಿಸಿಕೊಡಲು ಸಾಕಷ್ಟು ಸಂಸ್ಥೆಗಳಿವೆ. ದೇಶದಲ್ಲಿ ನೂರಾರು ಶೈಕ್ಷಣಿಕ ಸಂಸ್ಥೆಗಳು ದೀರ್ಘಕಾಲಿನ, ಅಲ್ಪಾವಧಿಯ ಜುವೆಲ್ಲರಿ ಡಿಸೈನ್ ಕೋರ್ಸ್‍ಗಳನ್ನು ನಡೆಸುತ್ತವೆ. ದೂರ ಶಿಕ್ಷಣದ ಮೂಲಕವೂ ಕಲಿಯಬಹುದು. ಸ್ಟೋನ್ ಕತ್ತರಿಸುವುದು, ಕೆತ್ತನೆ ಮಾಡುವುದು, ಪಾಲೀಷ್ ಮಾಡುವುದು ಮತ್ತು ಬೆಲೆಬಾಳುವ ಲೋಹ ಮತ್ತು ರತ್ನಗಳ ಗುಣಮಟ್ಟ ಪರಿಶೀಲಿಸುವುದನ್ನು ಈ ಕೋರ್ಸ್‍ಗಳು ಹೇಳಿಕೊಡುತ್ತವೆ. ಎಲೆಕ್ಟ್ರೊಪ್ಲೇಟಿಂಗ್(ವಿದ್ಯುತ್‍ಲೇಪನ), ಮೆಟಲ್ ಕಲರಿಂಗ್, ಅನೊಡಿಸಿಂಗ್, ಸ್ಟೋನ್ ಸೆಟ್ಟಿಂಗ್ ಇತ್ಯಾದಿಗಳನ್ನೂ ಈ ಕೋರ್ಸ್‍ನಲ್ಲಿ ಕಲಿಸಿಕೊಡಲಾಗುತ್ತಿದೆ. ಜುವೆಲ್ಲರಿ ಡಿಸೈನ್‍ನಲ್ಲಿ ಡಿಪೆÇ್ಲಮಾ ಮಾಡಬಹುದು ಅಥವಾ ಶಾರ್ಟ್‍ಟರ್ಮ್ ಕೋರ್ಸ್‍ಗಳನ್ನು ಮಾಡಬಹುದಾಗಿದೆ.

ಜುವೆಲರಿ ಡಿಸೈನ್ ಆರಂಭಿಕ ಕೋರ್ಸ್‍ಗಳನ್ನು ಎಸ್‍ಎಸ್‍ಎಲ್‍ಸಿ ಅಥವಾ ಪಿಯುಸಿ ನಂತರ ಮಾಡಬಹುದಾಗಿದೆ. ಡಿಪೆÇ್ಲಮಾ ಕೋರ್ಸ್‍ಗಳಿಗೆ ಯಾವುದೇ ಪದವಿ ಪೂರೈಸಿರುವವರು ಸೇರಬಹುದು. ಕ್ರಿಯೇಟಿವ್ ಆಟ್ರ್ಸ್ ವಿಷಯದಲ್ಲಿ ಪದವಿ ಪಡೆದರಂತೂ ಉತ್ತಮ. ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಸೈನ್‍ನಂತಹ ಸಂಸ್ಥೆಗಳಲ್ಲಿ ಬಿಡಿಇಎಸ್ ಕೋರ್ಸ್‍ಗಳನ್ನು ಮಾಡಬಹುದು. ಬಿಡಿಇಎಸ್ ಎಂದರೆ ಬ್ಯಾಚುಲರ್ ಆಫ್ ಡಿಸೈನ್. ಬೇಕಾದರೆ ಇದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಬಹುದಾಗಿದೆ.

ಇಂತಹ ಕೋರ್ಸ್‍ಗಳನ್ನು ಮಾಡಿದ ನಂತರ ಪ್ರಮುಖ ಆಭರಣ ತಯಾರಿಕಾ ಸಂಸ್ಥೆಗಳಲ್ಲಿ ಇಂಟರ್ನ್‍ಷಿಪ್ ಮಾಡಬಹುದು. ಆಭರಣ ತಯಾರಿಕಾ ಸಂಸ್ಥೆಗಳಲ್ಲಿ ಉದ್ಯೋಗಪಡೆಯಬಹುದು. ಆರಂಭದಲ್ಲಿ ವೇತನ ಕಡಿಮೆ ಇರುತ್ತದೆ. ಮುಂದೆ ಉತ್ತಮ ಪ್ರತಿಭೆ ಇರುವವರು ಅತ್ಯಧಿಕ ವೇತನ ಪಡೆಯಬಹುದು. ವಿದೇಶದಲ್ಲಿಯೂ ಉದ್ಯೋಗ ಪಡೆಯಬಹುದಾಗಿದೆ.

ಮೈಸೂರಿನ ಜೆಎಸ್‍ಎಸ್ ಅಂಗವಿಕಲರ ಪಾಲಿಟೆಕ್ನಿಕ್‍ನಲ್ಲಿ ವಿಶೇಷ ಚೇತನರು ಮಾತ್ರವಲ್ಲದೆ ಸಾಮಾನ್ಯ ವಿದ್ಯಾರ್ಥಿಗಳು  ಜೆಎಸ್‍ಎಸ್ ವಿದ್ಯಾಪೀಠದ ಇತರ ಸ್ಕೀಮ್‍ಗಳ ಮೂಲಕ ಆಭರಣ ವಿನ್ಯಾಸ ಕಲಿಯಬಹುದು. ಮಣಿಪಾಲ ಯೂನಿವರ್ಸಿಟಿಯಲ್ಲಿಯೂ ಸ್ಕೂಲ್ ಆಫ್ ಜುವೆಲ್ಲರಿ ಮ್ಯಾನೆಜ್‍ನೆಂಟ್ (ಎಸ್‍ಒಜೆಎಂ) ವಿಭಾಗವಿದೆ. ಇಲ್ಲಿ ಜುವೆಲ್ಲರಿ ಡಿಸೈನ್ ವಿಷಯದಲ್ಲಿ ಮೂರು ವರ್ಷಗಳ ಬಿಬಿಎ(ಜೆಡಿಎಂ) ಕೋರ್ಸ್ ಮಾಡಬಹುದಾಗಿದೆ. ಸಾಲಿಟೆರ್ ಡೈಮಾಂಡ್ ಇನ್‍ಸ್ಟಿಟ್ಯೂಟ್(ಎಸ್‍ಡಿಐ) ಬೆಂಗಳೂರಿನ ಜಯನಗರದಲ್ಲಿದೆ. ಇಂಟರ್‍ನ್ಯಾಷನಲ್ ಜೆಮೊಲಾಜಿಕಲ್ ಇನ್‍ಸ್ಟಿಟ್ಯೂಷನ್ (ಐಜಿಐ)ನ ಶಾಖೆಗಳು ಕರ್ನಾಟಕದಲ್ಲಿಲ್ಲ. ಆದರೆ, ದೆಹಲಿ, ಚೆನ್ನೈ, ಅಹಮಾದಬಾದ್, ಮುಂಬೈ, ಸೂರತ್, ಜೈಪುರ ಮುಂತಾದೆಡೆ ಇದ್ದು, ಆಸಕ್ತರು ಅಲ್ಲೂ ಕಲಿಯಬಹುದಾಗಿದೆ.

***

ಫಾರ್ಮಾಸ್ಯುಟಿಕಲ್ ಕ್ಷೇತ್ರದ ವೃತ್ತಿಗಳು

ಸಂಕ್ಷಿಪ್ತ ಮಾಹಿತಿ

ದೇಶದ ಪ್ರಮುಖ ಉದ್ಯೋಗ ಕ್ಷೇತ್ರ ಮತ್ತು ವಿಶ್ವದ ಐದನೇ ಬೃಹತ್ ಉದ್ಯಮವಾದ ಫಾರ್ಮಾಸ್ಯುಟಿಕಲ್‍ನಲ್ಲಿಯೂ ಹತ್ತು ಹಲವು ಬಗೆಯ ಉದ್ಯೋಗಗಳು ಇವೆ. ದೇಶದಲ್ಲಿ ಸುಮಾರು 10,500 ಔಷಧÀ ತಯಾರಿಕಾ ಘಟಕಗಳಿವೆ. 3 ಸಾವಿರಕ್ಕೂ ಹೆಚ್ಚು ಔಷಧ ಕಂಪನಿಗಳಿವೆ. ಅಮೆರಿಕದ ನಂತರ ಅತ್ಯಧಿಕ ಪ್ರಮಾಣದಲ್ಲಿ ಆರೋಗ್ಯ ಸಂಬಂಧಿತ ಉತ್ಪನ್ನಗಳನ್ನು ಉತ್ಪಾದಿಸುವ ದೇಶ ಭಾರತ. ಔಷಧಗಳ ಬಗ್ಗೆ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳೂ ಇಲ್ಲಿ ಹೆಚ್ಚು ನಡೆಯುತ್ತಿದೆ. ಜೊತೆಗೆ, ನಮ್ಮಲ್ಲಿ ರೋಗ ರುಜಿನಗಳೂ ಹೆಚ್ಚು ಎಂದೇ ಹೇಳಬಹುದು.

ಫಾರ್ಮಾಸ್ಯುಟಿಕಲ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಬಯಸುವವರು ಫಾರ್ಮಸಿಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆಯಬಹುದು. ಇಂತಹ ಶಿಕ್ಷಣ ಪಡೆದವರಿಗೆ ಆಸ್ಪತ್ರೆಗಳಲ್ಲಿ, ನರ್ಸಿಂಗ್ ಹೋಮ್‍ಗಳಲ್ಲಿ , ಸರಕಾರಿ ಇಲಾಖೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ, ಔಷಧ ತಯಾರಿಕಾ ಕಂಪನಿಗಳಲ್ಲಿ ಉದ್ಯೋಗ ದೊರಕುತ್ತದೆ.

ಮ್ಯಾನುಫ್ಯಾಕ್ಚರಿಂಗ್ ಕೆಮಿಸ್ಟ್

ಇದನ್ನು ಕನ್ನಡದಲ್ಲಿ ಉತ್ಪಾದನಾ ರಸಾಯನಶಾಸ್ತ್ರಜ್ಞ ಎನ್ನಬಹುದು. ಈ ಹುದ್ದೆ ಪಡೆಯಲು ಬಯಸುವವರು ಫಾರ್ಮಸಿ ವಿಷಯದಲ್ಲಿ ಪದವಿ ಪಡೆದುಕೊಳ್ಳಿ. ಇದೇ ಕ್ಷೇತ್ರದಲ್ಲಿ ಒಂದೆರಡು ವರ್ಷ ಕೆಲಸ ಮಾಡಿರಿ. ಔಷಧ ತಯಾರಿಕೆ ಬಗ್ಗೆ ನಿಗಾ ವಹಿಸಲು ಮತ್ತು ಮಾರ್ಗದರ್ಶನ ಮಾಡುವ ಕೌಶಲಗಳನ್ನು ಕಲಿತುಕೊಳ್ಳಿರಿ. ನೀವು ಸೇರಿದ ಕಂಪನಿಯಲ್ಲಿಯೇ ಮ್ಯಾನುಫ್ಯಾಕ್ಚರಿಂಗ್ ಉದ್ಯೋಗ ಪಡೆಯಬಹುದು ಅಥವಾ ಬೇರೆ ಔಷಧ ಕಂಪನಿಗಳಲ್ಲಿ ಈ ಹುದ್ದೆಗೆ ಪ್ರಯತ್ನಿಸಬಹುದು. ಈ ಹುದ್ದೆಯಲ್ಲಿ ಅನುಭವ ಪಡೆದ ಬಳಿಕ ನೀವು ಫ್ಯಾಕ್ಟರಿ ಮ್ಯಾನೇಜರ್ ಆಗಬಹುದು.

ಕ್ವಾಲಿಟಿ ಅಸ್ಯುರೆನ್ಸ್ ಕೆಮಿಸ್ಟ್- ಸಂಗ್ರಹ

ಕ್ವಾಲಿಟಿ ಅಸ್ಯುರೆನ್ಸ್ ಕೆಮಿಸ್ಟ್ ಫಾರ್ಮಾಸ್ಯುಟಿಕಲ್ ವಿಭಾಗದಲ್ಲಿರುವ ಇನ್ನೊಂದು ಹುದ್ದೆ ಇದಾಗಿದೆ. ಕ್ವಾಲಿಟಿ ಕಂಟ್ರೋಲ್ ಅಥವಾ ಕ್ವಾಲಿಟಿ ಅಸ್ಯುರೆನ್ಸ್ ಕೆಮಿಸ್ಟ್ ಆಗಲು ಫಾಮರ್ಸಿ ಪದವಿ ಜೊತೆಗೆ ಫಾರ್ಮಾಸ್ಯುಟಿಕಲ್ ಅನಾಲಿಸಿಸ್ ಮತ್ತು ಸಂಬಂಧಿತ ಸಾಧನ, ಸಲಕರಣೆಗಳನ್ನು ಸರಿಯಾಗಿ ಬಳಸಲು,  ನಿಯಂತ್ರಿಸಲು ತಿಳಿದಿರಬೇಕು. ಔಷಧಗಳ ಗುಣಮಟ್ಟ ಪರಿಶೀಲನೆ ಇವರ ಪ್ರಮುಖ ಕೆಲಸವಾಗಿದೆ.

ಹಾಸ್ಪಿಟಲ್ ಫಾರ್ಮಾಸಿಸ್ಟ್

ಆಸ್ಪತ್ರೆಗಳಲ್ಲಿರುವ ಔಷಧಗಳ ಸಂಗ್ರಹವನ್ನು ನಿರ್ವಹಿಸುವುದು, ಆಸ್ಪತ್ರೆಯ ಅವಶ್ಯಕತೆಗೆ ತಕ್ಕಂತೆ ಔಷಧ ನೀಡುವ, ವಿಲೇವಾರಿ ಮಾಡುವ  ಕೆಲಸವನ್ನು ಹಾಸ್ಪಿಟಲ್ ಫಾರ್ಮಾಸಿಸ್ಟ್ ಮಾಡುತ್ತಾರೆ. ಫಾರ್ಮಾಸಿ ವಿಷಯದಲ್ಲಿ ಡಿಪೆÇ್ಲಮಾ ಪಡೆದವರು ಇಂತಹ ಹುದ್ದೆಗಳನ್ನು ಪಡೆಯಲು ಪ್ರಯತ್ನಿಸಬಹುದು. ದೇಶದಲ್ಲಿಂದು ಲೆಕ್ಕವಿಲ್ಲದಷ್ಟು ಆಸ್ಪತ್ರೆಗಳು, ಆಸ್ಪತ್ರೆಯ ಮೆಡಿಕಲ್‍ಶಾಪ್‍ಗಳು ಇರುವುದರಿಂದ ಇದು ಬೇಡಿಕೆಯಲ್ಲಿರುವ ಉದ್ಯೋಗವಾಗಿದೆ.

ಕಮ್ಯುನಿಟಿ ಫಾರ್ಮಾಸಿಸ್ಟ್

ಔಷಧ ಸಂಗ್ರಹಗಾರ ಮತ್ತು ಮೆಡಿಕಲ್ ಸ್ಟೋರ್ ಕಂಪನಿಗಳಲ್ಲಿ ಕೆಲಸ ಪಡೆಯಬಹುದು. ಅಂದರೆ ಅಪೆÇಲೊ ಫಾರ್ಮಾಸಿ, ಮೆಡ್‍ಪ್ಲಸ್ ಇತ್ಯಾದಿಗಳಲ್ಲಿ ಉದ್ಯೋಗ ದೊರಕಬಹುದು. ಫಾರ್ಮಾಸಿಯಲ್ಲಿ ಡಿಪೆÇ್ಲಮಾ ಪಡೆದಿದ್ದರೆ ಇಂತಹ ಉದ್ಯೋಗ ಸುಲಭವಾಗಿ ದೊರಕುತ್ತದೆ.

ಡ್ರಗ್ ಇನ್‍ಸ್ಪೆಕ್ಟರ್- ಪಬ್ಲಿಕ್ ಸರ್ವೀಸ್ ಕಮಿಷನ್‍ನ ಸ್ಪರ್ಧಾತ್ಮಕ ಪರೀಕ್ಷೆ

ಫಾರ್ಮಾಸ್ಯುಟಿಕಲ್‍ನಲ್ಲಿ ಪದವಿ ಪಡೆದವರು ಡ್ರಗ್ ಇನ್‍ಸ್ಪೆಕ್ಟರ್ ಹುದ್ದೆಗೆ ಪ್ರಯತ್ನಿಸಬಹುದು. ಇದಕ್ಕಾಗಿ ಪಬ್ಲಿಕ್ ಸರ್ವೀಸ್ ಕಮಿಷನ್‍ನ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಾಗುತ್ತದೆ. ಎಲ್ಲಾ ಕಡೆ ಇರುವ ಔಷಧÀಗಳ ಗುಣಮಟ್ಟ, ಸುರಕ್ಷತೆ ಪರಿಶೀಲಿಸುವುದು ಇವರ ಪ್ರಮುಖ ಕಾರ್ಯವಾಗಿದೆ.

ಫಾರ್ಮಾಸ್ಯುಟಿಕಲ್‌ ಅನಾಲಿಸ್ಟ್‌

ಗವರ್ನಮೆಂಟ್ ಅನಾಲಿಸ್ಟ್, ರಿಸರ್ಚ್ ಅನಾಲಿಸ್ಟ್ ಇತ್ಯಾದಿ ಹುದ್ದೆಗಳನ್ನೂ ಫಾರ್ಮಾಸ್ಯುಟಿಕಲ್ ವಿಭಾಗದಲ್ಲಿ ಪಡೆಯಬಹುದು. ಸರಕಾರದ ಪ್ರಯೋಗಾಲಯಗಳಲ್ಲಿ, ಔಷಧ ಕಂಪನಿಗಳಲ್ಲಿ ಗವರ್ನಮೆಂಟ್ ಅನಾಲಿಸ್ಟ್‍ಗಳು ಕಾರ್ಯನಿರ್ವಹಿಸಬಹುದು. ಈ ಹುದ್ದೆ ಪಡೆಯಲು ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಆಯ್ಕೆ ವಿಧಾನಗಳು ಇರುತ್ತವೆ. ಸರಕಾರವು ಆಗಾಗ ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸುತ್ತದೆ. ಔಷಧ ಪ್ರಯೋಗಾಲಯಗಳು ಮತ್ತು ಔಷಧ ತಯಾರಿಕಾ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಪಡೆದವರು ರೀಸರ್ಚ್ ಅನಾಲಿಸ್ಟ್ ಹುದ್ದೆಗೆ ಪ್ರಯತ್ನಿಸಬಹುದು. ಹೊಸ ಹೊಸ ಔಷ`Àಗಳನ್ನು ಕಂಡುಹಿಡಿಯುವುದು ರೀಸರ್ಚ್ ಅನಾಲಿಸ್ಟ್‍ಗಳ ಪ್ರಮುಖ ಕಾರ್ಯ. ಇದಕ್ಕಾಗಿ ಎಂ.ಫಾರ್ಮಾ ಓದಬೇಕಾಗುತ್ತದೆ. ಫಾರ್ಮಸಿ ಓದಿರುವವರು ಬೋಧಕರಾಗಿಯೂ ಕಾರ್ಯನಿರ್ವಹಿಸಬಹುದು.

ಫಾರ್ಮಾಸ್ಯುಟಿಕಲ್ ಮಾರ್ಕೆಟಿಂಗ್‍ಗೆ ಉತ್ತಮ ಬೇಡಿಕೆಯಿದೆ. ವಿವಿಧ ಆಸ್ಪತ್ರೆಗಳಿಗೆ ಅಥವಾ ಕ್ಲಿನಿಕ್‍ಗಳಿಗೆ ಭೇಟಿ ನೀಡಿ ಅಲ್ಲಿನ ಡಾಕ್ಟರ್‍ಗಳ ಮನವೋಲಿಸಿ ಔಷಧ ಮಾರಾಟ ಮಾಡಿಸುವುದು ಇವರ ಕೆಲಸ. ಮೆಡಿಕಲ್ ರೆಪ್ರಸೆಂಟಿಟೀವ್ ಹುದ್ದೆಗೆ ತುಂಬಾ ಬೇಡಿಕೆಯಿದೆ. ರಾಜ್ಯದಲ್ಲಿ ಸಾಕಷ್ಟು ಸರಕಾರಿ ಮತ್ತು ಖಾಸಗಿ ಕಾಲೇಜುಗಳು ಫಾರ್ಮಸಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ನೀಡುತ್ತವೆ. ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬೀದರ್ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಫಾರ್ಮಸಿಗೆ ಸಂಬಂಧಪಟ್ಟ ಕೋರ್ಸ್‍ಗಳು ಇವೆ. ಇವುಗಳಲ್ಲಿ ಸೂಕ್ತವಾದದ್ದನ್ನು ಆಯ್ಕೆ ಮಾಡಿಕೊಂಡು ಔಷಧ ವಿಭಾಗದಲ್ಲಿ ನಿಮ್ಮ ಕರಿಯರ್ ರೂಪಿಸಿಕೊಳ್ಳಬಹುದು.

***

ಮುಗಿಸುವ ಮೊದಲು

ನಿಮ್ಮ ಭವಿಷ್ಯ ಬದಲಿಸಲು ಇವಿಷ್ಟೇ ಉದ್ಯೋಗಗಳು ಇರುವುದಲ್ಲ. ಫೋಟೊಗ್ರಫಿ, ಇಂಟಿರಿಯರ್ ಡಿಸೈನಿಂಗ್, ಪ್ರವಾಸೋದ್ಯಮ, ಅನಿಮೇಷನ್, ಇವೆಂಟ್ ಮ್ಯಾನೇಜ್‍ಮೆಂಟ್, ಕೃಷಿ, ತೋಟಗಾರಿಕೆ, ಅನಿಮೇಷನ್, ಗೇಮ್ ವಿನ್ಯಾಸ, ನಟನೆ, ಕಲೆ, ಸಿನಿಮಾ, ಟೆಕ್ನಿಕಲ್ ರೈಟರ್, ವಿಡಿಯೋ ಎಡಿಟರ್, ಬ್ಯಾಂಕ್‍ನಲ್ಲಿ ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳು, ಕಾರ್ಟೊಗ್ರಾಫರ್, ಬ್ಯೂಟಿಷಿಯನ್, ಡಯೆಟಿಷಿಯನ್, ಗಗನಸಖಿ, ಕಾಲ್‍ಸೆಂಟರ್, ಕಂಪ್ಯೂಟರ್ ಪ್ರೋಗ್ರಾಮರ್, ವೆಬ್ ಮಾಸ್ಟರ್, ನೆಟ್‍ವರ್ಕ್ ಅಡ್ಮಿನಿಸ್ಟ್ರೇಟರ್, ಅನಾಲಿಸ್ಟ್, ಸಮಲೋಚಕರು, ಕಾಸ್ಟ್ ಅಕೌಂಟೆಂಟ್, ಆರ್ಕಿವಿಸ್ಟ್, ನ್ಯಾನೊ ಎಂಜಿನಿಯರ್, ರೊಬೊಟಿಕ್ಸ್ ಸೇರಿದಂತೆ ಇನ್ನೂ ಹಲವು ಕ್ಷೇತ್ರಗಳು, ಉದ್ಯೋಗಗಳು ಇವೆ. ಕರ್ನಾಟಕ ಬೆಸ್ಟ್‌ ತನ್ನದೇ ಮಿತಿಯಲ್ಲಿ ಸುಮಾರು 80 ಕರಿಯರ್ ಆಯ್ಕೆಗಳನ್ನು ನಿಮ್ಮ ಮುಂದಿಟ್ಟಿದೆ.

ರ್ಯಾಂಕ್ ಹಿಂದೆ ಸಾಗುವ ಧಾವಂತದ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಮಗೆ ಸೂಕ್ತವಾದ ಕರಿಯರ್ ಅನ್ನು ಪಡೆಯಲು ಪಣತೊಟ್ಟರೆ ಅದನ್ನು ಪಡೆದೇ ಪಡೆಯುವಿರಿ. ಯಾವುದೇ ರ್ಯಾಂಕ್ ಪಡೆಯದೇ ಇದ್ದರೂ ಅಭೂತಪೂರ್ವ ಸಾಧನೆ ಮಾಡುವ ಅವಕಾಶಗಳು ಈ ಭೂಮಿಯ ಮೇಲೆ ಇದೆ. ಫೇಲ್ ಆದವರೂ ಜಗತ್ತು ಬೆರಗುಮಾಡುವಂತಹ ಸಾಧನೆಯನ್ನು ಮಾಡಬಹುದು. ಫೇಸ್‍ಬುಕ್ ಕಟ್ಟಿದ ಜುಕರ್‍ಬರ್ಗ್, ಕೋಟ್ಯಧಿಪತಿಗಳಾಗಿ ಮೆರೆಯುತ್ತಿರುವ ಬಿಲ್‍ಗೇಟ್ಸ್, ಆಲಿಬಾಬಾದ ಜಾಕ್ ಮಾ ಎಲ್ಲರೂ ಒಂದು ಕಾಲದಲ್ಲಿ ಕಷ್ಟಪಟ್ಟವರೇ.

ಕಾಲದ ಚಕ್ರದಲ್ಲಿ ನೇಪತ್ಯಕ್ಕೆ ಸರಿಯುವ ಉದ್ಯೋಗಗಳನ್ನು ನಿಮ್ಮ ಕರಿಯರ್ ಆಯ್ಕೆ ಮಾಡಿಕೊಳ್ಳಬೇಡಿ. ಉತ್ತಮ ಭವಿಷ್ಯವಿರುವ ಭವಿಷ್ಯದ ಉದ್ಯೋಗಗಳನ್ನು ಮತ್ತು ಬೇಡಿಕೆಯಲ್ಲಿರುವ ವರ್ತಮಾನದ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಿರಿ.

ನನ್ನ ಶಿಕ್ಷಣ ಎಸ್‍ಎಸ್‍ಎಲ್‍ಸಿ, ಪಿಯುಸಿಗೆ, ಪದವಿಗೆ ಮುಗೀತು. ಮುಂದೆ ಓದಲಾಗಲಿಲ್ಲ ಎಂದು ಪರಿತಪಿಸಬೇಡಿ. ಅದರ ಬದಲು ಏನಾದರೂ ಕರಿಯರ್ ಸಾಧನೆ ಮಾಡಲು ಪ್ರಯತ್ನಿಸಿ. ಹೊಸ ಕೌಶಲಗಳನ್ನು ಕಲಿತು ಸಾಧಿಸಿ. ದಯವಿಟ್ಟು ಏನು ಮಾಡದೆ ಸುಮ್ಮನಿರಬೇಡಿ. ಯಾಕೆಂದರೆ, ಮುಂದೊಂದು ದಿನ ನಿಮ್ಮ ಮಕ್ಕಳು “ನನ್ನ ಅಪ್ಪ/ಅಮ್ಮ ಏನೂ ಸಾಧಿಸಿಲ್ಲ” ಎಂದು ಹೇಳಬಾರದು. ಅವಕಾಶಗಳ ಸದ್ಭಳಕೆ ಮಾಡಿಕೊಳ್ಳಲಿ. ನಿಮ್ಮ ಭವಿಷ್ಯ ಬಂಗಾರವಾಗಲಿ. ಶುಭವಾಗಲಿ.

–              ಪ್ರೀತಿಯಿಂದ ಪ್ರವೀಣ್ ಚಂದ್ರ ಪುತ್ತೂರು

Karnataka Best
Karnatakabest Website
error: Content is protected !!