2021ರ ಬಹುಬೇಡಿಕೆಯ ಡಿಜಿಸ್ಕಿಲ್: ಯಶಸ್ಸು ನೀಡುವ ಕೋರ್ಸ್ ಕಲಿಯಿರಿ

ಈ ವರ್ಷ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಸವಾಲಿನ ವರ್ಷ. ಸ್ಟಡಿ ಫ್ರಮ್‍ ಹೋಮ್‍, ಶಾಲೆ, ಕಾಲೇಜಿಗೆ ಹೋಗುವ ಕಷ್ಟವಿಲ್ಲ… ಇತ್ಯಾದಿಗಳು ಒಂದು ರೀತಿಯ ಖುಷಿ ನೀಡಿದ್ದರೂ, ಇದರ ಪರಿಣಾಮ ನಿರೀಕ್ಷೆಗಿಂತ ಭೀಕರವಾಗಿಯೇ ಇದೆ. ಮೊದಲನೆಯದಾಗಿ ಕೋರ್ಸ್‍ಗಳನ್ನು ಮುಗಿಸಿಕೊಂಡು ಹೊರಬಂದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುವುದೇ ಕಷ್ಟ ಎನ್ನುವ ಪರಿಸ್ಥಿತಿ ಇದೆ. ಈಗಾಗಲೇ ಪರಿಣಿತಿ ಪಡೆದ ಉದ್ಯೋಗಿಗಳ ಜಾಬ್‍ ಕಟ್‍ ಮಾಡಿ ತಣ್ಣಗೆ ಕುಳಿತ ಕಂಪನಿಗಳು ಹೊಸ ಹುಡುಗರನ್ನು ನೇಮಕ ಮಾಡಿಕೊಳ್ಳುವುದೇ ಎಂಬ ಪ್ರಶ್ನೆಗೆ ಉತ್ತರ ದೊರಕಬೇಕಿದೆ.

ಉದ್ಯೋಗ ತಜ್ಞರ ಪ್ರಕಾರ, ಈಗ ಜಗತ್ತು ನಿಮ್ಮಲ್ಲಿರುವ ಕೌಶಲ್ಯಗಳನ್ನು ನೋಡಿ ನೇಮಕ ಮಾಡಿಕೊಳ್ಳುತ್ತಿದೆ. ನಿಮ್ಮ ತರಗತಿಯ ಸರ್ಟಿಫಿಕೇಟ್‍ಗಳು ಅವರಿಗೆ ಅವಶ್ಯಕತೆಯಿಲ್ಲ. ಕಂಪನಿಗೆ ಬೇಕಾದ ಕೌಶಲ್ಯಗಳು ನಿಮ್ಮಲ್ಲಿವೆಯೇ ಎಂದು ನೋಡುತ್ತವೆ. ಕೌಶಲ್ಯವಿದ್ದರೆ ಮಾತ್ರ ಉದ್ಯೋಗ ಎಂಬ ಮಾನದಂಡವು ಈಗಾಗಲೇ ಉದ್ಯೋಗಗದಲ್ಲಿರುವವರಿಗೂ ಅನ್ವಯಿಸುತ್ತದೆ. ಹೊಸದಾಗಿ ಬರುವವರಿಗೂ ಅನ್ವಯಿಸುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ಬೇಡಿಕೆಯ ಸ್ಕಿಲ್ಸ್ ಕಲಿಯಿರಿ

ನೀವು ಎಂಜಿನಿಯರಿಂಗ್‍ ಸೇರಿದಂತೆ ಯಾವುದೇ ಕೋರ್ಸ್ ಮಾಡುತ್ತ ಇರಿ. ಹೆಚ್ಚುವರಿಯಾಗಿ ಬಹುಬೇಡಿಕೆ ಇರುವ ಯಾವುದಾದರೂ ಒಂದು ಸ್ಕಿಲ್‍ ಅನ್ನು ಪರ್ಯಾಯವಾಗಿ ಕಲಿಯಿರಿ ಎನ್ನುತ್ತಾರೆ ಕರಿಯರ್ ತಜ್ಞರು. ಅಂದರೆ, ನೀವು ಭವಿಷ್ಯದಲ್ಲಿ ಎಂಜಿನಿಯರ್‍ ಆಗ ಬಯಸಿದರೂ ಅಲ್ಪಾವಧಿಯಲ್ಲಿ ಉದ್ಯೋಗ ಪಡೆಯಲು ಮತ್ತು ಈಗಿನ ಅವಶ್ಯಕತೆ ನೀಗಿಸಲು ಉದ್ಯೋಗ ದೊರಕುವಂತಹ ಅಲ್ಪಾವಧಿಯ ಕೋರ್ಸ್‍ ಅನ್ನು ಕಲಿಯಲು ಆದ್ಯತೆ ನೀಡಬೇಕು ಎನ್ನುವುದು ಅವರು ನೀಡುವ ಟಿಪ್ಸ್.

ಡಿಜಿಸ್ಕಿಲ್ಸ್ ನಿಮ್ಮಲ್ಲಿದೆಯೇ?

2021ರ ಬಹುಬೇಡಿಕೆಯ ಕೋರ್ಸ್‍ಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕೂಡ ಒಂದಾಗಿದೆ. ಪ್ರತಿಯೊಂದು ಕಂಪನಿಗಳಿಗೂ ಡಿಜಿಟಲ್ ಮಾರ್ಕೆಟಿಂಗ್ ಅನ್ನು ಅನುಸರಿಸುವುದು ಅವಶ್ಯ ಎನ್ನುವ ಸ್ಥಿತಿ ಎದುರಾಗಿದೆ. 2021 ಮತ್ತು ಬಳಿಕ ಯಶಸ್ಸು ಪಡೆಯಬೇಕಾದರೆ ಈಗಲೇ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳನ್ನು ಅಳವಡಿಸಿಕೊಳ್ಳಿ ಎಂದು ಜಗತ್ತೇ ಹೇಳುತ್ತಿದೆ. ಸಾಂಪ್ರದಾಯಿಕ ಮಾರುಕಟ್ಟೆ ಪ್ರಚಾರಕರಿಗಿಂತ ಡಿಜಿಟಲ್ ಮಾರ್ಕೆಟರ್‍ ಇಂದು ಅತ್ಯಧಿಕ ಬೇಡಿಕೆ ಪಡೆದುಕೊಳ್ಳುತ್ತಿದ್ದಾರೆ. ಫೇಸ್‍ಬುಕ್ ‍ಕ್ಯಾಂಪೈನ್ ಇರಬಹುದು, ಇನ್‍ಸ್ಟಾಗ್ರಾಂನಲ್ಲಿ ಪ್ರಚಾರ ಮಾಡುವುದು ಇರಬಹುದು… ಪ್ರತಿಯೊಂದು ಬಿಸ್ನೆಸ್ ಕೂಡ ಇಂದು ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಗ್ರಾಹಕರನ್ನು ತಲುಪಲು ಪ್ರಯತ್ನಿಸುತ್ತಿವೆ.

ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಕರ್ನಾಟಕದ ಪ್ರಮುಖ ಡಿಜಿಟಲ್‍ ಕೌಶಲ್ಯ ತರಬೇತಿ ಕೇಂದ್ರವಾದ ಬಾಲ್ಕ್ ಡಿಜಿಸ್ಕಿಲ್‍ಗೆ ಹೆಸರು ನೋಂದಾಯಿಸುತ್ತಿದ್ದಾರೆ. ಬಾಲ್ಕ್ ಡಿಜಿಟಲ್ ಸ್ಕಿಲ್ ಸಂಸ್ಥೆಯ ಪ್ರಕಾರ “ಈ ವರ್ಷ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‍ಗೆ ಸೇರಿದ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಶೇಕಡ 120ರಷ್ಟು ವೃದ್ಧಿಯಾಗಿದೆ. ನಮ್ಮ ಸಂಸ್ಥೆಯ ಬಹುಬೇಡಿಕೆಯ ಸ್ಕಿಲ್ ‍ಆಗಿ ಈ ವರ್ಷ ಪರಿಣಮಿಸಿದೆ’ ಎಂದು ಹೇಳಿದೆ.

ಬಾಲ್ಕ್ ಡಿಜಿಸ್ಕಿಲ್ಸ್ ವಿಶೇಷತೆಗಳೇನು?

  • ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್‍ನ ಪ್ರತಿಯೊಂದು ಸೂಕ್ಷ್ಮಗಳನ್ನೂ ಅತ್ಯಂತ ವಿವರವಾಗಿ ಕಲಿಸಿಕೊಡಲಾಗುತ್ತದೆ. ಮುಖ್ಯವಾಗಿ ಈಗಾಗಲೇ ಕಂಪನಿಗಳಲ್ಲಿ ಹಲವು ವರ್ಷ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಗಳಲ್ಲಿ ಪರಿಣತಿ ಪಡೆದವರನ್ನೇ ಬೋಧಕರನ್ನಾಗಿ ನೇಮಕಮಾಡಲಾಗಿದೆ. ಅವರ ಅನುಭವಗಳು ಈ ಕ್ಷೇತ್ರದಲ್ಲಿ ಹೊಸತನ್ನು ಕಲಿಯಲು ವಿದ್ಯಾರ್ಥಿಗಳಿಗೆ ನೆರವು ಪಡೆಯಲಿದೆ. ಬಾಲ್ಕ್ ಡಿಜಿಟಲ್ ಸ್ಕಿಲ್ ನ ವಿವಿಧ ಕೋರ್ಸ್‍ಗಳ ಸಂಪೂರ್ಣ ಸಿಲೆಬಸ್ ನೋಡಲು ಇಲ್ಲಿ ಭೇಟಿ ನೀಡಬಹುದು.
  • ಈಗ ಡಿಜಿಟಲ್ ಮಾರ್ಕೆಟಿಂಗ್‍ ಅತ್ಯಂತ ದುಬಾರಿ ಕೋರ್ಸ್‍ಗಳಲ್ಲಿ ಒಂದಾಗಿದೆ. ಒಂದು ಲಕ್ಷ ರೂಪಾಯಿವರೆಗೂ ಕೆಲವು ಸಂಸ್ಥೆಗಳು ಫೀಸ್‍ ನಿಗದಿಪಡಿಸುತ್ತವೆ. ಆದರೆ, ಬಾಲ್ಕ್ ಡಿಜಿಸ್ಕಿಲ್‍ ಅತ್ಯಂತ ಕಡಿಮೆ ದರದಲ್ಲಿ ಅತ್ಯಧಿಕ ಗುಣಮಟ್ಟದ ಕೋರ್ಸ್‍ಗಳನ್ನು ನೀಡುತ್ತ ಬಂದಿದೆ. ಈಗಾಗಿ ಬಡ ವಿದ್ಯಾರ್ಥಿಯೂ ಈ ಕೋರ್ಸ್‍ ಕಲಿತು ಸಾಧನೆ ಮಾಡಬಹುದು.
  • ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ಬಾಲ್ಕ್ ಡಿಜಿಸ್ಕಿಲ್ಸ್ ಕೌಶಲ್ಯ ತರಬೇತಿ ಕೇಂದ್ರಗಳಿವೆ. ಬಸವನಗುಡಿ ಬಾಲ್ಕ್, ಮಲ್ಲೇಶ್ವರಂ ಬಾಲ್ಕ್, ಶೇಷಾದ್ರಿಪುರಂ ಬಾಲ್ಕ್ ಮತ್ತು ರಾಜಾಜಿನಗರ ಬಾಲ್ಕ್ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಡಿಜಿಸ್ಕಿಲ್ಸ್‍ ಕಲಿಯಬಹುದಾಗಿದೆ. ಈ ಕೌಶಲ್ಯ ತರಬೇತಿ ಕೇಂದ್ರಗಳ ವಿಳಾಸವನ್ನು ಈ ಲಿಂಕ್ ಮೂಲಕ ಪಡೆಯಬಹುದು.
  • ಬಾಲ್ಕ್ ಡಿಜಿಸ್ಕಿಲ್ಸ್ ನ ಸಂಪೂರ್ಣ ವಿವರವನ್ನು ಈ ಲಿಂಕ್ ಮೂಲಕ ಪಡೆಯಬಹುದು.

ಕರ್ನಾಟಕ ಬೆಸ್ಟ್ ನಲ್ಲಿ ವಿವಿಧ ಕರಿಯರ್ ಮಾರ್ಗದರ್ಶಿ ಲೇಖನಗಳಿದ್ದು, ಆಸಕ್ತರು ಈ ಕೊಂಡಿಯನ್ನು ಕ್ಲಿಕ್ ಮಾಡುವ ಮೂಲಕ ಓದಬಹುದು.

Karnataka Best
Karnatakabest Website
error: Content is protected !!