ನಗುವ ಬುದ್ಧ ಮನೆಯ ಯಾವ ದಿಕ್ಕಿನಲ್ಲಿ ಇಟ್ಟರೆ ಉತ್ತಮ ?

By | 22/10/2021

ಫೆಂಗ್ ಶೂಯಿಯನ್ನು ಚೀನಾದ ವಾಸ್ತುಶಾಸ್ತ್ರವೆಂದು ಪರಿಗಣಿಸಲಾಗಿದೆ. ಮನೆ ವಸ್ತುಗಳು ಅಥವಾ ಯಾವುದೇ ಸ್ಥಳದ ಋಣಾತ್ಮಕ ಶಕ್ತಿಯನ್ನು ಧನಾತ್ಮಕ ಶಕ್ತಿಯಾಗಿ ಪರಿವರ್ತಿಸಲು ಫೆಂಗ್ ಶೂಯಿಯನ್ನು ಬಳಸಲಾಗುತ್ತದೆ. ಫೆಂಗ್ ಶೂಯಿಯನ್ನು ಮನೆ ಮತ್ತು ಅದೃಷ್ಟಕ್ಕೆ ಮಂಗಳಕರವೆಂದು ಪರಿಗಣಿಸಲಾಗಿದೆ. ಫೆಂಗ್ ಶೂಯಿ ಪ್ರಕಾರ ಅದೃಷ್ಟಕ್ಕಾಗಿ ಕೆಲವೊಂದು ‌ವಸ್ತುಗಳನ್ನು ಇಡಲಾಗುತ್ತದೆ. ಅವುಗಳಲ್ಲಿ ಒಂದು ಲಾಫಿಂಗ್ ಬುದ್ಧ.

ನಗುವ ಬುದ್ಧ ಸಂತೋಷ, ತೃಪ್ತಿ ‌ಮತ್ತು ಸಮೃದ್ಧಿಯ ಸಂಕೇತ. ಇದನ್ನು ಚೀನೀ ಭಾಷೆಯಲ್ಲಿ ‘ ಬುಡೈ’ ಎಂದು ಕರೆಯಲಾಗುತ್ತದೆ. ಲಾಫಿಂಗ್ ಬುದ್ಧನ ಹೊಟ್ಟೆಯನ್ನು ಯಾರಾದರೂ‌ ಉಜ್ಜಿದರೆ, ಅವನು ಅದೃಷ್ಟ ಮತ್ತು ಸಂಪತ್ತನ್ನು ಪಡೆಯುವಲ್ಲಿ ಜಯಶೀಲನಾಗುತ್ತಾನೆ ಎಂದು ನಂಬಲಾಗಿದೆ. ಲಾಫಿಂಗ್ ಬುದ್ಧನನ್ನು ಅದೃಷ್ಟದ ಏಳು ಜಪಾನಿನ‌ ಶಿಂಟೋ‌ ದೇವತೆಗಳಲ್ಲಿ‌ ಒಬ್ಬನೆಂದು ಪರಿಗಣಿಸಲಾಗಿದೆ.

ನಗುವ ಬುದ್ಧನ ಪ್ರತಿಮೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಜೀವನದಲ್ಲಿ ಅಸಮತೋಲನ ನಿವಾರಣೆಯಾಗಿ ಶಾಂತಿ ನೆಲೆಸುತ್ತದೆ. ನಗುವ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಕಾರಣವೇನೆಂದರೆ ಇದು ಜೀವನದಲ್ಲಿ ಇರುವ ಹಾಗೂ ಬರುವ ಎಲ್ಲಾ ದುಃಖಗಳನ್ನು ತೆಗೆದು ಹಾಕುತ್ತದೆ. ಇದನ್ನು ಸರಿಯಾದ ಸ್ಥಳದಲ್ಲಿ ಇಡುವುದು ಬಹಳ ಮುಖ್ಯ. ಮನೆ ಇರಬಹುದು ಅಥವಾ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಬರುವಂತೆ ನಗುವ ಬುದ್ಧನನ್ನು ಮನೆಯಲ್ಲಿ ಯಾವ ಸ್ಥಿತಿಯಲ್ಲಿ ಇಡಬೇಕು ಎಂಬುದನ್ನು ಇಲ್ಲಿ ತಿಳಿಯೋಣ.

ಶಾಂತಿಗಾಗಿ ನಗುವ ಬುದ್ಧನ ಪ್ರತಿಮೆಯನ್ನು ‌ಮನೆಯ‌ ಅಧ್ಯಯನ ಕೊಠಡಿಯಲ್ಲಿ ಧ್ಯಾನದ ಸ್ಥಿತಿಯಲ್ಲಿ ಇಡಬೇಕು. ಜೀವನದಲ್ಲಿ ಬರುವ ಯಾವುದೇ ಒತ್ತಡವನ್ನು ಉತ್ತಮವಾಗಿ ನಿರ್ವಹಿಸಲು ಇದು ಸಹಾಯ ಮಾಡುತ್ತದೆ.

ದೇವಸ್ಥಾನ, ಮಲಗುವ ಕೋಣೆ ಅಥವಾ ಮನೆಯ ಅಧ್ಯಯನ ಕೊಠಡಿಯಲ್ಲಿ ‌ಧ್ಯಾನದಲ್ಲಿರುವ ಬುದ್ಧನ ವಿಗ್ರಹವನ್ನು ಇಡಬಹುದು. ವಾಸಿಸುವ ಕೋಣೆಯ‌ ಪೂರ್ವ ದಿಕ್ಕಿನಲ್ಲಿ ಇರಿಸುವುದರಿಂದ ಸಂತೋಷ ನೆಲಸಲಿದೆ.

ಶಕ್ತಿಯ ಸಂಕೇತವಾಗಿ ಡ್ರ್ಯಾಗನ್ ಆಮೆಯ ಮೇಲೆ ನಗುವ ಬುದ್ಧ ಶಕ್ತಿಯ ಸಂಕೇತವಾಗಿದೆ. ಇದರಿಂದ ಮನೆಗೆ ಆದಾಯ ಮತ್ತು ವೃತ್ತಿಯ ಅಭಿವೃದ್ಧಿಗೆ ಸಹಾಯವಾಗುತ್ತದೆ. ಕಚೇರಿಯಲ್ಲಿ ‌ಮೇಜಿನ ಮೇಲೆ ಇಡುವುದರಿಂದ ವ್ಯಾಪಾರದ ‌ಮೇಲೆ ಉತ್ತಮ ಪರಿಣಾಮ ‌ಬೀರಬಹುದು.

‌ನಗುವ ಬುದ್ಧ ದೇವರಿಗೆ ಸಮ. ಈ ವಿಗ್ರಹವನ್ನು ಅಡುಗೆ ಮನೆ, ಸ್ನಾನಗೃಹ ಅಥವಾ ಶೌಚಾಲಯದಲ್ಲಿ ಇಟ್ಟುಕೊಳ್ಳಬಾರದು. ಫೆಂಗ್ ಶೂಯಿ ಪ್ರಕಾರ, ಈ ಸ್ಥಳಗಳಲ್ಲಿ ‌ಲಾಫಿಂಗ್ ಬುದ್ಧನನ್ನು ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಮನೆಯ ನೆಲದ ಮೇಲೆ ನಗುವ ಬುದ್ಧನನ್ನು ಎಂದಿಗೂ ಇಡಬಾರದು.

Leave a Reply

Your email address will not be published. Required fields are marked *