ಪ್ರವೀಣ ಅನ್ನೊ ಹೆಸರಿಗೆ ಪ್ರೈಮರಿ ಟೀಚರ್ ಚಂದ್ರ ಸೇರಿಸಿದ ನಂತರ ನನ್ನ ಹೆಸರು “ಪ್ರವೀಣ ಚಂದ್ರ”. ಏನಾದರೂ ಬರೆದರೆ(?) ಊರಿನ ಮೋಹದಿಂದ ಪ್ರವೀಣ ಚಂದ್ರನಿಗೆ ಪುತ್ತೂರು ಜೊತೆಯಾಗುತ್ತದೆ.
ಕಲಿತದ್ದು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಬೆಂಗಳೂರಿನಲ್ಲಿ. ಆರಂಭದ ವರ್ಷ ಟೈಮ್ಸ್ ಆಫ್ ಇಂಡಿಯಾ ಕನ್ನಡದಲ್ಲಿ, ನಂತರ ಅದೇ ಸಂಸ್ಥೆಯ ವಿಜಯ ನೆಕ್ಸ್ಟ್ ವಾರಪತ್ರಿಕೆಯಲ್ಲಿ ಉಪಸಂಪಾದಕ.
ಓದೋದು ಇಷ್ಟ. ಬರೆಯೋದು ಕೂಡ. ಬ್ಲಾಗ್ ನಲ್ಲಿ ಯಾಕೋ ಗಂಭೀರವಾಗಿ ಬರೆಯಲಾಗುತ್ತಿಲ್ಲ. ವೈಯಕ್ತಿಕ ಮಾತುಗಳೇ ಜಾಸ್ತಿ. ನೀವು ಸಹಿಸಿಕೊಳ್ಳಿ.
ಪ್ರೀತಿಯಿಂದ ಪ್ರವೀಣ ಚಂದ್ರ