ವೈಮಾನಿಕ ಎಂಜಿನಿಯರಿಂಗ್: ಶಿಕ್ಷಣ ಮತ್ತು ಕರಿಯರ್ ಹೇಗೆ?

By | 18/10/2019
Aerospace careers course information in kannada

ಬಹುತೇಕರಿಗೆ ವಿಮಾನವೆಂದರೆ ಏನೋ ಆಕರ್ಷಣೆ. ಕೆಲವರಿಗೆ ವಿಮಾನದ ಪೈಲೆಟ್ ಆಗುವ ಕನಸು. ಇನ್ನು ಕೆಲವರಿಗೆ ವಿಮಾನದೊಳಗೆ ಆತಿಥ್ಯ ನೀಡುವ ಗಗನಸಖಿ ಇತ್ಯಾದಿ ಕ್ಯಾಬಿನ್ ಕ್ರ್ಯೂ ಕೆಲಸ ಅಚ್ಚುಮೆಚ್ಚು. ಇನ್ನು ಕೆಲವರಿಗೆ ವಿಮಾನ ಕಟ್ಟುವ, ಬಿಚ್ಚುವ ಅಥವಾ ಹೊಸತನ್ನು ಅನ್ವೇಷಿಸುವ ಟೆಕ್ನಿಕಲ್ ವಿಭಾಗ ಇಷ್ಟ. ಇಂತವರು ಹೆಚ್ಚಾಗಿ ಏರೋಸ್ಪೇಸ್ ಎಂಜಿನಿಯರಿಂಗ್ (aerospace engineering) ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಎಂಜಿನಿಯರಿಂಗ್‍ನಲ್ಲೇ ಹೆಚ್ಚು ಸವಾಲಿನಿಂದ ಕೂಡಿದ ಎಂಜಿನಿಯರಿಂಗ್ ವಿಭಾಗ ಎಂದೇ ಹೆಸರುವಾಸಿಯಾಗಿದೆ.

[rml_read_more]

ವಿಮಾನಯಾನ, ಬಾಹ್ಯಾಕಾಶ ಮತ್ತು ರಕ್ಷಣಾ ವ್ಯವಸ್ಥೆಗಳಿಗೆ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗ ಮಾಡುತ್ತದೆ. ಹೈಟೆಕ್ ಸಿಸ್ಟಮ್‍ಗಳನ್ನು ವಿನ್ಯಾಸ ಮಾಡುವುದು ಮತ್ತು ತಯಾರಿಸುವುದು ಸಹ ಈ ಎಂಜಿನಿಯರಿಂಗ್‍ನಲ್ಲಿ ಸೇರಿದೆ. ವೈಮಾನಿಕ ಎಂಜಿನಿಯರ್‍ಗೆ ಮ್ಯಾನುಯಲ್, ಟೆಕ್ನಿಕಲ್ ಮತ್ತು ಮೆಕ್ಯಾನಿಕಲ್ ಸಾಮಾರ್ಥ್ಯ ಇರಬೇಕಾಗುತ್ತದೆ.

ವಾಣಿಜ್ಯ ವಿಮಾನಗಳು ಮತ್ತು ಬಾಹ್ಯಾಕಾಶ ನೌಕೆಗಳನ್ನು ವಿನ್ಯಾಸ ಮಾಡುವುದು, ನಿರ್ಮಾಣ ಮಾಡುವುದು, ಅಭಿವೃದ್ಧಿಪಡಿಸುವುದು, ಪರೀಕ್ಷೆ ನಡೆಸುವುದು ಮತ್ತು ನಿರ್ವಹಣೆ ಮಾಡುವುದು ಇವರ ಪ್ರಮುಖ ಕೆಲಸಗಳಾಗಿವೆ. ವೈಮಾನಿಕ ಎಂಜಿನಿಯರಿಂಗ್‍ನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಮತ್ತು ಆಸ್ಟ್ರೋನಾಟಿಕಲ್ ಎಂಜಿನಿಯರಿಂಗ್ ಎಂಬ ಎರಡು ವಿಭಾಗಳಿವೆ. ಏರೊನಾಟಿಕಲ್ ಎಂಜಿನಿಯರಿಂಗ್ ವಿಮಾನಗಳು, ಕ್ಷಿಪಣಿಗಳು ಮತ್ತು ಹೆಲಿಕಾಪ್ಟರ್‍ಗೆ ಸಂಬಂಧಪಟ್ಟದ್ದಾಗಿದೆ. ಆಸ್ಟ್ರೊನಾಟಿಕಲ್ ಎಂಜಿನಿಯರಿಂಗ್ ಎನ್ನುವುದು ಬಾಹ್ಯಾಕಾಶ ನೌಕೆಗಳು, ರಾಕೆಟ್‍ಗಳು ಮತ್ತು ಬಾಹ್ಯಾಕಾಶ ನಿಲ್ದಾಣಕ್ಕೆ ಸಂಬಂಧಿಸಿದ್ದಾಗಿದೆ.

ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಓದಿದವರು ಬ್ಯಾಚುಲರ್ ಪದವಿಗೆ ಸೇರಬಹುದು. ಐಐಟಿಗಳಿಗೆ ಸೇರಲು ಐಐಟಿ ಜೆಇಇ ಪರೀಕ್ಷೆ ಪಾಸಾಗಿರಬೇಕು. ಸ್ನಾತಕೊತ್ತರ ಪದವಿಗೆ ಸೇರಲು ಬಿ.ಇ/ಬಿ.ಟೆಕ್ ಪಡೆದಿರಬೇಕು. ಪದವಿ ಹಂತದಲ್ಲಿ  ಬ್ಯಾಚುಲರ್ ಆಫ್ ಸೈನ್ಸ್ ಇನ್ ಏರ್‍ಕ್ರಾಫ್ಟ್ ಎಂಜಿನಿಯರಿಂಗ್, ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಇನ್ ಏರೋನಾಟಿಕಲ್ ಎಂಜಿನಿಯರಿಂಗ್, ಟೆಕ್ನಾಲಜಿ ಇನ್ ಏರೋನಾಟಿಕಲ್ ಎಂಜಿನಿಯರಿಂಗ್, ಎಂಜಿನಿಯರಿಂಗ್ ಇನ್ ಏರೋಸ್ಪೇಸ್ ಎಂಜಿನಿಯರಿಂಗ್, ಟೆಕ್ನಾಲಜಿ ಇನ್ ಏರೋಸ್ಪೇಸ್ ಎಂಜಿನಿಯರಿಂಗ್ ಕೋರ್ಸ್‍ಗಳಿವೆ. ಇದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳೂ ಲಭ್ಯ ಇವೆ.

ಸಾಮಾನ್ಯವಾಗಿ ಏರೋಸ್ಪೇಸ್ ಎಂಜಿನಿಯರ್‍ಗಳನ್ನು ಕನ್ಸಲ್ಟೆಂಟ್ಸ್ ಆಗಿ, ಥರ್ಮಲ್ ಡಿಸೈನ್ ಎಂಜಿನಿಯರ್‍ಗಳಾಗಿ, ಮೆಕ್ಯಾನಿಕಲ್ ಡಿಸೈನ್ ಎಂಜಿನಿಯರ್‍ಗಳಾಗಿ, ಏರೋಸ್ಪೇಸ್ ಟೆಕ್ನಾಲಜಿಸ್ಟ್, ಏರ್ ಕ್ರಾಫ್ಟ್ ಪ್ರೊಡಕ್ಷನ್ ಮ್ಯಾನೇಜರ್, ಅಸಿಸ್ಟೆಂಟ್ ಟೆಕ್ನಿಕಲ್ ಆಫೀಸರ್ಸ್, ಏರೋಸ್ಪೇಸ್ ಡಿಸೈನ್ ಚೆಕ್ಕರ್, ಗ್ರಾಜುವೇಟ್ ಎಂಜಿನಿಯರ್ ಟ್ರೈನಿಗಳಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಏರೋಸ್ಪೇಸ್ ಎಂಜಿನಿಯರ್‍ಗಳು ಖಾಸಗಿ ಅಥವಾ ಸಾರ್ವಜನಿಕ ಕಂಪನಿಗಳಲ್ಲಿ ಕೆಲಸ ಪಡೆಯಬಹುದಾಗಿದೆ. ಈ ಪದವಿ ಪಡೆದವರಿಗೆ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಉತ್ತಮ ಉದ್ಯೋಗಾವಕಾಶ ದೊರಕುತ್ತದೆ. ಎಚ್‍ಎಎಲ್, ಡಿಆರ್‍ಡಿಒ, ಇಸ್ರೊ, ನಾಗರಿಕ ವಿಮಾನಯಾನ ಇಲಾಖೆ, ಏರ್ ಇಂಡಿಯಾ, ಇಸ್ರೊ ಇತ್ಯಾದಿಗಳು ಈ ಪದವೀಧರರನ್ನು ಹೆಚ್ಚಾಗಿ ನೇಮಕ ಮಾಡಿಕೊಳ್ಳುತ್ತವೆ.

ಜೀವನದಲ್ಲಿ ಮೊದಲು ನಾವು ಅಂಬೆಗಾಲಿಡಲು ಕಲಿಯಬೇಕು. ನಂತರ ಎದ್ದುನಿಲ್ಲಲು, ಬಳಿಕ ನಡೆದಾಡಲು, ತರುವಾಯ ಓಡಲು ಕಲಿಯಬೇಕು. ನಂತರ ಮಾತ್ರ ನಾವು ಹಾರಲು ಪ್ರಯತ್ನಿಸಬೇಕು.

ಅನಾಮಿಕ

ವಿಜ್ಞಾನಿ ಆಗುವುದು ಹೇಗೆ? ಎಸ್ಎಸ್ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ

Leave a Reply

Your email address will not be published. Required fields are marked *