image curtecy: http://www.gammonindia.com/aos_tep_bridges.

ಕಿಟಕಿಯ ಕಡೆಯಿಂದ ಬೀಸುವ ಚಳಿಗಾಳಿಗೆ ಕಬ್ಬಿಣವೂ ಮಂಜುಗಡ್ಡೆಯಾಗಿತ್ತು. `ಏನು ಚಳಿ ದೇವ್ರೆ’ ಅಂತ ಗೊಣಗುತ್ತ ತಣ್ಣಗಿನ ರೈಲಿನ ಕಬ್ಬಿಣದ ಸೀಟ್‌ ಮೇಲೆ ಮಲಗಲಾರದೇ ತುಕ್ರ ಎದ್ದು ಕುಳಿತುಕೊಂಡ. ಕಿಸೆಯಿಂದ ಬೆಲ್ಟ್‌ ತುಂಡಾಗಿರುವ ಟೈಟಾನ್‌ ಕಂಪನಿಯ ವಾಚ್‌ ತೆರೆದು ಗಂಟೆ ನೋಡಿಕೊಂಡ. ಇನ್ನೂ ಆರೂವರೆಯಷ್ಟೇ. ಏಳುವರೆಗೆ ಮೆಜೆಸ್ಟಿಕ್‌ಗೆ ತಲುಪುವುದಾಗಿ ಆತನಿಗೆ ಗೊತ್ತಿತ್ತು. ಈ ಚಳಿಯಲ್ಲಿ ಜನ ಹೇಗೆ ಬದುಕುತ್ತಾರಪ್ಪ ಅಂದುಕೊಳ್ಳುತ್ತ ರೈಲಿನ ಬಾಗಿಲ ಬಳಿ ಕುಳಿತುಕೊಂಡು ಒಂದು ಬೀಡಿಗೆ ಬೆಂಕಿ ಹಚ್ಚಿದ. ಒಳಗೆ ಹೊಗೆ ಪ್ರವೇಶಿಸಿದಾಗ ಮೈ ಒಂದಿಷ್ಟು ಬಿಸಿಯಾಗಿ ಹಾಯೆನಿಸಿತ್ತು. `ಸಾಬ್‌ ಬೀಡಿ’ ಅಂತ ಮುದುಕನೊಬ್ಬ ಇವನ ಪಕ್ಕ

curtecy: http://images2.just-landed.com/

`ಅಂತು ಕೊನೆಗೂ ಮನೆ ಕಟ್ಟಿಬಿಟ್ರಿ’ ಪಕ್ಕದ ಮನೆಯಾಕೆ ಈಗಷ್ಟೇ ಹೇಳಿದ ಮಾತು ಕಮಲಮ್ಮನಿಗೆ ನೆನಪಾಯಿತು. ಸರಿಯಾದ ಪಂಚಾಗ ಇರುವ ಮನೆಯೊಂದನ್ನು ಕಟ್ಟಬೇಕೆಂದು ಅದೆಷ್ಟು ವರ್ಷದಿಂದ ಕನಸು ಕಾಣುತ್ತಿದ್ದರು. ಹೊಟ್ಟೆ ಬಟ್ಟೆ ಕಟ್ಟಿ ಹಣ ಕೂಡಿಡುತ್ತಿದ್ದರು. ಆದರೆ ಕಾಲ ಕೂಡಿ ಬರಲು ಅದೆಷ್ಟು ವರ್ಷಗಳು ಬೇಕಾಯಿತು. ಒಂದಿಷ್ಟು ಹಣ ಸಂಗ್ರಹವಾದಗ ಯಾವುದಾದರೂ ಕಷ್ಟಗಳು ಎದುರಾಗುತ್ತಿದ್ದವು. ಅವರ ಆರೋಗ್ಯ, ಮಕ್ಕಳ ಓದು, ತೋಟ ಸಮಸ್ಯೆಗಳು ಒಂದೆರಡಲ್ಲ.

ಸ್ವಂತ ಮನೆ ಕಟ್ಟೋಕೆ ತಮ್ಮ ಕಾಲದಲ್ಲಿ ಆಗದಿದ್ದರೂ ಮಕ್ಕಳ ಕಾಲದಲ್ಲಿಯಾದರೂ ನೆರವೇರಿತಲ್ಲ. ಅಂತ ಸಮಧಾನದಿಂದ ಹೊಟ್ಟೆ ಬಟ್ಟೆ ಕಟ್ಟಿ ಕೂಡಿಟ್ಟ 70 ಸಾವಿರ ರೂಪಾಯಿಯನ್ನು ಮಗನ ಕೈಲ್ಲಿಟ್ಟಿದ್ದರು.

ಅಂತು ಕೆಲವು ಲಕ್ಷ ರೂಪಾಯಿಗಳ ಟೇರಸಿ ಮನೆಯೊಂದು ರೆಡಿಯಾಗಿತ್ತು. ಕಮಲಮ್ಮ ಯೋಚಿಸುತ್ತಿದ್ದರು. ಒಂದು ಬಾಗಿಲಿನ ಎರಡು ಕಿಟಕಿಯ ಹಿಂದಿನ ಮನೆ ಪುಟ್ಟದಾಗಿದ್ದರೂ ಏನೋ ತಂಪು ತಂಪಾಗಿತ್ತು. ಆ ಜಗಲಿಯಲ್ಲಿ ಒಂದಿಷ್ಟು ಹೊತ್ತು ಕುಳಿತರೆ ಎಲ್ಲ ನೋವು ಸುಸ್ತು ಮಾಯವಾಗುತ್ತಿತ್ತು. ಆದರೆ, ಈ ಹೊಸ ಮನೆ ಎಲ್ಲ ಸುಖ, ನೆಮ್ಮದಿಗಳನ್ನು ಕಸಿದುಕೊಂಡಂತೆ ಭಾಸವಾಗತೊಡಗಿದೆ.

 

ಒಂದಲ್ಲ, ಎರಡಲ್ಲ, ಹತ್ತಾರು ಬಾರಿ ಲೆಕ್ಕ ಮಾಡಿ ನೋಡಿದೆ. 25ಕ್ಕಿಂತ ಕಡಿಮೆಯಾಗುವುದೇ ಇಲ್ಲ. ಮತ್ತೆ ಮತ್ತೆ ಲೆಕ್ಕ ಮಾಡಿ ಅದೇ ಉತ್ತರ ಬಂದಾಗ ಒಂದಿಷ್ಟು […]

ಮೊನ್ನೆ ನನ್ನ ರಿಲೇಷನ್‌ ಹುಡುಗಿ ಮಮತಾ ಸಿಕ್ಕಾಗ ಸುಮ್ಮಗೆ ಕೇಳಿದ್ದೆ? ಲಾವಣ್ಯ ಹೇಗಿದ್ದಾಳೆ ಅಂತ? ಅವಳಿಗೆ ಎಷ್ಟು ಅಚ್ಚರಿಯಾಯಿತೆಂದರೆ `ನೀನಿನ್ನೂ ಅವಳನ್ನು ಮರೆತಿಲ್ವಾ? ಅಂತ […]

ಭಾಗ 1: ಅವನು ನನಗೆ ಬೇಡ `ಹೇ ಅವನು ನನಗೆ ಇಷ್ಟವಿಲ್ಲ ಕಣೇ’ ಶ್ರಾವ್ಯಳ ಮಾತಿಗೆ ರಂಜಿತ ಬೆಚ್ಚಿಕೇಳಿದಳು. `ಹೇ ಏನಾಗಿದೆ ನಿನಗೆ. ನಿನ್ನೆ […]

ಹೆಚ್ಚಿನವರಿಗೆ ಹೋಂಡಾ ಕಂಪನಿಯ ಸ್ಕೂಟರ್‌ಗಳೆಂದರೆ ಅಚ್ಚುಮೆಚ್ಚು. ಆದರೆ ಅವರಿಗೆ ಕಂಪನಿಯ ಆ್ಯಕ್ಟಿವಾ, ಡಿಯೊ ಮತ್ತು ಏವಿಯೇಟರ್‌ ಸ್ಕೂಟರ್‌ಗಳಲ್ಲಿ ಯಾವುದು ಬೆಟರ್‌ ಎಂಬ ಸಂದಿಗ್ಧತೆ. ಈ […]

ಮುಂಜಾನೆಯ ಚಳಿಯಲ್ಲಿ ಮೈ ಬಿಸಿಯೇರುತ್ತಿದ್ದರೂ ತಣ್ಣಗಿನ ನೀರಲ್ಲಿ ಜಳಕವ ಮಾಡಿ ಓದುತ್ತಿದ್ದೆ….ಕನಸ ಹೆಬ್ಬಾಗಿಲಿನಲ್ಲಿ **** ಕನ್ನಡಿ ನೋಡಿ ಕೆಂಪಾಗುತ್ತಿದ್ದೆ ಕಾಡಿಗೆ ಕಣ್ಣಲ್ಲಿ ಕಾಡುವ ಕನಸುಗಳು […]

ಹೀಗೊಂದು ಕತೆ ‘ಏನಪ್ಪ ಒಂದೇ ಸಮನೆ ಆ ಕಡೆ ನೋಡ್ತಾ ಇದ್ದೀಯಾ. ಬೇಕಾದ್ರೆ ಒಬ್ಳನ್ನು ರೂಂಗೆ ಕರೆದುಕೊಂಡು ಹೋಗು’ ಗೆಳೆಯ ಹಾಸ್ಯ ಮಾಡಿದಾಗ `ಅಲ್ಲ […]

ಕೆಲವು ಕಾರ್‌ಗಳಿವೆ. ದರ ಕೇಳಿದರೆ ನಮ್ಮ ಬ್ಯಾಂಕ್‌ ಅಕೌಂಟನ್ನೇ ಬೆಚ್ಚಿ ಬೀಳಿಸುವಂತಹವು. ಇಂತಹ ಒಂದು ಕಾರ್‌ನ ಬೆಲೆಗೆ ನೂರಾರು ನ್ಯಾನೊ ಕಾರ್‌ ಖರೀದಿಸಬಹುದು. ಸದ್ಯ […]

ಸೃಷ್ಟಿಕರ್ತ ತನ್ನ ಚೆಲುವಾದ ಪತ್ನಿಯೊಂದಿಗೆ ಆಕಾಶ ಮಾರ್ಗದಲ್ಲಿ ಸಂಚರಿಸುತ್ತಿದ್ದ. `ಸಖ ಅಲ್ಲಿ ಕಾಣುವ ಆ ಗ್ರಹದಲ್ಲಿ ಒಂದಿಷ್ಟು ಹೊತ್ತು ವಿಶ್ರಾಂತಿ ಪಡೆಯೋಣವೇ?’ ಸಖಿಯ ಬಯಕೆಯರಿತ […]

ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌ ಎಲ್ಲವೂ ವೈರಸ್‌ಮಯ. ವೈರಸ್‌, ವೋರ್ಮ್ಸ್‌, ಟ್ರೊಜನ್ಸ್‌, ಸ್ಪೈವೇರ್‌, ಆ್ಯಡ್‌ವೇರ್‌, ಮಾಲ್‌ವೇರ್‌ ಹೀಗೆ ಇವುಗಳದ್ದು ವಿರಾಟ್‌ ರೂಪ. ಟೆಕ್‌ಲೋಕದ ಈ ಸೈಲಂಟ್‌ […]