Category Archives: ಕತೆ

ಜೋರು ಮಳೆಗೆ ಹಾಗೆ ಸುಮ್ಮನೆ…

By | 12/08/2012

ನಾಲ್ಕು ದಿನಗಳಿಂದ ಬಿಡದೆ ಜಡಿಮಳೆ ಸುರಿಯುತ್ತಿದೆ ಎಂಬ ಸುದ್ದಿ ಕಿವಿಗೆ ಬಿದ್ದರೂ ಬಿಡದೆ ಬೆಂಗಳೂರಿನಿಂದ ಊರ ಬಸ್ ಹತ್ತಿದೆ. ಕಂಪನಿಯ ವಾರ್ಷಿಕ, ತ್ರೈಮಾರ್ಸಿಕ, ಮಾಸಿಕ, ಪಾಕ್ಷಿಕ ಮುಗಿಯದ ಗೋಲುಗಳ ಗೋಳಿನಿಂದ ತಲೆಯಂತೂ ಚಿಟ್ಟುಹಿಡಿದಿತ್ತು. ಊರಲ್ಲಿ ಬಸ್ ಇಳಿದಾಗ ನನ್ನ ಸ್ವಾಗತಿಸಿದ್ದು ಬಿರುಮಳೆಯೇ. ಬಾ ಮಳೆಯೇ ಬಾ… ಹಾಡು ಗುನುಗುತ್ತ ಒದ್ದೆಮುದ್ದೆಯಾಗಿ ಓಡಿ ಮನೆ ತಲುಪಿದೆ. ಎಷ್ಟೊಂದು ಹಿತವೆನಿಸಿತು ಗೊತ್ತ? ನಮ್ಮೂರ ಮಳೆ ಒಂಚೂರು ಜಾಸ್ತಿ ಸ್ಪೆಷಲ್ ಅಂತ ಅಂದುಕೊಂಡೆ. *** ಹೊಸ ಟಿವಿಯಲ್ಲಿ ಹಳೆ ಚಾನಲುಗಳು ಬೋರು ಹೊಡೆಸಿತ್ತು. ಸೀದಾ ಅಪ್ಪನ… Read More »

ಹನಿಕಥೆ: ಕೂಗು

By | 23/07/2012

“ಗಂಡಸ್ರನ್ನ ಯಾವತ್ತೂ ನಂಬಬಾರದು” ಮತ್ತೊಮ್ಮೆ ಗೊಣಗಿಕೊಂಡಳು.ಪ್ರೀತಿಸಿ ಕೊನೆ ಕ್ಷಣದಲ್ಲಿ ಕೈಕೊಟ್ಟನಲ್ಲ, ಎಷ್ಟೊಂದು ನಂಬಿಬಿಟ್ಟೆ ಅವನನ್ನು….ಹಾಗಂತ ಅವಳು ಯೋಚಿಸುತ್ತಿರುವಾಗಲೇ “ಮಹೂರ್ತಕ್ಕೆ ಹೆಚ್ಚು ಸಮಯವಿಲ್ಲ. ಹುಡುಗಿನ ಕರೆತನ್ನಿ” ಎಂಬ ಪುರೋಹಿತರ ಧ್ವನಿ ಆಕೆಯನ್ನು ಎಚ್ಚರಿಸಿತು. ಹಿರಿಯರನ್ನು ಅನುಸರಿಸಿಕೊಂಡು ಹೋಗಿ ಹಸೆ ಮೇಲೆ ಕುಳಿತು ಮೆಲ್ಲಗೆ ಗಂಡಿನ ಮುಖ ನೋಡಿದಳು. “ತುಂಬಾ ಮುಗ್ದನಂತೆ ಕಾಣುತ್ತಾನೆ, ಎಲ್ಲಾ ಮರೆತು ಇವನ್ನೊಂದಿಗೆ ಚೆನ್ನಾಗಿ ಬಾಳಬೇಕು” ಎಂದುಕೊಂಡಳು. ಆಗ “ಅಮ್ಮಾ” ಎಂದು ಯಾರೋ ಕರೆದಂತಾಯಿತು. ಸುತ್ತಮುತ್ತ ನೋಡಿದಳು. ಯಾವುದೇ ಮಗು ಇರಲಿಲ್ಲ. ಮತ್ತೊಮ್ಮೆ ಮಗದೊಮ್ಮೆ ಅದೇ ಧ್ವನಿ “ಅಮ್ಮಾ.. ಅಮ್ಮಾ…”.… Read More »

ಕಥೆ: ಒಂದು ನಿದ್ದೆಯಿಲ್ಲದ ವಿರಹದ ರಾತ್ರಿ

By | 21/06/2012

ಮೊಬೈಲ್ ತೆರೆದು ನೋಡಿದೆ.  ಸಮಯ ರಾತ್ರಿ ಎರಡಾಗಿತ್ತು. ಥಕ್, ಇವಳ ನೆನಪಿನಿಂದ ನಿದ್ದೆ ಕಳೆದುಕೊಂಡೆ. ಕಣ್ ಮುಚ್ಚಿದರೆ ಅವಳದೇ ನೆನಪು. ಮತ್ತೆ ಮೊಬೈಲ್ ತೆರೆದು ಹಳೆಯ ಸಂದೇಶಗಳನ್ನು ಓದತೊಡಗಿದೆ. ಕಣ್ಣು ಅಸ್ಪಷ್ಟವಾಗತೊಡಗಿತು. ದೂರದಲ್ಲೊಂದು ಹಕ್ಕಿ ನನ್ನತ್ತ ವೇಗವಾಗಿ ಬರುತಿತ್ತು. ** ದಿನಾ ಆ ಗಿಡದ ರೆಂಬೆಯಲ್ಲಿ ಕುಳಿತು ಅರಳಿ ನಿಂತ ಹೂಗಳನ್ನು ನೋಡುವುದು ನನ್ನ ಕಾಯಕ. ಅಂದು ಕೂಡ ಅಲ್ಲೇ ಇದ್ದೆ. ಕೇಳಿತು ಕೀಂವ್ ಕೀಂವ್ ಸದ್ದು. ಮೇಲ್ನೋಡಿದೆ. ಕೇದಗೆ ಗಿಡಕ್ಕೆ ಹಬ್ಬಿಕೊಂಡ ಮಲ್ಲಿಗೆ ಗಿಡದ ಮೇಲೆ ಕುಳಿತ ಪುಟ್ಟಹಕ್ಕಿ ನನ್ನನ್ನೇ… Read More »

ಮುಗಿಯದ ಕಥೆ: ಶ್ರಾವಣಿ

By | 05/05/2012

ಹೊಸದಾಗಿ ಬಂದಿದ್ದಾಳೆ. ಹಾಗಂತ ಸರ್ ಹೇಳಿದಾಗ ಅನಾಸಕ್ತಿಯಿಂದಲೇ ತಲೆಮೇಲೆತ್ತಿ ನೋಡಿದೆ. ಕ್ಯೂಟ್ ಮುಖದ ಸಪೂರ ಸುಂದರಿ ನಿಂತಿದ್ದಳು. ನನ್ನನ್ನೇ ನೋಡುತ್ತಿದ್ದಳು. ಆರು ಸೆಕೆಂಡು ಕಾಲ ಕಣ್ಣುಗಳ ನೋಡುತ್ತಲೇ ಬಾಕಿಯಾದೆವು. ಹಾಗೆ ನಮ್ಮ ಫ್ಯಾಕ್ಟರಿಗೆ ಬಂದವತ್ತೇ ನನ್ನ ಹೃದಯಕ್ಕೆ ಬಲಗಾಲಿಟ್ಟು ಪ್ರವೇಶಿಸಿದವಳ ಹೆಸರು ಶ್ರಾವಣಿ. ಪಟಪಟನೇ ಮಾತನಾಡುವುದನ್ನು ನೋಡುತ್ತಲೇ ನಾನು ಮೂಕನಾಗುತ್ತಿದ್ದೆ. ಕಣ್ಣರಳಿಸಿ ನೋಡಿ ನನ್ನ ಕಣ್ಣಲ್ಲಿ ಕನಸು ತುಂಬುತ್ತಿದ್ದಳು. ಅವಳಿಗೆ ನಮ್ಮ ಫ್ಯಾಕ್ಟರಿಯ ಯಂತ್ರಗಳ ಪರಿಚಯವಿರಲಿಲ್ಲ. ನನಗಂತೂ ಒಂದೆರಡು ವರ್ಷದ ನಂಟು. ಅವಳಿಗೆ ಹೇಳಿಕೊಡುತ್ತಲೇ ಇನ್ನಷ್ಟು ಹತ್ತಿರವಾದೆ. ಸಂಜೆ ಕಾಫಿ ಅಂಗಡಿಲಿ,… Read More »

ಪುಟ್ಟಕಥೆ: ಪ್ರೇಮದ ಹಕ್ಕಿ

By | 17/04/2012

ಹೂದೋಟದಲ್ಲಿದ್ದೆ. ಯಾವುದೋ ರೆಕ್ಕೆ ಬಡಿತದ ಸದ್ದು ಕೇಳಿ ಮೇಲ್ನೋಡಿದೆ. ಮುದ್ದಾದ ಹಕ್ಕಿ ನನ್ನನ್ನೇ ನೋಡುತ್ತಿತ್ತು. ಯಾವೂರ ಹಕ್ಕಿಯಿದು? ಎಲ್ಲಿಂದ ಬಂತು? ಸಣ್ಣದಾಗಿದ್ದರೂ ಚೂಟಿಯಾಗಿದೆಯಲ್ವ ಎಂದೆನಿಸಿತು. ನಾನೂ ಹಕ್ಕಿಯತ್ತ ನೋಡಿ ಕಣ್ ಮಿಟುಕಿಸಿದೆ. ಅದು ಗರಿಗೆದರಿ ಸ್ಮೈಲ್ ಕೊಟ್ಟಿತು. ಪ್ರತಿದಿನ ಹೂದೋಟಕ್ಕೆ ಬರುತ್ತಿದ್ದೆ. ಆ ಹಕ್ಕಿ ನನಗೆ ಒಳ್ಳೆ ಕಂಪೆನಿ ಕೊಡುತ್ತಿತ್ತು. ಹೂದೋಟದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿತ್ತು. ನನ್ನ ಕಣ್ಣುಗಳನ್ನೇ ನೋಡುತ್ತಿತ್ತು. ಹಕ್ಕಿ ಚೆನ್ನಾಗಿರಬೇಕು ಎಂದು ಹೂದೋಟವನ್ನು ಹೆಚ್ಚು ಜತನದಿಂದ ನೋಡಿಕೊಳ್ಳತೊಡಗಿದೆ. ಇತ್ತೀಚೆಗೆ ಹೂದೋಟದಲ್ಲಿ ಬಣ್ಣಬಣ್ಣದ ಹೂವುಗಳು ನಳನಳಿಸುತ್ತಿದ್ದವು. ಹಕ್ಕಿ ಕಾಲ್ಗುಣವಾಗಿರಬೇಕು. ದಿನಕಳೆದಂತೆ… Read More »

ಮಿನಿಕಥೆ: ಮುತ್ತಿನ ಉಂಗುರ

By | 13/08/2011

ಕ್ಲಾಸಿನಲ್ಲಿ ಅವಳೇ ಸುಂದರಿ. 4 ಕಾಲೇಜು ಹುಡುಗರು ಪ್ರೀತಿಸುವುದಾಗಿ ಹಿಂದೆ ಬಿದ್ದಿದ್ದರು. ಆಕೆಗೂ ಒಬ್ಬ ಪ್ರಿಯಕರನ ಅವಶ್ಯಕತೆಯಿತ್ತು. “ನನಗೆ ಮುತ್ತಿನ ಉಂಗುರ ತಂದುಕೊಡಿ. ನನಗೆ ಇಷ್ಟವಾದ ಉಂಗುರ ತರುವರನ್ನು ಪ್ರೀತಿಸ್ತಿನಿ” ಆಕೆಯ ಬೇಡಿಕೆಗೆ ಮನಸ್ಸಲ್ಲೆ ನಕ್ಕು ಎಲ್ಲರೂ ಮನೆಗೆ ಹೋದರು. ಮರುದಿನ ಮೂವರು ತಾವು ತಂದ ಉಂಗುರಗಳನ್ನು ತೋರಿಸಿದರು.