Category Archives: ಹರಟೆ

ಎರಡು ಸಾವಿರದ ಐವತ್ತು, ಜಗತ್ತು ಬದಲಾಗಿಬಿಡ್ತು

*  ಪ್ರವೀಣ ಚಂದ್ರ “ಸುತ್ತಲೂ ಕಾಡು. ನಡುವೆ ನಮ್ಮ ಮನೆ. ಮನೆ ಪಕ್ಕ ಜುಳುಜುಳು ಹರಿವ ಪುಟ್ಟ ನದಿ. ನೂರಾರು ಹಕ್ಕಿಗಳ ಗಾನ. ಎಲ್ಲೆಲ್ಲೂ ತಂಪು. ವಾಹ್, ಎಷ್ಟೊಂದು ಹಿತ’ ಕನಸಲ್ಲಿ ನನ್ನ ಸ್ವಗತವನ್ನು ನಿಲ್ಲಿಸುವಂತೆ ರೋಬೊ ಎಚ್ಚರಿಸಿತು. “ಗುಡ್ ಮಾರ್ನಿಂಗ್, ಶುಭೋದಯ, ಸಮಯ ಆರುಗಂಟೆ, ಎದ್ದೇಳಿ ಮಿಸ್ಟರ್ ಪ್ರವೀಣ್ ಚಂದ್ರ” ಎಂದಿತು. ಅದು ನಮ್ಮ ಮನೆ ಕೆಲಸಗಾರ ರೋಬೊ. “ಇವತ್ತು ಡೇಟ್ ಎಷ್ಟು?’ ಪಿಳಿಪಿಳಿ ಕಣ್ಣುಬಿಟ್ಟು ಕೇಳಿದೆ. ಅದಕ್ಕೆ ರೋಬೊ  “ಎರಡು ಸಾವಿರದ ಐವತ್ತು, ಅಕ್ಟೋಬರ್ ಇಪತ್ತು’ ಎಂದಿತ್ತು. ಸಮಯ… Read More »

ಒಂದೇ ಕಡ್ಡಿಯಿಂದ ಮೂವರು ಸಿಗರೇಟು ಹೊತ್ತಿಸ್ಕೊಬಾರ್ದು!

ಏಕ್ ರೆಗ್ಯುಲರ್, ದೋ ಸ್ಮಾಲ್” ಧ್ವನಿ ಕೇಳಿದಾಕ್ಷಣ ಮುಖ ಮೇಲೆ ಎತ್ತದೆಯೇ ಮೂರು ಸಿಗರೇಟುಗಳನ್ನು ಮುಂದಿಟ್ಟ ಪಾನ್ ಅಂಗಡಿಯ ಹುಳುಕು ಹಲ್ಲಿನ ಹುಡುಗ. ಸ್ಮಂಜಿಗೆ ನೋವಾಗುತ್ತೋ ಎಂಬಂತೆ ಮೆಲ್ಲಗೆ ಸಿಗರೇಟ್ ಬಾಯಿಯೊಳಗಿಟ್ಟು ಅಂಗಡಿಯ ಹರಕು ಡಬ್ಬದ ಮೇಲೆ ಇಟ್ಟಿದ್ದ ಬೆಂಕಿಪೊಟ್ಟಣವನ್ನು ಜೀವನ್ ಕೈಗೆತ್ತಿಕೊಂಡಾಗ ಕಿರಣ್ ಕೂಡ ಸಿಗರೇಟ್ ಬಾಯಲ್ಲಿಟ್ಟುಕೊಂಡು ರೆಡಿಯಾದ. ತನ್ನ ಸಿಗರೇಟಿನ ಮುಂಭಾಗಕ್ಕೆ ಬೆಂಕಿಯಿಟ್ಟು ಕಿರಣ್ ಸಿಗರೇಟಿಗೂ ಜೀವನ್ ಬೆಂಕಿ ಕೊಟ್ಟಾಗ ಪಕ್ಕದಲ್ಲಿದ್ದ ಶ್ರಾವಣ್ ಕೂಡ ಬಾಯಲ್ಲಿ ಸಿಗರೇಟ್ ಇಟ್ಟು ಬೆಂಕಿ ಹತ್ತಿಸಿಕೊಳ್ಳಲು ನೋಡಿದ. ಅರ್ಧ ಉರಿದ ಕಡ್ಡಿಯಲ್ಲಿ ಜೋರಾಗಿ… Read More »

ಜೋರು ಮಳೆಗೆ ಹಾಗೆ ಸುಮ್ಮನೆ…

ನಾಲ್ಕು ದಿನಗಳಿಂದ ಬಿಡದೆ ಜಡಿಮಳೆ ಸುರಿಯುತ್ತಿದೆ ಎಂಬ ಸುದ್ದಿ ಕಿವಿಗೆ ಬಿದ್ದರೂ ಬಿಡದೆ ಬೆಂಗಳೂರಿನಿಂದ ಊರ ಬಸ್ ಹತ್ತಿದೆ. ಕಂಪನಿಯ ವಾರ್ಷಿಕ, ತ್ರೈಮಾರ್ಸಿಕ, ಮಾಸಿಕ, ಪಾಕ್ಷಿಕ ಮುಗಿಯದ ಗೋಲುಗಳ ಗೋಳಿನಿಂದ ತಲೆಯಂತೂ ಚಿಟ್ಟುಹಿಡಿದಿತ್ತು. ಊರಲ್ಲಿ ಬಸ್ ಇಳಿದಾಗ ನನ್ನ ಸ್ವಾಗತಿಸಿದ್ದು ಬಿರುಮಳೆಯೇ. ಬಾ ಮಳೆಯೇ ಬಾ… ಹಾಡು ಗುನುಗುತ್ತ ಒದ್ದೆಮುದ್ದೆಯಾಗಿ ಓಡಿ ಮನೆ ತಲುಪಿದೆ. ಎಷ್ಟೊಂದು ಹಿತವೆನಿಸಿತು ಗೊತ್ತ? ನಮ್ಮೂರ ಮಳೆ ಒಂಚೂರು ಜಾಸ್ತಿ ಸ್ಪೆಷಲ್ ಅಂತ ಅಂದುಕೊಂಡೆ. *** ಹೊಸ ಟಿವಿಯಲ್ಲಿ ಹಳೆ ಚಾನಲುಗಳು ಬೋರು ಹೊಡೆಸಿತ್ತು. ಸೀದಾ ಅಪ್ಪನ… Read More »

ಸ್ನೇಹಿತ ಮೊದಲ ಬಾರಿ ಅತ್ತುಬಿಟ್ಟ

ಬಸ್ ವೇಗವಾಗಿ ಸಾಗುತ್ತಿತ್ತು. ಊರಿಗೆ ಬಂದ ಸಂಭ್ರಮವನ್ನು ಕಿತ್ತುಕೊಂಡ ಆ ಕ್ಷಣದ ಕುರಿತು ಯೋಚಿಸುತ್ತಿದ್ದೆ. ಬಸ್ಸಿನ ಕಿಟಕಿ ಹಾಕಿದ್ದರೂ ಚಳಿ ಕಾಡುತ್ತಿತ್ತು. ಹೃದಯವೂ ತಣ್ಣಗಿತ್ತು. ಅಪದಮನಿ ಅಭಿದಮನಿಗಳೆರಡೂ ನೋವಿನಲ್ಲಿತ್ತು. ಆಪ್ತ ಸ್ನೇಹಿತನೊಬ್ಬನ ಮುಂದೆ ಸ್ವಾಭಿಮಾನದ ಪ್ರಶ್ನೆಯೆದ್ದು ಅಹಲ್ಯೆಯಂತೆ ಕಲ್ಲಾದ ಪರಿಣಾಮವದು. ನನ್ನ ಎದುರು ಮಾತು ಆತನಿಗೆ ಅನಿರೀಕ್ಷಿತವಾಗಿತ್ತು. ನನಗೆ ಅನಿವಾರ್ಯವಾಗಿತ್ತು. *** ಬ್ಯಾಗಿನಲ್ಲಿದ್ದ ಪತ್ರಿಕೆಯೊಂದನ್ನು ಕೈಗೆತ್ತಿಕೊಂಡೆ. ಅಲ್ಲಿ ನಾಗತಿಹಳ್ಳಿ ಸಂಬಂಧದ ಕುರಿತು ಬರೆದಿದ್ದರು. ಸಂಬಂಧವೆಂದರೆ ಬೆಂಕಿ ಮತ್ತು ಚಳಿ ಕಾಯುವವನ ನಡುವಿನ ಅಂತರದಂತೆ. ಚಳಿಯಾಗುತ್ತೆ ಎಂದು ಬೆಂಕಿಯನ್ನು ಮುಟ್ಟುವ ಹಾಗಿಲ್ಲ. ಬೆಂಕಿಗೂ… Read More »