Category Archives: ನೀತಿಕತೆ

Moral Story: ದಾರಿಯ ನಡುವೆ ಇರುವ ದೊಡ್ಡ ಕಲ್ಲು

By | 18/11/2018

ಒಬ್ಬ ರಾಜನಿದ್ದ. ಒಂದು ದಿನ ಆತ ಮಾರುವೇಷದಲ್ಲಿ ನಗರ ಸಂಚಾರಕ್ಕೆ ಹೊರಟ. ಒಂದು ರಸ್ತೆಯಲ್ಲಿ ದೊಡ್ಡ ಕಲ್ಲೊಂದನ್ನು ಇಟ್ಟು ಅಡಗಿ ಕುಳಿತ. ದಾರಿಗೆ ಅಡ್ಡವಾದ ಆ ಕಲ್ಲನ್ನು ಯಾರಾದರೂ ಬದಿಗೆ ಸರಿಸುತ್ತಾರೋ ಎಂದು ಕಾದುಕುಳಿತ.  ಆ ರಾಜನ ರಾಜ್ಯದ ಶ್ರೀಮಂತರು ಮತ್ತು ವರ್ತಕರು ರಸ್ತೆಯಲ್ಲಿ ಬಂದರು. ಆ ಕಲ್ಲನ್ನು ನೋಡಿದರೂ ನೋಡದಂತೆ ಮುಂದೆ ಸಾಗಿದರು. ಮತ್ತೆ ಹಲವು ಮಂದಿ ಬಂದರೂ ಯಾರೂ ಕಲ್ಲನ್ನು ಪಕ್ಕಕ್ಕೆ ಸರಿಸುವ ಯೋಚನೆ ಮಾಡಲಿಲ್ಲ. ಕೊನೆಗೆ ಒಬ್ಬಾತ ಬಂದ. ಆತನ ಕೈ ತುಂಬಾ ತರಕಾರಿ ಇತ್ತು. ನೋಡಲು… Read More »

Moral Story: ಚಿಟ್ಟೆಮರಿ ಮತ್ತು ಪರೋಪಕಾರಿ ಹುಡುಗ

By | 17/11/2018

ಅವನು ತುಂಬಾ ಹೃದಯವಂತ. ಯಾರೇ ಕಷ್ಟದಲ್ಲಿದ್ದರೂ ಸಹಾಯ ಮಾಡುವ ಪರೋಪಕಾರಿ. ಒಂದಿನ ಹೂದೋಟಕ್ಕೆ ಹೋದಾಗ ಅಲ್ಲೊಂದು ಚಿಟ್ಟೆಯ ಗೂಡು ಕಂಡ. ರೇಷ್ಮೆ ಹುಳುಗಳ ಗೂಡು ರೀತಿ ಹುಳು ಚಿಟ್ಟೆಯಾಗುವ ಮುನ್ನ ಇಂತಹದೊಂದು ಗೂಡಿನಿಂದ ಹೊರಬರಬೇಕು. ಒಂದಿನ ಈ ಯುವಕ ಆ ಚಿಟ್ಟೆಯ ಗೂಡು ಕಂಡ. ಅದು ಕೊಂಚ ತೆರೆದಿರುವುದನ್ನು ನೋಡಿದ. ತುಂಬಾ ಗಂಟೆ ಅಲ್ಲೇ ಕುಳಿತ.  ಆ ಚಿಟ್ಟೆ ಹುಳು ಪಾಪ ಆ ಗೂಡಿನಿಂದ ತನ್ನ ದೇಹವನ್ನು ಹೊರಗೆ ಹಾಕಲು ತುಂಬಾ ಕಷ್ಟಪಡುತ್ತಿತ್ತು.  ಆ ಯುವಕ ಹೀಗೆ ನೋಡುತ್ತಲೇ ಇದ್ದ. ಪಾಪ… Read More »

Moral Story: ಕುಂಟ ನಾಯಿಮರಿಗೆ ಬೆಲೆ ಎಷ್ಟು?

By | 16/11/2018

ಒಬ್ಬ ಅಂಗಡಿಯವ ತನ್ನ ಅಂಗಡಿಯ ಹೊರಗೆ `ನಾಯಿಮರಿಗಳು ಮಾರಾಟಕ್ಕಿವೆ” ಎಂದು ಬೋರ್ಡ್ ಹಾಕಿದ. ಇಂತಹ ಬೋರ್ಡ್‍ಗಳು ಮಕ್ಕಳನ್ನು ಸೆಳೆಯುತ್ತವೆ ಎಂದು ಅವನಿಗೆ ಗೊತ್ತಿತ್ತು. ಅದೇರೀತಿ ಆಯಿತು. ಪುಟ್ಟ ಬಾಲಕನೊಬ್ಬ ಅಂಗಡಿಗೆ ಬಂದ. `ನಾಯಿಮರಿಯನ್ನು ಎಷ್ಟು ರೂಪಾಯಿಗೆ ಮಾರುವಿರಿ?’ ಎಂದು ಆ ಬಾಲಕ ಪ್ರಶ್ನಿಸಿದ.  `2 ಸಾವಿರ ರೂ.ನಿಂದ 5 ಸಾವಿರ ರೂ.’ ಎಂದು ಅಂಗಡಿ ಮಾಲಿಕ ಉತ್ತರಿಸಿದ.  ಆ ಬಾಲಕ ತನ್ನ ಕಿಸೆಗೆ ಕೈ ಹಾಕಿದ. ಅವನಲ್ಲಿ ಇನ್ನೂರು ರೂಪಾಯಿ ಮಾತ್ರವಿತ್ತು. `ನನ್ನಲ್ಲಿ ಈಗ ಇಷ್ಟೇ ಇದೆ, ನಾನೊಮ್ಮೆ ನಾಯಿ ಮರಿಗಳನ್ನು… Read More »

ಶ್ರೀಮಂತನನ್ನು ಮದುವೆಯಾಗಲು ಏನು ಮಾಡಬೇಕು? ಈ ಪ್ರಶ್ನೆಗೆ ಮಾರ್ಮಿಕ ಉತ್ತರ ಇಲ್ಲಿದೆ ನೋಡಿ

By | 14/11/2018

ಅದೊಂದು ಆನ್‍ಲೈನ್‍ನ ಜನಪ್ರಿಯ ಚರ್ಚಾ ತಾಣ. ಅಲ್ಲೊಬ್ಬಳು ಯುವತಿ ಹೀಗೊಂದು ಪ್ರಶ್ನೆ ಬರೆದಿದ್ದಳು. ಪ್ರಶ್ನೆಯ ಶೀರ್ಷಿಕೆ: ಶ್ರೀಮಂತ ಯುವಕನನ್ನು ಮದುವೆಯಾಗಲು ನಾನು ಏನು ಮಾಡಬೇಕು? ಪ್ರಶ್ನೆಯ ವಿವರಣೆ: ನಾನು ತುಂಬಾ ಪ್ರಾಮಾಣಿಕವಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ.  ನನಗೆ 25 ವರ್ಷ ವಯಸ್ಸು. ನಾನು ನೋಡಲು ತುಂಬಾ ಸುಂದರಿ. ನನ್ನ ಅಭಿರುಚಿಗಳೂ ಉತ್ತಮವಾಗಿವೆ. ವರ್ಷಕ್ಕೆ 500 ಸಾವಿರ ಡಾಲರ್ ಅಥವಾ ಅದಕ್ಕಿಂತ ಹೆಚ್ಚು ವೇತನ ಇರುವ ಯುವಕನನ್ನು ಮದುವೆಯಾಗಬೇಕು ಎನ್ನುವುದು ನನ್ನ ಅಭಿಲಾಸೆ.  ಈ ಫೋರ್ಮ್ ನಲ್ಲಿ ಇಷ್ಟು ವೇತನ ಇರುವ ಯಾರಾದರೂ… Read More »

Moral Story: ನಮ್ಮ ಮೌಲ್ಯ ಕಡಿಮೆಯಾಗದು

By | 14/11/2018

ಒಂದು ಸೆಮಿನಾರ್‍ನಲ್ಲಿ ಭಾಷಣಗಾರರು ಕೈಯಲ್ಲಿ 2000 ರೂಪಾಯಿಯ ನೋಟೊಂದನ್ನು ಹಿಡಿದು ಸಭಿಕರಲ್ಲಿ `ಈ ಹಣ ಯಾರಿಗೆ ಬೇಕು?’ ಎಂದು ಪ್ರಶ್ನಿಸಿದರು. ಬಹುತೇಕರು ಕೈ ಎತ್ತಿದರು.  `ನಾನು ಈ ಹಣವನ್ನು ನಿಮಗೆ ನೀಡುವ ಮೊದಲು ಒಂದು ಕೆಲಸ ಮಾಡುತ್ತೇನೆ’ ಎಂದು ಹೇಳಿ ಆ ನೋಟನ್ನು ಕೆಳಗೆ ಹಾಕಿದರು. `ಈಗ ಯಾರಿಗೆ ಈ ಹಣ ಬೇಕು?’ ಎಂದರು. ಈಗಲೂ ಬಹುತೇಕರು ಕೈ ಎತ್ತಿದರು. ಮತ್ತೆ ಆ ಭಾಷಣಗಾರರು ಆ ಹಣವನ್ನು ಎತ್ತಿಕೊಂಡು ಅಲ್ಲಿದ್ದ ಕೊಳಕು ಮಣ್ಣಿನಲ್ಲಿ ಆ ನೋಟನ್ನು ಮುದ್ದೆ ಮಾಡಿದರು. ನಿಜಕ್ಕೂ ಆ… Read More »

Inspirational Story: ಕೆಂಟುಕಿ ಚಿಕನ್ ಸ್ಥಾಪಕನ ಯಶೋಗಾಥೆ

By | 14/11/2018

ಅವರಿಗೆ 67 ವರ್ಷ ವಯಸ್ಸಾಗಿತ್ತು. ಪುಟ್ಟ ಮನೆಯಿತ್ತು. ಹಳೆಯ ಕಾರಿತ್ತು. ಒಟ್ಟಾರೆ ನಿವೃತ್ತಿ ಜೀವನ ಮಾಡುವ ಸಮಯವಾಗಿತ್ತು. ಆದರೆ, ಅವರಲ್ಲಿ ಹೆಚ್ಚಿನ ಹಣವಿರಲಿಲ್ಲ. 99 ಡಾಲರ್ ಸಾಮಾಜಿಕ ಭದ್ರತಾ ಚೆಕ್ ಇತ್ತು. ಇಷ್ಟು ಹಣದಲ್ಲಿ ನಿವೃತ್ತಿ ಜೀವನ ತುಂಬಾ ಕಷ್ಟವಾಗುತ್ತಿತ್ತು. ಹೆಚ್ಚೆಂದರೆ ಕೆಲವೇ ತಿಂಗಳಲ್ಲಿ ಈ ಹಣ ಮುಗಿದು ಹೋಗುತ್ತಿತ್ತು. ಆದರೆ, ಆ ವ್ಯಕ್ತಿ ಜೀವನವನ್ನು ಹಾಗೆಯೇ ಬಿಡಲು ಇಚ್ಚಿಸಲಿಲ್ಲ. ಏನೋ ಬದಲಾವಣೆ ಮಾಡುವ ಗುರಿ ಹಾಕಿಕೊಂಡರು. ಏನಾದರೂ ಮಾರಾಟ ಮಾಡಿ ಜೀವನ ನಡೆಸೋಣ ಎಂದುಕೊಂಡರು. ಮಾರಾಟ ಮಾಡಲು ಅವರಲ್ಲಿ ಅಂತಹದ್ದೇನೂ… Read More »