Category Archives: after puc what next

ವಿಜ್ಞಾನಿ ಆಗುವುದು ಹೇಗೆ: ಕಲಿಕೆ ಮತ್ತು ತಯಾರಿ ಹೇಗಿರಬೇಕು?

By | 18/10/2019

ಸಿ.ವಿ. ರಾಮನ್, ಎಪಿಜೆ ಅಬ್ದುಲ್ ಕಲಾಂ, ಶ್ರೀನಿವಾಸ ರಾಮನುಜನ್, ಹೋಮಿ ಜೆ. ಭಾಭಾ, ಸತೇಂದ್ರನಾಥ್ ಬೋಸ್, ವಿಕ್ರಂ ಸಾರಭಾಯಿ ಹೀಗೆ ಭಾರತ ಅನೇಕ ಪ್ರಶಿದ್ಧ ವಿಜ್ಞಾನಿಗಳನ್ನು ಜಗತ್ತಿಗೆ ನೀಡಿದೆ. ನಿಮಗೂ ಭವಿಷ್ಯದಲ್ಲಿ ವಿಜ್ಞಾನಿಯಾಗಿ ಸಾಧಿಸುವ ಬಯಕೆ ಇರಬಹುದು. ಹೊಸತನ್ನು ಅನ್ವೇಷಣೆ ಮಾಡುವ ವಿಜ್ಞಾನಿಗೆ ಎಲ್ಲಿಲ್ಲದ ಗೌರವ.  ಈ ಹಿಂದಿನ ಅನ್ವೇಷಣೆಗಳನ್ನು ಆಧಾರವಾಗಿಟ್ಟುಕೊಂಡು ಅಥವಾ ಸಂಪೂರ್ಣ ಹೊಸದಾಗಿ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಾರೆ. ನಿಮ್ಮ ಭವಿಷ್ಯದ ಕರಿಯರ್ ಅನ್ನು ವಿಜ್ಞಾನಿಯಾಗಿ ಬದಲಾಯಿಸಲು ಬಯಸಿದರೆ ವಿದ್ಯಾರ್ಥಿ ಜೀವನದಿಂದಲೇ ತಯಾರಿ ಆರಂಭಿಸಿ. ಬಾಲ್ಯದಿಂದಲೇ ವಿಜ್ಞಾನಿಯಾಗುವ ಕನಸಲ್ಲಿ ಇದ್ದರೆ… Read More »

ಇಸ್ರೊದಲ್ಲಿ ಉದ್ಯೋಗ ಪಡೆಯುವುದು ಹೇಗೆ?

By | 17/10/2019

ಇಸ್ರೊದಲ್ಲಿ ಉದ್ಯೋಗ ಪಡೆಯುವ ಕನಸಿದೆಯೇ? ಶ್ರೀಮಂತರು ಮಾತ್ರವಲ್ಲದೆ ಬಡವರೂ ಇಸ್ರೊ ಸೇರುವ ಕನಸು ರೂಪಿಸಿಕೊಳ್ಳಬಹುದು. ಇಸ್ರೊ ಸೇರುವ ಕನಸಿರುವವರು ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯುತ್ತಮ ಅಂಕ ಪಡೆಯಿರಿ. ನಂತರ ನಮ್ಮ ಶಕ್ತಿ ಅನುಸಾರ ಸರಕಾರಿ ಅಥವಾ ಖಾಸಗಿ ಸಂಸ್ಥೆಯಲ್ಲಿ ಪಿಯುಸಿಗೆ ಸೇರಿರಿ. ನೆನಪಿಡಿ: ಪಿಯುಸಿಯಲ್ಲಿ ವಿಜ್ಞಾನವನ್ನು (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ಆಯ್ಕೆ ಮಾಡಿಕೊಳ್ಳಬೇಕು. ಸಿಬಿಎಸ್‍ಇ ಪಠ್ಯಕ್ರಮ ಓದಿದರೆ ಇನ್ನೂ ಉತ್ತಮ. ಪಿಯುಸಿ ಸಮಯದಲ್ಲಿ ಜೆಇಇ ಮೇನ್ಸ್ ಮತ್ತು ಅಡ್ವಾನ್ಸಡ್ ಪರೀಕ್ಷೆ ಬರೆಯಬೇಕು. ಅಡ್ವಾನ್ಸಡ್‍ನಲ್ಲಿ ಸಾಧ್ಯವಿರುವಷ್ಟು ಅತ್ಯುತ್ತಮ ರ್ಯಾಂಕ್ ಪಡೆಯಬೇಕು. ಪಿಯುಸಿಯಲ್ಲಿ ಶೇಕಡ 75ಕ್ಕಿಂತ… Read More »

ಶಿಕ್ಷಣ ಮಾರ್ಗದರ್ಶಿ: ಹೆಲಿಕಾಪ್ಟರ್ ಪೈಲೆಟ್ ಆಗುವುದು ಹೇಗೆ?

By | 24/03/2019

ಹೆಲಿಕಾಪ್ಟರ್ ಪೈಲೆಟ್ ಆಗಲು ಬಯಸುವವರಿಗೆ ಕಮರ್ಷಿಯಲ್ ಹೆಲಿಕಾಪ್ಟರ್ ಪೈಲಟ್ ಲೈಸನ್ಸ್ (ಸಿಎಚ್‍ಪಿಎಲ್) ಮತ್ತು ಪ್ರೈವೇಟ್ ಹೆಲಿಕಾಪ್ಟರ್ ಪೈಲಟ್ ಲೈಸನ್ಸ್ (ಪಿಎಚ್‍ಪಿಎಲ್) ಕೋರ್ಸ್‍ಗಳು ಲಭ್ಯ ಇರುತ್ತವೆ. ಈ ಕೋರ್ಸ್‍ಗಳ ಅವ ಬಹುತೇಕ 1 ಅಥವಾ 2 ವರ್ಷದ ಒಳಗೆ ಇರುತ್ತದೆ. ಈ ಕೋರ್ಸ್ ಅನ್ನು ಪುರುಷರು ಅಥವಾ ಮಹಿಳೆಯರು ಪಡೆದುಕೊಳ್ಳಬಹುದಾಗಿದೆ. ಆಯಾ ತರಬೇತಿ ಸಂಸ್ಥೆಗಳಿಗೆ ಅನುಗುಣವಾಗಿ ಕನಿಷ್ಠ 17 ಅಥವಾ 18 ವರ್ಷ ಪೂರ್ಣಗೊಳಿಸಿದವರು ಈ ತರಬೇತಿಗೆ ಸೇರಬಹುದು. ಫಿಸಿಕ್ಸ್ ಮತ್ತು ಮ್ಯಾಥಮೆಟಿಕ್ಸ್‌ನಲ್ಲಿ 10+2 ವಿದ್ಯಾರ್ಹತೆ ಹೊಂದಿರಬೇಕು. ಡಿಜಿಸಿಎ ಬಯಸಿದಂತೆ ದೈಹಿಕ ಅರ್ಹತೆ… Read More »

ಉದ್ಯೋಗ ಸಂದರ್ಶನ: ಈ ಹುದ್ದೆಯ ಬಗ್ಗೆ ನಿಮಗೆ ಹೇಗೆ ಮಾಹಿತಿ ದೊರೆಯಿತು?

By | 26/01/2019

ಉದ್ಯೋಗ ಸಂದರ್ಶನದಲ್ಲಿ ಟೆಲ್ ಮಿ ಅಬೌಟ್ ಯುವರ್ ಸೆಲ್ಫ್ ಅಥವಾ ನಿಮ್ಮ ಬಗ್ಗೆ ಹೇಳಿ? ಎಂಬ ಸಾಮಾನ್ಯ ಪ್ರಶ್ನೆಗೆ ಹೇಗೆ ಉತ್ತರಿಸುವುದೆಂದು ಈ ಹಿಂದಿನ ಲೇಖನದಲ್ಲಿ ತಿಳಿದುಕೊಂಡೆವು. ಸಂದರ್ಶನದಲ್ಲಿ ಸಾಮಾನ್ಯವಾಗಿ ಕೇಳುವ ಇನ್ನೆರಡು ಪ್ರಮುಖ ಪ್ರಶ್ನೆಗಳ  ಕುರಿತು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಪ್ರಶ್ನೆ: ಈ ಹುದ್ದೆಯ ಕುರಿತು ನಿಮಗೆ ಹೇಗೆ ಮಾಹಿತಿ ದೊರೆಯಿತು? ಉದ್ಯೋಗ ಸಂದರ್ಶನದಲ್ಲಿ ಸಾಮಾನ್ಯವಾಗಿ `ಹೌ ಡಿಡ್ ಯು ಹಿಯರ್ ಅಬೌಟ್ ದಿ ಪೊಷಿಸನ್?’ ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಇಂತಹ ಪ್ರಶ್ನೆಯನ್ನು ಸಾಮಾನ್ಯ ಪ್ರಶ್ನೆಯೆಂದು ಬಹುತೇಕರು ಕಡೆಗಣಿಸುವುದುಂಟು. ಕಂಪನಿಯ… Read More »

ಉದ್ಯೋಗ ಸಂದರ್ಶನ: ನಿಮ್ಮ ಬಗ್ಗೆ ಹೇಳಲು ಗೊತ್ತೆ?

By | 24/01/2019

ಉದ್ಯೋಗ ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳಿಗೆ `ನಮ್ಮಲ್ಲಿ ಏನು ಪ್ರಶ್ನೆ ಕೇಳ್ತಾರಪ್ಪ?’ ಎಂಬ ಟೆನ್ಷನ್ ಇರುವುದು ಸಾಮಾನ್ಯ. ಯಾವ ಪ್ರಶ್ನೆ ಕೇಳುತ್ತಾರೆ ಎಂದು ಗೊತ್ತಿದ್ದರೆ ಒಂದಿಷ್ಟು ಹೊತ್ತು ಕನ್ನಡಿ ಮುಂದೆ ನಿಂತುಕೊಂಡು ಉತ್ತರ ಹೇಳಲು ಪ್ರ್ಯಾಕ್ಟೀಸ್ ಮಾಡಬಹುದಿತ್ತು ಎಂದುಕೊಳ್ಳುವವರು ಬಹಳಷ್ಟು ಜನರು ಇರುತ್ತಾರೆ. ಸಂದರ್ಶನದಲ್ಲಿ  ಇದೇ ರೀತಿಯ ಪ್ರಶ್ನೆ ಕೇಳುತ್ತಾರೆ ಎಂದು ಇದಮಿತ್ತಂ ಹೇಳುವುದು ಕಷ್ಟ. ಯಾಕೆಂದರೆ, ಪ್ರಶ್ನೆ ಕೇಳುವುದು ಆಯಾ ಸಂದರ್ಶಕರ ಮರ್ಜಿಗೆ ಬಿಟ್ಟ ವಿಷಯ. ಆದರೆ, ಅವರಲ್ಲಿಯೂ ಪ್ರಶ್ನೆ ಕೇಳಲು ಸಾಕಷ್ಟು ವಿಷಯಗಳು ಇರುವುದಿಲ್ಲ. ಬಹುತೇಕ ಪ್ರಶ್ನೆಗಳು ಈ ಹಿಂದೆ… Read More »

Big Dreams: 20 ಕೋಟಿ ಸಿಕ್ಕರೆ ಏನು ಮಾಡ್ತಿರಿ?

By | 05/12/2018

ನಿಮಗೆ ಅಂದಾಜು 20 ಕೋಟಿ ರೂಪಾಯಿ ನೀಡಿದರೆ ಏನು ಮಾಡುವಿರಿ? ಇಂತಹ ಪ್ರಶ್ನೆ ನನ್ನಲ್ಲಿ ಕೇಳಿದರೆ “ಬೆಂಗಳೂರಿನಲ್ಲಿ ಒಂದು ಸೈಟ್ ಅಥವಾ ಅಪಾರ್ಟ್ ಮೆಂಟ್”(ಬಾಡಿಗೆ ಕೊಟ್ಟು ಸಾಕಾಗಿದೆ), ಊರಲ್ಲಿ ಒಂದು ಆಸ್ತಿ ಖರೀದಿ… ಒಂದು ಒಳ್ಳೆಯ ಕಾರು… ಹೀಗೆ ಒಂದಿಷ್ಟು ಕನಸುಗಳನ್ನು ಬಿಚ್ಚಿಡುತ್ತಿದ್ದೆ. ಬಹುತೇಕರಿಗೆ ಇದೇ ರೀತಿ ಕನಸು ಇರಬಹುದು. ಹಣ ಕೊಡ್ತಿನಿ ಎಂದು ಯಾರು ಪ್ರಶ್ನೆ ಕೇಳುತ್ತಾರೆ? ಇಂತಹ ಪ್ರಶ್ನೆಯನ್ನು ಯಾರಾದರೂ ಕೇಳುತ್ತಾರ? ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ನಿಜಕ್ಕೂ ಇಂತಹ ಪ್ರಶ್ನೆ ಕೇಳಲಾಗಿತ್ತು… ಸಾವಿರಾರು ಜನರು ಈ ಪ್ರಶ್ನೆಗೆ… Read More »