Category Archives: Jobs

ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರಿ ಹೇಗಿರಬೇಕು? ಪೂರ್ವ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆಯಬೇಡಿ

By | 08/03/2021

ಪ್ರತಿವರ್ಷ ರೈಲ್ವೆ, ಬ್ಯಾಂಕ್‌, ಕೆಪಿಎಸ್‌ಸಿ, ಯುಪಿಎಸ್‌ಸಿ, ಪಿಡಿಒ, ಪೊಲೀಸ್‌ ನೇಮಕ ಪರೀಕ್ಷೆ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯರ್ಥಿಗಳು ಎದುರಿಸಬೇಕಿರುತ್ತದೆ. ಬಹುತೇಕರು ಸರಕಾರಿ ಉದ್ಯೋಗ ಸಿಕ್ಕರೆ ಸಿಗಲಿ ಎಂಬ ಆಸೆಯಿಂದ ಅರ್ಜಿ ಸಲ್ಲಿಸುತ್ತಾರೆ. ಯಾವುದೇ ಸಮರ್ಪಕ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆದು ಫಲಿತಾಂಶದಲ್ಲಿ ಹೆಸರು ಇಲ್ಲದೆ ಇರುವುದನ್ನು ‘ಸರಕಾರಿ ಜಾಬ್ಸ್‌ ಸಿಗುವುದು ಸುಲಭವಲ್ಲ’ ಎಂದುಕೊಳ್ಳುತ್ತಾರೆ.ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್‌ ನೋಟಿಫಿಕೇಷನ್‌ ಪ್ರಕಟವಾಗಲಿ. ಇರುವುದು ಕೆಲವೇ ಹುದ್ದೆಗಳಾಗಿದ್ದರೂ ಸಾವಿರ, ಲಕ್ಷ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಸರಕಾರಿ ನೌಕರಿಗಿರುವ ಸೆಳೆತ… Read More »

Identify fake job offers: ಫೇಕ್‌ ಉದ್ಯೋಗದ ಆಫರ್‌ ಪತ್ತೆಗೆ 8 ದಾರಿ

By | 07/03/2021

ಆನ್‌ಲೈನ್‌ನಲ್ಲಿ ವಂಚಕರು ಒಡ್ಡುವ ಉದ್ಯೋಗದ ಆಮೀಷಗಳಿಗೆ ಬಲಿಯಾಗಬೇಡಿ ಇಂದು ಉದ್ಯೋಗಾನ್ವೇಷಣೆಯಲ್ಲಿರುವವರಿಗೆ ಒಂದು ಬಟನ್‌ ಕ್ಲಿಕ್‌ ಮಾಡುವ ಮೂಲಕ ಉದ್ಯೋಗ ಪಡೆಯಲು ಇಂಟರ್‌ನೆಟ್‌ ನೆರವಾಗಿದೆ. ವಿವಿಧ ಉದ್ಯೋಗ ತಾಣಗಳ ಮೂಲಕ ಪ್ರೊಫೈಲ್‌ ರಚಿಸಿ ಕೆಲವೇ ನಿಮಿಷದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಅದ್ಭುತ ಇಂಟರ್‌ನೆಟ್‌ ಜಗತ್ತಿನಲ್ಲಿ ವಂಚಕರು ಸಹ ಬಕಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಇದೇ ಕಾರಣಕ್ಕೆ ಇಂದು ಆನ್‌ಲೈನ್‌ ಮೂಲಕ ಯಾವುದಾದರೂ ಉದ್ಯೋಗದ ಆಫರ್‌ ಬಂದಾಗ ಅದು ನಿಜವೋ, ಸುಳ್ಳೋ ಎಂದು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಫೇಕ್‌ ಉದ್ಯೋಗದ ಆಫರ್‌ ಅನ್ನು ಪತ್ತೆಹಚ್ಚಲು ಇಲ್ಲೊಂದಿಷ್ಟು ದಾರಿಗಳಿವೆ.