Category Archives: Kannada

ಕನ್ನಡದಲ್ಲಿ IBPS ಪರೀಕ್ಷೆ : ಹೆಚ್.ಡಿ.ಕುಮಾರಸ್ವಾಮಿ ಸ್ವಾಗತ

By | 11/06/2021

ಐಬಿಪಿಎಸ್ ನಡೆಸುವ ಪ್ರಾದೇಶಿಕ, ಗ್ರಾಮೀಣ ಬ್ಯಾಂಕಿಂಗ್ ( ಆರ್ ಆರ್ ಬಿ) ನೇಮಕಾತಿಯ ಪೂರ್ವಬಾವಿ ಮತ್ತು ಮುಖ್ಯ ಪರೀಕ್ಷೆ ಈ ಬಾರಿ ಕನ್ನಡದಲ್ಲಿಯೂ ನಡೆಯಲಿದೆ ಎಂಬ ಐಬಿಪಿಎಸ್ ನಡೆಯನ್ನು ಮಾಜಿ ಸಿ ಎಂ ಹೆಚ್ ಕುಮಾರಸ್ವಾಮಿ ಸ್ವಾಗರಿಸಿದರು. 2014 ಕ್ಕೂ ಮುನ್ನ ಇದ್ದ ನೇಮಕಾತಿ ಕಟ್ಟಲೆಗಳನ್ನು ಜಾರಿಗೆ ತರಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು. ಕರ್ನಾಟಕದಲ್ಲಿ ಕನ್ನಡಿಗನಿಗೇ ಬ್ಯಾಂಕಿಂಗ್ ನೌಕರಿ ಸಿಗುವಂತೆ ಮಾಡಲು ಇದು ತುಂಬಾ ಸಹಕಾರಿ ಹಾಗೂ ಅತ್ಯಗತ್ಯ. ,2014 ಕ್ಕೆ ಮುನ್ನ ಕರ್ನಾಟಕದಲ್ಲಿ ಬ್ಯಾಂಕ್ ಸಿಬ್ಬಂದಿಗೆ ಕನ್ನಡ… Read More »

ಗೂಗಲ್‌ ಆಡ್‌ಸೆನ್ಸ್‌ ಇದೀಗ ಕನ್ನಡ ಭಾಷೆಯಲ್ಲಿಯೂ ಲಭ್ಯ- ಕನ್ನಡ ಬ್ಲಾಗ್‌, ಸುದ್ದಿತಾಣಗಳಿಗೆ ಶುಭಸುದ್ದಿ

By | 03/06/2020

ಬಹುತೇಕ ಕನ್ನಡ ಆನ್‌ಲೈನ್‌ (ಬ್ಲಾಗ್‌, ಸ್ವಂತ ವೆಬ್ಸೈಟ್‌, ಸ್ವಂತ ಸುದ್ದಿ ಪೋರ್ಟಲ್)‌ ಬರಹಗಾರರಿಗೆ ಶುಭಸುದ್ದಿಯೊಂದಿದೆ. ಬಹುತೇಕರು ಕನ್ನಡಕ್ಕೆ ಆಡ್‌ಸೆನ್ಸ್‌ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದರು. ನಾನಂತೂ ಚಾತಕಪಕ್ಷಿಯಂತೆ ಕಾಯುತ್ತಿದ್ದೆ. ನನ್ನ ಇಂಗ್ಲಿಷ್‌ ವೆಬ್‌ ಸೈಟಿಗೆ ಪ್ರಾಯೋಗಿಕವಾಗಿ ಆಡ್‌ಸೆನ್ಸ್‌ ಅನುಮತಿ ಪಡೆದು ಅದನ್ನು ಆಫ್‌ ಮಾಡಿಟ್ಟಿದ್ದೆ. ಜೊತೆಗೆ ಆಡ್‌ಸೆನ್ಸ್‌ಗೆ ಸಂಬಂಧಪಟ್ಟ ಎಲ್ಲಾ ಸೆಟ್ಟಿಂಗ್‌ಗಳನ್ನು ಮಾಡಿ ಮುಗಿಸಿದ್ದೆ. ನೀವೀಗ ಕನ್ನಡ ಭಾಷೆಗೆ ಗೂಗಲ್‌ ಆಡ್‌ಸೆನ್ಸ್‌ ಬೆಂಬಲ ನೀಡುತ್ತದೆಯೇ ಎಂದು ಗೂಗಲ್‌ ತಾಣಕ್ಕೆ ಹೋದರೆ ಅಲ್ಲಿ ನೀಡಲಾದ ಪಟ್ಟಿಯಲ್ಲಿ (ಜೂನ್‌ ೩ರವರೆಗೆ- ಈ ಲೇಖನ ಬರೆಯುತ್ತಿರುವಾಗ)… Read More »

ವ್ಯಕ್ತಿತ್ವ ವಿಕಸನ: ಹೆಂಡತಿಗೆ ಕಿವಿ ಕೇಳಿಸುತ್ತಿಲ್ಲ

By | 18/06/2019

ಒಂದು ಕತೆಯಿಂದ ಆರಂಭಿಸೋಣ. ಒಂದೂರಲ್ಲಿ ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರು. ಇಬ್ಬರೂ ಮಧ್ಯವಯಸ್ಕರು. ಇತ್ತೀಚೆಗೆ ಗಂಡನಿಗೆ ‘ನನ್ನ ಹೆಂಡತಿಗೆ ಕಿವಿ ಸರಿಯಾಗಿ ಕೇಳಿಸುತ್ತಿಲ್ಲ’ ಎಂಬ ಸಂಶಯ ಆರಂಭವಾಯಿತು. ಆಕೆಯ ಕಿವಿಗೆ ಚಿಕಿತ್ಸೆ ನೀಡಬೇಕೆಂದುಕೊಂಡನು. ಆದರೆ, ಇದನ್ನು ಹೆಂಡತಿಗೆ ಹೇಳುವುದು ಹೇಗೆ ಎಂಬ ಸಂದಿಗ್ಧತೆಗೆ ಬಿದ್ದನು. ತನ್ನ ಫ್ಯಾಮಿಲಿ ಡಾಕ್ಟರ್‌ಗೆ ಈ ಕುರಿತು ತಿಳಿಸಿದ. ಆಕೆಗೆ ಕಿವಿ ಕೇಳಿಸುತ್ತದೆಯೇ? ಇಲ್ಲವೇ? ಎಂದು ತಿಳಿಯಲು ಡಾಕ್ಟರ್ ಒಂದು ಐಡಿಯಾ ಹೇಳಿದರು. ‘ನಿನ್ನ ಹೆಂಡತಿಗೆ ಕಿವಿ ಕೇಳಿಸುತ್ತದೆಯೇ ಇಲ್ಲವೇ ಎಂದು ತಿಳಿಯಲು ಮೊದಲು ನೀನು ಅವಳಿಂದ ಹತ್ತು ಅಡಿ… Read More »

ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯುವಂತಿದ್ದರೆ…

By | 25/05/2019

ಕನ್ನಡಿಗರ ಹೋರಾಟದ ಫಲವಾಗಿ ಕೆಲವು ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶವಿದೆ. ಆದರೂ, ಕೇಂದ್ರ ಸರಕಾರದ ಎಲ್ಲಾ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವಂತೆ ಇಲ್ಲ. ಉದಾಹರಣೆಗೆ ಇತ್ತೀಚೆಗೆ ಡಿಆರ್‌ಡಿಒ ೨೫೦ಕ್ಕೂ ಹೆಚ್ಚು ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ವಿದ್ಯಾರ್ಹತೆಯಾಗಿದೆ. ಕರ್ನಾಟಕದ ಬಹುತೇಕ ಗ್ರಾಮೀಣ ಭಾಗದ ಯುವಕರು ಹೆಚ್ಚಾಗಿ ಐಟಿಐ ಓದಿರುತ್ತಾರೆ. ಅವರಲ್ಲಿ ಬಹುತೇಕರ ಇಂಗ್ಲಿಷ್‌ ಜ್ಞಾನ ಅತ್ಯುತ್ತಮವಾಗಿರುವುದಿಲ್ಲ ಅಥವಾ ಸಮರ್ಥವಾಗಿ ಪರೀಕ್ಷೆ ಬರೆಯುವಷ್ಟು ಇರುವುದಿಲ್ಲ. ಆದರೆ, ಈ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇಂಗ್ಲಿಷ್‌ ಮತ್ತು… Read More »

ಕರ್ನಾಟಕದ ವಿವಿಧ ಸರ್ಕಾರಿ ವೆಬ್ ಸೈಟ್ ಗಳ ವಿವರ ಮತ್ತು ವಿಳಾಸ

By | 14/08/2018

ವಿವಿಧ ಸರ್ಕಾರಿ ಕೆಲಸ ಕಾರ್ಯಗಳು, ಮಾಹಿತಿಗಳು, ಅಧಿಸೂಚನೆಗಳನ್ನು ಪಡೆಯಲು ಸರಕಾರದ ವಿವಿಧ ಇಲಾಖೆಗಳ ವೆಬ್ ಸೈಟ್ ಗಳಿಗೆ ಭೇಟಿ ನೀಡಬೇಕು. ಆದರೆ, ಎಲ್ಲಾ ವೆಬ್ ಸೈಟ್ ವಿವರಗಳ ವಿಳಾಸ ಎಲ್ಲರಿಗೂ ತಿಳಿದಿರುವುದಿಲ್ಲ. ಗೂಗಲ್ ನಲ್ಲಿ ಹುಡುಕಿದರೆ ಎಲ್ಲವೂ ದೊರಕುತ್ತದೆ ಎಂದು ಹೇಳುವಂತೆ ಇಲ್ಲ. ಹೀಗಾಗಿ ಕರ್ನಾಟಕದ ವಿವಿಧ ಇಲಾಖೆಗಳ ವೆಬ್ ಸೈಟ್ ವಿಳಾಸಗಳನ್ನು ಕರ್ನಾಟಕ ಬೆಸ್ಟ್ ಇಲ್ಲಿ ನೀಡಿದೆ.