Category Archives: personality development

ವ್ಯಕ್ತಿತ್ವ ವಿಕಸನ- ಹೆಂಡತಿಗೆ ಕಿವಿ ಕೇಳಿಸುತ್ತಿಲ್ಲ

ಒಂದು ಕತೆಯಿಂದ ಆರಂಭಿಸೋಣ. ಒಂದೂರಲ್ಲಿ ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರು. ಇಬ್ಬರೂ ಮಧ್ಯವಯಸ್ಕರು. ಇತ್ತೀಚೆಗೆ ಗಂಡನಿಗೆ ‘ನನ್ನ ಹೆಂಡತಿಗೆ ಕಿವಿ ಸರಿಯಾಗಿ ಕೇಳಿಸುತ್ತಿಲ್ಲ’ ಎಂಬ ಸಂಶಯ ಆರಂಭವಾಯಿತು. ಆಕೆಯ ಕಿವಿಗೆ ಚಿಕಿತ್ಸೆ ನೀಡಬೇಕೆಂದುಕೊಂಡನು. ಆದರೆ, ಇದನ್ನು ಹೆಂಡತಿಗೆ ಹೇಳುವುದು ಹೇಗೆ ಎಂಬ ಸಂದಿಗ್ಧತೆಗೆ ಬಿದ್ದನು. ತನ್ನ ಫ್ಯಾಮಿಲಿ ಡಾಕ್ಟರ್‌ಗೆ ಈ ಕುರಿತು ತಿಳಿಸಿದ. ಆಕೆಗೆ ಕಿವಿ ಕೇಳಿಸುತ್ತದೆಯೇ? ಇಲ್ಲವೇ? ಎಂದು ತಿಳಿಯಲು ಡಾಕ್ಟರ್ ಒಂದು ಐಡಿಯಾ ಹೇಳಿದರು. ‘ನಿನ್ನ ಹೆಂಡತಿಗೆ ಕಿವಿ ಕೇಳಿಸುತ್ತದೆಯೇ ಇಲ್ಲವೇ ಎಂದು ತಿಳಿಯಲು ಮೊದಲು ನೀನು ಅವಳಿಂದ ಹತ್ತು ಅಡಿ… Read More »

Torchlight ಆನ್ ಮಾಡಲು ನಿಮಗೆ ಗೊತ್ತೆ?

ಹೆಡ್‍ಲೈನ್ ನೋಡಿದಾಗ ನಿಮಗೆ ಆಶ್ಚರ್ಯವಾಗಿರಬಹುದು. ಟಾರ್ಚ್ ಯಾಕೆ? ದೊಡ್ಡ ಜನರೇಟರ್‍ ಅನ್ನೇ ಆನ್ ಮಾಡ್ತಿವಿ, ಎಂದು ಹೇಳಬಹುದು. ನಾನು ಹೇಳಲು ಹೊರಟ ಟಾರ್ಚ್ ಒಂದಿಷ್ಟು ವಿಚಾರ ಮಾಡುವಂತದ್ದು. ಯಂಡಮೂರಿ ವೀರೇಂದ್ರನಾಥ್ ಬರೆದ ಕಣಿವೆಯಿಂದ ಶಿಖರಕ್ಕೆ (ಕನ್ನಡ ಅನುವಾದ- ಯತಿರಾಜ್ ವೀರಾಂಬುಧಿ) ಪುಸ್ತಕ ಓದಿದಾಗ ಒಂದು ಕತೆ ಗಮನ ಸೆಳೆಯಿತು. ಅದನ್ನು ಕರ್ನಾಟಕಬೆಸ್ಟ್.ಕಾಂ ಓದುಗರೊಂದಿಗೆ ಹಂಚಿಕೊಳ್ಳಬೇಕೆನಿಸಿತು. “ತನ್ನ ಸ್ನೇಹಿತನನ್ನು ಒಬ್ಬ ಡಿನ್ನರ್‍ಗೆ ಆಹ್ವಾನಿಸಿದ. ಆತ ಮನೆಗೆ ಮರಳಿ ಹೊರಟಾಗ ಅವನಿಗೆ ಟಾರ್ಚ್‍ಲೈಟ್ ಒಂದನ್ನು ನೀಡಿದನಂತೆ. “ಇದೇಕೆ, ನನಗೆ ರಾತ್ರಿ ವೇಳೆ ಕಣ್ಣು ಕಾಣಿಸುವುದಿಲ್ಲ… Read More »

ಒಂದೇ ರಾತ್ರಿಯಲ್ಲಿ ಬರೋಲ್ವಂತೆ Success! (ಮತ್ತೆಷ್ಟು ಸಮಯ ಬೇಕು?)

ನೀವು ಈ ಮುಂದಿನ ನುಡಿಮುತ್ತುಗಳನ್ನು ಕೇಳಿರಬಹುದು. SUCCESS IS NOT OVERNIGHT IT TAKES YEARS SUCCESS IS YOURS ಅಥವಾ Overnight Success Does Not Happen Overnight ಅಥವಾ ಇದೇ ಅರ್ಥ ಬರುವ ಕೋಟ್ ಗಳನ್ನು ಕೇಳಿರಬಹುದು. ಇಷ್ಟು ದಿನ ಹೆಸರೇ ಕೇಳಿರದ ವ್ಯಕ್ತಿಯೊಬ್ಬರು ಒಲಿಂಪಿಕ್ಸ್ ನಲ್ಲಿ ಮೆಡಲ್ ಗೆಲ್ಲುತ್ತಾರೆ. ಮರುದಿನ ಎಲ್ಲಾ ಪತ್ರಿಕೆಗಳಲ್ಲಿ ಅವರದ್ದೇ ಸುದ್ದಿ. ಆದರೆ, ಆ ಒಂದು ಓವರ್ ನೈಟ್ ನಲ್ಲಿ ಬಂದಿರುವ ಯಶಸ್ಸು ನಿಜಕ್ಕೂ ಒಂದೇ ದಿನದಲ್ಲಿ ಅಥವಾ ಆ ಗಳಿಗೆಯಲ್ಲಿ ಬಂದಿರುವುದಲ್ಲ.… Read More »

Self Improvement: ನಿಮಗಾಗಿ ಏನು ಮಾಡುವಿರಿ?

ಈ ಒಂದು ವರ್ಷ ನಾನು ಮಾಡಿದ ಪ್ರಮುಖ ಖರ್ಚುಗಳು ಯಾವುವು? 15 ಸಾವಿರ ರೂಪಾಯಿ ಕೊಟ್ಟು ರೆಡ್ ಮಿ ಎ1 ಸ್ಮಾರ್ಟ್ ಫೋನ್ ತೆಗೆದುಕೊಂಡೆ. 18 ಸಾವಿರ ರೂ.ನ ಫರ್ನಿಚರ್ಸ್ ಖರೀದಿಸಿದೆ. 2 ಸಾವಿರ ರೂ.ನ ವಯರ್ಲೆಸ್ ಹೆಡ್ ಫೋನ್ ತೆಗೆದುಕೊಂಡೆ. 8 ಸಾವಿರ ರೂಪಾಯಿನ ಕ್ಯಾಶಿಯೊ ಜಿ-ಶಾಕ್ ವಾಚ್ ನನ್ನದಾಗಿದೆ. ಕುಟುಂಬದ ಕಾರ್ಯಕ್ರಮಕ್ಕಾಗಿ ಹತ್ತು ಹಲವು ಸಾವಿರ ರೂಪಾಯಿ ಖರ್ಚಾಗಿದೆ. ಹೀಗೆ… ಮಾಡಿದ ಖರ್ಚುಗಳ ಲೆಕ್ಕ ಲೆಕ್ಕವಿಡುವುದು ಕಷ್ಟ. ಆದರೆ, ಇವೆಲ್ಲ ನನ್ನ ಸ್ವಯಂ ಅಭಿವೃದ್ಧಿಗೆ ಮಾಡಿದ ಹೂಡಿಕೆಗಳಲ್ಲ. ಇದೇ… Read More »

Personality development: ಜೇಮ್ಸ್ ಬಾಂಡ್ ಜೀವನ ಪಾಠ

ಹಾಲಿವುಡ್‍ನ ಜನಪ್ರಿಯ ಪತ್ತೆದಾರಿ ಪಾತ್ರವಾದ ಜೇಮ್ಸ್ ಬಾಂಡ್‍ನಿಂದ ಬದುಕಿನಲ್ಲಿ ಕಲಿಯಬೇಕಾದ ಸಾಕಷ್ಟು ಪಾಠಗಳಿವೆ. ಈ ಪಾಠಗಳು ವೃತ್ತಿಜೀವನದಲ್ಲಿ ಯಶಸ್ಸು ಪಡೆಯಲು ನೆರವಾಗಬಹುದು. * ಪ್ರವೀಣ್ ಚಂದ್ರ ಪುತ್ತೂರು ಜಗತ್ತಿನ ಜನಪ್ರಿಯ ಕಾಲ್ಪನಿಕ ಪತ್ತೆದಾರಿ ಪಾತ್ರವಾದ ಜೇಮ್ಸ್ ಬಾಂಡ್ ಎಲ್ಲರಿಗೂ ಅಚ್ಚುಮೆಚ್ಚು. ನೀವೂ ಜೇಮ್ಸ್ ಬಾಂಡ್ ಸಿನಿಮಾಗಳನ್ನು ನೋಡಿರಬಹುದು. ಜೇಮ್ಸ್ ಬಾಂಡ್‍ನ ಚಾಣಾಕ್ಷ್ಯತನಕ್ಕೆ, ಸಾಹಸಕ್ಕೆ ವಾಹ್ ಎಂದಿರಬಹುದು. ನಾನೂ ಅವನಂತಾಗಬೇಕು ಎಂದು ಕನಸು ಕಂಡಿರಲೂಬಹುದು. ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ನಮ್ಮ ಕರಿಯರ್ ಪ್ರಗತಿಗೆ ನೆರವಾಗುವ ಹಲವು ಅಂಶಗಳನ್ನು ಗುರುತಿಸಿದ್ದೀರಾ? ಎಂತಹ ಪರಿಸ್ಥಿತಿ ಬಂದರೂ… Read More »