Category Archives: Recipe

ಹೋಟೆಲ್ ಸ್ಟೈಲ್ ಮಸಾಲೆದೋಸೆ ಮನೆಯಲ್ಲಿಯೇ ರೆಡಿಮಾಡಿ

By | 27/08/2018

ಬೆಳಿಗ್ಗಿನ ತಿಂಡಿ ಏನು ಮಾಡಬೇಕು ಎಂಬುದೇ ಕೆಲವರಿಗೆ ದೊಡ್ಡ ಸಮಸ್ಯೆಯಾಗಿರುತ್ತದೆ. ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನ ತಿಂದು ಬೋರು ಅನಿಸಿದ್ರೆ, ಒಮ್ಮೆ ಈ ಮಸಾಲ ದೋಸೆ ಪ್ರಯತ್ನಿಸಿ ನೋಡಿ.  ಮಸಾಲಾ ದೋಸೆ ಮನೆಯಲ್ಲಿ ಚೆನ್ನಾಗಿ ಬರುತ್ತಾ…?, ಕೆಟ್ಟು ಹೋದರೆ, ರುಚಿ ಬಾರದೇ ಇದ್ದರೆ, ಮನೆಯಲ್ಲಿ ಯಾರು ತಿನ್ನದೇ ಹೋದರೆ ಏನು ಗತಿ ಎಂದೆಲ್ಲಾ  ತಲೆಬಿಸಿ ತೆಗೆದುಕೊಳ್ಳಬೇಡಿ. ಇಲ್ಲಿ ಹೇಳಿರುವ ಪ್ರಕಾರ ಒಮ್ಮೆ ಟ್ರೈ ಮಾಡಿ ನೋಡಿ. ರುಚಿಕರವಾದ ಮಸಾಲಾ ದೋಸೆಯನ್ನು ಮನೆಯಲ್ಲಿಯೇ ಮಾಡಿಕೊಂಡು ಸವಿಯಿರಿ. ಅಂದಹಾಗೇ ಮಾಡುವುದಕ್ಕೆ ಬೇಕಾದ ಸಾಮಾಗ್ರಿಗಳು ಇಲ್ಲಿವೆ ನೋಡಿ.… Read More »

ಹೆಸರುಬೇಳೆ ಪಾಯಸ ಮಾಡುವುದು ಹೇಗೆ?

By | 25/08/2018

ಪಾಯಸ ಪ್ರಿಯರಿಗೆ ಕರ್ನಾಟಕದಲ್ಲಿ ಹಲವು ಬೆಸ್ಟ್‍ ಪಾಯಸ ರೆಸಿಪಿಗಳಿವೆ. ಶಾವಿಗೆ ಪಾಯಸ, ಅಕ್ಕಿ ಪಾಯಸ, ಕ್ಯಾರೆಟ್ ಪಾಯಸ, ಕಡಲೆಬೇಳೆ ಪಾಯಸ, ಹೆಸರುಬೇಳೆ ಪಾಯಸ ಹೀಗೆ ಹಲವು ಬಗೆಯ ಪಾಯಸ ಮಾಡಬಹುದು. ಇಂದು ಕರ್ನಾಟಕ ಬೆಸ್ಟ್ ಪರಿಚಯಿಸುತ್ತಿರುವುದು ಸವಿಯಾದ, ಸಿಹಿಯಾದ ಮತ್ತು ವಾಹ್ ಎನಿಸುವ ಹೆಸರುಬೇಳೆ ಪಾಯಸ. ಹೆಸರುಬೇಳೆ ಪಾಯಸ ಮಾಡಲು ಏನೇನು ಬೇಕು? ಹೆಸರೇ ಹೇಳುವಂತೆ ಹೆಸರಬೇಳೆ ಪಾಯಸ ಮಾಡಲು ಹೆಸರಬೇಳೆಯಂತೂ ಬೇಕೇ ಬೇಕು. ಇಲ್ಲಿ ಹೆಚ್ಚು ಜನರಿಗೆ ಸಾಕಾಗುವಷ್ಟು ಪಾಯಸ ಮಾಡಲು ಐಡಿಯಾ ನೀಡಲಾಗಿದೆ. ನಿಮಗೆ ಕಡಿಮೆ ಪಾಯಸ ಸಾಕೆಂದರೆ… Read More »

ಬೆಸ್ಟ್ ರೆಸಿಪಿ: ಮೊಳಕೆ ಬರಿಸಿದ ಹುರುಳಿ ಕಾಳಿನ ತೊಕ್ಕು

By | 25/08/2018

ಮೊಳೆತ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಲಾಡ್ ಮಾಡುವಾಗ ಈ ಕಾಳುಗಳನ್ನು ಹಾಕಿದರೆ ಕೆಲವು ಮಕ್ಕಳು ತಿನ್ನುವುದಿಲ್ಲ. ಹಾಗಾಗಿ ಇದನ್ನು ತೊಕ್ಕು ಮಾಡುವ ಮೂಲಕ ಅನ್ನ ಅಥವಾ ಚಪಾತಿ ಜತೆ ಸವಿಯಬಹುದು. ಬಿಸಿ ಬಿಸಿ ಅನ್ನದ ಜತೆ ತೊಕ್ಕು ತಿಂದರೆ ಎರಡು ತುತ್ತು ಅನ್ನ ಜಾಸ್ತಿಯೇ ಹೊಟ್ಟೆಗಿಳಿಯುತ್ತದೆ. ನಾನಿಂದು ಮೊಳಕೆ ಬರಿಸಿದ ಹುರುಳಿಕಾಳಿನ ತೊಕ್ಕು ಮಾಡುವುದರ ಕುರಿತು ಹೇಳಲಿದ್ದೇನೆ ನೋಡಿ. ಅಂದ ಹಾಗೇ, ತೊಕ್ಕು ಮಾಡುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ½ ಕಪ್ ಮೊಳಕೆ ಬರಿಸಿದ ಹುರುಳಿಕಾಳು. 2 ಈರುಳ್ಳಿ ಹದ ಗಾತ್ರದ್ದು… Read More »

ರುಚಿಕರವಾದ ಮಾವಿನಹಣ್ಣಿನ ಲಾಡು ಮಾಡುವ ಸರಳ ವಿಧಾನ

By | 23/08/2018

ಮಾವಿನಹಣ್ಣು  ಎಂದಾಕ್ಷಣ ಕಣ್ಣುಗಳು ಅರಳುತ್ತದೆ. ಎಷ್ಟು ತಿಂದರೂ ಮತ್ತೂ ಬೇಕು ಅನಿಸುವ ಈ ಹಣ್ಣಿನ ಸ್ವಾದವೇ ಅಂತದ್ದು. ಮಕ್ಕಳಿಗಂತೂ ಮಾವಿನ ಹಣ್ಣುಗಳೆಂದರೆ ಪಂಚಪ್ರಾಣ. ಮಾವಿನ ಹಣ್ಣಿನಲ್ಲಿ ಸೀಕರಣೆ, ಜ್ಯೂಸ್, ಐಸ್ ಕ್ರೀಮ್ ಮಾಡುತ್ತಾರೆ. ಹಾಗೇ ಇನ್ನು ಕೆಲವರು ಇದರಲ್ಲಿ ಬರ್ಪಿ ಮಾಡುತ್ತಾರೆ. ನಾನಿಲ್ಲಿ ಮಾವಿನ ಹಣ್ಣಿನ ಲಾಡು ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇನೆ ನೋಡಿ. ಮಕ್ಕಳಿಂದ ಹಿಡಿದು ದೊಡ್ಡವರಿಗೂ ಈ ಲಾಡು ಇಷ್ಟವಾಗಬಹುದು. ಮಾವಿನಹಣ್ಣಿನ ಲಾಡು  ಮಾಡುವುದಕ್ಕೆ ಅಗತ್ಯವಾಗಿರುವ ಸಾಮಾಗ್ರಿಗಳು  ಮಾವಿನ ಹಣ್ಣಿನ ತಿರುಳು- 1 ಕಪ್ ತಗೊಳ್ಳಿ, ಆರಿದ ಗಟ್ಟಿಯಾದ ಹಾಲು… Read More »

ಹಾಗಲಕಾಯಿ ಕಿಸ್ಮುರಿ ಸವಿದಿದ್ದೀರಾ…?

By | 23/08/2018

* ಪವಿತ್ರಾ ಹಾಗಲಕಾಯಿ ಎಂದರೆ ಮುಖ ಕಿವುಚುವವರೇ ಜಾಸ್ತಿ. ತಿನ್ನಲು ಕಾಯಿ ಆದರೂ ಇದಕ್ಕೆ ನಮ್ಮ ದೇಹಕ್ಕೆ ಮಾತ್ರ ಔಷಧಿ ಎಂದು ಹೇಳಬಹುದು. ಹಾಗಲಕಾಯಿ ಎಂದರೆ ಅದು ಮಧುಮೇಹಿಗಳಿಗೆ ಮಾತ್ರ ಸೇವಿಸಬಹುದು. ಉಳಿದವರು ತಿನ್ನಲು ಇದು ರುಚಿಕರವಲ್ಲ ಎಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ ಈ ಹಾಗಲಕಾಯಿಯಲ್ಲೂ ರುಚಿಕರವಾದ ಅಡುಗೆ ಮಾಡಬಹುದು. ಅಡುಗೆ ಮಾಡುವ ಕಲೆ ಗೊತ್ತಿದ್ದರೆ ಹಾಗಲಕಾಯಿಯಾದರೇನು? ಬೆಂಡೆಕಾಯಿಯಾದರೇನು. ಮಾಡುವ ಮನಸ್ಸು ಆರೋಗ್ಯದ ಕಾಳಜಿ ಇದ್ದರೆ ಹಾಗಲಕಾಯಿ ಕೂಡ ನಿಮ್ಮ ಅಚ್ಚುಮೆಚ್ಚಿನ ಖಾದ್ಯವಾಗುವುದರಲ್ಲಿ ಎರಡು ಮಾತಿಲ್ಲ. ಹಾಗಲಕಾಯಿ ಗೊಜ್ಜು ಸಾಮಾನ್ಯವಾಗಿ ನೀವು… Read More »

ಕಡಿಮೆ ಅವಧಿಯಲ್ಲಿ ಮಾಡಿ ರುಚಿಕರ ಅಕ್ಕಿರೊಟ್ಟಿ

By | 22/08/2018

ಅಕ್ಕಿರೊಟ್ಟಿ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತೆ ಅಲ್ವಾ?. ಆದರೆ ಮಾಡೋದಕ್ಕೆ ತುಂಬಾ ಕಷ್ಟವೆಂದು ಸುಮ್ಮನಾಗುತ್ತೇವೆ. ಹೆಚ್ಚಿನ ಜನರಿಗೆ ಈ ಅಕ್ಕಿ ರೊಟ್ಟಿ ಮಾಡುವುದೆಂದರೆ ಒಂದು ದೊಡ್ಡ ಯಜ್ಞ ಮಾಡಿದವರ ಹಾಗೇ ಮುಖ ಮಾಡುತ್ತಾರೆ. ಯಾಕೆಂದರೆ ಈ ಅಕ್ಕಿ ರೊಟ್ಟಿಯನ್ನು ಮಾಡುವುದಕ್ಕೆ ಬಹಳ ಸಮಯ ಬೇಕಾಗುತ್ತದೆ ಎಂದು ಇದರ ಉಸಾಬರಿಗೆ ಹೋಗುವುದಿಲ್ಲ. ಇನ್ನು ಈ ರೊಟ್ಟಿ ಹದ ತಪ್ಪಿ ದಪ್ಪಗಾದರೆ ಮತ್ತೆ ತಿನ್ನುವುದಕ್ಕೆ ಕಷ್ಟ. ಹಾಗಾಗಿ ತೆಳು ಮಾಡುವುದು ಒಂದು ಕಷ್ಟವಾದರೆ ಹೆಚ್ಚಿನ ಸಮಯ ಹಿಡುತ್ತದೆ ಎನ್ನುವುದು ಇನ್ನೊಂದು ಸಮಸ್ಯೆ. ಇದಕ್ಕೆಲ್ಲಾ… Read More »