Category Archives: Story

Moral Story: ನಮ್ಮ ಮೌಲ್ಯ ಕಡಿಮೆಯಾಗದು

By | 14/11/2018

ಒಂದು ಸೆಮಿನಾರ್‍ನಲ್ಲಿ ಭಾಷಣಗಾರರು ಕೈಯಲ್ಲಿ 2000 ರೂಪಾಯಿಯ ನೋಟೊಂದನ್ನು ಹಿಡಿದು ಸಭಿಕರಲ್ಲಿ `ಈ ಹಣ ಯಾರಿಗೆ ಬೇಕು?’ ಎಂದು ಪ್ರಶ್ನಿಸಿದರು. ಬಹುತೇಕರು ಕೈ ಎತ್ತಿದರು.  `ನಾನು ಈ ಹಣವನ್ನು ನಿಮಗೆ ನೀಡುವ ಮೊದಲು ಒಂದು ಕೆಲಸ ಮಾಡುತ್ತೇನೆ’ ಎಂದು ಹೇಳಿ ಆ ನೋಟನ್ನು ಕೆಳಗೆ ಹಾಕಿದರು. `ಈಗ ಯಾರಿಗೆ ಈ ಹಣ ಬೇಕು?’ ಎಂದರು. ಈಗಲೂ ಬಹುತೇಕರು ಕೈ ಎತ್ತಿದರು. ಮತ್ತೆ ಆ ಭಾಷಣಗಾರರು ಆ ಹಣವನ್ನು ಎತ್ತಿಕೊಂಡು ಅಲ್ಲಿದ್ದ ಕೊಳಕು ಮಣ್ಣಿನಲ್ಲಿ ಆ ನೋಟನ್ನು ಮುದ್ದೆ ಮಾಡಿದರು. ನಿಜಕ್ಕೂ ಆ… Read More »

Inspirational Story: ಕೆಂಟುಕಿ ಚಿಕನ್ ಸ್ಥಾಪಕನ ಯಶೋಗಾಥೆ

By | 14/11/2018

ಅವರಿಗೆ 67 ವರ್ಷ ವಯಸ್ಸಾಗಿತ್ತು. ಪುಟ್ಟ ಮನೆಯಿತ್ತು. ಹಳೆಯ ಕಾರಿತ್ತು. ಒಟ್ಟಾರೆ ನಿವೃತ್ತಿ ಜೀವನ ಮಾಡುವ ಸಮಯವಾಗಿತ್ತು. ಆದರೆ, ಅವರಲ್ಲಿ ಹೆಚ್ಚಿನ ಹಣವಿರಲಿಲ್ಲ. 99 ಡಾಲರ್ ಸಾಮಾಜಿಕ ಭದ್ರತಾ ಚೆಕ್ ಇತ್ತು. ಇಷ್ಟು ಹಣದಲ್ಲಿ ನಿವೃತ್ತಿ ಜೀವನ ತುಂಬಾ ಕಷ್ಟವಾಗುತ್ತಿತ್ತು. ಹೆಚ್ಚೆಂದರೆ ಕೆಲವೇ ತಿಂಗಳಲ್ಲಿ ಈ ಹಣ ಮುಗಿದು ಹೋಗುತ್ತಿತ್ತು. ಆದರೆ, ಆ ವ್ಯಕ್ತಿ ಜೀವನವನ್ನು ಹಾಗೆಯೇ ಬಿಡಲು ಇಚ್ಚಿಸಲಿಲ್ಲ. ಏನೋ ಬದಲಾವಣೆ ಮಾಡುವ ಗುರಿ ಹಾಕಿಕೊಂಡರು. ಏನಾದರೂ ಮಾರಾಟ ಮಾಡಿ ಜೀವನ ನಡೆಸೋಣ ಎಂದುಕೊಂಡರು. ಮಾರಾಟ ಮಾಡಲು ಅವರಲ್ಲಿ ಅಂತಹದ್ದೇನೂ… Read More »

ನೀತಿಕತೆ- ಮಕ್ಕಳಂತೆ ವರ್ತಿಸುವ 24ರ ತರುಣ

By | 06/09/2018

ಕೆಲವೊಮ್ಮೆ ಬದುಕು ನಾವು ನಿರೀಕ್ಷಿಸಿ ಇರದ ದಿಕ್ಕಿಗೆ ತಿರುಗಿಕೊಳ್ಳುತ್ತದೆ. ಇಂತಹ ಸಮಯದಲ್ಲಿ ಯಾವುದೋ ನೀತಿಕತೆಗಳು ನಿಮ್ಮ ಬದುಕಿಗೆ ಹೊಸ ದಿಕ್ಕು ತೋರಿಸಬಲ್ಲದು. ಅಂತಹ ನೀತಿಕತೆಯೊಂದು ಇಲ್ಲಿದೆ. ಎಲ್ಲರ ಬದುಕಿನಲ್ಲಿಯೂ ಒಂದು ಕತೆ ಇರುತ್ತದೆ 24 ವಯಸ್ಸಿನ ತರುಣ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಕಿಟಕಿಯಾಚೆ ನೋಡಿ ಆ ಯುವಕ `ಅಪ್ಪ, ನೋಡಲ್ಲಿ, ಮರಗಳು ಹಿಂದೆ ಓಡುತ್ತಿವೆ’ ಎಂದ. ತಂದೆ ನಕ್ಕರು. ಆ ತರುಣನ ಎದುರು ಕುಳಿತ ನವದಂಪತಿಗಳಿಗೆ ಇದು ಅಸಹನೀಯ ಅನಿಸಿತು. ಇಷ್ಟು ದೊಡ್ಡ ಯುವಕ ಪುಟ್ಟ ಮಕ್ಕಳಂತೆ ಇದ್ದಾನಲ್ಲ ಎಂದೆನಿಸಿತು. ಸ್ವಲ್ಪ ಹೊತ್ತಿನಲ್ಲಿ… Read More »

ಸಣ್ಣಕತೆ: ಕನ್ನಡಿ ಹೇಳಿದ ಸತ್ಯ

By | 04/09/2018

ಸಣ್ಣಕತೆ: ಕನ್ನಡಿ ಹೇಳಿದ ಸತ್ಯ ಐ ಲವ್ ಯು ಎಂದು ಪ್ರಪೋಸ್ ಮಾಡಿದ ಅವನಿಗೆ ಅವಳು ಕೋಪದಿಂದ “ನಿನ್ನ ಮುಸುಡಿ ಕನ್ನಡಿಯಲ್ಲಿ ನೋಡ್ಕೋ, ಥೂ” ಎಂದು ಬಯ್ದಳು. ಅವನು ಕನ್ನಡಿ ನೋಡಿದ. ಅವಳು ಕುರೂಪಿಯಾಗಿ ಕಂಡಳು. *** ಹನಿಕಥೆ: ಕೂಗು “ಗಂಡಸ್ರನ್ನ ಯಾವತ್ತೂ ನಂಬಬಾರದು” ಮತ್ತೊಮ್ಮೆ ಗೊಣಗಿಕೊಂಡಳು.ಪ್ರೀತಿಸಿ ಕೊನೆ ಕ್ಷಣದಲ್ಲಿ ಕೈಕೊಟ್ಟನಲ್ಲ, ಎಷ್ಟೊಂದು ನಂಬಿಬಿಟ್ಟೆ ಅವನನ್ನು….ಹಾಗಂತ ಅವಳು ಯೋಚಿಸುತ್ತಿರುವಾಗಲೇ “ಮಹೂರ್ತಕ್ಕೆ ಹೆಚ್ಚು ಸಮಯವಿಲ್ಲ. ಹುಡುಗಿನ ಕರೆತನ್ನಿ” ಎಂಬ ಪುರೋಹಿತರ ಧ್ವನಿ ಆಕೆಯನ್ನು ಎಚ್ಚರಿಸಿತು. ಹಿರಿಯರನ್ನು ಅನುಸರಿಸಿಕೊಂಡು ಹೋಗಿ ಹಸೆ ಮೇಲೆ ಕುಳಿತು… Read More »

ಎರಡು ಸಾವಿರದ ಐವತ್ತು, ಜಗತ್ತು ಬದಲಾಗಿಬಿಡ್ತು

By | 15/07/2018

*  ಪ್ರವೀಣ ಚಂದ್ರ “ಸುತ್ತಲೂ ಕಾಡು. ನಡುವೆ ನಮ್ಮ ಮನೆ. ಮನೆ ಪಕ್ಕ ಜುಳುಜುಳು ಹರಿವ ಪುಟ್ಟ ನದಿ. ನೂರಾರು ಹಕ್ಕಿಗಳ ಗಾನ. ಎಲ್ಲೆಲ್ಲೂ ತಂಪು. ವಾಹ್, ಎಷ್ಟೊಂದು ಹಿತ’ ಕನಸಲ್ಲಿ ನನ್ನ ಸ್ವಗತವನ್ನು ನಿಲ್ಲಿಸುವಂತೆ ರೋಬೊ ಎಚ್ಚರಿಸಿತು. “ಗುಡ್ ಮಾರ್ನಿಂಗ್, ಶುಭೋದಯ, ಸಮಯ ಆರುಗಂಟೆ, ಎದ್ದೇಳಿ ಮಿಸ್ಟರ್ ಪ್ರವೀಣ್ ಚಂದ್ರ” ಎಂದಿತು. ಅದು ನಮ್ಮ ಮನೆ ಕೆಲಸಗಾರ ರೋಬೊ. “ಇವತ್ತು ಡೇಟ್ ಎಷ್ಟು?’ ಪಿಳಿಪಿಳಿ ಕಣ್ಣುಬಿಟ್ಟು ಕೇಳಿದೆ. ಅದಕ್ಕೆ ರೋಬೊ  “ಎರಡು ಸಾವಿರದ ಐವತ್ತು, ಅಕ್ಟೋಬರ್ ಇಪತ್ತು’ ಎಂದಿತ್ತು. ಸಮಯ… Read More »