ಆನ್ ಲೈನ್ ಕಲಿಕೆ: ಡಿಜಿಟಲ್ ಮಾರ್ಕೆಟಿಂಗ್ ಕಂಪ್ಲಿಟ್ ಗೈಡ್

By | 03/09/2018
Digital Marketing Online Courses

ಇದು ಡಿಜಿಟಲ್ ಯುಗ. ಯಾವುದೇ ಉತ್ಪನ್ನವನ್ನು ಮಾರಾಟ ಮಾಡಬೇಕಾದರೂ ಡಿಜಿಟಲ್ ಕೌಶಲ ಅತ್ಯಂತ ಅಗತ್ಯ. ಡಿಜಿಟಲ್ ಮಾರ್ಕೆಟಿಂಗ್ ಕೌಶಲ ಕಲಿತವರಿಗೆ ಉತ್ತಮ ಬೇಡಿಕೆಯಿದೆ. ಡಿಜಿಟಲ್ ವ್ಯವಹಾರ ನಡೆಸುವವರೂ ತಮ್ಮ ಬಿಡುವಿನ ವೇಳೆಯನ್ನು ಡಿಜಿಟಲ್ ಮಾರ್ಕೆಟಿಂಗ್ ಕಲಿಕೆಗೆ ಮೀಸಲಿಡಬಹುದು. ನೆನಪಿಡಿ, ಇದು ಸ್ಪರ್ಧಾತ್ಮಕ ಯುಗ. ನೀವು ಕೌಶಲ ಕಲಿತಿದ್ದರೆ ಮಾತ್ರ ಆನ್ ಲೈನ್ ನಲ್ಲಿ ನಿಮ್ಮ ಕಂಪನಿ, ಬ್ರಾಂಡ್ ಅನ್ನು ಜನಪ್ರಿಯಗೊಳಿಸಬಹುದು. ಜೊತೆಗೆ, ಪ್ರತಿಸ್ಪರ್ಧಿಗಳನ್ನು ಸಮರ್ಥವಾಗಿ ಎದುರಿಸಬಹುದು.

ಏನಿದು ಡಿಜಿಟಲ್ ಮಾರ್ಕೆಟಿಂಗ್?

ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಇಂಟರ್ ನೆಟ್ ಬಳಸಿ ಮಾರುಕಟ್ಟೆ ವಿಸ್ತರಿಸಿಕೊಳ್ಳುವುದನ್ನು ಡಿಜಿಟಲ್ ಮಾರ್ಕೆಟಿಂಗ್ ಎನ್ನಬಹುದು. ಇದರಲ್ಲಿ ಫೇಸ್ ಬುಕ್, ಟ್ವಿಟ್ಟರ್, ಎಸ್ ಇಒ ಇಮೇಲ್, ವೆಬ್ ಸೈಟ್  ಸೇರಿದಂತೆ ನೂರಾರು ಸಂಗತಿಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸುವ ಸಂಗತಿಗಳು ಅಡಕವಾಗಿವೆ.

ಡಿಜಿಟಲ್ ಮಾರ್ಕೆಟಿಂಗ್ ಬಹುಬೇಡಿಕೆಯ ಕೌಶಲ

ಈ ವರ್ಷದ ಬಹುಬೇಡಿಕೆಯ ಕೌಶಲಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಸಹ ಪ್ರಮುಖವಾದದ್ದು. ಯಾಕೆಂದರೆ, ಈಗ ಆನ್ ಲೈನ್ ಅಂಗಡಿಗಳ ಸಂಖ್ಯೆ ಹೆಚ್ಚಾಗಿದೆ. ಅಮೇಜಾನ್, ಫ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್ ಸೇರಿದಂತೆ ಹಲವು ಬೃಹತ್ ಇ-ಕಾಮರ್ಸ್ ತಾಣಗಳಿವೆ. ಸಾಮಾನ್ಯ ವ್ಯವಹಾರಸ್ಥರೂ ತಮ್ಮ ಬ್ರ್ಯಾಂಡ್ ಹೆಸರಿನಲ್ಲಿ ಇ-ಕಾಮರ್ಸ್ ತಾಣಗಳನ್ನು ತೆರೆದಿದ್ದಾರೆ.

ವಿದ್ಯಾರ್ಥಿಗಳು ಕಡ್ಡಾಯವಾಗಿ ಕಲಿಯಬೇಕಾದ ಕೌಶಲ

ಈಗ ಮತ್ತು ಮುಂದೆ ಬೇಡಿಕೆ ಇರುವ ಕೌಶಲವಾಗಿರುವುದರಿಂದ ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ಭವಿಷ್ಯಕ್ಕೆ ಉಪಯೋಗವಾಗುವಂತಹ ಕೌಶಲಗಳನ್ನು ಕಲಿಯಬೇಕು. ಇಂತಹ ಕೋರ್ಸ್ ಗಳನ್ನು ಕಲಿಯಲು ಹೆಚ್ಚು ಹಣ ವೆಚ್ಚ ಮಾಡಬೇಕಿಲ್ಲ. ಒಂದು ಸಾವಿರ ರೂ.ಗಿಂತ ಕಡಿಮೆ ದರದಲ್ಲಿ ಕಲಿಯಬಹುದು. ಇದರಿಂದ ನಿಮಗೆ ಒಂದು ಸರ್ಟಿಫಿಕೇಷನ್ ದೊರಕಿದಂತೆ ಆಗುತ್ತದೆ. ನಿಮ್ಮ ರೆಸ್ಯೂಂನ ತೂಕ ಹೆಚ್ಚಿಸುತ್ತದೆ.

ಉದ್ಯಮಿಗಳೂ ಕಲಿಯಬೇಕಾದ ಕೌಶಲ

ಈಗ ಎಲ್ಲಾ ಕೌಶಲಗಳನ್ನು ವ್ಯವಹಾರಸ್ಥರೂ ಕಲಿತಿದ್ದರೆ ಉತ್ತಮ. ಇಲ್ಲವಾದಲ್ಲಿ ತಮ್ಮ ಉದ್ಯೋಗಿಗಳು ಏನು ಮಾಡುತ್ತಾರೆ ಅದನ್ನೇ ನಂಬಬೇಕಾಗುತ್ತದೆ. ಡಿಜಿಟಲ್ ಮಾರ್ಕೆಟಿಂಗ್ ಕುರಿತು ನಿಮ್ಮಲ್ಲಿ ಕೌಶಲ ಇರಲಿ. ನೀವು ಕೆಲವು ನೂರು ರೂಪಾಯಿ ಕೊಟ್ಟು ಡಿಟಿಟಲ್ ಮಾರ್ಕೆಟಿಂಗ್ ಕಲಿತರೆ ಉತ್ತಮ.

ಎಲ್ಲಿ ಕಲಿಯಬಹುದು?

ಆನ್ ಲೈನ್ ಕಲಿಕಾ ತಾಣಗಳ ಸಂಖ್ಯೆ ಹೆಚ್ಚಿದೆ. ಆದರೆ, ಎಲ್ಲವೂ ಅತ್ಯುತ್ತಮವಾದ ಕೋರ್ಸ್ ಗಳನ್ನು ನೀಡುತ್ತವೆ ಎಂದಲ್ಲ. ನನ್ನ ಅಚ್ಚುಮೆಚ್ಚಿನ ಆಯ್ಕೆ ಉದೆಮಿ. ಭಾರತದಲ್ಲಿ ಈ ಸಂಸ್ಥೆಯು ಸಾಕಷ್ಟು ಅಗತ್ಯ ಕೋರ್ಸ್ ಗಳನ್ನು ಕಡಿಮೆ ದರಕ್ಕೆ ನೀಡುತ್ತಿದೆ.

ಉದೆಮಿಯ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಗೆ ನಾನು ಭೇಟಿ ನೀಡಿದಾಗ ಕೇವಲ 770 ರೂಪಾಯಿ ಇತ್ತು. ಕೇವಲ 22 ಗಂಟೆಯಲ್ಲಿ ನೀವು ಇಂತಹ ಸರ್ಟಿಫಿಕೇಟ್ ನಿಮ್ಮದಾಗಿಸಿಕೊಳ್ಳಬಹುದು. 10 ಪಾಠಗಳಿವೆ. ಜೀವನಪೂರ್ತಿ ಈ ಕೋರ್ಸ್ ಅನ್ನು ನಿಮ್ಮಲ್ಲೇ ಇಟ್ಟುಕೊಂಡು ಓದುತ್ತ, ಮನನ ಮಾಡುತ್ತ ಇರಬಹುದು. ಅಂದರೆ, ಯಾವಾಗ ಬೇಕಾದರೂ ಬಳಸಬಹುದು. ಮೊಬೈಲ್ ಮತ್ತು ಟೀವಿಗೆ ಕನೆಕ್ಟ್ ಮಾಡಿಯೂ ಓದಬಹುದು. ಕೋರ್ಸ್ ಪೂರ್ತಿಗೊಳಿಸಿದ ಬಳಿಕ ಸರ್ಟಿಫಿಕೇಟ್ ಸಹ ದೊರಕುತ್ತದೆ..

ನೀವೂ ಆನ್ ಲೈನ್ ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಕಲಿತು ನಿಮ್ಮ ರೆಸ್ಯೂಂ ತೂಕ ಮತ್ತು ನಿಮ್ಮ ಜ್ಞಾನ ಬಂಡಾರ ಹೆಚ್ಚಿಸಲು ಬಯಸುವುದಾದರೆ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಕಲಿಕೆ ಆರಂಭಿಸಿ. ಶುಭವಾಗಲಿ

ಇಲ್ಲಿದೆ ಡಿಜಿಟಲ್ ಮಾರ್ಕೆಟಿಂಗ್ ಕಂಪ್ಲಿಟ್ ಗೈಡ್

[amazon_link asins=’B00NV8YJ96,B00U01IJR0,B00XCEOS6S,B07CL6N6Y5,B01N9Z98OZ,B01JK7CAGA’ template=’ProductCarousel’ store=’jobsnewsindia-21′ marketplace=’IN’ link_id=’bdd90aec-af37-11e8-af96-b51444efa5c9′]

 

Leave a Reply

Your email address will not be published. Required fields are marked *