ಗ್ರಾಹಕರಿಗೆ ಸಾಮಾಜಿಕ ವಲಯವನ್ನು ಸುರಕ್ಷಿತಗೊಳಿಸಲು ಹೆಲೊದಿಂದ ಇನ್ನೊಂದು ಕ್ರಮ

ಇಂಟರ್‍ನೆಟ್ ಮತ್ತು ಸ್ಮಾರ್ಟ್‍ಫೋನ್‍ಗಳ ಸುಲಭ ಲಭ್ಯತೆಯಿಂದಾಗಿ ಸಾಮಾಜಿಕ ಜಾಲತಾಣಗಳು ಇಂದು ನಮ್ಮ ಬದುಕಿನ ಭಾಗವೇ ಆಗಿಬಿಟ್ಟಿವೆ. ಹೊಸ ಕಾಲಮಾನದ ಸಾಮಾಜಿಕ ಜಾಲತಾಣಗಳ ಬಳಕೆದಾರರು ಇದನ್ನು ಸಮುದಾಯದ ಜೊತೆಗೆ ಗುರುತಿಸಿಕೊಳ್ಳಲು ವೇದಿಕೆಯಾಗಿ ಬಳಸಿ ಕೊಳ್ಳುತ್ತಿದ್ದು, ತಮ್ಮನ್ನು ತಾವು ಅಭಿವ್ಯಕ್ತಿಗೊಳಿಸುತ್ತಿದ್ದರೆ. ಸುದ್ದಿಯನ್ನು ತಿಳಿಯುತ್ತಿದ್ದಾರೆ. ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಇದು, ಇನ್ನೊಂದೆಡೆ ನಕಲಿ ಸುದ್ದಿಯು ಹಂಚಿಕೆಯಾಗಲು ಹಾಗೂ ಸೂಕ್ತವಲ್ಲದ ಅಡಕಗಳು ಆ್ಯಪ್‍ಗಳಲ್ಲಿ ಸೇರಲು ಕಾರಣವಾಗುತ್ತಿದೆ. ಆ್ಯಪ್‍ಗಳ ವಿಶ್ವಾಸಾರ್ಹತೆಯ ಕುರಿತು ಇದು ಪ್ರಶ್ನೆಯನ್ನು ಮೂಡಿಸುತ್ತಿದೆ. ಈ ಅಪಾಯವನ್ನು ತಡೆಯಲು ನಕಲಿ ಸುದ್ದಿಗಳನ್ನು ಪರಿಶೀಲಿಸುವ ಕಾರ್ಯತಂತ್ರ, ತಂತ್ರಜ್ಞಾನ ಈಗಿನ ಅಗತ್ಯವಾಗಿದೆ. (Helo app)

ಇಂಥ ಅಪಾಯಗಳನ್ನು ತಡೆಯಲು ಅಗತ್ಯ ಕ್ರಮಗಳನ್ನ ಕೈಗೊಳ್ಳುತ್ತಿರುವ ಸಾಮಾಜಿಕ ಮಾಧ್ಯಮದ ಒಂದು ಆ್ಯಪ್ ಹೆಲೊ ಆಗಿದೆ. ಹೆಲೊ ಸಮುದಾಯದ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಹಾಗೂ ಬಳಕೆದಾರರಿಗೆ ಸುರಕ್ಷಿತ ಭಾವನೆ ಒದಗಿಸಲು ಸುಮಾರು 6 ದಶಲಕ್ಷ ಪೋಸ್ಟ್‍ಗಳನ್ನು ಹೆಲೊ ಆ್ಯಪ್ ಡಿಲಿಟ್ ಮಾಡಿದೆ. ಹೆಲೊ ಈ ನಿಟ್ಟಿನಲ್ಲಿ ಅತ್ಯಾಧುನಿಕವಾದ ಕಾರ್ಯಪ್ರಕ್ರಿಯೆಯನ್ನು ಒಳಗೊಂಡಿದ್ದು, ಇದು ಇನ್ ಆ್ಯಪ್ ರಿಪೋರ್ಟಿಂಗ್ ಸೌಲಭ್ಯ ಒಳಗೊಂಡಿದ್ದು, ಬಳಕೆದಾರರು ಸೂಕ್ತವಲ್ಲ ಎಂದು ಭಾವಿಸಿದ ಅಡಕಗಳನ್ನು ಕುರಿತು ಮಾಹಿತಿ ನೀಡಬಹುದಾಗಿದೆ. ಈ ಮೂಲಕ ವೇದಿಕೆಯನ್ನು ಇನ್ನಷ್ಟು ಸುರಕ್ಷಿತಗೊಳಿಸಬಹುದಾಗಿದೆ.

ವಾಸ್ತವವಾಗಿ, ಇಂಥ ನಕಲಿ ಸುದ್ದಿಯನ್ನು ಪರಿಶೀಲಿಸಲು ಹೆಲೊ ಈಗ ಅಲ್ಟ್ ನ್ಯೂಸ್ ಜೊತೆಗೆ ಕೈಜೋಡಿಸಿದೆ. ಅಡಕಗಳ ವಸ್ತುಸ್ತಿತಿಯನ್ನು ಗುರುತಿಸಲು ಅಕ್ಟೋಬರ್ 2018ರರಲ್ಲಿ ಇದರ ಜೊತೆಗೆ ಕೈಜೋಡಿಸಿದೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಹೆಲೊ ಚುನಾವಣಾ ಆಯೋಗದ ಜೊತೆಗೂ ಕೈಜೋಡಿಸಿದ್ದು, ವ್ಯವಸ್ಥಿತ ಚಾನಲ್ ರೂಪಿಸಿದ್ದು, ಮಾದರಿ ನೀತಿ ಸಂಹಿತೆಗೆ ಬದ್ಧವಾಗಿತ್ತು. ಹೆಲೊ ಇದರ ಜೊತೆಗೆ ಪಿಎಸ್‍ಎ ಅನ್ನು ಆ್ಯಪ್‍ನಲ್ಲಿ ಹೊಂದಿದದ್ದು, ಇದು ಗ್ರಾಹಕರಿಗೆ ತಾವು ಪ್ರಕಟಮಾಡುವ ಅಡಕಗಳನ್ನು ಕುರಿತು ಜಾಗೃತರಾಗಿರುವಂತೆ ಎಚ್ಚರಿಸುತ್ತಿದ್ದು, ಜೊತೆಗೆ ಸುದ್ದಿಯ ಮೂಲವನ್ನು ಖಚಿತಪಡಿಸಿಕೊಳ್ಳಲು ಹಾಗೂ ಚುನಾವಣಾ ಆಯೋಗದ ನಿಯಮಗಳಿಗೆ ಬದ್ಧರಾಗಿ ಇರುವಂತೆ ನೋಡಿಕೊಳ್ಳಲು ಸಲಹೆ ಮಾಡಿತ್ತು.

ದೇಶದಾದ್ಯಂತ ಲಭ್ಯವಿರುವ ಸಾಮಾಜಿಕ ಜಾಲತಾಣಗಳ ಆ್ಯಪ್‍ಗಳು ಹೀಗೆ ಪೋಸ್ಟ್ ಮಾಡಲಾದ ಅಡಕಗಳನ್ನು ಗಮನಿಸಲು, ನಿರ್ವಹಿಸಲು ಸಾಧ್ಯವಿತ್ತು. ಸ್ಥಳೀಯ ಅಡಕಗಳನ್ನು ಗಮನಿಸಲು, ನವೀಕರಿಸಲು ತಂಡವೊಂದು ಹೆಲೊ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದು, ಹೆಲೊದಲ್ಲಿ ಒಟ್ಟು 14 ಭಾಷೆಗಳಲ್ಲಿ ಲಭ್ಯವಿದೆ. ಹೆಲೊ ಆಧುನೀಕರಣ ತಂಡವು ಮಷೀನ್ ಕಲಿಕೆ ತಂತ್ರಜ್ಞಾನವನ್ನು ಪಾಲಿಸಲಿದ್ದು, ಅಡಕಗಳ ಪರಿಶೀಲನೆಯ ಹಂತದಲ್ಲಿ ಮಾನವನ ಹಸ್ತಕ್ಷೇಪ ಹಾಗೂ ಸಮುದಾಯದ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘನೆ, ಮಾನಹಾನಿ ಅಂಶಗಳನ್ನು ಹಾಕುವುದು, ಸುಳ್ಳು ಸುದ್ದಿಗಳ ಪ್ರಕಟಣೆ, ಬೌದ್ಧಿಕ ಹಕ್ಕುಸ್ವಾಮ್ಯಗಳ ರಕ್ಷಣೆ ಇತ್ಯಾದಿ ಕುರಿತು ಜಾಗ್ರತೆ ವಹಿಸಲಿದೆ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಆ್ಯಪ್ ಎಂದಿಗೂ ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಿದೆ. ಇತರೆ ಯಾವುದೇ ಸಾಮಾಜಿಕ ಜಾಲತಾಣಗಳು ಸುಳ್ಳುಸುದ್ದಿಗಳಿಂದ ಶೇ 100ರಷ್ಟು ಮುಕ್ತವಾರಲು ಸಾಧ್ಯವಲ್ಲ. ಆದರೆ, ಪರಿಣಾಮಕಾರಿಯಾಗಿ ಅಡಕಗಳ ಪರಿಶೀಲನೆ ಹಾಗೂ ತಂತ್ರಜ್ಞಾನದ ಬಲಕೆಯು ಸುಳ್ಳು ಸುದ್ದಿಗಳ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಲೋಪಗಳನ್ನು ತಡೆಯಲು ಕಾರಣವಾಗಲಿದೆ. ಮುಂದುವರಿದು ಮಾರ್ಗದರ್ಶಿ ಸೂತ್ರಗಳು ಹಾಗೂ ಸುರಕ್ಷತಾ ಸೌಲಭ್ಯಗಳು ಬಳಕೆದಾರರರ ವಿಶ್ವಾಸವನ್ನು ಗಳಿಸಲು ಒತ್ತು ನೀಡಲಿದೆ. ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಹೆಚ್ಚಿಸಲಿದೆ. ಸುರರಕ್ಷಿತ ಮತ್ತು ವಿಶ್ವಾಸಾರ್ಹ ಅಡಕಗಳು ಎಂದಿಗೂ ಹೆಲೊದಂಥ ಆ್ಯಪ್‍ಗಳು ಹೆಚ್ಚು ನಂಬಲರ್ಹ ಸುದ್ದಿಗಳಿಗಾಗಿ ವಿಶ್ವಾಸಾರ್ಹವಾಗಿ ಭಾರತದಲ್ಲಿ ಉಳಿಯಲು, ಟ್ರೆಂಡಿಂಗ್ ಆಗಲು ಕಾರಣವಾಗಲಿವೆ.