Inspirational Story: ಕೆಂಟುಕಿ ಚಿಕನ್ ಸ್ಥಾಪಕನ ಯಶೋಗಾಥೆ

By | 14/11/2018

ಅವರಿಗೆ 67 ವರ್ಷ ವಯಸ್ಸಾಗಿತ್ತು. ಪುಟ್ಟ ಮನೆಯಿತ್ತು. ಹಳೆಯ ಕಾರಿತ್ತು. ಒಟ್ಟಾರೆ ನಿವೃತ್ತಿ ಜೀವನ ಮಾಡುವ ಸಮಯವಾಗಿತ್ತು. ಆದರೆ, ಅವರಲ್ಲಿ ಹೆಚ್ಚಿನ ಹಣವಿರಲಿಲ್ಲ. 99 ಡಾಲರ್ ಸಾಮಾಜಿಕ ಭದ್ರತಾ ಚೆಕ್ ಇತ್ತು. ಇಷ್ಟು ಹಣದಲ್ಲಿ ನಿವೃತ್ತಿ ಜೀವನ ತುಂಬಾ ಕಷ್ಟವಾಗುತ್ತಿತ್ತು. ಹೆಚ್ಚೆಂದರೆ ಕೆಲವೇ ತಿಂಗಳಲ್ಲಿ ಈ ಹಣ ಮುಗಿದು ಹೋಗುತ್ತಿತ್ತು. ಆದರೆ, ಆ ವ್ಯಕ್ತಿ ಜೀವನವನ್ನು ಹಾಗೆಯೇ ಬಿಡಲು ಇಚ್ಚಿಸಲಿಲ್ಲ. ಏನೋ ಬದಲಾವಣೆ ಮಾಡುವ ಗುರಿ ಹಾಕಿಕೊಂಡರು.

ಏನಾದರೂ ಮಾರಾಟ ಮಾಡಿ ಜೀವನ ನಡೆಸೋಣ ಎಂದುಕೊಂಡರು. ಮಾರಾಟ ಮಾಡಲು ಅವರಲ್ಲಿ ಅಂತಹದ್ದೇನೂ ಇರಲಿಲ್ಲ. ಆದರೆ, ತಾನು ಚೆನ್ನಾಗಿ ಚಿಕನ್ ಅಡುಗೆ ಮಾಡುವ ಕುರಿತು ಗೊತ್ತಿತ್ತು. ಸ್ನೇಹಿತರೆಲ್ಲರು ಇವರ ಕೋಳಿ ಕರಿಯನ್ನು ಬಹಳ ಹೊಗಳುತ್ತಿದ್ದರು. ಆ ರೆಸಿಪಿಯನ್ನು ಮಾರಾಟ ಮಾಡಲು ಬಯಸಿದರು. 

ಕೆಂಟುಕಿ ಎಂಬ ಊರನ್ನು ಬಿಟ್ಟು ಬೇರೆಬೇರೆ ಊರುಗಳಿಗೆ ತನ್ನ ಚಿಕನ್ ರೆಸಿಪಿ ಮಾರಾಟಕ್ಕೆ ಹೋದರು. ಹೋಟೆಲ್, ರೆಸ್ಟೂರೆಂಟ್ ಮಾಲಿಕರನ್ನು ಭೇಟಿಯಾದರು. ತನ್ನಲ್ಲಿರುವ ಬಾಯಲ್ಲಿ ನೀರೂರಿಸುವ ರೆಸಿಪಿ ಬಗ್ಗೆ ತಿಳಿಸಿದರು. ತುಂಬಾ ಜನರಿಗೆ ಉಚಿತವಾಗಿಯೂ ನೀಡಿದರು. 

ಆದರೆ, ಇವರು ಹೀಗೆ, ಮಾರಾಟ ಮಾಡಲು ಹೋದಾಗ, ಸಾವಿರಾರು ರೆಸ್ಟೂರೆಂಟ್ ಮಾಲಿಕರು `ಬೇಡಪ್ಪ, ನಿನ್ನ ರೆಸಿಪಿ’ ಎಂದು ರಿಜೆಕ್ಟ್ ಮಾಡಿದರು.

ಈ ವಯಸ್ಸಿನಲ್ಲಿ ಬೇರೆ ಯಾರೋ ಆಗಿದ್ದರೆ ಪ್ರಯತ್ನ ಕೈಬಿಡುತ್ತಿದ್ದರು. ಆದರೆ, ಇವರು ಪ್ರಯತ್ನ ಕೈಬಿಡಲಿಲ್ಲ. ಅವರಿಗೆ ತನ್ನ ಚಿಕನ್ ರೆಸಿಪಿ ಬಗ್ಗೆ ನಂಬಿಕೆ ಇತ್ತು.

ಅದು ಇತರೆ ರೆಸಿಪಿಯಂತಲ್ಲ. ಅದು ತುಂಬಾ ಸ್ಪೆಷಲ್ ಎಂದು ಅವರಿಗೆ ಗೊತ್ತಿತ್ತು, ನಂಬಿಕೆಯಿತ್ತು.

ಆದರೆ, 1009ನೇ ಪ್ರಯತ್ನದಲ್ಲಿ ಅವರು ಮೊದಲ ರೆಸಿಪಿ ಮಾರಾಟ ಮಾಡಲು ಯಶಸ್ವಿಯಾದರು. ಹೀಗೆ, ಅವರ ರೆಸಿಪಿ ನಿಧಾನವಾಗಿ ಮಾರಾಟವಾಯಿತು. ಆದರೆ, ಕೆಲವೇ ಸಮಯದಲ್ಲಿ ಈ ಚಿಕನ್ ರೆಸಿಪಿ ರುಚಿ ಕಂಡವರೆಲ್ಲ ಮತ್ತೆ ಮತ್ತೆ ಬೇಡಿಕೆಯಿಟ್ಟರು. ಕೆಎಫ್‍ಸಿ ಅಥವಾ ಕೆಂಟುಕಿ ಚಿಕನ್ ಜನ್ಮ ತಾಳಿದ್ದೇ ಹೀಗೆ. ಕೆಂಟುಕಿ ಚಿಕನ್ಕಂಪನಿಯ ಹೀಗಿನ ಬೃಹತ್ ಯಶಸ್ಸಿನ ಹಿಂದೆ ಇಂತಹ ಕತೆಯಿದೆ.

ನೀತಿ: ಪ್ರಯತ್ನ ಕೈಬಿಡಬೇಡಿ.ಯಶಸ್ಸು ಬಂದೇ ಬರುತ್ತದೆ.