ವ್ಯಕ್ತಿತ್ವ ವಿಕಸನ: ಲೀಡರ್ ಆಗುವುದು ಹೇಗೆ?

By | December 1, 2019
Photo Credit: der-bank-blog

ನಾಯಕತ್ವದ ಕುರಿತು “Are Leaders Born or Made?’ ಎಂಬ ಪ್ರಶ್ನೆ ತುಂಬಾ ಫೇಮಸ್. ಕೆಲವರ ಪ್ರಕಾರ ನಾಯಕತ್ವವೆನ್ನುವುದು ಹುಟ್ಟುಗುಣ, ನಾಯಕರನ್ನು ನಿಸರ್ಗವೇ ಸೃಷ್ಟಿಸುತ್ತದೆ. ಇನ್ನು ಕೆಲವರ ಪ್ರಕಾರ, ನಾಯಕರು ಹುಟ್ಟುವುದಲ್ಲ, ಅವರು ನಾಯಕರಾಗಿ ಬೆಳೆದವರು’. ರಾಜರುಗಳ ಕಾಲಕ್ಕೆ “Leaders Born ‘ ಎನ್ನುವುದು ಸರಿಯಾದ ಮಾತು ಆಗಿದ್ದೀರಬಹುದು. ಆದರೆ, ಈ ಕಾರ್ಪೋರೆಟ್ ಜಗತ್ತಿನಲ್ಲಿ “Leaders Made’ ಎನ್ನುವುದೇ ಪರಮಸತ್ಯ.

`ಹುಟ್ಟುತ್ತಲೇ ಯಾರು ನಾಯಕರಲ್ಲ. ಅವರು ಹುಟ್ಟಿದ ನಂತರ ನಾಯಕರಾದವರು. ಅವರು ಸರಳವಾಗಿ ನಾಯಕರಾದವರಲ್ಲ. ತಮ್ಮ ಕಠಿಣ ಪರಿಶ್ರಮದಿಂದ ಆ ಸ್ಥಾನಕ್ಕೆ ತಲುಪಿದವರು’ ಎಂಬ ಮಾತನ್ನು ಅಮೆರಿಕದ ಲೆಜೆಂಡರಿ ಫುಟ್‍ಬಾಲ್ ಕೋಚ್ ವಿನ್ಸ್ ಲಂಬಾರ್ಡಿ ಹೇಳಿದ್ದಾರೆ.

ಚಿನ್ನದ ಚಮಚ ಬಾಯಿಗಿಟ್ಟುಕೊಂಡು ಜನಿಸದೆ ಇದ್ದರೂ ನೀವು ನಾಯಕರಾಗಬಹುದು. ನಾಯಕರಾಗಲು ಸತತ ಪರಿಶ್ರಮ, ಚಾರಿತ್ರ್ಯ ಮತ್ತು ಸ್ಪಷ್ಟ ಹಾದಿ ನಿಮ್ಮಲ್ಲಿ ಇರಬೇಕು.

ಸ್ಪಷ್ಟ, ಸಾಧಿಸಬಲ್ಲ ದೃಷ್ಟಿಕೋನ

`ದೃಷ್ಟಿಕೋನವನ್ನು ವಾಸ್ತವವಾಗಿ ಬದಲಾಯಿಸಬಲ್ಲಸಾಮರ್ಥ್ಯವೇ ನಾಯಕತ್ವ’– ವಾರೆನ್ ಬೆನ್ನೀಸ್.

ದೊಡ್ಡದಾದ ದೃಷ್ಟಿಕೋನವನ್ನು ತನ್ನ ಮತ್ತು ತನ್ನ ತಂಡದ ಸದಸ್ಯರ ನೆರವಿನಿಂದ ವಾಸ್ತವರೂಪಕ್ಕೆ ತರುವ ಸಾಮಥ್ರ್ಯವನ್ನು ನಿಜವಾದ ನಾಯಕ ಹೊಂದಿರುತ್ತಾನೆ. ಇದಕ್ಕೆ ದೃಷ್ಟಿಕೋನ ಹೊಂದುವ ಸಾಮಥ್ರ್ಯ ಮಾತ್ರ ಸಾಕಾಗುವುದಿಲ್ಲ. ದೃಷ್ಟಿಕೋನದ ಕುರಿತು ಸ್ಪಷ್ಟತೆ, ತನ್ನ ತಂಡದ ಸದಸ್ಯರಿಗೆ ಅರ್ಥಮಾಡಿಸಿ ಕಾರ್ಯರೂಪಕ್ಕೆ ತರುವ ಸಾಮರ್ಥ್ಯವೂ ಬೇಕಿದೆ.

ಹೀಗೆ ಮಾಡಿ: ನಿಮ್ಮಷ್ಟಕ್ಕೆ ಒಂದು ದೃಷ್ಟಿಕೋನ ಹೊಂದಿ. ಆ ದೃಷ್ಟಿಕೋನ ಅಥವಾ ವಿಷನ್ ಅನ್ನು ಸಾಸಲು ಯಾವೆಲ್ಲ ವಿಧಾನಗಳನ್ನು ಅನುಸರಿಸಬಹುದು ಎಂದು ಯೋಚಿಸಿ. ಈ ವಿಧಾನಗಳು ಪುಟ್ಟದಾಗಿದ್ದರೂ ನಿಮ್ಮ ದೊಡ್ಡ ಪ್ರಮಾಣದ ಗುರಿಯನ್ನು ತಲುಪಲು ಪ್ರಮುಖ ಮೆಟ್ಟಿಲಾಗಿರಲಿವೆ. ಉದಾಹರಣೆಗೆ ಮುಂದಿನ ತ್ರೈಮಾಸಿಕಕ್ಕೆ ನಿಮ್ಮ ಈಗಿನ ಲೆವೆಲ್‍ನಿಂದ ಮ್ಯಾನೇಜರ್ ಹಂತದ ಹುದ್ದೆಗೆ ಹೋಗಬಯಸಿದ್ದೀರಿ. ಇದಕ್ಕಾಗಿ ಏನೆಲ್ಲ ಮಾಡಬೇಕು? ಅದನ್ನೆಲ್ಲ ಮಾಡಿ. ಒಮ್ಮೆ ನಿಮ್ಮ ಗುರಿ ಸ್ಪಷ್ಟವಾದ ಮೇಲೆ ಅದನ್ನು ಸಾಸಲು ಉತ್ಸಾಹದಿಂದ ತೊಡಗಿಸಿಕೊಳ್ಳಿರಿ. ನೀವು ಅಂದುಕೊಂಡದ್ದು ಕೆಲವೊಮ್ಮೆ ಬೇಗ ಅಥವಾ ತಡವಾಗಿ ನಿಮಗೆ ದೊರಕಬಹುದು.

ಸೂರ್ತಿದಾಯಕ ಮತ್ತು ಪ್ರಭಾವ ಬೀರುವ ಸಾಮರ್ಥ್ಯ

ನಿಮ್ಮ ಕೆಲಸ ಮತ್ತು ಅದರ ಯಶಸ್ಸು ಕೇವಲ ನಿಮಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ನಿಮ್ಮನ್ನು ಮಾತ್ರ ಅವಲಂಬಿಸಿಕೊಂಡಿರುವುದಿಲ್ಲ. ಅದರ ಸಾಧನೆಗೆ ಇತರರ ನೆರವೂ ಅತ್ಯಗತ್ಯ. ಬೃಹತ್ ಗುರಿಯನ್ನು ಸಾಸಲು ತನ್ನ ಸುತ್ತಮುತ್ತಲಿನವರನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಉತ್ತಮ ನಾಯಕರು ತಿಳಿದಿರುತ್ತಾರೆ. ನೀವು ನಾಯಕರಾಗಬೇಕು ಎಂದರೆ ನಿಮ್ಮ ತಂಡದ ಸದಸ್ಯರು, ನಿಮ್ಮ ಸ್ನೇಹಿತರು ಅಥವಾ ಇಂಟರ್‍ನೆಟ್ ಜಗತ್ತಿನಲ್ಲಿರುವ ಅಪರಿಚಿತರು ನಿಮ್ಮನ್ನು ಹಿಂಬಾಲಿಸುವಂತಾಗಬೇಕು. ನೀವು ಅವರೆಲ್ಲರನ್ನು ಎಲ್ಲಿಗೆ ಕೊಂಡೊಯ್ಯಲಿದ್ದೀರಿ ಎನ್ನುವುದನ್ನು ಅವರಿಗೆ ಸ್ಪಷ್ಟಪಡಿಸಿರಬೇಕು. ಇದಕ್ಕಾಗಿ ನೀವು ನಿಮ್ಮ ಹಾದಿಯನ್ನು ಸರಿಯಾಗಿಟ್ಟುಕೊಳ್ಳಿ. ನಂತರ ಆ ಹಾದಿಯನ್ನು ಅನುಸರಿಸಲು ಇತರರಿಗೆ ಹೇಳಿರಿ.

ಹೊಂದಿಕೊಳ್ಳುವ ಸಾಮರ್ಥ್ಯ

`ನಿಜವಾದ ನಾಯಕನಿಗೆ ಒಬ್ಬಂಟಿಯಾಗಿ ನಿಲ್ಲುವ ಸಾಮಥ್ರ್ಯ ಇರುತ್ತದೆ.  ಈ ಮೂಲಕ ಕಠಿಣನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಂದ ಸಾಧ್ಯವಾಗುತ್ತದೆ’ -ಡಾಗಲಾಸ್ ಮೆಕ್ ಆರ್ಥರ್.

ಬದುಕು ಅಥವಾ ಜೀವನದಲ್ಲಿ `ಬದಲಾವಣೆ’ಗೆ ಒಗ್ಗಿಕೊಳ್ಳುವ ಸಾಮರ್ಥ್ಯ ಇರಬೇಕು. ಇಂತಹ ಬದಲಾವಣೆಯನ್ನು ಯಾವ ರೀತಿ ತರಬೇಕು ಎಂದು ಉತ್ತಮ ನಾಯಕ ತಿಳಿದಿರುತ್ತಾನೆ. ನಾವು ನಿಜಕ್ಕೂ ದೊಡ್ಡ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಇತರರಿಗೆ ತೋರಿಸಿಕೊಳ್ಳಲು ಮತ್ತು ಇತರರಿಗೆ ನೀವು ಉತ್ತಮ ನಾಯಕರೆಂದು ಭರವಸೆ ಮೂಡಲು ಇದು ಉತ್ತಮ ಅವಕಾಶವಾಗಿದೆ.

ಹೀಗೆ ಮಾಡಿ: ನಿಮ್ಮ ಗುರಿ ಸಾಧಿಸಿಕೊಳ್ಳಲು ಸ್ಪಷ್ಟ ಹಾದಿಯನ್ನು ರೂಢಿಸಿಕೊಳ್ಳಿ. ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ತರಲು ಹಿಂಜರಿಯಬೇಡಿ. ಬದಲಾವಣೆ ಎನ್ನುವುದು ಸಾಕಷ್ಟು ಒತ್ತಡವನ್ನು ಉಂಟು ಮಾಡುತ್ತದೆ. ಬದಲಾವಣೆಯ ಒತ್ತಡದಲ್ಲಿ ಹಲವು ಕೆಲಸಗಳನ್ನು ತ್ವರಿತವಾಗಿ ಮಾಡಬೇಕಾಗುತ್ತದೆ. ನಿಮ್ಮ ಕಂಪನಿಯಲ್ಲಿ ಯಾವುದಾದರೂ ಹೊಸ ಬ್ರಾಂಡ್ ಅಥವಾ ಪ್ರಾಜೆಕ್ಟ್ ರಚಿಸಲ್ಪಡುವಾಗ ಇಂತಹ ಒತ್ತಡ ನಿಮಗೆ ಉಂಟಾಗಬಹುದು. ಈ ಸಮಯದಲ್ಲಿ ಈ ಒತ್ತಡದಲ್ಲಿ ನೀವು ಹೇಗೆ ಕಾರ್ಯನಿರ್ವಹಿಸುವಿರಿ ಎನ್ನುವುದು ಮುಖ್ಯವಾಗುತ್ತದೆ. ಇಂತಹ ಸಮಯದಲ್ಲಿ ಹಿಂಜರಿಯಬೇಡಿ. ಇದು ನಿಮಗೆ ದೊರಕಿರುವ ಉತ್ತಮ ಅವಕಾಶವೆಂದು ತಿಳಿದುಕೊಳ್ಳಿ. ಒಮ್ಮೆ ನಿಮಗೆ ಆರಾಮ ಎನಿಸಿದರೆ ನಂತರ ಆ ಯೋಜನೆಯಲ್ಲಿ ಇನ್ನಷ್ಟು ಮುಂದುವರೆಯಬಹುದು.

 ಇತರರ ಸಾಧನೆಗೂ ಉತ್ತೇಜನ

ನೀವು ನಾಯಕರಾಗುವ ಭರದಲ್ಲಿ ಇತರರನ್ನು ಕಡೆಗಣಿಸಬೇಡಿ. ನಿಮ್ಮ ಗುರಿ ತಲುಪುವಿಕೆಯು ಇತರರಿಗೂ ಸಾಧನೆ ಮಾಡಲು ನೆರವಾಗುವಂತೆ ಇರಬೇಕು. ತಂಡಕ್ಕೆ ನಾಯಕರಾಗುವುದು ಎಂದರೆ ನಿಮ್ಮಷ್ಟಕ್ಕೆ, ನಿಮಗಾಗಿ ಜವಾಬ್ದಾರಿ ತೆಗೆದುಕೊಳ್ಳುವುದು ಮಾತ್ರವಲ್ಲ. ಇತರರ ಸಾಧನೆಗೂ ನೀವು ಸಹಕರಿಸಿದರೆ ಮಾತ್ರ ಉತ್ತಮ ನಾಯಕರಾಗುವಿರಿ. ನೀವು ತಂಡದಲ್ಲಿ ನಾಯಕರಾಗುವಾಗ ನಿಮ್ಮ ಸಾಧನೆಗಾಗಿ ಇಷ್ಟೆಲ್ಲ ಮಾಡುತ್ತೀರಿ ಎಂದುಕೊಳ್ಳಬೇಡಿ. ಎಲ್ಲರಿಗೂ ತಾವು ತಲುಪುವ ಹಾದಿಯ ಕುರಿತು ಸ್ಪಷ್ಟವಾಗಿರಲಿ. ಅವರ ಯಶಸ್ಸು ಸಹ ನಿಮ್ಮ ಯಶಸ್ಸಾಗಲಿ. ಅವರ ವೈಫಲ್ಯತೆ ನಿಮ್ಮ ವೈಫಲ್ಯತೆಯಾಗುತ್ತದೆ.

ಹೀಗೆ ಮಾಡಿ: ತಂಡದ ಪ್ರತಿಯೊಬ್ಬ ಸದಸ್ಯರ ಕೆಲಸಗಳ ಕುರಿತು ಮೀಟಿಂಗ್‍ನಲ್ಲಿ ಚರ್ಚಿಸಿ. ಅವರ ಪ್ರಶ್ನೆಗಳಿಗೆ ಉತ್ತರಿಸಿ. ಅವರಿಗೆ ಅಮೂಲ್ಯ ಸಲಹೆಗಳನ್ನು ನೀಡಿ. ಅವರಿಂದ ಯಾವುದಾದರೂ ತಪ್ಪುಗಳಾದರೆ ಅಂತಹ ತಪ್ಪನ್ನು ಹೇಗೆ ಪರಿಹರಿಸಬಹುದು ತಿಳಿಸಿ ಹೇಳಿರಿ.

 ಕಲಿಯುತ್ತ ಬೆಳೆಯುವ ಪ್ರಕ್ರಿಯೆ

ನಾಯಕತ್ವ ಮತ್ತು ಕಲಿಕೆಯು ಒಂದಕ್ಕೊಂದು ಸಂಬಂಧವಿರುವ ಪ್ರಮುಖ ವಿಷಯವಾಗಿದೆ– ಜಾನ್ ಎಫ್ ಕೆನೆಡಿ

ನಾಯಕರು ಮಾತ್ರವಲ್ಲದೆ ಎಲ್ಲರೂ ಪ್ರತಿಕ್ಷಣ ಕಲಿಯುತ್ತಿದ್ದರೆ ಮಾತ್ರ ಬೆಳೆಯಲು ಸಾಧ್ಯ. ನಾಯಕರು ಮುಕ್ತ ಮನಸ್ಸಿನವರಾಗಿದ್ದು, ತಮ್ಮ ಪ್ರಗತಿಗಾಗಿ ಹೊಸತನ್ನು ಕಲಿಯಲು ಸದಾ ಹಂಬಲಿಸುತ್ತ ಇರುತ್ತಾರೆ.

ಹೀಗೆ ಮಾಡಿ: ನಿಮ್ಮ ನಿತ್ಯ ಜೀವನದಲ್ಲಿ ಹೇಗೆ ನಾಯಕರಾಗುವುದು ಎಂದು ಕಲಿಯುತ್ತ ಇರಿ. ಮುಂಬರುವ ಕ್ಲಯೆಂಟ್ ಕ್ಯಾಂಪೈನ್ ಅಥವಾ ಟೀಂ ಬಿಲ್ಡಿಂಗ್ ಚಟುವಟಿಕೆಗಳಿಗೆ ಸಂಬಂಸಿದಂತೆ ಈಗಲೇ ಕಲಿಕೆ ಆರಂಭಿಸಿ. ಸಮಯ ಸಿಕ್ಕಾಗ ಲೀಡರ್ರ್ ಷಿಪ್‍ಗೆ ಸಂಬಂಧಪಟ್ಟ ಪುಸ್ತಕಗಳು, ಜೀವನಚರಿತ್ರೆಗಳನ್ನು ಓದುತ್ತೀರಿ.

`ಪ್ರತಿದಿನ ನಾಯಕರಾಗಲು ಬೇಕಾದ ಪಾಯಿಂಟ್‍ಗಳನ್ನು ಗಳಿಸಿ’ ಎಂದು ಮೈಕಲ್ ಜೋರ್ಡನ್ ಹೇಳಿದ್ದಾರೆ. `ನಿಮ್ಮ ಪ್ರತಿದಿನದ ಕಲಿಕೆಯು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಅಭಿವೃದ್ಧಿಗೆ ಸಹಕರಿಸುತ್ತದೆ. ಕಲಿಯಲು ಬೇಕಾಗುವಷ್ಟು ಹೊಸ ಕೌಶಲಗಳು ನಿಮ್ಮನ್ನು ಕಾಯುತ್ತಿರುತ್ತದೆ. ಇದು ನಿಮ್ಮ ಕ್ಯಾರೆಕ್ಟರ್ ಅನ್ನು ಸದೃಢಗೊಳಿಸುತ್ತದೆ ಮತ್ತು ನಿಮ್ಮನ್ನು ನಾಯಕತ್ವದತ್ತ ಕೊಂಡೊಯ್ಯಲು ಹೊಸ ಅವಕಾಶ ಒದಗಿಸುತ್ತದೆ’.

(ಪೂರಕ ಮಾಹಿತಿ, ಕ್ವೋಟ್ ಪಡೆದಿರುವುದು- ಇಂಟರ್‍ನೆಟ್‍ನಿಂದ ಮತ್ತು ದಿನನಿತ್ಯ ಓದುವ ಪುಸ್ತಕಗಳಿಂದ ಮತ್ತು ದಿನ ನಿತ್ಯ ಭೇಟಿಯಾಗುವ ವ್ಯಕ್ತಿಗಳಿಂದ ಹಾಗೂ ಅನುಭವಗಳಿಂದ).

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.