ಸದ್ದು

ಅಂದಿನ ಹುಡುಗಿಯರ ಹೆಜ್ಜೆಗೆ ಗೆಜ್ಜೆಯ ಸದ್ದಾಗಿತ್ತು ತಾಳ ಇಂದಿನ ಹುಡುಗಿಯರ ಹೆಜ್ಜೆಗೆ ಹೈ ಹೀಲ್ಡ್ ಸದ್ದೇಬ್ಯಾಂಡು ಮೇಳ

ನಗುವ ಹೂವಿಗೆ….

ದಿನಕ್ಕೊಂದಿಷ್ಟು ಮುಗುಳು ನಗುದಿನಕರನ ನೋಡಿ..ಬಿರಿದಾಂಗೆ ಬಳ್ಳಿತುಂಬಾ ಮಲ್ಲಿಗೆ ಮೊಗ್ಗುಏನೆನ್ನಲಿ ಹುಡುಗಿ ನಿನ್ನ ನಗುವ ಬೆಡಗುಕಪ್ಪು ಸಮಾಜದ ನಡುವೆಕಣ್ಣಾ ಮುಚ್ಚಾಲೆ ಆಟವೇ…ಯಾರಿಗೂ ಕಾಣದಾಂಗೆ ಸ್ಫುರಿಸುವೆಮುಗುಳ್ನಗೆಯ ಒಲವ ನೋಟ… ನಿನ್ನೀ ನಗುವಲ್ಲಿ ನೂರು ಮಾತುನೂರೊಂದು ಮಧುರ ಕಾವ್ಯ..ಭಾವ ನವಿರೇಳುತಿದೆನಲಿದಾಡುತಿದೆ ನವಿಲಾಗಿ ಮನಸ್ಸು… ಒಲವ ರಂಗವಲ್ಲಿ ಚೆಲುವ ರಾಗದಲ್ಲಿಅನುರಾಗದ ಕಂಪು ಕಣಜನಿನ್ನೀ ಮನ ಮೈಮಾಟದಲ್ಲಿಮಳೆ ಬಿಲ್ಲ ಚೆಲುವು… ನಿತ್ಯ ನಗುವ ಮಲ್ಲಿಗೆಯಾಗುಕನಸ ಮುದ್ದು ಬದುಕ ಹಾಳೆಗೆಸಮಾಜದ ಉರಿಯ ನಾಲಗೆಗೆ ಸಿಗದಾಂಗೆಅಕ್ಷಯ ನಗುವಿರಲಿ ನಾಳೆಗೆ…