Think Smart: ಸ್ಮಾರ್ಟ್ ಮನೆ, ಸ್ಮಾರ್ಟ್ ಮನಸ್ಸು

By | 25/12/2018

ಉದ್ಯಾನನಗರಿ ಬೆಂಗಳೂರಿನಲ್ಲೀಗ ಚಳಿಯ ಸಮಯ. ಮುಂಜಾನೆಯಂತೂ ಬೆಚ್ಚಗಿನ ರಗ್ಗು ಹೊದ್ದು ಹಾಯಾಗಿ ಮಲಗಿದರಂತೂ ಸ್ವರ್ಗಸುಖ. ಹೊರಗೆ ಚಳಿ, ಮನಸ್ಸೊಳಗೆ ಹಿತವಾದ ಕನಸು. ಇನ್ನಷ್ಟು ಹೊತ್ತು ಮಲಗಬೇಕು ಎಂದೆನಿಸುವಷ್ಟರಲ್ಲಿ ಸದ್ದು ಮಾಡಿದ್ದು alarm. ನಿದ್ದೆ ಮಾಡಲು ಬಿಡುತ್ತಿಲ್ಲ ಎಂದುಕೊಂಡೆ. ಕೊಂಚ ದೂರದಲ್ಲಿಟ್ಟಿರುವುದರಿಂದ ಎದ್ದೇಳುವುದು ಅನಿವಾರ್ಯ.

ಬೆಳಗ್ಗೆದ್ದು ವಾಕಿಂಗ್ ಹೋಗುವುದು ಇತ್ತೀಚಿನ ಅಭ್ಯಾಸ. ಭವಿಷ್ಯದಲ್ಲಿ ಹೊಟ್ಟೆ ಮುಂದೆ ಬಾರದೆ ಇರಲಿ ಎಂದು ವಾಕಿಂಗ್ ಹೋಗುವುದು ಮುಖ್ಯ ಕಾರಣ. ಜೊತೆಗೆ, ದಿನವೀಡಿ ಏಸಿ ರೂಂನಲ್ಲಿ ಕೆಲಸ ಮಾಡುವುದರಿಂದ ದೇಹಕ್ಕೆ ದೈಹಿಕ ವ್ಯಾಯಾಮವೇ ಇಲ್ಲ. ಹೀಗಾಗಿ ಪ್ರತಿನಿತ್ಯ ವಾಕಿಂಗ್ ಹೋಗುವ ರೂಢಿ.

mi band

ವಾಕಿಂಗ್ ಹೋಗುವಾಗ ಮೊದಲು ಕೈಗೆ Mi Band ಕಟ್ಟಿಕೊಂಡೆ. ಇವತ್ತು ಕನಿಷ್ಟ 3 ಸಾವಿರ ಹೆಜ್ಜೆ ನಡೆಯಲೇಬೇಕು ಎಂಬ ಸಂಕಲ್ಪ ಮಾಡಿಕೊಂಡೆ. ನನ್ನ ಮುಂಜಾನೆ ಆರಂಭವಾಗುವುದು ಹೀಗೆಯೇ. ತುಂಬಾ ಸ್ಮಾರ್ಟ್ ಅಂದುಕೊಂಡಿರಾ. ಇಂತಹ Smart Wearable smart band ಬಳಸುವುದರಿಂದ ಸಾಕಷ್ಟು ಲಾಭವಿದೆ. ನೀವು ಬಳಸದೆ ಇದ್ದರೆ ಖಂಡಿತಾ ಬಳಸಿನೋಡಿ.  ಈ ಕೈ ಬಾಂಡ್ ವಿಶೇಷತೆಗಳು ಇಂತಿವೆ.

  • ಅಂದದ ವಿನ್ಯಾಸ, ಕೈಗೆ ಸುಂದರವಾಗಿ ಕಾಣಿಸುತ್ತದೆ.
  • ಇದರ ಮೂಲಕ ನೀವು ಆ್ಯಪ್ ನೋಟಿಫಿಕೇಷನ್, ಎಸ್ಎಂಎಸ್, ವಾಟ್ಸ್ ಆ್ಯಪ್, ಮೆಸೆಜ್ ಇತ್ಯಾದಿ ಹಲವು ಸ್ಮಾರ್ಟ್ ಫೀಚರ್ ಗಳನ್ನು ಪಡೆಯಬಹುದು.
  • ನೀವು ಎಷ್ಟು ಹೆಜ್ಜೆ ವಾಕಿಂಗ್ ಮಾಡಿದ್ದೀರಿ ಎಂಬ ಮಾಹಿತಿಯನ್ನು ಪಡೆಯಬಹುದು.
  • ಎಲ್ಲಾ ವಾಚ್ ಗಳಂತೆ ಸಮಯವನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದು.
  • ವಾಕಿಂಗ್ ಹೋಗುವವರಿಗೆ ಇದು ಸೂಕ್ತ ಸಂಗಾತಿ. ಇದರ ಹಿಂದಿನ ಆವೃತ್ತಿಗೆ ಹೋಲಿಸಿದರೆ ಇದರ ಆಲ್ಗೊರಿದಂ ಸಾಕಷ್ಟು ಉತ್ತಮಗೊಂಡಿದೆ. ಪ್ರತಿ ಹೆಜ್ಜೆಯನ್ನೂ ಲೆಕ್ಕಹಾಕುತ್ತದೆ.
  • ಹೃದಯದ ಬಡಿತವನ್ನು ನಿಖರವಾಗಿ ಲೆಕ್ಕಹಾಕುವ ವಿಶೇಷ ಫೀಚರ್ ಇದಕ್ಕಿದೆ.
  • ಬ್ಯಾಟರಿ ಬಾಳ್ವಿಕೆ ಸುಮಾರು 20 ದಿನ ಇದೆ. ಹೀಗಾಗಿ, ಚಾರ್ಜಿಂಗ್ ಗೆ ಇಟ್ಟಿಲ್ಲ ಇತ್ಯಾದಿ ಅಳುಕು ಬೇಡ.

ಇಂತಹ ಹತ್ತು ಹಲವು ಫೀಚರ್ ಗಳನ್ನು ಒಳಗೊಂಡಿರುವ ಸ್ಮಾರ್ಟ್ ಬ್ಯಾಂಡ್ Smart Wearable ಖರೀದಿಸಿರುವುದರಿಂದ ಪ್ರತಿನಿತ್ಯ ಸ್ಮಾರ್ಟ್ ಆಗಿ ವಾಕಿಂಗ್ ಮಾಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಿನ್ನೆಗಿಂತ ಕೆಲವು ಹೆಜ್ಜೆ ಹೆಚ್ಚು ನಡೆಯಲು ಇದು ಸ್ಪೂರ್ತಿ ನೀಡುತ್ತದೆ. ಜೊತೆಗೆ, ಕೈಗೆ ಮಾಡರ್ನ್ ಲುಕ್ ನೀಡುತ್ತದೆ.

ಈ ಬಾರಿ ನನಗೆ ಎರಡು ವಾಚ್ ಗಳು ಉಡುಗೊರೆಯಾಗಿ ದೊರಕಿವೆ. ಪ್ರೀತಿಯ ವೈಫ್ casio g shock ಎಂಬ ಏಳೆಂಟು ಸಾವಿರ ರೂ.ನ ದುಬಾರಿ ವಾಚ್ ನೀಡಿ ಷಾಕ್ ನೀಡಿದಳು. ಗೆಳತಿ ಶ್ರೀಲಕ್ಷ್ಮಿ ಸುಂದರ ವಿನ್ಯಾಸದ ಲೇಟೆಸ್ಟ್ ಫಾಸ್ಟ್ ಟ್ರ್ಯಾಕ್ ವಾಚ್ ನೀಡಿದಳು. ದಿನಕ್ಕೊಂದು ವಾಚ್ ಕಟ್ಟುತ್ತ ಹೋಗುವ ಮಜಾ ವೇ ಬೇರೆ. ನಿಮ್ಮ ಪ್ರೀತಿಪಾತ್ರರಿಗೆ ಏನು ಉಡುಗೊರೆ ಕೊಡುವುದು ಎಂದು ಯೋಚಿಸುತ್ತಿದ್ದರೆ ಖಂಡಿತವಾಗಿಯೂ ಇಂತಹ Smartwatch ನೀಡಬಹುದು.

ಕ್ಯಾಶಿಯೊ ಜಿ ಶಾಕ್ ನಂತಹ ಡಿಜಿಟಲ್ ಅನಲಾಗ್ ವಾಚ್ ನಾನು ಬಳಸಿದ್ದು ಇದೇ ಮೊದಲು. ಅದರಲ್ಲಿ ಸಮಯ, ಅಲರಾಂ, ವರ್ಲ್ಡ್ ಕ್ಲಾಕ್ ಸೇರಿದಂತೆ ಹಲವು ಫೀಚರ್ ಗಳಿವೆ. ವಿಶೇಷವೆಂದರೆ ಇಂತಹ ವಾಚ್ ನಲ್ಲಿ ಸಮಯ ಹೊಂದಿಸುವುದು ಹೇಗೆ? ಸೆಟ್ಟಿಂಗ್ ನಿರ್ವಹಿಸುವುದು ಹೇಗೆ ಎಂದು ಗೊತ್ತಿಲ್ಲದೇ ಆರಂಭದಲ್ಲಿ ತುಂಬಾ ಪರದಾಡಬೇಕಾಯಿತು. ಕೊನೆಗೆ ಯೂಟ್ಯೂಬ್ ನೆರವಿನಿಂದ ಸಮಯ ಹೊಂದಾಣಿಕೆ ಮಾಡಿದೆ. ಈಗ ಇದರ ನಿರ್ವಹಣೆ ಅರ್ಥವಾಗಿದೆ. ಕೈಗೆ ಸ್ಮಾರ್ಟ್ ಲುಕ್ ನೀಡಿದೆ.

ಪುಟಾಣಿ ಸ್ಪೀಕರ್ ಗಳು

ಎಲ್ಲಾದರೂ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಪಕ್ಕದಲ್ಲಿ ಒಂದು ಸ್ಮಾರ್ಟ್ ಸ್ಪೀಕರ್ ಇರಬೇಕು. ಅದರಲ್ಲಿ ಬ್ಲೂಟೂಥ್ ಮೂಲಕ ಹಾಡುಗಳನ್ನು ಕೇಳಬೇಕು. ಈ ವರ್ಷ ಇಂತಹ ಸ್ಮಾರ್ಟ್ ಸ್ಪೀಕರ್ ಯಾವುದಾದರೂ ಖರೀದಿಸಬೇಕು ಎಂದುಕೊಂಡಿರುವೆ. 2019ರಲ್ಲಿ Google Home ಅಥವಾ Google Home Mini ಖರೀದಿಸಬೇಕೆಂದಿರುವೆ.

ಇಂತಹ ಸ್ಮಾರ್ಟ್ ಸ್ಪೀಕರ್ ಅಥವಾ ಸ್ಮಾರ್ಟ್ ಹೋಂ ಸಾಧನಗಳು ಯಾಕೆ ಬೇಕು ಎನ್ನುವಿರಾ?

  • ಮೊದಲನೆಯದಾಗಿ ನಮ್ಮ ಮಾತನ್ನು ಅಥವಾ ಆದೇಶವನ್ನು ಈ ಸಾಧನಗಳು ಕೇಳುತ್ತವೆ (ಮನೆಯಲ್ಲಿರುವ ಮನುಷ್ಯರು ನಮ್ಮ ಮಾತನ್ನು ಯಾವಾಗಲೂ ಕೇಳುತ್ತಾರೆ ಎನ್ನುವಂತೆ ಇಲ್ಲ).
  • ಹಾಡು ಹಾಕು, ಅಲರಾಂ ಹಾಕು, ನ್ಯೂಸ್ ಹೇಳು, ಹೀಗೆ ವಿವಿಧ ಆದೇಶಗಳನ್ನು ಕುಳಿತಲ್ಲಿಂದಲೇ ನೀಡಬಹುದು.
  • ಗೂಗಲ್ ಸ್ಮಾರ್ಟ್ ಹೋಂ ಮೂಲಕ ಮನೆಯ ಕೀಲಿಕೈ, ಫ್ಯಾನ್, ಟೀವಿ, ಏಸಿ ಇತ್ಯಾದಿಗಳನ್ನೂ ನಿರ್ವಹಿಸಬಹುದು. ಆದರೆ, ಸದ್ಯ ಬಾಡಿಗೆ ಮನೆಯಲ್ಲಿರುವುದರಿಂದ ನನ್ನ ಮನೆಯನ್ನು ಈ ಸ್ಮಾರ್ಟ್ ಸಾಧನಕ್ಕೆ ಕನೆಕ್ಟ್ ಮಾಡುವಂತೆ ಇಲ್ಲ. ಯಾಕೆಂದರೆ, ಮನೆ ಇನ್ನಷ್ಟು ಸ್ಮಾರ್ಟ್ ಆದ ಮೇಲೆ ಈ ಫೀಚರ್ ಗಳನ್ನು ಕನೆಕ್ಟ್ ಮಾಡಬಹುದು. ಅಲ್ಲಿಯವರೆಗೆ ಮ್ಯೂಸಿಕ್, ನ್ಯೂಸ್ ಇತ್ಯಾದಿ ಫೀಚರ್ ಗಳನ್ನು ಬಳಸುವೆ.
  • Google Home ಖರೀದಿಸುವುದು ನನ್ನ 2019 resolutionsನಲ್ಲಿ ಒಂದಾಗಿದೆ.

ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ಭದ್ರತೆ ಪ್ರಮುಖ ಸಮಸ್ಯೆ. ಒಬ್ಬಂಟಿಯಾಗಿ ಇರುವಾಗ ಭಯದಿಂದಲೇ ಇರಬೇಕಾಗುತ್ತದೆ. ಮನೆಗೆ ಬೀಗ ಹಾಕಿ ಹೋದರೆ ಯಾವ ಕಳ್ಳಕಾಕರು ಬರುತ್ತಾರೋ ಎಂಬ ಭಯ ಇದ್ದೇ ಇರುತ್ತದೆ. ಮನೆಗೆ ಪೂರ್ಣಪ್ರಮಾಣದ ಸಿಸಿ ಟೀವಿ ಅಳವಡಿಸುವುದು ದುಬಾರಿಯಾಗಿ ಪರಿಣಮಿಸಬಹುದು. ಇಂತಹ ಸಮಯದಲ್ಲಿ ಆನ್ ಲೈನ್ ನಲ್ಲಿ ದೊರಕುವ ವಿವಿಧ security camera ಗಳನ್ನು ಅಥವಾ Smart Monitoring Systems ಬಳಸಬಹುದು. ಇವುಗಳ ದರವು ಕೆಲವೇ ಸಾವಿರ ರೂಪಾಯಿಗಳಲ್ಲಿ ಇರುವುದರಿಂದ ದುಬಾರಿಯೇನೂ ಅಲ್ಲ. ಕೆಲವು ಸಾವಿರ ರೂಪಾಯಿ ಹಣವನ್ನು ಇಂತವುಗಳಿಗೆ ವಿನಿಯೋಗಿಸುವ ಮೂಲಕ ಕೊಂಚ ಪ್ರಮಾಣದಲ್ಲಿ ಸುರಕ್ಷಿತವಾಗಿರಬಹುದು ಎನ್ನುವುದು ನನ್ನ ಅಭಿಪ್ರಾಯ.

ಏನಿದು #SmartHomeRevolution?

ಕಾಲ ಎಷ್ಟು ಬದಲಾಗಿಬಿಟ್ಟಿದೆ. ಹತ್ತು ವರ್ಷಗಳ ಹಿಂದೆ ಹಳೆಯ ಫೀಚರ್ ಫೋನ್ ನನ್ನ ಸಂಗಾತಿಯಾಗಿತ್ತು. ಆ ಪುಟ್ಟ ಪರದೆಯ ಫೋನ್ ಹಿಡಿದುಕೊಂಡು ಕೀಲಿಯಲ್ಲಿ ದಿನಕ್ಕೆ 100 ಎಸ್ಎಂಎಸ್ ಮುಗಿಸುವ ಖುಷಿಯಿತ್ತು. ಆದರೆ, ಆಗ ಮೆಸೆಜ್ ಪ್ಯಾಕ್ ಮುಗಿದರೆ ಊಟಕ್ಕೆ ಅಕ್ಕಿಯೇ ಮುಗಿದಷ್ಟು ದುಃಖ. ಆ ಸಮಯದಲ್ಲಿ ಇದ್ದ ಪ್ರಮುಖ ಗ್ಯಾಡ್ಜೆಟ್ ಎಂದರೆ ಅದೇ, ಇನ್ನುಳಿದರೆ ಕಾಲೇಜಿನ ಕಂಪ್ಯೂಟರ್ ಗಳು, ಕ್ಯಾಮೆರಾ…. ಒಂದಿಷ್ಟು ಹಳೆಯ ಸಾಧನಗಳು.

ಹತ್ತು ವರ್ಷದ ಬಳಿಕ ಹಿಂತುರುಗಿ ನೋಡಿದರೆ ನಮ್ಮ ಬದುಕು ಎಷ್ಟು ಸ್ಮಾರ್ಟ್ ಆಗಿದೆ ಎಂದು ಅಚ್ಚರಿಯಾಗುತ್ತದೆ ಅಲ್ಲವೇ? ಸ್ಮಾರ್ಟ್ ಫೋನ್, ದಿನಕ್ಕೆ  1.5 ಜಿಬಿ ಇಂಟರ್ನೆಟ್, ಜೊತೆಗೆ ಖರೀದಿಸಿದ ಮತ್ತು ಉಡುಗೊರೆಯಾಗಿ ಪಡೆದ ಸ್ಮಾರ್ಟ್ ಸಾಧನಗಳು… ನಿಜಕ್ಕೂ ನಾವು ಸ್ಮಾರ್ಟ್ ಆಗುತ್ತಿದ್ದೇವೆಯೋ ಅಥವಾ ಇನ್ನೇನೋ… ಒಟ್ಟಾರೆ ತಂತ್ರಜ್ಞಾನ ಜಗತ್ತಿನ ನಿರಂತರ ಬದಲಾವಣೆಗೆ ಸಾಕ್ಷಿಯಾಗುತ್ತಿರುವುದಂತೂ ನಿಜ. ಈಗ ನಡೆಯುತ್ತಿರುವುದು ಸ್ಮಾರ್ಟ್ ಸಾಧನಗಳ ಕ್ರಾಂತಿ!

ಮೇಲೆ ತಿಳಿಸಿದ ವಿವಿಧ ಸ್ಮಾರ್ಟ್ ಸಾಧನಗಳನ್ನು ಬಳಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದು ದೇಶದಲ್ಲಿ ನಿಧಾನವಾಗಿ ಸ್ಮಾರ್ಟ್ ಹೋಂ ಕ್ರಾಂತಿಯನ್ನೇ ಉಂಟುಮಾಡುತ್ತಿದೆ ಎನ್ನಲಾಗುತ್ತಿದೆ. ಮುಖ್ಯವಾಗಿ ಕಾಲೇಜು ಹುಡುಗ ಹುಡುಗಿಯರು ಸೇರಿದಂತೆ ಬಹುತೇಕರ ಕೈಯಲ್ಲಿ ಸ್ಮಾರ್ಟ್ ವಾಚ್ ಮತ್ತು ಸ್ಮಾರ್ಟ್ ಬ್ಯಾಂಡ್ ಗಳು (Smart Wearable) ಕಾಣಿಸುತ್ತಿವೆ. ಮುಖ್ಯವಾಗಿ ಎಲ್ಲರೂ ತಮ್ಮ ಆರೋಗ್ಯದ ಕುರಿತು ಹೆಚ್ಚು ಗಮನ ನೀಡುವುದರಿಂದ ಫಿಟ್ನೆಸ್ ಬ್ಯಾಂಡ್ ಗಳ ಬಳಕೆ ಹೆಚ್ಚುತ್ತಿದೆ.

ಗೂಗಲ್ ಹೋಂ ಅಥವಾ ಗೂಗಲ್ ಹೋಂ ಮಿನಿ ಇತ್ಯಾದಿಗಳು ಮನೆಯನ್ನು  Smart Home ಮಾಡಿವೆ.  ಜೊತೆಗೆ ಮೂಲಕ ಕಾರ್ಯನಿರ್ವಹಿಸುವ smart speakersಗಳೂ ಮನೆಮನಸ್ಸುಗಳಿಗೆ ಹೊಸ ಉತ್ಸಾಹ ತುಂಬುತ್ತಿವೆ. ಮನೆಯು ಎಷ್ಟೇ ಸ್ಮಾರ್ಟ್ ಆಗಿದ್ದರೂ ಅಲ್ಲಿ ಸುರಕ್ಷತೆ ಅತ್ಯಂತ ಅವಶ್ಯಕ. ಇಂತಹ ಸಮಯದಲ್ಲಿ ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮೆರಾಗಳು ಮನೆಗಳಿಗೆ ಹೆಚ್ಚು ಸುರಕ್ಷತೆಯನ್ನು ಒದಗಿಸುತ್ತವೆ.

ಹಳೆಯ ಸಾಂಪ್ರದಾಯಿಕ ಗ್ಯಾಡ್ಜೆಟ್ ಗಳ ಬದಲಾಗಿ ಹೆಚ್ಚು ಆಧುನಿಕವಾದ ತಂತ್ರಜ್ಞಾನಗಳು ಇಂದು ಆಗಮಿಸುತ್ತೀವೆ. ಮುಂದಿನ ಕೆಲವೇ ವರ್ಷಗಳಲ್ಲಿ ದೇಶದಲ್ಲಿ ಮತ್ತು ಜಗತ್ತಿನಲ್ಲಿ ದೊಡ್ಡ ಮಟ್ಟದ ಕ್ರಾಂತಿಯೇ ನಡೆಯಲಿದೆ ಎಂದು ಡಿಜಿಟಲ್ ಮಾರ್ಕೆಟ್ ನಲ್ಲಿ ಹೇಳಲಾಗುತ್ತಿದೆ. ತಿಂಗಳಿಗೆ 1 ಜಿಬಿ ಇಂಟರ್ನೆಟ್ ಬಳಸುತ್ತಿದ್ದವರು ಈಗ ದಿನಕ್ಕೆ 1.5 ಜಿ.ಬಿ. ಇಂಟರ್ನೆಟ್ ಬಳಸುತ್ತಿದ್ದೇವೆ ಎಂದರೆ ಸ್ಮಾರ್ಟ್ ಡಿವೈಸ್ ಗಳು ಮುಂದಿನ ದಿನಗಳಲ್ಲಿ ಕ್ರಾಂತಿ ಉಂಟು ಮಾಡಲಿವೆ ಎನ್ನುವ ಊಹೆಯನ್ನೂ ನಂಬಬಹುದು.

ನನ್ನ ಶಿಫಾರಸುಗಳು (recommendations) ಮತ್ತು ಸಲಹೆಗಳು (Tips)
image gif by: giphy
  • ಯಾವುದೇ ಸಾಧನವನ್ನು ಖರೀದಿಸುವಾಗ ನಿಮಗೆ ಎಷ್ಟು ಅದರ ಅವಶ್ಯಕತೆ ಇದೆ ಎಂದು ಯೋಚಿಸಿ. ಆ ಸಾಧನವು ನಿಮಗೆ ಏನು ಲಾಭ ಉಂಟು ಮಾಡಬಹುದು ಯೋಚಿಸಿ.
  • ಯಾವುದಾದರೂ ಸಾಧನವನ್ನು ಖರೀದಿಸುವಾಗ ಅದಕ್ಕೆ ಸಂಬಂಧಪಟ್ಟ ವಿಮರ್ಶೆಗಳನ್ನು ಓದಿ. ಅದಕ್ಕಿಂತ ಮುಖ್ಯವಾಗಿ ನಿಮಗೆ ತಿಳಿದಿರುವ ಯಾರಾದರೂ ಆ ಸಾಧನ ಖರೀದಿಸಿದ್ದರೆ ಅವರಲ್ಲಿ ಅದರ ಒಳಿತು-ಕೆಡುಕುಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ.
  • ಸ್ಮಾರ್ಟ್ ಹೋಂ ಸಾಧನಗಳನ್ನು ಖರೀದಿಸುವಾಗ ಅದು ನಿಮ್ಮ ಮನೆಗೆ ಸೂಕ್ತವೇ ಎಂದು ಯೋಚಿಸಿ. ಇಲ್ಲವಾದರೆ ಇಂತಹ ಸ್ಮಾರ್ಟ್ ಹೋಂ ಸಾಧನಗಳ ಪೂರ್ಣ ಪ್ರಯೋಜನ ದೊರಕದು.
  • ಯಾವುದೇ ಸ್ಮಾರ್ಟ್ ಸಾಧನವಿರಲಿ. ಅದರ ಪೂರ್ಣ ಪ್ರಯೋಜನ ಪಡೆಯಿರಿ. ಉದಾಹರಣೆಗೆ ನೀವು ಫಿಟ್ನೆಸ್ ಬ್ಯಾಂಡ್ ತೆಗೆದುಕೊಂಡು ವ್ಯಾಯಾಮ ಅಥವಾ ವಾಕಿಂಗ್ ಅಥವಾ ಸೈಕ್ಲಿಂಗ್ ಹೋಗದೆ ಇದ್ದರೆ ಇಂತಹ ಫಿಟ್ನೆಸ್ ಬ್ಯಾಂಡ್ ಇದ್ದೂ ವ್ಯರ್ಥ.
  • ಸ್ಮಾರ್ಟ್ ಡಿವೈಸ್ ಗಳು ಆನ್ ಲೈನ್ ನಲ್ಲಿ ಈಗ ಕಡಿಮೆ ದರದಲ್ಲಿ ದೊರಕುವುದರಿಂದ ಆನ್ ಲೈನ್ ನಲ್ಲಿಯೇ ಖರೀದಿಸಬಹುದು. ನಾನು ಸ್ಮಾರ್ಟ್ ಫೋನ್ ಸೇರಿದಂತೆ ಬಹುತೇಕ ಡಿಜಿಟಲ್ ಸಾಧನಗಳನ್ನು ಇತ್ತೀಚಿನ ವರ್ಷಗಳಲ್ಲಿ ಆನ್ ಲೈನ್ ನಲ್ಲಿಯೇ ಖರೀದಿಸುತ್ತೀದ್ದೇನೆ. ಹೊರಗಡೆ ಖರೀದಿಸಿದರೆ ಕೆಲವು ನೂರು ರೂಪಾಯಿಗಳನ್ನು ಹೆಚ್ಚು ಪಾವತಿಸಬೇಕು (ಕೆಲವೊಮ್ಮೆ ರಿಟರ್ನ್ ಸೌಲಭ್ಯವೂ ಹೊರಗಡೆ ಇರುವುದಿಲ್ಲ).
  • ಮುಖ್ಯವಾಗಿ ಬದಲಾಗುವ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗೋಣ. ಈ ತಲೆಮಾರಿನ ತಂತ್ರಜ್ಞಾನದ ವಿಸ್ಮಯಗಳನ್ನು ಆನಂದಿಸುವುದು ಅಥವಾ ಅನುಭವಿಸಲು ಹಿಂಜರಿಯುವುದು ಬೇಡ. ಇಲ್ಲವಾದರೆ ಮುಂದಿನ ಕೆಲವೇ ವರ್ಷಗಳಲ್ಲಿ ನಾವು ತುಂಬಾ ಹಿಂದೆ ಉಳಿದುಬಿಡಬಹುದು.
ಕೆಲವು ಸ್ಮಾರ್ಟ್ ಸಾಧನಗಳ ಪಟ್ಟಿ (#GetFitWithFlipkart)

(ನಿಮ್ಮ ಪರಿಶೀಲನೆಗಾಗಿ, ಖರೀದಿಸುವ ಮೊದಲು ವಿಮರ್ಶೆಗಳನ್ನು ಓದಿಕೊಳ್ಳಿರಿ)

  • ಗೂಗಲ್ ಹೋಂ ಮತ್ತು ಗೂಗಲ್ ಹೋಂ ಮಿನಿ(Google Home, Google Home Mini )
  • ಕಡಿಮೆ ದರದ ಸ್ಮಾರ್ಟ್ ಸ್ಪೀಕರ್ ಗಳು, ವಯರ್ ಲೆಸ್ ಸ್ಪೀಕರ್ ಗಳು, ದರಕ್ಕೆ ತಕ್ಕಂತೆ ಗುಣಮಟ್ಟ ಎನ್ನುವುದು ನೆನಪಿರಲಿ (smart speakers)
  • Smart lights ವಿಭಾಗದಲ್ಲಿ Philips, Syska, TP-Link ಇತ್ಯಾದಿ ವಿವಿಧ ಕಂಪನಿಗಳ ಸ್ಮಾರ್ಟ್ ಲೈಟ್ ಗಳು ಲಭ್ಯ ಇವೆ.
  • ಸ್ಮಾರ್ಟ್ ಕ್ಯಾಮೆರಾ ವಿಭಾಗದಲ್ಲಿ ಹತ್ತು ಹಲವು ಆಯ್ಕೆಗಳು ಇದ್ದು, ವೈಯಕ್ತಿಕವಾಗಿ ನಾನಿನ್ನೂ ಯಾವುದನ್ನೂ ಬಳಸಿಲ್ಲ. ಈ ವರ್ಷ ಅವಶ್ಯಕತೆ ನೋಡಿಕೊಂಡು ಖರೀದಿಸುವ ಆಲೋಚನೆಯಲ್ಲಿದ್ದೇನೆ.

ಇದು ಇಡೀ ಜಗತ್ತೇSmartHomeRevolution ಗಾಗಿ ಸಿದ್ಧವಾಗುತ್ತಿರುವ ಸಂದರ್ಭದಲ್ಲಿ indiblogger ಮತ್ತು flipkart ಜಂಟಿಯಾಗಿ ಆಯೋಜಿಸಿದ #getfitwithflipkart ಎಂಬ ಭಾರತ ಮಟ್ಟದ ಸ್ಪರ್ಧೆಗಾಗಿ ಬರೆದ ಲೇಖನ. ಬಹುತೇಕ ಇಂಗ್ಲಿಷ್ ಬ್ಲಾಗರ್ ಗಳೇ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವ ಸಂದರ್ಭದಲ್ಲಿ karnatakabest.com  ಕನ್ನಡದಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಗಮನಿಸಿ: ಇಲ್ಲಿ ನಾನು ನೀಡಲಾದ ಲಿಂಕ್ ಗಳು ನಿಮ್ಮ ರೆಫರೆನ್ಸ್ ಗಾಗಿ ಅಷ್ಟೇ, ನೀವು ಆ ಲಿಂಕ್ ಪ್ರವೇಶಿಸಿ ಸ್ಮಾರ್ಟ್ ಉತ್ಪನ್ನಗಳನ್ನು ನೋಡಿ ಪರಾಮರ್ಶಿಸಿ, ಇಷ್ಟವಾದರೆ ಖರೀದಿಸಿ

Leave a Reply

Your email address will not be published. Required fields are marked *