ಗಮನಿಸಿ: ಕರ್ನಾಟಕ ಬೆಸ್ಟ್ ಮೂಲಕ ವೆಬ್ ಡಿಸೈನ್ ಮಾಡಿಸಿಕೊಂಡ ಎಲ್ಲಾ ಗ್ರಾಹಕರ ಹೋಸ್ಟಿಂಗ್ ಮತ್ತು ಡೊಮೈನ್ ನೇಮ್, ಇಮೇಲ್ ಇತ್ಯಾದಿಗಳು https://serverhug.com/ ನಲ್ಲಿವೆ. ಟಿಂಟುಹೋಸ್ಟ್ ಅಸ್ತಿತ್ವದಲ್ಲಿರುವುದಿಲ್ಲ. ಟಿಂಟುಹೋಸ್ಟ್ ಹೆಸರು ಈಗ ಸರ್ವರ್‌ಹಗ್ ಆಗಿದೆ. ಸರ್ವರ್‌ಹಗ್.ಕಾಂ ವೆಬ್ಸೈಟ್‌ಗೆ ಹೋಗಿ ಲಾಗಿನ್ ಎಂಬಲ್ಲಿ ನಿಮ್ಮ ಇಮೇಲ್ ಐಡಿ ನೀಡಿ ಪಾಸ್‌ವರ್ಡ್ ನೀಡಿ ಲಾಗಿನ್ ಆಗಬಹುದು. ಫರ್ಗೆಟ್ ಪಾಸ್ವರ್ಡ್ ಕ್ಲಿಕ್ ಮಾಡಿ ಹೊಸ ಪಾಸ್ವರ್ಡ್ ರಚಿಸಿಕೊಂಡು ಲಾಗಿನ್ ಆಗಿ.
ಕರ್ನಾಟಕ ಬೆಸ್ಟ್ ಸ್ಮಾರ್ಟ್ ಸೊಲ್ಯುಷನ್ ಮೂಲಕ ನೂರಾರು ಗ್ರಾಹಕರು ವೆಬ್‌ಸೈಟ್ ರಚಿಸಿಕೊಂಡಿದ್ದಾರೆ. ಬಹುತೇಕರು ವೆಬ್‌ಸೈಟ್ ಜೊತೆಗೆ ಒಂದಿಷ್ಟು ತಾಂತ್ರಿಕ ಕೌಶಲಗಳನ್ನು ಕಲಿತುಕೊಂಡಿದ್ದಾರೆ. ಈ ಟೆಕ್ ಜಗತ್ತಿನಲ್ಲಿ ಕಲಿಯುತ್ತ ಜೊತೆಯಾಗಿ ಬೆಳೆಯುವ ಈ ಪ್ರಕ್ರಿಯೆಯಲ್ಲಿ ಕರ್ನಾಟಕ ಬೆಸ್ಟ್ ಬ್ಲಾಗ್ ಮೂಲಕ ಈಗಾಗಲೇ ಸಾಕಷ್ಟು ವೆಬ್ಸೈಟ್ ಟಿಪ್ಸ್‌ಗಳನ್ನು ನೀಡಲಾಗಿದೆ. ಸ್ವಂತ ವೆಬ್ಸೈಟ್ ಮಾಡಲು ಬಯಸುವವರಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ ಎನ್ನುವ ನಂಬಿಕೆ ನಮಗಿದೆ.
ವೆಬ್‌ಸೈಟ್ ಸುರಕ್ಷತೆಗೆ ಕರ್ನಾಟಕ ಬೆಸ್ಟ್ ಮೊದಲಿನಿಂದಲೂ ಆದ್ಯತೆ ನೀಡುತ್ತ ಬಂದಿದೆ. ಲಭ್ಯವಿರುವ ಸುರಕ್ಷತೆಗಳಲ್ಲಿಯೇ ಅತ್ಯುತ್ತಮವಾಗಿರುವುದನ್ನು ವೆಬ್‌ಸೈಟ್‌ಗಳಿಗೆ ಅಳವಡಿಸುತ್ತಿದ್ದೇವೆ. ಆದರೂ, ಟೆಕ್ ಜಗತ್ತಿನಲ್ಲಿ ಎಷ್ಟು ಸುರಕ್ಷಿತವಾಗಿದ್ದರೂ ಕಡಿಮೆಯೇ. ಹ್ಯಾಕಿಂಗ್ ಇತ್ಯಾದಿಗಳು ಸಾಮಾನ್ಯ. ಇಂತಹ ಸಮಯದಲ್ಲಿ ಯಾರಾದರೂ ನಿಮ್ಮ ವೆಬ್ಸೈಟ್‌ಗೆ ಲಗ್ಗೆ ಇಟ್ಟರೆ ನಿಮ್ಮ ವೆಬ್ಸೈಟ್ ಅನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಸಮಯದಲ್ಲಿ ಹಲವು ವರ್ಷಗಳಿಂದ ಕಷ್ಟಪಟ್ಟು ಕಂಟೆಂಟ್ ರಚಿಸಿದವರಿಗೆ ಆಗುವ ನಷ್ಟ ಬಣ್ಣಿಸಲು ಸಾಧ್ಯವಿಲ್ಲ.
ಶುಭ ಸುದ್ದಿಯೆಂದರೆ, ಕರ್ನಾಟಕ ಬೆಸ್ಟ್ ಮೂಲಕ ರಚಿಸಿದ ಯಾವುದೇ ವೆಬ್‌ಸೈಟ್ ಇಲ್ಲಿಯವರೆಗೆ ಹ್ಯಾಕ್ ಅಥವಾ ಇನ್ನಿತರ ದಾಳಿಗಳಿಗೆ ತುತ್ತಾಗಿಲ್ಲ. ಪ್ರತಿಯೊಂದು ಸುರಕ್ಷಿತ ಕ್ರಮಗಳನ್ನು ಅನುಸರಿಸುವುದು ಇದಕ್ಕೆ ಕಾರಣ. ಆದರೆ, ಈ ಟೆಕ್ ಜಗತ್ತಿನಲ್ಲಿ ಶೇಕಡ ೧೦೦ ಭರವಸೆ ನೀಡುವುದು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಬ್ಯಾಕಪ್ ಮಾಡಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.
ಕನಿಷ್ಠ ತಿಂಗಳಿಗೊಮ್ಮೆ ಬ್ಯಾಕಪ್ ಮಾಡಿಕೊಳ್ಳುವುದು ಒಳ್ಳೆಯದು. ಈ ರೀತಿ ಮಾಡಿದರೆ ಬ್ಯಾಕಪ್ ತೆಗೆದುಕೊಂಡವರೆಗಿನ ವೆಬ್‌ಸೈಟ್ ಡೇಟಾ ನಮ್ಮಲ್ಲಿ ಇರುತ್ತದೆ. ಅದನ್ನು ಮತ್ತೆ ಹೋಸ್ಟಿಂಗ್‌ಗೆ ಜೋಡಿಸಬಹುದು. ಆ ಮೂಲಕ ನಮ್ಮ ವೆಬ್ಸೈಟ್ ಅನ್ನು ಮರುರೂಪಿಸಿಕೊಳ್ಳಬಹುದು.
ಇಲ್ಲಿಯವರೆಗೆ ನಿಯಮಿತವಾಗಿ ಬ್ಯಾಕಪ್ ತೆಗೆದುಕೊಳ್ಳುತ್ತಿದ್ದವರಿಗೆ ಧನ್ಯವಾದಗಳು.
ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಬ್ಯಾಕಪ್ ತೆಗೆದುಕೊಳ್ಳುವುದು ಹೇಗೆ ಎಂದು ಹೇಳಿಕೊಡುವುದು ಕಷ್ಟ. ಅದಕ್ಕಾಗಿ ಈ ಬ್ಲಾಗ್ ಮೂಲಕ ಬ್ಯಾಕಪ್ ತೆಗೆದುಕೊಳ್ಳುವ ಟಿಪ್ಸ್ ಅನ್ನು ನೀಡಲಾಗುತ್ತದೆ. ಇದು ಕರ್ನಾಟಕ ಬೆಸ್ಟ್ ಕ್ಲಯೆಂಟ್‌ಗಳಿಗೆ ಮಾತ್ರವಲ್ಲದೆ ಕರ್ನಾಟಕ ಬೆಸ್ಟ್ ಓದುವ ಸಂಪೂರ್ಣ ಕನ್ನಡ ಓದುಗರಿಗೆ ನೆರವಾಗಬಲ್ಲದು.
ಸಿ-ಪ್ಯಾನೆಲ್‌ನಲ್ಲಿ ಬ್ಯಾಕಪ್ ತೆಗೆದುಕೊಳ್ಳುವುದು ಹೇಗೆ?
ಹೊಸ ಗ್ರಾಹಕರು ಆಗಿದ್ದರೆ ಮೊದಲಿಗೆ ನೀವು ಕರ್ನಾಟಕ ಬೆಸ್ಟ್ ಮೂಲಕ ಡೊಮೈನ್ ಮತ್ತು ಹೋಸ್ಟಿಂಗ್ ಖರೀದಿಸಬೇಕು. ಅದಕ್ಕಾಗಿ ನೀವು ಈ ಲಿಂಕ್‌ಗೆ ಭೇಟಿ ನೀಡಬೇಕು.
ಈಗಾಗಲೇ ನಮ್ಮಿಂದ ಹೋಸ್ಟಿಂಗ್ ಖರೀದಿಸಿದ್ದರೆ ನಮ್ಮ ಹೋಸ್ಟಿಂಗ್ ತಾಣ ಸರ್ವರ್ ಹಗ್ ಅಥವಾ Serverhugಗೆ ಭೇಟಿ ನೀಡಿ. ನೀವು ಯಾವ ತಾಣದಲ್ಲಿ ಅಕೌಂಟ್ ರಚಿಸಿದ್ದೀರಾ ಅಲ್ಲಿ ಹೋಗಿ ಲಾಗಿನ್ ಆಗಿ. ಇದಕ್ಕಾಗಿ ನೀವು ಇಮೇಲ್ ಇನ್‌ಬಾಕ್ಸ್‌ನಲ್ಲಿ ಹುಡುಕಬಹುದು.
ಸರ್ವರ್ ಹಗ್‌ನಲ್ಲಿ ಹೋಸ್ಟಿಂಗ್ ಖರೀದಿಸಿದವರು ಇಲ್ಲಿ ಕ್ಲಿಕ್ ಮಾಡಿ
ಮೊದಲಿಗೆ ಹೋಸ್ಟಿಂಗ್ ತಾಣಕ್ಕೆ ಲಾಗಿನ್ ಆಗಿ. ಲಾಗಿನ್ ಬಟನ್ ಮೇಲ್ಬಾಗದಲ್ಲಿ ಸೈನ್‌ಇನ್ ಎಂಬ ಆಯ್ಕೆಯಲ್ಲಿ ಇರುತ್ತದೆ.

ಅಲ್ಲಿ ನಿಮ್ಮ ಇಮೇಲ್ ಮತ್ತು ಹೋಸ್ಟಿಂಗ್ ತಾಣದ ಪಾಸ್‌ವರ್ಡ್ ಮೂಲಕ ಲಾಗಿನ್ ಆಗಿ. ಪಾಸ್‌ವರ್ಡ್ ಮರೆತುಹೋಗಿದ್ದರೆ ಫರ್ಗಟ್ ಪಾಸ್ವರ್ಡ್ ಕ್ಲಿಕ್ ಮಾಡಿ ಹೊಸ ಪಾಸ್ವರ್ಡ್ ರಚಿಸಿ ಲಾಗಿನ್ ಆಗಿ.

ಲಾಗಿನ್ ಆದ ಬಳಿಕ ಅಲ್ಲಿರುವ ಮೈ ಅಕೌಂಟ್ ನಲ್ಲಿ ನಿಮ್ಮ ವೆಬ್‌ಸೈಟ್‌ನ ಡೊಮೈನ್ ಹೆಸರು ಬರೆದು ಎಂಟರ್ ಕೊಡಿ.
ಕೆಲವೊಮ್ಮೆ ಮೈ ಅಕೌಂಟ್ ಕ್ಲಿಕ್ ಮಾಡಿದಾಗ ಯುವರ್ ಕನೆಕ್ಸನ್ ಈಸ್ ನಾಟ್ ಪ್ರೈವೇಟ್ ಎಂದು ಬರಬಹುದು. ಹಲವು ಎಸ್‌ಎಸ್‌ಎಲ್ ಸರ್ಟಿಫಿಕೇಟ್ ಬಳಸದೆ ಇರುವ ಕಾರಣ ಕೆಲವೊಮ್ಮೆ ಇಂತಹ ಸೂಚನೆ ಬರುತ್ತದೆ. ಕೆಳಗೆ ಅಡ್ವಾನ್ಸಡ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಅದರ ಕೆಳಗೆ ಇರುವ ಪ್ರೊಸೀಡ್ ಟು ಹೋಸ್ಟಿಂಗ್ ಎನ್ನುವುದನ್ನು ಕ್ಲಿಕ್ ಮಾಡಿ.

ನಿಮ್ಮ ಬ್ರೌಸರ್‌ನಲ್ಲಿ ಇಂತಹ ಸೂಚನೆ ಬರದೆ ಇದ್ದರೆ ನೀವು ನೇರವಾಗಿ ನಿಮ್ಮ ಅಕೌಂಟ್‌ಗೆ ಪ್ರವೇಶಿಸುವಿರಿ.
ಈ ಕೆಳಗೆ ಸೂಚಿಸಿದಂತೆ ಡೊಮೈನ್ ಹೆಸರು ಅಥವಾ ನಿಮ್ಮ ಆರ್ಡರ್ ಐಡಿ ಬರೆಯಿರಿ.

ನಿಮ್ಮ ಖಾತೆ ಈ ಕೆಳಗಿನಂತೆ ತೆರೆದುಕೊಳ್ಳುತ್ತದೆ.
ಅದರಲ್ಲಿ ಹೋಸ್ಟಿಂಗ್ ವಿಭಾಗ ಇರುತ್ತದೆ. ಉದಾಹರಣೆಗೆ ನೀವು ಲಿನಕ್ಸ್ ಶೇರ್ಡ್ ಹೊಸ್ಟಿಂಗ್ ಖರೀದಿಸಿದ್ದರೆ ಈ ಕೆಳಗಿನಂತೆ ಇರುತ್ತದೆ. ಅಲ್ಲಿ ಮ್ಯಾನೇಜ್ ಹೋಸ್ಟಿಂಗ್ ಅನ್ನು ಕ್ಲಿಕ್ ಮಾಡಿ. ಅದು ಹೊಸ ಪುಟದಲ್ಲಿ ತೆರೆದುಕೊಳ್ಳುತ್ತದೆ.

ಸಿ ಪ್ಯಾನೆಲ್ ನ ಅಗಾಧ ಜಗತ್ತು ತೆರೆದುಕೊಳ್ಳುತ್ತದೆ.

ವಿಶೇಷ ಸೂಚನೆ/ಎಚ್ಚರಿಕೆ: ಯಾವುದೇ ಕಾರಣಕ್ಕೂ ನಿಮಗೆ ಸಂಪೂರ್ಣ ತಾಂತ್ರಕ ಜ್ಞಾನವಿಲ್ಲದೆ ಇದ್ದರೆ ಇಲ್ಲಿ ಸೂಚಿಸಿರುವುದನ್ನು ಹೊರತುಪಡಿಸಿ ಇತರೆ ವಿಭಾಗಗಳನ್ನು ಕ್ಲಿಕ್ ಮಾಡಲು ಅಥವಾ ಮಾರ್ಪಾಡು ಮಾಡಲು ಹೋಗಬೇಡಿ. ಏನಾದರೂ ಯಡವಟ್ಟು ಮಾಡಿದರೆ ಗಂಟೆಗೆ ಐದು ಸಾವಿರ ರೂಪಾಯಿ ಕೊಟ್ಟು ರಿಪೇರಿ ಮಾಡಿಕೊಳ್ಳಬೇಕಾಗಬಹುದು!!!!!!
ಮೇಲ್ಗಡೆ ಸರ್ಚ್ ವಿಭಾಗ ಕಾಣಿಸುತ್ತದೆ. ಇಲ್ಲಿ ಬ್ಯಾಕಪ್ ಎಂದು ಹುಡುಕಿ.

ಮೊದಲಿಗೆ ಸಂಪೂರ್ಣ ಬ್ಯಾಕಪ್ ತೆಗೆದುಕೊಳ್ಳಿ.

ಮತ್ತೆ ಹೋಂ ಪೇಜ್ ಬ್ಯಾಕಪ್ ತೆಗೆದುಕೊಳ್ಳಿ.

ಬ್ಯಾಕಪ್ ನಿಮ್ಮ ಇಮೇಲ್‌ಗೆ ಬರುವಂತೆ ನೋಡಿಕೊಳ್ಳಿ.
ತಿಂಗಳಿಗೊಮ್ಮೆ ಈ ರೀತಿ ಬ್ಯಾಕಪ್ ತೆಗೆದುಕೊಳ್ಳಿ. ಕಂಪ್ಯೂಟರ್‌ಗೂ ಬ್ಯಾಕಪ್ ತೆಗೆದುಕೊಳ್ಳಬಹುದು. ಅಲ್ಲೇ ಸೇವ್ ಮಾಡಿಟ್ಟುಕೊಳ್ಳುವ ಆಯ್ಕೆಯೂ ಇದೆ. ಆದರೆ, ಇಮೇಲ್‌ನಲ್ಲಿ ಬ್ಯಾಕಪ್ ಇದ್ದರೆ ಅನಿವಾರ್ಯ ಸಂದರ್ಭಗಳಲ್ಲಿ ತಕ್ಷಣ ನನಗೆ ಫಾರ್ವರ್ಡ್ ಮಾಡಿಬಿಡಬಹುದು.
ಇದು ಲೇಖನದಲ್ಲಿ ವಿವರವಾಗಿ ಬರೆದಿರುವ ಕಾರಣ ತುಂಬಾ ಕಠಿಣ ಪ್ರಕ್ರಿಯೆಯಂತೆ ಕಾಣಬಹುದು. ಆದರೆ, ಇದು ತುಂಬಾ ಸರಳ. ಹೋಸ್ಟಿಂಗ್‌ಗೆ ಲಾಗಿfನ್ ಆಗುವುದು, ಮ್ಯಾನೇಜ್ ಹೋಸ್ಟಿಂಗ್ ಕ್ಲಿಕ್ ಮಾಡುವುದು. ಬ್ಯಾಕಪ್ ಕ್ಲಿಕ್ ಮಾಡಿ ಬ್ಯಾಕಪ್ ತೆಗೆದುಕೊಳ್ಳುವುದು. ಇಷ್ಟೇ ಕೆಲವು ಸ್ಟೆಪ್ ಪ್ರಕ್ರಿಯೆ.
ಪ್ರತಿತಿಂಗಳಿಗೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆಯಾದರೂ ಬ್ಯಾಕಪ್ ತೆಗೆದುಕೊಳ್ಳಿ.
ನಿಮ್ಮ ವೆಬ್‌ಸೈಟ್‌ನಲ್ಲಿ ಯಾವುದೇ ಕಂಟೆಂಟ್ ಬದಲಾವಣೆಯಾಗುತ್ತಿಲ್ಲ. ಅಂದರೆ ಬಿಸ್ನೆಸ್ ವೆಬ್ಸೈಟ್ ಆಗಿದ್ದರೆ ಒಂದು ಬಾರಿ ಬ್ಯಾಕಪ್ ತೆಗೆದುಕೊಂಡರೆ ಸಾಕು. ಬ್ಲಾಗ್ ಅಥವಾ ನ್ಯೂಸ್ ವೆಬ್‌ಸೈಟ್ ಆಗಿದ್ದರೆ ಹದಿನೈದು ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಬ್ಯಾಕಪ್ ತೆಗೆದುಕೊಳ್ಳಿ.
ನಿಮ್ಮ ಇಮೇಲ್‌ನಲ್ಲಿರುವ ಹಳೆಯ ಬ್ಯಾಕಪ್ ಡಿಲೀಟ್ ಮಾಡಿ. ಇದರಿಂದ ನಿಮ್ಮ ಇಮೇಲ್ ಸ್ಥಳಾವಕಾಶ ಉಳಿಯುತ್ತದೆ. ಹೊಸ ಬ್ಯಾಕಪ್ ನಿಮ್ಮ ಜೊತೆಗಿದ್ದರೆ ಸಾಕು.
ಅಯ್ಯೋ, ಇದಕ್ಕೆಲ್ಲ ನಮಗೆ ಟೈಂ ಇಲ್ಲ. ಬ್ಯಾಕಪ್ ಮತ್ತು ವೆಬ್ಸೈಟ್‌ನ ಇತರೆ ಇಂತಹ ಹತ್ತು ಹಲವು ಮ್ಯಾನೇಜ್‌ಮೆಂಟ್ ಕೆಲಸ ನೀವೇ ಮಾಡಿ ಎಂದರೆ ನಮ್ಮಿಂದ ಮೇಂಟೆನ್ಸ್ ಸರ್ವೀಸ್ ತೆಗೆದುಕೊಳ್ಳಬಹುದು. ಆದರೆ, ಗ್ರಾಹಕರೇ ಇಂತಹ ಕೆಲಸ ಮಾಡುವುದನ್ನು ನಾವು ಇಷ್ಟಪಡುತ್ತೇವೆ. ಇದರಿಂದ ನಿಮಗೂ ಒಂದಿಷ್ಟು ಕಲಿತಂತೆ ಆಗುತ್ತದೆ. ನಿಮ್ಮ ವೆಬ್ಸೈಟ್ ಹಿಡಿತ ನಿಮ್ಮಲ್ಲಿಯೇ ಇರುತ್ತದೆ.
ಈ ರೀತಿ ಪ್ರತಿಬಾರಿ ಲಾಗಿನ್ ಆಗುವುದು ಕಷ್ಟ. ಇದಕ್ಕೆ ಏನಾದರೂ ಸ್ವಯಂಚಾಲಿತ ಸಾಫ್ಟ್‌ವೇರ್ ಇಲ್ಲವೇ ಎಂದು ಕೇಳಿದರೆ ಉತ್ತರ ಇದೆ.
ಈ ಕೆಳಗೆ ನೀಡಿದಂತೆ ಸೆಕ್ಯುರಿಟಿ ಮೆನುವಿನಲ್ಲಿರುವ ಕೋಡ್‌ಗಾರ್ಡ್ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮಗೆ ಬೇಕಾದ ಪ್ಲ್ಯಾನ್ ಅನ್ನು ಕ್ಲಿಕ್ ಮಾಡಬಹುದು. ನಿಮ್ಮ ಪ್ಲಾನ್‌ಗೆ ತಕ್ಕಂತೆ ಪ್ರತಿದಿನ ಅಥವಾ ಐದುದಿನಕ್ಕೊಮ್ಮೆ ಆಟೋಮ್ಯಾಟಿಕ್ ಬ್ಯಾಕಪ್ ಅನ್ನು ಕೋಡ್ ಗಾರ್ಡ್ ಸ್ವಯಂಚಾಲಿತವಾಗಿ ತೆಗೆದುಕೊಳ್ಳುತ್ತದೆ. ಖರೀದಿಸಿದ ಬಳಿಕ ಇದನ್ನು ಇನ್‌ಸ್ಟಾಲ್ ಮಾಡುವ ಪ್ರಕ್ರಿಯೆ ಇರುತ್ತದೆ. ನಮ್ಮ ಹೋಸ್ಟಿಂಗ್ ತಾಣದಿಂದ ಖರೀದಿಸಿದವರಿಗೆ ಉಚಿತವಾಗಿ ಇನ್ ಸ್ಟಾಲ್ ಮಾಡಿಕೊಡುತ್ತೇವೆ. ಆದರೆ, ಬೇರೆ ತಾಣದಿಂದ ಖರೀದಿಸಿದರೆ ಇನ್‌ಸ್ಟಾಲ್ ಹೊಣೆ ನಿಮ್ಮದೇ.

ಆದರೆ, ನಾವೇ ಸರಳವಾಗಿ ಬ್ಯಾಕಪ್ ತೆಗೆದುಕೊಳ್ಳಲು ಸಾಧ್ಯವಿರುವಾಗ ಇಂತಹ ಕೋಡ್‌ಗಾರ್ಡ್ ಅಗತ್ಯವಿಲ್ಲ. ನಿಮ್ಮಲ್ಲಿ ಬ್ಯಾಕಪ್ ಮಾಡಿಕೊಳ್ಳಲು ಕೆಲವು ನಿಮಿಷ ಸಮಯವಿಲ್ಲ ಎಂದಾದರೆ ಮಾತ್ರ ಕೋಡ್‌ಗಾರ್ಡ್ ಖರೀದಿಸಿ.
ಇಂದಿನಿಂದಲೇ ನಿಮ್ಮ ವೆಬ್ಸೈಟ್ ಬ್ಯಾಕಪ್ ತೆಗೆದುಕೊಳ್ಳುವಿರಿ ತಾನೇ? ಧನ್ಯವಾದ