Category Archives: How To

Onsite SEO strategies: ಗೂಗಲ್‌ನಲ್ಲಿ ನಿಮ್ಮ ವೆಬ್‌ ಕಂಟೆಂಟ್‌ ಪತ್ತೆಯಾಗಬೇಕಿದ್ದರೆ ಈ ಎಸ್‌ಇಒ ಟೆಕ್ನಿಕ್‌ಗಳನ್ನು ಬಳಸಿ

By | 25/03/2020

ಗೂಗಲ್‌ನಲ್ಲಿ ನಿಮ್ಮ ವೆಬ್‌ಸೈಟ್‌, ವೆಬ್‌ ಕಂಟೆಂಟ್‌, ನ್ಯೂಸ್‌, ಬ್ಲಾಗ್‌, ಬಿಸ್ನೆಸ್‌ ಮಾಹಿತಿ ಅತ್ಯುತ್ತಮವಾಗಿ ಗೋಚರವಾಗಲು ಪ್ರತಿಯೊಂದು ಕಂಟೆಂಟ್‌ನಲ್ಲಿಯೂ ಈ ವಿಧಾನಗಳನ್ನು ಬಳಸಿ. Element Description (ವಿವರಣೆ) How to use element(ಬಳಕೆ ಹೇಗೆ?) Effect/result(ಫಲಿತಾಂಶ ಏನು) Title tag(ಟೈಟಲ್‌ ಟ್ಯಾಗ್‌) Short, top-of-page summary of the contents of each page.(ವೆಬ್‌ನ ಯುಆರ್‌ಎಲ್‌ ವಿಭಾಗದಲ್ಲಿ ಸಂಕ್ಷಿಪ್ತವಾಗಿ ಇಂಗ್ಲಿಷ್‌ನಲ್ಲಿ ಬರೆಯಿರಿ) Use relevant keywords in HTML source code using 70 characters or less.(70 ಪದ ಮಿತಿಯಲ್ಲಿ ಸೂಕ್ತ… Read More »

ಕನ್ನಡದಲ್ಲಿ ವೆಬ್‌ಸೈಟ್‌ ನಿರ್ಮಿಸುವವರಿಗೆ ಸಂಪೂರ್ಣ ಗೈಡ್

By | 02/01/2020

ಕನ್ನಡ ಭಾಷೆಯಲ್ಲಿ ಹಲವು ನೂರು ವೆಬ್‌ಸೈಟ್‌ಗಳು ಈಗ ನಿರ್ಮಾಣವಾಗುತ್ತಿದೆ ಎನ್ನುವುದು ಖುಷಿ ಪಡಬೇಕಾದ ಸಂಗತಿ. ಆದರೆ, ಈ ವರ್ಷ ಆರಂಭಿಸಿದ ಬಹುತೇಕ ಕನ್ನಡ ವೆಬ್‌ಸೈಟ್‌ಗಳು ಮುಂದಿನ ವರ್ಷ ಇರುವುದಿಲ್ಲ ಎನ್ನುವುದು ದುಃಖದ ಸಂಗತಿ. ಯಾಕೆ ಹೀಗೆ ಎಂದು ಯೋಚಿಸಿದರೆ “ವೆಬ್‌ ಸಮುದ್ರವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದೆ ನೀರಿಗೆ ಇಳಿಯುವುದುʼʼ ಸರಿಯಾದ ಕಾರಣ ಆಗಿರಬಹುದು. ಒಂದು ಕಾಲದಲ್ಲಿ ಕನ್ನಡ ಬ್ಲಾಗ್‌ ಜಗತ್ತು ತುಂಬಾ ಶ್ರೀಮಂತವಾಗಿತ್ತು. ಬ್ಲಾಗ್‌ ಬರಹಗಳನ್ನು ಓದುವುದು ಖುಷಿ ನೀಡುವ ವಿಚಾರವಾಗಿತ್ತು. ಕಾಲ ಬದಲಾದಂತೆ ಜನರು ಫೇಸ್‌ಬುಕ್‌ನಲ್ಲಿ ಬರೆಯಲು ಆರಂಭಿಸಿದರು. ಹೀಗಾಗಿ… Read More »

ಆ್ಯಪ್ ಡೆವಲಪರ್‌ ಆಗುವುದು ಹೇಗೆ?

By | 01/12/2019

ಇಂದು ಸ್ಮಾರ್ಟ್‍ಫೋನ್ ಎಲ್ಲರಿಗೂ ಅನಿವಾರ್ಯ ಸಾಧನವಾಗಿಬಿಟ್ಟಿದೆ. ವಿವಿಧ ಕಂಪನಿಗಳಿಗೆ, ಬಿಸ್ನೆಸ್‍ಗಳಿಗೆ ಗ್ರಾಹಕರನ್ನು ತಲುಪಲು ಮೊಬೈಲ್ ಆ್ಯಪ್ ಅನಿವಾರ್ಯವಾಗಿಬಿಟ್ಟಿದೆ. ಮೊಬೈಲ್ ಸಾಧನಗಳು, ಅಪ್ಲಿಕೇಷನ್‍ಗಳು ನಮ್ಮ ಸಂವಹನದ ರೀತಿಯನ್ನೇ ಬದಲಾಯಿಸಿಬಿಟ್ಟಿದೆ. ಇದೇ ಕಾರಣಕ್ಕೆ ಮೊಬೈಲ್ ಆ್ಯಪ್‍ಗಳನ್ನು ಅಭಿವೃದ್ಧಿಪಡಿಸುವುದು ಅತ್ಯುತ್ತಮ ಬೇಡಿಕೆಯ ಮತ್ತು ವೇಗವಾಗಿ ಪ್ರಗತಿ ಕಾಣುತ್ತಿರುವ ಐಟಿ ಕರಿಯರ್ ಆಗಿದೆ. ಈ ಉದ್ಯೋಗವನ್ನು ಪ್ರಿಲ್ಯಾನ್ಸ್ ಆಗಿಯೂ ಮಾಡಬಹುದು. ಆ್ಯಪ್ ಅಭಿವೃದ್ಧಿಪಡಿಸಬೇಕಾದರೆ ಮೊದಲು ಪ್ರೋಗ್ರಾಮಿಂಗ್ ಭಾಷೆಯನ್ನು ಕಲಿಯಬೇಕು. ಸಿ, ಸಿಪ್ಲಸ್‍ಪ್ಲಸ್, ಜಾವಾ ಇತ್ಯಾದಿಗಳನ್ನು ಕಲಿಯಬೇಕು. ಗೂಗಲ್ ಆಂಡ್ರಾಯ್ಡ್, ಆಪಲ್ ಐಒಎಸ್‍ಗೆ ತಕ್ಕಂತೆ ನೀವು ಕೌಶಲ ಕಲಿಯಬೇಕು.… Read More »

ವೈದ್ಯರಾಗುವುದು ಹೇಗೆ?: ಡಾಕ್ಟರ್ ಆಗಲು ಏನೆಲ್ಲ ಓದಬೇಕು?

By | 20/10/2019

ಹೆಚ್ಚಿನ ವಿದ್ಯಾರ್ಥಿಗಳಿಗೆ ವೈದ್ಯ ವೃತ್ತಿ ಅಚ್ಚುಮೆಚ್ಚು. ರೋಗಿಗಳ ಪಾಲಿಗೆ ದೇವರಾಗುವ ಅದ್ಭುತ ಅವಕಾಶವಿದು. ಆದರೆ, ಈಗಿನ ದುಬಾರಿ ಶಿಕ್ಷಣವು ಸಾಕಷ್ಟು ವಿದ್ಯಾರ್ಥಿಗಳನ್ನು ವೈದ್ಯ ವೃತ್ತಿಯಿಂದ ದೂರವಿಟ್ಟಿದೆ. ಆದರೆ, ಅತ್ಯುತ್ತಮ ಅಂಕದ ನೆರವಿನಿಂದ ಸ್ಕಾಲರ್‍ಷಿಪ್ ಮತ್ತು ಬ್ಯಾಂಕ್ ಸಾಲ ಪಡೆದು ವೈದ್ಯರಾದ ಸಾಕಷ್ಟು ಜನರು ನಮ್ಮ ನಿಮ್ಮ ನಡುವೆ ಇದ್ದಾರೆ. ಪಿಯುಸಿಯಲ್ಲಿ ವಿಜ್ಞಾನ ಓದಿರಬೇಕು. ವೈದ್ಯರಾಗಬೇಕಾದರೆ ಮೊದಲ ಹಂತವಾಗಿ ಎಂಬಿಬಿಎಸ್ ಪದವಿ ಪಡೆಯಬೇಕು. ಇಂಟರ್ನ್‍ಷಿಪ್ ಸೇರಿದಂತೆ ಸುಮಾರು 5-6 ವರ್ಷ ಓದಬೇಕು. ಎಂಬಿಬಿಎಸ್, ಬಿಡಿಎಸ್ ಮತ್ತು ವೆಟರ್ನಿಟಿ ವಿಜ್ಞಾನ ಇತ್ಯಾದಿ ಓದಲು ನೀವು… Read More »

ಹೆಲಿಕಾಪ್ಟರ್ ಪೈಲೆಟ್ ಆಗುವುದು ಹೇಗೆ?

By | 20/10/2019

ದೊಡ್ಡ ಕನಸು ಕಂಡು ಅದನ್ನು ಈಡೇರಿಸಿಕೊಂಡು ಭವಿಷ್ಯ ಬದಲಾಯಿಸಲು ಬಯಸುವವರು ರೆಕ್ಕೆ ತಿರುಗಿಸುತ್ತ ಹಾರುವ ಹೆಲಿಕಾಪ್ಟರ್ ಪೈಲೆಟ್ ಸೀಟಲ್ಲಿ ಕುಳಿತುಕೊಳ್ಳುವ ಕುರಿತು ಆಲೋಚಿಸಬಹುದು. ಹೆಲಿಕಾಪ್ಟರ್ ಪೈಲೆಟ್ ಆಗಲು ಬಯಸುವವರಿಗೆ ಕಮರ್ಷಿಯಲ್ ಹೆಲಿಕಾಪ್ಟರ್ ಪೈಲಟ್ ಲೈಸನ್ಸ್ (ಸಿಎಚ್‍ಪಿಎಲ್) ಮತ್ತು ಪ್ರೈವೇಟ್ ಹೆಲಿಕಾಪ್ಟರ್ ಪೈಲಟ್ ಲೈಸನ್ಸ್ (ಪಿಎಚ್‍ಪಿಎಲ್) ಕೋರ್ಸ್‍ಗಳು ಲಭ್ಯ ಇರುತ್ತವೆ. ಈ ಕೋರ್ಸ್‍ಗಳ ಅವಧಿ ಬಹುತೇಕ 1 ಅಥವಾ 2 ವರ್ಷದ ಒಳಗೆ ಇರುತ್ತದೆ. ಈ ಕೋರ್ಸ್ ಅನ್ನು ಪುರುಷರು ಅಥವಾ ಮಹಿಳೆಯರು ಪಡೆದುಕೊಳ್ಳಬಹುದಾಗಿದೆ. ಆಯಾ ತರಬೇತಿ ಸಂಸ್ಥೆಗಳಿಗೆ ಅನುಗುಣವಾಗಿ ಕನಿಷ್ಠ 17… Read More »

ವಿಮಾನ ಪೈಲೆಟ್ ಆಗುವುದು ಹೇಗೆ?

By | 18/10/2019

ಪುಟ್ಟ ಲೋಹದ ಹಕ್ಕಿ ಆಕಾಶದಲ್ಲಿ ಹಾರಾಟ ನಡೆಸಿದಾಗ ಕಣ್ಣೆತ್ತಿ ನೋಡುವ ಅಭ್ಯಾಸ ನಿಮಗೂ ಇರಬಹುದು. ಒಮ್ಮೆಯೂ ವಿಮಾನಯಾನ ಮಾಡದವರಿಗೆ  ಆಕಾಶಯಾನ ಮಾಡಬೇಕೆಂಬ ಕನಸು ಮೂಡುತ್ತದೆ. ಇನ್ನಷ್ಟು ಮಹಾತ್ವಕಾಂಕ್ಷೆಯುಳ್ಳವರಿಗೆ ವಿಮಾನದ ಪೈಲೆಟ್ ಆಗಬೇಕೆಂಬ ಆಸೆಯೂ ಮೂಡಬಹುದು. ಬಸ್ ಚಾಲಕನ ಪಕ್ಕ ಕುಳಿತ ಮಕ್ಕಳು ಚಾಲಕನಾಗಬೇಕೆಂಬ ಕನಸು ಕಂಡರೆ ಅದು ಈಡೇರಬಹುದು. ಆದರೆ, ವಿಮಾನ ಪೈಲೆಟ್ ಆಗುವುದು ಸುಲಭವಲ್ಲ. ಹಾಗಂತ, ಅದು ಈಡೇರದ ಕನಸೇನೂ ಅಲ್ಲ! ಈಗಲೂ ವಿಮಾನ ಪೈಲೆಟ್ ಅತ್ಯಾಕರ್ಷಕ ಉದ್ಯೋಗ. ಈ ಹುದ್ದೆ ನಿಮಗೆ ಸಮಾಜದಲ್ಲಿ ಅತ್ಯುನ್ನತ ಪ್ರತಿಷ್ಠೆ ಒದಗಿಸುತ್ತದೆ. ದೇಶದಲ್ಲಿ… Read More »