Category Archives: Career

ನಿಮ್ಮ ಉದ್ಯೋಗ ಉಳಿಯಬೇಕೆ, ಯಶಸ್ಸು ಪಡೆಯಬೇಕೆ? ಇಂತಹ ಬುದ್ಧಿಗಳನ್ನು ಬಿಟ್ಟುಬಿಡಿ!

By | 27/12/2021

ಸೆಂಟರ್ ಫಾರ್ ಕ್ರಿಯೆಟಿವ್ ಲೀಡರ್ಷಿಪ್‌ ಸಂಸ್ಥೆಯು ಇತ್ತೀಚಿಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಕಂಪನಿಯೊಂದಕ್ಕೆ ಯಾರು ಸಮಸ್ಯಾತ್ಮಕ ಉದ್ಯೋಗಿಯಾಗಬಲ್ಲರು ಎಂಬ ಮಾಹಿತಿ ಒದಗಿಸಿದೆ. ನಿಮ್ಮಲ್ಲಿ ಸಮಸ್ಯಾತ್ಮಕ ಉದ್ಯೋಗಿಯಾಗುವ ಲಕ್ಷಣಗಳಿದ್ದರೆ ತಕ್ಷಣದಿಂದ ಆ ಗುಣಗಳನ್ನು ಬಿಟ್ಟುಬಿಡಲು ಪ್ರಯತ್ನಿಸಿ. 1.ಕೆಲಸದ ಕಾರ್ಯಕ್ಷಮತೆ ಉತ್ತಮವಾಗಿರದೆ ಇರುವುದು ನಿರ್ದಿಷ್ಟ ಕಾರ್ಯದಕ್ಷತೆ ಹೊಂದಿರದೆ ಇರುವುದು ಕಂಪನಿಗೆ ಹೊರೆಯಾಗಿ ಪರಿಣಮಿಸುತ್ತದೆ. ಪ್ರತಿಯೊಂದು ಕಂಪನಿಗಳಲ್ಲಿಯೂ ಅಂಡರ್‍ಪರ್ಫಾಮಿಂಗ್ ಉದ್ಯೋಗಿಗಳು ಇದ್ದೇ ಇರುತ್ತಾರೆ. ಇಂತವರು ತಮ್ಮ ಪರ್ಫಾಮೆನ್ಸ್ ಉತ್ತಮಪಡಿಸಿಕೊಳ್ಳಲು ಆದ್ಯತೆ ನೀಡಬೇಕು. ನಿಗದಿತ ಸಮಯಕ್ಕೆ ಕೆಲಸ ಪೂರ್ಣಗೊಳಿಸಲಾಗಿಲ್ಲವೆಂಬ ಸಬೂಬು ಹೇಳುವುದನ್ನು ಬಿಡಬೇಕು. 2. ಇತರರೊಂದಿಗೆ ಉತ್ತಮವಾಗಿ ಕೆಲಸ ಮಾಡದೆ… Read More »

ಉದ್ಯೊಗದಲ್ಲಿ ಪ್ರೊಬೆಷನರಿ ಅವಧಿ ಎಂದರೇನು? ಈ ಅವಧಿಯಲ್ಲಿ ನಿಮ್ಮ ಕೆಲಸ ಹೇಗಿರಬೇಕು?

By | 23/12/2021

ಏನಿದು ಪ್ರೊಬೆಷನರಿ ಪಿರೆಯಿಡ್‌? ಈ ಅವಧಿಯಲ್ಲಿಹೇಗೆ ಕೆಲಸ ಮಾಡಬೇಕು? ಇದು ಯಾಕೆ ಮುಖ್ಯ? ಹೊಸದಾಗಿ ಕೆಲಸಕ್ಕೆ ಸೇರುವವರು ಈ ಅವಧಿಯಲ್ಲಿಹೇಗಿರಬೇಕು ಮತ್ತು ಹೇಗಿರಬಾರದು? ಇದು ಕರ್ನಾಟಕ ಬೆಸ್ಟ್‌ ವಿಶೇಷ. ಹೊಸ ಕಂಪನಿಗೆ ಸೇರುವುದು ಫ್ರೆಷರ್ಸ್‌ಗಳಿಗೆ ಮಾತ್ರವಲ್ಲದೆ ಅನುಭವಿಗಳಿಗೂ ಆತಂಕ ತರುವ ಸಂಗತಿ. ಕಂಪನಿಗಳು ಸಹ ಫ್ರೆಷರ್‌ ಆಗಿರಲಿ, ಹತ್ತಿಪತ್ತು ವರ್ಷ ಅನುಭವಿಯಾಗಿರಲಿ, ಮೊದಲ ಆರು ತಿಂಗಳು ‘ಪ್ರೊಬೆಷನರಿ ಅವಧಿ’ ಎಂಬ ಅನಿವಾರ‍್ಯ ಆಯ್ಕೆಯನ್ನು ಮುಂದಿಡುತ್ತದೆ.  ಆದರೆ, ಕಂಪನಿಗೂ, ಉದ್ಯೋಗಕ್ಕೆ ಸೇರುವವರಿಗೂ ಪ್ರೊಬೆಷನರಿ ಅವಧಿ ಎನ್ನುವುದು ಅತ್ಯುತ್ತಮ ಸಂಗತಿಯಾಗಿದೆ. ಕಂಪನಿಗೆ ನೀವು ಇಷ್ಟವಾಗದೆ… Read More »

ಬೊಂಬಾಟ್ ಬೇಡಿಕೆಯ 6 ಟೆಕ್ನಿಕಲ್ ಕೌಶಲಗಳಿವು, ಕಲಿತರೆ ಉದ್ಯೋಗ ಗ್ಯಾರಂಟಿ!

By | 19/12/2021

ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆ ಪಡೆದುಕೊಂಡಿರುವ ಟೆಕ್ನಿಕಲ್ ಸ್ಕಿಲ್‍ಗಳ ವಿವರ ಇಲ್ಲಿದೆ. ನೀವು ಉದ್ಯೋಗ ಜಗತ್ತಿಗೆ ಹೊಸದಾಗಿ ಕಾಲಿಟ್ಟವರು ಆಗಿರಬಹುದು ಅಥವಾ ಈಗಾಗಲೇ ಅನುಭವಿ ಉದ್ಯೋಗಿ ಎಂದು ಹಣೆಪಟ್ಟಿ ಕಟ್ಟಿಕೊಂಡಿರಬಹುದು. ಆದರೆ, ಇತ್ತೀಚಿನ ಕೌಶಲಗಳನ್ನು ಕಲಿಯದೆ ಇದ್ದರೆ ನಿಮ್ಮ ರೆಸ್ಯೂಂಗೆ ತೂಕ ಇರದು. ತಂತ್ರಜ್ಞಾನ ಜಗತ್ತಿನಲ್ಲಿ ವಿವಿಧ ಕೌಶಲಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಮುಂದಿನ ದಿನಗಳಲ್ಲಿ ಇವು ಇನ್ನಷ್ಟು ಬೇಡಿಕೆ ಕಾಣುವ ನಿರೀಕ್ಷೆ ಇದೆ. ಅಂತಹ ಕೌಶಲಗಳ ವಿವರ ಇಲ್ಲಿದೆ. ಪ್ರೋಗ್ರಾಮಿಂಗ್ ಪ್ರೋಗ್ರಾಮಿಂಗ್ ಭಾಷೆಗಳನ್ನು ಬಳಸಿಕೊಂಡು ಸಾಫ್ಟ್‍ವೇರ್ ಮತ್ತು ಅಪ್ಲಿಕೇಷನ್‍ಗಳನ್ನು ನಿರ್ಮಿಸುವುದು ಪ್ರೋಗ್ರಾಮಿಂಗ್ ನಲ್ಲಿ… Read More »

ಕರಿಯರ್ ಪ್ರಗತಿಗೆ ನೆರವಾಗುವ ಸೋಷಿಯಲ್ ಸ್ಕಿಲ್ಸ್

By | 18/12/2021

ವೃತ್ತಿ ಮತ್ತು ವೈಯಕ್ತಿಕ ಜೀವನದ ಯಶಸ್ಸಿಗೆ ಅವಶ್ಯವಾಗಿ ಬೇಕಾದ ಕೌಶಲಗಳ ವಿವರ ಇಲ್ಲಿದೆ. ಕರಿಯರ್‍ನಲ್ಲಿ ಪ್ರಗತಿ ಕಾಣಲು ಕೇವಲ ಬಾಹ್ಯ ಅಂದ ಸಾಕಾಗದು. ಯಶಸ್ಸಿಗೆ ಸೋಷಿಯಲ್ ಸ್ಕಿಲ್ಸ್ ಅವಶ್ಯವಾಗಿದೆ. ಬಾಹ್ಯ ಅಂದವೆಂದರೆ ಶೋಕೇಸ್‍ನಲ್ಲಿರುವ ಗೊಂಬೆ, ಸೋಷಿಯಲ್ ಕೌಶಲವೆನ್ನುವುದು ಮನೆಯಲ್ಲಿ ಲವಲವಿಕೆಯಿಂದ ಓಡಾಡುವ ಪುಟ್ಟ ಮಗು. ನಿಮ್ಮ ಬಗ್ಗೆ ನಿಮಗಿರುವ ಸ್ವಯಂ `Àರವಸೆ, ಸಕಾರಾತ್ಮಕ ವರ್ತನೆ, ಉತ್ತಮ ಬಾಡಿ ಲ್ಯಾಂಗ್ವ ಏಜ್, ಐ ಕಾಂಟ್ಯಾಕ್ಟ್, ಅತ್ಯುತ್ತಮ ಸಂವಹನ ಕೌಶಲ ಇತ್ಯಾದಿಗಳು ಕರಿಯರ್ ಪ್ರಗತಿಗೆ ಸಾಥ್ ನೀಡುತ್ತವೆ. ಜನರೊಂದಿಗೆ ಬೆರೆಯಿರಿ ಸೋಷಿಯಲ್ ಕೌಶಲಗಳು ಮಾತ್ರವಲ್ಲದೆ,… Read More »

2022 Career Resolutions: ವೃತ್ತಿ ಜೀವನದ ಯಶಸ್ಸಿಗೆ ಈ ನಿಯಮಗಳನ್ನು ಪಾಲಿಸಿ

By | 15/12/2021

ಉದ್ಯೋಗಕ್ಷೇತ್ರದಲ್ಲಿಪ್ರಗತಿ ಕಾಣಲು ಬಯಸುವವರಿಗೆ ತಜ್ಞರು ಒಂದಿಷ್ಟು ಕಿವಿಮಾತುಗಳನ್ನು ಇಲ್ಲಿಹೇಳಿದ್ದಾರೆ. ಹೊಸ ವರ್ಷದ ಆರಂಭದಲ್ಲಿಕರಿಯರ್‌ನಲ್ಲಿಪ್ರಗತಿ ಕಾಣಲು ಪ್ರಯತ್ನಿಸಬೇಕು ಎಂಬ ಸಂಕಲ್ಪ ಬಹುತೇಕರು ಮಾಡಿಕೊಂಡಿರುತ್ತಾರೆ. ಉದ್ಯೋಗದಲ್ಲಿಪ್ರಗತಿ ಕಾಣುವ ಕುರಿತು ನೀವು ತಜ್ಞರಿಂದ, ಈಗಾಗಲೇ ಉದ್ಯೋಗದಲ್ಲಿಉನ್ನತ ಹಂತದಲ್ಲಿರುವವರಿಂದ, ಸಮಲೋಚಕರಿಂದ ಟಿಫ್ಸ್‌ ಪಡೆದಿರಬಹುದು. ಕರಿಯರ್‌ನಲ್ಲಿಸಾಧನೆ ಮಾಡಿರುವವರ ಅನುಭವಗಳನ್ನು ಕೇಳುವುದು ತುಂಬಾ ಒಳ್ಳೆಯ ಕೆಲಸ. ಅವರ ಅನುಭವ, ಆಲೋಚನೆಗಳು ಅತ್ಯುನ್ನತವಾಗಿರುತ್ತವೆ. ಇಂತಹ ಅನುಭವಿ ಸಾಧಕರು ಬಿಸ್ನೆಸ್‌ ಇನ್‌ಸೈಡರ್‌ಗೆ ನೀಡಿದ ಸಂದರ್ಶನದಲ್ಲಿಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಅವುಗಳಲ್ಲಿಆಯ್ದ ಕೆಲವು ಟಿಪ್ಸ್‌ ಗಳು ಇಲ್ಲಿವೆ. 2022 Career Resolutions: ನೆಟ್‌ವರ್ಕಿಂಗ್‌ ಅಗತ್ಯ… Read More »

ಸಾಂತಾಕ್ಲಾಸ್‌ನಿಂದ ಏನು ಕಲಿಯುವಿರಿ? ಸಾಂತಾಕ್ಲಾಸ್ ಕರಿಯರ್ ಪಾಠ ಕೂಡ ಮಾಡ್ತಾನೆ ಅಂದ್ರೆ ನಂಬ್ತಿರಾ?

By | 15/10/2021

ಜಗತ್ತಿನ ಎಲ್ಲಾ ಮಕ್ಕಳಿಗೂ ಉಡುಗೊರೆ ನೀಡುವ ಸಾಂತಾಕ್ಲಾಸ್ ನಮ್ಮ ರೋಲ್ ಮಾಡೆಲ್ ಆಗಬಹುದು. ಸಾಂತಾ ಕ್ಲಾಸ್ ಒಳ್ಳೆಯ ವ್ಯಕ್ತಿತ್ವದ, ನಗುಮುಖದ, ಬಿಳಿದಾಡಿಯುಳ್ಳ, ದೊಡ್ಡ ಹೊಟ್ಟೆಯ ವ್ಯಕ್ತಿ. ಕ್ರಿಸ್ಮಸ್ ಹಿಂದಿನ ದಿನ ಹಿಮಜಿಂಕೆಗಳಿಂದ ತನ್ನ ಗಾಡಿಯಲ್ಲಿ ಹಾರುತ್ತ ಜಗತ್ತಿನ ಎಲ್ಲರ ಮನೆಗೆ ಹೋಗಿ ಅಲ್ಲಿರುವ ಮಕ್ಕಳಿಗೆ ಉಡುಗೊರೆಗಳನ್ನು ಇಟ್ಟು ಹೋಗುತ್ತಾನೆ. ದೊಡ್ಡವರು ಈ ಕತೆಯನ್ನು ನಂಬದೆ ಇರಬಹುದು. ಆದರೆ, ಮಕ್ಕಳು ನಂಬುತ್ತಾರೆ. ಮಕ್ಕಳು ದೊಡ್ಡವಾರದಂತೆ ಇದೊಂದು ಕಾಲ್ಪನಿಕ ಅಥವಾ ಜನಪದ ಕತೆ ಎಂದು ತಿಳಿದುಕೊಳ್ಳುತ್ತಾರೆ.  ಕರಿಯರ್‍ನಲ್ಲಿ ಯಶಸ್ಸು ಪಡೆಯಲು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ… Read More »