Category Archives: Story

ಸ್ಫೂರ್ತಿದಾಯಕ: ವಾಟ್ಸ್ಆ್ಯಪ್ ಸ್ಥಾಪಕ ಜಾನ್ ಕೋಮ್ ಯಶೋಗಾಥೆ

By | 12/07/2021

ಜಗತ್ತಿನ ಸುಮಾರು 109 ದೇಶಗಳಲ್ಲಿ ಜನಪ್ರಿಯತೆ ಪಡೆದಿರುವ ವಾಟ್ಸ್‌ಆ್ಯಪ್‌ ಬಗ್ಗೆ ಗೊತ್ತಿಲ್ಲದೆ ಇರುವವರು ಯಾರೂ ಇರಲಿಕ್ಕಿಲ್ಲ. ಇದನ್ನು ಬರೋಬ್ಬರಿ 1600 ಕೋಟಿ ಡಾಲರ್‌ ಕೊಟ್ಟು ಫೇಸ್‌ಬುಕ್‌ ಖರೀದಿಸಿತ್ತು. ಇಷ್ಟೊಂದು ದುಬಾರಿ ಮೊತ್ತಕ್ಕೆ ಬಿಕರಿಯಾದ ವಾಟ್ಸ್‌ಆ್ಯಪ್‌ ಅನ್ನು ಆರಂಭಿಸಿದ್ದು ಜಾನ್‌ ಕೋಮ್‌. ಈತನ ಬಾಲ್ಯ, ಬದುಕು, ಸಾಧನೆ ಎಲ್ಲರಿಗೂ ಸ್ಫೂರ್ತಿ ನೀಡುವಂತದ್ದು. ಈತನ ಕತೆ ಆರಂಭವಾಗುವುದು ದೂರದ ಉಕ್ರೈನ್‌ನಿಂದ. ಅದು 1992ನೇ ಇಸವಿ. ಜಾನ್‌ ಕೋಮ್‌ ಎಂಬ ಬಾಲಕನಿಗೆ 16 ವರ್ಷ ವಯಸ್ಸು. ಅರ್ಥವ್ಯವಸ್ಥೆ ಕೆಟ್ಟದಾಗಿತ್ತು. ಯಾರ ಕೈಯಲ್ಲಿಯೂ ದುಡ್ಡಿರಲಿಲ್ಲ. ದಟ್ಟ ದರಿದ್ರ… Read More »

ಕತೆ; ‘ಕೃಷ್ಣಾರ್ಪಣ ಮಸ್ತು’

ಪವಿತ್ರಾ ಶೆಟ್ಟಿ ಅಮ್ಮ ಫೋನ್ ಮಾಡಿದ್ದಳು. ಚಿಕ್ಕಮ್ಮತ್ತೆ ಏನೇನೋ ಮಾತಾಡುತ್ತಿದ್ದಾರೆ. ಯಾಕೋ ಇತ್ತೀಚೆಗೆ ಅವರು ಈ ಲೋಕದಲ್ಲಿ ಇದ್ದವರ ಹಾಗೇ ಇಲ್ಲಪ್ಪ. ನೀ ಒಮ್ಮೆ ಬಂದು ಹೋಗು. ಎದೆಯೊಳಗೆ ಪುಕು ಪುಕು ಶುರುವಾಗಿ ಅದು ಹೊಟ್ಟೆಯೊಳಗೂ ಕಾಣಿಸಿಕೊಂಡು ಯಾಕೋ ಪಾಯಿಖಾನೆಗೆ ಓಡಿಯೇ ಬಿಡೋಣ ಅನ್ನಿಸಿ ಅಮ್ಮಾ.. ನಿನಗೆ ಆಮೇಲೆ ಫೋನ್ ಮಾಡುತ್ತೇನೆ ಎಂದು ಪೋನಿಟ್ಟೆ. ಹೆದರಿಕೆಯಾದಾಗಲೆಲ್ಲ ಹೊಟ್ಟೆಯೊಳಗೆ ಏನೇನೋ ತಳಮಳವಾಗಿ ನನಗೆ ಪಾಯಿಖಾನೆಗೆ ಹೋಗಬೇಕು ಅನ್ನಿಸುವುದು ಮೊದಲಿನಿಂದಲೂ ಇದ್ದ ಖಯಾಲಿ. ಅದು ಚಿಕ್ಕಮ್ಮತ್ತೆಯಿಂದಲೇ ಬಂದ ಉಡುಗೊರೆ. ಇನ್ನು ತಡ ಮಾಡುವುದು ಬೇಡ… Read More »

ಕಥಾಲೋಕ: ಒಡಲೊಳಗಿನ ಕೆಂಡಸಂಪಿಗೆ…

ಪವಿತ್ರಾ ಶೆಟ್ಟಿ ಎಲ್ಲಾದರೂ ಬಿಟ್ಟು ಬಾ ಈ ಮಗೂನಾ ಶಂಕರಣ್ಣಾ ನೀ ಒಂಬ್ನೆ ಹೆಂಗೇ ಸಾಕ್ತಿಯಾ…? ಹುಟ್ಟಿದ್ದು ಬೇರೆ ಹೆಣ್ಣು ಕೂಸು, ಅವಳ ಪಾಪದ ಪಿಂಡಕ್ಕೆ ನೀ ಯಾಕೆ ಹೊಣೆಗಾರ ಆಗ್ತಿಯಾ…? ಅದರ ಮೂಸುಡಿಯಲ್ಲಿರೋ ಆ ಮಚ್ಚೆ ನೋಡಿದರೆ ಗೊತ್ತಾಗುದಿಲ್ವಾ ಅದು ನಿನ್ನ ರಕ್ತಕ್ಕೆ ಹುಟ್ಟಿದ್ದು ಅಲ್ಲಾ ಅಂತ! ಎಂದು ಬುಡ್ಡಮ್ಮಜ್ಜಿ ಮುದುರಿ ಹೋದ ವೀಳ್ಯದೆಲೆಯ ಮೇಲೆ ಸುಣ್ಣ ಸವರಿಕೊಳ್ತಾ ಅದರ ಮಧ್ಯೆ ಎರಡು ಅಡಿಕೆ ಹೋಳು, ತಲೆಕೂದಲಿನಂತಿರುವ ಹೊಗೆಸೊಪ್ಪನ್ನ ಸೇರಿಸಿ ಬಾಯಲ್ಲಿಟುಕೊಂಡು ಚೆನ್ನಾಗಿ ಜಗಿದು ಪಿಚಕ್ ಎಂದು ಉಗಿದುಬಿಟ್ಟಳು! ತುಸು… Read More »

ಸಣ್ಣ ಕತೆ:’ಸಿಂಗಾರಜ್ಜಿಯ ಮುತ್ತಿನ ಬುಗುಡಿ’

ಪವಿತ್ರ ಶೆಟ್ಟಿ ಹಾವು ಹರಿದಂತಿರುವ ರಸ್ತೆಯಲ್ಲಿ ಬಸಿರಿಯಂತೆ ತೇಕುತ್ತಾ ಬರುತ್ತಿದ್ದ ಬಸ್ ನೋಡಿ ಸಿಂಗಾರಜ್ಜಿ ತನ್ನ ರವಿಕೆಯೊಳಗೆ ಕೈ ಹಾಕಿ ಕರ್ಚಿಫಿನ ಗಂಟೊಂದನ್ನು ತೆಗೆದಿಟ್ಟುಕೊಂಡಳು. ಮುದುರಿ ಹೋಗಿದ್ದ ನೋಟುಗಳನ್ನು ಕರ್ಚಿಫಿನಿಂದ ಹೊರತೆಗೆದು ತನ್ನ ಚೂಪು ಕಣ್ಣಿನಲ್ಲಿಯೇ ಅದನ್ನು ಮೇಲೆ ಕೆಳಗೆ ನೋಡತೊಡಗಿದಳು. ಈಗಿನ ಕ್ಷಣಕ್ಕೊಂದು ಬಣ್ಣ ಬದಲಾಯಿಸುವ ಮನುಷ್ಯರ ಹಾಗೇ ಈ ನೋಟುಗಳು ಕೂಡ ತಮ್ಮ ರೂಪ ಬದಲಿಸಿಕೊಂಡು ಬಣ್ಣ ಬಣ್ಣದ್ದಾಗಿವೆ. ಐವತ್ತು, ಇನ್ನೂರು ರೂಪಾಯಿಗಳ ನೋಟೇ ಗೊತ್ತಾಗುತ್ತಿಲ್ಲ ಎಂದು ಕಣ್ಣಿಗೆ ಇನ್ನೂ ಹತ್ತಿರ ಹಿಡಿದುಕೊಂಡು ನೋಡತೊಡಗಿದಳು. ಯಾರಾ ಹತ್ತಿರವಾದರೂ ಕೇಳುವ… Read More »

ವ್ಯಕ್ತಿತ್ವ ವಿಕಸನ: ಹೆಂಡತಿಗೆ ಕಿವಿ ಕೇಳಿಸುತ್ತಿಲ್ಲ

By | 18/06/2019

ಒಂದು ಕತೆಯಿಂದ ಆರಂಭಿಸೋಣ. ಒಂದೂರಲ್ಲಿ ಗಂಡ-ಹೆಂಡತಿ ಅನ್ಯೋನ್ಯವಾಗಿದ್ದರು. ಇಬ್ಬರೂ ಮಧ್ಯವಯಸ್ಕರು. ಇತ್ತೀಚೆಗೆ ಗಂಡನಿಗೆ ‘ನನ್ನ ಹೆಂಡತಿಗೆ ಕಿವಿ ಸರಿಯಾಗಿ ಕೇಳಿಸುತ್ತಿಲ್ಲ’ ಎಂಬ ಸಂಶಯ ಆರಂಭವಾಯಿತು. ಆಕೆಯ ಕಿವಿಗೆ ಚಿಕಿತ್ಸೆ ನೀಡಬೇಕೆಂದುಕೊಂಡನು. ಆದರೆ, ಇದನ್ನು ಹೆಂಡತಿಗೆ ಹೇಳುವುದು ಹೇಗೆ ಎಂಬ ಸಂದಿಗ್ಧತೆಗೆ ಬಿದ್ದನು. ತನ್ನ ಫ್ಯಾಮಿಲಿ ಡಾಕ್ಟರ್‌ಗೆ ಈ ಕುರಿತು ತಿಳಿಸಿದ. ಆಕೆಗೆ ಕಿವಿ ಕೇಳಿಸುತ್ತದೆಯೇ? ಇಲ್ಲವೇ? ಎಂದು ತಿಳಿಯಲು ಡಾಕ್ಟರ್ ಒಂದು ಐಡಿಯಾ ಹೇಳಿದರು. ‘ನಿನ್ನ ಹೆಂಡತಿಗೆ ಕಿವಿ ಕೇಳಿಸುತ್ತದೆಯೇ ಇಲ್ಲವೇ ಎಂದು ತಿಳಿಯಲು ಮೊದಲು ನೀನು ಅವಳಿಂದ ಹತ್ತು ಅಡಿ… Read More »

ಸೂರ್ತಿದಾಯಕ: ವಾಲ್ಟ್ ಡಿಸ್ನಿ ಬದುಕಿನ ಕತೆ

By | 12/01/2019

ಅನಿಮೇಟರ್, ಕಾರ್ಟೂನಿಸ್ಟ್, ನಿರ್ದೇಶಕ, ಉದ್ಯಮಿಯಾಗಿ ವಾಲ್ಟ್ ಡಿಸ್ನಿ ಫೇಮಸ್. ಆತ 20ನೇ ಶತಮಾನದ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಸುಮಾರು 22 ಅಕಾಡೆಮಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಈಗ ವಾಲ್ಟ್ ಡಿಸ್ನಿ ಕಂಪನಿಯು ಹಲವು ಬಿಲಿಯನ್ ಡಾಲರ್ ವಹಿವಾಟಿನ ಬೃಹತ್ ಕಂಪನಿಯಾಗಿದೆ. ಆದರೆ, ವಾಲ್ಟ್ ಡಿಸ್ನಿಗೆ ಯಶಸ್ಸು ಸಡನ್ ಆಗಿ ಬಂದಿರುವುದಲ್ಲ. ಆತನಿಗೆ ಹೆಜ್ಜೆಹೆಜ್ಜೆಗೂ ಸೋಲು, ಅಪಮಾನಗಳು ಎದುರಾಗುತ್ತಿದ್ದವು. ಸೇನೆಗೆ ಸೇರಬೇಕೆಂಬ ಉದ್ದೇಶದಿಂದ 1917ರಲ್ಲಿ ವಾಲ್ಟ್ ಡಿಸ್ನಿಯು ಶಾಲೆಯನ್ನು ಅರ್ಧಕ್ಕೆ ಬಿಟ್ಟರು. ಆದರೆ, ಸೇನೆಗೆ ಸೇರಲು ವಯಸ್ಸು ಆಗಿಲ್ಲವೆಂಬ ಕಾರಣ ನೀಡಿ ಆತನನ್ನು ಸೇರಿಸಲಿಲ್ಲ.… Read More »