ಉದ್ಯೋಗದಲ್ಲಿ ಯಶಸ್ಸು ಪಡೆಯಬೇಕೆ? ಸ್ವಾಮಿ ವಿವೇಕಾನಂದರು ಹೇಳಿದ ಈ ಹಿತವಚನಗಳನ್ನು ಪಾಲಿಸಿ

By | 25/12/2021
swami vivekananda quotes

ಸ್ವಾಮಿ ವಿವೇಕಾನಂದರು ವಿವಿಧ ಸಂದರ್ಭಗಳಲ್ಲಿ ಹೇಳಿರುವ ನುಡಿಮುತ್ತುಗಳು, ಅವರು ಅನುಸರಿಸಿದ ಹಾದಿಗಳು ಕರಿಯರ್ ಯಶಸ್ಸು ಪಡೆಯಲು ಬಯಸುವವರಿಗೆ ಸೂರ್ತಿದಾಯಕ ಪಾಠವಾಗಬಹುದು.

ಸ್ವಾಮಿ ವಿವೇಕಾನಂದರು ಜನಿಸಿದ್ದು 1863ರಲ್ಲಿ. ಆ ಕಾಲದಲ್ಲಿ ಜಗತ್ತು ಈಗಿನಂತೆ ಇರಲಿಲ್ಲ. ಮೊಬೈಲ್ ಇರಲಿಲ್ಲ. ಇಂಟರ್‍ನೆಟ್ ಇರಲಿಲ್ಲ. ಸೀಮಿತ ತಂತ್ರಜ್ಞಾನಗಳು ಇದ್ದವು. ಆದರೆ, ಅವರ ಬೋಧನೆಗಳು, ಅವರ ವ್ಯಕ್ತಿತ್ವ ಆ ಕಾಲದಲ್ಲಿಯೇ ಜಗತ್‍ಖ್ಯಾತಿ ಪಡೆಯಿತು. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರು, ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರು, ಸ್ವಂತ ಉದ್ದಿಮೆ ಕಟ್ಟಲು ಪ್ರಯತ್ನಿಸುತ್ತಿರುವ ತರುಣ, ತರುಣಿಯರು, ಕರಿಯರ್‍ನಲ್ಲಿ ಪ್ರಗತಿ ಕಾಣಲು ಬಯಸುವವರಿಗೆ ವಿವೇಕವಾಣಿಯು ಸ್ಫೂರ್ತಿ ತುಂಬಬಲ್ಲದು.

ನಿಮ್ಮ ಮೇಲೆ ನಂಬಿಕೆ ಇರಲಿ

You cannot believe in God until you believe in yourself

ನಮ್ಮ ಮೇಲೆ ನಮಗೆ ನಂಬಿಕೆ ಇಲ್ಲದೆ ಇದ್ದರೆ ಯಾವುದೇ ಕೆಲಸ ಮಾಡಿದರೂ ವ್ಯರ್ಥ  ನೀವು ಯುಪಿಎಸ್‍ಸಿ ಅಥವಾ ಇನ್ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರಬಹುದು, ಆದರೆ ಮನಸ್ಸಿನ ಮೂಲೆಯಲ್ಲಿ ನನ್ನಿಂದೆಲ್ಲ ಐಎಎಸ್, ಐಪಿಎಸ್ ಆಗಲು ಸಾಧ್ಯನಾ ಎಂಬ ಅಪನಂಬಿಕೆ ಇರಬಹುದು. ಯಾವುದಾದರೂ ಹೊಸ ಕಂಪನಿ, ಸ್ಟಾರ್ಟ್‍ಅಪ್ ಮಾಡಲು ಯೋಜಿಸಿರಬಹುದು. ಆದರೆ, ನನ್ನಿಂದ ಇದು ಸಾಧ್ಯವಿಲ್ಲ ಎಂಬ ಯೋಚನೆ ನಿಮ್ಮನ್ನು ಮುಂದುವರೆಯಲು ಬಿಡದೆ ಇರಬಹುದು. ಮೊದಲಿಗೆ ನಿಮ್ಮನ್ನು ನೀವು ನಂಬಿ. ನಿಮ್ಮ ಮೇಲೆ ನಂಬಿಕೆ ಬೆಳೆಸಿಕೊಳ್ಳಿ. ನನ್ನಿಂದ ಇದು ಸಾಧ್ಯ, ಎಂತಹ ಸವಾಲೇ ಬರಲಿ, ನಾನು ಇದನ್ನು ಮಾಡಿಯೇ ಮಾಡಿ ತೀರುತ್ತೇನೆ ಎಂಬ ದೃಢತೆ ಬೆಳೆಸಿಕೊಳ್ಳಿರಿ.

ಗುರಿಮುಟ್ಟುವ ತನಕ ವಿರಮಿಸಬೇಡಿ

Arise! Awake! and stop not until the goal is reached.

ಏಳಿ, ಎದ್ದೇಳಿ,  ಗುರಿ ಮುಟ್ಟುವ ತನಕ ವಿರಮಿಸಬೇಡಿ ಎಂಬ ವಿವೇಕಾನಂದರ ನುಡಿ ನೀವು ಕೇಳಿರಬಹುದು. ಆದರೆ, ಬಹುತೇಕರು ತಮ್ಮ ಗುರಿಯನ್ನು ಈಡೇರಿಸಲು ಯಾವುದೇ ಪ್ರಯತ್ನ ಮಾಡುವುದಿಲ್ಲ. ಸದಾ ಕನಸಿನಲ್ಲಿ ಇರುತ್ತಾರೆ ಅಥವಾ ನಿದ್ದೆಯಿಂದ ಎದ್ದೇಳುವುದೇ ಇಲ್ಲ. ಬಹುತೇಕರು ಜೀವನದಲ್ಲಿ ಅಥವಾ ಕರಿಯರ್‍ನಲ್ಲಿ ಗುರಿ ಹಾಕಿಕೊಳ್ಳುತ್ತಾರೆ. ಆದರೆ, ಆ ಗುರಿ ತಲುಪಲು ಸರಿಯಾದ ಪ್ರಯತ್ನವನ್ನು ಮಾಡುವುದಿಲ್ಲ. ಇಂತಹವರನ್ನು ಬಡಿದೆಬ್ಬಿಸುವ ಶಕ್ತಿಯನ್ನು ಹೊಂದಿದೆ ಈ ವಿವೇಕಾವಾಣಿ.

ನಿಮಗೆ ನೀವೇ ಗುರು

You have to grow from the inside out. None can teach you, none can make you spiritual. There is no other teacher but your own soul.

ಅಂತರಾತ್ಮಕ್ಕಿಂತ ಒಳ್ಳೆಯ ಗುರು ಇಲ್ಲ. ಇದಕ್ಕೆ ಹೇಳುವುದು, ಇತರರ ಮಾತು ಕೇಳುವುದಕ್ಕಿಂತ ನಿಮ್ಮ ಮನಸ್ಸಿನ ಮಾತು ಕೇಳಿ ಮುಂದುವರೆಯಿರಿ. ಕೆಲವೊಮ್ಮೆ ನೀವು ಯಾವುದಾದರೂ ಸ್ಟಾರ್ಟ್‍ಅಪ್ ಮಾಡಬೇಕೆಂದುಕೊಂಡಿದ್ದೀರಿ, ಅಥವಾ ಯಾವುದಾದರೂ ವೃತ್ತಿಪರ ಕೋರ್ಸ್ ಮಾಡಬೇಕೆಂದಿರಿ ಎಂದಿರಲಿ. ಆಗ ಇತರರ ಅಭಿಪ್ರಾಯ ಕೇಳುವಿರಿ. ಪ್ರೋತ್ಸಾಹ ಕೊಡುವವರ ಮಾತು ಕೇಳಿದರೆ ಖುಷಿಯಾಗುತ್ತದೆ. ಆದರೆ, ಎಲ್ಲದರಲ್ಲಿಯೂ ಕೊಂಕು ಹುಡುಕುವವರು ಜಗತ್ತಿನಲ್ಲಿರುತ್ತಾರೆ. ಈ ರೀತಿ ಸ್ಟಾರ್ಟ್‍ಅಪ್ ಮಾಡಿ ಯಶಸ್ಸು ಪಡೆಯಲು ಸಾಧ್ಯವಿಲ್ಲ ಎನ್ನಬಹುದು. ನೀವು ಯಾವುದಾದರೂ ಇತ್ತೀಚಿನ ಹೊಸ ತಂತ್ರಜ್ಞಾನದ ಕೋರ್ಸ್ ಕಲಿಕೆಗೆ ಮುಂದಾದರೆ ಇದನ್ಯಾಕೆ ಮಾಡ್ತಿ, ಇದನ್ನು ಮಾಡಿದರೆ ಜಾಬ್ ಸಿಗುತ್ತಾ ಎಂದು ಹೇಳಬಹುದು. ಇಂತವರ ಮಾತಿಗೆ ತಲೆಕೆಡಿಸಿಕೊಳ್ಳದೆ ನೀವು ಇಟ್ಟ ಹೆಜ್ಜೆಯ ಕುರಿತು ನೀವೇ ನಿರ್ಧಾರ ತೆಗೆದುಕೊಳ್ಳಿ. ನಿಮ್ಮ ಮನದ ಮಾತು ಕೇಳಿ ಮುಂದುವರೆಯಿರಿ.  

ಹೃದಯದ ಮಾತು ಕೇಳಿ

    “In a conflict between the heart and the brain, follow your heart.”

ಇದು ಸಹ ಕರಿಯರ್‍ನಲ್ಲಿ ಯಶಸ್ಸು ಪಡೆಯಲು ಬಯಸುವವರಿಗೆ ಸೂರ್ತಿ ನೀಡಬಲ್ಲ ವಾಣಿ. ಈಗಿನ ಕಾಪೆರ್Çರೇಟ್ ಜಗತ್ತು ಹೃದಯದಿಂದ ಯೋಚಿಸುವುದು ಕಡಿಮೆ. ಆದರೆ, ಹೃದಯದ ಮಾತು ಕೇಳದೆ ಇದ್ದರೆ ನೀವು ಮಾಡುವ ಕೆಲಸಕ್ಕೂ ರೋಬೊ ಮಾಡುವ ಕೆಲಸಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಮಿದುಳು ಒಳ್ಳೆಯ ಐಡಿಯಾ ಕೊಡಬಹುದು. ಐಡಿಯಾದಿಂದ ಆಗುವ ಲಾಭದ ಕುರಿತು ಮಿದುಳು ಯೋಚಿಸಬಹುದು. ಆದರೆ, ಆ ಐಡಿಯಾದಿಂದ ಆಗುವ ತೊಂದರೆಗಳ ಕುರಿತು ಹೃದಯ ಗಮನ ಹರಿಸುತ್ತದೆ. ಹೃದಯ ಮತ್ತು ಮಿದುಳಿನ ನಡುವೆ ಜಗಳವಾದಗ ನೀವು ಹೃದಯದ ನಡೆಯನ್ನು ಹಿಂಬಾಲಿಸಿರಿ.

ಬರುವುದು ಬರಲಿ, ಹೆದರದಿರಿ

 “Neither seek nor avoid, take what comes.”

ಕೆಲವೊಮ್ಮೆ ನಿಮಗೆ ಯಶಸ್ಸು ಹತ್ತಿರದಲ್ಲಿರುವಂತೆ ಅನಿಸಬಹುದು ಅಥವಾ ದೂರದಲ್ಲಿರುವಂತೆ ಅನಿಸಬಹುದು. ಕೆಲವೊಮ್ಮೆ ಸೋಲುಗಳೇ ನಿಮ್ಮ ಸಂಗಾತಿಯಾಗಬಹುದು. ನಿಮ್ಮ ಪ್ರಯತ್ನ ಮುಂದುವರೆಸಿ, ಫಲಿತಾಂಶವಾಗಿ ದೊರಕುವುದನ್ನು ಪಡೆಯಿರಿ. ನಿಮಗೆ ಬೇಕಾದನ್ನು ಪಡೆಯಲು ಮತ್ತೆ ಪ್ರಯತ್ನ ಮುಂದುವರೆಸಿ. ನಿಮ್ಮ ಭವಿಷ್ಯದ ಕುರಿತು ತುಂಬಾ ಎತ್ತರವಾದ ನಿಲುವನ್ನು ತೆಗೆದುಕೊಳ್ಳಿ. ಇದರಿಂದ ನಿಮ್ಮ ಕರಿಯರ್ ಉನ್ನತ ಹಂತಕ್ಕೆ ತಲುಪಬಹುದು.

ಕಂಫರ್ಟ್‍ಝೋನ್‍ನಿಂದ ಹೊರಗೆ ಬನ್ನಿ 

 “Comfort is no test of truth. Truth is often far from being comfortable.”

ಕಂಫರ್ಟ್‌ ಮತ್ತು ಸತ್ಯದ ಕುರಿತು ಇರುವ ವಿವೇಕವಾಣಿಯನ್ನು ಕರಿಯರ್‍ಗೂ ಅನ್ವಯಿಸಬಹುದು. ಕರಿಯರ್‍ನಲ್ಲಿ ಪ್ರಗತಿ ಕಾಣಲು ಬಹುತೇಕರಿಗೆ ಅಡ್ಡಿಯಾಗಿರುವುದು ಕಂಫರ್ಟ್‍ಝೋನ್. ಸವಾಲುಗಳನ್ನು ಸ್ವೀಕರಿಸಿದರೆ ಮಾತ್ರ ಯಶಸ್ಸು ಪಡೆಯಲು ಸಾಧ್ಯ.

ಸ್ವಾಮಿ ವಿವೇಕಾನಂದರ ಈ ನುಡಿಮುತ್ತುಗಳು, ವಿವೇಕವಾಣಿಗಳು ನಿಮ್ಮ ಬದುಕನ್ನು, ಕರಿಯರನ್ನು ಬೆಳಗಲಿ.

Leave a Reply

Your email address will not be published. Required fields are marked *