ನಿಮ್ಮ ಉದ್ಯೋಗ ಉಳಿಯಬೇಕೆ, ಯಶಸ್ಸು ಪಡೆಯಬೇಕೆ? ಇಂತಹ ಬುದ್ಧಿಗಳನ್ನು ಬಿಟ್ಟುಬಿಡಿ!

By | 27/12/2021
man in white dress shirt covering his face

ಸೆಂಟರ್ ಫಾರ್ ಕ್ರಿಯೆಟಿವ್ ಲೀಡರ್ಷಿಪ್‌ ಸಂಸ್ಥೆಯು ಇತ್ತೀಚಿಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಕಂಪನಿಯೊಂದಕ್ಕೆ ಯಾರು ಸಮಸ್ಯಾತ್ಮಕ ಉದ್ಯೋಗಿಯಾಗಬಲ್ಲರು ಎಂಬ ಮಾಹಿತಿ ಒದಗಿಸಿದೆ. ನಿಮ್ಮಲ್ಲಿ ಸಮಸ್ಯಾತ್ಮಕ ಉದ್ಯೋಗಿಯಾಗುವ ಲಕ್ಷಣಗಳಿದ್ದರೆ ತಕ್ಷಣದಿಂದ ಆ ಗುಣಗಳನ್ನು ಬಿಟ್ಟುಬಿಡಲು ಪ್ರಯತ್ನಿಸಿ.

1.ಕೆಲಸದ ಕಾರ್ಯಕ್ಷಮತೆ ಉತ್ತಮವಾಗಿರದೆ ಇರುವುದು

ನಿರ್ದಿಷ್ಟ ಕಾರ್ಯದಕ್ಷತೆ ಹೊಂದಿರದೆ ಇರುವುದು ಕಂಪನಿಗೆ ಹೊರೆಯಾಗಿ ಪರಿಣಮಿಸುತ್ತದೆ. ಪ್ರತಿಯೊಂದು ಕಂಪನಿಗಳಲ್ಲಿಯೂ ಅಂಡರ್‍ಪರ್ಫಾಮಿಂಗ್ ಉದ್ಯೋಗಿಗಳು ಇದ್ದೇ ಇರುತ್ತಾರೆ. ಇಂತವರು ತಮ್ಮ ಪರ್ಫಾಮೆನ್ಸ್ ಉತ್ತಮಪಡಿಸಿಕೊಳ್ಳಲು ಆದ್ಯತೆ ನೀಡಬೇಕು. ನಿಗದಿತ ಸಮಯಕ್ಕೆ ಕೆಲಸ ಪೂರ್ಣಗೊಳಿಸಲಾಗಿಲ್ಲವೆಂಬ ಸಬೂಬು ಹೇಳುವುದನ್ನು ಬಿಡಬೇಕು.

2. ಇತರರೊಂದಿಗೆ ಉತ್ತಮವಾಗಿ ಕೆಲಸ ಮಾಡದೆ ಇರುವುದು.

ನಿಮ್ಮ ಸಹೋದ್ಯೋಗಿಯು ನಿಮ್ಮನ್ನು ಹೇಗೆ ಟ್ರೀಟ್ ಮಾಡುತ್ತಾರೆ ಎಂದು ಅವಲೋಕಿಸಿ. ಅವರು ನಿಮ್ಮನ್ನು ಅವಾಯ್ಡ್ ಮಾಡುತ್ತಾರೆಯೇ? ನಿಮ್ಮ ಜೊತೆ ಕೆಲಸ ಮಾಡಲು ಇಚ್ಚಿಸುವುದಿಲ್ಲವೇ?. ಅಥವಾ ನೀವು ನಿಮ್ಮ ಸಹೋದ್ಯೋಗಿಗಳ ಜೊತೆ ಈ ರೀತಿ ವರ್ತಿಸುತ್ತಿದ್ದೀರಾ? ಇತರೊಂದಿಗೆ ಉತ್ತಮವಾಗಿ ಕೆಲಸ ಮಾಡದೆ ಇರುವುದು ಸಹ ಉದ್ಯೋಗಕ್ಕೆ ಮಾರಕವಾದ ಕೆಟ್ಟ ವರ್ತನೆಯಾಗಿದೆ.

3.    ಟೀಕೆಗಳನ್ನು ಸ್ವೀಕರಿಸದೆ ಇರುವುದು.

ಕೆಲವು ಉದ್ಯೋಗಿಗಳು ತಾವು ಮಾಡಿದ್ದೇ ಸರಿ ಎಂಬ ಭಾವನೆಯಲ್ಲಿ ಇರುತ್ತಾರೆ. ಕಂಪನಿಯ ಮ್ಯಾನೇಜರ್ ಅಥವಾ ಇತರರು ಶಿಫಾರಸು ಮಾಡಿದ ಇಂಪ್ರೂವ್‍ಮೆಂಟ್ ಅನ್ನು ಮಾಡಿಕೊಳ್ಳುವುದಿಲ್ಲ. ಕೊನೆಗೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ.

4.   ಬದಲಾವಣೆಗೆ ಒಗ್ಗಿಕೊಳ್ಳದೆ ಇರುವುದು

ಬದಲಾವಣೆ ಎನ್ನುವುದು ಜಗದ ನಿಯಮ. ಪ್ರತಿಯೊಂದು ಕಂಪನಿಗಳು ಸಣ್ಣಪುಟ್ಟ ಅಥವಾ ಪ್ರಮುಖ ಬದಲಾವಣೆಗಳನ್ನು ಮಾಡುತ್ತ ಇರುತ್ತವೆ. ಇಂತಹ ಸಮಯದಲ್ಲಿ ನೀವು ಬದಲಾವಣೆಗಳನ್ನು ಸ್ವೀಕರಿಸಿಕೊಳ್ಳದೆ ಇದ್ದರೆ ನೀವು ಕಂಪನಿಗೆ ಸಮಸ್ಯಾತ್ಮಕ ಉದ್ಯೋಗಿಯಾಗಿಬಿಡಬಹುದು.

5.    ತಪ್ಪು ಒಪ್ಪಿಕೊಳ್ಳದೆ ಇರುವುದು

ತಾವು ಮಾಡಿರುವ ತಪ್ಪನ್ನು ಕೆಲವರು ಒಪ್ಪಿಕೊಳ್ಳಲು ರೆಡಿ ಇರುವುದಿಲ್ಲ. ತಮ್ಮಿಂದಾಗ ತಪ್ಪಿಗೆ ಇತರರನ್ನು ದೂರಲು ಇವರು ಹಿಂಜರಿಯುವುದಿಲ್ಲ. ಈ ರೀತಿ ಮಾಡದೆ ನಿಮ್ಮಿಂದ ಏನಾದರೂ ತಪ್ಪಾಗಿದ್ದರೆ ಅದನ್ನು ಒಪ್ಪಿಕೊಂಡು, ಸರಿಪಡಿಸಿಕೊಳ್ಳಿ. ಮುಂದೆ ಅಂತಹ ತಪ್ಪುಗಳು ಪುನಾರವರ್ತನೆಯಾಗದಂತೆ ಎಚ್ಚರವಹಿಸಿ.

6.  ನಕಾರಾತ್ಮಕ ಮನೋಭಾವ

ಸಕಾರಾತ್ಮಕ ಮನೋಭಾವ ಇರುವವರು ಕಂಪನಿಗೆ ಆಸ್ತಿ ಇದ್ದಂತೆ. ನಕಾರಾತ್ಮಕ ಮನೋಭಾವ ಇರುವವರು ತಾವು ಹಾಳಾಗುತ್ತಾರೆ. ತಮ್ಮ ಜೊತೆಗಿರುವ ಇತರರ ಮೇಲೂ ಕೆಟ್ಟ ಪ್ರಭಾವ ಬೀರುತ್ತಾರೆ.  ಕೆಲವು ಉದ್ಯೋಗಿಗಳು ಸದಾ ನಕಾರಾತ್ಮಕವಾಗಿಯೇ ಚಿಂತಿಸುತ್ತಾರೆ. ಇದು ಕಂಪನಿಯ ಪ್ರಗತಿಗೆ ಪ್ರಮುಖ ಅಡ್ಡಿಯಾಗುತ್ತದೆ. ಕಂಪನಿ ಎಂದರೆ ಅಲ್ಲಿ ಟೀಮ್ ವರ್ಕ್ ಇರುತ್ತದೆ. ಎಲ್ಲರಲ್ಲೂ ಹೊಸ ಹೊಸ ಯೋಜನೆಗಳು, ಐಡಿಯಾಗಳು ಇರುತ್ತವೆ. ಕೆಲವರು ಒಳ್ಳೊಳ್ಳೆಯ ಐಡಿಯಾಗಳನ್ನು ಕೊಡಬಹುದು. ಅವುಗಳಲ್ಲಿ ಕೊಂಚ ಮಟ್ಟಿಗೆ ರಿಸ್ಕ್ ಸಹ ಇರಬಹುದು. ಇಂತಹ ರಿಸ್ಕ್‍ಗೆ ಭಯಪಟ್ಟು ಅದೆಲ್ಲ ಆಗೋಲ್ಲ ಬಿಡು ಎಂದು ಇತರ ಕೆಲಸಗಾರರನ್ನು ಕುಗ್ಗಿಸಬೇಡಿ. ಸವಾಲು ಸ್ವೀಕರಿಸಿದರೆನೇ ಏನಾದರೂ ಸಾಸಲು ಸಾಧ್ಯ. ನಿಮ್ಮ ನೆಗೆಟಿವ್ ವರ್ತನೆ ಇಡೀ ತಂಡದ ಮೇಲೆ ಪರಿಣಾಮ ಬೀರುತ್ತದೆ  ನೆನಪಿರಲಿ.

7.   ಕೆಲಸದ ನೈತಿಕತೆ ಇಲ್ಲದೆ ಇರುವುದು

ವರ್ಕ್ ಎಥಿಕ್ ಎನ್ನುವುದು ಎಲ್ಲರಲ್ಲಿಯೂ ಇರಬೇಕಾದ ಅವಶ್ಯ ಗುಣ. ಆದರೆ, ಇಂತಹ ನೈತಿಕತೆ ಕಡಿಮೆ ಮಟ್ಟದಲ್ಲಿದ್ದರೆ ಅದು ಯಾವತ್ತಿಗೂ ಸಮಸ್ಯಾತ್ಮಕ ಸಂಗತಿ. ಹೀಗಾಗಿ ವರ್ಕ್ ಎಥಿಕ್ಸ್ ಪಾಲಿಸಲು ಗಮನ ನೀಡಿ.

8.  ಅಹಂಕಾರ ಅಥವಾ ಸೊಕ್ಕಿನ ಉದ್ಯೋಗಿಗಳು

ತಾನು ಮಾಡಿದ್ದೇ  ಸರಿ ಎಂದುಕೊಳ್ಳುವವರು, ಇತರರನ್ನು ನಿಕೃಷ್ಟವಾಗಿ ಕಾಣುವವರು, ಪದೇ ಪದೇ ಇತರರ ಮೇಲೆ ಸಿಡುಕುವವರು, ಅಹಂಕಾರಿ ಉದ್ಯೋಗಿಗಳು ಪ್ರತಿಯೊಂದು ಕಂಪನಿಗಳಲ್ಲಿ ಇದ್ದೇ ಇರುತ್ತಾರೆ. ಇಂತಹ ಗುಣವು ಅವರನ್ನು ಅಧಃಪತನದತ್ತ ತಳ್ಳಬಹುದು.

9.     ಸಂವಹನ ಕೌಶಲ ಉತ್ತಮವಾಗಿರದೆ ಇರುವುದು

ಸಂವಹನ ಕೌಶಲ ಇಂದು ಅತ್ಯಂತ ಅವಶ್ಯಕ. ಸಂವಹನ ಕೌಶಲ ಉತ್ತಮವಾಗಿರದೆ ಇರುವವರು ಕೂಡ ಕಂಪನಿಯೊಂದಕ್ಕೆ ಸಮಸ್ಯಾತ್ಮಕ ಉದ್ಯೋಗಿಗಳು ಎಂದು ಸಮೀಕ್ಷೆಗಳು ಹೇಳಿವೆ.

10.    ಹುದ್ದೆಗೆ ಹೊಂದಿಕೆಯಾಗದ ಕೌಶಲಗಳು

ಕೆಲವು ಉದ್ಯೋಗಿಗಳು ಹೇಗೋ ಹುದ್ದೆಯೊಂದನ್ನು ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ. ಆದರೆ, ಆ ಕಂಪನಿಯ ಕೆಲಸವು ಬಯಸುವ ಕೌಶಲಗಳಿಗೂ ಉದ್ಯೋಗಿಗಳಲ್ಲಿ ಇರುವ ಕೌಶಲಕ್ಕೂ ಹೊಂದಾಣಿಕೆಯಾಗದೆ ಇರಬಹುದು. ಇದು ಕೂಡ ಸಮಸ್ಯಾತ್ಮಕ ಉದ್ಯೋಗಿಯೊಬ್ಬರ ಲಕ್ಷಣವಾಗಿದೆ. ಅಂತಹ ಉದ್ಯೋಗಿಗಳು ನಿಗದಿತ ಕೌಶಲವನ್ನು ಕಲಿಯಲು ಆದ್ಯತೆ ನೀಡಬೇಕು ಅಥವಾ ತಮ್ಮ ಕೌಶಲಕ್ಕೆ ಸೂಕ್ತವಾದ ಹುದ್ದೆಯನ್ನು ಹುಡುಕಿಕೊಳ್ಳಬೇಕು. ಇಲ್ಲವಾದರೆ ಅವರು ಸಮಸ್ಯಾತ್ಮಕ ಉದ್ಯೋಗಿಯಾಗಿರುತ್ತಾರೆ.

11.      ಹೌದು, ಆದರೆ… ಎಂಬ ದೌರ್ಬಲ್ಯ

ಈ ಕೆಲಸ ಮಾಡಬಹುದಿತ್ತು, ಆದರೆ…, ನನ್ನಿಂದ ಇದು ಸಾಧ್ಯ, ಆದರೆ, ಪುರುಸೊತ್ತಿಲ್ಲ….  ಇತ್ಯಾದಿ ರೇ ರೇ ಎಂದು ಸಬೂಬು ಹೇಳುವ ಉದ್ಯೋಗಿಗಳು ಕೂಡ ಸಮಸ್ಯಾತ್ಮಕ ಉದ್ಯೋಗಿಗಳಾಗಿರುತ್ತಾರೆ.

ಇಂತಹ ವರ್ತನೆ ಬೇಡ

`               ಕೆಲವರು ಹತ್ತು ಹಲವು ಕೆಲಸಗಳಿಗೆ ಕೈಹಾಕುತ್ತಾರೆ. ಯಾವುದನ್ನೂ ಸರಿಯಾಗಿ ಪೂರ್ಣಗೊಳಿಸುವುದಿಲ್ಲ. ನಿಮಗೆ ನೀಡಿರುವ ಅಸೈನ್‍ಮೆಂಟ್ ಅನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಪ್ರಯತ್ನಿಸಿ. ನಿಮ್ಮ ಪ್ರಾಮಾಣಿಕ ಪ್ರಯತ್ನದ ನಡುವೆಯೂ ಕೆಲಸ ಆಗದೆ ಇದ್ದರೆ ಅದು ನಿಮ್ಮ ತಪ್ಪಲ್ಲ. ಪ್ರಯತ್ನಿಸದೆ ಸೋಮಾರಿಯಾಗಿ ಕೆಲಸವನ್ನು ಪೂರ್ಣಗೊಳಿಸದೆ ಇರುವುದು ನಿಮ್ಮ ತಪ್ಪು. ಇಂತಹ ತಪ್ಪು ಇನ್ನು ಮಾಡಬೇಡಿ.

`               ಕೆಲವರು ಕಂಪನಿಯಲ್ಲಿ ಯಾವುದೇ ಕೆಲಸಕ್ಕೂ ಸಹಕರಿಸದೆ ಅಸಹಕರ ಚಳವಳಿ ಪ್ರದರ್ಶಿಸುತ್ತಾರೆ. ಇಂತಹ ವರ್ತನೆಯಿಂದ ಕಂಪನಿಯ ಕೆಲಸ ಕಾರ್ಯಗಳು ಕುಂಠಿತವಾಗುತ್ತವೆ. ಇದಕ್ಕೆ ನಿಮ್ಮ ದರ್ಪವೂ ಕಾರಣವಾಗಿರಬಹುದು. ತಾನು ಹೇಳಿದ್ದೇ ನಡೆಯಬೇಕು ಎಂಬ ಅಹಂ ಸಹ ಕಾರಣವಾಗಿರಬಹುದು. ಇಂತಹ ದರ್ಪ, ಅಸಹಕಾರದ ವರ್ತನೆಯನ್ನು ಬಿಟ್ಟುಬಿಡಿ.

`               ಕಚೇರಿಗಳಲ್ಲಿ ಕೆಲವರಿಗೆ ತೆಗಲುವುದಷ್ಟೇ ಕೆಲಸ. ಅವನು ಹಾಗೇ, ಇವಳು ಹೀಗೆ ಎಂದು ಹೇಳುತ್ತಲೇ ಕಾಲ ಕಳೆಯುತ್ತಾರೆ. ನೀವು ಏನೂ ಕೆಲಸ ಮಾಡದೆ ಇತರರನ್ನು ದೂರುತ್ತಲೇ ಕಾಲ ಕಳೆದರೆ ಅದು ಕಂಪನಿಗೆ ಮಾಡುವ ವಂಚನೆ. ದೂರುವುದಕ್ಕಿಂತ ಸಮಸ್ಯೆಗಳನ್ನು ಹುಡುಕಿ ಸಮರ್ಪಕ ಪರಿಹಾರ ಕಂಡುಕೊಳ್ಳುವುದು ಉತ್ತಮ.

`               ಕಂಪನಿಗಳಲ್ಲಿ ಮೀಟಿಂಗ್ ನಡೆಸುವುದು ಟೀ/ಕಾಫಿ ಬಿಸ್ಕೆಟ್ ತಿನ್ನುವುದಕ್ಕೆ ಅಲ್ಲ. ಮೀಟಿಂಗ್ ಅಥವಾ ಗುಂಪು ಚಟುವಟಿಕೆ ಅಥವಾ ಯಾವುದೋ ಕೆಲಸಕ್ಕೆ ಸರಿಯಾದ ಸಿದ್ಧತೆ ನಡೆಸದೆ ಬರಬೇಡಿ. ಒಂದಿಷ್ಟು ಹೋಮ್‍ವರ್ಕ್ ಮಾಡಿಕೊಂಡೇ ಬನ್ನಿ. ಇದರಿಂದ ಕಂಪನಿಗೆ ನಿಮ್ಮ ಬಗ್ಗೆ ಉತ್ತಮ ಭರವಸೆ ಮೂಡುತ್ತದೆ. ಮೀಟಿಂಗ್‍ನಲ್ಲಿ ಸರಿಯಾಗಿ ಮಾತನಾಡಲೂ ನಿಮ್ಮಿಂದ ಸಾ`À್ಯವಾಗುತ್ತದೆ.

`               ಅಗತ್ಯವಿದ್ದಾಗ ರಜೆ ಹಾಕಲೇಬೇಕು. ಆದರೆ, ಸದಾ ರಜೆ ಹಾಕುತ್ತಲೇ ಇರುವುದು ಒಳ್ಳೆಯದಲ್ಲ. ಕೆಲಸ ತಪ್ಪಿಸಿಕೊಳ್ಳುವ ದೃಷ್ಟಿಯಿಂದ ವಿವೇಚನರಹಿತವಾಗಿ ರಜೆ ಹಾಕಬೇಡಿ. ನೀವೊಬ್ಬರು ರಜೆ ಹಾಕಿದಾಗ ಅದು ಇಡೀ ತಂಡದ ಕೆಲಸದ ಮೇಲೆ ಪರಿಣಾಮ ಬೀರಬಹುದು. ನಿಮ್ಮನ್ನು ನೇಮಕ ಮಾಡಿಕೊಂಡಿರುವ ಕಂಪನಿಗೆ ಹೊರೆ ಆಗುವಂತೆ ರಜೆ ಹಾಕುತ್ತಿರಬೇಡಿ.

Leave a Reply

Your email address will not be published. Required fields are marked *